` sadashiva bramhavar, - chitraloka.com | Kannada Movie News, Reviews | Image

sadashiva bramhavar,

 • Rajkumar Family Rushes To Help Brahmavar

  rajkumar family rushes to help bramhavar

  The Rajkumar family is rushing to help Sadashiv Brahmavar. Shivarajkumar has said that Brahmavar will be taken care of and he need not worry about anything for the rest of his life. Chitraloka had reported yesterday that Brahmavar was thrown out of his house by his children and he is roaming the streets from one town to another.

  Producer KP Srikanth told Chitraloka that Shivarajkumar was upset with the news about Brahmavar and asked to find him. Brahmavar has acted in many films of Rajkumar and is close to the Rajkumar family. In the 1980s and 1990s he acted in most films of Rajkumar and Shivarajkumar. Brahmavar has acted in around 200 Kannada films mostly in small supporting roles. His current situation has shocked the Kannada film industry.

  Related Articles :-

  ಬೀದಿಗೆ ಬಿದ್ದ ಬ್ರಹ್ಮಾವರ್ - ಕಣ್ಣೊರೆಸಲು ದೊಡ್ಮನೆ ಎಂಟ್ರಿ

  ಬ್ರಹ್ಮಾವರ್ ನೆರವಿಗೆ ಕೈ ಚಾಚಿದ ಸ್ವಾತಿಮುತ್ತು ಸುದೀಪ್

  Sudeep Rushes to Help Brahmavar - Exclusive

  ಬೀದಿಗೆ ಬಿದ್ದರು ಸದಾಶಿವ ಬ್ರಹ್ಮಾವರ್ - ಹೆತ್ತಮಕ್ಕಳೇ ಹೊರಗೆ ದಬ್ಬಿದರಾ..?

 • ಬೀದಿಗೆ ಬಿದ್ದ ಬ್ರಹ್ಮಾವರ್ - ಕಣ್ಣೊರೆಸಲು ದೊಡ್ಮನೆ ಎಂಟ್ರಿ

  shivarajkumar, bramhavar

  ನಟ ಸದಾಶಿವ ಬ್ರಹ್ಮಾವರ್ ಅವರ ಬದುಕು ಮೂರಾಬಟ್ಟೆಯಾಗಿರುವುದನ್ನು ತಿಳಿದ ಡಾ. ರಾಜ್ ಕುಮಾರ್ ಕುಟುಂಬ ಕನಲಿ ಹೋಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಶಿವರಾಜ್ ಕುಮಾರ್ ಅಭಿಮಾನಿ ಹಾಗೂ ಟಗರು ಚಿತ್ರದ ನಿರ್ಮಾಪಕ ಶ್ರೀಕಾಂತ್, ಚಿತ್ರಲೋಕ ಸಂಪಾದಕ ವೀರೇಶ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಶಿವರಾಜ್ ಕುಮಾರ್ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿರುವ ಶ್ರೀಕಾಂತ್, ಮೊದಲು ಬ್ರಹ್ಮಾವರ್ ಎಲ್ಲಿದ್ದಾರೆ ಎನ್ನುವುದನ್ನು ಹುಡುಕುತ್ತೇವೆ. ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.

  ಮಾಧ್ಯಮಗಳ ಮೂಲಕ ಸುದ್ದಿ ತಿಳಿಯುತ್ತಿದ್ದಂತೆ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ್, ರಾಜ್ ಬ್ಯಾನರ್‍ನ ಬಹುತೇಕ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದರು. ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್ ಕುಮಾರ್ ಚಿತ್ರಗಳಲ್ಲಿ ನಟಿಸಿದ್ದರು.

  Related Articles :-

  ಬ್ರಹ್ಮಾವರ್ ನೆರವಿಗೆ ಕೈ ಚಾಚಿದ ಸ್ವಾತಿಮುತ್ತು ಸುದೀಪ್

  Sudeep Rushes to Help Brahmavar - Exclusive

  ಬೀದಿಗೆ ಬಿದ್ದರು ಸದಾಶಿವ ಬ್ರಹ್ಮಾವರ್ - ಹೆತ್ತಮಕ್ಕಳೇ ಹೊರಗೆ ದಬ್ಬಿದರಾ..?

 • ಬೀದಿಗೆ ಬಿದ್ದರು ಸದಾಶಿವ ಬ್ರಹ್ಮಾವರ್ - ಹೆತ್ತಮಕ್ಕಳೇ ಹೊರಗೆ ದಬ್ಬಿದರಾ..?

  sadhashiva bramhavar's miserable life

  ವಯಸ್ಸಾದ ತಂದೆ, ಸ್ವಾತಂತ್ರ್ಯ ಹೋರಾಟಗಾರ, ಬಡ ಮೇಷ್ಟ್ರು, ಅಸಹಾಯಕ ಅಜ್ಜ, ದೇವಸ್ಥಾನದ ಪೂಜಾರಿ, ನೀತಿ ಪಾಠ ಹೇಳುವ ಪ್ರಾಮಾಣಿಕ ರಾಜಕಾರಣಿ.. ಹೀಗೆ ಪಾತ್ರಗಳ ವ್ಯಕ್ತಿತ್ವ ಹೇಳುತ್ತಾ ಹೋದರೆ ಸಾಕು, ಕನ್ನಡ ಚಿತ್ರ ಪ್ರೇಕ್ಷಕರ ಕಣ್ಣಲ್ಲಿ ಥಟ್ಟಂತ ಮೂಡುವ ಚಿತ್ರ ಸದಾಶಿವ ಬ್ರಹ್ಮಾವರ್ ಅವರದ್ದು. 

  ಕನ್ನಡ ಚಿತ್ರಗಳಲ್ಲಿಯೇ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಈ ಕಲಾವಿದ ಈಗ ಬೀದಿಪಾಲಾಗಿದ್ದಾರೆ. ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್​ಕುಮಾರ್, ಸುದೀಪ್, ದರ್ಶನ್.. ಹೀಗೆ ಕನ್ನಡ ಚಿತ್ರರಂಗದ ನಾಲ್ಕು ಜನರೇಷನ್ ಸ್ಟಾರ್​ಗಳೊಂದಿಗೆ ನಟಿಸಿರುವ ಹಿರಿಯ ಕಲಾವಿದ ಬ್ರಹ್ಮಾವರ್. ಆದರೀಗ ಕುಮುಟಾದ ಬೀದಿಗಳಲ್ಲಿ ಅಸಹಾಯಕರಾಗಿ ಅಲೆಯುತ್ತಿದ್ದಾರೆ.

  ಸುಮಾರು 2 ವರ್ಷಗಳ ಹಿಂದೆ ಬ್ರಹ್ಮಾವರ್ ಪತ್ನಿ ಮೃತಪಟ್ಟಿದ್ದರು. ಪತ್ನಿಯನ್ನು ಕಳೆದುಕೊಂಡ ಮೇಲಂತೂ ಮಕ್ಕಳು ಹೆತ್ತ ತಂದೆಯನ್ನು ದೂರವೇ ಇಟ್ಟುಬಿಟ್ಟಿದ್ದರು. ಮನೆಯಿಂದ ಆಚೆ ಹಾಕಿದ್ದರು. ಆಗಲೂ ಯಾರೋ ಅಭಿಮಾನಿಗಳು ಗುರುತಿಸಿ ಮನೆಗೆ ಕಳುಹಿಸಿದ್ದರು. ಆಗ ಸೈಕೋ ಚಿತ್ರದ ನಿರ್ದೇಶಕ ದೇವದತ್ತ ಕೆಲವು ತಿಂಗಳು ಆಶ್ರಯ ನೀಡಿದ್ದರು. ಅದಾದ ಮೇಲೆ ಕುಟುಂಬದವರು ಬಂದು ಕರೆದುಕೊಂಡು ಹೋಗಿದ್ದರು. ಈಗ ಮತ್ತೊಮ್ಮೆ ಅದೇ ಪರಿಸ್ಥಿತಿ.

  ಈ ಬಾರಿ ಉ.ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಕಾಣಿಸಿದ ಬ್ರಹ್ಮಾವರ್ ಅವರ ಬಳಿ ಊಟಕ್ಕೂ ಹಣವಿರಲಿಲ್ಲ. ಸ್ಥಳೀಯರೇ ಬ್ರಹ್ಮಾವರ್ ಅವರನ್ನು ಗುರುತಿಸಿ ಹೋಟೆಲ್​ಗೆ ಕರೆದುಕೊಂಡು ತಾವೇ ಊಟ ಹಾಕಿಸಿ, ಬಸ್ ಚಾರ್ಜಿಗೆ ಹಣ ಕೊಟ್ಟು, ಖರ್ಚಿಗೆ ಸ್ವಲ್ಪ ಹಣವನ್ನೂ ಕೊಟ್ಟು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. 

  ಬ್ರಹ್ಮಾವರ್ ಮಾತ್ರ ಎಂಥ ಸ್ವಾಭಿಮಾನಿಯೆಂದರೆ, ಹೆತ್ತ ಮಕ್ಕಳ ಬಗ್ಗೆ ಒಂದೇ ಒಂದು ಕೆಟ್ಟ ಮಾತನಾಡಿಲ್ಲ. ಕಾರಣವನ್ನೂ ಹೇಳಿಕೊಂಡಿಲ್ಲ. ಆದರೆ, ಇಂತಹ ಒಬ್ಬ ಕಲಾವಿದ ಹೀಗೆ ಬೀದಿಪಾಲಾಗುವುದು, ಅದು ಯಾರಿಗೂ ಗೊತ್ತಾಗದೆ ಹೋಗುವುದು ಬಣ್ಣದ ಬದುಕಿನ ಬಣ್ಣ ಮಾಸಿದ ಬದುಕಿಗೆ ಸಾಕ್ಷಿ. ಅವರ ಮಕ್ಕಳೋ, ಚಿತ್ರರಂಗದ ಹಿರಿಯ ಕಲಾವಿದರೋ ನೆರವಿಗೆ ಬಂದರೆ ಅವರು ಕೊನೆಗಾಲದಲ್ಲಿ ನೆಮ್ಮದಿಯ ಬದುಕು ಕಾಣಬಹುದು. 

 • ಬ್ರಹ್ಮಾವರ್ ನೆರವಿಗೆ ಕೈ ಚಾಚಿದ ಸ್ವಾತಿಮುತ್ತು ಸುದೀಪ್

  sudeep helps bramhavar

  ಚಿತ್ರರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್ ಬೀದಿಗೆ ಬಿದ್ದಿದ್ದಾರೆ. ಅವರ ಮಕ್ಕಳೇ ಅವರನ್ನು ಹೊರಹಾಕಿದ್ದಾರೆ. ಬ್ರಹ್ಮಾವರ್ ಈಗ ಬಸ್ ಚಾರ್ಜಿಗೂ ಹಣವಿಲ್ಲದೆ, ಊಟಕ್ಕೂ ಪರದಾಡುತ್ತಾ ಊರೂರು ಅಲೆಯುತ್ತಿದ್ದಾರೆ ಎಂಬ ಸುದ್ದಿ ತಿಳಿದಿದ್ದೇ ತಡ, ಅಭಿಮಾನಿಗಳು ಬೇಸರಗೊಂಡರು. ಹಲವರು ಚಿತ್ರಲೋಕವನ್ನು ಸಂಪರ್ಕಿಸಿದ್ದಾರೆ. 

  ಇದರ ನಡುವೆಯೇ ಚಿತ್ರಲೋಕ ಡಾಟ್ ಕಾಮ್‍ನಲ್ಲಿ ಸುದ್ದಿಯನ್ನೋದಿದ ಸುದೀಪ್, ನೇರವಾಗಿ ತಮ್ಮ ಅಭಿಮಾನಿ ಸಂಘದವರಿಗೆ ಬ್ರಹ್ಮಾವರ್ ಅವರನ್ನು ಎಲ್ಲಿದ್ದರೂ ಹುಡುಕಿ ಎಂದು ಸೂಚನೆ ಕೊಟ್ಟಿದ್ದಾರೆ. ಸದ್ಯಕ್ಕೆ ಸುದೀಪ್, ದೇಶದಲ್ಲಿ ಇಲ್ಲ. ದಿ ವಿಲನ್ ಶೂಟಿಂಗ್‍ಗಾಗಿ ಬ್ಯಾಂಕಾಕ್‍ನಲ್ಲಿದ್ದಾರೆ. ಅಲ್ಲಿಂದಲೇ ಕರೆ ಮಾಡಿರುವ ಸುದೀಪ್, ಬ್ರಹ್ಮಾವರ್ ಅವರ ಮುಂದಿನ ಹೊಣೆಯನ್ನು ತಾವು ಹೊತ್ತುಕೊಳ್ಳುವ ಭರವಸೆ ಕೊಟ್ಟಿದ್ದಾರೆ.

  ಚಿತ್ರಲೋಕ ಡಾಟ್ ಕಾಮ್ ಸಂಪಾದಕ ಕೆ.ಎಂ. ವೀರೇಶ್ ಜೊತೆ ಮಾತನಾಡಿದ ಸುದೀಪ್ `ಬ್ರಹ್ಮಾವರ್ ಅವರದ್ದು ಮೃದು ಮಾತಿನ ವ್ಯಕ್ತಿತ್ವ. ಸದಾ ಮೌನಿಯಾಗಿರುತ್ತಿದ್ದರು. ನನ್ನ ಜೊತೆ ಸ್ವಾತಿಮುತ್ತು ಮತ್ತು ಕಿಚ್ಚ ಚಿತ್ರಗಳಲ್ಲಿ ನಟಿಸಿದ್ದರು. ಅವರ ಈ ಸ್ಥಿತಿ ನೋಡಿ ಆಘಾತವಾಯಿತು. ಯಾವುದೇ ಹಿರಿಯ ಕಲಾವಿದರಿಗೆ ಈ ರೀತಿಯ ಪರಿಸ್ಥಿತಿ ಬರಬಾರದು. ನಾನು ನನ್ನ ಅಭಿಮಾನಿ ಸಂಘದ ಹುಡುಗರಿಗೆ ಸೂಚಿಸಿದ್ದೇನೆ. ಅವರು ಬ್ರಹ್ಮಾವರ್ ಎಲ್ಲಿದ್ದರೂ ಹುಡುಕಿ ನೆರವು ನೀಡುತ್ತಾರೆ. ಇದು ಅಲ್ಪ ಸ್ವಲ್ಪ ಹಣ ಕೊಟ್ಟು ಸುಮ್ಮನಾಗುವ ವಿಚಾರವಲ್ಲ. ಅವರು ತಮ್ಮ ಈ ವಯಸ್ಸಿನಲ್ಲಿ ನೆಮ್ಮದಿಯಿಂದ, ಶಾಂತಿಯಿಂದ ಜೀವನ ಕಳೆಯಬೇಕು. ಅದಕ್ಕೆ ಏನು ಬೇಕೋ ಆ ವ್ಯವಸ್ಥೆಯನ್ನು ನಾನು ಮಾಡುತ್ತೇನೆ'' ಎಂದಿದ್ದಾರೆ.

  Related Articles :-

  Sudeep Rushes to Help Brahmavar - Exclusive

  ಬೀದಿಗೆ ಬಿದ್ದರು ಸದಾಶಿವ ಬ್ರಹ್ಮಾವರ್ - ಹೆತ್ತಮಕ್ಕಳೇ ಹೊರಗೆ ದಬ್ಬಿದರಾ..?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery