` politics, - chitraloka.com | Kannada Movie News, Reviews | Image

politics,

 • ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

  upendra in brahma

  ರಿಯಲ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಉಪೇಂದ್ರ ರಾಜಕೀಯ ಪ್ರವೇಶ ಸುದ್ದಿ ಚರ್ಚೆಯಲ್ಲಿದೆ. ಫಿಲ್ಟರ್ ಇಲ್ಲದ ಮಾತುಗಳಿಗೆ ಫೇಮಸ್ ಆಗಿರುವ ಉಪೇಂದ್ರ, ರಾಜಕೀಯ ಪ್ರವೇಶ ವಿಚಾರದಲ್ಲಿ ಮಾತ್ರ ಹಾಗಿಲ್ಲ. ನೋಡೋಣ... ಎಲ್ಲ ದೇವರ ಇಚ್ಚೆ.. ಕಾಲ ಬಂದಾಗ ಉತ್ತರ ಸಿಗುತ್ತೆ.. ಇಂಥವೇ ಉತ್ತರಗಳ ಮೂಲಕ ನುಣುಚಿಕೊಳ್ಳುವುದೇ ಹೆಚ್ಚು.

  ಈಗ ಆ ಎಲ್ಲ ನಿಗೂಢ ಉತ್ತರಗಳಿಗೂ ಸ್ಪಷ್ಟತೆ ಸಿಗಲಿದೆಯಾ..? ಏಕೆಂದರೆ, ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಉಪೇಂದ್ರ ಸುದ್ದಿಗೋಷ್ಟಿ ಕರೆದಿದ್ದಾರೆ. ನಾಳೆ 11 ಗಂಟೆಗೆ ನಡೆಯಲಿರುವ ಸುದ್ದಿಗೋಷ್ಟಿಯಲ್ಲಿ ರಾಜಕೀಯ ಪ್ರವೇಶದ ವಿಚಾರವನ್ನು ಉಪೇಂದ್ರ ಅಧಿಕೃತವಾಗಿ ಘೋಷಿಸುತ್ತಾರಾ..? ಉತ್ತರಕ್ಕೆ ನಿರೀಕ್ಷಿಸಿ. ನಾಳೆ (ಅಕ್ಟೋಬರ್ 12,2017)  11 ಗಂಟೆ.

  Related Articles :-

  ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

 • ಸಿದ್ದರಾಮಯ್ಯ ತವರಲ್ಲಿ ರೂಪಾ ಅಯ್ಯರ್ ಸ್ಪರ್ಧೆ. ಪಕ್ಷ..?

  roopa iyer to enter politics

  ನಟಿ, ನಿರ್ಮಾಪಕಿ, ನಿರ್ದೇಶಕಿ, ಆಧ್ಯಾತ್ಮ ಚಿಂತಕಿ.. ಹೀಗೆ ಎಲ್ಲವೂ ಅಗಿರುವ ರೂಪಾ ಅಯ್ಯರ್, ರಾಜಕೀಯ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಅವರು ಸ್ಪರ್ಧಿಸೋಕೆ ಇಚ್ಚಿಸಿರುವುದು ಮೈಸೂರು ಜಿಲ್ಲೆಯ ಕೆ.ಆರ್. ಕ್ಷೇತ್ರದಲ್ಲಿ. ಕೆ.ಆರ್. ಎಂದರೆ ಕೃಷ್ಣರಾಜಪುರ ಕ್ಷೇತ್ರ.

  ಆದರೆ, ರೂಪಾ ಅಯ್ಯರ್ ಆಯ್ಕೆ ಮಾಡಿಕೊಂಡಿರುವ ಪಕ್ಷ ಡಿಫರೆಂಟ್. ಅವರು ಮುಖ್ಯ ವಾಹಿನಿಯಲ್ಲಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ಗಳನ್ನು ಬಿಟ್ಟು, ಉಪೇಂದ್ರ ಅವರ ಕೆಪಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  ಸ್ವತಃ ಉಪೇಂದ್ರ ಅವರು ಕೂಡಾ ರೂಪಾ ಅಯ್ಯರ್ ಸ್ಪರ್ಧೆಗೆ ಒಲವು ತೋರಿಸಿದ್ದಾರಂತೆ. ರೂಪಾ ಅಯ್ಯರ್ ಕೂಡಾ ಇದಕ್ಕೆ ಸಮ್ಮತಿ ಸೂಚಿಸಿದ್ದು, ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಅಷ್ಟೆ.

   

Geetha Movie Gallery

Ombattane Dikku Launch Meet Gallery