` politics, - chitraloka.com | Kannada Movie News, Reviews | Image

politics,

 • ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು

  uppi reveals his political idea

  ಉಪೇಂದ್ರ ರಾಜಕೀಯ ಪ್ರವೇಶದ ಸ್ಪಷ್ಟ ಸುಳಿವು ನೀಡಿರುವ ಉಪೇಂದ್ರ, ಈ ಕುರಿತು ಎಲ್ಲ ಮಾಧ್ಯಮಗಳಿಗೆ ಒಂದು ಆಡಿಯೋ ಸಂದೇಶ ಕಳುಹಿಸಿಕೊಟ್ಟಿದ್ದಾರೆ. ತಾವು ಹಾಗೂ ತಾವು ಕಟ್ಟಲು ಹೊರಟಿರುವ ರಾಜಕೀಯ ಪಕ್ಷ ಹೇಗಿರಲಿದೆ ಎಂಬುದರ ಪರಿಕಲ್ಪನೆ ಬಿಚ್ಚಿಟ್ಟಿದ್ದಾರೆ. ಒಂದಿಷ್ಟು ಐಡಿಯಾಗಳನ್ನೂ ಷೇರ್ ಮಾಡಿದ್ದಾರೆ. ಅದು ಸ್ವಲ್ಪ ಇಂಟ್ರೆಸ್ಟಿಂಗ್. ಏಕೆಂದರೆ ಇದನ್ನೆಲ್ಲ ಹೇಳಿರೋದು ಸ್ವತಃ ಉಪೇಂದ್ರ.

  ಉಪೇಂದ್ರ ಹೇಳಿದ್ದು 

  ನಮ್ಮ ಕರ್ನಾಟಕದ ಬಜೆಟ್​ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ. ಇದೆಲ್ಲ ನಾವು ಕೊಡ್ತಿರೋ ಡೈರೆಕ್ಟ್, ಇನ್​​ಡೈರೆಕ್ಟ್ ಟ್ಯಾಕ್ಸ್​ ಅಂದ್ರೆ ತೆರಿಗೆಯಿಂದ ಬರೋದು. ನೀವು ಕೆಲಸ ಕೊಟ್ಟಿರೋದು ಸಾವಿರಾರು ಜನಕ್ಕೆ. ನಿಮ್ಮ ಮನೆ ಮುಂದೆ ಸ್ವಚ್ಚ ಮಾಡೋ ಪೌರ ಕಾರ್ಮಿಕರನಿಂದ ಹಿಡಿದು. ಕಾರ್ಪೋರೇಟರ್​, ಎಂಎಲ್​ಎ, ಮುಖ್ಯಮಂತ್ರಿ ಸರ್ಕಾರ, ಅಧಿಕಾರಿಗಳು, ಐಎಎಸ್, ಐಪಿಎಸ್​ ಅಧಿಕಾರಿಗಳು ಎಲ್ಲರಿಗೂ ಸಂಬಳ ಕೊಡೋದು ನೀವೇ. ನಿಮ್ಮ ತೆರಿಗೆ ಹಣದಿಂದಲೇ ಅವರ ಹೊಟ್ಟೆ ತುಂಬುತ್ತಿದೆ.

  ಅದರ ಅರ್ಥ ಇವರೆಲ್ಲರೂ ನಮಗೋಸ್ಕರ ಕೆಲಸ ಮಾಡೋ ಕಾರ್ಮಿಕರು. ಆದ್ರೆ ಆಗ್ತಿರೋದು ಮಾತ್ರ ಉಲ್ಟಾ.  ಪ್ರಜಾಪ್ರಭುತ್ವದಲ್ಲಿ ಈ ಸತ್ಯ ನಿಮ್ಮ ಕಣ್ಣಿಗೆ ಕಾಣದ ಹಾಗೆ ಇರೋಕೆ ನಾವೇ ಕಾರಣ. ಬಲಿಪಶುಗಳೂ ನಾವೆ. 

  ಹೇಗೆ ಅಂತೀರಾ.. ಈ ಲಕ್ಷಾಂತರ ಕೋಟಿ ಸಂಪಾದನೆ ಮಾಡೋ ನಾವು, ಅದನ್ನು ಸಮಾಜಕ್ಕೆ ಕೊಡೋಕೆ ಅಂತಾ ನಾಯಕರನ್ನು ಆಯ್ಕೆ ಮಾಡುತ್ತಿದ್ದೇವಲ್ಲ. ಅವರನ್ನು ನಾವು ಜಾತಿ, ಮತ, ದುಡ್ಡು, ಹೆಸರುಗಳಿಂದ ಅಳೆದು ಆಯ್ಕೆ ಮಾಡುತ್ತಿದ್ದೇವೆ. ಅದೇ ಆಗುತ್ತಿರುವ ತಪ್ಪು. 

  ಅಲ್ರೀ, ನಮ್ಮ ಮನೆಯಲ್ಲಿ 5 ಸಾವಿರ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳೋ ಜನಗಳದ್ದೇ ತಲೆಬುಡ ಎಲ್ಲ ಚೆಕ್ ಮಾಡ್ತೀವಿ. ಅಂಥಾದ್ರಲ್ಲಿ  ನಮ್ಮ ಲಕ್ಷಾಂತರ ಕೋಟಿ ದುಡ್ಡನ್ನು ಸಮಾಜಕ್ಕೆ ವಿನಿಯೋಗಿಸೋಕೆ ಅಂಥಾ ನಾವು ನೇಮಿಸಿಕೊಳ್ಳೋ ಜನಪ್ರತಿನಿಧಿಗಳು, ಮಂತ್ರಿಗಳನ್ನ ಕೇವಲ ಜಾತಿ, ಮತ, ದುಡ್ಡು ಅನ್ನೋ ಎಮೋಷನ್ ಬ್ಲಾಕ್​ಮೇಲ್​ಗೆ ಒಳಗಾಗಿ ಆಯ್ಕೆ ಮಾಡ್ತೀವಿ. ಅವನ ಹಿಂದೆ ದುಡ್ಡಿದ್ದರೆ ಜನ ಇರ್ತಾರೆ. ದುಡ್ಡಿದೆ, ಜನರಿದ್ದಾರೆ, ದೊಡ್ಡವನು ಎಂದು ಆಯ್ಕೆ ಮಾಡಿ ತಪ್ಪು ಮಾಡುತ್ತಿದ್ದೇವೆ.  ಏನ್​ ಮಾಡೋಣ, ನಮಗೆ ಬೇರೆ ಆಯ್ಕೆಯಾದರೂ ಎಲ್ಲಿದೆ. ಇರೋ ಮೂರು ಜನರಲ್ಲಿ ಸ್ವಲ್ಪ ಬೆಟರ್​ ಅನ್ಕೊಂಡು ಅವರನ್ನು ಆರಿಸ್ತಿದ್ದೇವೆ. ಇದು ನಮ್ಮ ವಾದ. 

  ಅದು ನಿಮಗಷ್ಟೇ ಅಲ್ಲ, ನನಗೂ ಅನ್ನಿಸಿದೆ.  ಹಾಗಾದ್ರೆ ಇದಕ್ಕೆ ಬೇರೆ ದಾರಿನೇ ಇಲ್ವಾ..? ದೊಡ್ಡವರೊಬ್ಬರು ಹೇಳಿದ್ದಾರೆ, ನೀವು ಆಶಾವಾದಿಯಾಗಿದ್ದರೆ,  ನಾನು ನೂರು ಐಡಿಯಾ  ಕೊಡ್ತೀನಿ. ನಿರಾಶಾವಾದಿಗಳಿಗೆ ನನ್ನ ಬಳಿ ಯಾವುದೇ ಐಡಿಯಾ ಇಲ್ಲ ಎಂದಿದ್ದಾರೆ. ಆ ತರದ ಆಶಾವಾದಿಗಳಿಗೆ ನನ್ನ ಹತ್ತಿರ ಒಂದು ಐಡಿಯಾ ಇದೆ.

  ಬದಲಾಗಬೇಕು ವಿಧಾನಸೌಧ

  ನಮಗೆಲ್ಲಾ ಬೇರೆ ಕೆಲಸ ಇದೆ ಅಂತಾನೇ ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ನಿಮಗೆ ಅದಕ್ಕೋಸ್ಕರ ಸಂಬಳ ಕೊಡುತ್ತಿದ್ದೇವೆ. ನಿಮ್ಮ ಹತ್ತಿರ ಬರಲ್ಲ. ನೀವೇ ಏನೇನು ಕೆಲಸ ಮಾಡ್ತೀರೊ, ಅದೆಲ್ಲವನ್ನೂ ಜನರಿಗೆ ನೀವೇ ತಲುಪಿಸಿ. ಟಿವಿ ಚಾನೆಲ್​ಗಳಿವೆಯಲ್ಲ. ಒಂದು ಟಿವಿ ಚಾನೆಲ್ ಹೇಗೆ ಇಡೀ ಕರ್ನಾಟಕಕ್ಕೆ ಆಡಿಯೋ, ವಿಡಿಯೋ ಮೂಲಕ ಸುದ್ದಿ ಕೊಡ್ತಾರೋ, ಹಾಗೆ ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ಜನರಿಗೆ ತಿಳಿಸಬೇಕು.

  ಸಚಿವರನ್ನು ಆಯ್ಕೆ ಮಾಡುವಾಗ ನಾವು ಪರೀಕ್ಷೆ ನಡೆಸಿ ಆಯ್ಕೆಯಾದ ಎಂಎಲ್​ಎಗಳಲ್ಲಿ ಯಾರಿಗೆ ಯಾವ ವಿಚಾರದಲ್ಲಿ ಜ್ಞಾನವಿದೆ ಎಂದು ಪರಿಶೀಲಿಸಿ, ಅವರ ಜ್ಞಾನಕ್ಕೆ ತಕ್ಕಂತೆ ಇಲಾಖೆ ಹಂಚಬೇಕು. ಅಂತಾರಾಜ್ಯ ವಿವಾದಗಳನ್ನು ಪ್ರಧಾನಿ ನೇತೃತ್ವದಲ್ಲಿ ಕುಳಿತು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು.

  ದುಡ್ಡು ಪಡೆದರೆ ಕನಸು ನೆಗೆದು ಬಿದ್ದ ಹಾಗೆ..

  ಸಮಸ್ಯೆ ಎಲ್ಲಿದೆಯೋ, ಪರಿಹಾರವೂ ಅಲ್ಲಿಯೇ ಇದೆ. ನಾವು ದುಡ್ಡಿಲ್ಲದೆ ಎಲೆಕ್ಷನ್​ ಗೆಲ್ಲೋಕೆ ಆಗಲ್ಲ. ಅದಕ್ಕೇನು ಮಾಡೋದು. ದುಡ್ಡು ಬೇಕು. ಪಾರ್ಟಿ ಫಂಡ್​ ಬೇಕು. ಅದಕ್ಕೆ ಜನ ಬೇಕು. ಎಲ್ಲರ ಹತ್ತಿರ ದುಡ್ಡು ಕಲೆಕ್ಟ್​ ಮಾಡ್ತೀವಿ. ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಪಾರ್ಟಿ ಫಂಡ್​ನಲ್ಲಿ ಇಡ್ತೀವಿ. ಆಗ ಏನಾಗುತ್ತೆ. ನಮ್ಮ ಒಂದಿಷ್ಟು ಜನ ದುಡ್ಡು ಹಾಕಿರೋರು ಬರ್ತಾರೆ. ಇಲ್ಲಿಂದಲೇ ಭ್ರಷ್ಟಾಚಾರ ಶುರು. ದುಡ್ಡು ಹಾಕಿರುವವರಿಗೆ ದುಡ್ಡು ಮಾಡೋದೇ ಮೊದಲ ಆದ್ಯತೆಯಾಗಿರುತ್ತೆ. ಅವರಿಗೆ ದುಡ್ಡು ತೆಗೆಯೋಕೆ ಜಾಗ ಕೊಡಬೇಕಾಗುತ್ತೆ. ಅಲ್ಲಿಗೆ ಕನಸು ನೆಗೆದು ಬೀಳುತ್ತೆ. ಹಾಗಾಗಿ ದುಡ್ಡೇ ಇಲ್ಲದೆ ಕೆಲಸ ಮಾಡಬೇಕು. ಹಣವನ್ನು ಕೊಡಲೂ ಬಾರದು, ಪಡೆಯಲೂ ಬಾರದು. 

  ಕೊನೆಯದಾಗಿ ಹೇಳಿದ್ದು - 

  ನನ್ನನ್ನು ನಂಬಿ. ಸತ್ಯವೇ ಗೆಲ್ಲಬೇಕು. ಪಾರ್ಟಿ ಫಂಡ್ ಅನ್ನೋ ಪದವನ್ನೇ ಕಿತ್ತುಹಾಕೋಣ. ರಾಜಕೀಯ ಬೇಡ. ಪ್ರಜಾಕೀಯ ಬೇಕು. ದುಡ್ಡು ಹಾಕದೇ ಗೆಲ್ಲಬಹುದು. ಹಾಗೆ ಗೆಲ್ಲಬೇಕು.ನಾನು ದುಡ್ಡೇ ಇಲ್ಲದ ಪಕ್ಷ ಕಟ್ಟುತ್ತೇನೆ. ಇದು ನಾನು ತೆಗೆದುಕೊಳ್ತಿರೋ ಚಾಲೆಂಜ್. ಪ್ರಚಾರವಿಲ್ಲದ ಪಾರ್ಟಿ ನಂದು.ಜಾತಿ, ಧರ್ಮ ಇಲ್ಲ. ಸತ್ಯದಿಂದ ನಿಮ್ಮನ್ನು ತಲುಪುತ್ತೇವೆ. ಗೆಲ್ಲಲೇಬೇಕೆಂಬ ಛಲ ಇಲ್ಲ. ನಾನು ಪ್ರಯತ್ನ ಮಾಡೋಕೆ ಹೊರಟಿರುವೆ ಕೈಜೋಡಿಸಿ.

  ಹೀಗೆ ಉಪೇಂದ್ರ ತಮ್ಮದೇ ಆದ ಚಿಂತನಾ ಲಹರಿಯಲ್ಲಿ ಕನಸು ಬಿಚ್ಚಿಟ್ಟಿದ್ದಾರೆ. ಕೇಳೋಕೆ ಚೆಂದ ಎನಿಸುವಂತಿವೆ.

 • ನೋ ರಾಜಕೀಯ - ರಾಕಿಂಗ್ ಸ್ಟಾರ್ ಯಶ್

  no politics says yash

  ಚಿತ್ರನಟ ಯಶ್ ರಾಜಕೀಯಕ್ಕೆ ಬರ್ತಾರಾ..? ಇಂಥಾದ್ದೊಂದು ಪ್ರಶ್ನೆಯನ್ನು ಇತ್ತೀಚೆಗೆ ಎದುರಿಸುತ್ತಿರುವ ಸ್ಟಾರ್‍ಗಳಲ್ಲಿ ಯಶ್ ಅವರ ಹೆಸರು ಮುಂಚೂಣಿಯಲ್ಲಿಯೇ ಬರುತ್ತೆ. ಅದಕ್ಕೆ ತಕ್ಕಂತೆ ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ, ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸಕ್ಕೆ ಕೈ ಹಾಕಿದಾಗಲಂತೂ, ಇದು ರಾಜಕೀಯ ಪ್ರವೇಶಕ್ಕೆ ಸಿದ್ಧ ಮಾಡಿಕೊಳ್ಳುತ್ತಿರುವ ವೇದಿಕೆ ಎಂದೇ ಹಲವರು ಬಣ್ಣಿಸಿದರು. ಆಗಲೂ ರಾಜಕೀಯ ನಿರಾಕರಿಸಿದ್ದರು ಯಶ್. ಅದೊಂದೇ ಬಾರಿಯಲ್ಲ, ಹಲವು ಬಾರಿ ತಮ್ಮ ರಾಜಕೀಯ ಪ್ರವೇಶಕ್ಕೆ ನೋ ನೋ ಎನ್ನುತ್ತಲೇ ಬಂದಿದ್ದಾರೆ. ಈಗ ಮತ್ತೊಮ್ಮೆ ನೋ ಎಂದಿದ್ದಾರೆ.

  ಯಶ್ ಅವರಿಗೆ ಈ ಪ್ರಶ್ನೆ ಮತ್ತೆ ಎದುರಾಗಿದ್ದು ವಿಜಯಪುರದಲ್ಲಿ. ರಾಜ್ಯ ಸರ್ಕಾರದ ಪ್ರಭಾವಿ ಸಚಿವ, ನೀರಾವರಿ ಇಲಾಖೆಯ ಹೊಣೆ ಹೊತ್ತಿರುವ, ಪ್ರಸ್ತುತ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಗುರುತಿಸಿಕೊಂಡಿರುವ ಎಂ.ಬಿ. ಪಾಟೀಲ್ ಅವರ ಹುಟ್ಟುಹಬ್ಬದಲ್ಲಿ. ಸಚಿವರ ಹುಟ್ಟುಹಬ್ಬಕ್ಕೆ ಶುಭಕೋರಲು ಯಶ್ ಮತ್ತು ರಾಧಿಕಾ ವಿಜಯಪುರಕ್ಕೆ ಆಗಮಿಸಿದ್ದರು. ಆಗ ಈ ಪ್ರಶ್ನೆ ಮತ್ತೊಮ್ಮೆ ಎದುರಾಯ್ತು.

  ಆಗ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟ ಯಶ್, ಎಂ.ಬಿ. ಪಾಟೀಲರಿಗೂ ನಮ್ಮ ಕುಟುಂಬಕ್ಕೂ ಹಳೆಯ ಬಾಂಧವ್ಯವಿದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಶುಭ ಕೋರಲು ಬಂದಿದ್ದೇನೆ. ಇದರ ಹೊರತಾಗಿ ಯಾವುದೇ ರಾಜಕೀಯ ಇಲ್ಲ. ನಾನು ರಾಜಕೀಯಕ್ಕೆ ಬರಲ್ಲ. ಚಿತ್ರರಂಗದಿಂದ ಯಾರೇ ರಾಜಕೀಯಕ್ಕೆ ಬಂದರೂ ಪಕ್ಷಭೇದವಿಲ್ಲದೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ ಯಶ್.

  ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲೂ ಸ್ಪಷ್ಟವಾಗಿ ಮಾತನಾಡಿದ ಯಶ್, ಜಾತಿ ಅನ್ನೋದು ಸಂಸ್ಕøತಿ. ಇರೋದು ಒಂದೇ ಧರ್ಮ. ಅದು ಮಾನವ ಧರ್ಮ. ನನ್ನ ಈ ಭೇಟಿಗೂ, ಲಿಂಗಾಯತ ಧರ್ಮ ವಿಚಾರಕ್ಕೂ ತಳುಕಕು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

 • ಪೂಜಾ ಗಾಂಧಿ ಮತ್ತೆ ರಾಜಕೀಯಕ್ಕೆ

  pooja gandhi back to politics

  ಮಳೆ ಹುಡುಗಿ ಪೂಜಾ ಗಾಂಧಿ, ಮತ್ತೊಮ್ಮೆ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. 2013ರಲ್ಲಿ ರಾಜಕೀಯ ರಂಗಪ್ರವೇಶ ಮಾಡಿದ್ದ ಪೂಜಾಗಾಂಧಿ, ತಮ್ಮ ರಾಜಕೀಯ ಜೀವನ ಆರಂಭಿಸಿದ್ದೇ ಜೆಡಿಎಸ್‍ನಿಂದ. ಆದರೆ, ಅದಾದ ಕೆಲದಿನಗಳ ನಂತರ ಕೆಜೆಪಿ (ಯಡಿಯೂರಪ್ಪ ಪಕ್ಷ) ಸೇರಿದರು.ಅದಾದ ಸ್ವಲ್ಪವೇ ಸ್ವಲ್ಪ ದಿನಗಳಲ್ಲಿ ಬಿಎಸ್‍ಆರ್  (ಶ್ರೀರಾಮುಲು ಪಕ್ಷ) ಸೇರಿದರು. ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಿ 4ನೇ ಸ್ಥಾನ ಪಡೆದಿದ್ದರು ಪೂಜಾ ಗಾಂಧಿ.

  ಈಗ ಮತ್ತೆ ಜೆಡಿಎಸ್ ಸೇರುತ್ತಿದ್ದಾರೆ. 

 • ಪ್ರಜಾಕೀಯ ಅಲ್ಲ, ಉತ್ತಮ ಪ್ರಜಾ ಪಾರ್ಟಿ - ಇದು ಉಪ್ಪಿ ಪಕ್ಷ

  upendra's uttama praja party

  ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ಪ್ರಜಾಕೀಯದ ಬಗ್ಗೆ ಪ್ರಸ್ತಾಪಿಸಿ ರಾಜ್ಯಾದ್ಯಂತ ಸುದ್ದಿಯಲ್ಲಿದ್ದರು. ಆದರೆ, ಅವರು ಸ್ಥಾಪಿಸಲು ಮುಂದಾಗಿರುವ ಹೊಸ ರಾಜಕೀಯ ಪಕ್ಷದ ಹೆಸರು ಪ್ರಜಾಕೀಯ ಅಲ್ಲ, ಉತ್ತಮ ಪ್ರಜಾ ಪಾರ್ಟಿ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷ ರಿಜಿಸ್ಟರ್ ಮಾಡಿಸುತ್ತಿದ್ದಾರೆ ಉಪೇಂದ್ರ. ಈ ಕುರಿತಂತೆ ಈಗಾಗಲೇ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರಂತೆ.

  ಉಪೇಂದ್ರ ಅವರ ಹೊಸ ಪಕ್ಷಕ್ಕೆ ಸೇರಬೇಕೆಂದರೆ, ಸದಸ್ಯತ್ವಕ್ಕಾಗಿ ನೀವೇ ಅರ್ಜಿ ಹಾಕಬೇಕು. ಅರ್ಜಿಯ ಮಾದರಿ ಸಿದ್ಧವಾಗಿದೆ. ಅರ್ಜಿ ಹಾಕುವವರು ತಮ್ಮ ವೈಯಕ್ತಿಕ ವಿವರ, ಎರಡು ಫೋಟೋ ಮತ್ತು ಆಧಾರ್ ಮತ್ತಿತರ ಗುರುತಿನ ಚೀಟಿಗಳ ಪ್ರತಿಗಳನ್ನೂ ಅರ್ಜಿಯ ಜೊತೆ ಲಗತ್ತಿಸಬೇಕು. 

  ಸದಸ್ಯತ್ವ ನೋಂದಣಿ ಅಭಿಯಾನದ ಜೊತೆ ಜೊತೆಗೇ ಪ್ರಚಾರಕ್ಕೂ ಕೈ ಹಾಕಲಿದ್ದಾರಂತೆ ಉಪೇಂದ್ರ. ಇವೆಲ್ಲವೂ ಸದ್ಯಕ್ಕೆ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ.

 • ಪ್ರಜಾಕೀಯಕ್ಕಾಗಿ ಉಪ್ಪಿ ಕೈ ಬಿಟ್ಟ ಸಿನಿಮಾಗಳೆಷ್ಟು..?

  Upendra drops so many movies for politics

  ಚಿತ್ರರಂಗದಲ್ಲಿ ಉಪೇಂದ್ರ ಒಂದು ರೀತಿ ಎವರ್​ಗ್ರೀನ್. ಸಿನಿಮಾ ಹಿಟ್ ಆಗಲಿ, ಫ್ಲಾಪ್ ಆಗಲಿ. ಕೈಲಿ ಸಿನಿಮಾ ಇಲ್ಲದೆ ಕುಳಿತವರೇ ಅಲ್ಲ. ಈಗಲೂ ಅಷ್ಟೆ. ಪ್ರಜಾಕೀಯದ ಮೂಲಕ ರಾಜಕೀಯದ ಘೋಷಣೆ ಮಾಡಿದ್ದರೂ ಕೈಲಿ 3 ಸಿನಿಮಾಗಳಿವೆ.

  ಉಪೇಂದ್ರ ಮತ್ತೆ ಹುಟ್ಟಿ ಬಾ, ಉಪ್ಪಿರುಪ್ಪಿ ಮತ್ತು ಹೋಮ್ ಮಿನಿಸ್ಟರ್ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಆದರೆ, ಇದಾದ ನಂತರ ಬೇರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದೇ ಇರಲು ಉಪೇಂದ್ರ ನಿರ್ಧರಿಸಿದ್ದಾರಂತೆ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವ ಯೋಚನೆ ಉಪೇಂದ್ರ ಅವರಿಗೆ ಇದ್ದ ಹಾಗಿದೆ.

  ರಾಜಕೀಯಕ್ಕಾಗಿ ಉಪೇಂದ್ರ ಕೈಬಿಟ್ಟಿರುವುದು ಸಣ್ಣ ಚಿತ್ರಗಳನ್ನೇನೂ ಅಲ್ಲ. ಚಿರಂಜೀವಿ ಅಭಿನಯದ 151ನೇ ಚಿತ್ರವನ್ನು ಪ್ರಜಾಕೀಯ ಪಕ್ಷಕ್ಕಾಗಿಯೇ ಕೈಬಿಟ್ಟರಂತೆ ಉಪೇಂದ್ರ. ಅಷ್ಟೇ ಅಲ್ಲ, ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದಲ್ಲಿ ನಟಿಸದೇ ಇರಲು ಕೂಡಾ ಇದೇ ಕಾರಣ ಎನ್ನಲಾಗುತ್ತಿದೆ. ಇವುಗಳನ್ನು ಹೊರತುಪಡಿಸಿ ಅವರೇ ನಟಿಸಿ ನಿರ್ದೇಶಿಸಬೇಕಾಗಿದ್ದ ಚಿತ್ರವನ್ನೂ ಉಪೇಂದ್ರ ಸದ್ಯಕ್ಕೆ ಮುಂದೆ ಹಾಕಿದ್ದಾರೆ. ಅಲ್ಲಿಗೆ ಉಪೇಂದ್ರ ಕಂಪ್ಲೀಟ್ ಪೊಲಿಟಿಷಿಯನ್ ಆಗುವ ಕಾಲ ಹತ್ತಿರ ಬಂದಾಗಿದೆ.

  Related Articles :-

  WELCOME WELCOME ಉಪ್ಪಿ - ಹೆತ್ತವರು, ಸಚಿವರು, ನಾಯಕರಿಂದ ಸ್ವಾಗತ ಮತ್ತು ಬುದ್ದಿಮಾತು

  ಮೋದಿ ಓಕೆ, ಆದರೆ ರಾಜ್ಯಕ್ಕೆ ಹೊಸ ಪ್ಲಾನ್ ಬೇಕು - ಖಾಕಿ ತೊಟ್ಟುಬಂದ ಉಪೇಂದ್ರ ಹೇಳಿದ ಹೊಸ ವಿಷಯ ಏನು..?

  ಉಪ್ಪಿ ಸಿಎಂ, ಪಿಎಂ ಆಗೋದೇನೂ ಬೇಡ - ಪ್ರಿಯಾಂಕಾ ಉಪೇಂದ್ರ

  ಭಾರತಕ್ಕೆ ನರೇಂದ್ರ, ಕರ್ನಾಟಕಕ್ಕೆ ಉಪೇಂದ್ರ - ಅಭಿಮಾನಿಗಳ ಪಾಲಿಗೆ ಇಂದು ಉಪ್ಪಿ ಡೇ

  ಬಿಜೆಪಿ ಅಲ್ಲ, ಕಾಂಗ್ರೆಸ್ ಅಲ್ಲ, ಜೆಡಿಎಸ್ ಅಲ್ಲ - ಉಪೇಂದ್ರ ಕಟ್ಟುತ್ತಿರುವುದು ಹೊಸ ಪಕ್ಷ

  ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು

 • ಪ್ರತಿ ಚುನಾವಣೆಯ 6 ತಿಂಗಳ ಮುಂಚೆ ಬರ್ತಾರೆ ಉಪೇಂದ್ರ

  upendra different politics

  ಸೋಲಿನ ಭಯವಿಲ್ಲದೆ ಸಾಯುವವರೆಗೂ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಇದು ಉಪೇಂದ್ರ ತಮ್ಮ ಪ್ರಜಾಕೀಯದ ಬಗ್ಗೆ ಹೇಳಿರುವ ಮಾತು. ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ. ಗೆದ್ದರೆ ಸಂತೋಷ. ಅಕಸ್ಮಾತ್ ಸೋತರೂ ಪ್ರಯತ್ನ ಬಿಡಲ್ಲ. ಸಾಯುವವರೆಗೂ ಪ್ರಯತ್ನ ಮಾಡ್ತಾನೆ ಇರ್ತೀನಿ ಅಂತಾರೆ ಉಪೇಂದ್ರ.

  ಅಂದಹಾಗೆ ಉಪೇಂದ್ರ ಪ್ರತಿ ಚುನಾವಣೆಯ 6 ತಿಂಗಳು ಮುಂಚೆ ಬರುತ್ತಾರಂತೆ. ಅಧಿಕಾರ ಇರಲಿ, ಇಲ್ಲದೇ ಇರಲಿ.. ರಾಜಕೀಯವನ್ನೇ ವೃತ್ತಿಯಾಗಿಸಿಕೊಂಡಿರುವವರಿಗೆ ಇದು ಅಚ್ಚರಿಯಾಗಿ ಕಾಣಿಸಬಹುದು. ಆದರೆ, ರಾಜಕೀಯವನ್ನೇ ವೃತ್ತಿಯಾಗಿಸಿಕೊಂಡು ಅದೊಂದನ್ನೇ ಮಾಡಲು ಹೊರಟರೆ, ಖರ್ಚಿಗಾಗಿ ಬೇರೆಯವರನ್ನು ಅವಲಂಬಿಸಬೇಕು ಅಥವಾ ಕೂಡಿಟ್ಟದ್ದನ್ನೆಲ್ಲ ಖರ್ಚು ಮಾಡಬೇಕು. ಎರಡೂ ಅಪಾಯಕಾರಿ ಎನ್ನುವುದು ಉಪೇಂದ್ರ ವಾದ. ಹೀಗಾಗಿ ಪ್ರತಿ ಚುನಾವಣೆಯ 6 ತಿಂಗಳು ಮೊದಲು ಉಪೇಂದ್ರ ಪ್ರತ್ಯಕ್ಷವಾಗ್ತಾರೆ. ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರುತ್ತೆ. 

  ಹಾಗಂತ ಉಪೇಂದ್ರ ಎಲೆಕ್ಷನ್ ವೇಳೆಯಲ್ಲಷ್ಟೇ ಪ್ರತ್ಯಕ್ಷರಾಗುತ್ತಾರೆ ಎಂದುಕೊಳ್ಳಬೇಡಿ. ಹೋರಾಟಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ರಾಜಕೀಯ ಎಂದರೆ, ಇಷ್ಟು ದಿನ ಬೇರೆಯೇ ತೆರನಾದವರನ್ನು ನೋಡಿದವರಿಗೆ ಇದು ಅವಕಾಶವಾದ ಎನ್ನಿಸಬಹುದು. ಆದರೆ, ಉಪೇಂದ್ರ ತಮ್ಮ ನಿಲುವಿನ ಬಗ್ಗೆ ಸ್ಪಷ್ಟತೆ ಹೊಂದಿರುವುದಂತೂ ನಿಜ.

 • ಪ್ರಥಮ್ ಪಾಲಿಟಿಕ್ಸ್. ಕಾಂಗ್ರೆಸ್ಸಾ..? ಬಿಜೆಪಿನಾ..?

  pratham politics

  ನೀವು ಒಪ್ತೀರೋ, ಬಿಡ್ತೀರೋ.. ಆದರೆ, ಪ್ರಥಮ್ ತಮ್ಮ ಒಲವು ನಿಲುವುಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುವ ಮನುಷ್ಯ. ಅವರ ಕೆಲವು ನಿಲುವುಗಳು ಇವರ ಪಕ್ಕಾ ಬಿಜೆಪಿಯಿರಬೇಕು ಎನಿಸಿಬಿಟ್ಟರೆ, ಇನ್ನೂ ಕೆಲವು ನಿಲುವುಗಳು ಇವರು ಕಾಂಗ್ರೆಸ್ಸಿಗನಾಗಿರಬಹುದು ಎನಿಸಿಬಿಡುತ್ತವೆ. ಕೆಲವೊಮ್ಮೆ ಜೆಡಿಎಸ್‍ನವರಿದ್ದರೂ ಇರಬಹುದು ಎನಿಸುತ್ತದೆ. ಏಕೆಂದರೆ, ಪ್ರಥಮ್ ಪ್ರಕಾಶ್ ರೈ ವಿರುದ್ಧ ಹರಿಹಾಯುತ್ತಾರೆ. ಮತ್ತೊಂದು ಕಡೆ ಸಿದ್ದರಾಮಯ್ಯನವರನ್ನ ವೈಯಕ್ತಿಕವಾಗಿ ಗೌರವಿಸುತ್ತಲೇ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಾರೆ. ಅಷ್ಟೆಲ್ಲ ಅಗಿ  ಯಾರಾದರೂ ದೇವೇಗೌಡರ ಬಗ್ಗೆ ಕೆಮ್ಮಿದರೂ ಸಾಕು, ಪ್ರಥಮ್ ಕೆಂಡಾಮಂಡಲವಾಗಿಬಿಡುತ್ತಾರೆ. ಹೀಗಾಗಿಯೇ ಪ್ರಥಮ್ ಯಾವ ಪಾರ್ಟಿ ಅನ್ನೋದು ಕನ್‍ಫ್ಯೂಷನ್.

  ಪ್ರಥಮ್ ಈ ಚುನಾವಣೆಯಲ್ಲಿ ನಾಲ್ವರು ಸೋಲಬೇಕು ಎಂದು ಬಯಸುತ್ತಿದ್ದಾರೆ. ಅವರ ಸೋಲಿಗಾಗಿ ಪ್ರಚಾರವನ್ನೂ ಮಾಡ್ತಾರಂತೆ. ಹಿಂದೂ ಧರ್ಮವನ್ನು ಒಡೆಯಲು ಯತ್ನಿಸುತ್ತಿರುವ ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಅವರನ್ನು ಸೋಲಿಸಬೇಕು. ದೇವೇಗೌಡರನ್ನು ಬಾಯಿಗೆ ಬಂದಂತೆ ಬೈದ ಜಮೀರ್ ಅಹ್ಮದ್‍ರನ್ನು ಸೋಲಿಸಬೇಕು ಹಾಗೂ ದ.ಕನ್ನಡದಲ್ಲಿ ಕೋಮುಗಲಭೆ ತಡೆಯಲು ವಿಫಲವಾಗಿರುವ ರಮಾನಾಥ್ ರೈರನ್ನು ಸೋಲಿಸಬೇಕು ಎನ್ನುತ್ತಾರೆ.

  ಹಾಗಾದರೆ, ಪ್ರಥಮ್ ಕಾಂಗ್ರೆಸ್ ವಿರೋಧಿನಾ ಎಂದರೆ, ಅದೂ ಅಲ್ಲ. ಸಿಎಂ ಸಿದ್ದರಾಮಯ್ಯನವರ ಮಗ ಯತೀಂದ್ರ ಗೆಲ್ಲಬೇಕು. ಅವರು ಬಹಳ ಒಳ್ಳೆಯ ವ್ಯಕ್ತಿ. ಅಂತಹವರನ್ನು ಕಳೆದುಕೊಳ್ಳಬಾರದು. ಅವರು ಕರೆಯದಿದ್ದರೂ ಅವರು ನಿಂತರೆ ನಾನು ಅವರ ಪರ ಪ್ರಚಾರ ಮಾಡ್ತೇನೆ ಎನ್ನುತ್ತಾರೆ ಪ್ರಥಮ್.

  ಸದ್ಯಕ್ಕಂತೂ ಪ್ರಥಮ್ ದೇವ್ರಂತ ಮನುಷ್ಯ ಚಿತ್ರದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ.

 • ಬಿಜೆಪಿ ಅಲ್ಲ, ಕಾಂಗ್ರೆಸ್ ಅಲ್ಲ, ಜೆಡಿಎಸ್ ಅಲ್ಲ - ಉಪೇಂದ್ರ ಕಟ್ಟುತ್ತಿರುವುದು ಹೊಸ ಪಕ್ಷ

  upendra to build new party

  ನನ್ನನ್ನು ನಂಬಿ. ಸತ್ಯವೇ ಗೆಲ್ಲಬೇಕು. ಪಾರ್ಟಿ ಫಂಡ್ ಅನ್ನೋ ಪದವನ್ನೇ ಕಿತ್ತುಹಾಕೋಣ. ರಾಜಕೀಯ ಬೇಡ. ಪ್ರಜಾಕೀಯ ಬೇಕು. ದುಡ್ಡು ಹಾಕದೇ ಗೆಲ್ಲಬಹುದು. ಹಾಗೆ ಗೆಲ್ಲಬೇಕು.ನಾನು ದುಡ್ಡೇ ಇಲ್ಲದ ಪಕ್ಷ ಕಟ್ಟುತ್ತೇನೆ. ಇದು ನಾನು ತೆಗೆದುಕೊಳ್ತಿರೋ ಚಾಲೆಂಜ್. ಪ್ರಚಾರವಿಲ್ಲದ ಪಾರ್ಟಿ ನಂದು.ಜಾತಿ, ಧರ್ಮ ಇಲ್ಲ. ಸತ್ಯದಿಂದ ನಿಮ್ಮನ್ನು ತಲುಪುತ್ತೇವೆ. ಗೆಲ್ಲಲೇಬೇಕೆಂಬ ಛಲ ಇಲ್ಲ. ನಾನು ಪ್ರಯತ್ನ ಮಾಡೋಕೆ ಹೊರಟಿರುವೆ ಕೈಜೋಡಿಸಿ.

  ಈ ಮಾತಿನ ಅರ್ಥ ಇಷ್ಟೆ. ಉಪೇಂದ್ರ ಯಾವ ಪಕ್ಷಕ್ಕೂ ಸೇರುತ್ತಿಲ್ಲ. ಅದು ಬಿಜೆಪಿಯಲ್ಲ, ಜೆಡಿಎಸ್ ಅಲ್ಲ, ಕಾಂಗ್ರೆಸ್ಸೂ ಅಲ್ಲ. ಹೊಸ ಕನಸಿನ ಹೊಸ ಪ್ರಯತ್ನವಾಗಿ ಹೊಸ ಪಕ್ಷ ಕಟ್ಟುತ್ತಿದ್ದಾರೆ.

  Related Articles :-

  ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು

  ರಾಜಕೀಯಕ್ಕೆ ಬಂದರೆ, ನಿಜದಂತಿರುವಾ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ ಎನ್ನಲು ಸಾಧ್ಯವಿಲ್ಲ..! 

  ಉಪೇಂದ್ರ ರಾಜಕೀಯ ಪ್ರವೇಶ ನನಗೂ ಸರ್​ಪ್ರೈಸ್ - ಪ್ರಿಯಾಂಕಾ ಉಪೇಂದ್ರ ಫಸ್ಟ್ ರಿಯಾಕ್ಷನ್

  ಉಪೇಂದ್ರ ರಾಜಕೀಯ ಪ್ರವೇಶ - ಯಾಱರು ಏನೇನು ಹೇಳಿದ್ರು..?

  ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

  ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

  ಅಕ್ಕಾ ಎನ್ನಿಸಿಕೊಂಡಿದ್ದ ರಾಗಿಣಿಯೇ ಶರಣ್​ಗೆ ಜೋಡಿ

 • ಬಿಜೆಪಿ ಸೇರ್ತಾರಾ ಉಪೇಂದ್ರ..?

  will upendra join bjp

  `ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ' ಎಂಬ ಪಕ್ಷ ಕಟ್ಟಿ, ಹೊಸ ರಾಜಕೀಯ ಹಾದಿಯ ಸುಳಿವು ಕೊಟ್ಟಿದ್ದ ಉಪೇಂದ್ರ ಈಗ ತಾವೇ ಕಟ್ಟಿದ್ದ ಪಕ್ಷದಿಂದ ಹೊರಬಂದಿದ್ದಾರೆ. ಕೆಪಿಜೆಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಮಧ್ಯೆ ಹೊಂದಾಣಿಕೆ ಆಗಿಲ್ಲ. ಅಭ್ಯರ್ಥಿಯ ಅಯ್ಕೆ ವಿಚಾರದಲ್ಲಿ ಇಬ್ಬರ ಮಧ್ಯೆ ಒಮ್ಮತ ಮೂಡಿಲ್ಲ. ಆನ್‍ಲೈನ್ ಪ್ರಚಾರವನ್ನಷ್ಟೇ ನಂಬಿಕೊಂಡಿರುವ ಉಪೇಂದ್ರ ಅವರ ಕಾರ್ಯತಂತ್ರ ಮಹೇಶ್ ಗೌಡಗೆ ಇಷ್ಟವಾಗಿಲ್ಲ. ಒಟ್ಟಿನಲ್ಲಿ ಸಣ್ಣದಾಗಿ ಶುರುವಾದ ಬಿರುಕು, ಈಗ ಉಪೇಂದ್ರ ಪಕ್ಷದಿಂದಲೇ ಹೊರಹೋಗುವಂತಾಗಿದೆ.

  ಆದರೆ, ಈಗ ಬರುತ್ತಿರುವ ಸುದ್ದಿಯೇ ಬೇರೆ. ಉಪೇಂದ್ರ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ದೊಡ್ಡಮಟ್ಟದಲ್ಲಿ ಕೇಳಿಬರುತ್ತಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉಪೇಂದ್ರ ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತ ಎಂದಿದ್ದಾರೆ. ಆದರೆ, ಈ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದೂ ಹೇಳಿದ್ದಾರೆ. ಇಷ್ಟಿದ್ದರೂ ಉಪೇಂದ್ರ ಅವರನ್ನು ಬಿಜೆಪಿಗೆ ಕರೆತಂದು, ಗಾಂಧಿನಗರ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ವಿರುದ್ಧ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಗಂಭೀರವಾಗಿ ಚಿಂತಿಸುತ್ತಿದೆ ಎನ್ನುತ್ತಿವೆ ಮೂಲಗಳು. ಸದ್ಯಕ್ಕೆ ಯಾವುದೂ ಅಧಿಕೃತವಲ್ಲ.

 • ಭಾರತಕ್ಕೆ ನರೇಂದ್ರ, ಕರ್ನಾಟಕಕ್ಕೆ ಉಪೇಂದ್ರ - ಅಭಿಮಾನಿಗಳ ಪಾಲಿಗೆ ಇಂದು ಉಪ್ಪಿ ಡೇ

  upendra image

  ಉಪೇಂದ್ರ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದ್ದೇ ತಡ. ಎಲ್ಲರೂ ಈಗ ಉಪ್ಪಿ ಬೆನ್ನು ಹತ್ತಿದ್ದಾರೆ. ಎಲ್ಲೆಲ್ಲೂ ಈಗ ಉಪ್ಪಿಯೇ ಹೆಡ್‍ಲೈನ್. ಕನ್ನಡದ ಪತ್ರಿಕೆ, ಟಿವಿಗಳಲ್ಲಷ್ಟೇ ಅಲ್ಲ, ಆಂಧ್ರ, ತಮಿಳುನಾಡು ಪತ್ರಿಕೆಗಳಲ್ಲಿ, ವೆಬ್‍ಸೈಟುಗಳಲ್ಲಿ, ಚಾನೆಲ್‍ಗಳಲ್ಲಿ ಉಪೇಂದ್ರ ಆಕರ್ಷಣೆಯ ಕೇಂದ್ರ ಬಿಂದು.

  ಅಭಿಮಾನಿಗಳಂತೂ ಚಿತ್ರ ವಿಚಿತ್ರ ಡೈಲಾಗ್‍ಗಳಲ್ಲೇ ಫೋಟೋ ಮಾಡಿ, ಉಪ್ಪಿಗೆ ಉಘೇ ಎನ್ನುತ್ತಿದ್ದರೆ, ಕೆಲವರಂತೂ ಭಾರತಕ್ಕೆ ನರೇಂದ್ರ, ಕರ್ನಾಟಕಕ್ಕೆ ಉಪೇಂದ್ರ ಎಂದು ಬರೆಯುವ ಮಟ್ಟಕ್ಕೆ ಹೋಗಿದ್ದಾರೆ. 

  ಒಟ್ಟಿನಲ್ಲಿ ಉಪೇಂದ್ರ ಮನಸ್ಸಿನ ಮಾತನ್ನು ಅರ್ಧ ಬಿಚ್ಚಿಟ್ಟಿದ್ದಾರೆ. ಇನ್ನರ್ಧ ಬೆಳಗ್ಗೆ 11 ಗಂಟೆಗೆ ರುಪೀಸ್ ರೆಸಾರ್ಟ್‍ನಲ್ಲಿ ಗೊತ್ತಾಗಲಿದೆ. ಅಲ್ಲಿ ಅವರು ನಮಗೆ, ನಿಮಗೆ ಎಲ್ಲರಿಗೂ ಗೊತ್ತಿರುವ ಆದರೆ, ಮರೆತು ಹೋಗಿರುವ ಸತ್ಯವನ್ನು ಹೇಳಲಿದ್ದಾರಂತೆ. 

  ಹಾಗೆಂದು ಎಲ್ಲರೂ ಉಪ್ಪಿಯನ್ನು ಹೊಗಳಿದ್ದಾರೆ ಎಂದೇನಲ್ಲ. ಕೆಲವರಿಗೆ ಅರವಿಂದ ಕೇಜ್ರಿವಾಲ್ ನೆನಪಾಗಿದ್ದಾರೆ. ಇನ್ನೂ ಕೆಲವರಿಗೆ ಚಿರಂಜೀವಿ ನೆನಪಾಗಿದ್ದಾರೆ. ಅಂಬರೀಷ್‍ರನ್ನು ನೆನಪಿಸಿಕೊಂಡವರೂ ಇದ್ದಾರೆ. ನಿಮ್ಮ ಕನಸು, ಪ್ರಾಮಾಣಿಕ ಪ್ರಯತ್ನಗಳ ಬಗ್ಗೆ ಅಭಿಮಾನವಿದೆ. ಆದರೆ, ಮೇಲ್ನೋಟಕ್ಕೇ ಇದು ಭ್ರಮೆ ಎನ್ನಿಸುವ ಹಾಗಿದೆ. ವಾಸ್ತವಕ್ಕೆ ದೂರವಾಗಿದೆ ಎಂದವರೂ ಇದ್ದಾರೆ.

  Related Articles :-

  ಬಿಜೆಪಿ ಅಲ್ಲ, ಕಾಂಗ್ರೆಸ್ ಅಲ್ಲ, ಜೆಡಿಎಸ್ ಅಲ್ಲ - ಉಪೇಂದ್ರ ಕಟ್ಟುತ್ತಿರುವುದು ಹೊಸ ಪಕ್ಷ

  ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು

  ರಾಜಕೀಯಕ್ಕೆ ಬಂದರೆ, ನಿಜದಂತಿರುವಾ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ ಎನ್ನಲು ಸಾಧ್ಯವಿಲ್ಲ..! 

  ಉಪೇಂದ್ರ ರಾಜಕೀಯ ಪ್ರವೇಶ ನನಗೂ ಸರ್​ಪ್ರೈಸ್ - ಪ್ರಿಯಾಂಕಾ ಉಪೇಂದ್ರ ಫಸ್ಟ್ ರಿಯಾಕ್ಷನ್

  ಉಪೇಂದ್ರ ರಾಜಕೀಯ ಪ್ರವೇಶ - ಯಾಱರು ಏನೇನು ಹೇಳಿದ್ರು..?

  ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

  ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

 • ಮತ್ತೆ ಮಂಡ್ಯಕ್ಕೇ ಬರ್ತಾರಂತೆ ರಮ್ಯಾ..!

  ramya re entry to mandya

  ಚಿತ್ರರಂಗವನ್ನೂ ಹೆಚ್ಚೂ ಕಡಿಮೆ ಬಿಟ್ಟೇಬಿಟ್ಟಿರುವ ರಮ್ಯಾ, ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಕೂಡಾ ಕಡಿಮೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ನಿರ್ವಹಣೆ ವಹಿಸಿಕೊಂಡ ಮೇಲೆ ರಮ್ಯಾ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಹೀಗಿರುವಾಗಲೇ, ರಮ್ಯಾ ಮತ್ತೊಮ್ಮೆ ಮಂಡ್ಯಕ್ಕೆ ಬರುವ ಸುದ್ದಿ ಕೇಳಿ ಬರೋಕೆ ಶುರುವಾಗಿದೆ.

  ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಸಡ್ಡು ಹೊಡೆಯಲು ರಮ್ಯಾ ಅವರನ್ನು ಕಣಕ್ಕಿಳಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರಂತೆ. ಅಲ್ಲದೆ, ಅಂಬರೀಷ್ ಜನಪ್ರಿಯತೆ ಕುಸಿದಿದ್ದು, ಮಂಡ್ಯದಲ್ಲಿ ಕಾಂಗ್ರೆಸ್‍ಗೆ ರಮ್ಯಾ ಅವರಿಂದ ಮಾತ್ರ ಶಕ್ತಿ ತುಂಬಲು ಸಾಧ್ಯ ಎಂದು ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಹೈಕಮಾಂಡ್‍ಗೆ ವರದಿ ಕೊಟ್ಟಿದ್ದಾರಂತೆ.

  ಹೀಗಾಗಿ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿಸಿದ್ದಾರಂತೆ. ಈಗಾಗಲೇ ಮಂಡ್ಯದಲ್ಲಿ ಬಾಡಿಗೆಗಿದ್ದ ಮನೆಯನ್ನೇ ಖರೀದಿಸಿರುವ ರಮ್ಯಾ, ಇದೇ ತಿಂಗಳು 29ರಂದು ಗೃಹ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನವೆಂಬರ್ 29 ರಮ್ಯಾ ಅವರ ಬರ್ತ್ ಡೇ ಎನ್ನುವುದು ವಿಶೇಷ.

  ಮಂಡ್ಯದಲ್ಲಿ ಸಾಧತ್ ಅಲಿ ಖಾನ್ ಎಂಬುವವರು ರಮ್ಯಾ ಅವರಿಗೆ ವಾಸ ಮಾಡಲು ತಮ್ಮ ಮನೆಯನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ.  ಅದೇ ಮನೆಯನ್ನು 25 ಲಕ್ಷ ಖರ್ಚು ಮಾಡಿ ನವೀಕರಿಸಿಕೊಂಡಿದ್ದ ರಮ್ಯಾ, ಈಗ ಆ ಮನೆಯನ್ನು ಖರೀದಿ ಮಾಡಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ.

  ಆದರೆ, ಮಂಡ್ಯದಲ್ಲಿ ಅಂಬರೀಷ್ ಅವರ ಎದುರು ರಮ್ಯಾ ಮಿಂಚುತ್ತಾರಾ..? ಮಂಕಾಗುತ್ತಾರಾ..? ಅಥವಾ ಅಂಬರೀಷ್ ಅವರೇ ಸೈಡ್‍ಗೆ ಹೋಗ್ತಾರಾ..? ಈಗಲೇ ಪಕ್ಕಾ ಹೇಳೋದು ಕಷ್ಟ. ಏಕೆಂದರೆ, ಅದು ಸಿನಿಮಾ ಅಲ್ಲ, ರಾಜಕೀಯ.

 • ಮೋದಿ ಓಕೆ, ಆದರೆ ರಾಜ್ಯಕ್ಕೆ ಹೊಸ ಪ್ಲಾನ್ ಬೇಕು - ಖಾಕಿ ತೊಟ್ಟುಬಂದ ಉಪೇಂದ್ರ ಹೇಳಿದ ಹೊಸ ವಿಷಯ ಏನು..?

  upendra pressmeet highlight

  ನಿನ್ನೆಯಿಂದ ಇಡೀ ರಾಜ್ಯದಲ್ಲಿ ಉಪೇಂದ್ರ ಅವರದ್ದೇ ಸುದ್ದಿ. ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ. ಹೊಸ ಪಕ್ಷ ಕಟ್ಟುತ್ತಾರೆ ಎನ್ನುವುದು ಊಟ, ‘ಉಪ್ಪಿ’ನಕಾಯಿ ಎಲ್ಲವೂ ಆಗಿತ್ತು. ಅದೆಲ್ಲಕ್ಕೂ ಸುದ್ದಿಗೋಷ್ಟಿಯಲ್ಲಿ ಉತ್ತರ ನೀಡಿದ್ದಾರೆ ಉಪೇಂದ್ರ.  ಸುದ್ದಿಗೋಷ್ಟಿಗೆ ಖಾಕಿ ದಿರಿಸಿನಲ್ಲಿ ಬಂದ ಉಪೇಂದ್ರ, ಖಾಕಿ ಕಾರ್ಮಿಕರ ಸಂಕೇತ. ನಾನು ಕಾರ್ಮಿಕನಾಗಲು ಬಯಸುತ್ತೇನೆ ಎಂದರು.  ಉಳಿದಂತೆ ನಿನ್ನೆ ಫೇಸ್​ಬುಕ್​ನಲ್ಲಿ ಬಿಟ್ಟಿದ್ದ ಆಡಿಯೋದಲ್ಲಿ ಹೇಳಿದ್ದ ವಿಚಾರಗಳ ಬಗ್ಗೆಯೇ ಮಾತನಾಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಸಂಬಳ ತೆಗೆದುಕೊಂಡು, ಸಂಬಳಕ್ಕಾಗಿ ದುಡಿಯುತ್ತೇನೆ. ಲಂಚಕ್ಕಾಗಿ ದುಡಿಯುವುದಿಲ್ಲ ಎಂದರು.

  MAIL ಐಡಿ ಕೊಟ್ಟರು ಉಪೇಂದ್ರ

  This email address is being protected from spambots. You need JavaScript enabled to view it., This email address is being protected from spambots. You need JavaScript enabled to view it.,This email address is being protected from spambots. You need JavaScript enabled to view it. - ಈ ಮೂರು ಐಡಿಗಳನ್ನು ಕೊಟ್ಟಿರುವ ಉಪೇಂದ್ರ, ಈ ಮೇಯ್ಲ್ ಐಡಿಗಳಿಗೆ ಜನ ತಮ್ಮ ಐಡಿಯಾಗಳನ್ನು ಕಳುಹಿಸುವಂತೆ ಕೋರಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೇ ಹೊಸ ಪಕ್ಷ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆ. 

  ಮೋದಿ ಓಕೆ.. ಆದರೆ..

  ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜ್ಯ ರಾಜಕೀಯಕ್ಕೆ ಹೊಸ ಯೋಜನೆಗಳು, ಹೊಸ ಚಿಂತನೆಗಳು ಬೇಕು. ಪ್ರತ್ಯೇಕವಾಗಿ ಈ ಬಗ್ಗೆ ಚರ್ಚೆಯಾಗಬೇಕು. ನಾಡು, ನುಡಿ, ನೆಲ, ಜಲ ಮತ್ತು ಅಭಿವೃದ್ಧಿ ಕುರಿತಂತೆ ಪ್ರತ್ಯೇಕ ಯೋಜನೆಗಳು ರೂಪುಗೊಳ್ಳಬೇಕು ಎಂದಿದ್ದಾರೆ ಉಪ್ಪಿ. ಅಮಿತ್ ಶಾ ಬೆಂಗಳೂರಿಗೆ ಬರುವ ಬಗ್ಗೆ ಓದಿದ್ದೇನೆಯೇ ಹೊರತು, ಮಿಕ್ಕೇನು ಗೊತ್ತಿಲ್ಲ ಎಂದಿದ್ದಾರೆ.

  ಪ್ರಜಾಕೀಯ.. ಪ್ರಜಾಕಾರಣ 

  ಅಂಹಾಗೆ ಇದು ಉಪೇಂದ್ರ ಕಟ್ಟುತ್ತಿರುವ ಹೊಸ ಪಕ್ಷದ ಹೆಸರು

 • ಯಶ್ ರಾಜಕೀಯದ ಮಾತು

  yash talks about politics

  ಎಲೆಕ್ಷನ್ ಹತ್ತಿರ ಬಂದಿರುವ ಈ ಹೊತ್ತಿನಲ್ಲಿ ಯಶ್ ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದು ಮತದಾರರು, ರಾಜಕಾರಣಿಗಳು ಎಲ್ಲರಿಗೂ ಎಚ್ಚರಿಕೆ ಗಂಟೆಯೂ ಹೌದು.ಜನಪ್ರತಿನಿಧಿಗಳಷ್ಟೆ ಅಲ್ಲ, ಜನರೂ ಪ್ರಾಮಾಣಿಕರಾಗಿರಬೇಕು.

  ಹಣ ಇದ್ದರೆ, ಚುನಾವಣೆ ಗೆಲ್ಲಬಹುದು ಎಂಬ ಜನಪ್ರತಿನಿಧಿಗಳ ನಂಬಿಕೆಯನ್ನು ಮೊದಲು ನಾವು ಸುಳ್ಳು ಮಾಡಬೇಕು. ಎಲೆಕ್ಷನ್ ಹತ್ತಿರ ಬಂದಿರುವ ಈ ಹೊತ್ತಿನಲ್ಲೂ ಯಾವ ರಾಜಕಾರಣಿಯೂ ನಾನು ಇಂತಿಂತಹ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಿಲ್ಲ. ಬದಲಿಗೆ ಅವರು ಇಷ್ಟು ಹಗರಣ ಮಾಡಿದ್ರು. ಇವರು ಈ ಹಗರಣ ಮಾಡಿದ್ರು ಎನ್ನುತ್ತಿದ್ದಾರೆ. ತನ್ನ ಕ್ಷೇತ್ರದ ಬಗ್ಗೆ ಬದ್ಧತೆಯಿಂದ ಮಾತನಾಡಿದ ರಾಜಕಾರಣಿ ನನ್ನ ಕಣ್ಣಿಗೆ ಬಿದ್ದಿಲ್ಲ.ದೊಡ್ಡ ದೊಡ್ಡ ಪ್ರಾಜೆಕ್ಟುಗಳ ಬಗ್ಗೆ ಮಾತನಾಡುವುದಕ್ಕಿಂತ, ಈಗಲೂ ಜನರ ಕೈಗೆ ಸಿಗದೇ ಇರುವ ರಸ್ತೆ, ಕೆರೆ, ಶಿಕ್ಷಣ, ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸುವವರಿಗೆ ನಾವು ಆದ್ಯತೆ ಕೊಡೋಣ.

  ಆದರೆ, ಇವುಗಳನ್ನು ಬಿಟ್ಟು, ಜಾತಿ, ಧರ್ಮಗಳ ಬಗ್ಗೆಯಷ್ಟೇ ಮಾತನಾಡುವುದನ್ನು ನೋಡಿದರೆ, ಬೇಸರ ಹುಟ್ಟುತ್ತೆ.ಜನಪ್ರತಿನಿಧಿಗಳನ್ನು ಮನೆಯ ಮದುವೆ, ತಿಥಿ, ಸಾವುಗಳಿಗೆ ಕರೆಯೋದನ್ನು ನಾವು ಬಿಡಬೇಕು. ವೈಯಕ್ತಿಕ ಕೆಲಸಗಳಿಗೆ ಅಂಗಲಾಚುವುದನ್ನು ಬಿಡಬೇಕು. ಹಾಗೆ ಕರೆಯುವವರೆಗೆ ಅವರು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ.

  ಇವರ ಮನೆ ಸಮಾರಂಭಗಳಿಗೆ ಹೋಗಿ ಬಂದರೆ ಸಾಕು ಎಂದು ಜನಪ್ರತಿನಿಧಿಗಳು ಅಂದುಕೊಂಡುಬಿಡ್ತಾರೆ.ಪ್ರಚಾರ ಮಾಡಬೇಕೋ ಬೇಡವೋ ನಿರ್ಧರಿಸಿಲ್ಲ.ನಾನು ಯಾರ ಪರವಾದರೂ ಪ್ರಚಾರ ಮಾಡಿದರೆ, ನಾಳೆ ಆತನನ್ನು ಪ್ರಶ್ನಿಸುವ ಅಧಿಕಾರವೂ ನನಗೆ ಬೇಕು. ಅದು ಸಾಧ್ಯವಿಲ್ಲದಿದ್ದರೆ, ನಾನು ಪ್ರಚಾರ ಮಾಡುವುದೂ ಸಾಧ್ಯವಿಲ್ಲ.

  ಇದು ಯಶ್ ಅವರ ರಾಜಕೀಯದ ಮಾತುಗಳು.

 • ರಂಗಾಯಣ ರಘು ಜೆಡಿಎಸ್‍ನತ್ತ..

  rangayana raghu will join jds

  ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಅಭಿನಯ ಚಾತುರ್ಯದಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು ರಂಗಾಯಣ ರಘು. ಅಭಿನವ ಬಾಲಣ್ಣ ಎಂದೇ ಕರೆಸಿಕೊಳ್ಳುವ ರಘು, ಒಂದೊಂದು ಪಾತ್ರಕ್ಕೂ ಒಂದೊಂದು ಮ್ಯಾನರಿಸಂ ಕೊಟ್ಟು ಯಶಸ್ವಿಯಾದವರು. ವಂದೇಮಾತರಂ, ಟಿಪ್ಪೂ ಸುಲ್ತಾನ್.. ಜೈ ಕರ್ನಾಟಕ ಮಾತೆ ಎಂಬ ಅವರ ದುನಿಯಾ ಡೈಲಾಗ್ ಈಗಲೂ ಜನಪ್ರಿಯ. 

  ಕನ್ನಡ ಚಿತ್ರರಂಗದ ಬ್ಯುಸಿ ಪೋಷಕ ನಟರಾಗಿರುವ ರಂಗಾಯಣ ರಘು, ರಾಜಕೀಯದತ್ತ ಮನಸ್ಸು ಮಾಡಿದ್ದಾರೆ. ಈ ವರ್ಷ ನಡೆಯುವ ಚುನಾವಣೆಯಲ್ಲಿ ಅವರು ಮಧುಗಿರಿ ಅಥವಾ ಪಾವಗಡದಿಂದ ಚುನಾವಣೆಗೆ ನಿಂತರೂ ಅಚ್ಚರಿ ಪಡಬೇಕಿಲ್ಲ. 

  ರಂಗಾಯಣ ರಘು ಅವರ ತಂದೆ ಹಾಗೂ ಅಣ್ಣ ಜೆಡಿಎಸ್‍ನಲ್ಲಿಯೇ ಗುರುತಿಸಿಕೊಂಡವರು. ದೇವೇಗೌಡ ಹಾಗೂ ಕುಮಾರ ಸ್ವಾಮಿ ವಿಶೇಷ ಅಭಿಮಾನವಿದೆ. ಹೀಗಾಗಿ ಜೆಡಿಎಸ್ ನನ್ನ ಪ್ರಥಮ ಆಯ್ಕೆ ಎಂದಿದ್ದಾರೆ ರಘು. ಬೇರೆ ಪಕ್ಷದ ಬಗ್ಗೆ ಯೋಚನೆಯನ್ನೂ ಮಾಡಿಲ್ಲ.

  ಪತ್ನಿಯೊಂದಿಗೆ ಇನ್ನೂ ಚರ್ಚಿಸಿಲ್ಲ. ಪತ್ನಿ ಹಾಗೂ ಮಕ್ಕಳು ಒಪ್ಪಿಗೆ ಕೊಟ್ಟರೆ ರಾಜಕೀಯಕ್ಕೆ ಬರುತ್ತೇನೆ. ಸದ್ಯಕ್ಕೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ ರಘು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿನಿಮಾದಿಂದ ರಾಜಕೀಯಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

  Related Articles :-

  Rangayana Raghu To Join JDS Soon

 • ರಾಜಕೀಯಕ್ಕೆ ಬಂದರೆ, ನಿಜದಂತಿರುವಾ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ ಎನ್ನಲು ಸಾಧ್ಯವಿಲ್ಲ..! 

  upendra in politics

  ‘‘A ಸ್ಟಾರ್ ಈಸ್ ಬಾರ್ನ್​’’. ಉಪೇಂದ್ರ ಅವರ A ಸಿನಿಮಾ ರಿಲೀಸ್ ಆದಾಗ ಚಿತ್ರಪ್ರಭದಲ್ಲಿ ಅಂಥಾದ್ದೊಂದು ಶೀರ್ಷಿಕೆ ನೀಡಲಾಗಿತ್ತು.

  a_launch_upendra_kashinath.jpgಆ ಲೇಖನ ಬರೆದಿದ್ದವರು ಹಿರಿಯ ಪತ್ರಕರ್ತ ಉದಯ ಮರಕಿಣಿ. ಆಗ ಹಲವರು ಅದನ್ನು ಉತ್ಪ್ರೇಕ್ಷೆ ಎಂದಿದ್ದರು. ಅತಿರಂಜಿತ ಎಂದಿದ್ದರು. ಆದರೆ, ಆ ಭವಿಷ್ಯ ಸುಳ್ಳಾಗಲಿಲ್ಲ. ಉಪೇಂದ್ರ ಎಂಬ ನಟ ಸ್ಟಾರ್ ಆಗಿಯೇಬಿಟ್ಟರು. ಅಭಿಮಾನಿಗಳು ಪ್ರೀತಿಯಿಂದ ರಿಯಲ್ ಸ್ಟಾರ್ ಎಂದು ಕರೆದರು.

  ಉಪೇಂದ್ರ ಅವರಷ್ಟೇ ಅಲ್ಲ, ಅವರ ಐಡಿಯಾಗಳೂ ವಿಚಿತ್ರವೇ. ಸಿನಿಮಾದಲ್ಲೂ ಅಷ್ಟೆ.. ಚಿತ್ರರಂಗದಲ್ಲೂ ಅಷ್ಟೆ. ಒಂದು ಕಥೆಯೊಳಗೆ ಹತ್ತಾರು ಕಥೆಗಳನ್ನು ಸೇರಿಸಿ, ಗೊಂದಲ ಸೃಷ್ಟಿಸುತ್ತಲೇ ಕಥೆ ಹೇಳುವ ಶೈಲಿಯನ್ನು ಪರಿಚಯಿಸಿದ್ದೇ ಉಪೇಂದ್ರ. ಕೆಲವರು ಅದನ್ನು ನಕಲು ಮಾಡುವ ಯತ್ನ ಮಾಡಿ ನಗೆಪಾಟಲಿಗೀಡಾದರು. ಒಂದೇ ಸಿನಿಮಾದಲ್ಲಿ ಹತ್ತಾರು ಫ್ಲ್ಯಾಶ್​ಬ್ಯಾಕ್​ಗಳನ್ನು, ಫ್ಲ್ಯಾಶ್​ಬ್ಯಾಕುಗಳ ಒಳಗೆ ಫ್ಲ್ಯಾಶ್​ಬ್ಯಾಕುಗಳನ್ನು ತೋರಿಸಿ ಗೆದ್ದಿದ್ದು ಉಪೇಂದ್ರ.

  a_upendra.jpgA ಸಿನಿಮಾದಲ್ಲಂತೂ ಸಿನಿಮಾ ಶುರುವಾದ ಹತ್ತೇ ನಿಮಿಷದಲ್ಲಿ THE END ಎಂದು ಕಾಣಿಸಿದಾಗ ಪ್ರೇಕ್ಷಕ ಗೊಂದಲಕ್ಕೆ ಬಿದ್ದಿದ್ದ.  ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂದು ಟ್ಯಾಗ್​ಲೈನ್ ಕೊಟ್ಟು, ಬುದ್ದಿವಂತರಲ್ಲದವರನ್ನೂ ಚಿತ್ರಮಂದಿರಕ್ಕೆ ಸೆಳೆದಿದ್ದ ಉಪೇಂದ್ರ ತಂತ್ರಕ್ಕೆ ಚಿತ್ರರಂಗ ಬೆರಗಾಗಿತ್ತು.

  ಹಾಗೆ ನೋಡಿದರೆ ನಟ ಉಪೇಂದ್ರಗಿಂತ ಪ್ರೇಕ್ಷಕರಿಗೆ ನಿರ್ದೇಶಕ ಉಪೇಂದ್ರ ಅವರೇ ಇಷ್ಟ. ಗುರು ಕಾಶೀನಾಥ್​ರ ಡಬಲ್ ಮೀನಿಂಗ್​ನ ಪರಾಕಾಷ್ಠೆ ತೋರಿಸಿದ್ದು ತರ್ಲೆ ನನ್ಮಗ ಉಪೇಂದ್ರ. ಅವರ 2ನೇ ಚಿತ್ರ ಶ್, ಇಂದಿಗೂ ಕನ್ನಡದ ಬೆಸ್ಟ್ ಹಾರರ್ ಮೂವಿಗಳಲ್ಲೊಂದು.

  upendra_om1.jpgಓಂ ಚಿತ್ರ ಶಿವರಾಜ್​ ಕುಮಾರ್​ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಸಾಹಸೀ ಪ್ರಯತ್ನ. A ಚಿತ್ರದಲ್ಲಿ ಕೂಡಾ ರಾಜಕೀಯದ ಎಳೆಯಿತ್ತಾದರೂ, ಪ್ರೇಮಕಥೆಯ ಮಧ್ಯೆ ಅದು ಅಷ್ಟಾಗಿ ಗಮನ ಸೆಳೆದಿರಲಿಲ್ಲ. ತಮ್ಮ ಹೆಸರನ್ನೇ ಚಿತ್ರದ ಟೈಟಲ್ ಆಗಿಸಿ, ತಾವೇ ನಿರ್ದೇಶಿಸಿ, ನಟಿಸಿ ಗೆದ್ದ ಇನ್ನೊಬ್ಬ ನಟ, ನಿರ್ದೇಶಕ ಭಾರತೀಯ ಚಿತ್ರರಂಗದಲ್ಲೇ ಇಲ್ಲ. 

  ಅಂಥಾ ಉಪ್ಪಿ ಹೊಸ ‘ರಾಜಕೀಯ’ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಅವರು ಇದುವರೆಗೆ ಸಕ್ರಿಯವಾಗಿ ತೊಡಗಿಕೊಳ್ಳದೇ ಇರುವ ಕ್ಷೇತ್ರ. ಸಿನಿಮಾಗಳಲ್ಲಿ ಸುಳ್ಳನ್ನು ಸುಳ್ಳು ಎಂದೇ ಹೇಳಿ ಜನರನ್ನು ಮೆಚ್ಚಿಸಬಹುದು. ರಾಜಕೀಯದಲ್ಲಿ ಹಾಗಲ್ಲ. ಅದಕ್ಕೆ ಉಲ್ಟಾ. ಅಲ್ಲಿ ಸುಳ್ಳನ್ನು ಸತ್ಯವೆಂದೇ ಸಾಧಿಸಬೇಕು. ಸಾಧಿಸಿ ಗೆಲ್ಲಬೇಕು.

  operation_antha_launch.jpgಫಿಲ್ಟರ್ ಇಲ್ಲದೆ ಮಾತನಾಡುತ್ತೇನೆ ಎನ್ನುವ ಉಪ್ಪಿ, ರಾಜಕೀಯದಲ್ಲಿ ಅದೆಷ್ಟು ಫಿಲ್ಟರ್​ ಹಾಕಿಕೊಳ್ಳಬೇಕೋ..ಗೊತ್ತಿಲ್ಲ. ಸಿನಿಮಾದಲ್ಲಿ ಸತ್ಯವನ್ನೇ ತೋರಿಸಿದರೂ, ಚಿತ್ರದ ಪ್ರಾರಂಭದಲ್ಲಿ ‘ಈ ಚಿತ್ರದಲ್ಲಿನ ಕಥೆ, ಪಾತ್ರ, ಸನ್ನಿವೇಶ ಎಲ್ಲವೂ ಕಾಲ್ಪನಿಕ. ಯಾವುದೇ ಸತ್ಯ ಘಟನೆ, ವ್ಯಕ್ತಿಗೆ ಇದು ಹೋಲಿಕೆಯಾದಲ್ಲಿ ಅದು ಕೇವಲ ಕಾಕತಾಳೀಯ’’ ಎಂದು ತೋರಿಸಿ ಬಚಾವ್ ಆಗಬಹುದು. 

  ಆದರೆ, ಅಲ್ಲಿಯೂ ಉಪೇಂದ್ರ ವಿಶಿಷ್ಟತೆ ಮೆರೆದುಬಿಟ್ಟಿದ್ದಾರೆ. ಉಪೇಂದ್ರ ಚಿತ್ರದಲ್ಲಿಯೇ ಪ್ರಾರಂಭದಲ್ಲಿ ‘ಈ ಚಿತ್ರದಲ್ಲಿ ಬರುವ ಪ್ರತಿ ಘಟನೆ, ಸನ್ನಿವೇಶವೂ ಸತ್ಯ’’ ಎಂದು ತೋರಿಸಿ ಗೆದ್ದಿದ್ದ ನಟ ಉಪೇಂದ್ರ. ಆದರೆ ರಾಜಕೀಯ ಹಾಗಲ್ಲ. ಅದರಲ್ಲೂ ಆದರ್ಶಗಳನ್ನೇ ಮೈತುಂಬಾ ಹೊದ್ದುಕೊಂಡಿರುವವರನ್ನು ರಾಜಕಾರಣ ಅಷ್ಟು ಸುಲಭವಾಗಿ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಎಂಥ ಬುದ್ದಿವಂತರೇ ಆಗಿದ್ದರೂ, ಅರ್ಥವಾಗುವುದಿಲ್ಲ. 

  ಕರ್ನಾಟಕದಲ್ಲಿ ರಾಜಕೀಯಕ್ಕೂ, ಸಿನಿಮಾಗೂ ಸಂಬಂಧ ಅಷ್ಟಕ್ಕಷ್ಟೆ. ಸಿನಿಮಾದಿಂದ ರಾಜಕೀಯಕ್ಕೆ ಹೋಗಿ ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ನಂಬರ್ ಒನ್ ಎಂದರೆ ಅಂಬರೀಷ್ ಮಾತ್ರ. ರಾಜ್​ಕುಮಾರ್​ಗೆ ಅಂತಹ ಸ್ಥಾನ ಸಿಗುತ್ತಿತ್ತೇನೋ..

  upendra_stars_politics.jpgಆದರೆ, ರಾಜಕೀಯದ ಸಹವಾಸವೇ ಬೇಡ ಎಂದ ರಾಜ್, ಕನ್ನಡಿಗರ ಮನಸ್ಸಿನಲ್ಲಿ, ಹೃದಯದಲ್ಲಿ ರಾಜಕುಮಾರನಾಗಿಯೇ ಉಳಿದು ಹೋದರು. ಅವರನ್ನು ಬಿಟ್ಟರೆ ಅನಂತ್​ನಾಗ್, ಉಮಾಶ್ರೀ , ರಮ್ಯಾ, ಮುಖ್ಯಮಂತ್ರಿ ಚಂದ್ರು, ಬಿ.ಸಿ.ಪಾಟೀಲ್, ತಾರಾ ಅನುರಾಧ, ಜಯಮಾಲ, ಶ್ರೀನಾಥ್ ಮುಂತಾದವರು ಸಿಗುತ್ತಾರೆ. ಆದರೆ, ಅವರೆಲ್ಲ ಕಲಾವಿದರು ಎಂಬ ಕಾರಣಕ್ಕಷ್ಟೇ ಗೆದ್ದವರಲ್ಲ. ರಾಜಕೀಯದಲ್ಲಿ ಬೆವರು ಬಸಿದ ಮೇಲೇ ಗೆಲುವು ದಕ್ಕಿದ್ದು. ಮಾಳವಿಕಾ ಅವಿನಾಶ್, ಭಾವನಾ, ಶಿಲ್ಪಾ ಗಣೇಶ್, ಸಾಯಿಕುಮಾರ್, ಪೂಜಾ ಗಾಂಧಿ, ರಕ್ಷಿತಾ ಮೊದಲಾದವರು ಈಗಲೂ ಬೆವರು ಸುರಿಸುತ್ತಲೇ ಇದ್ದಾರೆ.

  ಅದಕ್ಕೆ ಕಾರಣ, ಕನ್ನಡಿಗರ ಮನಸ್ಥಿತಿ. ಆಂಧ್ರಪ್ರದೇಶ, ತಮಿಳುನಾಡಿನ ಕಥೆಯೇ ಬೇರೆ. ಕರ್ನಾಟಕವೇ ಬೇರೆ. ಕರ್ನಾಟಕದಲ್ಲಿ ಡೈಲಾಗುಗಳು, ಸಿನಿಮಾಗಳು ಆಕರ್ಷಣೆಗಳಷ್ಟೇ ಹೊರತು, ಮತಗಳಾಗುವುದಿಲ್ಲ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅಂಬರೀಷ್, ರಮ್ಯಾರಂತಹ ಸ್ಟಾರ್​ಗಳನ್ನು ಮನೆಗೆ ಕಳಿಸಿದ ಇತಿಹಾಸ ಕರ್ನಾಟಕಕ್ಕಿದೆ.

  super_upendra1_hairstyle.jpgಅಂತಹ ರಾಜಕೀಯದ ಇತಿಹಾಸದ ಪುಟ ಸೇರುವ ಸುಳಿವು ನೀಡಿದ್ದಾರೆ ಉಪೇಂದ್ರ. ಗೆಲ್ಲಲಿ ಎಂಬುದು ಹಾರೈಕೆ. ಏಕೆಂದರೆ, ಅವರಲ್ಲಿ ಕನಸುಗಳಿವೆ. ಧ್ಯೇಯೋದ್ದೇಶಗಳಿವೆ. ಐಡಿಯಾಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಈಗಿನ ರಾಜಕಾರಣದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿರುವ ಪ್ರಾಮಾಣಿಕತೆಯಿದೆ.

 • ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

  upendra still

  ನಟ ಉಪೇಂದ್ರ ಉಳಿದ ನಟರ ಹಾಗಲ್ಲ. ರಾಜಕೀಯವಾಗಿ ತಮ್ಮ ನಿಲುವುಗಳ ಬಗ್ಗೆ ಅತ್ಯಂತ ಸ್ಪಷ್ಟತೆ ಇಟ್ಟುಕೊಂಡಿರುವ ನಟ. ರಾಜಕೀಯದಲ್ಲಿ ಏನೇ ಬೆಳವಣಿಗೆಯಾಗಲಿ, ಅದು ನನಗೆ ಅರ್ಥವಾಗುವುದಿಲ್ಲ, ನನಗೆ ಗೊತ್ತಿಲ್ಲ ಎಂದು ಹೇಳಿಕೊಂಡು ಕೂರುವವರೂ ಅಲ್ಲ. ಅದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ.

  ನೋಟ್​ಬ್ಯಾನ್ ಮಾಡುವ ವರ್ಷಕ್ಕೆ ಮುಂಚೆಯೇ, ಇಂಥಾದ್ದೊಂದು ಕ್ರಮದಿಂದ ಕಪ್ಪುಹಣವನ್ನು ಮಟ್ಟ ಹಾಕಬಹುದು ಎಂಬ ಚಿಂತನೆಯನ್ನು ಬಹಿರಂಗವಾಗಿಯೇ ಹೇಳಿದ್ದವರು ಉಪೇಂದ್ರ. ತಮ್ಮ ಸಿನಿಮಾಗಳಲ್ಲಿ ರಾಜಕೀಯ ಸಂದೇಶಗಳನ್ನು ಹೇಳುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ಕೆಲವು ಉತ್ಪ್ರೇಕ್ಷೆಯೆನಿಸಿದರೂ, ಅದನ್ನು ಸಿನಿಮಾದಲ್ಲಿ ಎಷ್ಟು ಬೇಕೋ ಅಷ್ಟು ಸ್ಪಷ್ಟವಾಗಿ, ಸಿನಿಮಾ ಆದ್ದರಿಂದ ತುಸು ರಂಜನಾತ್ಮಕವಾಗಿ ಹೇಳಿಕೊಂಡೇ ಬಂದವರು ಉಪೇಂದ್ರ. ಲೋಕಪಾಲ್​ ಚಳವಳಿ ಆರಂಭವಾದಾಗ, ಅಣ್ಣಾ ಹಜಾರೆಯವರ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದವರು.

  ಇತ್ತೀಚೆಗೆ, ಜಿಎಸ್​ಟಿ ಬಗ್ಗೆ, ಐಟಿ ರೇಡುಗಳ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ್ದ ಉಪೇಂದ್ರ, ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ತುಂಬಾ ವರ್ಷಗಳಿಂದ ಇದೆ. ಆದರೆ, ಇಂಥಾದ್ದೊಂದು ಪ್ರಶ್ನೆ ಕೇಳಿ ಬಂದಾಗಲೆಲ್ಲ, ನೋಡೋಣ ಎನ್ನುತ್ತ ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದ ಉಪೇಂದ್ರ, ಈಗ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರಂತೆ. ಆದರೆ, ರಾಜಕೀಯ ಮಾರ್ಗದಲ್ಲಿ ಬರಬೇಕೋ ಅಥವಾ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಹತ್ತಿರವಾಗಬೇಕೋ ಎಂಬ ಬಗ್ಗೆ ಅವರಿಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

  ಸದ್ಯಕ್ಕಂತೂ ಉಪೇಂದ್ರ ಎಂದಿನಂತೆ ನಿಗೂಢತೆ ಕಾಯ್ದುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಕ್ಕರೂ ಸಿಗಬಹುದು. ಇಂಥ ಪ್ರಶ್ನೆಗಳ ಮಧ್ಯೆ ಉಪೇಂದ್ರ ಸ್ಪಷ್ಟವಾಗಿ ಹೇಳಿರುವ ಒಂದೇ ಒಂದು ಮಾತೆಂದರೆ, ಚಾಮರಾಜಪೇಟೆಯಿಂದ ಅವರು ಕಣಕ್ಕಿಳಿಯುತ್ತಿಲ್ಲ. ಅಂದಹಾಗೆ ರಾಜಕೀಯಕ್ಕೆ ಬಂದರೆ ಯಾವ ಪಕ್ಷದಿಂದ ಬರಬೇಕು ಎಂಬ ಬಗ್ಗೆ ಕೂಡಾ ಉಪೇಂದ್ರ ಅವರಿಗೆ ಇನ್ನೂ ಸ್ಪಷ್ಟತೆ ಇದ್ದ ಹಾಗಿಲ್ಲ.

  ಇತ್ತೀಚೆಗೆ ಕೆಲವು ತಿಂಗಳಿಂದ  ರಾಜಕೀಯ ಹಾಗೂ ಸಾಮಾಜಿಕ ವಿಷಯಗಳಲ್ಲಿ ತಮ್ಮ ಸ್ಪಷ್ಟ ನಿಲುವುಗಳನ್ನು ಟ್ವೀಟರ್ ಹಾಗೂ ಸುದ್ದಿ ವಾಹಿನಿಗಳ ಮೂಲಕ ಬಹಿರಂಗಪಡಿಸು ತ್ತಲೇ ಇರುವ ಉಪೇಂದ್ರ, ಅವುಗಳನ್ನು ರಿಯಲ್ ಮಾಡುವ ಚಿಂತನೆಯಲ್ಲಿರುವುದಂತೂ ಹೌದು. ಅದಕ್ಕಾಗಿ ಅವರು ರಾಜಕೀಯ ರಂಗ ಪ್ರವೇಶಿಸುವ ಚಿಂತನೆಯಲ್ಲಿ ಇದ್ದಾರೆ ಎನ್ನುತ್ತಾರೆ ಉಪೇಂದ್ರ ಅವರ ಒಬ್ಬ ರಾಜಕೀಯ ಚಿಂತನ ಸಹವರ್ತಿ. ಇಷ್ಟಕ್ಕೂ ಉಪೇಂದ್ರ ರಿಯಲ್ಲಾಗಿ ರಾಜಕೀಯ ಪ್ರವೇಶ ಮಾಡುತ್ತಾರಾ? ಬಹುಶಃ ಒಂದೆರಡು ತಿಂಗಳಲ್ಲಿ ಉತ್ತರ ಸಿಗಬಹುದು.

 • ರಾಜಕೀಯಕ್ಕೆ ಬರ್ತಾರಾ ಕಿಚ್ಚ ಸುದೀಪ್..?

  sudeep image

  ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿ ಘೋಷಿಸಿದ್ದೇ ತಡ. ಹಲವು ನಟರಿಗೆ ಇದೇ ಪ್ರಶ್ನೆ ಎದುರಾಗುತ್ತಿದೆ. ಇದೇ ಪ್ರಶ್ನೆ ಕಿಚ್ಚ ಸುದೀಪ್ ಅವರಿಗೂ ಎದುರಾಗಿದೆ. ಸುವರ್ಣ ನ್ಯೂಸ್​ನಲ್ಲಿ ಹಿರಿಯ ಪತ್ರಕರ್ತ ಜೋಗಿ, ಸುದೀಪ್ ಎದುರು ಈ ಪ್ರಶ್ನೆ ಮುಂದಿಟ್ಟಿದ್ದಾರೆ. ಈ ಪ್ರಶ್ನೆಗೆ ಸುದೀಪ್ ಉತ್ತರ ಕೊಡುವ ಬದಲು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗಳಲ್ಲೇ ಉತ್ತರವೂ ಇದೆ. 

  ಜೋಗಿ - ನೀವು ರಾಜಕೀಯಕ್ಕೆ ಬರುತ್ತೀರಾ..? ಯುವ ಸಮೂಹದ ಐಕಾನ್ ಆಗಿರುವ ನೀವೇಕೆ ರಾಜಕೀಯಕ್ಕೆ ಬರಬಾರದು..? 

  ಸುದೀಪ್ - ಏಕೆ ಬರಬೇಕು..?

  ಜೋಗಿ - ಸೇವೆ ಮಾಡೋಕೆ

  ಸುದೀಪ್ - ಈಗ ಮಾಡ್ತಾ ಇದ್ದೀನಲ್ಲ. 

  ಜೋಗಿ - ಅಧಿಕಾರ ಇದ್ದರೆ ಇನ್ನೂ ಹೆಚ್ಚಾಗಿ ಜನಸೇವೆ ಮಾಡಬಹುದಲ್ಲ..?

  ಸುದೀಪ್ - ನನಗೆ ರಾಜಕೀಯ ಅರ್ಥವಾಗಲ್ಲ. ನನ್ನ ಹಣದಲ್ಲಿ ನನ್ನ ವ್ಯಾಪ್ತಿಯಲ್ಲಿ ಏನು ಮಾಡಬೇಕೋ ಅದನ್ನು ಈಗಾಗಲೇ ಮಾಡುತ್ತಿದ್ದೇನೆ. ನನಗೆ ರಸ್ತೆ ಮಾಡಿಸೋದು ಗೊತ್ತಿಲ್ಲ. ಅದು ನನಗೆ ಅರ್ಥವಾಗಲ್ಲ. ಅದು ಸರ್ಕಾರದ ಕೆಲಸ. ಸೇವೆ ಮಾಡೋಕೆ ಅಧಿಕಾರವೇ ಬೇಕಿಲ್ಲ. ಮನಸ್ಸಿದ್ದರೆ ಸಾಕು.

  ಇದು ಸುದೀಪ್ ನೀಡಿರುವ ಉತ್ತರ. ಸುದೀಪ್​ಗೆ ಸಮಾಜಸೇವೆ ಹೊಸದೇನೂ ಅಲ್ಲ. ತಾವು ವಾಚ್ ಕಟ್ಟುವುದನ್ನು ಬಿಟ್ಟ ಮೇಲೆ, ವಾಚುಗಳ ಖರೀದಿಗೆ ಎಷ್ಟು ಖರ್ಚಾಗುತ್ತಿತ್ತೋ ಅಷ್ಟು ಹಣವನ್ನು ಅವರು ಸಮಾಜಸೇವೆಗೆ ತೊಡಗಿಸಿದ್ದಾರೆ. ಹಲವರಿಗೆ ಉಪಯೋಗವಾಗಿದೆ. ಆ ಹಣದಲ್ಲಿಯೇ  ಇಬ್ಬರ ಗಂಭೀರ  ಚಿಕಿತ್ಸೆಗೆ ನೆರವು ನೀಡಿರುವ ಸುದೀಪ್​ಗೆ, ಅವರ ಜೀವ ಉಳಿಸಿದ ತೃಪ್ತಿಯೂ ಇದೆ. ನನಗೆ ಗೊತ್ತಿಲ್ಲದ ಕೆಲಸ ನಾನು ಮಾಡುವುದಿಲ್ಲ. ರಾಜಕೀಯ ನನಗೆ ಆಗಿ ಬರೋದಿಲ್ಲ. ನಾನು ರಾಜಕೀಯಕ್ಕೆ ಸೂಕ್ತ ವ್ಯಕ್ತಿಯೇ ಅಲ್ಲ ಎನ್ನುತ್ತಾರೆ ಸುದೀಪ್.

 • ರಾಜಕೀಯಕ್ಕೆ ಬರ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್..?

  will darshan join politics

  ರಿಯಲ್ ಸ್ಟಾರ್ ಉಪೇಂದ್ರ ಹೊಸ ರಾಜಕೀಯ ಪಕ್ಷವನ್ನೇ ಸ್ಥಾಪಿಸಲು ಮುಂದಾಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಹಲವು ಸ್ಟಾರ್‍ಗಳನ್ನು ತಮ್ಮ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳೋಕ ಕಸರತ್ತು ನಡೆಸುತ್ತಿವೆ. ಅಂತಹ ಕಸರತ್ತಿನಲ್ಲಿ ನಟ ದರ್ಶನ್‍ಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ.

  ದರ್ಶನ್ ಅವರನ್ನು ರಾಜಕೀಯಕ್ಕೆ ಸೆಳೆಯುವ ಹಾದಿಯಲ್ಲಿ ಬೇರೆಯವರ್ಯಾರೇ ಪ್ರಯತ್ನ ಪಟ್ಟಿದ್ದರೂ, ಸುದ್ದಿಗೆ ಇಷ್ಟು ದೊಡ್ಡ ಮೈಲೇಜ್ ಸಿಗುತ್ತಿರಲಿಲ್ಲ. ಆದರೆ, ದರ್ಶನ್ ತುಂಬಾ ಗೌರವಿಸುವ ಅಂಬರೀಷ್ ಅವರೇ ಈ ನಿಟ್ಟನಿಲ್ಲಿ ಹೆಜ್ಜೆಯಿಟ್ಟಿರುವ ಹಿನ್ನೆಲೆಯಲ್ಲಿ ಸುದ್ದಿಗೆ ಮಹತ್ವ ಬಂದುಬಿಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡಾ ದರ್ಶನ್ ಅವರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ.

  ಈಗಾಗಲೇ ದರ್ಶನ್ ತಾಯಿ ಮೀನಾ ಅವರಿಗೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂಬ ಮಾಹಿತಿಯೂ ಇದೆ. ಹಾಲಿ ಸ್ಟಾರ್‍ಗಳನ್ನು ಕರೆತಂದರಷ್ಟೇ ಪಕ್ಷಕ್ಕೆ ಲಾಭ ಎಂದು ಮನಗಂಡಿರುವ ಕಾಂಗ್ರೆಸ್, ಈ ಹಾದಿಯಲ್ಲಿ ಸ್ಟಾರ್‍ಫಿಶ್ ದರ್ಶನ್ ಅವರನ್ನೇ ಸೆಳೆದುಕೊಳ್ಳಲು ಮುಂದಾಗಿದೆ.

  ಸದ್ಯಕ್ಕೆ ದರ್ಶನ್ ರಾಜಕೀಯ ಪ್ರವೇಶಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಅಕಸ್ಮಾತ್ ಬಂದರೂ, ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಕೇವಲ ಪ್ರಚಾರ ಮಾಡುತ್ತಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು. ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಮೈಸೂರು ಭಾಗದಲ್ಲಿ ದರ್ಶನ್ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಕಾರಣ.

  ದರ್ಶನ್ ರಾಜಕೀಯಕ್ಕೆ  ಬರುವುದಿಲ್ಲ ಎಂದು ಹೇಳಿಲ್ಲ. ಬರುತ್ತೇನೆ ಎಂತಲೂ ಹೇಳಿಲ್ಲ. ದರ್ಶನ್ ಈ ಕುರಿತು ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ದಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

 • ರಾಜಕೀಯಕ್ಕೆ ಬರ್ತಾರಾ ಯಶ್..?

  yash reacts on his political entry news

  ಇತ್ತೀಚೆಗೆ ಚಿತ್ರರಂಗದಿಂದ ರಾಜಕೀಯಕ್ಕೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಎಲೆಕ್ಷನ್ ಬೇರೆ ಹತ್ತಿರದಲ್ಲಿರೋದ್ರಿಂದ ಇದು ಸಹಜವೇ ಬಿಡಿ. ಇಂಥಾದ್ದೊಂದು ಮಾತು ಯಶ್ ವಿಚಾರದಲ್ಲೂ ಚಾಲ್ತಿಯಲ್ಲಿದೆ. ಯಶ್ ಅವರು ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಕೆರೆ ಜೀರ್ಣೋದ್ಧಾರ ಮಾಡಿಸಿದ್ದು, ತಲ್ಲೂರು ಕೆರೆಗೆ ಯಶ್ ದಂಪತಿ ಬಾಗಿನ ಅರ್ಪಿಸಿದ್ದು, ಉ.ಕರ್ನಾಟಕದ ಹಲವು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಿದ್ದು ಎಲ್ಲವೂ ಇದಕ್ಕೆ ಕಾರಣ. ಅದಕ್ಕೆ ತಕ್ಕಂತೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯಶ್ ತಮಗನ್ನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವದವರು. 

  ಹೀಗಾಗಿಯೇ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಲು ಹೋಗಿದ್ದಾಗ ಯಶ್‍ಗೆ ಈ ಪ್ರಶ್ನೆ ಎದುರಾಯಿತು. ಅದಕ್ಕೆ ಯಶ್ ನೀಡಿರುವ ಉತ್ತರ ಇದು. ನನಗೆ ರಾಜಕೀಯಕ್ಕೆ ಬರುವ ಮನಸ್ಸಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಹಾಗೆ ಬರುವುದಿದ್ದರೆ ಈ ಕೆಲಸ ಮಾಡೋಕೆ ಉ.ಕರ್ನಾಟಕಕ್ಕೆ ಬರಬೇಕಿರಲಿಲ್ಲ. ಮೈಸೂರು ಭಾಗದಲ್ಲೇ ಇಂಥ ಕೆಲಸ ಮಾಡುತ್ತಿದ್ದೆ. ಈ ಕೆಲಸ ಮಾಡುತ್ತಿರುವುದು ನನ್ನ ತೃಪ್ತಿಗಾಗಿ ಎಂದಿದ್ದಾರೆ ಯಶ್.

 • ರಾಜಕೀಯದ ಎಫೆಕ್ಟ್.. ಖುಷ್‍ಬೂ ಹೆಸರು ಬದಲಾವಣೆ

  khusbhoo sundar changes her name for political reasons

  ರಣಧೀರನ ಬೆಡಗಿ ಖುಷ್‍ಬೂ ತಮಿಳುನಾಡಿನಲ್ಲಿ ಕಾಂಗ್ರೆಸ್ ನಾಯಕಿ. ಮದುವೆಯಾದ ಮೇಲೆ ತಮ್ಮ ಹೆಸರನ್ನು ಖುಷ್‍ಬೂ ಸುಂದರ್ ಎಂದು ಬದಲಿಸಿಕೊಂಡಿರುವ ಖುಷ್‍ಬೂ, ಬಿಜೆಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಹೀಗೆ ತರಾಟೆಗೆ ತೆಗೆದುಕೊಳ್ಳುವ ಖುಷ್‍ಬೂರನ್ನು ಬಿಜೆಪಿಯ ಟ್ವಿಟ್ಟಿಗರು, ಖುಷ್‍ಬೂ ಅವರ ನಿಜವಾದ ಹೆಸರು ಖುಷ್‍ಬೂ ಅಲ್ಲ, ನಖಟ್‍ಖಾನ್. ರಾಜಕೀಯಕ್ಕಾಗಿ ಖುಷ್‍ಬೂ ತಮ್ಮ ಹೆಸರು ಮರೆಮಾಚಿ, ಖುಷ್‍ಬೂ ಸುಂದರ್ ಎಂದಿಟ್ಟುಕೊಂಡಿದ್ದಾರೆ ಎಂದು ಹುಯಿಲೆಬ್ಬಿಸಿದರು.

  ಇದಕ್ಕೆ ಟ್ವಿಟರ್‍ನಲ್ಲಿ ತಿರುಗೇಟು ನೀಡಿದ ಖುಷ್‍ಬೂ, ತಮ್ಮ ಖಾತೆಯ ಹೆಸರನ್ನು ಖುಷ್‍ಬೂ ಸುಂದರ್, ಬಿಜೆಪಿಯವರಿಗಾಗಿ ನಖಟ್‍ಖಾನ್ ಎಂದು ಬದಲಾಯಿಸಿದರು.

  ಖುಷ್‍ಬೂ ಮುಸ್ಲಿಂ ಮನೆತನದವರು. ಚಿತ್ರರಂಗಕ್ಕೆ ಬಂದ ಮೇಲೆ ತಮ್ಮ ಹೆಸರು ಬದಲಾಯಿಸಿಕೊಂಡಿದ್ದರು. ಟ್ವಿಟರ್ ಹೆಸರು ಬದಲಿಸಿಕೊಂಡ ಖುಷ್‍ಬೂ, ಭಕ್ತರೇ, ನನ್ನ ಹೆಸರು ಇಡೀ ಭಾರತಕ್ಕೆ ಗೊತ್ತು. ಎರಡು ಹೆಸರುಗಳೂ ಗೊತ್ತು. ಅದನ್ನು ನಾನು ಮುಚ್ಚಿಟ್ಟಿಲ್ಲ. ಈಗ ನೀವು ಮುಚ್ಚಿಕೊಂಡಿರುವ ನಿಮ್ಮ ಮುಖವನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.

   

Geetha Movie Gallery

Damayanthi Teaser Launch Gallery