` srinidi shetty, - chitraloka.com | Kannada Movie News, Reviews | Image

srinidi shetty,

 • 10 ಕೋಟಿ ದಾಖಲೆಯತ್ತ ರಾಕಿ ಭಾಯ್

  10 ಕೋಟಿ ದಾಖಲೆಯತ್ತ ರಾಕಿ ಭಾಯ್

  ಕೆಜಿಎಫ್ ಚಾಪ್ಟರ್ 2 ಟೀಸರ್ ದಾಖಲೆಗಳನ್ನೇ ಸೃಷ್ಟಿಸಿಬಿಟ್ಟಿದೆ. ಲೀಕ್ ಆದರೂ ರೆಕಾರ್ಡುಗಳನ್ನೆಲ್ಲ ಬ್ರೇಕ್ ಮಾಡಿಕೊಂಡು ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್ 2 ಟೀಸರ್, 10 ಕೋಟಿ ವೀಕ್ಷಣೆ ದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದೆ. ಟೀಸರ್ ಬಿಡುಗಡೆ ಮಾಡಿದ 24 ಗಂಟೆಗಳಲ್ಲೇ 78 ಮಿಲಿಯನ್ ವ್ಯೂವ್ಸ್ ಪಡೆದದ್ದು ರಾಕಿ ಭಾಯ್ ಹೆಗ್ಗಳಿಕೆ.

  ಒಂದು ಮಿಲಿಯನ್ ಅಂದರೆ 10 ಲಕ್ಷ. ಈಗಾಗಲೇ 85 ಮಿಲಿಯನ್ ವೀಕ್ಷಕರ ಸಂಖ್ಯೆ ದಾಟಿದೆ. ಅಂದರೆ ಎಂಟೂವರೆ ಕೋಟಿ ವೀಕ್ಷಣೆಯ ದಾಖಲೆ. ಕನ್ನಡದ ಮಟ್ಟಿಗಂತೂ ಇದು ಅದ್ಭುತ ದಾಖಲೆಯೇ ಸರಿ.

  ಪ್ರಶಾಂತ್ ನೀಲ್ ಟಚ್ ಇರೋ ಟೀಸರಿನಲ್ಲಿ ಸಂಜಯ್ ದತ್ ಮುಖವನ್ನೇ ತೋರಿಸಲ್ಲ. ರವೀನಾ ಟಂಡನ್ ಅವರ ಮೆಚ್ಯೂರ್ಡ್ ಲುಕ್ ಗಮನ ಸೆಳೆಯುತ್ತೆ. ಶ್ರೀನಿಧಿ ಶೆಟ್ಟಿ ಸೌಂದರ್ಯ ದೇವತೆಯಂತೆ ಕಂಡರೆ, ಅವರೆಲ್ಲರನ್ನೂ ಸುಟ್ಟು ಬಿಡುವಂತೆ ಕೆಂಡದಂತೆ ಹೊಳೆಯುತ್ತಾನೆ ರಾಕಿ ಬಾಯ್. ಬೆನ್ನಲ್ಲಿ ಕೇಳಿಸೋದು ಪ್ರಕಾಶ್ ರೈ ವಾಯ್ಸ್. ಅನಂತ್‍ನಾಗ್ ಇಲ್ಲಿ ಇಲ್ಲ.

  ಟೋಟಲ್ ಆಗಿ ಖಡಕ್ಕಾಗಿರೋ ಟೀಸರ್ 10 ಕೋಟಿ ದಾಟೋದು ಪಕ್ಕಾ. ಅಲ್ಲಿಗೆ ಹೊಸ ಇತಿಹಾಸ ಸೃಷ್ಟಿಯಾಗೋದು ಕೂಡಾ ಪಕ್ಕಾ.

 • R.R.R. ದಾಖಲೆ ಬೆನ್ನತ್ತಿದೆ ಕೆಜಿಎಫ್ ಚಾಪ್ಟರ್ 2 : 800 ಕೋಟಿ ಟಾರ್ಗೆಟ್ ಕಂಪ್ಲೀಟ್

  R.R.R. ದಾಖಲೆ ಬೆನ್ನತ್ತಿದೆ ಕೆಜಿಎಫ್ ಚಾಪ್ಟರ್ 2 : 800 ಕೋಟಿ ಟಾರ್ಗೆಟ್ ಕಂಪ್ಲೀಟ್

  1100 ಕೋಟಿ. ಇದು ಆರ್.ಆರ್.ಆರ್. ಚಿತ್ರದ ದಾಖಲೆ ಕಲೆಕ್ಷನ್. ಕೊರೊನಾ ಮುಗಿದ ನಂತರ ಚೇತರಿಕೆ ಕಾಣದೆ ತತ್ತರಿಸಿದ್ದ ಭಾರತೀಯ ಚಿತ್ರರಂಗಕ್ಕೆ ಆಕ್ಸಿಜನ್ ಕೊಟ್ಟಿದ್ದು ಆರ್.ಆರ್.ಆರ್. ಈಗ ಅದನ್ನೂ ಮೀರಿ ಸಂಚಲನ ಸೃಷ್ಟಿಸಿ ಬಿರುಗಾಳಿ ಎಬ್ಬಿಸಿ ಮುನ್ನುಗ್ಗುತ್ತಿರೋದು ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಬಾಕ್ಸಾಫೀಸ್ ಕಲೆಕ್ಷನ್ ಈಗ 800 ಕೋಟಿ ದಾಟಿದೆ. ಈ ವಾರಾಂತ್ಯದ ಒಳಗೆ ಆರ್.ಆರ್.ಆರ್.ನ್ನು ಮೀರಿಸಿ ಮುನ್ನುಗ್ಗಿದರೂ ಆಶ್ಚರ್ಯವಿಲ್ಲ.

  ಹಿಂದಿಯಲ್ಲಿ ಈಗಾಗಲೇ ಆರ್.ಆರ್.ಆರ್. ದಾಖಲೆ ಹಿಂದಿಕ್ಕಿದೆ ಕೆಜಿಎಫ್. ಆರ್.ಆರ್.ಆರ್. ಹಿಂದಿಯಲ್ಲಿ 250 ಕೋಟಿಯ ಗಡಿ ದಾಟಿದ್ದು ರಿಲೀಸ್ ಆದ 23ನೇ ದಿನಕ್ಕೆ. ಆದರೆ ಕೆಜಿಎಫ್ ಅದನ್ನು ಮೊದಲ ವಾರದ ಕೊನೆಯ ಹೊತ್ತಿಗೆ ದಾಟಿಯಾಗಿತ್ತು.

  ಅತ್ತ ತಮಿಳುನಾಡು ಹಾಗೂ ಕೇರಳದಲ್ಲಿ ಅಲ್ಲಿನ ಸ್ಥಳೀಯ ಚಿತ್ರಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿರುವುದೂ ಕೆಜಿಎಫ್ ಸಾಧನೆಯೇ. ತಮಿಳುನಾಡಿನಲ್ಲಿಯೇ ತಮಿಳಿನ ವಿಜಯ್ ಅಭಿನಯದ ಬೀಸ್ಟ್ ಚಿತ್ರದ ಗಳಿಕೆಯನ್ನೂ ಮೀರಿಸಿ ದಾಖಲೆ ಬರೆಯುತ್ತಿದೆ ಕೆಜಿಎಫ್.

  ಇದೆಲ್ಲದರ ಮಧ್ಯೆ ಕೆಜಿಎಫ್‍ನ್ನು ಕನ್ನಡದಲ್ಲಿ ನೋಡಿದವರ ಸಂಖ್ಯೆಗಿಂತ ತೆಲುಗಿನಲ್ಲಿ ನೋಡಿದವರ ಸಂಖ್ಯೆಯೇ ಹೆಚ್ಚು. ಒಂದು ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲಿ ಕನ್ನಡದಲ್ಲಿ ಕೆಜಿಎಫ್ ನೋಡಿದವರ ಸಂಖ್ಯೆ 40 ಲಕ್ಷವಾದರೆ, ತೆಲುಗಿನಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರವನ್ನು ನೋಡಿದವರ ಸಂಖ್ಯೆ 50 ಲಕ್ಷಕ್ಕೂ ಹೆಚ್ಚು.

  ದಕ್ಷಿಣ ಭಾರತದಲ್ಲಿ ಮಾರಾಟವಾದ ಟಿಕೆಟ್ ಸಂಖ್ಯೆ 1.5 ಕೋಟಿಯಾದರೆ, ಉತ್ತರ ಭಾರತದಲ್ಲಿ ಸೇಲ್ ಆದ ಕೆಜಿಎಫ್ ಟಿಕೆಟ್ ಸಂಖ್ಯೆ 1.7 ಕೋಟಿಗೂ ಹೆಚ್ಚು. ಇದು ಮೊದಲ ವಾರದ ರಿಪೋರ್ಟ್ ಮಾತ್ರ.

 • Srinidhi Shetty To Join KGF

  srinishi shetty

  Model turned actress Srinidhi Shetty will join the shooting of KGF next week. The new schedule of shooting is taking place in Mysuru. A long first schedule was completed by director Neel on a special set in Kolar recently. There is a break in shooting currently.

  Srinidhi Shetty is a popular model and has won the Miss Supranational crown 2016. She has also completed her engineering and is an accomplished dancer. She will be seen opposite Sandalwood star Yash in the big budget KGF.

 • ಕೆಜಿಎಫ್ : ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ..

  ಕೆಜಿಎಫ್ : ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ..

  ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಹವಾ ಮೊದಲಿನಿಂದಲೂ ಕಡಿಮೆ. ಕಡಿಮೆ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದರೆ ಉತ್ತಮ. ಅಕಸ್ಮಾತ್ ರಿಲೀಸ್ ಆದರೂ.. ತಮಿಳುನಾಡಿನ ಮೇನ್ ಥಿಯೇಟರುಗಳಂತೂ ಸಿಗುತ್ತಿರಲಿಲ್ಲ. ಸಿಕ್ಕರೂ ಫುಲ್ ಶೋಗಳಿರುತ್ತಿರಲಿಲ್ಲ. ಈಗ ಮಲ್ಟಿಪ್ಲೆಕ್ಸುಗಳಲ್ಲಿ ಕನ್ನಡ ಚಿತ್ರಗಳಿಗೆ ಸಿಗುತ್ತಿರೋ ಮರ್ಯಾದೆ ಇದೆಯಲ್ಲ.. ಅದಕ್ಕಿಂತ ಕೆಟ್ಟದಾಗಿರುತ್ತಿತ್ತು. ಶೋ ಟೈಂ ಮತ್ತು ಸ್ಥಳ ಎಲ್ಲೋ ಊರ ಹೊರಗೆ ಸಿಗುತ್ತಿದ್ದುದೇ ಹೆಚ್ಚು. ಗಡಿ ಭಾಗದಲ್ಲಿದ್ದ ಕನ್ನಡಿಗರಂತೂ ಎಷ್ಟೋ ಬಾರಿ ಗಡಿ ದಾಟಿ ಬಂದು ಕರ್ನಾಟಕದಲ್ಲಿಯೇ ಸಿನಿಮಾ ನೋಡಿ ಹೋಗುತ್ತಿದ್ದರು. ಅದೆಲ್ಲವನ್ನೂ ಬದಲಿಸಿರೋದು ಕೆಜಿಎಫ್ ಚಾಪ್ಟರ್ 2.

  ಚೆನ್ನೈನ ಕೆಲವು ಥಿಯೇಟರುಗಳಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಮಿಡ್ ನೈಟ್ ಶೋಗಳು ನಡೆದಿವೆ. ಮಧ್ಯರಾತ್ರಿ 1 ಗಂಟೆ, 4 ಗಂಟೆಗೆ ಚೆನ್ನೈನಲ್ಲೇ ಕೆಜಿಎಫ್ ಚಾಪ್ಟರ್ 2 ಕನ್ನಡ ವರ್ಷನ್ ಶೋ ನಡೆದಿದೆ. ಅಫ್‍ಕೋರ್ಸ್.. ತಮಿಳು ಅವತರಣಿಕೆಯೂ ರಿಲೀಸ್ ಆಗಿದ್ದು, ತಮಿಳು ಕೆಜಿಎಫ್ ಚಾಪ್ಟರ್ 2ಗೆ, ತಮಿಳುನಾಡಿನಲ್ಲಿ ಕನ್ನಡದ ಕೆಜಿಎಫ್‍ಗಿಂತ ಒಳ್ಳೆಯ ರಿಯಾಕ್ಷನ್ ಸಿಕ್ಕಿದೆ. ಅದನ್ನು ಖುಷಿಯಿಂದಲೇ ವೆಲ್‍ಕಂ ಮಾಡಬೇಕು.

  ಆದರೆ.. ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದು ಮಿಡ್ ನೈಟ್ ಶೋ ಕಂಡಿದ್ದು ಇತಿಹಾಸದಲ್ಲೇ ಮೊದಲು

 • ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್

  ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್

  ಕೆಜಿಎಫ್ ನಿರ್ಮಾಣ ಸಂಸ್ಥೆ ಹೊಂಬಾಳೆ ಆರ್.ಸಿ.ಬಿ. ಜೊತೆಗೆ ಅಧಿಕೃತ ಒಪ್ಪಂದವನ್ನೇ ಮಾಡಿಕೊಂಡಿದೆ. ಕ್ರೀಡಾ ಸಂಸ್ಥೆಯ ಜೊತೆ ಇಂಥಾದ್ದೊಂದು ಒಪ್ಪಂದ ಹೊಸದು. ಇದರ ಜೊತೆಗೆ ಆರ್.ಸಿ.ಬಿ. ತಂಡದ ಆಟಗಾರರು ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ. ಅತ್ತ, ಕೆಜಿಎಫ್ ತಂಡದವರು ಆರ್.ಸಿ.ಬಿ ಮ್ಯಾಚ್‍ಗಳನ್ನು ನೋಡಿ ಬೆನ್ನು ತಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ತಂಡವೂ ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿಪಟ್ಟಿದೆ. ಸದ್ಯಕ್ಕೆ ಐಪಿಎಲ್‍ನಲ್ಲಿ ಅಬ್ಬರಿಸುತ್ತಿರುವ ನಂ.1 ತಂಡವಾಗಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಕೆಜಿಎಫ್ 2 ಸಿನಿಮಾವನ್ನು ನೋಡಿದೆ.

  ಆಟಗಾರರು ಬಯೋಬಬಲ್‍ನಲ್ಲಿರೋ ಕಾರಣ ಐಪಿಎಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡು ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬಯೋಬಬಲ್‍ನಲ್ಲಿರೋ ಆಟಗಾರರು ಹಾಗೂ ಅವರ ಪತ್ನಿಯರು ಒಟ್ಟಿಗೇ ಕೆಜಿಎಫ್ 2 ನೋಡಿ ಖುಷಿಪಟ್ಟಿದ್ದಾರೆ.

  ಅತ್ತ ಕೆಜಿಎಫ್ ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸುತ್ತಾ ಮುನ್ನುಗ್ಗುತ್ತಿದೆ. ಸದ್ಯಕ್ಕೆ ಕೆಜಿಎಫ್ ದೇಶದ ನಂ.3 ಸಿನಿಮಾ ಆಗಿದೆ, ಲಾಭದ ಲೆಕ್ಕದಲ್ಲಿ.

 • ಕೆಜಿಎಫ್ 50

  kgf completes 50 days

  ಜಗತ್ತಿನೆಲ್ಲೆಡೆ ಅಬ್ಬರಿಸಿ ಬೊಬ್ಬರಿದ ಕೆಜಿಎಫ್, 50 ದಿನ ಪೂರೈಸಿದೆ. ಅರ್ಧ ಶತಕ ಬಾರಿಸಿದ ನಂತರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಚಿತ್ರ, ಸ್ಯಾಂಡಲ್‍ವುಡ್‍ನ ಹೊಸ ರೆಕಾರ್ಡ್. ಹೀಗಾಗಿಯೇ ಚಿತ್ರತಂಡ ಈ 50 ಸಕ್ಸಸ್‍ನ್ನು ವಿಶೇಷವಾಗಿ ಸೆಲಬ್ರೇಟ್ ಮಾಡಿದೆ.

  `ಕೆಜಿಎಫ್ ನನಗೆ ಬರೀ ಚಿತ್ರವಾಗಿರಲಿಲ್ಲ. ಇಂಥಾದ್ದೊಂದು ಅದ್ಧೂರಿ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ಸಮರ್ಪಿಸಬೇಕೆಂಬುದು ನನ್ನ ಕನಸಾಗಿತ್ತು' ಎಂದು ಭಾವುಕವಾಗಿಯೇ ಸಂಭ್ರಮ ಹಂಚಿಕೊಂಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

 • ಕೆಜಿಎಫ್ ಚಾಪ್ಟರ್ 2ಗಾಗಿ ಮೋದಿ ಪತ್ರ ಬರೆದ್ರಂತೆ..! ಏನ್ ಕಥೆ?

  ಕೆಜಿಎಫ್ ಚಾಪ್ಟರ್ 2ಗಾಗಿ ಮೋದಿ ಪತ್ರ ಬರೆದ್ರಂತೆ..! ಏನ್ ಕಥೆ?

  ನಮ್ಮದು ಜಗತ್ತಿನ ಅತ್ಯಂತ ದೊಡ್ಡ ದೇಶ. ನೂರಾ ಮೂವತ್ತು ಕೋಟಿ ಜನರ ಪರವಾಗಿ ಕೇಳುತ್ತಿದ್ದೇನೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಅಪ್‍ಡೇಟ್ ಮಾಹಿತಿಗಳನ್ನು ಕೊಡಿ.

  ಇಂತಿ

  ನರೇಂದ್ರ ಮೋದಿ

  ಪ್ರಧಾನ ಮಂತ್ರಿ

  ಹೀಗೊಂದು ಪತ್ರ ಹೊಂಬಾಳೆ ಪಿಕ್ಚರ್ಸ್‍ನವರಿಗೆ ಬಂದರೆ ಏನಾಗಬೇಡ. ಅಂತಾದ್ದೊಂದು ಪತ್ರ ಸೃಷ್ಟಿಸಿ ಹೊಂಬಾಳೆಯವರಿಗೆ ತಲೆನೋವು ತಂದಿಟ್ಟಿದ್ದಾನೊಬ್ಬ ಅಭಿಮಾನಿ. ಆತನ ಹೆಸರು ಚೇತನ್. ತಾನು ಇದನ್ನು ತಮಾಷೆಗಾಗಿ ಮಾಡಿದ್ದೇನೆ ಎಂದು ಆತ ಬರೆದುಕೊಂಡಿದ್ದನಾದರೂ, ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ಲೆಟರ್ ಹೆಡ್ ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಆತನನ್ನು ಅರೆಸ್ಟ್ ಮಾಡಿ, ಎಚ್ಚರಿಕೆ ನೀಡಿ ಕಳಿಸಿದ್ದಾರೆ ಪೊಲೀಸರು.

  ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ, ಮಾಳವಿಕಾ, ನಾಗಾಭರಣ, ವಸಿಷ್ಠ ಸಿಂಹ.. ಹೀಗೆ ಬೃಹತ್ ತಾರಾಗಣದ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕ.

 • ಬೆಳಗ್ಗೆ 6ಕ್ಕೇ ಕೆಜಿಎಫ್ ಮಾರ್ನಿಂಗ್ ಶೋ

  kgf shows will start st 6 in the morning

  ಕೆಜಿಎಫ್ ಹವಾ ಇದೇ ಶುಕ್ರವಾರದಿಂದ ಆರಂಭ. ಆ ದಿನ ಬೆಂಗಳೂರಿನ ಹಲವಾರು ಥಿಯೇಟರುಗಳಲ್ಲಿ ಮುಂಜಾನೆಯೇ ಶೋ ಶುರುವಾಗಲಿದೆ. ಆ ದಿನ ಬೆಂಗಳೂರಿನ ಕಾಮಾಕ್ಯ, ಶಾರದಾ ಸಿನಿಮಾ, ತಿರುಮಲ ಡಿಜಿಟಲ್, ವಿನಾಯಕ್ ಸಿನಿಮಾಸ್‍ಗಳಲ್ಲಿ ಈಗಾಗಲೇ ಅಧಿಕೃತವಾಗಿಯೇ ಟಿಕೆಟ್ ಬುಕ್ ಆಗಿದ್ದು, ಆ ದಿನ ಬೆಳಗ್ಗೆ 6ಕ್ಕೇ ಶೋ ಶುರುವಾಗಲಿದೆ.

  ಇನ್ನು ರಿಲೀಸ್ ದಿನ ಅಬ್ಬರ ಜೋರಾದರೆ, ಮಧ್ಯರಾತ್ರಿಯೇ ಶೋ ನಡೆದರೂ ಆಶ್ಚರ್ಯ ಪಡಬೇಕಿಲ್ಲ. ಬಳ್ಳಾರಿಯಲ್ಲಂತೂ ಇತ್ತೀಚೆಗೆ ಸ್ಟಾರ್ ಸಿನಿಮಾಗಳು ಅರ್ಧರಾತ್ರಿಯಲ್ಲೇ ರಿಲೀಸ್ ಆಗುವುದು ಈಗ ಕಾಮನ್ ಆಗಿಬಿಟ್ಟಿದೆ.

  ಕೆಜಿಎಫ್ ದೇಶಾದ್ಯಂತ 2000+ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ಅಷ್ಟೇ ಅಲ್ಲ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ವರ್ಷನ್ ಕೆಜಿಎಫ್ ಕೂಡಾ ರಿಲೀಸ್ ಆಗುತ್ತಿದೆ. ಕೆಜಿಎಫ್ ರಿಲೀಸ್‍ಗೇ ಕಾಯುತ್ತಿದ್ದೆವೇನೋ ಎಂಬಂತೆ ಅಭಿಮಾನಿಗಳು ಶೋ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಮಾಡಿಬಿಟ್ಟಿದ್ದಾರೆ. 

 • ರಾಖಿ ಭಾಯ್ ಬೈಕ್ ಬಿಡಲ್ಲ..!

  rocky bhai fida over bike

  ಕೆಜಿಎಫ್ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮ್ಯೂಸಿಕ್, ಸೌಂಡ್, ಡೈಲಾಗ್ಸ್, ಕ್ಯಾಮೆರಾ ಟೇಕಿಂಗ್ಸ್.. ಈ ಎಲ್ಲದರ ನಡುವೆ ಯುವಕರ ಕಣ್ಣು ಕುಕ್ಕುತ್ತಿರೋದು ರಾಖಿ ಭಾಯ್ ಬೈಕ್. 

  ಮೊದಲೇ 70-80ರ ದಶಕದ ಕಥೆ. ಹೀಗಾಗಿ ಆಗಿನ ಕಾಲದ ಬೈಕ್‍ನ್ನೇ ಬಳಸಿಕೊಳ್ಳೋ ಪ್ಲಾನ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇತ್ತು. ಆದರೆ, ಮೈಲೇಜ್, ಕೆಪ್ಯಾಸಿಟಿ ಪ್ರಾಬ್ಲಂಗಳಿಂದಾಗಿ ಹೊಸ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಗಾಡಿಯನ್ನೇ ಹಳೆಯ ರೂಪಕ್ಕೆ ಬದಲಿಸಲಾಯಿತು. ನಾವು ಟ್ರೇಲರ್‍ನಲ್ಲಿ ನೋಡ್ತಿರೋದು ಅದೇ ಬೈಕ್.

  ಆ ಬೈಕ್ ಮೇಲೆ ಯಶ್‍ಗೆ ಲವ್ವಾಗಿ ಬಿಟ್ಟಿದೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ಮೇಲೆ ಆ ಬೈಕ್‍ನ್ನು ಸ್ವಂತಕ್ಕೆ ತೆಗೆದುಕೊಳ್ಳೋ ಪ್ಲಾನ್ ಹಾಕಿಕೊಂಡಿದ್ದಾರಂತೆ ಯಶ್.