` drama juniors, - chitraloka.com | Kannada Movie News, Reviews | Image

drama juniors,

 • ಝೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್ - ಪ್ರತಿಭಟನೆ ದಾಖಲಿಸಿದ ಬ್ರಾಹ್ಮಣ ಸಮುದಾಯ

  drma juniors offended brahmin community

  ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಆಗಿದ್ದೇನೆಂದರೆ, ಡ್ರಾಮಾ ಜ್ಯೂನಿಯರ್ಸ್‍ನ ಭಾನುವಾರದ ಎಪಿಸೋಡ್‍ನಲ್ಲಿ ಗೃಹ ಪ್ರವೇಶಕ್ಕೆ ಬರುವ ಪುರೋಹಿತರು ಮಾಡುವ ಅವಾಂತರಗಳನ್ನು ಕಾಮಿಡಿಯಾಗಿ ಹೇಳಲಾಗಿತ್ತು. ಹಾಸ್ಯದ ಹೆಸರಲ್ಲಿ ಬ್ರಾಹ್ಮಣರನ್ನು ಅಪಹಾಸ್ಯ ಮಾಡಲಾಗಿದೆ ಎಂಬುದೇ ಬ್ರಾಹ್ಮಣ ಸಮುದಾಯದವರ ಆಕ್ರೋಶಕ್ಕೆ ಕಾರಣ. 

  ಝೀ ಕನ್ನಡ ವಾಹಿನಿ, ಜಡ್ಜ್‍ಗಳಾದ ಟಿ.ಎನ್. ಸೀತಾರಾಂ, ಲಕ್ಷ್ಮೀ, ವಿಜಯ್ ರಾಘವೇಂದ್ರ ಹಾಗೂ ಡ್ರಾಮಾದ ಸೃಷ್ಟಿಕರ್ತರ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿಬಿದ್ದಿದೆ. 

  ಬ್ರಾಹ್ಮಣರನ್ನು ಯಾರು, ಹೇಗೆ ಬೇಕಾದರೂ ಲೇವಡಿ ಮಾಡಬಹುದೇ..? ಬ್ರಾಹ್ಮಣರ ಲೇವಡಿ ಹೆಸರಲ್ಲಿ ಕಾಮಭಂಗಿಗಳನ್ನು ತೋರಿಸುವುದು ಸರಿಯೇ..? ಮಕ್ಕಳ ಕೈಯ್ಯಲ್ಲ ಅಶ್ಲೀಲ ಭಂಗಿ ತೋರಿಸುವ ಅಗತ್ಯವೇನಿತ್ತು..? ಇದು ಬ್ರಾಹ್ಮಣ ಸಮುದಾಯದವರ ಆಕ್ರೋಶ.

  ಡ್ರಾಮಾ ಜ್ಯೂನಿಯರ್ಸ್‍ನವರು ಕ್ಷಮೆ ಕೇಳುವ ಅಗತ್ಯವಿಲ್ಲ. ಅವರು ತಪ್ಪೇ ಮಾಡಿಲ್ಲ ಎಂದು ವಾದಿಸುವವರ ಸಂಖ್ಯೆಗೂ ಕೊರತೆಯಿಲ್ಲ. ಒಟ್ಟಿನಲ್ಲೀಗ ಸಾಮಾಜಿಕ ಜಾಲತಾಣಗಳಲ್ಲಿ ಡ್ರಾಮಾ ಜ್ಯೂನಿಯರ್ಸ್ ಅತಿ ದೊಡ್ಡ ಚರ್ಚೆಯ ವಸ್ತುವಾಗಿದೆ.

 • ಡ್ರಾಮಾ ಜ್ಯೂನಿಯರ್ಸ್​ನಿಂದ ಟಿ.ಎನ್.ಸೀತಾರಾಮ್ ಹೊರಕ್ಕೆ

  drama juniors 2

  ಡ್ರಾಮಾ ಜ್ಯೂನಿಯರ್ಸ್. ಝೀ ಕನ್ನಡದ ಈ ರಿಯಾಲಿಟಿ ಶೋ, ಈಗ ಕರ್ನಾಟಕದ ಮನೆಮಾತು. ಪುಟಾಣಿಗಳ ಅದ್ಭುತ ಪ್ರತಿಭೆ ಹಾಗೂ ಜಡ್ಜ್​ಗಳಾಗಿದ್ದ ಟಿ.ಎನ್. ಸೀತಾರಾಮ್, ವಿಜಯ್ ರಾಘವೇಂದ್ರ ಹಾಗೂ ಲಕ್ಷ್ಮಿ, ನಿರೂಪಕ ಆನಂದ್​​ಗೆ ಹೊಸ ಇಮೇಜ್ ಕೊಟ್ಟ ಕಾರ್ಯಕ್ರಮ. ಈಗ ಅದರ ಎರಡನೇ ಸೀಸನ್ ನಡೆಯುತ್ತಿದೆ. 

  ಆದರೆ, ವಿಷಯ ಅದಲ್ಲ. ಡ್ರಾಮಾ ಜ್ಯೂನಿಯರ್ಸ್​ನಿಂದ ಟಿ.ಎನ್. ಸೀತಾರಾಮ್ ಹೊರನಡೆದಿದ್ದಾರೆ. ಅದನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ. ಅವರು ಹೊಸ ಸಿನಿಮಾವೊಂದಕ್ಕೆ ಸಿದ್ಧರಾಗುತ್ತಿದ್ದು, ಅದಕ್ಕಾಗಿ ವಿದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಅಲ್ಲದೆ ವಿಧಾನಮಂಡಲದ ಸಾಕ್ಷ್ಯಚಿತ್ರಗಳ ಜವಾಬ್ದಾರಿ ಕೂಡಾ ಹೆಗಲೇರಿದೆ. ಇದರ ಮಧ್ಯೆ ವೆಬ್​ ಚಾನೆಲ್​ವೊಂದನ್ನು ಆರಂಭಿಸುವ ಸಾಹಸಕ್ಕೂ ಕೈ ಹಾಕಿದ್ದಾರೆ ಟಿ.ಎನ್. ಸೀತಾರಾಮ್. ಇದೆಲ್ಲವನ್ನೂ ಹೇಳಿಕೊಂಡಿರುವ ಸೀತಾರಾಮ್, ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಹೊರಹೋಗುತ್ತಿದ್ದೇನೆ. ಅವಕಾಶ ನೀಡಿದ ಝೀ ಕನ್ನಡದ ರಾಘವೇಂದ್ರ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

  ಪುಟ್ಟ ಪುಟ್ಟ ಮಕ್ಕಳಿಂದ, ಡ್ರಾಮಾ ಜ್ಯೂನಿಯರ್ಸ್ ತಂಡದವರಿಂದ ಹಾಗೂ ಲಕ್ಷ್ಮಿ, ಆನಂದ್, ಆನಂದ್ ಅವರಿಂದ ಬಹಳಷ್ಟು ವಿಷಯ ಕಲಿತಿದ್ದೇನೆ. ಅದರಲ್ಲೂ ಕಾರ್ಯಕ್ರಮದಲ್ಲಿ ಮಕ್ಕಳ ಮುಗ್ಧತೆ, ಸಂಭ್ರಮಗಳು ನನ್ನ ಬಾಲ್ಯವನ್ನು ಮತ್ತೆ ಮರಳಿ ತಂದುಕೊಟ್ಟವು. ನನ್ನ ಬೇಸರ ಒಂಟಿತನಗಳೆಲ್ಲಾ ಮ್ಯಾಜಿಕ್ ನಂತೆ ಮಾಯವಾದವು. ಜೀ ತಂಡದವರು ಕೂಡ ಅದ್ಭುತ ನಾಟಕಗಳನ್ನು ಮಾಡಿಸಿದರು ಎಂದು ಇಡೀ ತಂಡವನ್ನು ಕೊಂಡಾಡಿದ್ದಾರೆ. ಏನೇ ಇರಲಿ..ಡ್ಯಾಮಾ ಜ್ಯೂನಿಯರ್ಸ್​ನ ಮುಂದಿನ ಎಪಿಸೋಡುಗಳಲ್ಲಿ ಟಿ.ಎನ್. ಸೀತಾರಾಮ್ ಇರುವುದಿಲ್ಲ ಎನ್ನುವುದಂತೂ ಸತ್ಯ.

 • ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಬ್ರಾಹ್ಮಣರ ಅವಹೇಳನ - ಕ್ಷಮೆಯಾಚನೆಗೆ ಪಟ್ಟು ಹಿಡಿದ ಪೆಜಾವರ ಮಠ

  pejavar sree demanda apology

  ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಬ್ರಾಹ್ಮಣರ ಬಗ್ಗೆ, ಪೌರೋಹಿತ್ಯದ ಬಗ್ಗೆ ಅವಹೇಳನಕಾರಿಯಾಗಿ ನಾಟಕ ಪ್ರದರ್ಶಿಸಲಾಗಿದೆ ಎಂದು ಬ್ರಾಹ್ಮಣ ಸಮುದಾಯ ಸಿಡಿದೆದ್ದಿರುವುದು ಗೊತ್ತಿರುವ ವಿಚಾರ. ಕಾರ್ಯಕ್ರಮದ ಜ್ಯೂರಿಗಳು, ಝೀ ಟೀವಿಯ ನಿರ್ಮಾಪರಕ ಬಹಿರಂಗ ಕ್ಷಮೆಯಾಚನೆಗೆ ವೀಕ್ಷಕರು ಆನ್‍ಲೈನ್ ಕ್ಯಾಂಪೇನ್ ನಡೆಸಿದ್ದರು. ವಿವಾದ ಇಷ್ಟಕ್ಕೇ ತಣ್ಣಗಾಗುವ ಯಾವುದೇ ಸೂಚನೆ ಕಾಣುತ್ತಿಲ್ಲ. ಏಕೆಂದರೆ, ಈಗ ಝೀ ಟೀವಿಯರು ಕ್ಷಮೆ ಕೇಳಬೇಕು ಎನ್ನುತ್ತಿರುವುದು ಪೆಜಾವರ ಮಠ.

  ಪೆಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಷ ತೀರ್ಥರು ವಿವಾದಕ್ಕೆ ಎಂಟ್ರಿಯಾಗಿಲ್ಲ. ಆದರೆ, ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ಸ್ವಾಮೀಜಿ, ಝೀಟೀಯವರು ಕ್ಷಮೆ ಕೇಳಬೇಕು ಎಂದಿದ್ದಾರೆ. 

  ಉಡುಪಿಯಲ್ಲಿ ಯುವ ಬ್ರಾಹ್ಮಣ ಪರಿಷತ್ ಕರೆದಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿ, ತಪ್ಪು ಆಗಿ ಹೋಗಿದೆ. ಮುಂದಿನ ಕಾರ್ಯಕ್ರಮದಲ್ಲಿ ಕ್ಷಮೆ ಕೇಳಿ. ಇಲ್ಲದೇ ಹೋದರೆ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

  ಪುಟ್ಟ ಮಕ್ಕಳಲ್ಲಿ ಕೆಟ್ಟ ಭಾವನೆ ತುಂಬಬಾರದು. ಅದು ಭಾರಿ ಅನಾಹುತಕ್ಕೆ ದಾರಿಯಾಗುತ್ತೆ ಎಂದು ಕಿವಿ ಮಾತು ಹೇಳಿದ್ದಾರೆ.

  Related Articles :-

  ಝೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್ - ಪ್ರತಿಭಟನೆ ದಾಖಲಿಸಿದ ಬ್ರಾಹ್ಮಣ ಸಮುದಾಯ

 • ಬ್ರಾಹ್ಮಣರ ಕ್ಷಮೆ ಕೇಳಿದ ಡ್ರಾಮಾ ಜ್ಯೂನಿಯರ್ಸ್

  drama juniors team

  ಡ್ರಾಮಾ ಜ್ಯೂನಿಯರ್ಸ್ ತಂಡ ಬ್ರಾಹ್ಮಣ ಸಮುದಾಯವನ್ನು ಬೇಷರತ್ ಆಗಿ ಕ್ಷಮೆ ಕೇಳಿದೆ. ಕಳೆದ ವಾರ ಡ್ರಾಮಾ ಜ್ಯೂನಿಯರ್ಸ್‍ನ ನಾಟಕವೊಂದರಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ. ಹಾಸ್ಯದ ಹೆಸರಲ್ಲಿ ಬ್ರಾಹ್ಮಣರನ್ನು ಅವಮಾನಿಸಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರು ಸಿಟ್ಟಿಗೆದ್ದಿದ್ದರು. ಪೆಜಾವರ ಮಠವೂ ಕೂಡಾ ಡ್ರಾಮಾ ಜ್ಯೂನಿಯರ್ಸ್ ಮತ್ತು ಝೀ ಕನ್ನಡ ವಾಹಿನಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿತ್ತು. 

  ಈ ಹಿನ್ನೆಲೆಯಲ್ಲಿ ಡ್ರಾಮಾ ಜ್ಯೂನಿಯರ್ಸ್ ನಿರೂಪಕ ಆನಂದ್, ಬೇಷರತ್ ಕ್ಷಮೆ ಕೇಳಿದ್ದಾರೆ. ನಮಗೆ ಯಾವುದೇ ಸಮುದಾಯಕ್ಕೆ ನೋವು ಮಾಡುವ ಉದ್ದೇಶ ಇರಲಿಲ್ಲ. ಕೆಲವೊಮ್ಮೆ ನಮ್ಮ  ನಿರೀಕ್ಷೆಗೂ ಮೀರಿ ಪ್ರಮಾದಗಳಾಗಿಬಿಡತ್ತವೆ. ಹಾಸ್ಯ ಕೆಲವೊಮ್ಮೆ ನಮ್ಮ ಊಹೆಗೂ ಮೀರಿ ಕೆಲವರಿಗೆ ನೋವಾಗಿಬಿಡುತ್ತೆ. ಸದಭಿರುಚಿಯ ಮನರಂಜನೆ ಕೊಡುವುದಷ್ಟೇ ನಮ್ಮ ಉದ್ದೇಶ. ಹೀಗಾಗಿಯೂ ಕೆಲವು ಸಮುದಾಯದವರಿಗೆ ನಮ್ಮಿಂದ ನೋವಾಗಿದ್ದರೆ, ನಾವು ಕ್ಷಮೆ ಕೇಳುತ್ತೇವೆ. ಕ್ಷಮೆ ಕೇಳುವುದಕ್ಕೆ ನಮಗೆ ಅವಮಾನವಿಲ್ಲ. ಸಂಕೋಚವೂ ಇಲ್ಲ. ದಯವಿಟ್ಟು ಕ್ಷಮಿಸಿ ಎಂದಿದ್ದಾರೆ ಆನಂದ್.

  ತೀರ್ಪುಗಾರರ ಪರವಾಗಿ ಮಾತನಾಡಿರುವ ಟಿ.ಎನ್. ಸೀತಾರಾಮ್ ಕೂಡಾ ಕ್ಷಮೆ ಕೇಳಿದ್ದಾರೆ. ಇದುವರೆಗೆ ಇದೇ ವೇದಿಕೆಯಲ್ಲಿ 167 ಸ್ಕಿಟ್‍ಗಳಾಗಿವೆ. ಅನೇಕ ಸ್ಕಿಟ್‍ಗಳು ಸಮಾಜಕ್ಕೆ ಸ್ಫೂರ್ತಿಯಾಗಿವೆ ಎಂಬ ಅಭಿಪ್ರಾಯವೂ ಬಂದಿದೆ. ಇವುಗಳ ಮಧ್ಯೆ ಇಂಥಾದ್ದೊಂದು ಸ್ಕಿಟ್, ಲೇವಡಿ ಹಾಗೆ ಕಾಣಿಸಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ ಟಿ.ಎನ್. ಸೀತಾರಾಮ್.

 • ಭಕ್ತ ಅಂಬರೀಷನಾದರು ವಿಜಯ್ ರಾಘವೇಂದ್ರ

  bhaktha ambareesha in and as bhaktha ambareesha

  ಭಕ್ತ ಅಂಬರೀಷ, ಅದೊಂದು ಸಿನಿಮಾ ಡಾ.ರಾಜ್ ಅವರ ಈಡೇರದೇ ಹೋದ ಕನಸು. ಆ ಪಾತ್ರವನ್ನು ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಡುತ್ತಾನೆ ಎಂದು ಹೇಳುತ್ತಲೇ ಇದ್ದ ರಾಜ್‍ಗೆ ಭಗವಂತ ಕರುಣೆ ತೋರಲಿಲ್ಲ. ಈಗ ಅಂಥಾದ್ದೊಂದು ಅವಕಾಶ ಸಿಕ್ಕಿದ್ದು ವಿಜಯ್ ರಾಘವೇಂದ್ರಗೆ.

  ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಇದೇ ಮೊದಲ ಬಾರಿಗೆ ಜಡ್ಜ್‍ಗಳೂ ಬಣ್ಣ ಹಚ್ಚಿದ್ದರು. ಬಹುಶಃ, ರಿಯಾಲಿಟಿ ಶೋನಲ್ಲಿ ಜಡ್ಜ್‍ಗಳೇ ನಟಿಸಿದ್ದು ಇದೇ ಮೊದಲು. ಈ ಎಪಿಸೋಡ್‍ನಲ್ಲಿ ವಿಜಯ್ ರಾಘವೇಂದ್ರಗೆ ಸಿಕ್ಕಿದ್ದು ಭಕ್ತ ಅಂಬರೀಷನ ಪಾತ್ರ.

  ಆರಂಭದಲ್ಲಿಯೇ ವಿಜಯ್ ರಾಘವೇಂದ್ರಗೆ ಒತ್ತಡ ಇದ್ದದ್ದು ನಿಜ. ಏಕೆಂದರೆ, ಗಿರಿಜಾ ಲೋಕೇಶ್, ತಮ್ಮ ಮಾವ ಸುಬ್ಬಯ್ಯ ನಾಯ್ಡು ಅವರ ಜೊತೆಯಲ್ಲಿ ಡಾ. ರಾಜ್ `ಭಕ್ತ ಅಂಬರೀಷ' ನಾಟಕದಲ್ಲಿ ಅಭಿನಯಿಸುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಎಸ್.ನಾರಾಯಣ್, ಶ್ರೀಮುರಳಿ,  ಚಿನ್ನೇಗೌಡ.. ಅದೇ ವೇದಿಕೆಯಲ್ಲಿರುವ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು, ಆನಂದ್ ಎಲ್ಲರೂ ಪ್ರತಿ ಕ್ಷಣದಲ್ಲೂ ವಿಜಯ್ ರಾಘವೇಂದ್ರ ಅವರಿಗೆ ಡಾ.ರಾಜ್‍ರನ್ನು ನೆನಪಿಸುತ್ತಲೇ ಇದ್ದರು. ಡಾ. ರಾಜ್ ಅವರನ್ನು ಸರಿದೂಗಿಸುವ ಒತ್ತಡವನ್ನು ಮೈಮೇಲೆಳೆದುಕೊಂಡೇ ನಟಿಸಿದ ವಿಜಯ್ ರಾಘವೇಂದ್ರ ಪ್ರೇಕ್ಷಕರ ಮನಸ್ಸು ಗೆದ್ದರು.

  ಡಾ.ರಾಜ್, ಕನ್ನಡಿಗರಿಗೆ ಮೇರುಕಲಾವಿದ. ವಿಜಯ್ ರಾಘವೇಂದ್ರ ಅವರಿಗೆ ದೊಡ್ಡ ಮಾವ. ಅಣ್ಣಾವ್ರ ಅಭಿಯನಕ್ಕೆ ಸರಿಸಾಟಿಯಾಗುವ ಒತ್ತಡದ ನಡುವೆಯೇ ಅದ್ಭುತವಾಗಿ ನಟಿಸಿದ ವಿಜಯ್ ರಾಘವೇಂದ್ರ ಅಭಿಮಾನಿಗಳ ಮನಸ್ಸು ಗೆದ್ದರು.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery