` arohi narayan, - chitraloka.com | Kannada Movie News, Reviews | Image

arohi narayan,

 • ಗಾಯಕಿಯಾದಳು ನಳಮಹರಾಜನ ನಾಯಕಿ

  arohi narayan sings two songs for bheemasena nalmaharaja

  ಆರೋಹಿ ನಾರಾಯಣ್. ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಮಗಳ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಹುಡುಗಿ. ಈಗ ಭೀಮಸೇನ ನಳಮಹರಾಜ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಸಂಪ್ರದಾಯಸ್ಥ ಕುಟುಂಬದಲ್ಲಿರೋ ರೆಬಲ್ ಗುಣವುಳ್ಳ ನಾಯಕಿಯಾಗಿ ನಟಿಸುತ್ತಿದ್ದಾರೆ ಆರೋಹಿ ನಾರಾಯಣ್. ಮಕ್ಕಳ ಮೇಲೆ ವಿಪರೀತ ನಿರ್ಬಂಧ ಹೇರಿದರೆ, ಅವರು ಹೇಗೆ ಬ್ಲಾಸ್ಟ್ ಆಗುತ್ತಾರೆ ಅನ್ನೋದನ್ನ ನನ್ನ ಪಾತ್ರದ ಮೂಲಕ ಹೇಳಿದ್ದಾರೆ ಎಂದಿದ್ದಾರೆ ಆರೋಹಿ. ಆದರೆ, ವಿಷಯ ಅದಲ್ಲ, ನಾಯಕಿ ಆರೋಹಿ, ಗಾಯಕಿಯೂ ಆಗಿದ್ದಾರೆ.

  ಭೀಮಸೇನ ನಳಮಹರಾಜ ಚಿತ್ರದ ಎರಡು ಹಾಡುಗಳನ್ನು ಸ್ವತಃ ಆರೋಹಿ ನಾರಾಯಣ್ ಹಾಡಿದ್ದಾರೆ. ಅವರು ಒಳ್ಳೆಯ ಗಾಯಕಿ. ಒಳ್ಳೆಯ ಅವಕಾಶ ಸಿಕ್ಕರೆ, ಅವರು ಟಾಪ್ ಸಿಂಗರ್ ಆಗುತ್ತಾರೆ ಎಂದು ಮೆಚ್ಚುಗೆಯ ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಿರ್ದೇಶಕ ಕಾರ್ತಿಕ್ ಸರಗೂರು.

  ಅರವಿಂದ್ ಅಯ್ಯರ್ ನಾಯಕರಾಗಿರುವ ಚಿತ್ರ ಭೀಮಸೇನ ನಳಮಹರಾಜ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ಆರೋಹಿ ನಾರಾಯಣ್ ಜೊತೆಗೆ ಪ್ರಿಯಾಂಕ ತಿಮ್ಮೇಶ್ ಕೂಡಾ ನಾಯಕಿಯಾಗಿ ನಟಿಸಿದ್ದಾರೆ.

 • ನಳ ನಳಮಹಾರಾಜನ ದಮಯಂತಿ ಹೇಳಿದ ಕಥೆ

  arohi narayan in bheemasena nalamaharaja

  ಆರೋಹಿ ನಾರಾಯಣ್. ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಮಗಳಾಗಿ ನಟಿಸಿದ್ದ ಮುದ್ದು ಹುಡುಗಿ. ಹೆಚ್ಚೂ ಕಮ್ಮಿ 3 ವರ್ಷಗಳ ನಂತರ ಮತ್ತೊಮ್ಮೆ ತೆರೆಗೆ ಬರುತ್ತಿದ್ದಾರೆ. 2 ವರ್ಷದ ಬ್ರೇಕ್, ಒಂದು ಸರ್ಜರಿಯಿಂದಾಗಿ ಚಿತ್ರರಂಗದಿಂದ ದೂರವಿದ್ದೆ ಎನ್ನವ ಆರೋಹಿ, ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ.

  ಅಪೂರ್ವದಲ್ಲಿ ಅಪ್ಪನ ಮುದ್ದಿನ ಮಗಳಾಗಿ, ಹೆದರುವ ಹುಡುಗಿಯಾಗಿ ನಟಿಸಿದ್ದ ಅಪೂರ್ವಗೆ, ನಳಮಹಾರಾಜನಲ್ಲಿ.. ಟಾಮ್ ಬಾಯ್ ಗರ್ಲ್ ಪಾತ್ರ. ಬ್ರಾಹ್ಮಣರ ಹುಡುಗಿ, ಟಿಪಿಕಲ್ ಸೂತ್ರಗಳ ಆಚೆ ನಿಂತು ಬದುಕುವ ಧೈರ್ಯವಂತ ಹುಡುಗಿಯ ಪಾತ್ರ. ಹೀಗಾಗಿ ನನಗೂ ಇದು ಚಾಲೆಂಜ್. ನಿಜ ಜೀವನದಲ್ಲಿ ಅಪ್ಪಟ ಸಸ್ಯಾಹಾರಿಯಾದ ನಾನು, ಸಿನಿಮಾದಲ್ಲಿ ನಾನ್‍ವೆಜ್ ತಿನ್ನುವ ದೃಶ್ಯದಲ್ಲೂ ನಟಿಸಿದ್ದೇನೆ ಎಂದು ಹೇಳಿಕೊಳ್ತಾರೆ ಆರೋಹಿ.

  ಆರೋಹಿಗೆ ಇಷ್ಟವಾಗಿರೋದು ಪ್ರೊಡಕ್ಷನ್ ಹೌಸ್‍ನಲ್ಲಿ ಅವರನ್ನು ನೋಡಿಕೊಳ್ಳುತ್ತಿರುವ ಚಿತ್ರತಂಡದವರ ವರ್ತನೆ. ಹೆಣ್ಣು ಮಕ್ಕಳನ್ನು ಯಾವ ರೀತಿ ಗೌರವಿಸಬೇಕು, ಹೇಗೆ ನೋಡಿಕೊಳ್ಳಬೇಕು ಎಂದು ನನಗೆ ತೋರಿಸಿಕೊಟ್ಟ ಸಿನಿಮಾ ಇದು. ಒಂದು ದಿನವೂ ನನಗೆ ಕಿರಿಕಿರಿಯಾಗಲಿಲ್ಲ ಎಂದು ಖುಷಿಯಾಗಿ ಹೇಳಿಕೊಳ್ತಾರೆ ಆರೋಹಿ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್, ನಿರ್ದೇಶಕ ಕಾರ್ತಿಕ್ ಸರಗೂರು.. ಅವರ ಕನಸಿನ ಸಿನಿಮಾ ಇದು. ಹೀಗಾಗಿ ನನಗೂ ನಿರೀಕ್ಷೆ ಇದೆ ಎಂದು ಕನಸು ಬಿಚ್ಚಿಡ್ತಾರೆ ಆರೋಹಿ.

 • ರವಿಚಂದ್ರನ್ ಮಗಳು ಈಗ ಹೀರೋಯಿನ್..!

  ravichandran's daughter is heroine

  ರವಿಚಂದ್ರನ್‍ಗೆ ಇರೋದೇ ಇಬ್ಬರು ಮಕ್ಕಳು. ಇಬ್ಬರೂ ಗಂಡು ಮಕ್ಕಳು. ಇದೆಲ್ಲಿಂದ ಬಂದಳು ಮಗಳು ಎಂದು ಕನ್‍ಫ್ಯೂಸ್ ಆಗಬೇಡಿ. ಈ ಮಗಳು ಆರೋಹಿ. ರವಿಚಂದ್ರನ್ ಮಗಳೆಂದೇ ಗುರುತಿಸಿಕೊಂಡ ಆರೋಹಿ, ದೃಶ್ಯ ಚಿತ್ರದಲ್ಲಿ ನಟಿಸಿದ್ದ ಹುಡುಗಿ. ಈಗ ಈ ಹುಡುಗಿ ಹೀರೋಯಿನ್ ಆಗುತ್ತಿದ್ದಾರೆ.

  ಕಿರಿಕ್ ಪಾರ್ಟಿ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದ ಅರವಿಂದ ಅಯ್ಯರ್ ನಾಯಕನಾಗಿರುವ ಚಿತ್ರದಲ್ಲಿ ಆರೋಹಿ ಹೀರೋಯಿನ್. 

Trayambakam Movie Gallery

Rightbanner02_butterfly_inside

Paddehuli Movie Gallery