ಸಹನಟ ಭುವನ್ ತೊಡೆಗೆ ಕಚ್ಚಿ, ಗಾಯಗೊಳಿಸಿದ್ದ ಪ್ರಥಮ್, ಈಗ ಭುವನ್ ವಿರುದ್ಧ ತಮ್ಮ ಮೇಲೆ ಹಲ್ಲೆ ನಡೆಸಿದ ಎಂಬ ಆರೋಪ ಮಾಡಿ ದೂರು ಕೊಟ್ಟಿದ್ದಾರೆ. ಶನಿವಾರ ಸಂಜೆ 4.30ರ ವೇಳೆಯಲ್ಲಿ ಭುವನ್ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರಂತೆ. ದೂರಿನ ಪ್ರಕಾರ, ಭುವನ್ ಪ್ರಥಮ್ಗೆ ‘‘ಲೇ ಪ್ರಥಮ್ ಇವತ್ತು ನನಗೆ ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಕೊನೆ ದಿನ. ಆದರೆ, ನಿನಗೆ ಇವತ್ತೇ ಕೊನೆ ದಿನ’’ ಎಂದು ಹೇಳಿ ಹಿಗ್ಗಾಮುಗ್ಗಾ ಹೊಡೆದರಂತೆ. ಕುತ್ತಿಗೆ, ಬೆನ್ನಿಗೆಲ್ಲ ಗಾಯವಾಯಿತಂತೆ. ಆಗ ಧಾರಾವಾಹಿ ತಂಡದಲ್ಲಿದ್ದ ಕೆಲವರೇ ನನ್ನನ್ನು ಭುವನ್ನಿಂದ ರಕ್ಷಿಸಿದರು ಎಂದು ದೂರಿದ್ದಾರೆ ಪ್ರಥಮ್.
ಘಟನೆ ನಡೆದ ಮೇಲೆ ಊರಿಗೆ ಹೋಗಿದ್ದ ಪ್ರಥಮ್ಗೆ ವಿಷಯ ಗೊತ್ತಾಗಿದ್ದು ಮಾಧ್ಯಮಗಳ ಮೂಲಕ ಅಂತೆ. ಅದೂವರೆಗೆ ಪ್ರಥಮ್ ತನ್ನ ವಿರುದ್ಧ ದೂರು ನೀಡಿದ್ದಾರೆ ಎಂದೇ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಜಾಮೀನು ಪಡೆದು, ನಂತರ ಚಿಕಿತ್ಸೆ ಪಡೆದು ಈಗ ದೂರು ಕೊಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ ಪ್ರಥಮ್, ಭುವನ್ ವಿರುದ್ಧ ದೂರು ದಾಖಲಿಸಿರುವುದು ನಿನ್ನೆ ಅಂದ್ರೆ ಜುಲೈ 24ರ ರಾತ್ರಿ 11.30ರ ವೇಳೆಯಲ್ಲಿ.
Related Articles :-
ಕಚ್ಚಿಂಗ್ ಸ್ಟಾರ್ ಪ್ರಥಮ್ ಹುಚ್ಚಾಟ - ಆತ ‘ಪ್ರೀತ್ಸೆ’ ಚಿತ್ರದ ಉಪೇಂದ್ರನಾ..?
ಸೈಕೋ ಪ್ರಥಮ್ಗೆ ಶಿಕ್ಷೆಯಾಗಲಿ ಎಂದರು ಹರ್ಷಿಕಾ ಪೂಣಚ್ಚ
Is Pratham The New Venkat?
ಬಿಗ್ಬಾಸ್ ಪ್ರಥಮ್ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ
ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು
ಪೊಲೀಸರಿಗೂ ಸಿಕ್ಕದೆ ಬಿಗ್ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!
Udaya Mehta Not Producimg Pratham Movie
ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ