` bhuvan, - chitraloka.com | Kannada Movie News, Reviews | Image

bhuvan,

 • Kidi Movie Review - 3.5/5

  kidi movie review

  This Raghu S directed film is a good commercial film which also has a message. There are many people who are short-tempered and get angry for small reasons also. There is a message for people like that and for the society also. This is a remake of the Malayalam film Kali and there is suitable changes to suit the Kannada screen.

  The lead roles is played by Bhuvan Chandra and Pallavi. The others in the cast include Danny Kuttappa, Ugram Manju, Yethiraj, Mamamohan Rai and Kavya. As mentioned earlier the film is about people who are short tempered and get angry for every reason. The hero of the film is such a character. What happens to his relationships and his friends and family because of his mindset is what the film tries to explore. 

  The anger spill on the screen and out of it too. The film is about about two college students who are in love. After college they decide to married. But their marriage does not stop the problem of the hero. He continues to have short temper which results in many problems for the marriage and the relationship. The heroine tries many ideas to reduce his anger but it is of no help. This short temper results in their separation. The hero does not understand why this is happening though the blame is on his anger. 

  The couple realise their mistakes and decide to unite. But it is not easy. They get into unexpected troubles. How they manage to get out of all the trouble forms the rest of the story. 

  Bhuvan has done a good job as the hero. His dialogue delivery and acting is perfect for the role. He is good in fights also. Pallavi has made a good debut with this film. There is good supporting cast too. The film is less than two hours and therefore perfect length if you want to catch a good film at a short notice. 

   

 • ಕೆಜಿಎಫ್ ಎಫೆಕ್ಟ್ : ಭುವನ್, ಶ್ರೀನಿಧಿ ಶೆಟ್ಟಿಗೆ ಎಂಥ ಡಿಮ್ಯಾಂಡು..?

  kgf effect, srinidhi shetty in demand

  ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದರೆ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿ ಸಂಭ್ರಮಿಸುತ್ತಿದೆ ಹೊಂಬಾಳೆ ಫಿಲಂಸ್. ನಿರ್ದೇಶಕ ಪ್ರಶಾಂತ್ ನೀಲ್‍ರ ಶ್ರಮ ಇಡೀ ಟ್ರೇಲರ್‍ನಲ್ಲಿ ಎದ್ದುಕಂಡಿದೆ. ಟ್ರೇಲರ್ ಹಿಟ್ ಆಗುತ್ತಿದ್ದಂತೆಯೇ ಎಲ್ಲರಿಗಿಂತ ಮೊದಲು ಡಿಮ್ಯಾಂಡ್ ಸೃಷ್ಟಿಯಾಗಿರುವುದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಛಾಯಾಗ್ರಾಹಕ ಭುವನ್‍ಗೆ.

  ಚಿನ್ನದ ಗಣಿಯ ದೂಳು, ಕಣ್ಣ ಭಾವನೆಯ ನೆರಳುಗಳನ್ನು ಹೃದಯ ಮುಟ್ಟುವಂತೆ ಚಿತ್ರೀಕರಿಸಿರುವ ಭುವನ್‍ಗೆ ಈಗ ಬಾಲಿವುಡ್ ಸೇರಿದಂತೆ ಪರಭಾಷೆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರಿಂದ ಕರೆ ಬರುತ್ತಿವೆ.

  ಅತ್ತ, ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕಿ ಶ್ರೀನಿಧಿ ಶೆಟ್ಟಿಗೂ ಬಾಲಿವುಡ್ ಬ್ಯಾನರ್‍ಗಳಿಂದ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಾದರೂ, ಅವಕಾಶಗಳ ಸುರಿಮಳೆಯಂತೂ ಆಗುತ್ತಿದೆ. 

  ಡಿಸೆಂಬರ್ 21ಕ್ಕೆ ತೆರೆಗೆ ಬರಲಿರುವ ಕೆಜಿಎಫ್‍ನ ಕ್ರೇಝ್ ನೋಡುತ್ತಿದ್ದರೆ, ಶಾರೂಕ್ ಖಾನ್‍ರ ಝೀರೋ ಶೇಕ್ ಆದರೂ ಅಚ್ಚರಿಯಿಲ್ಲ.

 • ಪ್ರಥಮ್ ಭುವನ್ ಜಗಳ್‍ಬಂದಿಯ ಹಿಂದೆ ಗೋಮಾಂಸದ ಕಥೆ..! - ಚಿತ್ರಲೋಕ ಎಕ್ಸ್‍ಕ್ಲೂಸಿವ್ ಭಾಗ 02

  pratham bhuvan story

  ಭಾಗ 01ರ ವಿವರ

  ಪ್ರಥಮ್ ಭುವನ್ ಮಧ್ಯೆ ಜಗಳವಾಗಿದ್ದು ನಿಜ. ಆದರೆ ಕಚ್ಚಿರುವುದು ಧಾರಾವಾಹಿ ತಂಡದವರಿಗೆ ಗೊತ್ತಿಲ್ಲ. ಆ ದಿನ ಜಗಳವಾದ ನಂತರವೂ ರಾತ್ರಿವರೆಗೆ ಶೂಟಿಂಗ್ ಆಗಿತ್ತು. ಭುವನ್ ನಾರ್ಮಲ್ಲಾಗಿಯೇ ಇದ್ದರು. ಮಾರನೇ ದಿನ ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿಯಾಯ್ತು. ಮೊದಲು ಬುದ್ದಿ ಹೇಳಿದ್ದ ತಲಘಟ್ಟಪುರ ಠಾಣೆಯ ಇನ್ಸ್‍ಪೆಕ್ಟರ್, ನ್ಯೂಸ್ ಚಾನೆಲ್‍ಗಳಲ್ಲಿ ವಿಡಿಯೋ, ಫೋಟೋ ಬಹಿರಂಗವಾದ ಮೇಲೆ ಎಫ್‍ಐಆರ್ ದಾಖಲಿಸಿದರು. ನ್ಯೂಸ್ ಚಾನೆಲ್ಲುಗಳಿಗೆ ವಿವರ ನೀಡಿದ ಅಸೋಸಿಯೇಟ್ ಡೈರೆಕ್ಟರ್ ಪವನ್ ಯಾರೆಂಬುದು ಧಾರಾವಾಹಿ ನಿರ್ದೇಶಕ ರಾಜೇಶ್‍ಗೆ ಗೊತ್ತಿಲ್ಲ. ಇಷ್ಟೆಲ್ಲ ಆದ ಮೇಲೆ ಎಂಎಲ್‍ಎ ಚಿತ್ರದ  ಶೂಟಿಂಗ್‍ನಲ್ಲಿದ್ದ ಪ್ರಥಮ್, ಚಿತ್ರ ನಿರ್ದೇಶಕರ ಸಲಹೆಯಂತೆ ಕೋರ್ಟ್‍ಗೆ ಶರಣಾಗಿ ಜಾಮೀನು ಪಡೆದರು. 

  ಭಾಗ 02

  ಮೊದಲ ಭಾಗದಲ್ಲಿ ಇಡೀ ಘಟನೆಯ ವಿವರ ಓದಿದಿರಿ. ಈ ಇಬ್ಬರ ಮಧ್ಯೆ ಮುನಿಸು ಶುರುವಾಗಲು ಏನು ಕಾರಣ..? ಯಾರು ಕಾರಣ..? ಪ್ರಥಮ್ ಮತ್ತು ಭುವನ್ ಮಧ್ಯೆ ಇಷ್ಟೆಲ್ಲ ಜಗಳವಾಗೋಕೆ ಸಂಜನಾ ಕಾರಣ ಎಂದುಕೊಂಡರೆ, ತಪ್ಪಾದೀತು. 

  ಬಿಗ್‍ಬಾಸ್‍ನಿಂದ ಶುರುವಾಗಿತ್ತು ಜಗಳ್‍ಬಂದಿ

  ಇಬ್ಬರ ಮಧ್ಯೆ ಮುನಿಸು, ಮನಸ್ತಾಪ, ಜಗಳ, ಬೈಗುಳ ಶುರುವಾಗಿದ್ದು ಸಂಜು ಮತ್ತು ನಾನು ಧಾರಾವಾಹಿ ಶೂಟಿಂಗ್‍ನಲ್ಲಿ ಅಲ್ಲ. ಬಿಗ್‍ಬಾಸ್ ಸೀಸನ್4ಗೆ ಎಂಟ್ರಿ ಕೊಟ್ಟಾಗಿನಿಂದ ಶುರುವಾಗಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ, ಪ್ರಥಮ್ ಆಗ ಸೆಲಬ್ರಿಟಿಯೇನೂ ಆಗಿರಲಿಲ್ಲ. ಆದರೆ, ತಮ್ಮ ಬಿಗ್‍ಬಾಸ್ ಪ್ರವೇಶಕ್ಕೆ ಹೆಚ್.ಡಿ. ದೇವೇಗೌಡರ ಶುಭಾಶಯದ ಹೇಳಿಕೆಯನ್ನೂ ತೆಗೆದುಕೊಂಡು ಬಂದಿದ್ದ ಚತುರ. ಹಾಗೆ ಬಿಗ್‍ಬಾಸ್‍ಗೆ ಎಂಟ್ರಿ ಕೊಟ್ಟ ದಿನದಿಂದ ಪ್ರಥಮ್ ಎಲ್ಲರ ಆಕರ್ಷಣೆಯ ಬಿಂದುವಾಗುತ್ತಾ ಹೋದರು. ಅಷ್ಟು ಹೊತ್ತಿಗೆ ಭುವನ್ ಮತ್ತು ಸಂಜನಾ ಎಷ್ಟು ಅನ್ಯೋನ್ಯವಾಗಿದ್ದರು ಎಂದರೆ, ನೋಡಿದವರಿಗೆ ಅವರು ಪ್ರೇಮಿಗಳೇ ಇರಬಹುದಾ ಎಂಬ ಅನುಮಾನವೂ ಬಂದಿತ್ತು.

  ಅಲ್ಲಿದೆ ಗೋಮಾಂಸದ ಕಥೆ..!

  ಹಾಗಾದರೆ ಬಿಗ್‍ಬಾಸ್‍ನಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಚಿತ್ರಲೋಕ ಬೆನ್ನು ಹತ್ತಿದಾಗಬಿಗ್‍ಬಾಸ್ ಮನೆಯಲ್ಲಿ ಸಂಜನಾ ವಿಚಾರಕ್ಕೆ ಕುರಿತಂತೆ ಭುವನ್ ಮತ್ತು ಪ್ರಥಮ್ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ಪ್ರಥಮ್ ಬಡಬಡನೆ ಮಾತನಾಡುವ ಮಾತುಗಾರನಾದರೆ, ಭುವನ್ ಸೈಲೆಂಟ್. ಭುವನ್ ಮಾಂಸಾಹಾರಿಯಾದರೆ, ಪ್ರಥಮ್ ಸಸ್ಯಾಹಾರಿ. ಹಾಗೆಂದು ಪ್ರಥಮ್ ಮಾಂಸಾಹಾರಿಗಳನ್ನು ದ್ವೇಷಿಸುವ ವ್ಯಕ್ತಿಯೇನಲ್ಲ. ಆದರೆ, ಗೋಮಾಂಸ ತಿನ್ನುವವರನ್ನು ಕಂಡರೆ ಉರಿದುಬೀಳುವ ಆಸಾಮಿ. ಜೋರಾಗಿ ಕೂಗಾಡಿ, ಬೀಫ್ ತಿನ್ನುವವರನ್ನು ಬಾಯಿಗೆ ಬಂದಂತೆ ಬೈದುಬಿಡುತ್ತಿದ್ದರು. ಈ ವೀಕ್‍ನೆಸ್‍ನ್ನು ಭುವನ್ ಅರ್ಥ ಮಾಡಿಕೊಂಡಿದ್ದರು ಮತ್ತು ಭುವನ್‍ಗೆ ಬೀಫ್ (ಗೋಮಾಂಸ) ಎಂದರೆ ಇಷ್ಟ.

  ಬೀಫ್ ತಿನ್ನು, ಚೆನ್ನಾಗಿ ಆಗ್ತೀಯ ಎನ್ನುತ್ತಿದ್ದ ಭುವನ್

  ಬೀಫ್ ತಿಂದರೆ ಬಲಿಷ್ಠನಾಗುತ್ತೀಯ ಎಂದು ಪದೇ ಪದೇ ಹೇಳುತ್ತಿದ್ದ ಭುವನ್, ಪ್ರಥಮ್‍ನನ್ನು ಆಗಾಗ್ಗೆ ಬೀಫ್ ವಿಚಾರಕ್ಕೆ ಕೆಣಕುತ್ತಿದ್ದರು. ನೋಡೋಕೆ ಕೋತಿ ಥರಾ ಇದ್ದೀಯಾ, ಬೀಫ್ ತಿನ್ನು, ಹೀರೋ ತರಹ ಆಗ್ತೀಯ ಎಂದು ರೇಗಿಸುತ್ತಿದ್ದರು. ಭುವನ್ ಹಾಗೆ ಹೇಳಿದಾಗಲೆಲ್ಲ ಪ್ರಥಮ್ ಸಿಡಿದುಬೀಳುತ್ತಿದ್ದರು. ಕೂಗಾಡುತ್ತಿದ್ದರು. ಬಾಯಿಗೆ ಬಂದಂತೆ ಭುವನ್‍ನ್ನು ಬಯ್ಯುತ್ತಿದ್ದರು. ಆಮೇಲೆ ಪ್ರಥಮ್ ಬಿಗ್‍ಬಾಸ್ ವಿನ್ನರ್ ಆದರು ಅದು ಬೇರೆ ಕಥೆ.

  ಧಾರಾವಾಹಿ ಶೂಟಿಂಗ್‍ನಲ್ಲಾಗಿದ್ದು ಕೂಡಾ ಅದೇ. ಮತ್ತದೇ ಬೀಫ್ ವಿಚಾರಕ್ಕೆ ಪ್ರಥಮ್‍ನನ್ನು ಕೆಣಕಿದ ಭುವನ್, ಗಲಾಟೆ ಮಾಡಿಕೊಂಡಿದ್ದಾರೆ. ಇಡೀ ಘಟನೆ ಶುರುವಾಗಿರುವುದೇ ಅಲ್ಲಿಂದ. ಇದನ್ನು ಪ್ರಥಮ್ ಕೂಡಾ ಹೇಳಿಕೊಂಡಿದ್ದಾರೆ. 

  ಪ್ರಥಮ್ ಹೇಳುತ್ತಿರುವುದೇನು..?

  ನೀವು ಹಾಕಿದ ವೋಟಿನ ಭಿಕ್ಷೆಯಿಂದ ನನಗೆ ಗೆಲುವು ಸಿಕ್ಕಿದೆ ಜೀವನ ರೂಪಿಸಿಕೊಂಡಿದ್ದೇನೆ. ನನ್ನ ಮತ್ತು ಭುವನ್‍ರ ನಡುವಿನ ಇಷ್ಟೂ ಗಲಾಟೆಗೆ ಕಾರಣ ಏನೆಂದರೆ, ಭುವನ್‍ರ ಅತಿಯಾದ ಗೋಮಾಂಸ ಪ್ರೀತಿ. ಅವರು ಯಾವಾಗಲೂ ನನ್ನನ್ನು ಬೀಫ್ ತಿನ್ನುವಂತೆ ಹೇಳಿ ರೇಗಿಸುತ್ತಿದ್ದರು. ಪ್ರಥಮ್, ನೀವು ಕೋತಿ ತರಹಾ ಇದ್ದೀರ.. ಈಗ ಹೀರೋ ಬೇರೆ ಆಗಿದ್ದೀರಾ.. ಬೀಫ್ ತಿನ್ನಿ. ಪರ್ಸನಾಲಿಟಿ ಡೆವಲಪ್ ಮಾಡಿಕೊಳ್ಳಿ ಎಂದು ನನ್ನ ಭಾವನೆ ಕೆರಳಿಸುತ್ತಿದ್ದರು. ಹಸುವಿನ ಗಂಜಲದಲ್ಲಿ ನಾವು ಮಾಡಿದ ಪಾಪಗಳನ್ನು ಕಳೆದುಕೊಳ್ಳಬಹುದು ಎಂದು ನಂಬಿರುವವನು ನಾನು. 

  ನಾನು ನಿಮ್ಮ ನಂಬಿಕೆಗೆ ಮೋಸ ಮಾಡಿಲ್ಲ. ನಾನು ಕಚ್ಚಿಲ್ಲ. ನಿಮ್ಮ ಕಾಲನ್ನು ಕಚ್ಚುತ್ತಾ ಇದ್ದರೆ, ಯಾರೂ ರಕ್ತ ಬರುವ ತನಕ ಸುಮ್ಮನಿರಲ್ಲ. ಝಾಡಿಸಿ ಒದೀತೀರ..ದಯವಿಟ್ಟು ಸತ್ಯ ಅರ್ಥ ಮಾಡಿಕೊಳ್ಳಿ. 

  ಪ್ರಥಮ್ ಮತ್ತು ಭುವನ್ ಮಧ್ಯೆ ನಡೆದಿರುವ ಘಟನೆಯ ಹಿಂದು ಮುಂದಿನ ಚಿತ್ರಗಳ ಸಂಪೂರ್ಣ ಚಿತ್ರಣ ಇದು. ಸದ್ಯಕ್ಕೆ ಪ್ರಥಮ್ ಸಿನಿಮಾ ಶೂಟಿಂಗ್‍ನಲ್ಲಿದ್ದರೆ, ಭುವನ್ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ.  

 • ಪ್ರಥಮ್ ಭುವನ್ ಜಗಳ್‍ಬಂದಿಯ ಹಿಂದೆ ಗೋಮಾಂಸದ ಕಥೆ..! - ಥ್ರಿಲ್ಲರ್ ಸಿನಿಮಾಗಿಂತ ಕಡಿಮೆಯೇನಿಲ್ಲ - ಚಿತ್ರಲೋಕ ಎಕ್ಸ್‍ಕ್ಲೂಸಿವ್ ಭಾಗ 01

  pratham bhuvan sotry

  ಇದುವರೆಗೆ ಪ್ರಥಮ್, ಭುವನ್ ಜಗಳದ ಕಥೆ ನೋಡಿದವರಿಗೆ ಪ್ರಥಮ್ ಖಳನಾಯಕನಂತೆಯೂ, ಭುವನ್ ಸಂತ್ರಸ್ತನಂತೆಯೂ ಕಾಣಿಸಿದೆ. ಆದರೆ, ಕಥೆ ಇಷ್ಟೇ ಅಲ್ಲ. ಹೀಗಾಗಿಯೇ ನಿಜವಾಗಿಯೂ ನಡೆದದ್ದೇನು ಎಂದು ಪತ್ತೆ ಮಾಡಲು ಚಿತ್ರಲೋಕ ಬೆನ್ನು ಹತ್ತಿದಾಗ ಒಂದೊಂದೇ ಕಥೆ ಬಿಚ್ಚಿಕೊಳ್ಳುತ್ತಾ ಹೋಯ್ತು. ಯಾವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲದಂತಾ ಕಥೆಯೊಂದು ಓಪನ್ ಆಯ್ತು.

  ಇದುವರೆಗೆ ಎಲ್ಲರಿಗೂ ಗೊತ್ತಿರೋದು ಇಷ್ಟು. ಭಾನುವಾರ ಸಂಜೆಯ ಹೊತ್ತಿಗೆ ಪ್ರಥಮ್, ಸಂಜು ಮತ್ತು ನಾನು ಧಾರಾವಾಹಿಯ ಶೂಟಿಂಗ್‍ನಲ್ಲಿ ಸಹನಟ ಭುವನ್ ತೊಡೆಗೆ ಕಚ್ಚಿದ್ದಾನೆ ಎಂದು ನ್ಯೂಸ್ ಚಾನೆಲ್ಲುಗಳಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಕಟವಾಯ್ತು. ಅದಾದ ನಂತರ ಭುವನ್ ದೂರು ಕೊಟ್ಟಿದ್ದು, ಪ್ರಥಮ್ ಜಾಮೀನು ಪಡೆದಿದ್ದು, ನಂತರ ಪ್ರಥಮ್ ಭುವನ್ ವಿರುದ್ಧ ದೂರು ಕೊಟ್ಟಿದ್ದು, ನಾನು ಹಲ್ಲೆ ಮಾಡಿಲ್ಲ ಎಂದು ಹೇಳುತ್ತಿರುವುದು. ಇದೆಲ್ಲ ಇಡೀ ಘಟನೆಯ ಸಂಕ್ಷಿಪ್ತ ಚಿತ್ರಣ. ಆದರೆ, ಇಡೀ ಘಟನೆ ಇಷ್ಟೇ ಅಲ್ಲ. ಈ ಬಗ್ಗೆ ಚಿತ್ರಲೋಕ ಮೊದಲು ಸಂಪರ್ಕಿಸಿದ್ದು ಸಂಜು ಮತ್ತು ನಾನು ಧಾರಾವಾಹಿಯ ನಿರ್ದೇಶಕ ರಾಜೇಶ್ ಅವರನ್ನ.

  ನಿರ್ದೇಶಕ ರಾಜೇಶ್ ಹೇಳಿದ್ದು

  ಇಡೀ ಘಟನೆ ನಡೆದಿದ್ದು ಶನಿವಾರ ಅಂದರೆ ಜುಲೈ 22ನೇ ತಾರೀಕು. ಸಂಜೆ 4.45ರಿಂದ 5.15ರ ಮಧ್ಯೆ. ಗಲಾಟೆ ಆಗಿದ್ದು ನಿಜ. ಆದರೆ, ಎಲ್ಲರೂ ಹೇಳುವಂತೆ ಭುವನ್ ಮತ್ತು ಪ್ರಥಮ್ ಮಧ್ಯೆ ಪ್ರತಿದಿನವೂ ಜಗಳ ನಡೆಯುತ್ತಿರಲಿಲ್ಲ. ಇಬ್ಬರೂ ಪರಸ್ಪರ ಮಾತನಾಡುತ್ತಿದ್ದುದೇ ಕಡಿಮೆ. ಕೆಲವು ಬಾರಿ ಪ್ರಥಮ್ ಅವರೇ ಭುವನ್ ಬಳಿ ಹೋಗಿ ಸೆಲ್ಫೀ ತೆಗೆದುಕೊಂಡು ತಮ್ಮ ಫೇಸ್‍ಬುಕ್ ಪೇಜ್‍ಗೆ ಹಾಕುತ್ತಿದ್ದರು.

  ಅದು ಪ್ರಥಮ್‍ಗೆ ಲಾಸ್ಟ್ ಡೇ

  ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಪ್ರಥಮ್ ಭಾಗದ ಶೂಟಿಂಗ್ ಮುಗಿದಿತ್ತು.ಶನಿವಾರವೇ ಕೊನೆಯ ದಿನ. ಸಂಜೆ 4.45ರ ಸುಮಾರಿಗೆ ಗಲಾಟೆ ನಡೆಯಿತು. ನಂತರ ನನ್ನ ತಂಡದ ಸದಸ್ಯರ ಬಳಿ ಘಟನೆಯ ವಿವರ ತಿಳಿದುಕೊಂಡೆ. ಪ್ರಥಮ್‍ಗೆ ಮೊದಲು ಹೊಡೆದಿದ್ದು ಭುವನ್. ಪ್ರಥಮ್ ಏಕಾಏಕಿ ಹಲ್ಲೆ ಮಾಡಲಿಲ್ಲ. ನಂತರ ಇಡೀ ಚಿತ್ರತಂಡದ ಸದಸ್ಯರು ಇಬ್ಬರನ್ನೂ ಹಿಡಿದು ಸಮಾಧಾನ ಪಡಿಸುವ ಯತ್ನ ಮಾಡಿದರು. ಹೊಡೆದಾಡುತ್ತಿದ್ದವರನ್ನು ಬೇರೆ ಮಾಡಿದರು. ನಂತರ ಇಬ್ಬರೂ ತಮ್ಮ ತಮ್ಮ ರೂಮುಗಳಿಗೆ ತೆರಳಿದರು.

  ಭುವನ್ ಗಾಯದ ವಿಚಾರ ಹೇಳಿದ್ದು ಭುವನ್ ಅಲ್ಲ..!

  ಕೆಲವು ನಿಮಿಷಗಳ ನಂತರ ಓನರ್ ವಿಶಾಲಾಕ್ಷಮ್ಮ ಭುವನ್ ತೊಡೆಯಲ್ಲಿ ಗಾಯವಾಗಿದೆ ಎಂದು ಹೇಳಿದರು. ಅದಾದ ನಂತರವೇ ಪ್ರಥಮ್ ಭುವನ್‍ನ ತೊಡೆಗೆ ಕಚ್ಚಿದ್ದಾನೆ ಎಂಬ ಸುದ್ದಿ ಹಬ್ಬಿದ್ದು. ನಂತರ ಶೂಟಿಂಗ್ ಶುರು ಮಾಡಿದೆವು. ಭುವನ್ ನನ್ನ ಕೈ ನೋಯುತ್ತಿದೆ ಎಂದು ಹೇಳಿದರು. ಇದು ಹೊಡೆದಾಟದ ಎಫೆಕ್ಟ್. ಏನೂ ಆಗಲ್ಲ. ಕೆಲಸದ ಕಡೆ ಗಮನ ಕೊಡು, ಎಲ್ಲ ಸರಿ ಹೋಗುತ್ತೆ ಎಂದು ಹೇಳಿದೆ. 

  ಭುವನ್ ಆರಾಮಾಗಿಯೇ ಇದ್ದ..!

  ಅದಾದ ನಂತರ ಧಾರಾವಾಹಿಯ ಚಿತ್ರೀಕರಣ ರಾತ್ರಿ 9.45ರವರೆಗೂ ನಡೆಯಿತು. ಭುವನ್ ನಾರ್ಮಲ್ ಆಗಿಯೇ ಓಡಾಡಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಮುಗಿದಿತ್ತು. ಮಾರನೇ ದಿನ ಅದು ನ್ಯೂಸ್ ಆಯ್ತು. ಕೆಲವು ಚಾನೆಲ್ಲಿನವರು ನನ್ನನ್ನು ಕೇಳಿದರು. ನಾನು ಘಟನೆಯ ವಿವರ ನೀಡಿದೆ. 

  ಪವನ್ ಎಂಬುವ ವ್ಯಕ್ತಿಯೇ ಇಲ್ಲ..!

  ಅದು ನಿಜಕ್ಕೂ ನನಗೂ ಶಾಕಿಂಗ್ ನ್ಯೂಸ್. ಆ ದಿನ ನ್ಯೂಸ್ ಚಾನೆಲ್ಲುಗಳಲ್ಲಿ ಪವನ್ ಎಂಬ ವ್ಯಕ್ತಿ ಮಾತನಾಡಿದ. ಸಂಜು ಮತ್ತು ನಾನು ಧಾರಾವಾಹಿಯ ಅಸೋಸಿಯೇಟ್ ಡೈರೆಕ್ಟರ್ ಎಂದು ಹೇಳಿಕೊಂಡು ಮಾತನಾಡಿದ. ಆದರೆ, ಪವನ್ ಎಂಬ ವ್ಯಕ್ತಿ ಯಾರೋ ನಿರ್ದೇಶಕನಾದ ನನಗೂ ಗೊತ್ತಿಲ್ಲ. ನನ್ನ ಟೀಂನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಇಲ್ಲ. ನ್ಯೂಸ್ ಚಾನೆಲ್‍ಗಳಿಗೆ ಮಾತನಾಡಿದ ಆ ವ್ಯಕ್ತಿ ಯಾರು..? ನನಗೆ ಗೊತ್ತಿಲ್ಲ.

  ದೂರು ಕೊಟ್ಟಿದ್ದು 20 ಗಂಟೆಗಳ ನಂತರ..!

  ಘಟನೆ ನಡೆದಿರೋದು ಜುಲೈ 22ನೇ ತಾರೀಕು. ದೂರು ಕೊಟ್ಟಿರೋದು 23ನೇ ತಾರೀಕು ಸಂಜೆ. ಘಟನೆ ಮತ್ತು ದೂರಿನ ಮಧ್ಯೆ 20 ಗಂಟೆಗಳ ಗ್ಯಾಪ್ ಇದೆ. ಅಷ್ಟು ದೊಡ್ಡ ಗಾಯವಾಗಿದ್ದರೆ, ಭುವನ್ ಯಾಕೆ ಘಟನೆ ನಡೆದ ತಕ್ಷಣ ದೂರು ಕೊಡಲಿಲ್ಲ. ತಕ್ಷಣ ಯಾಕೆ ಚಿಕಿತ್ಸೆಯನ್ನೂ ಪಡೆಯಲಿಲ್ಲ. ಅದು ಯಕ್ಷ ಪ್ರಶ್ನೆ.

  ಚಿತ್ರಲೋಕದ ತನಿಖೆಯಲ್ಲಿ ಗೊತ್ತಾದ ಅಂಶವೆಂದರೆ, ತಲಘಟ್ಟಪುರ ಠಾಣೆಗೆ ಭುವನ್ ನಾರ್ಮಲ್ ಆಗಿಯೇ ನಡೆದುಕೊಂಡು ಬಂದರು. ಆಗ ಠಾಣೆಯಲ್ಲಿದ್ದ ಇನ್ಸ್‍ಪೆಕ್ಟರ್ ಇದನ್ನು ಗಮನಿಸಿ, ಕಂಪ್ಲೇಂಟ್ ತೆಗೆದುಕೊಂಡಿಲ್ಲ. ಫ್ರೆಂಡ್‍ಶಿಪ್ ಮಧ್ಯೆ ನಡೆದ ಸಣ್ಣ ಜಗಳವನ್ನು ಸ್ಟೇಷನ್‍ಗೇಕೆ ತರುತ್ತೀರಿ. ನೀವೇ ಮಾತನಾಡಿ ಸರಿಪಡಿಸಿಕೊಳ್ಳಿ.. ಎಂದು ಬುದ್ದಿಮಾತು ಹೇಳಿದ್ದಾರೆ. ಆದರೆ ಯಾವಾಗ ಪ್ರಕರಣ ನ್ಯೂಸ್ ಚಾನೆಲ್‍ಗಳಲ್ಲಿ ಬಂದು, ಟಿವಿಗಳಲ್ಲಿ ಭುವನ್ ತಮ್ಮ ತೊಡೆಗೆ ಪ್ರಥಮ್ ಕಚ್ಚಿದ್ದಾನೆ ಎಂದು ಫೋಟೋ ಮತ್ತು ವಿಡಿಯೋಗಳು ಹೊರಬಂದವೋ, ಆಗ ಪೊಲೀಸರು ದೂರು ಸ್ವೀಕರಿಸಿ, ಎಫ್‍ಐಆರ್ ಮಾಡಿಕೊಂಡಿದ್ದಾರೆ.

  ಎಲ್ಲಿ ಹೋಗಿದ್ದರು ಪ್ರಥಮ್..?

  ಇಷ್ಟೂ ಘಟನೆ ನಡೆಯುವಾಗ ಪ್ರಥಮ್ ಎಂಎಲ್‍ಎ ಚಿತ್ರದ ಶೂಟಿಂಗ್‍ನಲ್ಲಿದ್ದರು. ಧಾರಾವಾಹಿಯ ಶೂಟಿಂಗ್ ಮುಗಿಸಿ, ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದರು. ಪ್ರಥಮ್‍ಗೆ ಭುವನ್ ತನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿದ್ದು ನ್ಯೂಸ್ ಚಾನೆಲ್ಲುಗಳಲ್ಲಿ ಬಹಿರಂಗವಾದ ನಂತರ. ಎಂಎಲ್‍ಎ ಚಿತ್ರದ ನಿರ್ದೇಶಕರೇ, ಪ್ರಥಮ್‍ಗೆ ಮೊದಲು ಕೋರ್ಟ್‍ಗೆ ಹೋಗಿ ಜಾಮೀನು ತೆಗೆದುಕೊಂಡು ಬರುವಂತೆ ಸಲಹೆ ನೀಡಿದರು. ಅದರಂತೆ ಪ್ರಥಮ್, ಕೋರ್ಟ್‍ನಲ್ಲಿ ಶರಣಾಗಿ ಜಾಮೀನು ಪಡೆದುಕೊಂಡರು. ನಂತರ ಭುವನ್ ವಿರುದ್ಧ ದೂರು ನೀಡಿದರು. 

  ಈಗ ಭುವನ್ ಮನೆಯಲ್ಲಿಲ್ಲ. ಇಬ್ಬರ ಮಧ್ಯೆ ಇಷ್ಟು ದೊಡ್ಡ ಜಗಳ ಶುರುವಾಗಲು ಕಾರಣ ಏನು..? ಎಲ್ಲಿಂದ ಶುರುವಾಯ್ತು..? ಗೋಮಾಂಸದ ಕಥೆ ಏನು..?

  ಮುಂದಿನ ಭಾಗದಲ್ಲಿ ನೋಡಿ. 

   

 • ವಿವಾದಿತ ಸ್ಟಾರ್ ಪ್ರಥಮ್ ಸ್ಟೋರಿಗೆ ಟ್ವಿಸ್ಟ್ - ಈಗ ಭುವನ್ ವಿರುದ್ಧ ಪ್ರಥಮ್ ಕಂಪ್ಲೇಂಟ್ 

  pratham files complaint aganist bhuvan

  ಸಹನಟ ಭುವನ್​ ತೊಡೆಗೆ ಕಚ್ಚಿ, ಗಾಯಗೊಳಿಸಿದ್ದ ಪ್ರಥಮ್, ಈಗ ಭುವನ್ ವಿರುದ್ಧ ತಮ್ಮ ಮೇಲೆ ಹಲ್ಲೆ ನಡೆಸಿದ ಎಂಬ ಆರೋಪ ಮಾಡಿ ದೂರು ಕೊಟ್ಟಿದ್ದಾರೆ. ಶನಿವಾರ ಸಂಜೆ 4.30ರ ವೇಳೆಯಲ್ಲಿ ಭುವನ್ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರಂತೆ. ದೂರಿನ ಪ್ರಕಾರ, ಭುವನ್ ಪ್ರಥಮ್​ಗೆ ‘‘ಲೇ ಪ್ರಥಮ್ ಇವತ್ತು ನನಗೆ ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಕೊನೆ ದಿನ. ಆದರೆ, ನಿನಗೆ ಇವತ್ತೇ ಕೊನೆ ದಿನ’’ ಎಂದು ಹೇಳಿ ಹಿಗ್ಗಾಮುಗ್ಗಾ ಹೊಡೆದರಂತೆ. ಕುತ್ತಿಗೆ, ಬೆನ್ನಿಗೆಲ್ಲ ಗಾಯವಾಯಿತಂತೆ. ಆಗ ಧಾರಾವಾಹಿ ತಂಡದಲ್ಲಿದ್ದ ಕೆಲವರೇ ನನ್ನನ್ನು ಭುವನ್​ನಿಂದ ರಕ್ಷಿಸಿದರು ಎಂದು ದೂರಿದ್ದಾರೆ ಪ್ರಥಮ್. 

  ಘಟನೆ ನಡೆದ ಮೇಲೆ ಊರಿಗೆ ಹೋಗಿದ್ದ ಪ್ರಥಮ್​ಗೆ ವಿಷಯ ಗೊತ್ತಾಗಿದ್ದು ಮಾಧ್ಯಮಗಳ ಮೂಲಕ ಅಂತೆ. ಅದೂವರೆಗೆ ಪ್ರಥಮ್ ತನ್ನ ವಿರುದ್ಧ ದೂರು ನೀಡಿದ್ದಾರೆ ಎಂದೇ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಜಾಮೀನು ಪಡೆದು, ನಂತರ ಚಿಕಿತ್ಸೆ ಪಡೆದು ಈಗ ದೂರು ಕೊಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

  ಅಂದಹಾಗೆ ಪ್ರಥಮ್, ಭುವನ್ ವಿರುದ್ಧ ದೂರು ದಾಖಲಿಸಿರುವುದು ನಿನ್ನೆ ಅಂದ್ರೆ ಜುಲೈ 24ರ ರಾತ್ರಿ 11.30ರ ವೇಳೆಯಲ್ಲಿ.

  Related Articles :-

  ಕಚ್ಚಿಂಗ್ ಸ್ಟಾರ್ ಪ್ರಥಮ್ ಹುಚ್ಚಾಟ - ಆತ ‘ಪ್ರೀತ್ಸೆ’ ಚಿತ್ರದ ಉಪೇಂದ್ರನಾ..?

  ಸೈಕೋ ಪ್ರಥಮ್​ಗೆ ಶಿಕ್ಷೆಯಾಗಲಿ ಎಂದರು ಹರ್ಷಿಕಾ ಪೂಣಚ್ಚ

  Is Pratham The New Venkat?

  ಬಿಗ್​ಬಾಸ್ ಪ್ರಥಮ್​ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ

  ತೊಡೆ ಕಚ್ಚಿದ ಪ್ರಥಮ್ ನ್ಯಾಯಾಲಯಕ್ಕೆ ಶರಣು

  ಪೊಲೀಸರಿಗೂ ಸಿಕ್ಕದೆ ಬಿಗ್​ಬಾಸ್ ಪ್ರಥಮ್ ನಾಪತ್ತೆ - ಪ್ರಥಮ್ ವಿರುದ್ಧ ದೂರುಗಳು.. ಅಬ್ಬಬ್ಬಾ..!!!

  Udaya Mehta Not Producimg Pratham Movie 

  ಬಿಗ್ ಬಾಸ್ ಪ್ರಥಮ್ ಮತ್ತೊಮ್ಮೆ ಕಿರಿಕ್ - ಈ ಬಾರಿ ಗೆಳೆಯನ ತೊಡೆಯನ್ನೇ ಕಚ್ಚಿದ