ಒಳ್ಳೆಯ ಹುಡುಗ ಪ್ರಥಮ್, ತಮ್ಮ ಬಿಗ್‍ಬಾಸ್ ಸಂಭಾವನೆಯಲ್ಲಿ ಊರಿನಲ್ಲಿ ದೇವಸ್ಥಾನ ಕಟ್ಟಿಸುತ್ತಿದ್ದೇನೆ ಎಂದು ಹೇಳಿದ್ದರು.. ನೆನಪಿದೆ ತಾನೇ.. ಆ ದೇವಸ್ಥಾನ ಮುಕ್ತಾಯಗೊಂಡಿದ್ದು, ಪೂಜೆ ಪುನಸ್ಕಾರಗಳೂ ಆರಂಭವಾಗಿವೆ.
ಕೆಲವು ಕೆಲಸ ತುಂಬಾ ಆತ್ಮತೃಪ್ತಿ ಕೊಡುತ್ತೆ. ನಮ್ಮೂರಲ್ಲಿ ಹಿರಿಯರೆಲ್ಲರ ಜೊತೆ ನಿರ್ಮಿಸಿದ ಈ ದೇವಸ್ಥಾನ ನನಗೆ ಅಂತಾ ಆತ್ಮತೃಪ್ತಿ ಕೊಟ್ಟಿದೆ. ಊರಿನವರ ಕೆಲಸಕ್ಕೆ ನಾನು ಸಣ್ಣದಾಗಿ ಕೈಜೋಡಿಸಿದೆ. ಉದ್ಘಾಟನೆಗೆ ನನ್ನನ್ನೇ ಅತಿಥಿಯಾಗಿ ಕರೆದ್ರು.
ಯಾಕೋ ನಮ್ಮೂರಲ್ಲಿ ದೊಡ್ಡವರ ಎದುರು ಸ್ಟೇಜ್ ಮೇಲೆ ಕೂತ್ಕೊಳ್ಳೋಕೆ ಒಂಥರಾ ಆಯ್ತು. ಒಂದೆರಡು ದಿನ ಆದ್ಮೇಲೆ ನಾನೇ ಹೋಗಿ ದೇವಸ್ಥಾನ ನೋಡಿಕೊಂಡು ಖುಷಿಯಾಗಿ ಬಂದೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್.
ಅಂದಹಾಗೆ ದೇವಸ್ಥಾನಕ್ಕೊಂದು ಬೋರ್‍ವೆಲ್ ಹಾಕಿಸಬೇಕಂತೆ. ಆದಷ್ಟು ಬೇಗ ಮಾಡಿಸ್ತೀನಿ, ನನ್ನೂರು ನನಗೆ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ ಪ್ರಥಮ್.
ಹಲಗಾಪುರ, ಪ್ರಥಮ್ ಅವರ ಊರು. ಅಲ್ಲಿ ಪ್ರಥಮ್ ಸಹಾಯ ಹಸ್ತದೊಂದಿಗೆ ನಿರ್ಮಾಣವಾದ ದೇವಸ್ಥಾನ ಶಿವಾಲಂಕಾರೇಶ್ವರ.