` mahabharatha, - chitraloka.com | Kannada Movie News, Reviews | Image

mahabharatha,

  • 1000 ಕೋಟಿ ಮಹಾಭಾರತ ಕೈಬಿಟ್ಟ ಬಿ.ಆರ್.ಶೆಟ್ಟಿ

    br shetty drops 1000 crore

    ಭಾರತೀಯ ಚಿತ್ರರಂಗದ ಮಹಾದಾಖಲೆ ಎಂದೇ ಬಣ್ಣಿಸಲ್ಪಟ್ಟಿದ್ದ ಮಹಾಭಾರತ ಸಿನಿಮಾದಿಂದ ಕನ್ನಡಿಗ ಉದ್ಯಮಿ ಬಿ.ಆರ್.ಶೆಟ್ಟಿ  ಹಿಂದೆ ಸರಿದಿದ್ದಾರೆ. ಮಲಯಾಳಂನ ರಂಡಾಮೂಳಂ ಕಾದಂಬರಿ ಆಧರಿಸಿ ನಿರ್ಮಾಣವಾಗಬೇಕಿದ್ದ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಬೇಕಿತ್ತು. ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ನಟರನ್ನೆಲ್ಲ ಒಗ್ಗೂಡಿಸುವ ಪ್ಲಾನ್ ಮಾಡಲಾಗಿತ್ತು. ಈಗ ಸಂಪೂರ್ಣವಾಗಿ ಚಿತ್ರದಿಂದ ಹೊರಬಂದಿದ್ದಾರೆ ಬಿ.ಆರ್.ಶೆಟ್ಟ.

    ಅದಕ್ಕೆ ಕಾರಣ ಬೇರೇನಲ್ಲ, ಚಿತ್ರದ ಮೂಲ ಕತೆಗಾರ ಎಂ.ಟಿ.ವಾಸುದೇವನ್ ಮತ್ತು ನಿರ್ದೇಶಕ ಶ್ರೀಕುಮಾರ್ ನಡುವಿನ ಭಿನ್ನಾಭಿಪ್ರಾಯವಷ್ಟೇ ಕಾರಣ. ಶ್ರೀಕುಮಾರ್, ಇದರ ನಡುವೆ ಬೇರೊಂದು ಸಿನಿಮಾದಲ್ಲಿ ತೊಡಗಿಸಿಕೊಂಡಿರೋದು ವಾಸುದೇವನ್ ಕೆಂಗಣ್ಣಿಗೆ ಕಾರಣವಾಗಿ, ತಮ್ಮ ಕಥೆಯನ್ನು ಬಳಸಬೇಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ 1000 ಕೋಟಿ ಬಜೆಟ್‍ನ ಸಿನಿಮಾ ಕನಸನ್ನೇ ಕೈಬಿಟ್ಟಿದ್ದಾರೆ ಬಿ.ಆರ್.ಶೆಟ್ಟಿ.

  • Yograj Bhat To Direct Mahabharata

    yograj bhatt

    Director Yograj Bhat who is know for his romantic films will direct the epic Mahabharata soon. He is already working on the script with the help of subject experts and hopes to capture the entire Mahabharata in a single film.

    The producers are said to be insisting on making the film in other languages too apart from Kannada as the budget is very big. Bhat has agreed to it and thus it will be his first film in other languages. As of now the work is in an early stage and no plans for the cast or crew has been made yet.

     

  • ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

    nikhil gowda as abhimanyu

    ಜಾಗ್ವಾರ್ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಿಖಿಲ್ ಕುಮಾರಸ್ವಾಮಿ, ಕುರುಕ್ಷೇತ್ರ ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್, ಕುರುಕ್ಷೇತ್ರ ಚಿತ್ರದಲ್ಲಿ ಅಬಿಮನ್ಯು ಪಾತ್ರ ಮಾಡುತ್ತಿದ್ದಾರಂತೆ.

    ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರಕ್ಕೆ ಪಾತ್ರಧಾರಿಗಳ ಆಯ್ಕೆಯೇ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈಗಾಗಲೇ ಹರಿಪ್ರಿಯ ನರ್ತಕಿ ಪಾತ್ರದಲ್ಲಿ, ರೆಜಿನಾ ಭಾನುಮತಿ ಪಾತ್ರದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ.

    ದ್ರೌಪದಿಯ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಹೆಸರು ಖಚಿತವಾಗಿಲ್ಲ. ಬಹುತೇಕ ಮುಗುಳ್ನಗೆ ಸುಂದರಿ ಸ್ನೇಹಾ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ.

    ಇನ್ನು ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯರ ಪಾತ್ರದಲ್ಲಿ ನಟಿಸುತ್ತಿದ್ದು, ಶ್ರೀನಾಥ್ ದೃತರಾಷ್ಟ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಾಯಿಕುಮಾರ್, ಶಶಿಕುಮಾರ್ಗೆ ಪಾತ್ರವಿದೆಯಂತೆ. ಯಾವ ಪಾತ್ರ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

    ಕುಂತಿಯ ಪಾತ್ರಕ್ಕೆ ಜ್ಯೂಲಿ ಲಕ್ಷ್ಮಿಯನ್ನು ಕೇಳಲಾಗಿದ್ದು, ಅವರಿನ್ನೂ ಕನ್ಫರ್ಮ್ ಮಾಡಿಲ್ಲ. ಒಟ್ಟಿನಲ್ಲಿ ದರ್ಶನ್ ದುರ್ಯೋಧನನಾಗಿ, ರವಿಚಂದ್ರನ್ ಶ್ರೀಕೃಷ್ಣನಾಗಿ ನಟಿಸುತ್ತಿರುವ ಚಿತ್ರ, ಸೆಟ್ಟೇರುವ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ.

    ಚಿತ್ರ ಇದೇ ತಿಂಗಳು 29ರಂದು ಸೆಟ್ಟೇರಲಿದೆ.

    Related Articles :-

    ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

    Haripriya Confirmed For Kurukshetra

    ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

    Vivek Oberoi in Kurukshetra Say Reports

    Kurukshetra To Be Launched On July 23rd

    Krishna Ravichandran Stops Eating Meat

  • ಮುಗುಳುನಗೆ ನಂತರ ಭಟ್ಟರ ‘ಮಹಾಭಾರತ’

    yograj bhat's mahabharatha

    ಮುಗುಳುನಗೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಹಾಡುಗಳಂತೂ ಮಧುರವಾದ ಅಲೆಯನ್ನೇ ಸೃಷ್ಟಿಸಿವೆ. ಚಿತ್ರವೊಂದನ್ನು ಮುಗಿಸಿ ತೆರೆಗೆ ತರುವುದು ಹೆರಿಗೆಯಾದಷ್ಟೇ ಸಂಕಟ ಎಂದು ಆಗಾಗ್ಗೆ ಹೇಳುವ ಭಟ್ಟರು, ಈಗ ಮುಗುಳುನಗೆಯ ಹೆರಿಗೆಗೆ ಮೊದಲೇ ಹೊಸ ಚಿತ್ರಕ್ಕೆ ಸಿದ್ಧರಾಗಿದ್ದಾರೆ.

    ಭಟ್ಟರ ಮುಂದಿನ ಚಿತ್ರದ ಕಥಾವಸ್ತು ಮಹಾಭಾರತದ್ದು. ಈಗಾಗಲೇ ಸುಮಾರು 60 ಸೀನ್​ಗಳನ್ನು ಬರೆದಾಗಿದೆಯಂತೆ. ಮುಗುಳುನಗೆ ಚಿತ್ರದ ಟೆನ್ಷನ್ ಮುಗಿದ ನಂತರ ಮಹಾಭಾರತವನ್ನು ಕೈಗೆತ್ತಿಕೊಳ್ಳೋದಾಗಿ ಹೇಳಿದ್ದಾರೆ ಯೋಗರಾಜ್ ಭಟ್.

    ಭಟ್ಟರ ಮಹಾಭಾರತಕ್ಕೆ ಈಗಾಗಲೇ ನಿರ್ಮಾಪಕರೂ ಸಿಕ್ಕಿದ್ದಾರೆ. ಪೌರಾಣಿಕ ಚಿತ್ರವೆಂದರೆ, ಕಾಸ್ಟ್ಯೂಮ್ ಮತ್ತು ಸೆಟ್​ನ ವೈಭವ ಇರುತ್ತೆ. ಆದರೆ, ಮಹಾಭಾರತವನ್ನು ಅದರ ಹೊರತಾಗಿ ಐತಿಹಾಸಿಕ ಶೈಲಿಯಲ್ಲಿ ಹೇಳುವ ಪ್ರಯತ್ನ ನನ್ನದು ಎಂದಿದ್ದಾರೆ ಯೋಗರಾಜ್ ಭಟ್.

    ಮಹಾಭಾರತ ಚಿತ್ರ, ಕನ್ನಡದಲ್ಲಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಬರುತ್ತೆ ಎಂದಿದ್ದಾರೆ. ಆದರೆ, ಮಹಾಭಾರತದ ಯಾವ ಕಥೆಯನ್ನು ಭಟ್ಟರು ಚಿತ್ರ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಭಟ್ಟರು ಗುಟ್ಟು ಬಿಟ್ಟುಕೊಟ್ಟಿಲ್ಲ.

    Related  Articles :-

    Yograj Bhat To Direct Mahabharata

  • ಮುನಿರತ್ನ ಕುರುಕ್ಷೇತ್ರದಲ್ಲಿ ಅವಕಾಶ - ಶಕುನಿ ರವಿಶಂಕರ್, ಧೃತರಾಷ್ಷ್ಟ್ರ ಶ್ರೀನಾಥ್​ಗೆ ಉತ್ಸಾಹವೋ ಉತ್ಸಾಹ

    ravishankar in kurukshetra

    ದರ್ಶನ್ ಅಭಿನಯದ 50ನೇ ಚಿತ್ರ ಮುನಿರತ್ನ ಕುರುಕ್ಷೇತ್ರ ಚಿತ್ರ, ಸೆಟ್ಟೇರುವ ಮೊದಲೇ ಅಪಾರ ನಿರೀಕ್ಷೆ ಹುಟ್ಟಿಸುತ್ತಿದೆ. ಈಗ ಚಿತ್ರದ ಅತ್ಯಂತ ಪ್ರಮುಖ ಪಾತ್ರಕ್ಕೆ ಆರ್ಮುಗಂ ಖ್ಯಾತಿಯ ರವಿಶಂಕರ್ ಸೇರ್ಪಡೆಯಾಗಿದ್ದಾರೆ. ರವಿಶಂಕರ್​ಗೆ ಕುರುಕ್ಷೇತ್ರ ಚಿತ್ರದಲ್ಲಿ ಶಕುನಿಯ ಪಾತ್ರ.

    ಕುರುಕ್ಷೇತ್ರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದೇ ನನ್ನ ಅದೃಷ್ಟ. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ರವಿಶಂಕರ್. ಅವರ ಎಕ್ಸೈಟ್​ಮೆಂಟ್​ಗೆ ಕಾರಣವೂ ಇದೆ. ಏಕೆಂದರೆ ಕುರುಕ್ಷೇತ್ರಕ್ಕೆ ಕಾರಣಕರ್ತನೇ ಶಕುನಿ. ಮಹಾಭಾರತದ ಅತ್ಯಂತ ಪ್ರಮುಖ ಪಾತ್ರವದು.

    ಇನ್ನು ಧೃತರಾಷ್ಟ್ರನ ಪಾತ್ರದಲ್ಲಿ ನಟಿಸುತ್ತಿರುವ ಶ್ರೀನಾಥ್​ಗೂ ಅಂಥದ್ದೇ ಉತ್ಸಾಹ. ಶ್ರೀನಾಥ್​ಗೆ ಪೌರಾಣಿಕ ಚಿತ್ರ ಮತ್ತು ಪಾತ್ರಗಳು ಹೊಸದಲ್ಲ. ಈ ಹಿಂದೆ ಅಣ್ಣಾವ್ರ ಜೊತೆ ನಾಲ್ಕು ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಮತ್ತೆ ಅಂಥಾದ್ದೊಂದು ಅದ್ಭುತ ಅವಕಾಶ ಸಿಕ್ಕಿದೆ. ಹಳೆಯದೆಲ್ಲ ನೆನಪಾಗುತ್ತಿದೆ. ಅಭಿನಯಿಸಲು ಕಾತುರನಾಗಿದ್ದೇನೆ ಎಂದಿದ್ದಾರೆ ಶ್ರೀನಾಥ್.

    Related Articles :-

    ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

    ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

    ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

    ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

    ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

    Kurukshetra To be Launched on July 30th

    ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

    ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!