` rishi, - chitraloka.com | Kannada Movie News, Reviews | Image

rishi,

 • ಅಪ್ಪು ಹೊಸ ಹೆಜ್ಜೆಗೆ ಅಣ್ಣನ ಆಶೀರ್ವಾದ

  shivanna claps for appu's new movie

  ಪುನೀತ್ ರಾಜ್​ಕುಮಾರ್ ನಿರ್ಮಾಪಕರಾಗುತ್ತಿದ್ದಾರೆ. ಹಾಗೆಂದು ಅವರಿಗೆ ಚಿತ್ರ ನಿರ್ಮಾಣ ಹೊಸದೇನೂ ಅಲ್ಲ. ಈ ಹಿಂದೆ ತಂದೆ, ಅಣ್ಣಂದಿರ ಚಿತ್ರಗಳ ನಿರ್ಮಾಣದ ಹೊಣೆ ಹೊತ್ತು ಕೆಲಸ ಮಾಡಿದ ಅನುಭವ ಇದೆ. ಆದರೆ, ಈ ಬಾರಿ ಅವರು ಇಡುತ್ತಿರುವುದು ಕುಟುಂಬದ ಹಳೆಯ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅಲ್ಲ. ಪಿಆರ್​ಕೆ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ ಪುನೀತ್ ರಾಜ್​ಕುಮಾರ್. ಅವರು ನಿರ್ಮಿಸುತ್ತಿರುವ ಚಿತ್ರ ಕವಲು ದಾರಿ.

  ನಿರ್ಮಾಪಕಿ ಸ್ಥಾನದಲ್ಲಿ ಅಶ್ವಿನಿ ಪುನೀತ್ ಇದ್ದಾರೆ. ಹೊಸ ಸಂಸ್ಥೆಯ ಮೂಲಕ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪುನೀತ್, ಈ ಚಿತ್ರದಲ್ಲಿ ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿಯನ್ನು ನಾಯಕರನ್ನಾಗಿಸಿದ್ದಾರೆ. ಚಿತ್ರದ ನಿರ್ದೇಶಕ ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್. ನಾಯಕಿಯಾಗಿರುವು ರೋಶನಿ ಪ್ರಕಾಶ್. ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

  ತಮ್ಮನ ಹೊಸ ಸಾಹಸಕ್ಕೆ ಶುಭ ಕೋರಿದ್ದು ಅಣ್ಣ ಶಿವರಾಜ್ ಕುಮಾರ್. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕೂಡಾ ಅವರೇ. ಮುಹೂರ್ತದ ಸ್ಥಳಕ್ಕೆ ಆಗಮಿಸಿದ ಅಣ್ಣನಿಗೆ ಪುನೀತ್ ರಾಜ್​ಕುಮಾರ್ ನಮಸ್ಕರಿಸಿದಾಗ, ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವದಿಸಿದ್ದಾರೆ ಶಿವಣ್ಣ. ಚಿತ್ರದ ಮುಹೂರ್ತದಲ್ಲಿ ರಾಕ್​ಲೈನ್ ವೆಂಕಟೇಶ್, ರಕ್ಷಿತ್ ಶೆಟ್ಟಿ, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ​ರಾಜ್​ಕುಮಾರ್ ಕೂಡಾ ಇದ್ದು, ಪುನೀತ್ ಹೊಸ ಸಾಹಸಕ್ಕೆ ಶುಭ ಕೋರಿದರು. 

 • ಅಮೆರಿಕದಲ್ಲಿ ಕವಲುದಾರಿ ರಿಲೀಸ್

  kavaludaari to release in america his weekend

  ರಾಜ್ಯಾದ್ಯಂತ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿರುವ ಕವಲುದಾರಿ ಚಿತ್ರವನ್ನು ಅಮೆರಿಕದಲ್ಲಿ ಈ ವಾರ ರಿಲೀಸ್ ಮಾಡಲಾಗುತ್ತಿದೆ. ಅನಂತ್ ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಶನಿ ಪ್ರಕಾಶ್ ನಟನೆಯ ಚಿತ್ರಕ್ಕೆ ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನವಿದೆ.

  ಹಾಲಿವುಡ್ ಶೈಲಿಯ ಥ್ರಿಲ್ಲರ್‍ಗಳಂತೆ ತಣ್ಣಗೆ ಕಥೆ ಹೇಳಿ ಗೆದ್ದಿರುವ ಹೇಮಂತ್, ಪುನೀತ್ ರಾಜ್‍ಕುಮಾರ್ ಖುಷಿ ಪಡುವಂತೆ ಮಾಡಿದ್ದಾರೆ. ಮೊದಲ ನಿರ್ಮಾಣದ ಚಿತ್ರದಲ್ಲೇ ಮೆಚ್ಚುಗೆಯ ಮಹಾಪೂರ ಪಡೆದಿರುವ ಅಪ್ಪು, ಅಮೆರಿಕದಲ್ಲಿ 25ಕ್ಕೂ ಪ್ರಾಂತ್ಯಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. 

  ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಇಂಡಿಯಾನಾ, ಮಸಾಚುಸೆಟ್ಸ್, ನ್ಯೂಯಾರ್ಕ್, ಮಿಸ್ಸೌರಿ, ನ್ಯೂಜೆರ್ಸಿ, ಓಹಿಯೋ, ಒಕ್ಲಾಹಾಮಾ, ಪೆನ್ಸಿಲ್ವೇನಿಯಾ, ಟೆಕ್ಸಾಸ್, ವರ್ಜಿನಿಯಾ ಅಷ್ಟೇ ಅಲ್ಲ, ಅಮೆರಿಕದ ರಾಜಧಾನಿ ವಾಷಿಂಗ್ಟನ್‍ನಲ್ಲೂ ರಿಲೀಸ್ ಆಗುತ್ತಿದೆ. ಇದು ಅಮೆರಿಕದಲ್ಲಿರೋ ಕನ್ನಡ ಪ್ರೇಕ್ಷಕರಿಗಾಗಿ.

 • ಅಲಮೇಲಮ್ಮ ಶ್ರದ್ಧಾಗೆ ಈ ವಾರ ಡಬ್ಕುಡಬಲ್ ಧಮಾಕಾ

  operation almelamma movie image

  ಆಪರೇಷನ್ ಅಲಮೇಲಮ್ಮ ಜುಲೈ 21ಕ್ಕೆ ರಿಲೀಸ್ ಆಗ್ತಾ ಇದೆ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿ ಸುನಿ ನಿರ್ದೇಶನದ ಚಿತ್ರವಾಗಿರೋದ್ರಿಂದ ನಿರೀಕ್ಷೆಗಳೂ ಜೋರಾಗಿವೆ. ಚಿತ್ರದ ಹೀರೋ ರಿಷಿ, ಹೀರೋಯಿನ್ ಶ್ರದ್ಧಾ ಶ್ರೀನಾಥ್. ಅದೇ ಯು ಟರ್ನ್ ಖ್ಯಾತಿಯ ಶ್ರದ್ಧಾ.

  ಆದರೆ, ಜುಲೈ 21 ಮಾತ್ರ ಶ್ರದ್ಧಾಗೆ ಡಬ್ಕುಡಬಲ್ ಧಮಾಕಾ. ಏಕೆ ಗೊತ್ತಾ..? ಶ್ರದ್ಧಾ ಅಭಿನಯದ ಮಾಧವನ್ ಜೊತೆ ನಟಿಸಿರುವ ವಿಕ್ರಂವೇದ ಚಿತ್ರವೂ ಜುಲೈ 21ಕ್ಕೆ ಬಿಡುಗಡೆಯಾಗ್ತಾ ಇದೆ. ಸಿಂಪಲ್ ಸುನಿ, ತಮ್ಮ ಚಿತ್ರಕ್ಕೆ ಒಂದೇ ಒಂದು ಕಟ್ ಇಲ್ಲದೆ ಯು ಸರ್ಟಿಫಿಕೇಟ್ ಪಡೆದಿದ್ದಾರೆ ಅನ್ನೋದು ಅವರಿಗೆ ಪ್ರಶಸ್ತಿಯೇ ಸಿಕ್ಕಷ್ಟು ಖುಷಿಯಾಗಿದ್ದರೆ ಅಚ್ಚರಿಯಿಲ್ಲ.

  ಯು ಸರ್ಟಿಫಿಕೇಟ್ ಸಿಕ್ಕಿದ್ದನ್ನೂ ಸುನಿ ತಮ್ಮದೇ ಸ್ಟೈಲ್ನಲ್ಲಿ ಹೇಳಿಕೊಂಡಿದ್ದರು. ಸೆನ್ಸಾರ್ ನವರು ಕೇಳಿದರು ನಿಮಗ್ಯಾವುದಿಷ್ಟ ಎಂದು? ನನಗೆ ನೀವಿಷ್ಟ ಎಂದೆ ಅವರಿಗರ್ಥವಾಗಲಿಲ್ಲ yo'U' ಸರ್ ಅಂದೆ.. ಕೊಟ್ಟುಬಿಟ್ಟರು ಎಂದು ಟ್ವೀಟ್ ಮಾಡಿದ್ದರು ಸುನಿ. ಇಂಥ ಸುನಿ ಚಿತ್ರ ಎಂದ ಮೇಲೆ ತುಂಟ ಮಾತುಗಳಿಗೆ ಬರವಿಲ್ಲ. ಕಾದು ನೋಡಿ. ಆಪರೇಷನ್ಗೆ ಸಿದ್ಧರಾಗಿ.

  Related Articles :-

  ಅಲಮೇಲಮ್ಮನ ಹಿಂದಿನ ತರಲೆ ತುಂಟಾಟ ಕಥೆ, ತರಲೆ ತರಲೆಯಾಗಿ

  Operation Alamelamma Gets U Certificate

  Operation Alamelamma Trailer Released

  Hombale Films Take Up Operation Alamelamma

   

 • ಈಜ್ ಹಿ ಓಕೆ ವಿತ್ ಮಿ..? - ರಿಷಿ ಕೇಳಿದ್ದ ಪ್ರಶ್ನೆ

  is he okay with me says rishi

  ಪುನೀತ್ ರಾಜ್‍ಕುಮಾರ್, ತಮ್ಮದೇ ಬ್ಯಾನರ್‍ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಅವರ ಬ್ಯಾನರ್‍ನ ಮೊದಲ ಚಿತ್ರಕ್ಕೆ ನಾನೇ ನಿರ್ದೇಶಕ. ನೀವೇ ಹೀರೋ.. ಡೈರೆಕ್ಟರ್ ಹೇಮಂತ್ ರಾವ್ ಈ ಮಾತು ಹೇಳಿದಾಗ ರಿಷಿ ಕೇಳಿದ್ದ ಮೊದಲ ಪ್ರಶ್ನೆಯೇ ಅದು.. ಈಜ್ ಹಿ ಓಕೆ ವಿತ್ ಮಿ..?

  ಅಫ್‍ಕೋರ್ಸ್.. ಆಗ ತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಿಷಿಗೆ ಪುನೀತ್ ಬ್ಯಾನರ್‍ನ ಮೊದಲ ಸಿನಿಮಾಗೆ ಹೀರೋ ಆಗು ಎಂದರೆ ಆ ಪ್ರಶ್ನೆ ಮೂಡುವುದು ಸಹಜ. ಆದರೆ, ಪುನೀತ್‍ಗೆ ಆಪರೇಷನ್ ಅಲಮೇಲಮ್ಮ ಸಿನಿಮಾ, ರಿಷಿಯ ಆಕ್ಟಿಂಗ್ ಇಷ್ಟವಾಗಿತ್ತು. ಹೀಗಾಗಿಯೇ ಹೇಮಂತ್ ರಾವ್ ಅವರ ಬಳಿ, ಕವಲುದಾರಿ ಕಥೆಗೆ ಅವರು ಓಕೆಯಾಗ್ತಾರಾ..? ನಟಿಸ್ತಾರಾ..? ಕೇಳಿ ನೋಡಿ ಎಂದಿದ್ದರು. ಈಗ ಕವಲುದಾರಿ ಥಿಯೇಟರುಗಳ ಬಾಗಿಲಲ್ಲಿ ನಿಂತಿದೆ.

  ಈ ಚಿತ್ರದಲ್ಲಿನ ನನ್ನ ಪಾತ್ರವನ್ನು ಯೂನಿಫಾರ್ಮ್ ತೊಟ್ಟ ಪ್ರತಿಯೊಬ್ಬ ಪ್ರಾಮಾಣಿಕ ಅಧಿಕಾರಿಯೂ ತನಗೆ ರಿಲೇಟ್ ಮಾಡಿಕೊಳ್ತಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್. ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕಥೆ ಎಂದಿದ್ದಾರೆ ರಿಷಿ.

  ರಿಷಿ ಚಿತ್ರದಲ್ಲಿ ಅನಂತ್ ನಾಗ್ ಎದುರು ನಟಿಸಿದ್ದಾರೆ. ಥ್ರಿಲ್ಲಾಗಿಯೇ ನಟಿಸಿದ್ದ ಅವರಿಗೆ ಪ್ರತಿ ಹಂತದಲ್ಲೂ ನೆರವಾಗಿರುವುದು ರಂಗಭೂಮಿಯ ಅನುಭವ. ರಂಗಭೂಮಿ, ಪ್ರತಿಯೊಬ್ಬ ಕಲಾವಿದನ ಸ್ಟ್ರೆಂಗ್ತ್ ಮತ್ತು ವೀಕ್ನೆಸ್ ಎರಡನ್ನೂ  ಪರಿಚಯ ಮಾಡಿಸುತ್ತೆ ಎನ್ನುವ ರಿಷಿ, ಕವಲುದಾರಿ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 • ಐಪಿಎಲ್‍ನಲ್ಲೂ ಕವಲುದಾರಿ ಗುಂಗು

  kavaludaari reached out to ipl as well

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಮೊದಲ ಚಿತ್ರ ಕವಲುದಾರಿ ಚಿತ್ರದ ಟ್ರೇಲರ್ ಅದ್ಭುತ ಸದ್ದು ಮಾಡುತ್ತಿದೆ. ಎಷ್ಟರಮಟ್ಟಿಗೆಂದರೆ ಐಪಿಎಲ್‍ನಲ್ಲೂ ಕವಲುದಾರಿ ಗುಂಗು.

  ಇತ್ತೀಚೆಗೆ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕವಲುದಾರಿ ಚಿತ್ರದ ಟ್ರೇಲರ್ ಪ್ರದರ್ಶನಗೊಂಡಿದೆ. ಅಷ್ಟೇ ಅಲ್ಲ, ನಿರ್ದೇಶಕ ಹೇಮಂತ್ ರಾವ್ ಅವರ ಹೊಸ ಐಡಿಯಾ ಟಿಶ್ಯೂಪೇಪರ್‍ನಲ್ಲಿ ಪ್ರಚಾರ ಜಾರಿಯಾಗಿರುವುದು ಕೂಡಾ ಅಲ್ಲೇ. ಸುಮಾರು 2 ಲಕ್ಷ ಜನಕ್ಕೆ ಈಗಾಗಲೇ ಟಿಶ್ಯೂ ಪೇಪರ್ ಮೂಲಕ ಸಿನಿಮಾ ರೀಚ್ ಮಾಡಿಸಿರುವ ಚಿತ್ರತಂಡ, ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಿದೆ.

  ಅನಂತ್ ನಾಗ್, ರಿಷಿ, ಸುಮನ್ ರಂಗನಾಥ್, ರೋಶನಿ ಪ್ರಕಾಶ್, ಅಚ್ಯುತ್ ಕುಮಾರ್ ಅಭಿನಯದ ಸಿನಿಮಾ ಇದು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ  ಸಿನಿಮಾ ಕವಲುದಾರಿ.

 • ಕವಲು ದಾರಿಯಲ್ಲಿ ಹೊಸ ಪ್ರತಿಭೆಗಳ ದಂಡು

  kavaludaari movie image

  ಕವಲು ದಾರಿ. ಪುನೀತ್ ರಾಜ್‍ಕುಮಾರ್ ನಿರ್ಮಿಸುತ್ತಿರುವ ಸಿನಿಮಾ. ಅವರದ್ದೇ ಆದ ಪಿಆರ್‍ಕೆ ಬ್ಯಾನರ್‍ನಲಿ ರಿಷಿ ನಾಯಕರಾಗಿರುವ ಸಿನಿಮಾ. ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶಕ. ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ್ದ ಪುನೀತ್, ಅದಕ್ಕೆ ತಕ್ಕಂತೆ ಕವಲು ದಾರಿಯಲ್ಲಿ ಹೊಸ ಹೊಸ ಮುಖಗಳಿಗೇ ಆದ್ಯತೆ ಕೊಡುತ್ತಿದ್ದಾರೆ.

  ಚಿತ್ರದ ಎರಡು ಪ್ರಮುಖ ಪಾತ್ರಗಳಿಗೆ ಸಮನ್ವಿತಾ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಎಂಬ ಹೊಸ ತಾರೆಯರ ಆಗಮನವಾಗಿದೆ. ಇನ್ನು ಮಾರಿಕೊಂಡವರು ಚಿತ್ರದ ಮೂಲಕ ಗಮನ ಸೆಳೆದಿದ್ದ ಸುಲಿಲ್ ಕುಮಾರ್‍ಗೂ ಚಿತ್ರದಲ್ಲೊಂದು ಉತ್ತಮ ಪಾತ್ರವಿದೆ. ಒಟ್ಟಿನಲ್ಲಿ ಕವಲು ದಾರಿಯಲ್ಲಿ  ನವ ಪ್ರತಿಭೆಗಳ ಮಿಲನವಾಗುತ್ತಿದೆ.

  Related Articles :-

  ಕವಲು ದಾರಿಯಲ್ಲಿ ಚಿರಯೌವ್ವನೆ ಸುಮನ್ ರಂಗನಾಥ್

  Kavalu Daari Launched On Friday

  Hemanth Rao's 'Kavalu Daari' To Be Launched on Sep 22nd

  First Poster Of Kavalu Daari Released

  Ardha Satya is Now Kavalu Daari

  Hemanth Rao's New Film Titled Kavalu Daari

 • ಕವಲುದಾರಿ ಟೀಸರ್ ಸೂಪರ್‍ಹಿಟ್

  kavaludari teaser is superhit

  ಪುನೀತ್ ರಾಜ್‍ಕುಮಾರ್ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ ಚಿತ್ರದ ಟೀಸರ್ ಹೊರಬಿದ್ದಿದೆ. ಅಮೆರಿಕದಲ್ಲಿ ಬಿಡುಗಡೆ ಮಾಡಿರುವ ಚಿತ್ರದ ಟೀಸರ್‍ನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ ಪುನೀತ್. 

  ಇತ್ತೀಚೆಗಷ್ಟೇ ಟ್ವಿಟರ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಪುನೀತ್ ರಾಜ್‍ಕುಮಾರ್ ಮಾಡಿರುವ ಮೊದಲ ಟ್ವೀಟ್ ಇದು. ಕವಲುದಾರಿ ಟೀಸರ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಕವಲುದಾರಿಯಲ್ಲಿ ಥ್ರಿಲ್ಲರ್ ಕಥೆಯಿದೆ. ಅಮೆರಿಕದಿಂದ ಬಂದ ಮೇಲೆ ಪುನೀತ್ ಸರ್ ಸಿನಿಮಾ ನೋಡುತ್ತಾರೆ. ಅವರೂ ಕೂಡಾ ಎಕ್ಸೈಟ್ ಆಗಿದ್ದಾರೆ. ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದಾರೆ ಹೇಮಂತ್ ರಾವ್. ಅನಂತ್‍ನಾಗ್, ರೋಷಿನಿ ಪ್ರಕಾಶ್ ಅಭಿನಯದ ಚಿತ್ರದಲ್ಲಿ ಅಲಮೇಲಮ್ಮ ಖ್ಯಾತಿಯ ರಿಷಿ ಹೀರೋ.

  Related Articles :-

  'Kavalu Daari' Teaser Released

 • ಕವಲುದಾರಿ ನೋಡಿ.. ಆಮೇಲೆ ವೋಟ್ ಮಾಡಿ

  kavaludaari is all about political thriller

  ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಯಾರ ಪರವೂ, ವಿರುದ್ಧವೂ ಪ್ರಚಾರ ಮಾಡಲ್ಲ ಎಂದಿರುವ ಪುನೀತ್, ಮರೆಯದೇ ವೋಟ್ ಮಾಡಿ ಎನ್ನುವುದನ್ನು ಮರೆಯುವುದಿಲ್ಲ. ಹಾಗೆ ವೋಟ್ ಮಾಡಿ ಎನ್ನುತ್ತಲೇ, ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹಾ ಸಿನಿಮಾವನ್ನು ನಿರ್ಮಿಸಿ ಪ್ರೇಕ್ಷಕರ ಎದುರು ಇಟ್ಟಿದ್ದಾರೆ ಪುನೀತ್.

  ಈ ಸಿನಿಮಾ ನೋಡಿದ ಮೇಲೆ ಮತದಾರ ಖಂಡಿತಾ ಬದಲಾಗ್ತಾನೆ. ನಾನು ಯಾರಿಗೆ ವೋಟ್ ಹಾಕಬೇಕು ಅನ್ನೋದನ್ನು ಯೋಚಿಸುತ್ತಾನೆ. ತಮ್ಮ ಅಭ್ಯರ್ಥಿ ಯಾರು ಅನ್ನೋದನ್ನು ಖಂಡಿತಾ ತಿಳಿದುಕೊಳ್ಳೋ ಪ್ರಯತ್ನ ಮಾಡ್ತಾನೆ. ಮತ ಹಾಕುವ ಮುನ್ನ ಪ್ರತಿಯೊಬ್ಬ ಮತದಾರನನ್ನೂ ಅಭ್ಯರ್ಥಿಯ ಬಗ್ಗೆ ಯೋಚಿಸುವಂತೆ ಮಾಡಲಿದೆ ಈ ಸಿನಿಮಾ ಎನ್ನುವುದು ನಿರ್ದೇಶಕ ಹೇಮಂತ್ ರಾವ್ ಮಾತು.

  ಹಾಗಾದರೆ ಚಿತ್ರದಲ್ಲಿ ಅಂಥದ್ದೇನಿದೆ.. ತುಂಬಾ ಲೇಟ್ ಏನಿಲ್ಲ. ಸಿನಿಮಾ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ.

 • ಕವಲುದಾರಿ ರಿಷಿಗೆ ಆಪರೇಷನ್ ಮದುವೆ 

  kavaludaari rishi engaged

  ಆಪರೇಷನ್ ಅಲಮೇಲಮ್ಮ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ, ಕವಲುದಾರಿಯಲ್ಲಿ ಮನಸೂರೆಗೊಂಡ ನಟ ರಿಷಿ, ಈಗ ಮದುವೆಯ ಆಪರೇಷನ್‍ಗೆ ಒಳಗಾಗಿದ್ದಾರೆ. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಬಂದ ರಿಷಿಗೆ, ಪ್ರೇಮದ ಲೋಕ ಸೇರಿದ್ದು ಕೂಡಾ ರಂಗಭೂಮಿಯಲ್ಲಿದ್ದಾಗಲೇ ಎನ್ನುವುದು ವಿಶೇಷ. ರಿಷಿ ಮದುವೆಯಾಗುತ್ತಿರುವ ಹುಡುಗಿ ಸ್ವಾತಿ. ತಮಿಳಿನವರು.

  ನನ್ನ ಅವರ ಪರಿಚಯ ಆಗಿದ್ದು ರಂಗಭೂಮಿಯಲ್ಲಿ. ನಾಟಕವೊಂದರ ರಿಹರ್ಸಲ್‍ನಲ್ಲಿ ಮೊದಲ ಬಾರಿಗೆ ಭೇಟಿಯಾದೆವು. 2 ವರ್ಷದ ಸ್ನೇಹ, ಒಂದ ವರ್ಷದ ಪ್ರೀತಿ ಎನ್ನುವ ರಿಷಿ, ಸ್ವಾತಿಗೆ ಕನ್ನಡವನ್ನೂ ಕಲಿಸಿಬಿಟ್ಟಿದ್ದಾರೆ.

  ತಮಿಳುನಾಡು ಮೂಲದ ಸ್ವಾತಿ ಓದಿದ್ದು, ಬೆಳೆದಿದ್ದು ಜಪಾನ್‍ನಲ್ಲಿ. ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಸ್ವಾತಿ, ಕಂಪೆನಿಗಳಿಗೆ ಕಂಟೆಂಟ್ ರೈಟರ್ ಆಗಿದ್ದಾರೆ. ರಂಗಭೂಮಿ ನಂಟಿದ್ದರೂ, ಬರವಣಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದಾರೆ ಸ್ವಾತಿ. ಇಬ್ಬರ ಮದುವೆಗೆ ಹಿರಿಯರು ಓಕೆ ಎಂದಿದ್ದು, ನಿಶ್ಚಿತಾರ್ಥವೂ ಆಗಿದೆ. 

 • ಕವಲುದಾರಿ.. 3ನೇ ವಾರ.. 6 ಕೋಟಿ..

  kavaludaari running successfully

  ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ, ಗೆಲುವಿನ ನಗಾರಿ ಬಾರಿಸಿದೆ. ಚಿತ್ರ 2 ವಾರ ಪೂರೈಸಿ, 3ನೇ ವಾರಕ್ಕೆ ಕಾಲಿಟ್ಟಿದೆ. ದೇಶ ವಿದೇಶದಲ್ಲೂ ಸದ್ದು ಮಾಡುತ್ತಿರುವ ಚಿತ್ರ ಈಗಾಗಲೇ 6 ಕೋಟಿ ಲಾಭ ಗಳಿಸಿದೆಯಂತೆ. ಚಿತ್ರತಂಡವೇ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿರೋದು ವಿಶೇಷ.

  ಕವಲುದಾರಿ ರಾಜ್ಯಾದ್ಯಂತ 180 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಒಳ್ಳೆಯ ಚಿತ್ರಗಳನ್ನು ಜನ ಯಾವತ್ತೂ ಕೈಬಿಟ್ಟಿಲ್ಲ ಎನ್ನುವುದಕ್ಕೆ ಕವಲುದಾರಿ ಮತ್ತೊಂದು ಸಾಕ್ಷಿ ಎಂದಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಗೋಧಿಬಣ್ಣ ನಂತರ ಸುದೀರ್ಘ ಗ್ಯಾಪ್ ಬಳಿಕ ಬಂದ ಹೇಮಂತ್ ರಾವ್, ಇದು 2ನೇ ಸತತ ಸಕ್ಸಸ್ಸು.

  ನಾಯಕ ನಟ ರಿಷಿ, ಅನಂತ್‍ನಾಗ್ ಕೂಡಾ ಫುಲ್ ಹ್ಯಾಪಿ. ಏಕೆಂದರೆ, ರಿಷಿಗೂ ಇದು ಸತತ 2ನೇ ಯಶಸ್ಸು. ಅನಂತ್‍ನಾಗ್‍ಗೆ, ಹೇಮಂತ್ ಮೇಲಿಟ್ಟ ವಿಶ್ವಾಸ ಈ ಬಾರಿಯೂ ಗೆದ್ದಿತು ಎಂಬ ಖುಷಿ. 

  ಇದರ ಜೊತೆಗೆ ಕವಲುದಾರಿಯ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರೀಮೇಕ್ ರೈಟ್ಸ್‍ಗೆ ಮಾತುಕತೆ ನಡೆಯುತ್ತಿದೆ. ಪುನೀತ್ ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ.

 • ಕವಲುದಾರಿಯ ರೋಷನಿಗೆ ಮೇಕಪ್ಪೇ ಇಲ್ಲ..!

  roshini prakash acts in kavaludaari with no makeup

  ಕವಲುದಾರಿ ಚಿತ್ರದ ಹೀರೋಯಿನ್ ರೋಷನಿ ಪ್ರಕಾಶ್. ಹೆಸರಿನಲ್ಲೇ ಸೂರ್ಯನನ್ನೂ, ಬೆಳಕಿನ ಪ್ರಕಾಶವನ್ನೂ ಹೊಂದಿರುವ ಈ ಚೆಲುವೆಗೆ ನಿರ್ದೇಶಕ ಹೇಮಂತ್ ರಾವ್ ಮೇಕಪ್ಪನ್ನೇ ಹಾಕಿಸಿಲ್ಲ. ಕಾರಣ ಇಷ್ಟೆ, ಕವಲುದಾರಿಯಲ್ಲಿ ರೋಷನಿಯದ್ದು ಪ್ರಿಯಾ ಎಂಬ ಯುವತಿಯ ಪಾತ್ರ. ಜರ್ನಲಿಸ್ಟ್ ಆಗಿರುವ ಅಪ್ಪ, ಪದೇ ಪದೇ ಮಾಡಿಕೊಳ್ಳುವ ಎಡವಟ್ಟುಗಳಿಂದ ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತಾರೆ. ಆ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದರೆ, ಅವರ ಮಗಳಾಗಿ, ಇಡೀ ಮನೆಯ ಜವಾಬ್ದಾರಿ ಹೊತ್ತು ನಿಲ್ಲುವ ಪಾತ್ರ ರೋಷನಿ ನಟಿಸಿರುವ ಪ್ರಿಯಾ ಎಂಬ ಪಾತ್ರದ್ದು.

  ಆ ಪಾತ್ರಕ್ಕೆ ಮೇಕಪ್ ಬೇಕಿರಲಿಲ್ಲ. ವಿಶೇಷ ಕೇಶವಿನ್ಯಾಸವೂ ಬೇಕಿರಲಿಲ್ಲ. ಒಬ್ಬ ಮಧ್ಯಮವರ್ಗದ ಮನೆಯ ಹುಡುಗಿ ಹೇಗಿರುತ್ತಾಳೋ ಹಾಗೆ ಇರಬೇಕಿತ್ತು. ಹಾಗೆಯೇ ನಟಿಸಿದ್ದೇನೆ ಎಂದಿದ್ದಾರೆ ರೋಷನಿ.

  ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೇ ಕಾರಣ, ಅದು ಪುನೀತ್ ಸರ್ ಬ್ಯಾನರ್ ಎನ್ನುವುದು, ಎರಡನೇ ಕಾರಣ ನಿರ್ದೇಶಕ ಹೇಮಂತ್ ರಾವ್, 3ನೇ ಕಾರಣ ಅನಂತ್ ಸರ್ ಇರುತ್ತಾರೆ ಎನ್ನುವುದು.. ಹೀಗೆ ಲಿಸ್ಟುಗಳ ಸರಮಾಲೆ ಒಪ್ಪಿಸುವ ರೋಷನಿ, ಅಚ್ಯುತ್ ಕುಮಾರ್ ನಟನೆಗೆ ಬೆರಗಾಗಿದ್ದರಂತೆ.

  ಅವರು ಅಳುವಾಗ, ನಗುವಾಗ ಅದು ನಟನೆಯೋ.. ನಿಜಕ್ಕೂ ಹಾಗಿದ್ದಾರೋ ಎಂದು ಕನ್‍ಫ್ಯೂಸ್ ಆಗುವಷ್ಟು ಸಹಜವಾಗಿ ನಟಿಸುತ್ತಿದ್ದರು. ಅವರಿಂದ ಕಲಿತದ್ದು ಅಪಾರ ಎಂದಿದ್ದಾರೆ ರೋಷನಿ. 

   

 • ಕವಲುದಾರಿಯಲ್ಲಿ ರಾಜಕೀಯದ ಕ್ರೈಂ ವಲ್ರ್ಡ್

  kavaludaari is political crime thriller

  ಕವಲುದಾರಿ ಚಿತ್ರದಲ್ಲಿರೋ ಕಥೆ ಏನು..? ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಎಂಬ ಕಾರಣಕ್ಕೆ ಕುತೂಹಲ ಸೃಷ್ಟಿಸಿರುವ ಚಿತ್ರದಲ್ಲಿ ನಿರೀಕ್ಷೆ ಹುಟ್ಟಿಸಿರುವುದು ಅದೊಂದೇ ಅಲ್ಲ. ನಿರ್ದೇಶಕ ಹೇಮಂತ್ ರಾವ್, ಅನಂತ್ ನಾಗ್ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಅಜನೀಶ್ ಸಂಗೀತ ಅದ್ಭುತವಾಗಿ ಕೇಳಿಸುತ್ತಿದೆ. ರಿಷಿ, ಡಿಫರೆಂಟಾಗಿ ಕಾಣಿಸುತ್ತಿದ್ದರೆ, ಸುಮನ್ ರಂಗನಾಥ್ ಮತ್ತಷ್ಟು ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಎಂಬುದೇ ಕುತೂಹಲ.

  ಅನಂತ್ ನಾಗ್ ಪಾತ್ರದ ಹೆಸರು ಮುತ್ತಣ್ಣ. ಅದು ಜಮ್ಮುಕಾಶ್ಮೀರದಲ್ಲಿ ಹುತಾತ್ಮರಾದ ಯೋಧನೊಬ್ಬನ ಹೆಸರು. ಚಿತ್ರದಲ್ಲಿ ಅನಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ. ಅವರ ಬಳಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿ ರಿಷಿ, ತಮ್ಮ ಮುಂದೆ ಇರುವ ಕೇಸ್‍ಗಳ ಅನುಮಾನ ಬಗೆಹರಿಸಿಕೊಳ್ಳೋಕೆ ಬರುತ್ತಾರೆ. ರಿಷಿ, ಕ್ಲೂಗಳನ್ನು ಹುಡುಕಿ ತೆಗೆಯುವುದರಲ್ಲಿ ಎಕ್ಸ್‍ಪರ್ಟ್. 

  ಹೀಗೆ ಸಾಗುತ್ತಾ ಹೋಗುವ ಕಥೆಯಲ್ಲಿ ನಿಜಕ್ಕೂ ಹೈಲೈಟ್ ಆಗಿರುವುದು ರಾಜಕೀಯ ಮತ್ತು ಕ್ರೈಂ. 

  ನಾನು ರಾಜಕೀಯದಲ್ಲೂ ಇದ್ದು ಬಂದವನು. ಹೀಗಾಗಿ ಇದು ನನಗೆ ವಾಸ್ತವಕ್ಕೆ ಹತ್ತಿರ ಎನಿಸಿತು. ಕಥೆ ಇಷ್ಟವಾಯಿತು ಎನ್ನುತ್ತಾರೆ ಅನಂತ್‍ನಾಗ್.

  ರಾಜಕೀಯ ಮತ್ತು ಕ್ರೈಂ ಬೇರೆಬೇರೆಯಾಗಿಯೇನೂ ಉಳಿದಿಲ್ಲ. ಆದರೆ, ನೇರವಾಗಿ ಹೇಳುವುದಕ್ಕೂ ಸಾಧ್ಯವಿಲ್ಲ. ಹೀಗಿರುವಾಗ, ಈ ಚಿತ್ರದಲ್ಲಿ ಅವುಗಳನ್ನು ಹೇಗೆ ಹೇಳಿದ್ದಾರೆ ಎನ್ನುವುದೇ ಕವಲುದಾರಿ ಕುತೂಹಲ.

 • ಕಾಳಿ ಸ್ವಾಮಿಯ ಹೊಸ ಅವತಾರ..!

  kaali swamy image

  ಕಾವಿಧಾರಿಯಾಗಿ, ಟಿವಿ ನ್ಯೂಸ್ ಚಾನೆಲ್ಲುಗಳಲ್ಲಿ ಧಾರ್ಮಿಕ ವಿಚಾರದ ಬಗ್ಗೆ ಅತ್ಯುಗ್ರವಾಗಿ ಮಾತನಾಡುತ್ತಿದ್ದ ಕಾಳಿ ಸ್ವಾಮಿ ಅಲಿಯಾಸ್ ರಿಷಿ ಕುಮಾರ್ ನಿತ್ಯಾನಂದ ಪ್ರಕರಣದಲ್ಲಿ ರಾಜ್ಯಾದ್ಯಂತ ಫೇಮಸ್ ಆಗಿಬಿಟ್ಟರು. ಅಷ್ಟೇ ಬೇಗ ಕುಖ್ಯಾತಿಯನ್ನೂ ಸಂಪಾದಿಸಿದ್ದು ಎಲ್ಲರಿಗೂ ಗೊತ್ತು. ಆದರೆ, ಅವರೊಳಗೊಬ್ಬ ಅದ್ಭುತ ನೃತ್ಯ ಕಲಾವಿದನಿದ್ದಾನೆ ಎನ್ನುವುದು ಆಮೇಲೆ ಗೊತ್ತಾಗಿತ್ತು.

  ಅದಾದ ಮೇಲೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ರಿಷಿಕುಮಾರ್ ಅಲಿಯಾಸ್ ಕಾಲಿ ಸ್ವಾಮಿ, ಈಗ ಮಕ್ಕಳ ಸಿನಿಮಾವೊಂದರಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಸನ್ಯಾಸಿ ಮಾರ್ಗವನ್ನು ಹಿಡಿದಿದ್ದರೂ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡು, ನೃತ್ಯ ಪ್ರತಿಭೆ ತೋರಿಸಿದ್ದ ಕಾಳಿ ಸ್ವಾಮಿ, ಸರ್ವಸ್ಯ ನಾಟ್ಯಂ ಎಂಬ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅದು ಮಕ್ಕಳ ಚಿತ್ರ. ಆ ಚಿತ್ರದಲ್ಲಿ ರಿಷಿ ಕುಮಾರರದ್ದು ನೃತ್ಯ ಶಿಕ್ಷಕರ ಪಾತ್ರವಂತೆ.

 • ಕೇರಳ, ಅಮೆರಿಕಕ್ಕೆ ಕವಲುದಾರಿ ಪಯಣ

  kavaludaari to release in kerala and in united states

  ರಾಜ್ಯಾದ್ಯಂತ ವಿಭಿನ್ನತೆಯ ಮೂಲಕವೇ ಗಮನ ಸೆಳೆದಿರುವ, ಕ್ಲಾಸ್ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಕವಲುದಾರಿ ಸಿನಿಮಾ, ವಿದೇಶಕ್ಕೆ ಹೊರಟು ನಿಂತಿದೆ. ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ಕಡೆ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿಯೇ ಈಗ ಸಿನಿಮಾಗೆ ಭರ್ಜರಿ ಡಿಮ್ಯಾಂಡ್ ಬಂದುಬಿಟ್ಟಿದೆ.

  ಪುನೀತ್ ರಾಜ್‍ಕುಮಾರ್, ಅಶ್ವಿನಿ ಪುನೀತ್ ಇಬ್ಬರೂ ಜನರ ನಡುವೆ ಸಿನಿಮಾ ನೋಡಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದಾರೆ. ಅದೇ ವೇಳೆಗೆ ಅತ್ತ ಅಮೆರಿಕದಿಂದ ಡಿಮ್ಯಾಂಡ್ ಶುರುವಾಗಿದೆ. ಅಮೆರಿಕದಲ್ಲಿ ಎಷ್ಟು ಸೆಂಟರ್‍ಗಳಲ್ಲಿ ರಿಲೀಸ್ ಮಾಡಬೇಕು ಎಂದು ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಅದ್ಕಿಂತ ಇನ್ನೊಂದು ಖುಷಿಯೆಂದರೆ, ಮಲಯಾಳಂನಲ್ಲಿ ಕವಲುದಾರಿ ಬಿಡುಗಡೆಗೆ ವಿತರಕರು ಮುಂದೆ ಬಂದಿರೋದು. ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿಕೊಡಿ ಎಂದು ಕೇರಳದ ವಿತರಕರು ಬೆನ್ನು ಹತ್ತಿದ್ದಾರೆ. ಒಟ್ಟಿನಲ್ಲಿ ಕವಲುದಾರಿ ಅದೃಷ್ಟ ಖುಲಾಯಿಸಿದೆ.

 • ಗುಡ್ ಲುಕ್ ಪವರ್ ಸ್ಟಾರ್ - ಸ್ಯಾಂಡಲ್‍ವುಡ್ ಶುಭಾಶಯ

  sandalwood wishes good luck to kavaludaari

  ಪಿಆರ್‍ಕೆ ಬ್ಯಾನರ್ ಮೂಲಕ ನಿರ್ಮಾಪಕರೂ ಆದ ಪುನೀತ್ ರಾಜ್‍ಕುಮಾರ್, ಸಿನಿಮಾ ನಿರ್ಮಾಣ ಖುಷಿ, ಕಿಕ್ ಎರಡನ್ನೂ ಕೊಟ್ಟಿದೆ ಎಂದಿದ್ದಾರೆ. ಕವಲುದಾರಿ, ಕನ್ನಡದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ ಸಿನಿಮಾ ಇದು.

  ತಮ್ಮನಿಗೆ ಮೊದಲು ಶುಭಾಶಯ ತಿಳಿಸಿರುವುದು ಅಣ್ಣ ಶಿವಣ್ಣ. ಸ್ವತಃ ನಟನಾಗಿ, ಇನ್ನೊಬ್ಬ ನಟನಿಗೆ ಸಿನಿಮಾ ಮಾಡಿದ್ದಾರೆ ಅಂದ್ರೆ, ಕಥೆ ನಿಜಕ್ಕೂ ಪವರ್‍ಫುಲ್ಲಾಗೇ ಇರುತ್ತೆ. ಅಪ್ಪು ಸರ್, ಸಿನಿಮಾ ನೋಡೋಕೆ ನಾನೂ ಕಾಯ್ತಿದ್ದೇನೆ ಎಂದಿರುವುದು ರಾಕಿಂಗ್ ಸ್ಟಾರ್ ಯಶ್.

  ಪುನೀತ್ ಅವರ ಸಂಬಂಧಿಯೂ ಆಗಿರುವ ನಟ ಶ್ರೀಮುರಳಿ ಕೂಡಾ ಪುನೀತ್‍ರ ಮೊದಲ ಪ್ರಯತ್ನಕ್ಕೆ ಶುಭವಾಗಲಿ ಎಂದಿದ್ದಾರೆ.

 • ಟಿಶ್ಯೂ ಪೇಪರ್‍ನಲ್ಲಿ ಕವಲುದಾರಿ ಪ್ರಮೋಷನ್

  kavaludaari promotions on tissue paaper

  ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ಕಾಫಿ ಕಪ್ಪುಗಳಲ್ಲಿ ಪ್ರಮೋಟ್ ಮಾಡಿದ್ದ ನಿರ್ದೇಶಕ ಹೇಮಂತ್ ರಾವ್, ಕವಲುದಾರಿ ಚಿತ್ರವನ್ನು ಟಿಶ್ಯೂ ಪೇಪರ್‍ಗಳಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಟಿಶ್ಯೂ ಪೇಪರ್‍ಗಳಲ್ಲಿ ಚಿತ್ರದ ವಿವರಗಳನ್ನು ಮುದ್ರಿಸಿ, ಜನರನ್ನು ರೀಚ್ ಆಗಲು ಹೊರಟಿದ್ದಾರೆ.

  ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ. ಚಿತ್ರದ ಪ್ರಮೋಷನ್‍ಗೆ ಸ್ವತಃ ಪುನೀತ್ ಇದ್ದಾರೆ. ಅನಂತ್‍ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಷನಿ ಪ್ರಕಾಶ್ ಅಭಿನಯದ ಸಿನಿಮಾ ಕವಲುದಾರಿ.

  ಸಿನಿಮಾ ಪ್ರಚಾರಕ್ಕೆ ಈಗ ಪೋಸ್ಟರ್‍ಗಳಿಲ್ಲ, ಬ್ಯಾನರುಗಳೂ ಇಲ್ಲ. ಹೀಗಿರುವಾಗ ಚಿತ್ರದ ಪ್ರಚಾರಕ್ಕೆ ವಿಭಿನ್ನ ಐಡಿಯಾ ಕಂಡುಕೊಳ್ಳುವುದು ಅನಿವಾರ್ಯವೂ ಹೌದು. ಹೇಮಂತ್ ರಾವ್ ವಿಭಿನ್ನ ಹೆಜ್ಜೆಯಿಟ್ಟಿದ್ದಾರೆ.

 • ತಮಿಳಿಗೆ ಹೊರಟರು ಅಲಮೇಲಮ್ಮನ ರಿಷಿ

  rishi in dhanu's banner

  ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಲಡ್ಡುಗಳು ಒಂದರ ಹಿಂದೊಂದರಂತೆ ಬಾಯಿಗೆ ಬೀಳುತ್ತಿವೆ. ಆಪರೇಷನ್ ಅಲಮೇಲಮ್ಮ ನಂತರ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಚಿತ್ರ ಕವಲುದಾರಿಯಲ್ಲಿ ಅವಕಾಶ ಪಡೆದ ರಿಷಿ, ಈಗ ತಮಿಳಿನಲ್ಲೂ ಚಾನ್ಸ್ ಗಿಟ್ಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ನಿರ್ಮಿಸುತ್ತಿರುವ ಚಿತ್ರದಲ್ಲಿ ರಿಷಿ ಹೀರೋ.

  ತಮಿಳಿನ ಆ ಚಿತ್ರದಲ್ಲಿ ಧನುಷ್ ನಿರ್ಮಾಪಕರಷ್ಟೇ. ಇಸ್ಲಾಹುದ್ದೀನ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.

 • ಧನುಷ್ ಕನ್ನಡ ಚಿತ್ರಕ್ಕೆ ಮಲೆಯಾಳಿ ಹೀರೋಯಿನ್

  reba monica is heroine in dhanush's debut production

  ತಮಿಳು ಸೂಪರ್‍ಸ್ಟಾರ್ ಧನುಷ್, ಕನ್ನಡದಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರದ ಹೀರೋ ಅಲಮೇಲಮ್ಮ ಖ್ಯಾತಿಯ ರಿಷಿ. ಈಗ ಹೀರೋಯಿನ್ ಆಯ್ಕೆಯೂ ಆಗಿದೆ. ರೆಬಾ ಮೋನಿಕಾ ಜಾನ್ ಎಂಬ ಮಲೆಯಾಳಿ ಸುಂದರಿ, ರಿಚಿ ಎದುರು ನಾಯಕಿಯಾಗುತ್ತಿದ್ದಾರೆ.

  ಇಲ್ಲಾವುದ್ದೀನ್ ನಿರ್ದೇಶನದ ಸಿನಿಮಾಗೆ ಧನುಷ್ ಅಷ್ಟೇ ಅಲ್ಲ, ನಿರ್ದೇಶಕ ಜೇಕಬ್ ವರ್ಗಿಸ್ ಕೂಡಾ ನಿರ್ಮಾಪಕರು. ರೆಬಾ, ಮಲೆಯಾಳಿಯಾದರೂ ಹುಟ್ಟಿದ್ದು ಹಾಗೂ ಮಾಸ್ಟರ್ ಡಿಗ್ರಿ ಓದಿದ್ದು ಬೆಂಗಳೂರಿನಲ್ಲೇ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರೆಬಾ, ಮಾಡೆಲ್ ಕೂಡಾ ಹೌದು. ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.

  Related Articles :-

  Rishi To Star In Dhanush's First Kannada Production

  ಕನ್ನಡ ಸಿನಿಮಾ ಮಾಡ್ತಾರಾ ಧನುಷ್..?

  ತಮಿಳಿಗೆ ಹೊರಟರು ಅಲಮೇಲಮ್ಮನ ರಿಷಿ

 • ಮಲ್ಟಿ ಸ್ಟಾರ್ ಅಲ್ಲ.. ಮಲ್ಟಿ ಸ್ಟಾರ್ ಡೈರೆಕ್ಟರ್ಸ್ ಸಿನಿಮಾ..!

  its mult directors movie time in sandalwood

  ಹಲವು ಸ್ಟಾರ್ ನಟರೂ ಒಂದೇ ಚಿತ್ರದಲ್ಲಿ ನಟಿಸಿದರೆ, ಅದು ಮಲ್ಟಿ ಸ್ಟಾರ್ ಸಿನಿಮಾ. ಹಲವು ನಿರ್ದೇಶಕರು ಒಂದೇ ಚಿತ್ರದಲ್ಲಿ ತೊಡಗಿಸಿಕೊಂಡರೆ.. ಅದನ್ನು ಮಲ್ಟಿ ಸ್ಟಾರ್ ಡೈರೆಕ್ಟರ್ ಸಿನಿಮಾ ಎನ್ನಬೇಕಾ..? ಕನ್ನಡ ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕರ ಸಿನಿಮಾದಲ್ಲಿ, ಇನ್ನೊಬ್ಬ ನಿರ್ದೇಶಕರು ಹಾಡು ಬರೆಯೋದು, ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸೋದು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿಕೊಂಡು, ಚಿತ್ರವನ್ನು ನಿರ್ಮಾಣ ಮಾಡಿ, ಆ ಚಿತ್ರದ ನಿರ್ದೇಶನದ ಹೊಣೆಯನ್ನು ಮತ್ತೊಬ್ಬ ಹೊಸ ಪ್ರತಿಭೆಗೆ ನೀಡೋದಿದ್ಯಲ್ಲ.. ಅದು ಹೊಸದು. ಅಂಥಾದ್ದೊಂದು ಸಾಹಸಕ್ಕೆ ಪ್ರೀತಿಯಿಂದ ಕೈ ಹಾಕಿರೋದು ಯೋಗರಾಜ ಭಟ್ ಮತ್ತು ಶಶಾಂಕ್.

  shashank_yogaraj_bhatt_new_.jpgಯೋಗರಾಜ್ ಭಟ್ ಮತ್ತು ಶಶಾಂಕ್, ಇಬ್ಬರೂ ಕನ್ನಡದ ಸ್ಟಾರ್ ನಿರ್ದೇಶಕರು. ಈಗ ಈ ಇಬ್ಬರೂ ಒಟ್ಟಿಗೇ ಒಂದೇ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಕಥೆ, ಯೋಗರಾಜ್ ಭಟ್ಟರದ್ದು. ಅವರು ಕಥೆ ಹೇಳಿದ್ದು ನಟ ರಿಷಿಗೆ. ರಿಷಿ ಆ ಕಥೆಯನ್ನು ಶಶಾಂಕ್ ಅವರ ಬಳಿ ಹಂಚಿಕೊಂಡಿದ್ದಾರೆ. ಶಶಾಂಕ್, ನೇರವಾಗಿ ಭಟ್ಟರ ಬಳಿ ಬಂದು ಸಿನಿಮಾ ಮಾಡುವ ಪ್ಲಾನ್ ಇಟ್ಟಿದ್ದಾರೆ. ಅಲ್ಲಿಗೆ.. ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬಿದ್ದಿದೆ.

  ಶಶಾಂಕ್ ಮತ್ತು ಯೋಗರಾಜ್ ಭಟ್ ಜಂಟಿ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ದೇಶಕ, ಭಟ್ಟರ ಗರಡಿಯ ಹುಡುಗ ಮೋಹನ್ ಸಿಂಗ್. ನಾಯಕ ರಿಷಿ. 

  ಚಿತ್ರಕಥೆಯ ಕೆಲಸ ಶುರುವಾಗಿದ್ದು, ಜೂನ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಹೊಸ ಇತಿಹಾಸ ನಿರ್ಮಾಣವಾಗುತ್ತಿದೆ.

 • ರಿಷಿ ಚಿತ್ರಕ್ಕೆ ಅಪ್ಪು ಹಾಡು

  puneeth sings a song for rishi's movie

  ತಮ್ಮದೇ ಬ್ಯಾನರಿನಲ್ಲಿ ಕವಲುದಾರಿ ಚಿತ್ರ ನಿರ್ಮಿಸಿ ಗೆದ್ದಿದ್ದರು ಪುನೀತ್ ರಾಜ್‍ಕುಮಾರ್. ಆ ಚಿತ್ರದಲ್ಲಿ ಹೀರೋ ಆಗಿದ್ದ ರಿಷಿ, ಈಗ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಿಷಿ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಹಾಡುವ ಮೂಲಕ ಪುನೀತ್ ರಿಷಿಗೆ ಗುಡ್ ಲಕ್ ಹೇಳಿದ್ದಾರೆ.

  ಅನೂಪ್ ರಾಮಸ್ವಾಮಿ ಕಶ್ಯಪ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ದೇವರಾಜ್, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು.

  ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ರಿಷಿಗೆ ಧನ್ಯಾ ನಾಯಕಿಯಾಗಿ ನಟಿಸುತ್ತಿದ್ದು, ದತ್ತಣ್ಣ, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ.

Geetha Movie Gallery

Adhyaksha In America Audio Release Images