` sudeep daughter, - chitraloka.com | Kannada Movie News, Reviews | Image

sudeep daughter,

  • ಮಗಳ ಎದುರು ಆಗಲೇ ಗೆದ್ದಾಗಿದೆ ಪೈಲ್ವಾನ್

    sudeep's daughters first reaction on pailwan

    ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಹುಬ್ಬೇರಿಸಿದ್ದರು. ಮೂಗಿನ ಮೇಲೆ ಬೆರಳಿಟ್ಟಿದ್ದರು. ಅಭಿಮಾನಿಗಳು ವಾರೆ ವ್ಹಾ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿದೆ.ಕೃಷ್ಣ ಡೈರೆಕ್ಷನ್, ಸ್ವಪ್ನಾ ಕೃಷ್ಣ ನಿರ್ಮಾಣದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನವೂ ಅದ್ಭುತವಾಗಿದೆ.

    ಪ್ರೇಕ್ಷಕರ ಒಪ್ಪಿಗೆಗೂ ಮೊದಲೇ ಸುದೀಪ್ ಮೊದಲ ಗೆಲುವು ದಾಖಲಿಸಿದ್ದಾರೆ. ಅದೂ ಅವರ ಪ್ರೀತಿಯ ಮಗಳು ಸಾನ್ವಿಯ ಎದುರು. ನನ್ನ ಪೈಲ್ವಾನ್ ಪೋಸ್ಟರ್ ನೋಡಿ ನನ್ನ ಮಗಳು ವ್ಹಾವ್ ಎಂದರೂ.. ಆಮೇಲೆ ಪದೇ ಪದೇ ನಿಜಾನಾ ಅಂಥ ಕೇಳ್ತಾ ಇದ್ಲು. ಆಗ ಅವಳಿಗೆ ನಾನು ಜಿಮ್ ಮಾಡುತ್ತಿರುವ ದೃಶ್ಯಗಳನ್ನು ತೋರಿಸಿ ಪ್ರೂವ್ ಮಾಡಿದೆ. ನಿಜಕ್ಕೂ ಮಕ್ಕಳು ನನ್ನ ಸಿನಿಮಾ ಇಷ್ಟಪಡ್ತಾರೆ ಎಂದಿರುವ ಸುದೀಪ್, ಪೈಲ್ವಾನ್ ಚಿತ್ರದಿಂದಾಗಿ ನಾನು ಸರಿಯಾಗಿ ನಿದ್ದೆ, ಊಟ ಮತ್ತು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.

  • ಸುದೀಪ್ ಮನೆಯಲ್ಲಿ ದೊಡ್ಡ ಹಬ್ಬ

    sudeep celebrates his angel's birthday

    ಸುದೀಪ್ ಬಹಳ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಕಾರಣ ಬೇರೇನಲ್ಲ.. ಅವರ ಪ್ರೀತಿ, ಪ್ರಾಣ, ದೇವತೆ ಎಲ್ಲವೂ ಆಗಿರುವ ಅವರ ಮಗಳ ಹುಟ್ಟು ಹಬ್ಬ. ಸಾನ್ವಿಯ ಹುಟ್ಟುಹಬ್ಬವನ್ನು ಪ್ರೀತಿಯಿಂದ ನೆನಪಿಸಿಕೊಂಡಿರೋ ಕಿಚ್ಚ, ಅದನ್ನು ಬೇರೆಯದೇ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

    ಸಾನ್ವಿ ಹುಟ್ಟಿದ ದಿನದಿಂದ ಇಲ್ಲಿಯವರೆಗಿನ ಪ್ರತಿ ವರ್ಷದ ಫೋಟೋಗಳನ್ನು ಒಟ್ಟಾಗಿ ಸೇರಿಸಿ, ಅವುಗಳನ್ನೆಲ್ಲ ಕೊಲಾಜ್ ಮಾಡಿ ಮುದ್ದು ಮಗಳಿಗೆ ಶುಭಾಶಯ ಕೋರಿದ್ದಾರೆ. ಸುದೀಪ್-ಪ್ರಿಯಾ ದಂಪತಿಯ ಏಕೈಕ ಪುತ್ರಿ ಸಾನ್ವಿ, ಸುದೀಪ್ ಬಾಳಿನ ಬೆಳಕು ಎಂದರೆ ಅತಿಶಯೋಕ್ತಿಯೇನಲ್ಲ.

  • ಸುದೀಪ್ಗೆ ಸಿಕ್ಕ ಅತಿ ದೊಡ್ಡ ಗೌರವ - ಕೊಟ್ಟಿದ್ದು ಯಾರು ಗೊತ್ತಾ..?

    sudeep's daughter sanvi

    ಕಿಚ್ಚ ಸುದೀಪ್ಗೆ ಸಿಕ್ಕಿರುವುದು ರಾಷ್ಟ್ರಪ್ರಶಸ್ತಿಯಂತೂ ಅಲ್ಲ. ಆದರೆ, ಸುದೀಪ್ ಪಾಲಿಗೆ ಇದು ಅದಕ್ಕಿಂತ ದೊಡ್ಡ ಗೌರವ. ಈ ಗೌರವ ಉಡುಗೊರೆ ಕೊಟ್ಟಿರುವುದು ಸುದೀಪ್ರ ಮಗಳು ಸಾನ್ವಿ.

    ಸುದೀಪ್ ಮಗಳು ಸಾನ್ವಿ, ತಾನು ಓದುತ್ತಿರುವ ಶಾಲೆಯಲ್ಲಿ ಶಾಲೆಯ ಲೀಡರ್ ಆಗಿದ್ದಾಳೆ. school perfect ಆಗಿ ಆಯ್ಕೆಯಾಗಿರುವ ಮಗಳಿಗೆ ಶಾಲೆಯ ಸಮಾರಂಭದಲ್ಲಿ ಬ್ಯಾಡ್ಜ್ ಹಾಕಿರುವುದು ಸ್ವತಃ ಸುದೀಪ್. ಆ ಖುಷಿಯನ್ನ ಸುದೀಪ್ ಮತ್ತು ಪತ್ನಿ ಪ್ರಿಯಾ ಟ್ವಿಟರ್ನಲ್ಲಿ ಸಂಭ್ರಮದಿಂದ ಹಂಚಿಕೊಂಡಿದ್ದಾರೆ.

    ನಾವು ಹೆಮ್ಮೆ ಪಡುವಂತೆ ಮಾಡಿದ ನಿನಗೆ ಧನ್ಯವಾದಗಳು ಎಂದು ಹೇಳಿ ಖುಷಿಪಡುತ್ತಿದ್ದಾರೆ. ಸುದೀಪ್ ಅಂತೂ ಮಗಳಿಗೆ ಬ್ಯಾಡ್ಜ್ ಹಾಕಿದ್ದನ್ನು  ಜೀವನದ 'ಅದ್ಭುತ ಕ್ಷಣ'  ಎಂದು ಹೇಳಿಕೊಂಡಿದ್ದಾರೆ. ಮಗಳನ್ನು ಇನ್ನಿಲ್ಲದಷ್ಟು ಪ್ರೀತಿಸುವ ಸುದೀಪ್ಗೆ ಮಗಳ ಸಾಧನೆ ಎದೆಯುಬ್ಬಿಸುವಂತೆ ಮಾಡಿದೆ.

     

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery