` kotigobba 3, - chitraloka.com | Kannada Movie News, Reviews | Image

kotigobba 3,

  • ಸರ್ಬಿಯಾದಲ್ಲಿ ಸುದೀಪ್ ಸೆನ್ಸೇಷನ್

    sudeep creates sensation in serbia

    ಕಿಚ್ಚ ಸುದೀಪ್, ಕರ್ನಾಟಕದಲ್ಲಿ, ದಕ್ಷಿಣ ಭಾರತದಲ್ಲಿ ಏನು ಮಾಡಿದರೂ ಬ್ರೇಕಿಂಗ್ ನ್ಯೂಸ್. ಏಕೆಂದರೆ ಅವರ ಅಭಿಮಾನಿ ಬಳಗ ಅಷ್ಟು ದೊಡ್ಡದು. ಅವರ ಖ್ಯಾತಿ ಈಗ ಭಾರತವನ್ನೂ ದಾಟಿ ಸರ್ಬಿಯಾಗೂ ಕಾಲಿಟ್ಟಿದೆ. ಸರ್ಬಿಯಾದಲ್ಲಿ ಕೋಟಿಗೊಬ್ಬ 3 ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಅವರಿಗೆ ಹಿತವಾದ ಶಾಕ್ ನೀಡಿರುವುದು ಸರ್ಬಿಯಾದ ಪತ್ರಿಕೆ ಹಾಗೂ ವೆಬ್‍ಸೈಟ್‍ಗಳು. ಸರ್ಬಿಯಾದ ಟೆಲಿಗ್ರಾಫ್ ಪತ್ರಿಕೆ ಹಾಗೂ ವೆಬ್‍ಸೈಟುಗಳಲ್ಲಿ ಕಿಚ್ಚ ಸುದೀಪ್ ಬಗ್ಗೆ ಸವಿವರವಾದ ಲೇಖನವನ್ನೇ ಬರೆಯಲಾಗಿದೆ.

    ಸುದೀಪ್ ಅವರನ್ನ ಕಿಚ್ಚ ಸುದೀಪ್ ಅಂತಾ ಕರೆಯೋದು ಯಾಕೆ..? ಅವರ ಚಿತ್ರಗಳ ಸಕ್ಸಸ್ ಏನು..? ಕೋಟಿಗೊಬ್ಬ2 ಚಿತ್ರ ಗೆದ್ದಿದ್ದು ಹೇಗೆ..? ಭಾರತದಲ್ಲಿ ಅವರ ಜನಪ್ರಿಯತೆ ಎಷ್ಟಿದೆ ಅನ್ನೋದನ್ನೆಲ್ಲ ವಿವರವಾಗಿ ಬರೆಯಲಾಗಿದೆ.

    ಶಿವ ಕಾರ್ತಿಕ್ ನಿರ್ದೇಶನದ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕರು. ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್ ಹಾಗೂ ಶ್ರದ್ಧಾದಾಸ್ ನಾಯಕಿಯರು. ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

  • ಸಲಗ, ಕೋಟಿಗೊಬ್ಬ 3 : ಬಾಕ್ಸಾಫೀಸ್`ನಲ್ಲಿ ಗೆದ್ದೋರು ಯಾರು?

    ಸಲಗ, ಕೋಟಿಗೊಬ್ಬ 3 : ಬಾಕ್ಸಾಫೀಸ್`ನಲ್ಲಿ ಗೆದ್ದೋರು ಯಾರು?

    ಸಲಗ ರಿಲೀಸ್ ಆಗಿದ್ದು ಆಯುಧಪೂಜೆಗೆ. ಕೋಟಿಗೊಬ್ಬ 3 ರಿಲೀಸ್ ಆಗಿದ್ದು ವಿಜಯದಶಮಿಗೆ. ಆಯುಧಪೂಜೆಯಂದೇ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3, ಗೊಂದಲ, ವಿವಾದಗಳಿಂದ ಒಂದು ದಿನ ತಡವಾಗಿ ಥಿಯೇಟರಿಗೆ ಬಂತು. ಸೂರಪ್ಪ ಬಾಬು ಪ್ಲಾನಿಂಗ್ ಕೊರತೆ ಇತ್ತ ಕಾಣಿಸುತ್ತಿದ್ದರೆ, ಅತ್ತ ಪಕ್ಕಾ ಪ್ಲಾನ್‍ನೊಂದಿಗೆ ರಿಲೀಸ್ ಮಾಡಿದ್ದ ಕೆ.ಪಿ.ಶ್ರೀಕಾಂತ್ ತಮ್ಮ ಚಿತ್ರವನ್ನು ಅಚ್ಚುಕಟ್ಟಾಗಿ ಪ್ರೇಕ್ಷರಕ ಮುಂದಿಟ್ಟಿದ್ದರು. ಒಂದು ದಿನದ ಗ್ಯಾಪ್‍ನಲ್ಲಿ ರಿಲೀಸ್ ಆದ ಎರಡೂ ಸ್ಟಾರ್ ನಟರ ಚಿತ್ರಗಳಲ್ಲಿ ಗೆದ್ದೋರು ಯಾರು?

    ಆಯುಧಪೂಜೆಯ ದಿನ ರಿಲೀಸ್ ಆದ ಸಲಗ ಮೊದಲ ದಿನ ಗಳಿಸಿದ್ದು 8 ಕೋಟಿಗೂ ಹೆಚ್ಚು. ದುನಿಯಾ ವಿಜಯ್ ಚಿತ್ರಗಳಲ್ಲಿ ಇದು ಮೊದಲ ದಿನದ ದಾಖಲೆ. ಅದಾದ ನಂತರವೂ ಸಲಗ ವೀಕೆಂಡ್ ಮತ್ತು ಹಬ್ಬದ ರಜಾ ದಿನಗಳ ಸದುಪಯೋಗ ಪಡಿಸಿಕೊಂಡಿತು. ಸೋಮವಾರದ ನಂತರವೂ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿದೆ. ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡುವುದಿಲ್ಲ ಎನ್ನುವ ಮೂಲಕ ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ ಸಲಗ ಟೀಂ.

    ಸುದೀಪ್ ಅವರ ಕೋಟಿಗೊಬ್ಬ 3, ಮೊದಲ ದಿನ ಗಳಿಸಿದ್ದು 12 ಕೋಟಿಗೂ ಹೆಚ್ಚು. ಒಂದು ದಿನದ ನಷ್ಟ ಮಾಡಿಕೊಂಡರೂ ನಂತರವೂ ಮುನ್ನುಗ್ಗಿತು. ಕೋಟಿಗೊಬ್ಬ 3 ಕಲೆಕ್ಷನ್ ಕೂಡಾ ಸ್ಥಿರತೆ ಕಾಯ್ದುಕೊಂಡಿದೆ.

    ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಂದರೆ ನಷ್ಟವಾಗಬಹುದು ಎಂದು ಆತಂಕಗೊಂಡಿದ್ದ ಚಿತ್ರರಂಗಕ್ಕೆ ಇದು ರಿಲ್ಯಾಕ್ಸಿಂಗ್ ನ್ಯೂಸ್. ಎರಡೂ ಗೆದ್ದಿವೆ. ಶೀಘ್ರದಲ್ಲೇ ಎರಡೂ ಚಿತ್ರಗಳ ನಿರ್ಮಾಪಕರು ಸಕ್ಸಸ್ ಮೀಟ್ ಕರೆದು ವಿವರ ಹಂಚಿಕೊಳ್ಳಲಿದ್ದಾರೆ.

  • ಸುದೀಪ್ ನಿಂಗೆ ವಯಸ್ಸೇ ಆಗಲ್ವಾ? : ರಮ್ಯಾ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ

    sudeep ramya image

    ನಮ್ಮ ಹೊಸ ಬೆಂಜಮಿನ್ ಬಟನ್ ಕಿಚ್ಚ ಸುದೀಪ್. ನಿಮಗೆ ವಯಸ್ಸೇ ಆಗಲ್ವಾ? ವ್ಹಾವ್.. ಅದ್ಭುತ ಟ್ರೇಲರ್.. ಇಂತಾದ್ದೊಂದು ಟ್ವೀಟ್ ಮಾಡಿದ್ದರು ರಮ್ಯಾ. ಕೋಟಿಗೊಬ್ಬ 3 ಟ್ರೇಲರ್ ಹೊರಬಿದ್ದಾಗ ರಮ್ಯಾ ಮಾಡಿದ್ದ ಟ್ವೀಟ್ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಬೆಂಜಮಿನ್ ಬಟನ್ ಹಾಲಿವುಡ್ ನಟ. ರಮ್ಯಾ ಇಷ್ಟಪಡುವ ನಟ. ಚಿತ್ರವೊಂದರಲ್ಲಿ ಆತ ಮುದುಕನಾಗಿ ಹುಟ್ಟಿ, ಮಗುವಾಗಿ ಅಂತ್ಯಗೊಳ್ಳುತ್ತಾನೆ. ಜೀವನ ಚಕ್ರದ ಉಲ್ಟಾ ಸೈಕಲ್ ಸ್ಟೋರಿ ಅದು.

    ರಮ್ಯಾರ ಈ ಮಾತಿಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ. ನೀವು ಸಿನಿಮಾ ಬಿಟ್ಟು ರಾಜಕೀಯದಲ್ಲಿದ್ದರೂ ನಮ್ಮ ಬಗ್ಗೆ ಮಾತನಾಡಿರುವುದು ಖುಷಿ ಕೊಟ್ಟಿದೆ. ವಯಸ್ಸು 50 ದಾಟಿದ್ದರೂ ಕೆಲವು ನಟರು ಫಿಟ್ ಇರುತ್ತಾರೆ. ಅವರು ನನಗೆ ಸ್ಫೂರ್ತಿ. ಇನ್ನೂ ಕೆಲವರು 30 ಅಷ್ಟೇ ಆಗಿದ್ದರೂ 50 ಆಗಿರೋರ ತರಾ ಇರ್ತಾರೆ. ಎರಡೂ ನನಗೆ ಸ್ಫೂರ್ತಿ ಎಂದಿದ್ದಾರೆ ಸುದೀಪ್.

     

  • ಸುದೀಪ್ ಬೇಟೆಗೆ ಇಂಟರ್‍ಪೋಲ್ ಆಫೀಸರ್ ಶ್ರದ್ಧಾ ದಾಸ್ 

    shraddha das will jpin kotigobba 3

    ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಯೂರೋಪ್‍ನ ಬೆಲ್‍ಗ್ರೇಡ್‍ನಲ್ಲಿ ಶುರುವಾಗಿದೆ. ಚಿತ್ರದಲ್ಲಿ ಸುದೀಪ್ ಹೀರೋ. ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಅಫ್ತಾಬ್ ಶಿವದಾಸನಿ, ನವಾಬ್ ಶಾ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಶ್ರದ್ಧಾ ದಾಸ್, ಇಂಟರ್‍ಪೋಲ್ ಅಧಿಕಾರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 

    ಶ್ರದ್ಧಾ ದಾಸ್, ಮೂಲತಃ ತೆಲುಗಿನವರು. ತೆಲುಗು ಹಾಗೂ ಕನ್ನಡಕ್ಕೆ ಬಹಳ ಸಾಮ್ಯತೆ ಇರುವ ಕಾರಣ, ಕನ್ನಡ ಭಾಷೆ ಸವಾಲಾಗುವುದಿಲ್ಲ ಎನ್ನುವುದು ಅವರ  ನಂಬಿಕೆ. ಚಿತ್ರದಲ್ಲಿ ಅವರದ್ದು ಇಂಟರ್‍ಪೋಲ್ ಅಧಿಕಾರಿಯ ಪಾತ್ರ. ಸುದೀಪ್ ಬೆನ್ನ ಹಿಂದೆ ಬೀಳುವ ಅವರ ಪಾತ್ರ, ಡಾನ್ 2 ಚಿತ್ರದ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವನ್ನು ಹೋಲುತ್ತದಂತೆ.

    ಸುದೀಪ್ ಜೊತೆ ನಟಿಸುತ್ತಿದ್ದೇನೆ ಎನ್ನುವುದೇ ಈಗ ಶ್ರದ್ಧಾಗೆ ಥ್ರಿಲ್. 

  • ಸುದೀಪ್ ಸಂಭಾವನೆ 8 ಕೋಟಿ..!

    sudeep gets 8 crores for kotigobba 3

    ಕಿಚ್ಚ ಸುದೀಪ್, ಕನ್ನಡಲ್ಲಿ ನಿರ್ಮಾಪಕರನ್ನು ಕೆಲವೇ ಕೆಲವು ಸ್ಟಾರ್ ನಟರಲ್ಲಿ ಒಬ್ಬರು. ಅವರು ಯಾವಾಗಲೂ ನಿರ್ಮಾಪಕರ ಜೊತೆ ಇರುತ್ತಾರೆ. ಅವರು ನಿರ್ಮಾಪಕರಿಗೆ  ಷರತ್ತು ಹಾಕೋದಿಲ್ಲ. ಅವರಂತೆ ಎಲ್ಲ ನಟರೂ ನಿರ್ಮಾಪಕರ ಕಷ್ಟಗಳಿಗೆ ಸ್ಪಂದಿಸೋದಿಲ್ಲ. ಹೀಗಾಗಿಯೇ, ಅವರು ಕೇಳದಿದ್ದರೂ ನಾನೇ 8 ಕೋಟಿ ಸಂಭಾವನೆ ಕೊಟ್ಟಿದ್ದೇನೆ. ಹೀಗೆಂದು ಹೇಳಿರುವುದು ಸೂರಪ್ಪ ಬಾಬು.

    ಸುದೀಪ್ ಜೊತೆ ಕೋಟಿಗೊಬ್ಬ 3 ಚಿತ್ರ ನಿರ್ಮಿಸುತ್ತಿರುವ ಸೂರಪ್ಪ ಬಾಬು, ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಸುದೀಪ್, ಚಿತ್ರದ ಪ್ರತಿ ಹಂತದಲ್ಲೂ ನಿರ್ಮಾಪಕರ ಜೊತೆಗಿರುತ್ತಾರೆ. 8 ಕೋಟಿ, ಸುದೀಪ್ ಕೇಳಿದ್ದಲ್ಲ. ನಾನೇ ಕೊಟ್ಟಿದ್ದು ಎಂದಿದ್ದಾರೆ ಸೂರಪ್ಪ ಬಾಬು.

    ಚಿತ್ರದ ಚಿತ್ರೀಕರಣ ಶೀಘ್ರದಲ್ಲಿಯೇ ಶುರುವಾಗಲಿದ್ದು, ಸ್ಪೇನ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಕನ್ನಡದ ನಟಿಯೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ ಸೂರಪ್ಪ ಬಾಬು.

    ಕನ್ನಡದಲ್ಲಿ ನಟರು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎಂಬ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುವುದಿಲ್ಲ. ಅಲ್ಲಿ ಇಲ್ಲಿ ಕಿವಿಗೆ ಬಿದ್ದ ಮಾತುಗಳನ್ನಷ್ಟೇ ಕೇಳುತ್ತಿದ್ದವರಿಗೆ ಸೂರಪ್ಪ ಬಾಬು, ಬಹಿರಂಗವಾಗಿಯೇ ಹೇಳುವ ಮೂಲಕ ರಹಸ್ಯ ಸ್ಫೋಟಿಸಿರುವುದು ನಿಜ.

  • ಸ್ಟಾರ್ ವಾರ್ ಯುಗಾದಿಯಿಂದಲೇ ಶುರು

    star movie releases lined up from ugadi itself

    ಏಪ್ರಿಲ್ ತಿಂಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಶುರುವಾಗಲಿದೆ ಎನ್ನುವುದು ನಿರೀಕ್ಷೆ. ಏಕೆಂದರೆ, ದರ್ಶನ್ ಅಭಿನಯದ ರಾಬರ್ಟ್, ಧ್ರುವ ಸರ್ಜಾ ಅಭಿನಯದ ಪೊಗರು, ಸುದೀಪ್ ಅಭಿನಯದ ಕೋಟಿಗೊಬ್ಬ 3 ಕ್ಯೂನಲ್ಲಿವೆ. ಆದರೆ ಸ್ಟಾರ್ ವಾರ್ ಯುಗಾದಿಯಿಂದಲೇ ಶುರು ಎನ್ನುವ ಸಿಗ್ನಲ್ ಕೊಟ್ಟಿದ್ದಾನೆ ಸಲಗ.

    ದುನಿಯಾ ವಿಜಯ್‌ ಇದೇ ಮೊದಲ ಬಾರಿಗೆ  ನಿರ್ದೇಶಿಸಿ ನಟಿಸಿರುವ ಸಲಗ ಯುಗಾದಿಗೆ ರಿಲೀಸ್ ಎಂಬ ಸುದ್ದಿ ಈಗ ಗಾಂಧಿನಗರದ ಸೆನ್ಸೇಕ್ಷನ್. ಈಗಾಗಲೇ ಚಿತ್ರದ ಹಾಡು, ಮೇಕಿಂಗ್ ಸೂಪರ್ ಹಿಟ್ ಆಗಿದೆ. ಮಾಸ್ ಕಥೆಯನ್ನು ಕ್ಲಾಸ್ ಆಗಿ ಹೇಳುತ್ತಿರುವ ವಿಜಿ ಜೊತೆ ಡಾಲಿ ಧನಂಜಯ್ ಕೂಡಾ ಇರೋದು ಸ್ಪೆಷಲ್.

    ಟಗರು ನಂತರ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಮುಕ್ಕಾಲು ಭಾಗ ಟಗರು ಟೀಂ ಇರುವುದೇ ವಿಶೇಷ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿಡುವಿಲ್ಲದಂತೆ ನಡೆಯುತ್ತಿದ್ದು, ಯುಗಾದಿಗೆ ಬೇವು ಬೆಲ್ಲದ ಜೊತೆ ಬರಲಿದೆ.

  • ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಕೊರೊನಾ ಲಾಕ್‍ಡೌನ್ ಮುಗಿದು, ಥಿಯೇಟರುಗಳೆಲ್ಲ ಓಪನ್ ಆದರೂ ಸರ್ಕಾರದ ನಿರ್ಬಂಧ ಮಾತ್ರ ರಿಲ್ಯಾಕ್ಸ್ ಆಗಿಲ್ಲ. ಹೀಗಿರುವಾಗಲೇ ಥಿಯೇಟರಿಗೆ ಬರುವ ನಿರ್ಧಾರ ಮಾಡಿ ಗೆದ್ದಿದೆ ತಮಿಳಿನ ಮಾಸ್ಟರ್. ವಿಜಯ್ ಅಭಿನಯದ ಮಾಸ್ಟರ್ 50% ಸೀಟುಗಳ ನಿರ್ಬಂಧದ ನಡುವೆಯೇ ಮೊದಲ 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಅರ್ಥ ಇಷ್ಟೆ, ಪ್ರೇಕ್ಷಕರು ಸ್ಟಾರ್ ಚಿತ್ರಗಳಿಗೆ ಕಾಯುತ್ತಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರಿಗೆ ನೊಣ ಹೊಡೆಯುತ್ತಿರುವ ಥಿಯೇಟರುಗಳು ತುಂಬೋಕೆ ಶುರುವಾಗೋದು ಸ್ಟಾರ್ ಚಿತ್ರಗಳ ಎಂಟ್ರಿ ನಂತರಾನೇ. ಸ್ಸೋ.. ಸ್ಟಾರ್ ಚಿತ್ರಗಳಿಗೆ ರಿಲೀಸ್ ಡೇಟ್ ಫಿಕ್ಸ್ ಆಗುತ್ತಿವೆ.

    ಮೊದಲ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗಲಿರುವ ಚಿತ್ರ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು. ಇದು ಫೆಬ್ರವರಿ 5ರಂದು ರಿಲೀಸ್ ಆಗುತ್ತಿದೆ. ಆದರೂ ಅದೇಕೋ ಏನೋ.. ನಿರ್ಮಾಪಕ ಬಿ.ಕೆ. ಗಂಗಾಧರ್ ರಿಲೀಸ್ ಡೇಟ್‍ನ್ನು ಅಧಿಕೃತವಾಗಿ ಘೋಷಿಸುತ್ತಿಲ್ಲ.

    ನಂತರ ಬರಲಿರೋ ಚಿತ್ರ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಮೊದಲ ಬಾರಿಗೆ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾ ದುನಿಯಾ ಸೆಂಟಿಮೆಂಟ್ ಕಾರಣಕ್ಕೆ ಫೆ.23ರಂದು ರಿಲೀಸ್ ಮಾಡ್ತಾರೆ ಅನ್ನೋ ಲೆಕ್ಕಾಚಾರವಿದೆ. ಅಂದಹಾಗೆ, ಈ ಡೇಟ್ ಕೂಡಾ ಅಫಿಷಿಯಲ್ ಅಲ್ಲ.

    ಅಫಿಷಿಯಲ್ ಆಗಿ ಘೋಷಿಸಿಕೊಂಡಿರೋದು ದರ್ಶನ್ ಅಭಿನಯದ ರಾಬರ್ಟ್, ಮಾರ್ಚ್ 11ಕ್ಕೆ ರಿಲೀಸ್. ಪುನೀತ್ ಅಭಿನಯದ ಯುವರತ್ನ ಏಪ್ರಿಲ್ 1ಕ್ಕೆ ರಿಲೀಸ್. ಸುದೀಪ್ ಅಭಿನಯದ ಕೋಟಿಗೊಬ್ಬ 3, ಏಪ್ರಿಲ್ 23ಕ್ಕೆ ರಿಲೀಸ್.

    ಆಗಸ್ಟ್ ನಂತರ ಶಿವಣ್ಣ ಅಭಿನಯದ ಭಜರಂಗಿ 2, ಯಶ್ ಅಭಿನಯದ ಕೆಜಿಎಫ್ 2, ಸುದೀಪ್ ಅಭಿನಯದ ಪ್ಯಾಂಟಮ್, ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ, ಗಣೇಶ್-ಭಟ್ಟರ ಕಾಂಬಿನೇಷನ್ನಿನ ಗಾಳಿಪಟ 2, ಚಿತ್ರಗಳಿವೆ.