` kotigobba 3, - chitraloka.com | Kannada Movie News, Reviews | Image

kotigobba 3,

  • ಕೋಟಿಗೊಬ್ಬನ ಅಬ್ವರ

    ಕೋಟಿಗೊಬ್ಬನ ಅಬ್ವರ

    ರಿಲೀಸ್ ಆಗುತ್ತೋ ಇಲ್ವೋ.. ಎಂದು ಕಟ್ಟಕಡೆಯ ಕ್ಷಣದವರೆಗೂ ಟೆನ್ಷನ್ ಸೃಷ್ಟಿಸಿದ್ದ ಕೋಟಿಗೊಬ್ಬ 3 ಕೊನೆಗೂ ರಿಲೀಸ್ ಆಗಿದೆ. ವಿತರಕರು ಬದಲಾಗಿ ಸೈಯದ್ ಸಲಾಂ, ಗಂಗಾಧರ್ ಮತ್ತು ಜಾಕ್ ಮಂಜು ವಿತರಣೆಗೆ ನಿಲ್ಲೋದ್ರೊಂದಿಗೆ ಬಿಡುಗಡೆ ಸಮಸ್ಯೆ ಪರಿಹಾರವಾಯ್ತು. ಥಿಯೇಟರಿನಲ್ಲಿ ಬೆಳಗ್ಗಿನಿಂದಲೇ ಪ್ರದರ್ಶನ ಶುರುವಾಯ್ತು.

    ಕಿಚ್ಚ ಸುದೀರ್ಘ ಕಾಲದ ನಂತರ ಡಬಲ್ ಌಕ್ಟಿಂಗ್ನಲ್ಲಿ ಬಂದಿರೋ ಕೋಟಿಗೊಬ್ಬ 3, ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ. ರವಿಶಂಕರ್ ಪರ್ಫಾಮೆನ್ಸ್ಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ನಿರ್ದೇಶಕ ಶಿವಕಾರ್ತಿಕ್ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಸೂರಪ್ಪ ಬಾಬು ರಿಲ್ಯಾಕ್ಸ್ ಆಗಿದ್ದಾರೆ.         ಸುದೀಪ್ ಹಿಟ್ ಚಿತ್ರಗಳ ಲಿಸ್ಟ್ಗೆ ಇನ್ನೊಂದು ಸಿನಿಮಾ ಸೇರಿಕೊಂಡಿದೆ.

  • ಕೋಟಿಗೊಬ್ಬನ ಕಿಕ್ಕು.. ಮೇಕಿಂಗ್ ಝಲಕ್ಕು..

    ಕೋಟಿಗೊಬ್ಬನ ಕಿಕ್ಕು.. ಮೇಕಿಂಗ್ ಝಲಕ್ಕು..

    ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಮೊದಲಿಗೆ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬರುತ್ತೋ.. ಕೋಟಿಗೊಬ್ಬ 3 ಬರುತ್ತೋ.. ಗ್ಯಾರಂಟಿಯಿಲ್ಲ.  ಈ ನಡುವೆಯೇ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

    ಕೋಟಿಗೊಬ್ಬ3 ಸಿನಿಮಾ ಚಿತ್ರೀಕರಣ ಕಂಪ್ಲಿಟ್ ಆಗಿದ್ದು ಸಿನಿಮಾ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ತಿದ್ದಾರೆ...ಈ ಮಧ್ಯೆ ಚಿತ್ರದ ಕಲರ್ ಫುಲ್ ಆಗಿರೋ ಮೇಕಿಂಗ್ ರಿಲಿಸ್ ಮಅಡಿ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದೆ ಕೊಟಿಗೊಬ್ಬ3 ತಂಡ. ಕಿಚ್ಚನ ಜೊತೆ ನಾಯಕಿಯಾಗಿ ಮಲೆಯಾಳಂ ನಟಿ ಮಡೋನಾ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆ ಆಗಿರೋ ಮೇಕಿಂಗ್ ನೋಡ್ತಿದ್ರೆ ಕೋಟಿಗೊಬ್ಬ ದೊಡ್ಡ ಬಜೆಟ್ಟಿನ ಸಿನಿಮಾ ಅನ್ನೋದ್ರಲ್ಲಿ ನೋ ಡೌಟ್. ಕಿಚ್ಚನ ಜೊತೆ ಮಡೋನ್ನಾ , ಆಶಿಕಾ ರಂಗನಾಥ್, ಶ್ರದ್ದಾ ದಾಸ್, ರವಿಶಂಕರ್ , ತಬಲಾನಾಣಿ , ಶಿವರಾಜ್ ಕೆ ಆರ್ ಪೇಟೆ, ಶೋಭ್ ರಾಜ್ ಹೀಗೆ ದೊಡ್ಡ ದೊಡ್ಡ ನಟರ ದಂಡೇ ಇದೆ. ನಿರ್ದೇಶಕ ಶಿವಕಾರ್ತಿಕ್. ಸೈಬೀರಿಯಾ, ಮಲೇಷಿಯಾ, ಥೈಲ್ಯಾಂಡ್ ನ ಸುಂದರ ತಾಣಗಳಲ್ಲಿ ಸಿನಿಮಾವನ್ನ ಚಿತ್ರೀಕರಿಸಿದ್ದು, ಇದು ಮೈಂಡ್ ಗೇಮ್ನ ಸಿನಿಮಾ ಎನ್ನಲಾಗಿದೆ.

  • ಕೋಟಿಗೊಬ್ಬನ ಜೊತೆ ಮದಗಜ : ಏನಿದು ವಿಶೇಷ..?

    ಕೋಟಿಗೊಬ್ಬನ ಜೊತೆ ಮದಗಜ : ಏನಿದು ವಿಶೇಷ..?

    ಕೋಟಿಗೊಬ್ಬ 3, ಇದೇ ಅಕ್ಟೋಬರ್‍ನಲ್ಲಿ ದಸರೆಗೆ ಬರುತ್ತಿದೆ. ಅದೇ ದಿನ ಸಲಗ ಚಿತ್ರವೂ ತೆರೆ ಕಾಣುತ್ತಿದೆ. ಶ್ರೀಕೃಷ್ಣ@ಜಿಮೇಲ್.ಕಾಮ್ ಸಿನಿಮಾ ಕೂಡಾ ಅದೇ ದಿನ ರಿಲೀಸ್. ಆದರೆ, ಮದಗಜ ಮಾತ್ರ, ಕೋಟಿಗೊಬ್ಬನ ಜೊತೆಯಲ್ಲೇ ಬರ್ತಾನೆ.

    ಮದಗಜ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಕಂಪ್ಲೀಟ್ ಬ್ಯುಸಿಯಾಗಿದೆ ಮದಗಜ ಟೀಂ. ಸಿನಿಮಾವನ್ನು ಡಿಸೆಂಬರ್‍ನಲ್ಲಿ ರಿಲೀಸ್ ಮಾಡೋ ತಯಾರಿಯಲ್ಲಿರೋ ಚಿತ್ರತಂಡ, ಕೋಟಿಗೊಬ್ಬ 3 ರಿಲೀಸ್ ಜೊತೆ ಪ್ರಚಾರವನ್ನೂ ಶುರು ಮಾಡಲಿದೆ. ಕೋಟಿಗೊಬ್ಬ 3 ಜೊತೆಯಲ್ಲೇ ಮದಗಜ ಚಿತ್ರದ ಟೀಸರ್ ಕೂಡಾ ತೆರೆ ಕಾಣಲಿದೆ.

    ಸುದೀಪ್ ಚಿತ್ರದ ಮೂಲಕ ಶ್ರೀಮುರಳಿ ಚಿತ್ರದ ಪ್ರಮೋಷನ್ ಕೆಲಸಗಳು ಶುರುವಾಗಲಿದೆ.

  • ಕೋಟಿಗೊಬ್ಬನ ಡಬ್ಬಿಂಗ್ ಮುಗಿಸಿದ ಕಿಚ್ಚ

    ಕೋಟಿಗೊಬ್ಬನ ಡಬ್ಬಿಂಗ್ ಮುಗಿಸಿದ ಕಿಚ್ಚ

    ಕೋಟಿಗೊಬ್ಬ 3 ಚಿತ್ರದ ಡಬ್ಬಿಂಗ್ ಮುಗಿಸಿರುವ ಕಿಚ್ಚ ಸುದೀಪ್, ಚಿತ್ರ ಶೀಘ್ರದಲ್ಲೇ ರಿಲೀಸ್‍ಗೆ ರೆಡಿ ಎಂದಿದ್ದಾರೆ. ಮತ್ತೊಮ್ಮೆ ಸತ್ಯ ಮತ್ತು ಶಿವನಾಗುವ ಅವಕಾಶ ಬಂದಿದೆ. ಎಲ್ಲರದ್ದೂ ಡಬ್ಬಿಂಗ್ ಮುಗಿದಿತ್ತು. ನನ್ನೊಬ್ಬನದ್ದೇ ಬಾಕಿಯಿತ್ತು. ನಾನೂ ಈಗ ಡಬ್ಬಿಂಗ್ ಮುಗಿಸಿದ್ದೇನೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಂತಾಗುತ್ತದೆ. ಸದ್ಯದಲ್ಲೇ ರಿಲೀಸ್ ಆಗಲಿದೆ' ಎಂದಿರುವ ಸುದೀಪ್, ಶೀಘ್ರದಲ್ಲೇ ಕೋಟಿಗೊಬ್ಬನಾಗಿ ತೆರೆಗೆ ಬರಲಿದ್ದಾರೆ.

    ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿರುವ ಚಿತ್ರದಲ್ಲಿ ಶ್ರದ್ಧಾ ದಾಸ್, ರವಿಶಂಕರ್, ಅಫ್ತಾಬ್ ಶಿವದಾಸನಿ, ಡ್ಯಾನಿಷ್ ಅಖ್ತರ್ ನಟಿಸಿದ್ದಾರೆ. ಪಟಾಕಿ ಪೋರಿಯಾಗಿ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ ಅಶಿಕಾ ರಂಗನಾಥ್. 

  • ಕೋಟಿಗೊಬ್ಬನ ಸಕ್ಸಸ್ ಸಂಭ್ರಮ

    ಕೋಟಿಗೊಬ್ಬನ ಸಕ್ಸಸ್ ಸಂಭ್ರಮ

    ನನ್ನ ಮತ್ತು ಸುದೀಪ್ ಮಧ್ಯೆ ಮನಸ್ತಾಪವೂ ಇಲ್ಲ. ಏನೂ ಇಲ್ಲ. ಏನೇ ಕಷ್ಟ ಬಂದರೂ ಎದುರಿಸಬೇಕು. ಗೆಲ್ಲಬೇಕು. ಅದನ್ನು ಮನದಟ್ಟು ಮಾಡಿಸಿ, ಗೆಲ್ಲಿಸಿದ್ದು ಕಿಚ್ಚ ಸುದೀಪ್. ನಮ್ಮ ಹೀರೋ ಸುದೀಪ್. ಜಾಕ್ ಮಂಜು ಎಲ್ಲರಿಗೂ ಧನ್ಯವಾದಗಳು. ಕಿಚ್ಚನ ಅಭಿಮಾನಿಗಳಿಗೆ ಕೃತಜ್ಞತೆಗಳು..

    ಸೂರಪ್ಪ ಬಾಬು ಮಾತನಾಡುತ್ತಾ ಹೋದಂತೆ ಕೋಟಿಗೊಬ್ಬ 3 ಚಿತ್ರತಂಡ ಸಂಭ್ರಮ ಪಡುತ್ತಿತ್ತು. ಇದೆಲ್ಲ ನಡೆದದ್ದು ಕೋಟಿಗೊಬ್ಬ 3 ಸಕ್ಸಸ್ ಸಂಭ್ರಮದಲ್ಲಿ.

    ಚಿತ್ರವನ್ನು ಗೆಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಒಂದೊಳ್ಳೆ ಸಿನಿಮಾ ಮಾಡಿದ ಖುಷಿ ಇದೆ. ತೆಲುಗು ವರ್ಷನ್ ನವೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ ಎಂದು ಮಾಹಿತಿ ನೀಡಿದ್ದು ಕಿಚ್ಚ ಸುದೀಪ್.

    ನಿರ್ದೇಶಕ ಶಿವಕಾರ್ತಿಕ್‍ಗೆ ಮೊದಲ ಚಿತ್ರದ ಸೂಪರ್ ಹಿಟ್ ಆದ ಖುಷಿಯಿತ್ತು. ಹಿಟ್ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಸಂಭ್ರಮ ನಾಯಕಿ ಮಡೋನ್ನಾ ಮಾತಿನಲ್ಲಿತ್ತು.

    ಸೂರಪ್ಪ ಬಾಬು ಮತ್ತು ಕಿಚ್ಚನ ಮೇಲಿನ ಪ್ರೀತಿಯಿಂದ ಬಂದಿದ್ದ ರಿಯಲ್ ಸ್ಟಾರ್ ಉಪೇಂದ್ರ ಇಂಥಾದ್ದೊಂದು ಗೆಲುವು ಕನ್ನಡ ಚಿತ್ರರಂಗಕ್ಕೆ ಬೇಕಿತ್ತು. ಚಿತ್ರತಂಡದ ಪ್ರತಿಯೊಬ್ಬರಿಗೂ ಚಿತ್ರರಂಗದ ಪರವಾಗಿ ಥ್ಯಾಂಕ್ಸ್ ಎಂದರು.

  • ಕೋಟಿಗೊಬ್ಬನ ಹಬ್ಬ

    kotigobba 3 lyrical video song is super hit

    ಆಕಾಶಾನೇ ಆಧರಿಸುವ.. ಈ ಭೂಮಿಯನ್ನೇ ಪಳಗಿಸುವ.. ಕೋಟಿ ಕೋಟಿ ನೋಟುಗಳ ಕೋಟೆಯ ಮೇಲೆ ಕುಳಿತಿರುವ.. ನಾಲ್ಕು ತಲೆ ಬ್ರಹ್ಮನಿಗೂ.. ಅಬ್ಬಬ್ಬಾ ಕನ್‍ಫ್ಯೂಸು ಮಾಡೋನಿವ.. ಕೋಟಿಗೊಬ್ಬ.. ಕೋಟಿಗೊಬ್ಬ..

    ಯಾವಾಗ.. ಯಾವಾಗ.. ಎಂಚು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಹಬ್ಬದೂಟ. ಅರ್ಜುನ್ ಜನ್ಯ ಮತ್ತೊಮ್ಮೆ ವಂಡರ್‍ಫುಲ್ ಸ್ಕೋರ್ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಕೋಟಿಗೊಬ್ಬ ಟೈಟಲ್ ಸಾಂಗ್ ಮ್ಯಾಜಿಕ್ ಮಾಡಿಬಿಟ್ಟಿದೆ. ಪೈಲ್ವಾನ್ ನಂತರ ಮತ್ತೊಂದು ಚಿತ್ರಕ್ಕಾಗಿ ಕಾದು ಕುಳಿತಿರುವ ಫ್ಯಾನ್ಸ್ ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಸಿನಿಮಾ ರಿಲೀಸ್ ಎಂಬ ನಿರೀಕ್ಷೆಯಲ್ಲಿದ್ದಾರೆ.

     

  • ಕೋಟಿಗೊಬ್ಬನಿಗೆ ಅದೆಷ್ಟು ಕೋಟಿ ಡಿಮ್ಯಾಂಡಪ್ಪಾ..?

    kotigobba 3 in full demand

    ಕೋಟಿಗೊಬ್ಬ 3 ಸಿನಿಮಾದ ಶೂಟಿಂಗೇ ಮುಗಿದಿಲ್ಲ. ಆಗಲೇ ಸಿನಿಮಾಗೆ ಕೋಟಿ ಕೋಟಿ ಡಿಮ್ಯಾಂಡ್ ಶುರುವಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಇರುವ ಕಾರಣಕ್ಕೇ ಈ ಡಿಮ್ಯಾಂಡ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. 

    ಚಿತ್ರದ ಹಿಂದಿ ಡಬ್ಬಿಂಗ್ ಮತ್ತು ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಸೇಲ್ ಆಗಿವೆಯಂತೆ. ಇತ್ತೀಚೆಗೆ 9 ಕೋಟಿಗೆ ಹಿಂದಿ ಮತ್ತು ಟಿವಿ ರೈಟ್ಸ್ ಮಾರಾಟವಾಗಿವೆ ಎನ್ನಲಾಗಿತ್ತು. ಆದರೆ, ಈಗ ಚಿತ್ರಕ್ಕೆ 21 ಕೋಟಿ ಡಿಮ್ಯಾಂಡ್ ಎಂಬ ಹೊಸ ಮಾಹಿತಿ ಬಂದಿದೆ.

    ನಿರ್ಮಾಪಕ ಸೂರಪ್ಪ ಬಾಬು ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ. ಶಿವ ಕಾರ್ತಿಕ್ ನಿರ್ದೇಶನದ ಚಿತ್ರಕ್ಕೆ ಮಡೋನಾ ಸೆಬಾಸ್ಟಿನ್ ನಾಯಕಿ. ಟೀಸರ್‍ನಿಂದಲೇ ದೊಡ್ಡ ಹವಾ ಎಬ್ಬಿಸಿದೆ ಕೋಟಿಗೊಬ್ಬ 3 ಸಿನಿಮಾ.

  • ಕ್ರಿಸ್‍ಮಸ್‍ಗೆ ಬರ್ತಾನಂತೆ ಕೋಟಿಗೊಬ್ಬ 3

    sudeep's kotigobba 3 launched

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಶಿವ ಕಾರ್ತಿಕ್ ನಿರ್ದೇಶನದ ಈ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕ. ಕಥೆ ಸ್ವತಃ ಸುದೀಪ್ ಅವರದ್ದು.

    ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸುದೀಪ್ ಅವರ ಇಡೀ ಕುಟುಂಬವೇ ಭಾಗವಹಿಸಿತ್ತು. ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದು  ಸುದೀಪ್ ಅವರ ತಂದೆ ಸರೋವರ್ ಸಂಜೀವ್. ಜ್ಯೋತಿ ಬೆಳಗಿದ್ದು ಸುದೀಪ್ ಅವರ ಪತ್ನಿ ಪ್ರಿಯಾ. ಕ್ಲಾಪ್ ಮಾಡಿದ್ದು ನಿರ್ಮಾಪಕ ಮುನಿರತ್ನ. 

    ರಾಕ್‍ಲೈನ್ ವೆಂಕಟೇಶ್, ಗುರುದತ್, ಸಿ.ಆರ್. ಮನೋಹರ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು. ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳ ಕೊನೆಯಲ್ಲಿ ಶುರುವಾಗಲಿದೆ. ಚೆನ್ನೈ, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಕ್ರಿಸ್‍ಮಸ್ ವೇಳೆಗೆ ಕೋಟಿಗೊಬ್ಬ 3 ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾನೆ. 

  • ಜಗ್ಗೇಶ್, ಸದಾನಂದ ಗೌಡ ಸಹಾಯಹಸ್ತ : ಕೋಟಿಗೊಬ್ಬ 3 ಟೀಂ ಸೇಫ್

    kotigibba 3 poland issues resolved

    ಕೋಟಿಗೊಬ್ಬ 3 ಚಿತ್ರಕ್ಕೆ ಪೋಲೆಂಡ್‍ನಲ್ಲಿ ತಗ್ಲಾಕ್ಕೊಂಡ ವಂಚಕನೊಬ್ಬ ಯಾಮಾರಿಸಿದ್ದ. ಇಡೀ ತಂಡ ವಾಪಸ್ ಆದರೂ ನಿರ್ಮಾಪಕ ಸೂರಪ್ಪ ಬಾಬು ಅವರ ಅಸಿಸ್ಟೆಂಟ್ ಅವರ ಪಾಸ್‍ಪೋರ್ಟ್ ಕಿತ್ತಿಟ್ಟುಕೊಂಡು 95 ಲಕ್ಷ ರೂ. ಕೊಡಲೇಬೇಕು ಎಂದು ಬ್ಲಾಕ್‍ಮೇಲ್ ಮಾಡಿದ್ದ. ಒಪ್ಪಂದದ ಪ್ರಕಾರ ಕೊಡಬೇಕಿದ್ದ 2 ಕೋಟಿ 36 ಲಕ್ಷ ಕೊಟ್ಟ ಮೇಲೂ ಹೊಸದಾಗಿ 95 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟು ಹಿಂಸೆ ಕೊಟ್ಟಿದ್ದ.

    ಇಡೀ ತಂಡವನ್ನು ವಾಪಸ್ ಕರೆದುಕೊಂಡು ಬಂದ ಸೂರಪ್ಪ ಬಾಬು, ನಂತರ ಜಗ್ಗೇಶ್ ಅವರನ್ನು ಸಂಪರ್ಕಿಸಿದ್ದಾರೆ. ಜಗ್ಗೇಶ್ ನೆರವಿನೊಂದಿಗೆ ಕೇಂದ್ರ ಸಚಿವ ಸದಾನಂದ ಗೌಡರನ್ನು ಸಂಪರ್ಕಿಸಿದ್ದಾರೆ. ಯಾವಾಗ ಕೇಂದ್ರ ಸಚಿವರ ಕರೆ ಬಂತೋ ಮುಂಬೈ ಪೊಲೀಸರು ಖದೀಮನಿಗೆ ನೋಟಿಸ್ ಕೊಟ್ಟಿದ್ದಾರೆ. ಇತ್ತ ಬೆಂಗಳೂರಿನಲ್ಲೂ ಕೇಸ್ ದಾಖಲಾಗಿದೆ. ತಕ್ಷಣ ಹೆದರಿದ ಪೋಲೆಂಡ್‍ನಲ್ಲಿದ್ದ ಅಜಯ್ ಪಾಲ್ ಮತ್ತು ಸಂಜಯ್ ಪಾಲ್, ಸೂರಪ್ಪ ಬಾಬು ಅವರ ಅಸಿಸ್ಟೆಂಟ್‍ರನ್ನು ಕಳಿಸಿಕೊಟ್ಟಿದ್ದಾರೆ.

    ಈಗ ನೋಡಿದರೆ ಲೆಕ್ಕದ ಪ್ರಕಾರ ಏಜೆನ್ಸಿಯವರೇ ನಮಗೆ ಹಣ ಕೊಡಬೇಕಿದೆ. ಅವರಿಬ್ಬರು ಮೆಡಿಕಲ್ ಮಾಫಿಯಾದಲ್ಲೂ ಇದ್ದಂತಹ ವ್ಯಕ್ತಿಗಳು. ತಿಂಗಳಿಗೊಂದು ಕಂಪೆನಿ ಆರಂಭಿಸಿ ವಂಚಿಸುವುದೇ ಅವರ ಕಾಯಕ. ಇವರ ವಿರುದ್ಧ ಹೋರಾಟ ಮುಂದುವರಿಯುತ್ತೆ ಎಂದಿದ್ದಾರೆ ಸೂರಪ್ಪ ಬಾಬು.

  • ತೆಲುಗಿನಲ್ಲಿ ಕೋಟಿಗೊಬ್ಬ-3ಯ ಪಟಾಕಿ

    ತೆಲುಗಿನಲ್ಲಿ ಕೋಟಿಗೊಬ್ಬ-3ಯ ಪಟಾಕಿ

    ಕೋಟಿಗೊಬ್ಬ 3 ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಸುದೀಪ್ ಅವರ ಹಿಂದಿನ ಚಿತ್ರಗಳಂತೆ ಕೋಟಿಗೊಬ್ಬ 3 ಕೂಡಾ ಬಹುಭಾಷೆಗಳಿಗೆ ಹೋಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಚಿತ್ರದ 3 ಹಾಡುಗಳನ್ನು ತೆಲುಗಿನಲ್ಲೂ ರಿಲೀಸ್ ಮಾಡಲಾಗಿದೆ.

    ಕನ್ನಡದಲ್ಲಿ ಹಲ್‍ಚಲ್ ಎಬ್ಬಿಸಿರುವ ಪಟಾಕಿ ಪೋರಿಯೋ ಹಾಡು ತೆಲುಗಿನಲ್ಲೂ ಹಬ್ಬ ಮಾಡಲು ಸಿದ್ಧವಾಗುತ್ತಿದೆ. ಕಿಚ್ಚ ಮತ್ತು ಆಶಿಕಾ ರಂಗನಾಥ್ ಕಿಚ್ಚು ಹಚ್ಚುತ್ತಿದ್ದಾರೆ. ಶಿವ ಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಎದುರು ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಸೂರಪ್ಪ ಬಾಬು ನಿರ್ಮಾಣದ ಚಿತ್ರ, ಶೂಟಿಂಗ್ ಮತ್ತು ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದು ರಿಲೀಸ್ ಆಗೋಕೆ ರೆಡಿಯಾಗಿದೆ. ವೇಯ್ಟಿಂಗ್ ಫಾರ್ ಕೊರೊನಾ ಗೋಯಿಂಗ್.

  • ದರ್ಶನ್ V/s ಸುದೀಪ್ : ಏಪ್ರಿಲ್'ನಲ್ಲಿ ಸ್ಟಾರ್ ವಾರ್..?

    ದರ್ಶನ್ V/s ಸುದೀಪ್ : ಏಪ್ರಿಲ್'ನಲ್ಲಿ ಸ್ಟಾರ್ ವಾರ್..?

    ಕನ್ನಡದಲ್ಲಿ ರಿಲೀಸ್ ಡೇಟ್ ಘೋಷಿಸಿದ ಮೊದಲ ಸ್ಟಾರ್ ಸಿನಿಮಾ ಯುವರತ್ನ. ಏಪ್ರಿಲ್ 1ಕ್ಕೆ ಯುವರತ್ನ, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬರೋದಾಗಿ ಘೋಷಿಸಿತು.

    ಬೆನ್ನಲ್ಲೇ ಪೊಗರು ಜನವರಿ 29ಕ್ಕೆ ಬರೋದಾಗಿ ಹೇಳಿಕೊಂಡಿತು. ಆದರೆ, ಏಪ್ರಿಲ್, ಸ್ಟಾರ್ ವಾರ್`ಗೆ ಸಾಕ್ಷಿಯಾಗುತ್ತಾ..? ಅಂಥಾದ್ದೊಂದು ಕುತೂಹಲವಂತೂ ಉದ್ಭವಿಸಿದೆ.

    ಏಪ್ರಿಲ್ 23ಕ್ಕೆ ಬರೋದಾಗಿ ರಾಬರ್ಟ್ ನಿರ್ಮಾಪಕ ಉಮಾಪತಿ ಘೋಷಿಸಿದ್ದಾರೆ. ಸೂರಪ್ಪ ಬಾಬು ಅವರ ಕೋಟಿಗೊಬ್ಬ 3 ಕೂಡಾ ಅದೇ ದಿನ ಬರೋದಾಗಿ ಹೇಳಿಕೊಂಡಿದೆ. ಹಾಗಾದರೆ ಏ.23 ದರ್ಶನ್ ವರ್ಸಸ್ ಸುದೀಪ್ ವಾರ್ ಆಗುತ್ತಾ..?

    ಇಲ್ಲ, ಇಲ್ಲ, ಹಾಗೇನೂ ಆಗಲ್ಲ. ನಾವೆಲ್ಲರೂ ಸ್ನೇಹಿತರೇ. ನಾವು ನಿರ್ಮಾಪಕರು ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ತೇವೆ ಎನ್ನುತ್ತಾರೆ ನಿರ್ಮಾಪಕ ಉಮಾಪತಿ.

  • ದರ್ಶನ್ ಹೀರೋಯಿನ್ ಆಗಿದ್ದವರೀಗ ಸುದೀಪ್'ಗೆ ಅಮ್ಮ

    ದರ್ಶನ್ ಹೀರೋಯಿನ್ ಆಗಿದ್ದವರೀಗ ಸುದೀಪ್'ಗೆ ಅಮ್ಮ

    ದರ್ಶನ್ ಚಿತ್ರಗಳಲ್ಲಿ ಮ್ಯೂಸಿಕಲಿ ಹಿಟ್ ಸಾಲಿನಲ್ಲಿರುವ ಚಿತ್ರ ಲಾಲಿಹಾಡು. ಆ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿದ್ದ ಅಭಿರಾಮಿ ಮತ್ತೊಮ್ಮೆ ವಾಪಸ್ ಬಂದಿದ್ದಾರೆ. ಸುದೀಪ್‍ಗೆ ತಾಯಿಯಾಗಿ.

    ಕೋಟಿಗೊಬ್ಬ 3 ಚಿತ್ರದಲ್ಲಿ ಅಭಿರಾಮಿ ಸುದೀಪ್ ಅವರಿಗೆ ತಾಯಿಯಾಗಿ ನಟಿಸಿದ್ದಾರೆ. ಮಲಯಾಳಂ ಮೂಲದ ಅಭಿರಾಮಿ ವಿದೇಶದಲ್ಲಿ ಸೆಟಲ್ ಆಗಿದ್ದರು. ಕನ್ನಡದಲ್ಲಿ ಅಭಿರಾಮಿ ಕಡೆಯದಾಗಿ ದಶರಥ ಚಿತ್ರದಲ್ಲಿ ನಟಿಸಿದ್ದರು. ಈಗ ಕೋಟಿಗೊಬ್ಬ 3 ಚಿತ್ರದಲ್ಲಿ ನಟಿಸುತ್ತಿದ್ದು, ಸುದೀಪ್ ಅವರ ತಾಯಿಯ ಪಾತ್ರ ಮಾಡಿದ್ದಾರಂತೆ.

  • ಪಟಾಕಿ ಪೋರಿಯೋ.. ಕೋಟಿಗೊಬ್ಬನ ಚಕೋರಿಯೋ..

    Kotgobba 3 'Pataki' Special

    ಪಟಾಕಿ ಪೋರಿಯೋ.. ನಾಟಿ ನಾಟಿ ಚೋರಿಯೋ.. ಡಬಲ್ ಬ್ಯಾರಲ್ ಕೋವಿಯೋ.. ಎಂದು ಬರೋ ಹಾಡು.. ಪಡ್ಡೆಗಳ ಎದೆಯೊಳಗೆ ಬುಲೆಟ್ಟ್ ಇಟ್ಟಂತಾಗಿಬಿಟ್ಟಿದೆ. ವಿಜಯ್ ಪ್ರಕಾಶ್ ಮತ್ತು ಅನುರಾಧಾ ಭಟ್ ಧ್ವನಿ, ಕಿಚ್ಚ ಸುದೀಪ್ ಮತ್ತು ಅಶಿಕಾ ರಂಗನಾಥ್ ಮೋಷನ್ ಫೋಟೋಗಳು, ಅರ್ಜುನ್ ಜನ್ಯಾರ ಕಿಕ್ಕು ಕೊಡೋ ಮ್ಯೂಸಿಕ್ಕಿನ.. ಉಪ್ಪು.. ಹುಳಿ.. ಖಾರ ಹೆಚ್ಚಿಸೋದು ಅನೂಪ್ ಭಂಡಾರಿಯವರ ಸಾಹಿತ್ಯ.

    ಸೂರಪ್ಪ ಬಾಬು ಪ್ರೊಡಕ್ಷನ್, ಶಿವ ಕಾರ್ತಿನ್ ಡೈರೆಕ್ಷನ್ ಇರೋ ಕೋಟಿಗೊಬ್ಬ 3 ಚಿತ್ರದ ಪೆಪ್ಪಿ ಸಾಂಗ್ ಇದು. ಈ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್, ರವಿಶಂಕರ್, ಅಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿದ್ದಾರೆ.

  • ಪ್ರೇಮಂ ಮಡೋನ್ನಾ.. ಕೋಟಿಗೊಬ್ಬಳು 3

    madonna sebastian for kotigobba 3

    ಕೋಟಿಗೊಬ್ಬ 3 ಚಿತ್ರತಂಡ ಜೂನ್ 10ರಿಂದ ವಿದೇಶಗಳಲ್ಲಿ ನಿರಂತರ 40 ದಿನ ಶೂಟಿಂಗ್‍ಗೆ ಸಿದ್ಧವಾಗಿದ್ದರೂ, ಚಿತ್ರದ ಹೀರೋಯಿನ್ ಅಂತಿಮವಾಗಿರಲಿಲ್ಲ. ಸುದೀಪ್‍ಗೆ ಜೋಡಿ ಯಾರು ಅನ್ನೋ ಕುತೂಹಲ ಹಾಗೆಯೇ ಇತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಕಿಚ್ಚನ ಜೋಡಿಯಾಗುತ್ತಿರುವುದು ಮಡೋನಾ ಸೆಬಾಸ್ಟಿಯನ್. ಪ್ರೇಮಂ ಖ್ಯಾತಿಯ ಬೆಡಗಿ.

    ಮಲಯಾಳಂನಿಂದ ಕನ್ನಡಕ್ಕೆ ಬರುತ್ತಿರುವ ಮಡೋನ್ನಾ ಪವರ್‍ಪಾಂಡಿ, ಜುಂಗ ಮೊದಲಾದ ಚಿತ್ರಗಳಲ್ಲೂ ನಟಿಸಿದ್ದಾರೆ. ಮಡೋನಾ ಕನ್ನಡಕ್ಕೆ ಬರುತ್ತಿರುವುದಕ್ಕೆ ಕಾರಣ, ಪವರ್‍ಪಾಂಡಿ ಚಿತ್ರ. ಪವರ್‍ಪಾಂಡಿಯನ್ನ ಸುದೀಪ್ ಕನ್ನಡದಲ್ಲಿ ಅಂಬಿ ನಿಂಗೆ ವಯಸ್ಸಾಯ್ತೋ ಹೆಸರಿನಲ್ಲಿ ಮಾಡುತ್ತಿದ್ದಾರೆ. ತಮಿಳಿನಲ್ಲಿ ಧನುಷ್ ಮಾಡಿದ್ದ ಪಾತ್ರವನ್ನ ಸುದೀಪ್ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ಮಡೋನಾ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಶೃತಿ ಹರಿಹರನ್ ಮಾಡುತ್ತಿದ್ದಾರೆ. ಆ ಸಿನಿಮಾ ನೋಡುವಾಗ ಕೋಟಿಗೊಬ್ಬ3ಗೆ ಈಕೆಯೇ ಹೀರೋಯಿನ್ ಆದರೆ ಚೆಂದ ಎಂದು ನಿರ್ದೇಶಕ ಕಾರ್ತಿಕ್, ಸೂರಪ್ಪ ಬಾಬು ಅವರಿಗೂ ಅನ್ನಿಸಿದೆ. 

    ಕಥೆಗೆ ಸೂಕ್ತವಾದ ಫೇಸ್ ಇದೆ. ಹೋಮ್ಲಿನೆಸ್ ಇದೆ. ಸುದೀಪ್ ಅವರಿಗೆ ಒಳ್ಳೆಯ ಜೋಡಿ ಆಗ್ತಾರೆ. ಈಕೆಯ ನಟನೆಯೂ ಚೆನ್ನಾಗಿದೆ. ನಿರ್ದೇಶಕರು ಹಾಗೂ ಸುದೀಪ್ ಒಪ್ಪಿದ ಮೇಲೆಯೇ ನಾಯಕಿಯನ್ನು ಫೈನಲ್ ಮಾಡಿದೆವು ಎಂದಿದ್ದಾರೆ ಸೂರಪ್ಪ ಬಾಬು.

  • ಫೆಬ್ರವರಿ 5ರಿಂದ ಮೇ 14 : ಸ್ಟಾರ್ ಹಬ್ಬ ಫಿಕ್ಸ್

    ಫೆಬ್ರವರಿ 5ರಿಂದ ಮೇ 14 : ಸ್ಟಾರ್ ಹಬ್ಬ ಫಿಕ್ಸ್

    ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ಬಂದರೆ ಪ್ರೇಕ್ಷಕರು ಥಿಯೇಟರಿಗೆ ಖಂಡಿತಾ ಬರುತ್ತಾರೆ ಎಂಬ ವಾದ, ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಸ್ಟಾರ್ ಚಿತ್ರಗಳೇ ಕ್ಯೂನಲ್ಲಿರೋದ್ರಿಂದ ಎಲ್ಲರೂ ಕುಳಿತು ಮಾತನಾಡಿ, ಒಂದಷ್ಟು ಗ್ಯಾಪ್ ಕೊಟ್ಟು ಥಿಯೇಟರಿಗೆ ಬಂದರೆ ಚಿತ್ರರಂಗಕ್ಕೇ ಒಳ್ಳೆಯದು ಎಂಬ ಅಭಿಪ್ರಾಯವೂ ಕೇಳಿ ಬಂದಿತ್ತು. ಹೀಗಾಗಿಯೇ ಎಲ್ಲ ಚಿತ್ರಗಳ ನಿರ್ಮಾಪಕರೂ ಒಟ್ಟಿಗೇ ಕುಳಿತು ಮಾತನಾಡಿಕೊಂಡು ಒಂದು ಚಿತ್ರ ಇನ್ನೊಂದು ಚಿತ್ರಕ್ಕೆ ಅಡ್ಡಿ ಮಾಡದಂತೆ ರಿಲೀಸ್ ಮಾಡುತ್ತಿದ್ದಾರೆ.

    ಫೆ.5 : ಇನ್ಸ್‍ಪೆಕ್ಟರ್ ವಿಕ್ರಂ : ಪ್ರಜ್ವಲ್ ದೇವರಾಜ್, ಭಾವನಾ ಜೋಡಿ. ಡೈರೆಕ್ಟರ್ ನರಸಿಂಹ, ನಿರ್ಮಾಪಕ ವಿಖ್ಯಾತ್

    ಫೆ.19 : ಪೊಗರು : ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಜೋಡಿ. ನಂದಕಿಶೋರ್ ನಿರ್ದೇಶನ, ಬಿ.ಕೆ.ಗಂಗಾಧರ್ ನಿರ್ಮಾಣ

    ಮಾ.11 : ರಾಬರ್ಟ್, ದರ್ಶನ್, ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ಕಾಂಬಿನೇಷನ್. ತರುಣ್ ಸುಧೀರ್ ನಿರ್ದೇಶನ. ಉಮಾಪತಿ ನಿರ್ಮಾಣ

    ಏ.01 : ಯುವರತ್ನ. ಪುನೀತ್ ರಾಜ್‍ಕುಮಾರ್, ಸಯೇಷಾ  ಜೋಡಿ. ಸಂತೋಷ್ ಆನಂದ ರಾಮ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣ

    ಏ.15 : ಸಲಗ, ದುನಿಯಾ ವಿಜಯ್ ನಾಯಕ ಮತ್ತು ನಿರ್ದೇಶಕ. ಸಂಜನಾ ಆನಂದ್ ನಾಯಕಿ. ಡಾಲಿ ಧನಂಜಯ್ ನಟಿಸಿರುವ ಚಿತ್ರಕ್ಕೆ ಕೆ.ಪಿ.ಶ್ರೀಕಾಂತ್ ನಿರ್ಮಾಪಕ.

    ಏ.29 : ಕೋಟಿಗೊಬ್ಬ 3. ಕಿಚ್ಚ ಸುದೀಪ್ ನಟಿಸಿರುವ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಸೂರಪ್ಪ ಬಾಬು ನಿರ್ಮಾಪಕ.

    ಮೇ. 14 : ಭಜರಂಗಿ 2. ಶಿವರಾಜ್ ಕುಮಾರ್, ಜಾಕಿ ಭಾವನಾ, ಶೃತಿ ನಟಿಸಿರುವ ಚಿತ್ರಕ್ಕೆ ಹರ್ಷ ನಿರ್ದೇಶಕ. ಜಯಣ್ಣ ನಿರ್ಮಾಪಕ.

  • ಯೂ ಟ್ಯೂಬ್‍ನಿಂದ ಕೋಟಿಗೊಬ್ಬ 3 ಟೀಸರ್ ಡಿಲೀಟ್

    kotigobba 3 teaser removed from yourtube

    ಇತ್ತೀಚೆಗೆ ರಿಲೀಸ್ ಆಗಿ ಸುದೀಪ್ ಅಭಿಮಾನಿಗಳ ಜೋಶ್ ಹೆಚ್ಚಿಸಿದ್ದ ಕೋಟಿಗೊಬ್ಬ 3 ಚಿತ್ರದ ಟೀಸರ್ ಯೂಟ್ಯೂಬ್‍ನಿಂದ ನಾಪತ್ತೆಯಾಗಿದೆ. ಅರೆ.. ಏನಿದು.. ಏಕೆ ಹೀಗಾಯ್ತು.. ಎಂದು ಹುಡುಕಿದರೆ ಸಿಗುತ್ತಿರುವ ಉತ್ತರ ಮುಂಬೈನ ವೈಬ್ರೆಂಟ್ ಲಿಮಿಟಿಡ್ ಕಂಪೆನಿ.

    ಕೋಟಿಗೊಬ್ಬ 3 ಚಿತ್ರವನ್ನು ಪೋಲೆಂಡ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಅಲ್ಲಿ ಶೂಟ್ ಮಾಡಿದ ದೃಶ್ಯಗಳ ಹಕ್ಕುಗಳು ವೈಬ್ರೆಂಟ್ ಕಂಪೆನಿ ಹೆಸರಲ್ಲಿವೆಯಂತೆ. ನಮಗೆ ಬಾಕಿ ಕೊಟ್ಟಿಲ್ಲ ಎಂದು ತಗಾದೆ ತೆಗೆದಿದ್ದ ಕಂಪೆನಿ, ಈಗ ಟೀಸರ್‍ಗೆ ಬ್ರೇಕ್ ಹಾಕಿಸಿದೆ.

    ಇದು ಹಣಕ್ಕಾಗಿ ನಡೆಯುತ್ತಿರುವ ಸಂಚು. ಕಂಪೆನಿಯ ಅಜಯ್ ಪಾಲ್ ನಮಗೇ ಮೋಸ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಕೋಟಿಗೊಬ್ಬ 3 ಟೀಸರ್ ಮತ್ತೆ ಯೂಟ್ಯೂಬ್‍ಗೆ ಬರಲಿದೆ ಎಂದಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.

  • ಶಾಕಿಂಗ್ : ಸಲಗ, ಕೋಟಿಗೊಬ್ಬ 3.. ಇಬ್ಬರನ್ನೂ ಬೆಚ್ಚಿಬೀಳಿಸಿದ್ರು..!

    ಶಾಕಿಂಗ್ : ಸಲಗ, ಕೋಟಿಗೊಬ್ಬ 3.. ಇಬ್ಬರನ್ನೂ ಬೆಚ್ಚಿಬೀಳಿಸಿದ್ರು..!

    ಏನಿದು ಶಾಕಿಂಗ್.. ಕೋಟಿಗೊಬ್ಬ 3ಗೆ ರಿಲೀಸ್ ದಿನವೇ ಚಿತ್ರರಂಗದ ಒಂದಷ್ಟು ನಿರ್ಮಾಪಕರು, ವಿತರಕರು ಶಾಕ್ ಕೊಟ್ಟಿದ್ರು. ಸಲಗ ಚಿತ್ರಕ್ಕೆ ಜೈ ಕರ್ನಾಟಕ ಸಂಘಟನೆಯವರು ಶಾಕ್ ಕೊಡೋ ಹಾದಿಯಲ್ಲಿದ್ದಾರೆ. ಆದರೆ ಇವರೆಲ್ಲರಿಗಿಂತ ದೊಡ್ಡದಾಗಿ ಶಾಕ್ ಕೊಟ್ಟಿರೋದು ಪೈರಸಿ ಕ್ರಿಮಿನಲ್ಸ್.

    ತಮಿಳ್ ರಾಕರ್ಸ್ ಮಾದರಿಯಲ್ಲೇ ಕನ್ನಡ ರಾಕರ್ಸ್ ಹೆಸರಿನಲ್ಲಿ ಪೈರಸಿ ಮಾಡಿ ಇಂಟರ್‍ನೆಟ್ಟಿಗೆ ಬಿಟ್ಟಿದ್ದಾರೆ ಪೈರಸಿ ಕ್ರಿಮಿನಲ್ಸ್. ಅಷ್ಟೇ ಅಲ್ಲ.. ಟೆಲಿಗ್ರಾಂ ಮೂಲಕ ಎಲ್ಲರಿಗೂ ಲಿಂಕ್ ತಲುಪಿಸುತ್ತಿದ್ದಾರೆ. ಎರಡೂ ಚಿತ್ರಗಳ ಲಿಂಕ್ ಹಾಕಿದ್ದಾರೆ.

    ಸುದೀಪ್ ಅಭಿನಯದ ಕೋಟಿಗೊಬ್ಬ 3, ಸೂರಪ್ಪ ಬಾಬುಗೆ ನಿರ್ಣಾಯಕ ಸಿನಿಮಾ. ಏನೇನೋ ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ಚಿತ್ರ ಈಗಾಗಲೇ ಗೆಲುವಿನ ಹಾದಿಯಲ್ಲಿದೆ. ಹೀಗಾದರೆ.. ಆ ಗೆಲುವಿನ ಸವಿ ಸವಿಯೋದು ಕಷ್ಟ.

    ಅತ್ತ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಕೂಡಾ ಅಷ್ಟೆ.. ಚಿತ್ರಕ್ಕೆ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ದುನಿಯಾ ವಿಜಯ್ ನಿರ್ದೇಶನದ ಫಸ್ಟ್ ಮೂವಿ. ನಿರ್ಮಾಪಕರೇನೋ ಈಗಾಗಲೇ ಸೇಫ್ ಆಗಿದ್ದಾರೆ. ಆದರೆ.. ವಿತರಕರು..? 

  • ಶಿವರಾತ್ರಿಗೆ ಕಿಚ್ಚ ಕಿಚ್ಚ ಎನ್ನಿರೋ..

    kotigobba 3 teaser for shivaratri

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ರಿಲೀಸ್ ಆಗೋಕೆ ಇನ್ನೇನು ಕೆಲವೇ ದಿನ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿರುವ ಚಿತ್ರ ಟೀಸರ್ ರಿಲೀಸ್ ಮಾಡೋಕೆ ಶಿವರಾತ್ರಿಯಂದು ಮುಹೂರ್ತ ಫಿಕ್ಸ್ ಆಗಿದೆ.

    2020ರ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ 3 ಚಿತ್ರದ ಟೀಸರ್ ಫೆಬ್ರವರಿ 21 ರಿಲೀಸ್ ಆಗುತ್ತಿದ್ದು, ಶಿವರಾತ್ರಿಯ ದಿನ ಕಿಚ್ಚನ ಜಪ ಮಾಡುವಂತಾಗಲಿದೆ.

    ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ ಕೋಟಿಗೊಬ್ಬ 3 ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶನವಿದೆ. ಕೋಟಿಗೊಬ್ಬ 2 2016ರಲ್ಲಿ ರಿಲೀಸ್ ಆಗಿತ್ತು. ಅದಾದ 4 ವರ್ಷಗಳ ನಂತರ  ಕೋಟಿಗೊಬ್ಬ 3 ರಿಲೀಸ್ ಆಗುತ್ತಿದೆ. ಫೆಬ್ರವರಿ 21ರ ಶಿವರಾತ್ರಿ ದಿನ ಮಧ್ಯಾಹ್ನ 12 ಗಂಟೆ 1 ನಿಮಿಷಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಸುದೀಪ್ ಎದುರು ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿದ್ದಾರೆ.

  • ಸಂಕ್ರಾಂತಿ ನಂತರ ಕೋಟಿಗೊಬ್ಬ 3

    kotigobba 3 shooting to resume after sankranthi

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಕಥೆ ಏನಾಯ್ತು..? ಚಿತ್ರದ ಶೂಟಿಂಗ್ ಎಲ್ಲಿಗೆ ಬಂತು..? ಇಂತಹ ಹಲವು ಪ್ರಶ್ನೆಗಳಿಗೆ ಚಿತ್ರತಂಡದಿಂದ ಉತ್ತರ ಬಂದಿದೆ. ಚಿತ್ರದ ಶೇ.60ರಷ್ಟು ಭಾಗದ ಶೂಟಿಂಗ್ ಮುಗಿದಿದ್ದು, ಸಂಕೃಆಂತಿ ನಂತರ ಉಳಿದ ಭಾಗದ ಚಿತ್ರೀಕರಣ ಶುರುವಾಗಲಿದೆಯಂತೆ. 

    ಇನ್ನುಳಿದ ಶೇ.40ರಷ್ಟು ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ನಡೆಸಲು ಪ್ಲಾನ್ ಮಾಡಿದೆ ಚಿತ್ರತಂಡ. ಸದ್ಯಕ್ಕೆ ಸುದೀಪ್, ಕನ್ನಡದಲ್ಲಿ ಪೈಲ್ವಾನ್ ಹಾಗೂ ತೆಲುಗಿನ ಸೈರಾದಲ್ಲಿ ಕಂಪ್ಲೀಟ್ ಬ್ಯುಸಿ. ಬೇಸಗೆ ರಜೆಯ ಹೊತ್ತಿಗೆ ಪೈಲ್ವಾನ್ ತೆರೆಗೆ ಬರಲಿದ್ದು, ಅದಾದ ನಂತರ ಕೋಟಿಗೊಬ್ಬ 3 ರಿಲೀಸ್‍ಗೆ ಪ್ಲಾನ್ ಮಾಡುತ್ತಿದ್ದಾರಂತೆ ಸುದೀಪ್. 

  • ಸರ್ಕಾರಿ ಶಾಕ್ : ಸದ್ಯಕ್ಕೆ ಯಾವ ಸ್ಟಾರ್ ಸಿನಿಮಾನೂ ಇಲ್ಲ

    ಸರ್ಕಾರಿ ಶಾಕ್ : ಸದ್ಯಕ್ಕೆ ಯಾವ ಸ್ಟಾರ್ ಸಿನಿಮಾನೂ ಇಲ್ಲ

    ಯುವರತ್ನ ಚಿತ್ರದ ಜೊತೆ ಸರ್ಕಾರ ನಡೆದುಕೊಂಡ ರೀತಿ, ದಾರಿ ತಪ್ಪಿಸಿದ ಬಗೆ ಚಿತ್ರರಂಗಕ್ಕೆ ದೊಡ್ಡ ಶಾಕ್‍ನ್ನೇ ನೀಡಿದೆ. ಯುವರತ್ನ ಚಿತ್ರ ಹೊಂಬಾಳೆಯಂತಾ ದೊಡ್ಡ ಬ್ಯಾನರ್ ಸಿನಿಮಾ. ಪುನೀತ್ ಹೀರೋ ಆಗಿದ್ದ ಚಿತ್ರ. ಹೀಗಿದ್ದರೂ ಅವರಿಗೇ ಈ ರೀತಿ ತೊಂದರೆಯಾಗಿರಬೇಕಾದರೆ... ಇಂತಾದ್ದೊಂದು ಪ್ರಶ್ನೆ ಉದ್ಭವಿಸಿದ್ದೇ ತಡ, ಬಹುತೇಕ ಚಿತ್ರಗಳು ಬಿಡುಗಡೆಯನ್ನೇ ಮುಂದಕ್ಕೆ ಹಾಕಿವೆ.

    ಕೋವಿಡ್ ನಂತರ ಚಿತ್ರರಂಗದ ಸ್ಟಾರ್ ನಟರ ಚಿತ್ರದ ನಿರ್ಮಾಪಕರೆಲ್ಲ ಒಟ್ಟಿಗೇ ಕೂತು ಪ್ಲಾನ್ ಮಾಡಿಕೊಂಡೇ ಸಿನಿಮಾ ರಿಲೀಸ್ ಮಾಡಿದ್ದರು. ಒಬ್ಬರ ಚಿತ್ರಕ್ಕೆ ಇನ್ನೊಬ್ಬರ ಚಿತ್ರಕ್ಕೆ ತೊಂದರೆಯಾಗಬಾರದು ಎಂದೇ ಯೋಚಿಸಿ ಹೆಜ್ಜೆಯಿಟ್ಟಿದ್ದರು. ಹೀಗಾಗಿಯೇ ಪೊಗರು, ರಾಬರ್ಟ್‍ಗೆ ಯಾವುದೇ ದೊಡ್ಡ ಚಿತ್ರ ಎದುರಾಗಲಿಲ್ಲ. ಆದರೆ,

    ಯುವರತ್ನ ಚಿತ್ರಕ್ಕೆ ಸರ್ಕಾರವೇ ದೊಡ್ಡ ತಡೆಗೋಡೆಯಾಗಿಬಿಟ್ಟಿತು.

    ಹೀಗಾಗಿ ಮುಂದಿನ ವಾರ ರಿಲೀಸ್ ಆಗೋಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಕೆ.ಪಿ.ಶ್ರೀಕಾಂತ್, ದುನಿಯಾ ವಿಜಯ್ ಕಾಂಬಿನೇಷನ್‍ನ ಸಲಗ ಮುಂದಕ್ಕೆ ಹೋಗಿದೆ. ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3, ಶಿವಣ್ಣ ನಟನೆಯ ಭಜರಂಗಿ 2 ಯಾವಾಗ ರಿಲೀಸ್ ಆಗುತ್ತವೆ ಎಂಬ ಬಗ್ಗೆ ಗ್ಯಾರಂಟಿಯಿಲ್ಲ.