` pushkar mallikarjun, - chitraloka.com | Kannada Movie News, Reviews | Image

pushkar mallikarjun,

 • ಮಾಲಿವುಡ್‍ಗೆ ಪುಷ್ಕರ್

  pushkar films debuts in mollywood

  ಕನ್ನಡದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಲಯಾಳಂನತ್ತ ಪಯಣ ಬೆಳೆಸಿದ್ದಾರೆ. ಮಲಯಾಳಂನಲ್ಲಿ ತಿಂಗಳಾಯ್ಚ ನಿಶ್ಚಯಂ ಅನ್ನೋ ಚಿತ್ರವನ್ನು ಶುರು ಮಾಡುತ್ತಿದ್ದಾರೆ. ನಿರ್ದೇಶಕರು ಸೆನ್ನಾ ಹೆಗ್ಡೆ. ಕನ್ನಡದಲ್ಲಿ ಕಥೆಯೊಂದು ಶುರುವಾಗಿದೆ ಚಿತ್ರದ ಮೂಲಕ ಗಮನ ಸೆಳೆದಿದ್ದ ಸೆನ್ನಾ ಹೆಗ್ಡೆ, ಮಲಯಾಳಂನಲ್ಲಿ ಒನ್ಸ್ ಎಗೇಯ್ನ್ ಪುಷ್ಕರ್ ಬ್ಯಾನರ್ ಮೂಲಕವೇ ಎಂಟ್ರಿ ಕೊಡುತ್ತಿದ್ದಾರೆ.

  ಸೆನ್ನಾ ಹೆಗ್ಡೆ, ಕೇರಳದ ಗಡಿ ಭಾಗದವರು. ಕನ್ನಡದವರಾದರೂ, ಮಲಯಾಳಂ ಚೆನ್ನಾಗಿಯೇ ಗೊತ್ತು. ಹೀಗಾಗಿ ಪುಷ್ಕರ್ ಬ್ಯಾನರ್ ಮೂಲಕವೇ ಮಾಲಿವುಡ್ ಎಂಟ್ರಿ ಕೊಡುತ್ತಿದ್ದಾರೆ.

  ಕನ್ನಡದಲ್ಲಿ ಗೋಧಿಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್, ಕಥೆಯೊಂದು ಶುರುವಾಗಿದೆ ಚಿತ್ರಗಳನ್ನು ನಿರ್ಮಿಸಿ ಗೆದ್ದಿರುವ ಪುಷ್ಕರ್, ಭೀಮಸೇನ ನಳಮಹರಾಜ, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ, ಅವತಾರ್ ಪುರುಷ ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಯಲ್ಲೇ ಮಾಲಿವುಡ್ ಎಂಟ್ರಿ.

 • ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೊಂದು ಶುಭವಾರ್ತೆ

  rakshit shetty in tenali

  ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಕ್ಷಿತ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಸಿನಿಮಾ. ಆ ಸಿನಿಮಾದ ನಿರ್ದೇಶಕ ಹೇಮಂತ್ ರಾವ್. ಸದ್ಯಕ್ಕೆ ಕವಲುದಾರಿಯಲ್ಲಿದ್ದಾರೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಈಗ.. ಆ ಮೂರೂ ಜನ ಮತ್ತೆ ಒಟ್ಟಾಗುತ್ತಿದ್ದಾರೆ. ತೆನಾಲಿ ಮೂಲಕ.

  ತೆನಾಲಿ, ಹೇಮಂತ್ ರಾವ್ ಬರೆಯುತ್ತಿರುವ ಹೊಸ ಕಥೆ. ಸದ್ಯಕ್ಕೆ ಐಡಿಯಾ ಮಾತ್ರ. ಕಥೆ ಬರೆಯೋಕೆ ಕೂರಬೇಕು. ಕವಲುದಾರಿ ಮುಗಿದ ಮೇಲೆ, ಹೊಸ ಸಾಹಸಕ್ಕೆ ಇಳಿಯಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಹೇಮಂತ್ ರಾವ್. ಹಿಟ್ ಜೋಡಿ ಒಂದಾದರೆ, ಹೊಸ ಸಿನಿಮಾ ಮಾಡಿದರೆ, ಅದಕ್ಕಿಂತ ಶುಭ ಸುದ್ದಿ ಇನ್ನೇನಿದೆ. ಅಲ್ವೇ..

 • ರಕ್ಷಿತ್ ಶೆಟ್ಟಿಗೆ 12 ಕೋಟಿ ಸಂಭಾವನೆ

  rakshith gets 12 crore remuneration

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ರಕ್ಷಿತ್ ಶೆಟ್ಟಿ ಮೂರು ಸಿನಿಮಾ ಮಾಡೋಕೆ ಓಕೆ ಎಂದಿದ್ದಾರೆ ಎಂಬ ಸುದ್ದಿ ಬಂದಿರುವಾಗಲೇ ಆ ಮೂರೂ ಸಿನಿಮಾಗಳಿಗಾಗಿ ಈಗಾಗಲೇ 12 ಕೋಟಿ ಸಂಭಾವನೆ ಕೊಡಲಾಗಿದೆ ಎಂಬ ಸುದ್ದಿಯೂ ಹೊರಬಿದ್ದಿದೆ.

  ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರುವ ಮೂರು ಚಿತ್ರಗಳಲ್ಲಿ 2 ಚಿತ್ರಗಳಿಗೆ ಅವರೇ ಹೀರೋ. ಇನ್ನೊಂದು ಸಿನಿಮಾಗೆ ಹೀರೋ ಕಂ ಡೈರೆಕ್ಟರ್. ಈ ಮೂರೂ ಸಿನಿಮಾಗಳಿಗೆ ತಲಾ 4 ಕೋಟಿಯಂತೆ 12 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

 • ರಕ್ಷಿತ್ ಶೆಟ್ಟಿಗೆ ಜೀರ್ಜಿಂಬೆ ಸೈಕಲ್ ಕಾಣಿಕೆ

  rakshit shetty gets special gift from jeerjimbe hudgi

  ರಕ್ಷಿತ್ ಶೆಟ್ಟಿಗೆ ಒಂದು ಮರೆಯಲಾಗದ ಉಡುಗೊರೆ ಕೊಟ್ಟಿದೆ. ರಕ್ಷಿತ್ ಶೆಟ್ಟಿಗೆ ಅಂತಾದ್ದೊಂದು ಕಾಣಿಕೆ ನೀಡಿರುವುದು ಸಿರಿ ವಾನಳ್ಳಿ. ಆ ಕಾಣಿಕೆ ನೀಡುವುದಕ್ಕೆ ಕಾರಣ.. ಆಕೆ ಜೀರ್ಜಿಂಬೆ ಚಿತ್ರದ ನಾಯಕಿ. ಜೀರ್ಜಿಂಬೆ ಎಂಬ ಮಕ್ಕಳ ಚಿತ್ರದಲ್ಲಿ ಸೈಕಲ್ ಮಹತ್ವದ ಪಾತ್ರ ವಹಿಸುತ್ತದೆ. ಸೈಕಲ್ ಕಲಿಯುತ್ತಾ ಕಲಿಯುತ್ತಾ ಬಾಲ್ಯ ವಿವಾಹದ ಸಿಡಿದೇಳುವ ರುದ್ರಿಯಾಗಿ ನಟಿಸಿದ್ದಾಳೆ ಸಿರಿ ವಾನಳ್ಳಿ. ಆ ಸಿರಿ, ರಕ್ಷಿತ್ ಶೆಟ್ಟಿಗೆ ಸೈಕಲ್‍ವೊಂದನ್ನು ಗಿಫ್ಟ್ ಆಗಿ ನೀಡಿದ್ದಾಳೆ.

  ಸೈಕಲ್ ಜೊತೆ ಜೊತೆಯಲ್ಲೇ ಬಾಲ್ಯದ ನೆನಪಿಗೆ ಜಾರಿದ ರಕ್ಷಿತ್ ಶೆಟ್ಟಿ, ತಮ್ಮ ಮೊದಲ ಸೈಕಲ್ ಕಥೆ ಹಂಚಿಕೊಂಡರು. ಮಕ್ಕಳು ಗಿಫ್ಟ್ ಮತ್ತು ಸುತ್ತುವ ಚಟಕ್ಕೆ ಬಿದ್ದರೆ ಹಾಳಾಗಿ ಬಿಡುತ್ತಾರೆ ಅನ್ನೋದು ರಕ್ಷಿತ್ ತಂದೆಯ ವಾದವಾಗಿತ್ತಂತೆ. ಮನೆಯನ್ನು ಬಿಟ್ಟು ಹೊರಗೇ ಹೋಗದ ರಕ್ಷಿತ್‍ಗೆ ಆಗ.. ರಕ್ಷಿತ್‍ರ ಚಿಕ್ಕಪ್ಪ, ತಮ್ಮ ಮನೆಗೆ ಬಂದು 2 ವಾರ ಇದ್ದರೆ ಸೈಕಲ್ ಕೊಡಿಸುವ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದರಂತೆ. ತಮ್ಮ ಮೊದಲ ಸೈಕಲ್ ಬಂದಿದ್ದು ಹಾಗೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಾರ್ತಿಕ್ ಸರಗೂರ್ ನಿರ್ದೇಶನದ ಸಿನಿಮಾದಲ್ಲಿ ಮಕ್ಕಳಿಗೂ ಪ್ರಿಯವಾದ ಅಂಶಗಳಿವೆ ಅಂತಾರೆ ಪುಷ್ಕರ್.

 • ರಕ್ಷಿತ್ ಶೆಟ್ಟಿಗೆ ಹೀರೋಯಿನ್ ಆಗೋಕೆ ಆಸೆಯಿದ್ದರೆ..

  pushkar and rakshit calls for suditions

  ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ಅಡಿಷನ್ ಮೂಲಕವೇ ನಾಯಕಿಯನ್ನು ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಹೊಸ ಮುಖ ಬೇಕು. ಅಭಿನಯಿಸುವ ಪ್ರತಿಭೆ ಇರಬೇಕು. ಪರಂವಾ ಸ್ಟುಡಿಯೋಸ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

  ನಾಯಿ ಮತ್ತು ಮನುಷ್ಯನ ನಡುವಿನ ಬಾಂಡಿಂಗ್, ಚಿತ್ರದ ಕಥೆ. ರಕ್ಷಿತ್ ಅವರ ಬಳಿಯೇ ಕೆಲಸ ಮಾಡುತ್ತಿದ್ದ ಕಿರಣ್ ರಾಜ್, ಚಿತ್ರದ ನಿರ್ದೇಶಕ. ಚಾರ್ಲಿ ಅನ್ನೋದು ನಾಯಿಯ ಹೆಸರಾದರೆ, 777 ಅನ್ನೋದು ಅದರ ಲೈಸೆನ್ಸ್ ನಂಬರ್. 

  ಸ್ಸೋ.. ಇನ್ನೇಕೆ ತಡ.. This email address is being protected from spambots. You need JavaScript enabled to view it. ಗೆ ಒಂದು ಮೇಯ್ಲ್ ಮಾಡಿ. ನಿಮಗೆ ನೆನಪಿರಲಿ.. ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಚಿತ್ರಕ್ಕೆ ಆಯ್ಕೆಯಾಗಿದ್ದೂ ಕೂಡಾ ಇಂತಹ ಅಡಿಷನ್ ಮೂಲಕವೇ.

   

 • ರಾಜ್ ಫ್ಯಾಮಿಲಿಗೆ ಪುಷ್ಕರ್ ಸಿನಿಮಾ

  pushkar to produce vinay rajkumar's movie

  ಕನ್ನಡ ಚಿತ್ರರಂಗದ ಪ್ರತಿಷ್ಠಿತ ಬ್ಯಾನರ್ ಆಗಿರುವ ಪುಷ್ಕರ್ ಫಿಲಂಸ್, ಇದೇ ಮೊದಲ ಬಾರಿಗೆ ರಾಜ್ ಫ್ಯಾಮಿಲಿಗೆ ಸಿನಿಮಾ ಮಾಡಲು ಮುಂದಾಗಿದೆ. ಹೀರೋ ಆಗುತ್ತಿರುವುದು ವಿನಯ್ ರಾಜ್‍ಕುಮಾರ್. ನಿರ್ದೇಶಕರಾಗಿ ಕರಮ್ ಚಾವ್ಲಾ ಆಯ್ಕೆಯಾಗಿದ್ದಾರೆ.

  ಕರಂ ಚಾವ್ಲಾ ಮೂಲತಃ ಸಿನಿಮಾಟೋಗ್ರಾಫರ್. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಅವನೇ ಶ್ರೀಮನ್ನಾರಾಯಣ ಹಾಗೂ ರನ್ ಆ್ಯಂಟನಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದವರು. ಈಗ ನಿರ್ದೇಶಕರಾಗುತ್ತಿದ್ದಾರೆ.

  ವಿನಯ್ ಈ ಚಿತ್ರದಲ್ಲಿ ಬಾಕ್ಸರ್ ಆಗಿ ನಟಿಸುತ್ತಿದ್ದು, ರಿಯಲೆಸ್ಟಿಕ್ ಕಮರ್ಷಿಯಲ್ ಮೂವಿ ಎಂದಿದ್ದಾರೆ ವಿನಯ್. ವಿನಯ್ ಹುಟ್ಟುಹಬ್ಬದಂದೇ ಚಿತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದು, ಬಾಕ್ಸರ್ ಪಾತ್ರಕ್ಕೆ ವಿನಯ್ ತಯಾರಿ ಆರಂಭಿಸಿದ್ದಾರೆ.

  ರಾಜ್ ಕುಟುಂಬದ ಜೊತೆ ಇದು ನನ್ನ ಮೊದಲ ಸಿನಿಮಾ. ಅದೇ ದೊಡ್ಡ ಖುಷಿ. ವಿನಯ್‍ಗೆ ಹೇಳಿ ಮಾಡಿಸಿದಂತಹ ರಗಡ್ ಕಥೆ ಇದೆ. ಕನ್ನಡದ ಮಟ್ಟಿಗೆ ಇದು ಹೊಸ ಸಿನಿಮಾ ಆಗಲಿದೆ ಎಂಬ ಭರವಸೆ ಕೊಟ್ಟಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ರೈತರಿಗೆ ಮಾರ್ಕೆಟ್ ಮತ್ತು ಮಾರ್ಗದರ್ಶನ : ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಲಾನ್

  pushkar's plans for agricultural platform

  ಪುಷ್ಕರ್ ಮಲ್ಲಿಕಾರ್ಜುನಯ್ಯ, ಕನ್ನಡದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರು. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲ ಚಿನ್ನ. ಈ ಲಾಕ್‍ಡೌನ್ ಮಧ್ಯೆ ಪುಷ್ಕರ್ ಹೊಸದೊಂದು ಸಾಹಸಕ್ಕೆ ಕೈ ಹಾಕುವ ಮನಸ್ಸು ಮಾಡಿದ್ದಾರೆ. ಅದಕ್ಕೆ ಅವರಿಗೆ ನೆರವಾಗಿರೋದು ಇಸ್ರೇಲ್‍ನಲ್ಲಿ ಮಾಡಿಕೊಂಡು ಬಂದ ಕೃಷಿ ಅಧ್ಯಯನ.

  ಅಲ್ಲಿ ಬಿಸಿಲು ಹೆಚ್ಚು. ನೀರೂ ಇಲ್ಲ. ಏನೇನೋ ಸಾಧಿಸಿದ್ದಾರೆ. ನಮ್ಮಲ್ಲಿ ನೀರಿದೆ. ಒಳ್ಳೆಯ ಹವಾಮಾನವೂ ಇದೆ. ಇದನ್ನು ಬಳಸಿಕೊಂಡು ಏನಾದರೂ ಮಾಡಬೇಕು. ಮಾರುಕಟ್ಟೆ, ಸಾವಯವ ಕೃಷಿ ವಿಧಾನ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಕಟಾವಿಗೆ ಮುನ್ನ ಗ್ರಾಹಕರನ್ನು ಗುರುತಿಸುವ ಪ್ರಕ್ರಿಯೆ, ವರ್ಷಪೂರ್ತಿ ಹಣ್ಣು, ತರಕಾರಿಗೆ ಒಂದೇ ಬೆಲೆ.. ಹೀಗೆ ಹಲವು ಕನಸುಗಳನ್ನಿಟ್ಟುಕೊಂಡು ಆ್ಯಪ್ ತಯಾರು ಮಾಡುತ್ತಿದ್ದೇವೆ. ಯಾವ್ಯಾವ ರೈತರು ಏನೇನು ಬೆಳೆಯುತ್ತಿದ್ದಾರೆ, ಎಲ್ಲೆಲ್ಲಿ, ಎಷ್ಟೆಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿಯೂ ಇದರಲ್ಲಿರುತ್ತೆ ಎನ್ನುವ ಪುಷ್ಕರ್, ಈ ಮಾಹಿತಿಗಾಗಿ ಐಎಎಸ್ ಅಧಿಕಾರಿಗಳು, ಕೃಷಿ ತಜ್ಞರು, ಪರಿಣತ ರೈತರನ್ನು ಭೇಟಿ ಮಾಡುತ್ತಿದ್ದಾರೆ.

  ನನ್ನೊಂದಿಗೆ ಇನ್ನೂ 10 ಗೆಳೆಯರು ಕೈಜೋಡಿಸಿದ್ದಾರೆ. ರೈತರಲ್ಲಿ ಕೋಟಿ ಕೋಟಿ ಲಾಭ ಮಾಡುತ್ತಿರುವವರೂ ಇದ್ದಾರೆ. ಸಣ್ಣ ರೈತರನ್ನು ಆ ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶ ಎನ್ನುವ ಪುಷ್ಕರ್ ಕಣ್ಣಲ್ಲಿ ರೈತರಿಗೆ ನೆರವಾಗುವ ಕನಸುಗಳಿರುವುದಂತೂ ಸತ್ಯ.

 • ಸಿಂಪಲ್ ಸುನಿ, ಪುಷ್ಕರ್ ಜೊತೆ ದಿಗಂತ್ ಹೊಸ ಕಥೆ

  suni, diganth, pushkar team up for next film

  ಕಥೆಯೊಂದು ಶುರುವಾಗಿದೆ... ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರ ರಿಲೀಸ್‍ಗೂ ಮುನ್ನವೇ, ಪುಷ್ಕರ್ ಮತ್ತು ದಿಗಂತ್ ಮಧ್ಯೆ ಹೊಸದೊಂದು ಕಥೆ ಶುರುವಾಗುತ್ತಿದೆ. ಈ ಹೊಸ ಕಥೆ ಶುರು ಮಾಡುತ್ತಿರುವುದು ಸಿಂಪಲ್ ಸುನಿ.

  ಕಥೆಯೊಂದು ಶುರುವಾಗಿದೆ ಲವ್ ಸ್ಟೋರಿಯಾದರೆ, ಹೊಸ ಕಥೆ ರೊಮ್ಯಾಂಟಿಕ್ ಕಾಮಿಡಿ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡೋದ್ರಲ್ಲಿ ಸುನಿ ಎಕ್ಸ್‍ಪರ್ಟ್ ಆಗಿಬಿಟ್ಟಿದ್ದಾರೆ. ದಿಗಂತ್ ಕೂಡಾ ರೊಮ್ಯಾನ್ಸ್‍ಗೆ ಹೇಳಿ ಮಾಡಿಸಿದಂತಿದ್ದಾರೆ.

  ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಪುಷ್ಕರ್ ಅವರ ಜೊತೆಗೆ ರಕ್ಷಿತ್ ಶೆಟ್ಟಿ ಕೂಡಾ ನಿರ್ಮಾಪಕರು. ಆದರೆ, ಈ ಹೊಸ ಚಿತ್ರಕ್ಕೆ ಪುಷ್ಕರ್ ಒಬ್ಬರೇ ನಿರ್ಮಾಪಕರು. ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್‍ನಲ್ಲಿ ಶೂಟಿಂಗ್ ಶುರುವಾಗಲಿದ್ದು, ಮಲೆನಾಡು ಭಾಗದಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆಯಂತೆ.

 • ಸಿನಿಮಾ ಒಂದು.. ಟೈಟಲ್ ನಾಲ್ಕು..!

  avane srimanarayana will have four different titles

  ಅವನೇ ಶ್ರೀಮನ್ನಾರಾಯಣ.. ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ಬರಲಿದೆ. ಕುತೂಹಲ ಇರುವುದು ಟೈಟಲ್ ಬಗ್ಗೆ. 

  ಕನ್ನಡದಲ್ಲಿ ಅವನೇ ಶ್ರೀಮನ್ನಾರಾಯಣ ಎನ್ನುವುದು ಕ್ಯಾಚಿ ಟೈಟಲ್. ಭಕ್ತ ಪ್ರಹ್ಲಾದ ಸಿನಿಮಾದ ಸೂಪರ್ ಹಿಟ್ ಡೈಲಾಗ್‍ನಲ್ಲಿ ಅದೂ ಒಂದು. ತೆಲುಗಿನಲ್ಲಿಯೂ ಗೊಂದಲವೇನಿಲ್ಲ. ಅವನೇ ಎನ್ನುವುದನ್ನು ತೆಲುಗಿನಲ್ಲಿ ಹೇಳಿದರೆ ಆಯಿತು. 

  ಆದರೆ, ಅದೇ ಸ್ಟೈಲ್ ಬೇರೆ ಭಾಷೆಗೆ ಅನ್ವಯಿಸೋದಿಲ್ಲ. ಹೀಗಾಗಿ ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ಬೇರೆಯದ್ದೇ ಟೈಟಲ್ ಇಡೋಕೆ ಚಿತ್ರತಂಡ ಸಿದ್ಧವಾಗಿದೆ. ಒಂದೊಂದು ಭಾಷೆಗೂ ಮೂರ್ನಾಲ್ಕು ಟೈಟಲ್‍ಗಳನ್ನು ರೆಡಿ ಮಾಡಿಕೊಂಡಿರುವ ಚಿತ್ರತಂಡ ಫೈನಲ್ ಟೈಟಲ್ ಯಾವುದು ಅನ್ನೋದನ್ನೂ ಶೀಘ್ರದಲ್ಲೇ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಸುನಿ, ಪುಷ್ಕರ್ ಆಟ.. ಶರಣ್ ತ್ರಿಶಂಕು 

  pushkar team up with simple suni and sharan for their next movie

  ವಿಭಿನ್ನ ಪ್ರಯತ್ನಗಳಿಂದಲೇ ಯಶಸ್ಸನ್ನೂ ಪಡೆದು, ಹೆಸರು ಮಾಡುತ್ತಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೀಗೂ ಸಿನಿಮಾ ಮಾಡಿ ಗೆಲ್ಲಬಹುದು ಎಂದು ತೋರಿಸಿಕೊಟ್ಟ, ಹೊಸ ಜಾನರೆ ಸೃಷ್ಟಿಸಿದ ಸಿಂಪಲ್ ಸುನಿ, ಪ್ರೇಕ್ಷಕರನ್ನು ಡಿಸೈನ್ ಡಿಸೈನಾಗಿ ನಗಿಸಿ ಗೆಲ್ಲುತ್ತಿರುವ ಶರಣ್.. ಈ ಮೂವರೂ ಒಂದಾಗಿದ್ದಾರೆ. ಹೊಸ ಚಿತ್ರ ಮಾಡುತ್ತಿದ್ದಾರೆ. 

  ಚಿತ್ರಕ್ಕೆ ಮಹಾಭಾರತದ ತ್ರಿಶಂಕು ಕಥೆಯೇ ಸ್ಫೂರ್ತಿ. ಸುನಿ ಮತ್ತು ಶರಣ್ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ ಭಾರಿ ಖುಷಿ ಇದೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಕಾಮಿಡಿ ಕಥೆಯೇ ಆದರೂ, ಇದು ನನ್ನ ರೆಗ್ಯುಲರ್ ಸಿನಿಮಾ ಅಲ್ಲ. ನನಗೆ ಇದೊಂದು ಸವಾಲಿನ ಪಾತ್ರ ಎಂದಿದ್ದಾರೆ ಶರಣ್. ಮಹಾಭಾರತದ ಕಥೆಯನ್ನಿಟ್ಟುಕೊಂಡು ಒಂದು ಮಜವಾದ ಕಥೆ ಹೇಳುತ್ತಿದ್ದೇನೆ ಎಂದಿದ್ದಾರೆ ಸುನಿ.

  ಜನವರಿ 16ಕ್ಕೆ ಆ ಸಿನಿಮಾ ಸೆಟ್ಟೇರುತ್ತಿದೆ. ಜನವರಿ 20ಕ್ಕೆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

 • ಸೈನಿಕನಾದರು ಸ್ಟಾರ್ ನಿರ್ಮಾಪಕ

  pushkar mallikarjun image

  ಕನ್ನಡದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ಸೈನಿಕನಾಗುತ್ತಿದ್ದಾರೆ. ಸ್ವಾತಂತ್ರ್ಯೋತ್ಸವದ ದಿನವೇ ಸೈನಿಕನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ ಪುಷ್ಕರ್. ಈಗಾಗಲೇ ಪಿ.ಸಿ.ಶೇಖರ್ ಅವರ ದಿ ಟೆರರಿಸ್ಟ್ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ನಟಿಸಿದ್ದ ಪುಷ್ಕರ್, ಹೀರೋ ಆಗಲು ತಯಾರಿ ನಡೆಸುತ್ತಿದ್ದಾರೆ.

  ಅತ್ತ ಅವನೇ ಶ್ರೀಮನ್ನಾರಾಯಣ, ಚಾರ್ಲಿ, ಅವತಾರ್ ಪುರುಷ.. ಸೇರಿದಂತೆ ಹಲವು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪುಷ್ಕರ್ ನಾಯಕರಾಗಿ ನಟಿಸಲು ರೆಡಿಯಾಗಿದ್ದಾರೆ. ಅದು ಡಿಸೆಂಬರ್‍ನಲ್ಲಿ ಸೆಟ್ಟೇರಲಿದೆ.

  ಸೈನಿಕನಾಗಬೇಕು. ಸೈನಿಕನ ಪಾತ್ರದಲ್ಲಿ ನಟಿಸಬೇಕು ಎಂದರೂ ಫಿಟ್ ಆಗಿರಬೇಕು. ಆ ವರ್ಕೌಟ್ ಮಾಡುತ್ತಿದ್ದೇನೆ ಎನ್ನುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈ ಸಿನಿಮಾದ ಸ್ಕ್ರಿಪ್ಟ್ ಮೇಲೆ ಗಮನ ಹರಿಸಿದ್ದಾರಂತೆ.

 • ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಮತ್ತೆ ಕಮಿಂಗು

  humble politician sequel soon

  ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಅನ್ನೋ ಸಿನಿಮಾ ಬಂದಿದ್ದು 2018ರ ಆರಂಭದಲ್ಲಿ. ಕಂಗ್ಲಿಷ್ ಮಿಶ್ರಿತ ಸಂಭಾಷಣೆ, ರಾಜಕೀಯ ವಿಡಂಬನೆ ಎಲ್ಲವೂ ಇದ್ದ ನೊಗ್‍ರಾಜ್‍ನನ್ನು ಜನ ಮೆಚ್ಚಿದ್ದರು. ಗಲ್ಲಾ ಪೆಟ್ಟಿಗೆಯೂ ತುಂಬಿತ್ತು. ಮಾಮೂಲಿ ಜಾನರ್‍ನಿಂದ ಹೊರಗಿದ್ದ ಆ ಚಿತ್ರದ ಸೀಕ್ವೆಲ್ ರೆಡಿಯಾಗುತ್ತಿದೆ. ಹೌದು, ಅದನ್ನ ಹೇಳಿರೋದು ವಿಧೇಯ ರಾಜಕಾರಣಿಯಾಗಿ ನಟಿಸಿ, ಕನ್ನಡಿಗರ ಮನಸ್ಸು ಗೆದ್ದಿದ್ದ ಡ್ಯಾನಿಶ್ ಸೇಠ್. ಸೀಕ್ವೆಲ್ ಸ್ಕ್ರಿಪ್ಟ್ ಆಗಿದೆ ಎಂದಿದ್ದಾರೆ ಡ್ಯಾನಿಶ್.

  ಮುಂದಾ.. ಆಗ ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಚಿತ್ರವನ್ನು ನಿರ್ಮಿಸಿದ್ದರು. ಸೀಕ್ವೆಲ್‍ನ್ನೂ ಅವರೇ ನಿರ್ಮಾಣ ಮಾಡ್ತಾರಾ..? ಸ್ವಲ್ಪ ದಿನ ವೇಯ್ಟ್ ಮಾಡಿ.

 • ಹಂಬಲ್ ಪೊಲಿಟಿಷಿಯನ್ ಲಾಭ-ನಷ್ಟದ ಲೆಕ್ಕ

  humble politicain nograj's box office collection

  ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಈಗ ಗೆದ್ದ ಸಿನಿಮಾ. ಚಿತ್ರ ಬಿಡುಗಡೆಯಾದ ನಂತರ ತೆಲುಗಿನ ಅಜ್ಞಾತವಾಸಿಯನ್ನೂ  ಬಾಕ್ಸಾಫೀಸ್‍ನಲ್ಲಿ ಹಿಂದಿಕ್ಕಿದ್ದ ನೊಗ್‍ರಾಜ್, ಈಗ ನಿರ್ಮಾಪಕರ ಜೇಬನ್ನೂ ತುಂಬಿಸಿದ್ದಾನೆ. ಮಲ್ಪಿಪ್ಲೆಕ್ಸ್‍ಗಳಲ್ಲಿ ಮೋಡಿ ಮಾಡುತ್ತಿರುವ ನೊಗ್‍ರಾಜ್ ಸಿನಿಮಾ ಮೂರೇ ದಿನದಲ್ಲಿ ಚಿತ್ರದ ಬಜೆಟ್‍ನ್ನು ತೆಗೆದುಕೊಟ್ಟಿದೆ. ಈಗ ಬರೋದು ಬೋನಸ್ ಅಂದರೆ ಲಾಭ.

  ಸ್ವತಃ ನಿರ್ಮಾಪಕ ಪುಷ್ಕರ್ ಮಲ್ಲಿಕಾಜುನಯ್ಯನವರ ಪ್ರಕಾರ, ಚಿತ್ರದ ಮೂರು ದಿನದ ಕಲೆಕ್ಷನ್‍ನಲ್ಲಿ ಬಂದ ಷೇರು 2 ಕೋಟಿ, 5 ಲಕ್ಷ. ಚಿತ್ರಕ್ಕೆ ಖರ್ಚಾಗಿದ್ದುದು 2 ಕೋಟಿ, 70 ಲಕ್ಷ. ಈಗ ಚಿತ್ರಮಂದಿರಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ವಿದೇಶಗಳಲ್ಲಿ ಇನ್ನೂ ಬಿಡುಗಡೆಯಾಗಬೇಕಿದೆ. ಟಿವಿ ರೈಟ್ಸ್ ಇನ್ನೂ ನಿರ್ಮಾಪಕರ ಬಳಿಯೇ ಇದೆ. ಹೀಗಾಗಿ ಈ ಚಿತ್ರ ಭರ್ಜರಿ ಲಾಭ ಮಾಡುವುದರಲ್ಲಿ ಸಂದೇಹವಿಲ್ಲ.

  ಸಾಮಾನ್ಯವಾಗಿ ಚಿತ್ರತಂಡದವರು ತಮ್ಮ ಚಿತ್ರದ ಬಗ್ಗೆ ಬಂದ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳ್ತಾರೆ. ಆದರೆ, ನೊಗ್‍ರಾಜ್ ತಂಡದವರು ಹಾಗಲ್ಲ. ಚಿತ್ರವನ್ನು ನಗರ ಪ್ರದೇಶಗಳಲ್ಲಿ ಮೆಚ್ಚಿಕೊಂಡಿದ್ದನ್ನೂ, ಉ.ಕರ್ನಾಟಕ ಭಾಗದಲ್ಲಿ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ ಎಂಬುದನ್ನೂ ಹೇಳಿಕೊಂಡರು. ಚಿತ್ರದಲ್ಲಿ ಇಂಗ್ಲಿಷ್ ಹೆಚ್ಚಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದನ್ನೂ ಮುಚ್ಚಿಟ್ಟುಕೊಳ್ಳಲಿಲ್ಲ. 

  ರಿಲೀಸ್ ಮಾಡೋದು ಪಕ್ಕಾ ಪ್ಲಾನ್. ಉ.ಕರ್ನಾಟಕ ಭಾಗದಲ್ಲಿ ಈಗ ಡಿಮ್ಯಾಂಡ್ ಕುದುರುತ್ತಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಭಾಗದ ಎಲ್ಲ ಕಡೆ ಬಿಡುಗಡೆ ಮಾಡ್ತೆವೆ ಎಂದಿದ್ದಾರೆ ನಿರ್ಮಾಪಕರಲ್ಲಿ ಒಬ್ಬರಾದ ನಟ ರಕ್ಷಿತ್ ಶೆಟ್ಟಿ.

 • ಹಬ್ಬಕ್ಕೆ ಶಾನ್ವಿ ಶ್ರೀವಾಸ್ತವ್ ಲಕ್ಷ್ಮೀ ಕಟಾಕ್ಷ

  varmahalakshmi habba gift from avane srimananrayana

  ಅವನೇ ಶ್ರೀಮನ್ನಾರಾಯಣ ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಯನ್ನೇ ಮನೆ ಮನೆಗೆ ಕಳಿಸಿಕೊಟ್ಟಿದೆ. ಅದು ಶಾನ್ವಿ ಶ್ರೀವಾಸ್ತವ್ ರೂಪದಲ್ಲಿ. ಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಶಾನ್ವಿ ಶ್ರೀವಾಸ್ತವ್ ಅವರನ್ನು ಲಕ್ಷ್ಮೀ ಸ್ವರೂಪಿಯಾಗಿ ಚಿತ್ರಿಸಿ ಪೋಸ್ಟರ್ ರಿಲೀಸ್ ಮಾಡಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೆಚ್.ಕೆ.ಪ್ರಕಾಶ್ ಗೌಡ ನಿರ್ಮಾಣದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೀರೋ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಮಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

 • ಹೀರೋ ಆಗಲಿದ್ದಾರೆ ನಿರ್ಮಾಪಕ ಪುಷ್ಕರ್

  pushkar mallikarjun to act as hero

  ಪುಷ್ಕರ್ ಮಲ್ಲಿಕಾರ್ಜುನಯ್ಯ.. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಹುಲಿರಾಯ ಮೊದಲಾದ ಚಿತ್ರಗಳ ನಿರ್ಮಾಪಕ. ಅವನೇ ಶ್ರೀಮನ್ನಾರಯಣ, ಭೀಮಸೇನ ನಳಮಹರಾಜ ಸೇರಿದಂತೆ ಇನ್ನೂ ಕೆಲವು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಹೀಗಿರುವಾಗಲೇ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಲು ಮನಸ್ಸು ಮಾಡಿದ್ದಾರೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಟಿಸಲಿರುವ ಚಿತ್ರದ ಕಥೆ ಫೈನಲ್ ಆಗಿದೆ. ಪುಷ್ಕರ್ ಹೇಳೋದಿಲ್ಲ. ನರಸಿಂಹ ಎಂಬುವವರು ಚಿತ್ರ ನಿರ್ದೇಶಿಸಲಿದ್ದಾರೆ. ಮುಂದಿನ ವರ್ಷ ಡಿಸೆಂಬರ್‍ನಿಂದ ಹೊಸ 3 ಸಿನಿಮಾಗಳ ಕೆಲಸ ಶುರುವಾಗಲಿದೆ. ಅದು ಮುಗಿಯೋದು ಮುಂದಿನ ವರ್ಷದ ಡಿಸೆಂಬರ್‍ಗೆ. ಆ ಗ್ಯಾಪ್‍ನಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಲಿರುವ ಚಿತ್ರ ಸೆಟ್ಟೇರಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery