` theater, - chitraloka.com | Kannada Movie News, Reviews | Image

theater,

 • 2000 ಸಿನಿಮಾ ಥಿಯೇಟರ್ಸ್ ಶಾಶ್ವತ ಬಂದ್..!!!

  More Than 2000 Theaters Permanently Shut

  ಕೋವಿಡ್ ಲಾಕ್ ಡೌನ್ ಮುಗಿದು, ಥಿಯೇಟರುಗಳು ಶುರುವಾದರೂ ಜನ ಥಿಯೇಟರಿಗೆ ಬರುತ್ತಿಲ್ಲ. ಕನ್ನಡದಲ್ಲಿ ಕೆಲವು ಸ್ಟಾರ್ ನಟರ ಚಿತ್ರಗಳು ಸಿದ್ಧವಿದ್ದರೂ ಬಿಡುಗಡೆ ಮಾಡೋಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಇದು ಕನ್ನಡದಲ್ಲಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗಗಳಲ್ಲೂ ಇದೇ ಸಮಸ್ಯೆ ಇದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಎಲ್ಲೆಡೆಯೂ ಇದೇ ಸ್ಥಿತಿ. ಇದರ ಪರಿಣಾಮ, ದೇಶದಾದ್ಯಂತ ಸುಮಾರು 2000 ಸಿನಿಮಾ ಥಿಯೇಟರ್‍ಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ.

  ದೇಶದ ಪ್ರಮುಖ ಡೈಲಿ ಬಿಸಿನೆಸ್ ಟುಡೇ ಈ ಬಗ್ಗೆ ವರದಿ ಮಾಡಿದೆ. ಥಿಯೇಟರುಗಳ ನಿರ್ವಹಣಾ ವೆಚ್ಚವೂ ಹುಟ್ಟುತ್ತಿಲ್ಲ. ಸಿನಿಮಾಗಳೂ ಬರುತ್ತಿಲ್ಲ. ಇನ್ನು ಕೆಲವರು ಒಟಿಟಿಗೇ ನೇರವಾಗಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹೀಗಾಗಿ ಥಿಯೇಟರುಗಳನ್ನು ಮುಚ್ಚಿ ಬೇರೆ ಬಿಸಿನೆಸ್ ಮಾಡುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ ಥಿಯೇಟರ್ ಮಾಲೀಕರು. ಇದರ ಪರಿಣಾಮ ದೇಶದಾದ್ಯಂತ 2000ಕ್ಕೂ ಹೆಚ್ಚು ಸ್ಕ್ರೀನ್ ಶಾಶ್ವತವಾಗಿ ಮುಚ್ಚುವ ಆತಂಕವಿದೆ.

 • ಅಕ್ಟೋಬರ್ 1ರಿಂದ ಸಿನಿಮಾ ಥಿಯೇಟರ್ ಓಪನ್

  theaters to release from october 1st

  ಕಳೆದ 6 ತಿಂಗಳಿಂದ ಬಾಗಿಲು ಮುಚ್ಚಿದ ಥಿಯೇಟರ್ಗಳು ಬಾಗಿಲು ತೆಗೆಯುವ ಶುಭ ಮುಹೂರ್ತ ಹತ್ತಿರ ಬಂದಿದೆ. ಅಕ್ಟೋಬರ್ 1ರಿಂದ ಸಿನಿಮಾ ಥಿಯೇಟರ್ಗಳು ಓಪನ್ ಆಗಲಿವೆ. ಕೇಂದ್ರ ಸರ್ಕಾರ ಈ ಕುರಿತು ಗ್ರೀನ್ ಸಿಗ್ನಲ್ ನೀಡಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಗುಬ್ಬಿ ಜೈರಾಜ್ ತಿಳಿಸಿದ್ದಾರೆ.

  ಮಂಗಳವಾರ ಸೌತ್ ಇಂಡಿಯಾ ಚಲನಚಿತ್ರ ವಾಣಿಜ್ಯ ಮಂಡಳಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆನ್ಲೈನ್ ಮೀಟಿಂಗ್ ಮಾಡಿದ್ದರು. ಈ ಸಭೆಯಲ್ಲಿ ಅಮಿತ್ ಶಾ ಥಿಯೇಟರ್ ಓಪನ್ ಮಾಡೋಕೆ ಒಪ್ಪಿಗೆ ನೀಡಿದ್ದಾರೆ ಎಂದು ಜೈರಾಜ್ ತಿಳಿಸಿದ್ದಾರೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಕೇಂದ್ರ ಸರ್ಕಾರ ಗೈಡ್ ಲೈನ್ಸ್ ಹೊಡರಿಸಲಿದೆ

 • ಚಿತ್ರಮಂದಿರ 100% : ಸರ್ಕಾರದಲ್ಲೇ ಕಮ್ಯುನಿಕೇಷನ್ ಕನ್‍ಫ್ಯೂಷನ್

  ಚಿತ್ರಮಂದಿರ 100% : ಸರ್ಕಾರದಲ್ಲೇ ಕಮ್ಯುನಿಕೇಷನ್ ಕನ್‍ಫ್ಯೂಷನ್

  ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ಕೊಡಲಾಗುವುದು ಎಂಬ ಸುದ್ದಿ ಈಗ ಜೋರಾಗಿದೆ. ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಆದರೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಕನ್‍ಫ್ಯೂಷನ್ ಮತ್ತು ಕಮ್ಯುನಿಕೇಷನ್ ಪ್ರಾಬ್ಲಂ ಇನ್ನೂ ಮುಗಿದಿಲ್ಲ. ಕೊರೊನಾ ಶುರುವಾಗಿ 2 ವರ್ಷವಾದರೂ ಒಂದು ಕಮ್ಯುನಿಕೇಷನ್ ಇಟ್ಟುಕೊಳ್ಳೋಕೆ ಸಾಧ್ಯವಾಗಿಲ್ಲ.

  100% ಪರ್ಮಿಷನ್ ಕೊಡ್ತಾರಂತೆ ನಿಜಾನಾ? ಬಿಬಿಎಂಪಿ ವರದಿ ಕೊಟ್ಟಿದೆಯಂತೆ ಹೌದಾ ಎಂದರೆ.. ನಮಗೇನೂ ಗೊತ್ತೇ ಇಲ್ಲ. ಸರ್ಕಾರ ಹೇಗೆ ಹೇಳುತ್ತೋ ನಾವು ಹಾಗೆ ಮಾಡ್ತೀವಿ. ಅದೆಲ್ಲವೂ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕು ಅಂತಾ ಹೇಳಿಕೆ ಕೊಟ್ಟಿರೋದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ. ಬಹುಶಃ ಅವರಿಗೆ ತಾವೇ ಸರ್ಕಾರದ ಭಾಗ ಎಂಬುದೇ ಮರೆತು ಹೋದಹಾಗಿದೆ. ಕೊರೊನಾ ಎಫೆಕ್ಟು.

  ಇನ್ನು ಆರೋಗ್ಯ ಸಚಿವ ಸುಧಾಕರ್ ಅವರು ಇನ್ನೂ ಈ ಬಗ್ಗೆ ಚಿಂತಿಸುತ್ತಿದ್ದೇವೆ ಎಂದಿದ್ದಾರೆ. ಚಿತ್ರರಂಗ ತುಂಬಾ ನಷ್ಟಕ್ಕೊಳಗಾಗಿದ್ದು, ಪೂರ್ಣ ಬೆಂಬಲ ನೀಡಲು ಚಿಂತನೆ ಮಾಡುತ್ತೇವೆ ಎಂದಿದ್ದಾರೆ. ಎರಡು ವರ್ಷಗಳಿಂದಲೂ ಸತತವಾಗಿ ನಡೆಯುತ್ತಿರುವ ಚಿಂತನೆ ಶೀಘ್ರದಲ್ಲೇ ಮುಗಿಯಬಹುದು. ಥಿಯೇಟರ್‍ಗಳ ಓಪನ್ ಮತ್ತು ಪ್ರೇಕ್ಷಕರಿಗೆ 100% ಅವಕಾಶ ಸಿಗಬಹುದು. ವೇಯ್ಟ್ ಮಾಡೋಣ.

 • ಜಿಎಸ್​ಟಿ ಎಫೆಕ್ಟ್ - ಟಿಕೆಟ್ ರೇಟ್ ಎಷ್ಟು..? ಚಿತ್ರಮಂದಿರಗಳಿಗೇ ಡೌಟು..!

  gst effect

  ಎರಡೂ ಅಕ್ಕಪಕ್ಕದಲ್ಲೇ ಇರೋ ಥಿಯೇಟರುಗಳು. ಆದರೆ, ಆ ಟಾಕೀಸ್​ನಲ್ಲೊಂದು ರೇಟು. ಈ ಟಾಕೀಸ್​ನಲ್ಲೊಂದು ರೇಟು. ಇದು ಜಿಎಸ್​ಟಿ ಎಫೆಕ್ಟು.

  ನರ್ತಕಿ‌ ಚಿತ್ರಮಂದಿರದಲ್ಲಿ ಟಿಕೆಟ್ ದರ ಇಳಿಕೆಯಾಗಿದ್ದರೆ, ಸಂತೋಷ್ ಮತ್ತು ಕಪಾಲಿ ಥಿಯೇಟರಲ್ಲಿ ಟಿಕೆಟ್ ದರ ಹೆಚ್ಚಾಗಿದೆ.  ಹೊಸ ಟಿಕೆಟ್​ಗಳು ಬಂದಿಲ್ಲದ ಕಾರಣ, ಹಳೆ ಟಿಕೆಟ್​ಗಳಲ್ಲೇ ಜಿಎಸ್​ಟಿ ಸೀಲ್ ಹಾಕಿ ಮಾರಾಟ ಮಾಡಲಾಗ್ತಿದೆ. ಈ ಎಲ್ಲ ಟಾಕೀಸುಗಳೂ ಸ್ವಲ್ಪ ಸ್ವಲ್ಪ ದೂರದಲ್ಲೇ ಇವೆ ಅನ್ನೋದು ವಿಶೇಷ. 

  ನರ್ತಕಿ ಥಿಯೇಟರ್

  ಮೊದಲು ಇದ್ದ ದರ - 100 ರೂ. / 120 ರೂ.

  ಇಂದಿನ ದರ - 90 ರೂ./100 ರೂ.

  ಸಂತೋಷ್ ಥಿಯೇಟರ್

  ಮೊದಲು ಇದ್ದ ದರ - 100 ರೂ. 

  ಇಂದಿನ ದರ - 118 ರೂ. 

  ಕಪಾಲಿ ಥಿಯೇಟರ್

  ಮೊದಲು ಇದ್ದ ದರ - 80 ರೂ./100 ರೂ.

  ಇಂದಿನ ದರ - 90 ರೂ./110 ರೂ.

   

   

   

 • ಜೂನ್`ನಿಂದ ಥಿಯೇಟರ್ಸ್, ಮಲ್ಟಿಪ್ಲೆಕ್ಸ್ ಓಪನ್..?

  will theaters open from june

  ಲಾಕ್ ಡೌನ್ ತೆರವಾಗುವ ಸಮಯ ಸಮೀಪಿಸುತ್ತಿದೆ. ಸರ್ಕಾರಗಳು ಈಗ ಲಾಕ್ ಡೌನ್ ಮುಂದುವರಿಕೆ ಮಾತನಾಡ್ತಿಲ್ಲ. ಬದಲಿಗೆ ಷರತ್ತುಬದ್ಧವಾಗಿ ಆರ್ಥಿಕ ಚಟುವಟಿಕೆ ಪುನಾರಂಭಿಸುವ ಮಾತನಾಡುತ್ತಿವೆ. ಹೀಗಾಗಿಯೇ ಸಿನಿಮಾ ಹಾಲ್‍ಗಳು ಜೂನ್‍ನಿಂದ ಆರಂಭವಾಗುವ ಸುಳಿವು ಸಿಕ್ಕಿದೆ.

  ಸರ್ಕಾರ ಜುಲೈನಲ್ಲಿ ಸಿನಿಮಾ ಹಾಲ್ ತೆರೆಯಲು ಸಿದ್ಧ ಎನ್ನುತ್ತಿದೆಯಾದರೂ, ಚಿತ್ರಲೋಕಕ್ಕೆ ಲಭ್ಯವಾದ ಮಾಹಿತಿಗಳ ಪ್ರಕಾರ, ಜೂನ್‍ನಿಂದಲೇ ಅನುಮತಿ ನೀಡುವ ಸಾಧ್ಯತೆಗಳೂ ಇವೆ. ಆದರೆ ಸರ್ಕಾರ ಜೂನ್‍ನಿಂದ ಸಿನಿಮಾ ಥಿಯೇಟರ್ ಓಪನ್ ಮಾಡಿ ಎಂದರೂ ತಕ್ಷಣ ಓಪನ್ ಮಾಡಲು ಸಾಧ್ಯವಿಲ್ಲ. ಅದು ತಾಂತ್ರಿಕ ಸಮಸ್ಯೆ.

  ಈ ಬಗ್ಗೆ ಚಿತ್ರಲೋಕದ ಜೊತೆ ಮಾತನಾಡಿದ ಹಲವು ಪ್ರದರ್ಶಕರು ಸರ್ಕಾರ ಈಗ ಹೇಳಿದರೂ ನಮಗೆ ಸಿದ್ಧವಾಗಲು ಕೆಲವು ದಿನಗಳು ಬೇಕಾಗುತ್ತೆ. ಕೊರೊನಾ ಷರತ್ತುಗಳಿಗೆ ತಕ್ಕಂತೆ ನಾವು ಥಿಯೇಟರುಗಳನ್ನು ಸಿದ್ಧ ಮಾಡಬೇಕು. ಟೆಕ್ನಿಕಲಿ ಚೆಕ್ ಮಾಡಿಕೊಳ್ಳಬೇಕು. ಸಿನಿಮಾಗಳು ಸಿಗಬೇಕು.. ಹೀಗೆ ಹಲವು ಸಮಸ್ಯೆಗಳಿವೆ ಎಂದಿದ್ದಾರೆ ಪ್ರದರ್ಶಕರು. ಸ್ಸೋ.. ಸರ್ಕಾರ ಜೂನ್‍ನಲ್ಲಿ ಥಿಯೇಟರ್ ಓಪನ್ ಮಾಡಿ  ಸುವ ಮನಸ್ಸಿದ್ದರೆ, ಈಗಲೇ ಅಥವಾ ಮೇ 18ರಂದು ಘೋಷಿಸಬೇಕು. ಹಾಗೆ ಮಾಡದೆ ಜೂನ್‍ಗೆ ಘೋಷಿಸಿದರೆ ಜುಲೈನಲ್ಲಿಯೇ ಥಿಯೇಟರ್ ಓಪನ್ ಮಾಡಲು ಸಾಧ್ಯ.

 • ತಮಿಳುನಾಡಿನಲ್ಲಿ 100% ಥಿಯೇಟರ್ ಓಪನ್

  ತಮಿಳುನಾಡಿನಲ್ಲಿ 100% ಥಿಯೇಟರ್ ಓಪನ್

  ದೇಶಾದ್ಯಂತ ಶೇ.50ರಷ್ಟು ಪ್ರೇಕ್ಷಕರಿಗೆ ಸಿನಿಮಾ ಪ್ರದರ್ಶನ ಮಾಡಬೇಕು ಎಂದು ರೂಲ್ಸ್ ನಡೆಯುತ್ತಿರುವಾಗ ತಮಿಳುನಾಡು ಧೈರ್ಯವಾಗಿ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿ ಇನ್ನು ಮುಂದೆ ಶೇ.100ರಷ್ಟು ಥಿಯೇಟರ್ ಓಪನ್ ಆಗಲಿವೆ. ಅರ್ಥಾತ್, ಚಿತ್ರಮಂದಿರದ ಸಾಮಥ್ರ್ಯ ಎಷ್ಟಿದೆಯೋ, ಅಷ್ಟೂ ಪ್ರೇಕ್ಷಕರಿಗೆ ಸಿನಿಮಾ ನೋಡುವ ಅವಕಾಶ.

  ಕೊರೊನಾದಿಂದಾಗಿ ತತ್ತರಿಸಿ ಹೋಗಿದ್ದ ಚಿತ್ರರಂಗ, ಶಾಕ್‍ನಿಂದ ಇನ್ನೂ ಹೊರಬಂದಿರಲೇ ಇಲ್ಲ. ಕನ್ನಡದಲ್ಲಷ್ಟೇ ಅಲ್ಲ, ದೇಶದ ಯಾವ ಚಿತ್ರರಂಗದಲ್ಲೂ ಸ್ಟಾರ್ ನಟರ ಚಿತ್ರಗಳು ಟಾಕೀಸಿಗೆ ಬಂದಿರಲಿಲ್ಲ. ಆದರೆ ತಮಿಳುನಾಡಿನಲ್ಲಿ ಅದು ಸಾಧ್ಯವಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೇ ನಟಿಸಿರುವ ಮಾಸ್ಟರ್ ಸಿನಿಮಾ, ಪೊಂಗಲ್‍ಗೆ ರಿಲೀಸ್ ಎಂದು ಘೋಷಿಸಿಕೊಂಡಿತ್ತು. ಅದಕ್ಕೂ ಮುನ್ನ ವಿಜಯ್, ತಮಿಳುನಾಡು ಸಿಎಂ ಜೊತೆ ಮಾತನಾಡಿದ್ದರು. ಆ ಮಾತುಕತೆಯೇ ಫಲಶೃತಿಯೇ ಇದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇದು ತಮಿಳು ಚಿತ್ರರಂಗಕ್ಕೆ ಗುಡ್ ನ್ಯೂಸ್.

  ಅಫ್‍ಕೋರ್ಸ್, ಅಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದೇ ಹೋದರೆ, ಅದು ಕರ್ನಾಟಕಕ್ಕೂ ಕಾಲಿಡಬಹುದು. ಸ್ಟಾರ್ ಚಿತ್ರಗಳು ರಿಲೀಸ್ ಆಗಬಹುದು. ಉಳಿದಂತೆ ತಮಿಳುನಾಡಿನಲ್ಲಿ 100% ಪ್ರೇಕ್ಷಕರಿಗೆ ಅವಕಾಶವಿದ್ದರೂ, ಕೊರೊನಾ ರೂಲ್ಸ್ ಮುರಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ ಅಲ್ಲಿನ ರಾಜ್ಯ ಸರ್ಕಾರ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery