` amitabh bacchan, - chitraloka.com | Kannada Movie News, Reviews | Image

amitabh bacchan,

 • Sudeep Gets An Offer From Amitabh Bachchan's New Film

  sudeep gets offer from sr bacchan's new movie

  Actor Sudeep who is currently tied up with projects in Kannada has got a big offer from a Bollywood film. This time the actor has not only got one offer, but two offers at the same time.

  Prominently, Sudeep has got an offer from Amitabh Bachchan's new film which has been titled as 'Karna'. The film is based on the legendary mythological character Karna and Sudeep has been approached for the role of Duryodhana in the film, While Amitabh Bachchan is seen in the role of Bheeshma. Even Tamil actor Vikram will be playing  a prominent role in the film. Apart from 'Karna', Sudeep has been approached for a role by director Rohith Shetty.

  Though he has got two offers, Sudeep is yet to give his nod because of his prior commitments. 'The Villain' was supposed to complete by now. As the film got delayed due to various reasons, Sudeep's dates have been hampered and Sudeep plans to allocate dates to Hindi films only if it affects his Kannada projects.

 • ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಕಿಚ್ಚ ಸುದೀಪ್

  amitab bacchan, sudeep, chiranjeevi image

  ಕಿಚ್ಚ ಸುದೀಪ್ ಸ್ಯಾಂಡಲ್​ವುಡ್​ನಿಂದ ಹಾರಿ, ಬಾಲಿವುಡ್​ನಲ್ಲಿ ಮಿನುಗಿ, ಟಾಲಿವುಡ್, ಕಾಲಿವುಡ್​ನಲ್ಲಿ ಮಿಂಚಿ ಈಗ ಹಾಲಿವುಡ್​ಗೂ ಹಾರುತ್ತಿದ್ಧಾರೆ. ಇದರ ನಡುವೆಯೇ ಇನ್ನೊಂದು ಗುಡ್​ನ್ಯೂಸ್ ತೆಲುಗಿನಿಂದ ಬರ್ತಾ ಇದೆ. ಇತ್ತಿಚೆಗಷ್ಟೇ 150ನೇ ಚಿತ್ರದಲ್ಲಿ ನಟಿಸಿದ್ದ ಚಿರಂಜೀವಿ, ಇನ್ನೊಂದು ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಆ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡಾ ನಟಿಸಲಿದ್ದಾರೆ. ಕಿಕ್, ರೇಸುಗುರಂ ಖ್ಯಾತಿಯ ಸುರೇಂದ್ರ ರೆಡ್ಡಿ ನಿರ್ದೇಶಕರು.

  ಸ್ವಾತಂತ್ರ್ಯ ಯೋಧನ ಕುರಿತಾದ ಆ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಎ.ಆರ್.ರೆಹಮಾನ್. ಆ ಚಿತ್ರದ ಒಂದು ಪ್ರಮುಖ ಪಾತ್ರಕ್ಕೆ ಚಿತ್ರತಂಡ ಸುದೀಪ್ ಅವರನ್ನು ಸಂಪರ್ಕಿಸಿದೆಯಂತೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆ ಗೊತ್ತಿರುವ ವ್ಯಕ್ತಿಯ ಪಾತ್ರಕ್ಕೆ ಸುದೀಪ್ ಬೇಕು ಎಂದು ಚಿತ್ರತಂಡ ಡಿಮ್ಯಾಂಡ್ ಇಟ್ಟಿದೆ. ಆಫರ್ ಬಂದಿರುವುದು ನಿಜವಾದರೂ ಸುದೀಪ್ ಇನ್ನೂ ಅದನ್ ಕನ್​ಫರ್ಮ್ ಮಾಡಿಲ್ಲ. 

  ಅಂದಹಾಗೆ ಅಮಿತಾಬ್​ ಜೊತೆ ಈಗಾಗಲೇ ಸುದೀಪ್​ಗೆ ನಟಿಸಿದ ಅನುಭವವಿದೆ. ಹಿಂದಿಯ ರಣ್ ಚಿತ್ರದಲ್ಲಿ ನಟಿಸಿದ್ದ ಸುದೀಪ್ ಅಭಿನಯಕ್ಕೆ ಅಮಿತಾಬ್ ಮಾರುಹೋಗಿದ್ದರು. ಇನ್ನು ಸುದೀಪ್​ ಒಪ್ಪಿಕೊಂಡರೆ, ಅದು ಚಿರಂಜೀವಿ ಜೊತೆಗೆ ನಟಿಸುವ ಮೊದಲ ಚಿತ್ರವಾಗಲಿದೆ.

 • ಮತ್ತೊಮ್ಮೆ ಬಚ್ಚನ್ ಜೊತೆ ಸುದೀಪ್

  amitab bachchan and sudeep to act again

  ಕಿಚ್ಚ ಸುದೀಪ್ ಮತ್ತೊಮ್ಮೆ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದು ಆಂಖೇ-2 ಚಿತ್ರದಲ್ಲಿ. ರಣ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದ ಅಮಿತಾಬ್ ಮತ್ತು ಸುದೀಪ್, ತೆಲುಗಿನ ಸೈರಾ ಚಿತ್ರದಲ್ಲೂ ನಟಿಸಿದ್ದಾರೆ. ಈಗ.. ಮತ್ತೊಮ್ಮೆ ಆಂಖೇ-2 ನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

  ಅಷ್ಟೇ ಅಲ್ಲ, ದಬಾಂಗ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರೆ.  ನವೆಂಬರ್‍ನಲ್ಲಿ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಲಿರೋ ಸುದೀಪ್, ಜನವರಿಗೆಯಲ್ಲಿ ದಬಾಂಗ್-3 ಟೀಂ ಜೊತೆಯಾಗಲಿದ್ದಾರೆ. ಮುಂದಿನ ವರ್ಷ ಸೈರಾ ನರಸಿಂಹ ರೆಡ್ಡಿ ತೆಲುಗಿನಲ್ಲಿ, ಹಿಂದಿಯಲ್ಲಿ, ಇಂಗ್ಲಿಷ್‍ನಲ್ಲಿ.. ಒಟ್ಟಿನಲ್ಲಿ.. 2019ರಲ್ಲಿ ಸುದೀಪ್ ಅಭಿಮಾನಿಗಳಿಗೆ ವರ್ಷಪೂರ್ತಿ ಹಬ್ಬ.

 • ಸುದೀಪ್ ಜೊತೆ ಚಿರಂಜೀವಿ ಜೊತೆ ಜೊತೆಯಲಿ - ಕನ್ನಡದಲ್ಲೇ ಹೊಸ ಚಿತ್ರ

  sudeep, chiranjeevi

  ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ `ತೆಲುಗಿನ ಉಯ್ಯಾಲವಾಡ ನರಸಿಂಹರೆಡ್ಡಿ' ಜೀವನ ಕಥೆ ಸಿನಿಮಾ ಆಗುತ್ತಿದ್ದು, ಚಿರಂಜೀವಿ ನಟಿಸುತಗ್ತಿರುವ ವಿಷಯ ಹಳೆಯದು. ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ. ಆ ದಿಗ್ಗಜರ ಜೊತೆ ಸುದೀಪ್ ಕೂಡಾ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅದಕ್ಕಿಂತಲೂ ಖುಷಿ ಪಡುವ ಸುದ್ದಿ ಇನ್ನೊಂದಿದೆ.

  ಚಿರಂಜೀವಿ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಹೀರೋ ಆಗಿ. ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಒಟ್ಟಿಗೇ ಹೀರೊಗಳಾಗಿ ಕನ್ನಡದಲ್ಲಿ ನಟಿಸಲಿದ್ದಾರೆ. ಆ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ.

  ಚಿರಂಜೀವಿಗೆ ಕನ್ನಡ ಹೊಸದಲ್ಲ. ಪಕ್ಕದ ಊರು ನನ್ನೂರು..ಇಲ್ಲಿನ ಜನರು ನನ್ನೋರು ಎಂದು ಸಿಪಾಯಿ ಚಿತ್ರದಲ್ಲಿ ಹಾಡಿ ಹೋಗಿದ್ದರು ಚಿರಂಜೀವಿ. ಅದಾದ ಮೇಲೆ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಶ್ರೀ ಮಂಜುನಾಥ ಚಿತ್ರದಲ್ಲಿ ಈಶ್ವರನಾಗಿ ಕಾಣಿಸಿಕೊಂಡಿದ್ದರು. ಎರಡೂ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಚಿರಂಜೀವಿ, ಸುದೀಪ್ ಜೊತೆ ಹೀರೋ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ.

  Related Articles :-

  ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಕಿಚ್ಚ ಸುದೀಪ್

 • ಹ್ಯಾಟ್ರಿಕ್ ಹೀರೋ ಜೊತೆ ಬಾಲಿವುಡ್ ಸೂಪರ್ ಸ್ಟಾರ್?

  shivarajkumar amitabh next movie together ?

  ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಎನರ್ಜಿ ಯುವ ನಟರಿಗೆ ಅಚ್ಚರಿ ಹುಟ್ಟಿಸೋದು ನಿಜ. ಅಂತಹ ಶಿವರಾಜ್ ಕುಮಾರ್ ಈಗ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರವೊಂದನ್ನ ಒಪ್ಪಿಕೊಂಡಿದ್ದಾರೆ. ಕಥೆ ಇಷ್ಟವಾಗಿದೆ. ಡೇಟ್ಸ್ ಕೂಡಾ ಕೊಟ್ಟಾಗಿದೆ. ಸಿನಿಮಾ ಸೆಟ್ಟೇರಬೇಕಷ್ಟೆ.

  ಈ ಚಿತ್ರದಲ್ಲಿ ಇನ್ನೂ ಒಂದು ಕುತೂಹಲವಿದೆ. ಎಲ್ಲವೂ ಅಂದುಕೊಂಡಂತೆ ಆಗಿಬಿಟ್ಟರೆ, ಶಿವಣ್ಣ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಆಗಿದೆಯಂತೆ. ಫೈನಲ್ ಆಗಿಲ್ಲ ಅಷ್ಟೆ.

  ಈ ಹಿಂದೆ ಅಮಿತಾಬ್ ಬಚ್ಚನ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಆಗಿಯೇ ಕಾಣಿಸಿಕೊಂಡಿದ್ದರು. ಶಿವರಾಜ್ ಕುಮಾರ್​ಗೂ ಅಮಿತಾಬ್ ಜೊತೆ ಅಭಿನಯದ ಹೊಸದಲ್ಲ. ಜ್ಯುವೆಲ್ಲರಿಯೊಂದರ ಜಾಹೀರಾತಿನಲ್ಲಿ ಅಮಿತಾಬ್ ಜೊತೆ ನಟಿಸಿದ್ದಾರೆ. ಈಗ, ಚಿತ್ರವೊಂದರಲ್ಲಿ ಇಬ್ಬರೂ ನಟಿಸುತ್ತಾರೆ ಎನ್ನುವ ಸುದ್ದಿಯೇ ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸುತ್ತಿದೆ.

   

Yajamana Movie Gallery

Bazaar Movie Gallery