` vikram ravichandran, - chitraloka.com | Kannada Movie News, Reviews | Image

vikram ravichandran,

  • 'Novembernalli Naanu Avalu' Teaser On Vikram's Birthday

    naanu avalu

    Ravichandran's son Vikram's debut film 'Novembernalli Naan Avalu' is all set to be launched in the month of September. Meanwhile, the teaser and the first look of the film will be released on Vikram's birthday on August 16th. The photo shoot for the film will be held on Monday.

    'Novembernalli Naanu Avalu' is being written and directed by Nagashekhar in four languages. Kanakapura Srinivas will be producing 'Naanu Avalu' in four languages and the team is likely to approach Sai Pallavi for the role of the heroine opposite Vikram.

    Apart from that, Nagashekhar's regular cameraman Satya Hegade will be the cinematographer of this film, while Arjun Janya is the editor. Sharath Kumar, Suhasini, Sadhu Kokila and others play prominent roles in this film.

    Related Articles :-

    Vikram's Film Titled As Naanu Avalu

  • 2ನೇ ಮಗನ ಸಿನಿಮಾಗೆ ರವಿಚಂದ್ರನ್ ಗ್ರೀನ್ ಸಿಗ್ನಲ್..!

    ravichandran's second son vikram ready for grand entry

    ಕ್ರೇಜಿ ಸ್ಟಾರ್ ರವಿಚಂದ್ರನ್‍ರ ಹಿರಿಯ ಮಗ ಮನೋರಂಜನ್ ಚಿತ್ರರಂಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ದೊಡ್ಡ ಹಿಟ್ ಇನ್ನೂ ಸಿಕ್ಕದೇ ಇದ್ದರೂ, ಭರವಸೆ ಮೂಡಿಸಿದ್ದಾರೆ. ಈಗ ರವಿಚಂದ್ರನ್‍ರ ಇನ್ನೊಬ್ಬ ಪುತ್ರ ವಿಕ್ರಂ, ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದಾರೆ. ವಿಕ್ರಂ ರಂಗ ಪ್ರವೇಶಕ್ಕೆ ಓಕೆ ಎಂದಿರುವುದು ರವಿಚಂದ್ರನ್. ವಿಕ್ರಂಗಾಗಿ ಹಲವು ಕಥೆ ಕೇಳಿದ್ದ ರವಿಚಂದ್ರನ್ ಸಹನಾ ಮೂರ್ತಿಯವರಿಗೆ ಓಕೆ ಎಂದಿದ್ದಾರೆ.

    ಈ ಮೊದಲು ರೋಜ್ ಮತ್ತು ಮಾಸ್‍ಲೀಡರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸಹನಾಮೂರ್ತಿ, ಒಂದು ಪ್ರೇಮಕಥೆ ರೆಡಿ ಮಾಡಿದ್ದಾರೆ. ಅದನ್ನು ರವಿಚಂದ್ರನ್ ಅವರಿಗೆ ಹೇಳಿದ್ದಾರೆ. ವಿಕ್ರಂಗೆ ಈ ಕಥೆ ಸೂಟ್ ಆಗುತ್ತೆ ಎಂದು ಯೆಸ್ ಎಂದಿದ್ದಾರೆ ರವಿಚಂದ್ರನ್. ಫೆಬ್ರವರಿ 1ರಂದು ಅರ್ಥಾತ್ ಪ್ರೇಮಿಗಳ ದಿನದಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಯುಗಾದಿಗೆ ಚಿತ್ರೀಕರಣ ಶುರುವಾಗಲಿದೆ. ಸೋಮಶೇಖರ್ ಮತ್ತು ಸುರೇಶ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

    ನಾಗಶೇಖರ್ ನಿರ್ದೇಶನದಲ್ಲಿ ನವೆಂಬರ್‍ನಲ್ಲಿ ನಾನು ಮತ್ತು ಅವಳು ಚಿತ್ರಕ್ಕೆ ವಿಕ್ರಂ ರೆಡಿಯಾಗಿದ್ದರು. ಆದರೆ ನಾಗಶೇಖರ್.. ಅಮರ್ ಅಂಬರೀಷ್ ಸಿನಿಮಾಕ್ಕೆ ಹೊರಳಿದ ಕಾರಣ, ಆ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಮತ್ತೊಮ್ಮೆ ವಿಕ್ರಂ ಕ್ರೇಜಿ ಎಂಟ್ರಿಗೆ ರಂಗ ಸಿದ್ಧವಾಗಿದೆ.

  • Akanksha To Star Opposite Vikram In 'Trivikrama'

    akanksha to star opposite vikram

    Ravichandran's son Trivikram debut film 'Trivikrama' is scheduled to be launched on the 10th of August. Meanwhile, the heroine for Vikram has been selected and Mumbai girl Akanksha has been roped in as the heroine of the film.

    'Trivikrama' is being written and directed by Sahana Murthy, who had earlier directed 'Rose' and Shivarajakumar starrer 'Mass Leader'. Apart from Vikram and Akanksha, Sadhu Kokila, Tulasi Shivamani, Chikkanna, Suchendraprasad and others play prominent roles in the film. 

    'Trivikrama' is being produced by Somanna and Suresh. Arjun Janya is the music director, while Santhosh Rai Pathaje is the cinematographer. The film will be shot in Bangalore, Dandeli, Rajasthan, Bangkok and other places.

  • Novembernalli Naanu Avalu Teaser Released

    naanu avanu teaser launched

    The first look and teaser of Ravichandran's son Vikram's debut film 'Novembernalli Naan Avalu' was launched on Vikram's birthday on 16th of August.

    The teaser release was held at Orion Mall and Vikram, Manoranjan, Arun Sagar, Satya Hegade and others were present at the occasion.

    'Novembernalli Naanu Avalu' is being written and directed by Nagashekhar in four languages. Kanakapura Srinivas will be producing 'Naanu Avalu' in four languages. Sharath Kumar, Suhasini, Sadhu Kokila and others play prominent roles in this film.

  • Vikram Ravichandran Debut Movie Launch On Varamahalakshmi festival

    vikram ravichandran's debut movie to launch on varamahalakshmi festival

    After Manoranjan Ravichandran, it is now the turn of yet another junior crazy star, Vikram Ravichandran to make his debut as a full fledged hero. His movie is all set to be launched on the occasion of Varamahalakshmi festival.

    Produced under the banner Gowri Entertainers by Somanna and Suresh, the movie will be directed by Sahanamurthy, who directed Rose and Mass Leader. Vikram had acted in a special role in Traffic, starring his father crazy star V Ravichandran in the lead. Thereafter, the crazy star himself had planned for a grand launch but it failed to take off.

    While the music is being composed by Arjun Janya, Santhosh Rai Pataje will head the camera department and Ravi Varma to compose action sequences for it.

    That's not all, the filmmakers are looking out for a new face as the heroine for the film. Interested and qualified girls between the age of 18 and 23 are requested to send their photographs to 9972246666. 

  • Vikram's Film Likely To Be Titled As 'Trivikrama'

    vikram's new film titled trivikrama

    Ravichandran's second son Vikram alias Vicky is all set to make his debut as a hero and the film is scheduled to be launched on the Varamahalakshmi festival on August 09th. Meanwhile, there is a buzz that the film is likely to be titled as 'Trivikrama'.

    The new film is being written and directed by Sahana Murthy, who had earlier directed 'Rose' and Shivarajakumar starrer 'Mass Leader'. This is his third film as a director and Sahana Murthy has written the story and is launching Vikram through this film. Sahana Murthy is in search of a new heroine for this film.

    The new film is being produced by Somanna and Suresh. Arjun Janya is the music director, while Santhosh Rai Pathaje is the cinematographer.

  • Vikram's Film Titled As Naanu Avalu

    vikram's new film is naanu avalu

    Ravichandran's second son Vikram making his debut in Nagashekhar's new film is not a new news. Now the film has been titled as 'Naan Avalu' and will be launched in the month of September.

    Kanakapura Srinivas will be producing 'Naanu Avalu' in four languages and the team is likely to approach Kamal Hassan's daughter Akshara Hassan for the role of the heroine opposite Vikram.

    Apart from that, Nagashekhar's regular cameraman Satya Hegade will be the cinematographer of this film, while Arjun Janya is the editor. Sharath Kumar, Suhasini, Sadhu Kokila and others play prominent roles in this film.

     

  • ಆಕಾಂಕ್ಷಾ ಡ್ಯಾನ್ಸ್ ಬೊಂಬಾಟ್ : ಯಾರಿದು ತ್ರಿವಿಕ್ರಮನ ಚೆಲುವೆ?

    ಆಕಾಂಕ್ಷಾ ಡ್ಯಾನ್ಸ್ ಬೊಂಬಾಟ್ : ಯಾರಿದು ತ್ರಿವಿಕ್ರಮನ ಚೆಲುವೆ?

    ತ್ರಿವಿಕ್ರಮ ಚಿತ್ರದ ಹಾಡು ನೋಡಿದವರು ಬೆರಗಾಗುತ್ತಿರುವುದು ವಿಕ್ರಂ ಮತ್ತು ಆಕಾಂಕ್ಷಾ ಶರ್ಮಾ ಡ್ಯಾನ್ಸ್ಗೆ. ಹಾಡಿನಲ್ಲಿ ಇಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ. ವಿಕ್ರಂ ಅವರೇನೋ ಕನ್ನಡಿಗರಿಗೆ ಪರಿಚಿತ ಮುಖ. ಮೊದಲನೇ ಸಿನಿಮಾವಾದರೂ, ರವಿಚಂದ್ರನ್ ಅವರ 2ನೇ ಮಗ ಅನ್ನೋ ಪ್ರೀತಿ ಕನ್ನಡಿಗರದ್ದು. ಅಷ್ಟೇ ಕುತೂಹಲ ಮೂಡಿಸಿರುವುದು ಆಕಾಂಕ್ಷಾ ಶರ್ಮಾ.

    ಈ ಆಕಾಂಕ್ಷಾ ಶರ್ಮಾ ಯಾರೆಂದು ಹುಡುಕಿದರೆ ಉತ್ತರ ಜುಗ್ನು ವಿತ್ ಬಾದ್ಷಾ ಮತ್ತು ಟೈಗರ್ ಶ್ರಾಫ್ ಜೊತೆಗಿನ ಎರಡು ಹಾಡುಗಳಲ್ಲಿದೆ. ಅದ್ಭುತ ನೃತ್ಯಗಾರ್ತಿಯಾಗಿರೋ ಆಕಾಂಕ್ಷಾ ಟೈಗರ್ ಶ್ರಾಫ್ ಜೊತೆಗೆ ಸರಿಸಮನಾಗಿ ಹೆಜ್ಜೆ ಹಾಕಿದವರು. ಜಾಹೀರಾತುಗಳಲ್ಲಿ ನಟಿಸುತ್ತಿದ್ದ ಆಕಾಂಕ್ಷಾ ಶರ್ಮಾಗೆ ಇದು ಮೊದಲ ಸಿನಿಮಾ.

    ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ದೇ ನನ್ನ ನೃತ್ಯ ನೋಡಿ. ಚಿತ್ರದಲ್ಲಿ ಹೀರೋ ವಿಕ್ರಂ ಅವರಷ್ಟೇ ಅಲ್ಲದೆ, ನನಗೂ ಒಳ್ಳೆಯ ಅವಕಾಶವಿದೆ. ನಟನೆಗೆ ಸ್ಕೋಪ್ ಇದೆ. ಚಿತ್ರದಲ್ಲಿ ನನ್ನ ಅಭಿನಯ ಮತ್ತು ನೃತ್ಯ ಎರಡನ್ನೂ ಪ್ರದರ್ಶಿಸಲು ಅವಕಾಶ ಸಿಕ್ಕಿದೆ ಎಂದಿದ್ದಾರೆ ಆಕಾಂಕ್ಷಾ ಶರ್ಮ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ವಿಕ್ರಂ, ಇದೇ ವಾರ ರಿಲೀಸ್ ಆಗುತ್ತಿದೆ.

  • ಆದಿತಿ ಪ್ರಭುದೇವ, ವಿಕ್ರಂ ರವಿಚಂದ್ರನ್ ಮೊದಲ ವೆಬ್ ಸಿರೀಸ್

    ಆದಿತಿ ಪ್ರಭುದೇವ, ವಿಕ್ರಂ ರವಿಚಂದ್ರನ್ ಮೊದಲ ವೆಬ್ ಸಿರೀಸ್

    ಲವ್ ಯೂ ಅಭಿ. ಕನ್ನಡದ ವೆಬ್ ಸಿರೀಸ್. ಪ್ರಧಾನ ಪಾತ್ರದಲ್ಲಿ ನಟಿಸಿರುವುದು ಆದಿತಿ ಪ್ರಭುದೇವ ಮತ್ತು ವಿಕ್ರಂ ರವಿಚಂದ್ರನ್. ಮೊದಲ ಸಿನಿಮಾದಲ್ಲಿ ನಿರಾಶಾದಾಯಕ ಓಪನಿಂಗ್ ಪಡೆದ ವಿಕ್ರಂ, ಈಗ ಮುಧೋಳ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಇದರ ಜೊತೆಗೆ ವೆಬ್ ಸಿರೀಸ್ ಲೋಕಕ್ಕೂ ಕಾಲಿಟ್ಟಿರುವ ವಿಕ್ರಂ, ಜಿಯೋ ಸಿನಿಮಾಸ್ ಮೂಲಕ ಬರುತ್ತಿದ್ದಾರೆ.

    ಕಾಳಿ ವೇಲಾಯುಧಂ ನಿರ್ದೇಶನದ ಲವ್ ಯೂ ಅಭಿ, ಜಿಯೋ ಸಿನಿಮಾಸ್`ನಲ್ಲಿ ಮೇ 19ರಂದು ರಿಲೀಸ್ ಆಗುತ್ತಿದೆ. ಈ ಸಿರೀಸ್`ನಲ್ಲಿ ವಿಕ್ರಂ-ಆದಿತಿ ಜೊತೆ ರವಿಶಂಕರ್ ಕೂಡಾ ಇದ್ದಾರೆ. ಸಾಮಾನ್ಯವಾಗಿ ವೆಬ್ ಸಿರೀಸ್`ಗಳಲ್ಲಿ ಕೆಲವು ಲಿಮಿಟ್ಸ್ ಇರುವುದಿಲ್ಲ. ಸೆಕ್ಸ್ ಮತ್ತು ಕ್ರೌರ್ಯವನ್ನ ಢಾಳಾಗಿ ಪ್ರದರ್ಶಿಸಲಾಗುತ್ತದೆ. ಆದರೆ ಈ ಸಿರೀಸ್‍ನಲ್ಲಿ ಅಂತಹದ್ದೆಲ್ಲ ಇರಲ್ಲವಂತೆ. ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಕಥನದಲ್ಲಿ ಭಾವುಕ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳಿವೆ, ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್ ಯು ಅಭಿ’.

    ಅಭಿಯಾಗಿ ನಟಿಸಿರುವ ಆದಿತಿ ಪ್ರಭುದೇವ ಅವರಿಗೆ ಇದು ನಟನಾಪಯಣಕ್ಕೆ ಬ್ರೇಕ್ ನೀಡಿದ ಪಾತ್ರವಂತೆ. ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಂದೊಂದ್ಸಲ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೀನಿ. ಐ ಲವ್ ಅಭಿ. ಬಹುಶಃ ತುಂಬ ಜನರಿಗೆ ಅಭಿ ಇಷ್ಟ ಆಗ್ತಾಳೆ’ ಎಂದು ತುಂಬ ವಿಶ್ವಾಸದಿಂದ ಹೇಳುತ್ತಾರೆ ಅದಿತಿ ಪ್ರಭುದೇವ.

  • ಕ್ರೇಜಿ ಸ್ಟಾರ್‍ರ ಇನ್ನೊಬ್ಬ ಪುತ್ರ ಬೆಳ್ಳಿತೆರೆಗೆ ಎಂಟ್ರಿ

    ravichandran second son to launch in movies

    ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕರಾಗಿ ನಟಿಸುತ್ತಿರುವ ಸಾಹೇಬ ಚಿತ್ರ ರಿಲೀಸ್‍ಗೆ ರೆಡಿಯಾಗುತ್ತಿದೆ. ಈಗ ರವಿಚಂದ್ರನ್‍ರ ಎರಡನೇ ಮಗ ವಿಕ್ರಂ ಕೂಡಾ ಹೀರೋ ಆಗುತ್ತಿದ್ದಾರೆ.

    ವಿಕ್ರಂ ಕೂಡಾ ತಂದೆಯ ಬ್ಯಾನರ್‍ನಲ್ಲಿ ಲಾಂಚ್ ಆಗುತ್ತಿಲ್ಲ. ವಿಕ್ರಂ ಲಾಂಚ್ ಆಗ್ತಿರೋದು ಆರ್.ಎಸ್. ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ. ಚಿತ್ರದ ನಿರ್ದೇಶಕ ನಾಗಶೇಖರ್. ಆಷಾಡ ಮುಗಿದು ಶ್ರಾವಣ ಶುರುವಾದೊಡನೆ, ಚಿತ್ರಕ್ಕೆ ಮುಹೂರ್ತವಾಗಲಿದೆ.  ಚಿತ್ರದ ಕಥೆ ಓಕೆ ಆಗಿದ್ದು, ಟೈಟಲ್, ತಾರಾಗಣದ ಆಯ್ಕೆ ಇನ್ನಷ್ಟೇ ಶುರುವಾಗಬೇಕಿದೆ.

    ವಿಕ್ರಂಗೆ ನಟನೆಗಿಂತ ಡೈರೆಕ್ಷನ್ ಇಷ್ಟ ಎಂದು ರವಿಚಂದ್ರನ್ ಹೇಳಿಕೊಳ್ತಾ ಇದ್ರು. ಆದರೆ, ಮನೋರಂಜನ್‍ಗೂ ಮೊದಲೇ ಮಲ್ಲ ಸೇರಿದಂತೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ವಿಕ್ರಂ. ಥೇಟು ರವಿಚಂದ್ರನ್ ಎಂಟ್ರಿ ಕೊಟ್ಟಂತೆಯೇ. ರವಿಚಂದ್ರನ್ ಕೂಡಾ ಹೀಗೇನೇ ಮೊದಲು ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿಯೇ, ಹೀರೋ ಆದವರು. 

    ಈಗ ಒಬ್ಬ ಮಗ ಹೀರೋ ಆಗಿದ್ದಾನೆ. ತೆರೆಗೆ ಬರೋದಷ್ಟೇ ಬಾಕಿ. ಎರಡನೇ ಮಗ ಹೀರೋ ಆಗುತ್ತಿದ್ದಾನೆ. ಕ್ಯಾಮೆರಾ ಸ್ಟಾರ್ಟ್ ಆಗೋದಷ್ಟೇ ಬಾಕಿ. ಇಬ್ಬರೂ ಮಕ್ಕಳಿಗೆ  ತಮ್ಮ ಬ್ಯಾನರ್‍ನಲ್ಲಿ ಚಿತ್ರ ಮಾಡಲು ಆಗಲಿಲ್ಲ ಅನ್ನೋದಷ್ಟೇ ರವಿಚಂದ್ರನ್ ಕೊರಗು.

  • ಕ್ರೇಜಿಸ್ಟಾರ್ 2ನೇ ಪುತ್ರ ವಿಕ್ರಂ ಚಿತ್ರ ಜೂನ್ 24ಕ್ಕೆ..

    ಕ್ರೇಜಿಸ್ಟಾರ್ 2ನೇ ಪುತ್ರ ವಿಕ್ರಂ ಚಿತ್ರ ಜೂನ್ 24ಕ್ಕೆ..

    ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ತ್ರಿವಿಕ್ರಮ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಕ್ರಂರನ್ನು ಲಾಂಚ್ ಮಾಡುತ್ತಿರೋದು ನಿರ್ದೇಶಕ ಸಹನಾಮೂರ್ತಿ ಮತ್ತು ನಿರ್ಮಾಪಕ ಸೋಮಣ್ಣ. ಚಿತ್ರದಲ್ಲಿ ಹೀರೋಯಿನ್ ಆಗಿ ಆಕಾಂಕ್ಷಾ ಶರ್ಮ ನಟಿಸಿದ್ಧಾರೆ. ಚಿತ್ರದ ಬಿಡುಗಡೆ ಘೋಷಿಸಲು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅಣ್ಣ ಮನುರಂಜನ್ ರವಿಚಂದ್ರನ್ ಕೂಡಾ ಇದ್ದು ತಮ್ಮನ ಚಿತ್ರಕ್ಕೆ ಶುಭ ಕೋರಿದರು. ನಟಿ ತಾರಾ, ಸಾಧುಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಮೊದಲಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಲು ಆಗಮಿಸಿದ್ದರು.

    ಸಿನಿಮಾ ಪೂರ್ತಿಯಾಗಿ 3 ವರ್ಷವಾಯಿತು. ಕೋವಿಡ್ ಕಾರಣದಿಂದ ತಡವಾಯಿತು ಎಂದ ವಿಕ್ರಂ, ಚಿತ್ರದ ಕಥೆ ಅಪ್ಪನಿಗೆ ಗೊತ್ತಿಲ್ಲ. ಆದರೆ ಇಡೀ ಕಥೆಯನ್ನು ಶಿವಣ್ಣ ಮತ್ತು ಪುನೀತ್ ಕೇಳಿದ್ದರು. ಪುನೀತ್ ಕಥೆ ಇಷ್ಟಪಟ್ಟು ನಾನು ಒಂದು ಹಾಡು ಹಾಡ್ತೀನಿ. ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲ ಅಂದ್ರೆ ಹೊಡೀತೀನಿ ಎಂದಿದ್ದರು ಎಂದು ಭಾವುಕರಾದರು. ನಾನು ರವಿಚಂದ್ರನ್ ಅವರ ಮಗ ಹೌದು. ಆದರೆ ಚಿತ್ರರಂಗಕ್ಕೆ ಹೊಸಬ. ನಮ್ಮ ಚಿತ್ರವನ್ನು ನೋಡಿ ಹಾರೈಸಿ ಎಂದ ವಿಕ್ರಂ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.

    ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ, ಹೈ ಕ್ಲಾಸ್ ಫ್ಯಾಮಿಲಿ ಹುಡುಗಿಯನ್ನು ಏಕೆ ಲವ್ ಮಾಡಬಾರದು ಎಂಬ ವಿಷಯವೇ ಚಿತ್ರದ ಕಥೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಟನಾಗಿ ನಾನು ವಿಕ್ರಂ ಅವರಿಗೆ ನೂರಕ್ಕೆ ನೂರು ಅಂಕ ಕೊಡುತ್ತೇನೆ ಎಂದರು ನಿರ್ದೇಶಕ ಸಹನಾ ಮೂರ್ತಿ.  

  • ತ್ರಿವಿಕ್ರಮ ಸೆನ್ಸಾರ್ ಪಾಸ್

    ತ್ರಿವಿಕ್ರಮ ಸೆನ್ಸಾರ್ ಪಾಸ್

    ಜೂನ್ 24ಕ್ಕೆ ರಿಲೀಸ್ ಆಗುತ್ತಿರುವ ತ್ರಿವಿಕ್ರಮ ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ವಿಕ್ರಂ ರವಿಚಂದ್ರನ್ ಅಭಿನಯದ ಮೊದಲ ಚಿತ್ರವಿದು. ವಿಕ್ರಂ ಎದುರು ಆಕಾಂಕ್ಷಾ ನಾಯಕಿ. ಪಕ್ಕಾ ಲವ್ ಸ್ಟೋರಿಯ ಚಿತ್ರಕ್ಕೆ

    ಸಹನಾ ಮೂರ್ತಿ ನಿರ್ದೇಶನವಿದೆ.

    ಸಿನಿಮಾಗೆ ಸೋಮಣ್ಣ ಟಾಕೀಸ್ ಬಂಡವಾಳ ಹೂಡಿದೆ. ರಾಮ್ಕೋ ಸೋಮಣ್ಣ ನಿರ್ಮಾಪಕರು. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಸೌಂಡ್ ಮಾಡುತ್ತಿವೆ.

  • ತ್ರಿವಿಕ್ರಮನ ಪರಾಕ್ರಮ

    trivikrama audio record sold out

    ಆಡಿಯೋ ಮಾರುಕಟ್ಟೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಬೆನ್ನು ಬೆನ್ನಿಗೆ ಬರೆದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಈಗ ಅವರ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ್ ಅದೇ ರೀತಿ ದಾಖಲೆ ಬರೆದಿದೆ. ವಿಕ್ರಮ್ ಅಭಿನಯದ ತ್ರಿವಿಕ್ರಮ್ ಚಿತ್ರದ ಆಡಿಯೋ ಹಕ್ಕುಗಳು 50 ಲಕ್ಷಕ್ಕೆ ಸೇಲ್ ಆಗಿದೆ.

    ರವಿಚಂದ್ರನ್ ಪುತ್ರನಾದರೂ ತಂದೆಯ ನೆರಳಿನಿಂದ ಹೊರಬಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಹಠ ತೊಟ್ಟಿರುವ ವಿಕ್ರಮ್, ತ್ರಿವಿಕ್ರಮ್ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ನಿರ್ದೇಶಕ ಸಹನಾ ಮೂರ್ತಿ ಚೆಂದದ ಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ. ನಿರ್ಮಾಪಕ ಸೋಮಣ್ಣ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿಯೇ ಬಂಡವಾಳ ಹೂಡಿದ್ದಾರೆ.

    ಎ2 ಆಡಿಯೋ ಕಂಪೆನಿ, 50 ಲಕ್ಷಕ್ಕೆ ಆಡಿಯೋ ರೈಟ್ಸ್ ಖರೀದಿಸಿದೆ. ಇತ್ತೀಚೆಗೆ ಆಡಿಯೋಗೆ ಮಾರ್ಕೆಟ್ ಇಲ್ಲ. ಆದರೂ ತ್ರಿವಿಕ್ರಮ್ ದಾಖಲೆ ಬರೆದಿದೆ. ಚಿತ್ರದಲ್ಲಿ 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಭರ್ಜರಿ ಚೇತನ್ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶಕ. 

  • ತ್ರಿವಿಕ್ರಮನಿಗೆ ಗೌಡ ಅಕ್ಷರಾ ಗ್ಲ್ಯಾಮರ್

    panchantantra;s glam doll in vikram's trivikrama

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ 2ನೇ ಮಗ ವಿಕ್ರಮ್ ಅಭಿನಯದ ಮೊದಲ ಸಿನಿಮಾಗೆ ಇನ್ನೊಬ್ಬ ನಾಯಕಿ ಎಂಟ್ರಿ ಕೊಟ್ಟಿದ್ದಾರೆ. ಪಂಚತಂತ್ರದ ಗ್ಲಾಮರ್ ಗೊಂಬೆ ಅಕ್ಷರಾ ಗೌಡ, ವಿಕ್ರಂಗೆ ಇನ್ನೊಬ್ಬ ನಾಯಕಿ. ಈಗಾಗಲೇ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದು, 2ನೇ ನಾಯಕಿಯಾಗಿ ಅಕ್ಷರಾ ಗೌಡ ಬಂದಿದ್ದಾರೆ.

    ಚಿತ್ರದಲ್ಲಿ ನನಗೆ ಟ್ರೆಡಿಷನಲ್ ಮತ್ತು ಗ್ಲ್ಯಾಮರಸ್ ಎರಡೂ ರೀತಿ ಇರುವ ಪಾತ್ರವಿದೆ. ಉಳಿದಂತೆ ಕಥೆ ಮತ್ತು ಪಾತ್ರದ ಬಗ್ಗೆ ಹೆಚ್ಚು ಹೇಳುವಂತಿಲ್ಲ. ನಾನಂತೂ ಎಕ್ಸೈಟ್‍ಮೆಂಟ್‍ನಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಅಕ್ಷರಾ ಗೌಡ.

    ನಿರ್ದೇಶಕ ಸಹನಾಮೂರ್ತಿ ಚಿತ್ರವನ್ನು ಆಗಸ್ಟ್ 10ರಂದು ಶುರು ಮಾಡಲಿದ್ದು, ಸೋಮಶೇಖರ್ ಮತ್ತು ಸುರೇಶ್ ನಿರ್ಮಾಪಕರು.

  • ನಟನಾಗರಲು ರವಿಚಂದ್ರನ್ ಪುತ್ರನ ತಯಾರಿ - ರವಿಚಂದ್ರನ್ ಅವರಷ್ಟೇ ಡಿಫರೆಂಟು

    ravichandran's son preparation for debut movieVikram, Ravichandran Image

    ಇತ್ತೀಚೆಗೆ ಅದೊಂದು ಟ್ರೆಂಡ್ ಅಥವಾ ಸಂಪ್ರದಾಯವೇ ಆಗಿ ಹೋಗಿತ್ತು. ಹೊಸದಾಗಿ ಚಿತ್ರರಂಗಕ್ಕೆ ಬರುವವರನ್ನು ಏನು ಕಲಿತಿದ್ದೀರಿ, ಹೇಗೆ ತಯಾರಾಗಿದ್ದೀರಿ ಎಂದರೆ, ಕುದುರೆ ಸವಾರಿ ಕಲಿತಿದ್ದೇನೆ. ಕರಾಟೆ ಕಲಿತಿದ್ದೇನೆ. ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದೇನೆ. ಜಿಮ್‍ಗೆ ಹೋಗಿ ಬಾಡಿ ವರ್ಕೌಟ್ ಮಾಡಿದ್ದೇನೆ ಎಂದು ಹೇಳುತ್ತಿದ್ದವರ ಸಂಖ್ಯೆಯೇ ಜಾಸ್ತಿಯಿತ್ತು. ಆದರೆ, ರವಿಚಂದ್ರನ್ ಪುತ್ರ ವಿಕ್ರಂ ಹಾಗಲ್ಲ. ರವಿಚಂದ್ರನ್ ಹೇಗೆ ಡಿಫರೆಂಟೋ ಅವರ ಮಗನೂ ಹಾಗೆಯೇ ಡಿಫರೆಂಟು. 

    ಚಿತ್ರರಂಗಕ್ಕೆ ಬರುವ ಮುನ್ನ ಅವರು ಮಾಡಿಕೊಳ್ಳುತ್ತಿರುವ ತಯಾರಿ ಹೇಗಿದೆ ಗೊತ್ತಾ..? ಮೊದಲನೆಯದಾಗಿ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸುವುದು. ಅದಕ್ಕಾಗಿ ಸಂಭಾಷಣೆಯನ್ನು ಸ್ಪಷ್ಟವಾಗಿ ಹೇಳುವುದು, ಏರಿಳಿತ, ಭಾವನೆಯನ್ನು ಅಭಿವೃಕ್ತಪಡಿಸುವುದನ್ನು ಅಭ್ಯಾಸ ಮಾಡುತ್ತಿದ್ದಾರಂತೆ.

    ರಂಗಭೂಮಿಯಲ್ಲೂ ಕೆಲಸ ಮಾಡುತ್ತಿರುವ ವಿಕ್ರಂ, ನಾಟಕ ಮಾಡಲು ಆಗುತ್ತಿಲ್ಲ. ಆದರೆ, ರಂಗಭೂಮಿಯಲ್ಲಿ ಕೆಲಸ ಮಾಡುವ ರಾಜು ಎಂಬುಬವವರಿಂದ ಹಾಗೂ ನಿರ್ದೇಶಕ ನಾಗಶೇಖರ್ ಅವರಿಂದ ರಂಗಭೂಮಿಯ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ವಾಯ್ಸ್ ಎಕ್ಸರ್‍ಸೈಜ್, ಮೂಗಿನಿಂದ ಮಾತನಾಡುವುದು, ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದು.. ಹೀಗೆ ಹಲವು ವಿಷಯಗಳನ್ನು ಹೇಳಿಸಿಕೊಳ್ಳುತ್ತಿದ್ದಾರಂತೆ. ಅದಕ್ಕಾಗಿ ಹೆಚ್ಚೆಚ್ಚು ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದಾರಂತೆ. ಡ್ಯಾನ್ಸ್, ಫೈಟ್‍ನ್ನೂ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

    ಇಷ್ಟೆಲ್ಲ ತರಬೇತಿ ಯಾಕೆ ಎಂದರೆ ಉತ್ತರ, ಅವರು ರವಿಚಂದ್ರನ್ ಪುತ್ರ ಎನ್ನುವುದೇ. ರವಿಚಂದ್ರನ್ ಮಗ ಎನ್ನುವ ಕಾರಣಕ್ಕೇ ನಿರೀಕ್ಷೆ ಹೆಚ್ಚಾಗಿರುತ್ತೆ. ಆ ನಿರೀಕ್ಷೆಯನ್ನು ರೀಚ್ ಆಗಬೇಕೆಂದರೆ, ಸಿದ್ಧತೆಯೊಂದಿಗೆ ಬರಬೇಕು ಎನ್ನುತ್ತಾರೆ ವಿಕ್ರಂ. ನಾಗಶೇಖರ್ ನಿರ್ದೇಶನದಲ್ಲಿ ನಾನು ಅವಳು ಚಿತ್ರದಲ್ಲಿ ನಟಿಸುತ್ತಿರುವ ವಿಕ್ರಮ್, ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಚಿತ್ರ ಮಾಡುತ್ತಿದ್ದಾರೆ. ಚಿತ್ರ ನವೆಂಬರ್‍ನಲ್ಲಿ ಸೆಟ್ಟೇರಲಿದೆ.

    Related Articles :-

    Vikram's Film Titled As Naanu Avalu

  • ರವಿ ಮಗನ ಸಿನಿಮಾ ಅಂದ್ಕೊಂಡು ಬನ್ನಿ.. ಆದರೆ.. - ವಿಕ್ರಮ್ ರವಿಚಂದ್ರನ್ ಕಾನ್ಫಿಡೆನ್ಸ್ ನೋಡಿದ್ರಾ..?

    vikram ravichandran's trivikrama speciality

    ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಅಭಿನಯದ ಮೊದಲ ಸಿನಿಮಾ ಶುರುವಾಗಿದೆ. ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ ಚಿತ್ರಕ್ಕೆ ಚಾಲನೆ ದೊರೆತಿದೆ. ಮುಹೂರ್ತದ ನಂತರ ವಿಕ್ರಮ್ ಮಾತು ಕೇಳಿದರೆ ಇಷ್ಟವಾಗೋದು ಅವರ ಕಾನ್ಫಿಡೆನ್ಸು.

    ಇದು ನನ್ನ ಮೊದಲ ಸಿನಿಮಾ. ಸಿನಿಮಾಗೆ ಎಲ್ಲ ತಯಾರಿ ಮಾಡಿಕೊಂಡೇ ಬಂದಿದ್ದೇನೆ. ಪ್ರೇಕ್ಷಕರು ಬರುವಾಗ ಇದು ರವಿಚಂದ್ರನ್ ಮಗನ ಸಿನಿಮಾ ಎಂದುಕೊಂಡೇ ಬರಲಿ, ಹೋಗುವಾಗ ಇದು ವಿಕ್ರಂ ಸಿನಿಮಾ ಎಂದರೆ ಸಾಕು. ಅದೇ ನನಗೆ ದೊಡ್ಡ ಯಶಸ್ಸು ಎಂದಿದ್ದಾರೆ ವಿಕ್ರಮ್.

    ಚಿತ್ರದಲ್ಲಿ ಹೈವೋಲ್ಟೇಜ್ ಲವ್ ಸ್ಟೋರಿ ಇದೆಯಂತೆ. ನಿನಗೆ ಎಷ್ಟು ಗೊತ್ತಿದೆಯೋ ಅಷ್ಟು ಮಾಡು. ಒತ್ತಡ ತೆಗೆದುಕೊಳ್ಳಬೇಡ ಎಂದಿದ್ದಾರಂತೆ ರವಿಚಂದ್ರನ್. ವಿಕ್ರಂಗೆ ಜೋಡಿಯಾಗಿ ಆಕಾಂಕ್ಷಾ ನಟಿಸುತ್ತಿದ್ದಾರೆ.

  • ರವಿಚಂದ್ರನ್ ಮಗನ ಚಿತ್ರ ಸದ್ಯಕ್ಕಿಲ್ಲ..!

    ravichandran image

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಂ ಅವರ ಮೊದಲ ಚಿತ್ರವೇ ಮುಂದೆ ಹೋಗಿದೆ. ನಾಗಶೇಖರ್ ನಿರ್ದೇಶನದ, ಶ್ರೀನಿವಾಸ್ ನಿರ್ಮಾಣದ ಈ ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿತ್ತು. ಆದರೆ, ನಿರ್ಮಾಪಕ, ನಿರ್ದೇಶಕರಿಬ್ಬರೂ ತಮ್ಮ ತಮ್ಮ ಹಳೆಯ ಕಮಿಟ್‍ಮೆಂಟ್‍ಗಳಿಗೋಸ್ಕರ ವಿಕ್ರಂ ಚಿತ್ರವನ್ನು ಮುಂದೂಡಿದ್ದಾರೆ. 

    ಚಿತ್ರ ಯಾವಾಗ ಶುರುವಾಗುತ್ತೆ ಅನ್ನೋದು ಗೊತ್ತಿಲ್ಲ. ಕೆಲವು ತಿಂಗಳುಗಳೇ ಬೇಕಾಗಬಹುದು ಎಂದಿದ್ದಾರೆ ವಿಕ್ರಂ ರವಿಚಂದ್ರನ್. ಇದರ ಮಧ್ಯೆ ವಿಕ್ರಂಗೆ ಹಲವರು ಕಥೆ ಹೇಳಿದ್ದಾರೆ. ಅವುಗಳಲ್ಲಿ ಯಾವುದಾದರೂ ಇಷ್ಟವಾದರೆ, ತಮ್ಮ ಲಾಂಚಿಂಗ್ ಸಿನಿಮಾ ರೆಡಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ವಿಕ್ರಂ.

  • ರವಿಚಂದ್ರನ್ ಮಗನ ಚಿತ್ರಕ್ಕೆ ಅಣ್ಣನೇ ಪ್ರೊಡ್ಯಸೂರ್

    ವಿಚಂದ್ರನ್ ಮಗನ ಚಿತ್ರಕ್ಕೆ ಅಣ್ಣನೇ ಪ್ರೊಡ್ಯಸೂರ್

    ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ವಿಕ್ರಂ ರವಿಚಂದ್ರನ್, ಈಗ ಗ್ಯಾಂಗ್‍ಸ್ಟರ್ ಅವತಾರವೆತ್ತುತ್ತಿದ್ದಾರೆ. ವಿಕ್ರಂ ಹೊಸ ಚಿತ್ರದ ಹೆಸರೇ ಗ್ಯಾಂಗ್‍ಸ್ಟರ್. ತಮಿಳು, ತೆಲುಗು ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿರುವ ಕಾರ್ತಿಕ್ ರಾಜನ್ ಈ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರಕ್ಕೆ ನಿರ್ಮಾಪಕರಾಗುತ್ತಿರುವುದು ಮನುರಂಜನ್ ರವಿಚಂದ್ರನ್.

    ಕನ್ನಡದಲ್ಲಿ ಅಣ್ಣ-ತಮ್ಮಂದಿರ ಜೋಡಿಯ ಚಿತ್ರಗಳು ಹೊಸದಲ್ಲ. ರಾಜ್ ಚಿತ್ರಗಳಿಗೆ ಬೆನ್ನೆಲುಬಾಗಿದ್ದವರು ಅವರ ಸೋದರ ವರದಪ್ಪ. ಶಿವಣ್ಣ-ರಾಘವೇಂದ್ರ-ಪುನೀತ್ ಕೂಡಾ ಪರಸ್ಪರರ ಚಿತ್ರಗಳ ನಿರ್ಮಾಣದ ಹೊಣೆ ಹೊತ್ತಿದ್ದವರೇ. ಅನಂತ್ ನಾಗ್ ಮತ್ತು ಶಂಕರ್ ನಾಗ್ ಒಬ್ಬರಿಗೊಬ್ಬರ ಬೆಳವಣಿಗೆಗೆ ಪೂರಕವಾಗಿದ್ದವರು. ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಕೂಡಾ ಅದೇ ರೀತಿ ಇದ್ದವರು. ಜಗ್ಗೇಶ್ ಮತ್ತು ಕೋಮಲ್ ಒಬ್ಬರಿಗೊಬ್ಬರು ಹೆಗಲಾದವರು. ಹೊಸ ಜನರೇಷನ್‍ನಲ್ಲಿ ಯುವ ಮತ್ತು ವಿನಯ್ ರಾಜಕುಮಾರ್ ಇರುವಂತೆಯೇ ಈಗ ರವಿಚಂದ್ರನ್ ಮಕ್ಕಳೂ ಅದೇ ರೀತಿ ಹೆಜ್ಜೆ ಹಾಕುತ್ತಿದ್ದಾರೆ.

    ಈ ಚಿತ್ರದ ಮೂಲಕ ವೀರಸ್ವಾಮಿ ಕುಟುಂಬದ 3ನೇ ಜನರೇಷನ್ ಕೂಡಾ ನಿರ್ಮಾಣ ವಲಯಕ್ಕೆ ಕಾಲಿಟ್ಟಂತಾಗಿದೆ. ವೀರಾಸ್ವಾಮಿ ಮೊದಲನೇ ಜನರೇಷನ್ ಆದರೆ, ರವಿಚಂದ್ರನ್ ಮತ್ತು ಬಾಲಾಜಿ 2ನೇ ಜನರೇಷನ್. 3ನೇ ಜನರೇಷನ್ ವಿಕ್ರಂ ಮತ್ತು ಮನು. ಅಪ್ಪ ಚಿಕ್ಕಪ್ಪ ಹೇಗೆ ಪರಸ್ಪರ ಸಪೋರ್ಟಿವ್ ಆಗಿದ್ದರೋ, ಅದೇ ರೀತಿ ಅವರ ಮಕ್ಕಳೂ ಕೂಡಾ ಹೆಜ್ಜೆ ಹಾಕುತ್ತಿರುವುದು ಸ್ಯಾಂಡಲ್‍ವುಡ್‍ನಲ್ಲಿ ಸಂಭ್ರಮ ಹೆಚ್ಚಿಸಿದೆ.

    ಚಿತ್ರದ ಮುಹೂರ್ತ ನೆರವೇರಿದ್ದು, ಶೀಘ್ರದಲ್ಲೇ ಟೀಸರ್ ಹೊರಬೀಳಲಿದೆಯಂತೆ. ಮದುವೆಯ ನಂತರ ಮನು ರಂಜನ್ ಹೊಸ ಸಾಹಸಕ್ಕೆ ಇಡೀ ಸ್ಯಾಂಡಲ್‍ವುಡ್ ಶುಭ ಹಾರೈಸಿದೆ.

  • ವಿಕ್ರಂ ರವಿಚಂದ್ರನ್ ಹೊಸ ಚಿತ್ರ ಮುಧೋಳ್

    ವಿಕ್ರಂ ರವಿಚಂದ್ರನ್ ಹೊಸ ಚಿತ್ರ ಮುಧೋಳ್

    ಮುಧೋಳ್. ಈ ತಳಿಯ ನಾಯಿಗೆ ಇಡೀ ಇಂಡಿಯಾದಲ್ಲಿ ಸಖತ್ ಡಿಮ್ಯಾಂಡ್. ಸೇನೆಯಲ್ಲೂ ಡಿಮ್ಯಾಂಡ್. ಹಾಗಂತ ಮುಧೋಳ್ ನಾಯಿ ನೋಡೋಕೆ ಮುದ್ದು ಮುದ್ದಾಗಿದೆ ಎಂದರ್ಥವಲ್ಲ. ಬಡಕಲು ಬಡಕಲಾಗಿ ಕಾಣುವ, ಆದರೆ ಪವರ್ ಫುಲ್ ನಾಯಿಯದು. ಆ ಹೆಸರನ್ನೇ ತಮ್ಮ ಚಿತ್ರಕ್ಕೆ ಟೈಟಲ್ ಆಗಿಟ್ಟುಕೊಂಡಿದ್ದಾರೆ ವಿಕ್ರಂ ರವಿಚಂದ್ರನ್.

    ಈ ಚಿತ್ರದ ಮೂಲಕ ವಿಕ್ರಂ, ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟೈಟಲ್ ಕೊಟ್ಟವರು ಸ್ವತಃ ರವಿಚಂದ್ರನ್ ಅವರಂತೆ. 'ತ್ರಿವಿಕ್ರಮ್' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಅಡಿ ಇಟ್ಟಿದ ವಿಕ್ಕಿ ಈ ಬಾರಿ ರಾ ಹಾಗೂ ಗ್ಯಾಂಗ್ಸ್ಟರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ.

    ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೇ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ ಎಂದೆಲ್ಲ ವಿವರ ಕೊಟ್ಟರು ವಿಕ್ರಂ.

    ಅಂದಹಾಗೆ ಇಲ್ಲಿ ಬರುವ ಮುಧೋಳ್ ನಾಯಿ ಟ್ರೈನ್ಡ್. ತ್ಯಾಗರಾಜ್ ಎನ್ನುವವರು ತರಬೇತಿ ನೀಡಿರುವ ನಾಯಿ. ಹೀಗೆ ಚಾಕುವನ್ನು ಬಾಯಲ್ಲಿ ಕಚ್ಚಿಕೊಂಡು ಬರುವ ಒಂದು ಸೀನ್`ಗಾಗಿ 23 ಟೇಕ್`ಗಳಾದವಂತೆ. ಈ ಎಲ್ಲ ಅನುಭವ ಬಿಚ್ಚಿಡುವ ಕಾರ್ತಿಕ್ ರಾಜನ್ ಅವರಿಗೆ ಇದು ಚೊಚ್ಚಲ ಸಿನಿಮಾ. ಹಾಗಂತ ಅನನುಭವಿಯೇನಲ್ಲ. ಈಗಾಗಲೇ ವಿಜಯ್ ಸೇತುಪತಿ, ನಾಗಾರ್ಜುನ, ಸಿಂಬು, ಸಮಂತಾ, ವಿಕ್ರಂ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹೆಡ್ ಬುಷ್ ಚಿತ್ರಕ್ಕೆ ಶೂನ್ಯ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಕಾರ್ತಿಕ್, ನಿಶಾ ಎಂಬ ವೆಬ್ ಸಿರೀಸ್`ನ್ನೂ ಕೂಡಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಲೆಕ್ಕಕ್ಕೆ ಮಾತ್ರ ಇದು ಮೊದಲ ಸಿನಿಮಾ. ಸಂಗೀತ ನಿರ್ದೇಶಕ ಯುವರಾಜ್ ಚಂದ್ರನ್ ಅವರಿಗೂ ಅಷ್ಟೇ, ಇದು ಮೊದಲ ಸಂಗೀತ ನಿರ್ದೇಶನದ ಸಿನಿಮಾ.

    ಟೀಸರ್ ಹೊರಬಿದ್ದಿದ್ದು, ಖೈದಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ವಿಕ್ರಂ. ಹತ್ತಾರು ಜನ ವಿಕ್ರಂನನ್ನು ಕೊಲ್ಲಲು ಬರುವುದು ಹಾಗೂ ಎಲ್ಲರನ್ನೂ ಹೊಡೆದು ಹಾಕಿ ಕೌಂಟ್ ಡೌನ್ ಬಿಗಿನ್ಸ್ ಎನ್ನುವುದು ಟೀಸರ್‍ನ ಮೊದಲ ಡೈಲಾಗ್. ರಕ್ಷಾ ವಿಜಯ್ ಕುಮಾರ್ ಮತ್ತು ಸಿಜು ಕಣ್ಣನ್ ಅವರ ನಿರ್ಮಾಣದಲ್ಲಿ ಬರುತ್ತಿರುವ ಚಿತ್ರ ಮುಧೋಳ್.