ಅನುಭವ ಎಂದರೆ ಕಾಶೀನಾಥ್ ನೆನಪಿಗೆ ಬರುತ್ತಾರೆ. ಅಭಿನಯ, ಉಮಾಶ್ರೀ ಥಟ್ಟನೆ ನೆನಪಾಗುತ್ತಾರೆ. ಆದರೆ, ಈಗ ಅನುಭವ ನೆನಪಿಸಿಕೊಳ್ತಾ ಇರೋದು ಚಿತ್ರರಂಗದ ಹಲವು ನಿರ್ದೇಶಕರು. ಅದೇ ಹೆಸರಲ್ಲಿ ಚಿತ್ರ ಮಾಡೋಕೆ ಹೊರಟವರಿಗೆ ಈಗ ಅನುಭವ ಕಾಡುತ್ತಿದೆ.
ಇತ್ತೀಚೆಗಷ್ಟೇ ನೀನಾಸಂ ಸತೀಶ್ ಅನುಭವ-2 ಹೆಸರಲ್ಲಿ ಚಿತ್ರ ಮಾಡ್ತಾರೆ ಅನ್ನೋದು ಸುದ್ದಿಯಾಗಿತ್ತು. ನಾಯಕಿ ಸಿಂಧು ಲೋಕನಾಥ್. ಉದಯ್ ಮೆಹ್ತಾ ನಿರ್ಮಾಪಕ ಅನ್ನೋ ಸುದ್ದಿ ಬಂದಿತ್ತು. ಆದರೆ ಸಮಸ್ಯೆಯಾಗಿದ್ದು ಟೈಟಲ್‍ನದ್ದು. ಏಕೆಂದರೆ, ಅನುಭವ ಟೈಟಲ್ ಇರೋದು ನಿರ್ಭಯ್ ಚಕ್ರವರ್ತಿ ಎಂಬುವರ ಬಳಿ.
ನಿರ್ಭಯ್ ಚಕ್ರವರ್ತಿ ಈಗ ವಿಜಯಾದಿತ್ಯ ಅನ್ನೋ ಸಿನಿಮಾ ಮಾಡ್ತಿದ್ದಾರೆ. ಅದಾದ ಮೇಲೆ ಅನುಭವ-2 ಸಿನಿಮಾವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಅದಕ್ಕೂ, ಕಾಶೀನಾಥ್‍ರ ಅನುಭವ ಚಿತ್ರಕ್ಕೂ ಸಂಬಂಧ ಇರೋದಿಲ್ಲ.
ಹೀಗಾಗಿ ನೀನಾಸಂ ಚಿತ್ರಕ್ಕೆ ಮೊದಲ ಅನುಭವ ಅನ್ನೋ ಹೆಸರಿಡುವ ಚಾನ್ಸ್ ಇದೆ.
ಇದು ನೀನಾಸಂ ಕಥೆಯಾದರೆ, ತರ್ಲೆ ನನ್ಮಕ್ಳು ಚಿತ್ರ ಮಾಡಿದ್ದ ರಾಕಿ ಅನ್ನೋ ನಿರ್ದೇಶಕ ಎರಡನೇ ಅನುಭವ ಅನ್ನೋ ಹೆಸರಿನ ಚಿತ್ರಕ್ಕೆ ರೆಡಿಯಾಗ್ತಿದ್ದಾರಂತೆ. ಅದಕ್ಕೆ ಶುಭಾ ಪೂಂಜಾ ನಾಯಕಿಯಂತೆ.
ಅನುಭವ ಯಾರಿಗೆ ಸಿಗುತ್ತೋ ಏನೋ..