` darshan, - chitraloka.com | Kannada Movie News, Reviews | Image

darshan,

  • ಹುಬ್ಬಳ್ಳಿಗೆ ಬರ್ತಾರವ್ವಾ ದರ್ಶನ್, ಪ್ರಜ್ವಲ್

    darshan and prajwal will be in hubbali for inspector vikram audio launch

    ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ಎನ್ನುವ ಹಾಡು ಯಾವಾಗ ಇವರ ಕಿವಿಗೆ ಬಿತ್ತೋ ಏನೋ.. ಹುಬ್ಬಳ್ಳಿಗೆ ಹೊರಟು ನಿಂತಿದ್ದಾರೆ ದರ್ಶನ್ ಮತ್ತು ಪ್ರಜ್ವಲ್. ಜಂಟಲ್‍ಮನ್ ಚಿತ್ರಕ್ಕೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಗೆ ಖುಷಿ ಖುಷಿಯಾಗಿರೋ ಪ್ರಜ್ವಲ್ ಅವರ ಇನ್ನೊಂದು ಸಿನಿಮಾ ಇನ್ಸ್‍ಪೆಕ್ಟರ್ ವಿಕ್ರಂ ರಿಲೀಸ್ ಆಗೋಕೆ ರೆಡಿ. ಆಡಿಯೋ ರಿಲೀಸ್ ನಡೆಯುತ್ತಿರೋದು ಹುಬ್ಬಳ್ಳಿಯಲ್ಲಿ.

    ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಸಿನಿಮಾ ಇನ್ಸ್‍ಪೆಕ್ಟರ್ ವಿಕ್ರಂ. ಫೆ.14ರಂದು ನಡೆಯೋ ಆಡಿಯೋ ರಿಲೀಸ್ ಕಾರ್ಯಕ್ರಮದ ಮುಖ್ಯ ಅತಿಥಿ ದರ್ಶನ್. ಈ ಚಿತ್ರದಲ್ಲಿ ದರ್ಶನ್ ಅತಿಥಿ ನಟರಾಗಿಯೂ ನಟಿಸಿದ್ದಾರೆ. ಅದೂ ಭಗತ್ ಸಿಂಗ್ ಪಾತ್ರದಲ್ಲಿ. ನರಸಿಂಹ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್‍ಗೆ ಭಾವನಾ ನಾಯಕಿ. 

  • ಹುಬ್ಬಳ್ಳಿಯಲ್ಲಿ ರಾಬರ್ಟ್ ಹವಾ

    ಹುಬ್ಬಳ್ಳಿಯಲ್ಲಿ ರಾಬರ್ಟ್ ಹವಾ

    ದರ್ಶನ್ ಎಲ್ಲಿದ್ದರೂ.. ಹೇಗಿದ್ದರೂ ಅಭಿಮಾನಿಗಳು ಮುತ್ತಿಕೊಳ್ಳೋದು ಸಹಜ. ಹುಬ್ಬಳ್ಳಿಯಲ್ಲಿ ಬಹಳ ದಿನಗಳ ನಂತರ ದರ್ಶನ್ ಒಂದು ದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳ ಕ್ರೇಜ್ ದೊಡ್ಡದಾಗಿಯೇ ಇತ್ತು. ಅಭಿಮಾನಿಗಳನ್ನು ಕಂಟ್ರೋಲ್ ಮಾಡೋಕೆ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯ್ತು. ಅಭಿಮಾನಿಗಳ ಕುರಿತೇ ಮಾತನಾಡಿದ ದರ್ಶನ್

    ಅಭಿಮಾನಿಗಳನ್ನು ಗದರಿಸಿದರು. ಜೊತೆಯಲ್ಲಿಯೇ ಪರೋಕ್ಷವಾಗಿ ಇತ್ತೀಚಿನ ಜಗ್ಗೇಶ್ ವಿವಾದವನ್ನು ನೆನಪಿಸುವಂತೆ ಮಾತನಾಡಿದ ದರ್ಶನ್ `ಕನ್ನಡ ಚಿತ್ರರಂಗದಲ್ಲಿ ಎಲ್ಲ ಕಲಾವಿದರದ್ದೂ ಒಂದೇ ಜಾತಿ. ನಾವು ಯಾವ ಜಾತಿಗಾಗಿಯೂ ಹುಟ್ಟಿಲ್ಲ. ಯಾರೊಬ್ಬರ ಸ್ವತ್ತೂ ಅಲ್ಲ. ಅಭಿಮಾನಿಗಳೊಂದೇ ನಮ್ಮ ಜಾತಿ' ಎಂದರಷ್ಟೇ ಅಲ್ಲ `ದರ್ಶನ್ ಅಭಿಮಾನಿಗಳಿಗೆ ಕಾಕಾ ಹೊಡೀತಾನೆ ಅಂತಾರೆ. ನಾನು ಹಾಗೆಲ್ಲ ಮಾಡಲ್ಲ. ಅಭಿಮಾನಿಗಳಿಗೆ ನಾನು ಉಗಿದಿದ್ದೂ ಇದೆ. ತಲೆ ಮೇಲೆ ನಾಲ್ಕು  ಬಾರಿಸಿ ಬೈದಿದ್ದೂ ಇದೆ' ಎಂದರು.

    ಇದೇ ವೇಳೆ ನಾವು ಗಾಡಿ ಓಡಿಸುವಾಗ ಹತ್ತಿರ ಬರಬೇಡಿ. ಓವರ್ ಟೇಕ್ ಮಾಡೋಕೆ ಹೋಗಬೇಡಿ. ನನ್ನನ್ನು ನೋಡದೇ ಇದ್ದರೂ ಪರವಾಗಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಇರ್ತಾರೆ ಅನ್ನೋದನ್ನು ಮರೆಯಬೇಡಿ ಎಂದು ಬುದ್ದಿವಾದ ಹೇಳಿದರು. ಅಂದಹಾಗೆ ದರ್ಶನ್ ಇಷ್ಟೆಲ್ಲ ಹೇಳಿದ್ದು ರಾಬರ್ಟ್ ಬಿಡಗಡೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ.

     

  • ಹೃದಯವಂತ ದರ್ಶನ್

    darshan's heart warming moment

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ತಮ್ಮ ಹೃದಯವಂತಿಕೆ ಮೆರೆದಿದ್ದಾರೆ. ಪೂರ್ವಿಕಾ ಅನ್ನೋ ತಮ್ಮ ಅಭಿಮಾನಿಯನ್ನು ತಮ್ಮ ಸೆಟ್‍ಗೇ ಕರೆಸಿಕೊಂಡು ಮಾತನಾಡಿಸಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ. 

    ಪೂರ್ವಿಕಾ ಮಂಡ್ಯದ ಮದ್ದೂರು ಬಳಿಯ ಹಳ್ಳಿಯೊಂದರ ಬಾಲೆ. ಹೃದಯದಲ್ಲಿ ರಂಧ್ರವಾಗಿದ್ದು ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಿದ್ದಾರೆ. ಆಪರೇಷನ್‍ಗೆ ಹೋಗುವ ಮುನ್ನ ದರ್ಶನ್ ಅವರನ್ನು ನೋಡಬೇಕು ಎಂದು ಬಯಸಿದ್ದ ಅಭಿಮಾನಿಯ ಬಯಕೆಯನ್ನು ದರ್ಶನ್ ಈ ರೀತಿ ಈಡೇರಿಸಿದ್ದಾರೆ. ಮೈಸೂರಿನಲ್ಲಿ ತಮ್ಮ ಯಜಮಾನ ಚಿತ್ರದ ಚಿತ್ರೀಕರಣದ ಸೆಟ್‍ಗೇ ಕರೆಸಿಕೊಂಡಿದ್ದ ದರ್ಶನ್, ಚಿತ್ರೀಕರಣವನ್ನೆಲ್ಲ ತೋರಿಸಿ, ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

  • ಹೇಗಿದೆ ದರ್ಶನ್ ಆರೋಗ್ಯ..? - ಇಲ್ಲಿದೆ ಡಾಕ್ಟರ್ ರಿಪೋರ್ಟ್..!

    darshan's health report

    ಸೋಮವಾರ ಮುಂಜಾನೆ ಮೈಸೂರಿನ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಗ್ಯ ಸುಧಾರಿಸುತ್ತಿದೆ. ದರ್ಶನ್ ಅವರನ್ನು ನೋಡೋಕೆ ಆಸ್ಪತ್ರೆಯಲ್ಲೂ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸರದಿ ಸಾಲಿನಲ್ಲಿ ನಿಲ್ಲಿಸಿ ಒಳಗೆ ಬಿಡಲಾಗುತ್ತಿದೆ. ದರ್ಶನ್ ಅವರು ಚೇತರಿಸಿಕೊಳ್ಳುತ್ತಿದ್ದು, ಶುಕ್ರವಾರ ಡಿಸ್‍ಚಾರ್ಜ್ ಆಗುವ ಸಾಧ್ಯತೆ ಇದೆ. 

    ಈ ಕುರಿತು ಮೈಸೂರಿನ ಅಪೋಲೋ ಆಸ್ಪತ್ರೆ ರಿಪೋರ್ಟ್ ಬಿಡುಗಡೆ ಮಾಡಿದೆ. ರಿಪೋರ್ಟ್‍ನಲ್ಲಿ ದರ್ಶನ್ ಚೇತರಿಸಿಕೊಳ್ಳುತ್ತಿದ್ದು, ಗಾಯ ವಾಸಿಯಾಗುತ್ತಿದೆ ಹಾಗೂ ಊತ ಕಡಿಮೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. 

    ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಡಿಸ್‍ಚಾರ್ಜ್ ಆಗಿರುವ ಬಗ್ಗೆಯೂ ಮಾಹಿತಿ ನೀಡಿರುವ ಆಸ್ಪತ್ರೆ ಸಿಬ್ಬಂದಿ, ಕಾರ್‍ನಲ್ಲಿದ್ದ ಆಂಟನಿ ರಾಯ್ ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

  • ಹೇಗಿರ್ತಾನೆ ಯಜಮಾನ.. ಸೆ.23ಕ್ಕೆ ನೋಡಿ..

    yajamana first look on sep 23 rd

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ, ಹೆಚ್ಚೂ ಕಡಿಮೆ ಶೂಟಿಂಗ್ ಮುಗಿಸಿದೆ. ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಯಜಮಾನನಿಗೆ ಪಿ.ಕುಮಾರ್ ನಿರ್ದೇಶಕ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಸಿನಿಮಾದ ಫಸ್ಟ್‍ಲುಕ್, ಸೆಪ್ಟೆಂಬರ್ 23ಕ್ಕೆ ಬಿಡುಗಡೆಯಾಗಲಿದೆ. 

    ಕುರುಕ್ಷೇತ್ರಕ್ಕೆ ಕಾದು ಕಾದು ಕುಳಿತಿದ್ದ ದರ್ಶನ್ ಅಭಿಮಾನಿಗಳು, ಈಗ ಯಜಮಾನನ ಫಸ್ಟ್‍ಲುಕ್‍ನಿಂದ ಪುಳಕಗೊಳ್ಳಲು ರೆಡಿಯಾಗುತ್ತಿದ್ದಾರೆ. ಫಸ್ಟ್‍ಲುಕ್ ಬಿಡುಗಡೆ ದಿನ ಹೇಳೋಕೆ ದರ್ಶನ್ ಅವರ ಫೋಟೋ ಬಳಸಿಕೊಂಡಿರುವುದೇ ಅಭಿಮಾನಿಗಳನ್ನು ಥ್ರಿಲ್ಲಾಗಿಸಿದೆ. ಫಸ್ಟ್ ಲುಕ್ ಹೇಗಿರುತ್ತೋ..

  • ಹೇಳದೇ ಮಾಡಿದರು ಯಜಮಾನ ದರ್ಶನ್

    darshan gives chance to shankar ashwath

    ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್, ಮೈಸೂರಿನಲ್ಲಿ ಉಬರ್ ಕಾರು ಚಾಲಕರಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಕೆಲವು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಸುದ್ದಿ ಮಾಧ್ಯಮಗಳಲ್ಲಿ ಈ ವಿಷಯ ಪ್ರಸಾರವಾದಾಗ ಚಿತ್ರರಂಗದ ಹಲವರು ನೆರವು ನೀಡುವ ಮಾತನ್ನಾಡಿದ್ದರು. ತಮ್ಮ ಚಿತ್ರಗಳಲ್ಲಿ ಅವಕಾಶ ಕೊಡುವ ಭರವಸೆ ಕೊಟ್ಟಿದ್ದರು. ಏಕೆಂದರೆ ಶಂಕರ್ ಅಶ್ವತ್ಥ್, ನೆರವು ಕೇಳಿರಲಿಲ್ಲ. ಬದಲಿಗೆ ಅವಕಾಶಗಳನ್ನಷ್ಟೇ ಕೇಳಿದ್ದರು.

    ಆಗ ಮೌನವಾಗಿದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಏನೊಂದೂ ಮಾತನಾಡಿರಲಿಲ್ಲ. ಆದರೆ, ಆಡದೇ ಮಾಡುವನು ರೂಢಿಯೊಳಗುತ್ತಮನು ಎಂಬಂತೆ, ದರ್ಶನ್ ತಮ್ಮ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವತ್ಥ್ ಅವರಿಗೆ ಪ್ರಮುಖ ಪಾತ್ರವೊಂದನ್ನು ಕೊಡಿಸಿದ್ದಾರೆ. 

    ದರ್ಶನ್ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಅವರೂ ಮೈಸೂರಿನವರೇ ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್. ಅವಕಾಶವಂಚಿತರಾದ ಶಂಕರ್ ಅಶ್ವತ್ಥ್ ಅವರನ್ನು ಮತ್ತೆ ಕರೆಸಿಕೊಂಡು ಅವಕಾಶ ಕೊಡಿಸಿದ್ದು ಯಜಮಾನ ಚಿತ್ರತಂಡದ ಹೆಗ್ಗಳಿಕೆ.

  • ಹೈದರಾಬಾದ್‍ನಲ್ಲಿ ಮುನಿರತ್ನ ಕುರುಕ್ಷೇತ್ರ 

    kurulshetra promotion in hyderabad

    ಕುರುಕ್ಷೇತ್ರ ಚಿತ್ರದ ಪ್ರಚಾರ ಭರದಿಂದ ನಡೆಯುತ್ತಿದೆ. ಏಕಕಾಲದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮುನಿರತ್ನ ಕುರುಕ್ಷೇತ್ರ ಚಿತ್ರವನ್ನು ಆಂಧ್ರಪ್ರದೇಶ, ತೆಲಂಗಾಣದಲ್ಲಿ ಭರ್ಜರಿ ಪ್ರಮೋಷನ್ ಮಾಡಲಾಗುತ್ತಿದೆ. ಹೈದರಾಬಾದ್‍ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಮಾಡಲಾಗಿದೆ.

    ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕಾರಣರಾದವರಲ್ಲಿ ಒಬ್ಬರಾದ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ, ತಮ್ಮ ಚಿತ್ರದ ಪ್ರಮೋಷನ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. ಕುಮಾರಸ್ವಾಮಿ  ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಇದೇ ಚಿತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದಾರೆ.

    ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಹಾಗೂ ಅಂಬರೀಷ್ ಅಭಿನಯದ ಕಟ್ಟಕಡೆಯ ಸಿನಿಮಾ. ಆಗಸ್ಟ್ 2ಕ್ಕೆ ರಿಲೀಸ್.