` darshan, - chitraloka.com | Kannada Movie News, Reviews | Image

darshan,

 • ಮುಸುಕುಧಾರಿಯಾಗಿ ಯಜಮಾನನ ದರ್ಶನ ಪಡೆದ ಜಗ್ಗೇಶ್

  jaggesh watches yajamana movie in disguise

  ಕನ್ನಡದಲ್ಲಿ ತಮಗಿಷ್ಟವಾದ ಪ್ರತಿಯೊಬ್ಬರ ಚಿತ್ರವನ್ನೂ ಮೆಚ್ಚಿ, ಪ್ರೋತ್ಸಾಹಿಸುವ, ಬೆನ್ನುತಟ್ಟುವ, ಸಾಧ್ಯವಾದಷ್ಟೂ ಹೆಗಲಿಗೆ ಹೆಗಲು ಕೊಡುವ ನಟ ಜಗ್ಗೇಶ್, ದರ್ಶನ್‍ರ ಯಜಮಾನ ಚಿತ್ರವನ್ನು ಕದ್ದುಮುಚ್ಚಿ ನೋಡಿಕೊಂಡು ಬಂದಿದ್ದಾರೆ. ಥಿಯೇಟರಿನಲ್ಲೇ.

  ಕೆಜಿಎಫ್ ಚಿತ್ರವನ್ನು ಮಂಕಿ ಕ್ಯಾಪ್ ಹಾಕಿಕೊಂಡು ಹೋಗಿ ನೋಡಿ, ಮಿರ್ಚಿ ಮಂಡಕ್ಕಿ ತಿಂದು ಬಂದಿದ್ದ ಜಗ್ಗೇಶ್, ಯಜಮಾನ ಚಿತ್ರವನ್ನು ಮುಸುಕು ಹಾಕಿಕೊಂಡು ಹೋಗಿ ನೋಡಿ ಬಂದಿದ್ದಾರೆ.

  ಯಾವ ಥಿಯೇಟರಿನಲ್ಲಿ ಅಂತೀರಾ..? ಗೊತ್ತಾಗ್ಬಿಟ್ರೆ ಬಿಟ್‍ಬಿಡ್ತೀರಾ..? ಅದಕ್ಕೇ ಜಗ್ಗೇಶ್ ಅದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ.

  ಯಜಮಾನ ಚಿತ್ರವಂತೂ ದರ್ಶನ್‍ರ ಈ ಹಿಂದಿನ ಎಲ್ಲ ಚಿತ್ರಗಳ ಬಾಕ್ಸಾಫೀಸ್ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ. ದರ್ಶನ್ ಹ್ಯಾಪಿ. ಹರಿಕೃಷ್ಣ ಹ್ಯಾಪಿ. ನಿರ್ಮಾಪಕಿ ಶೈಲಜಾ ನಾಗ್ ಅವರಂತೂ ಡಬಲ್ ಹ್ಯಾಪಿ.

 • ಮೃಗಾಲಯದ ರಾಯಭಾರಿ ದರ್ಶನ್

  darshan is brand ambadassor for chamarajendra zoological gardens

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ, ಪಕ್ಷಿ ಪ್ರೇಮ ಹೊಸದೇನೂ ಅಲ್ಲ. ತಮ್ಮ ಫಾರ್ಮ್ ಹೌಸುಗಳಲ್ಲಿ ಹಸು, ಕುದುರೆ, ಗಿಣಿ, ನಾಯಿ ಸೇರಿದಂತೆ ಯಾವ್ಯಾವ ಪ್ರಾಣಿಗಳನ್ನು ಸಾಕಲು ಅವಕಾಶವಿದೆಯೋ.. ಎಲ್ಲವನ್ನೂ ಗುಡ್ಡೆ ಹಾಕಿಕೊಂಡು ಖುಷಿ ಪಡುವ ಪ್ರಾಣಿಪ್ರಿಯ ದರ್ಶನ್. ಮೈಸೂರು ಮೃಗಾಲಯದಲ್ಲಿ ಒಂದು ಆನೆ ಹಾಗೂ ಹುಲಿಯೊಂದನ್ನು ದತ್ತು ಪಡೆದುಕೊಂಡಿರುವ ದರ್ಶನ್, ಈಗ ಅದೇ ಮೃಗಾಲಯಕ್ಕೆ ರಾಯಭಾರಿಯೂ ಆಗಿದ್ದಾರೆ.

  ದರ್ಶನ್ ಅವರನ್ನು ವನ್ಯಜೀವಿ ಸಂರಕ್ಷಣೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದೇ ವನ್ಯಜೀವಿಗಳ ವಿಭಾಗದಲ್ಲಿ ಮೈಸೂರು ಮೃಗಾಲಯವೂ ಬರುತ್ತೆ. ಹೀಗಾಗಿ ದರ್ಶನ್ ಮೃಗಾಲಯಕ್ಕೂ ರಾಯಭಾರಿಯಾಗಲಿದ್ದಾರೆ. ಅಂದಹಾಗೆ ಆಗಾಗ್ಗೆ ತಮ್ಮ ಮಗನನ್ನು ಝೂಗೆ ಕರೆದುಕೊಂಡು ಹೋಗುವುದು ದರ್ಶನ್ ಅವರ ಹವ್ಯಾಸ.

 • ಮೇಘನಾ ರಾಜ್ ಕನಸು ಕುರುಕ್ಷೇತ್ರದಲ್ಲಿ ನನಸಾಯ್ತು..!!

  meghana raj's dreams come true with kurukshetra

  ಕನ್ನಡ ಮತ್ತು ಮಲಯಾಳಂನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಮೇಘನಾ ರಾಜ್, ಆರಂಭದಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಮಗಳಾಗಿ ಗುರುತಿಸಿಕೊಂಡರೂ, ಕೆಲವೇ ದಿನಗಳಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್.. ಮೇಘನಾ ರಾಜ್ ತಂದೆ ತಾಯಿಯಂತೆ ಎನ್ನುವಷ್ಟರ ಮಟ್ಟಿಗೆ ಬೆಳೆದವರು. ಅದು ಮೇಘನಾ ರಾಜ್ ಪ್ರತಿಭೆಗೆ ಸಾಕ್ಷಿ. ಹೀಗಿದ್ದರೂ ಮೇಘನಾ ರಾಜ್ ಅವರಿಗೆ ದರ್ಶನ್ ಜೊತೆ ನಟಿಸುವ ಕನಸಿತ್ತಂತೆ.

  ದರ್ಶನ್ ಜೊತೆ ನಟಿಸಬೇಕು ಎನ್ನುವುದು ನನ್ನ ಕನಸಾಗಿತ್ತು. ಆದರೆ, ಈಡೇರಿರಲೇ ಇಲ್ಲ. ಕುರುಕ್ಷೇತ್ರದಲ್ಲಿ ಭಾನುಮತಿಯ ಆಫರ್ ಬಂದಾಗ ಥ್ರಿಲ್ಲಾಗಿದ್ದೆ ಎನ್ನುವ ಮೇಘನಾಗೆ ಕುರುಕ್ಷೇತ್ರ ಹಲವು ಪ್ರಥಮಗಳ ಸಿನಿಮಾ.

  ಮೊದಲ ಪೌರಾಣಿಕ ಚಿತ್ರ, ಮೊದಲ 3ಡಿ ಸಿನಿಮಾ, ಸೆಟ್ಟಿನಲ್ಲಿಯೇ ಚಿತ್ರೀಕರಿಸಲ್ಪಟ್ಟ ಮೊದಲ ಸಿನಿಮಾ, ಮಾವ ಅರ್ಜುನ್ ಸರ್ಜಾ ಜೊತೆಯಲ್ಲೂ ಮೊದಲನೇ ಸಿನಿಮಾ ಮತ್ತು ದರ್ಶನ್ ಜೊತೆ ಮೊದಲ ಸಿನಿಮಾ. 

  ಮೊದಲ ದಿನವೇ ಅರ್ಜುನ್ ಸರ್ಜಾ ಮತ್ತು ದರ್ಶನ್ ಎದುರು ನಟಿಸುವ ದೃಶ್ಯ, ಜೊತೆಗೆ ದೊಡ್ಡ ಡೈಲಾಗು.. ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ ಮೇಘನಾ ರಾಜ್.

  ಕುರುಕ್ಷೇತ್ರದಲ್ಲಿ ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ನಟಿಸಿದ್ದು, ಚಾರುತಂತಿ ಹಾಡು ಹಿಟ್ ಆಗಿದೆ.  ಇಡೀ ಚಿತ್ರತಂಡದಲ್ಲಿ ನಾನೇ ಚಿಕ್ಕವಳು. ಜೊತೆಯಲ್ಲಿದ್ದವರೆಲ್ಲ ದಿಗ್ಗಜರು. ಹೀಗಾಗಿ ಸೆಟ್‍ಗೆ ಹೋಗುವಾಗ ಒಂದು ಭಯ ಇರುತ್ತಿತ್ತು ಎಂದಿದ್ದಾರೆ ಮೇಘನಾ.

   

 • ಮೈಸೂರು ಬಳಿ ದರ್ಶನ್ ಕಾರು ಅಪಘಾತ

  darshan met with an accident in mysore

  ಮೈಸೂರು ಬಳಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರ್‍ನಲ್ಲಿ ದರ್ಶನ್ ಜೊತೆ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೂಡಾ ಇದ್ದರು. ನಿನ್ನೆಯಷ್ಟೇ ಮೈಸೂರಿನಲ್ಲಿ ಗಜಪಡೆಯ ಮಾವುತರೊಂದಿಗೆ ವಿಶೇಷ ಭೋಜನ ಕಾರ್ಯಕ್ರಮ ಹಮ್ಮಿಕೊಂಡಿದ್ದ ದರ್ಶನ್ ಜೊತೆ ಸ್ಯಾಂಡಲ್‍ವುಡ್‍ನ ಹಲವರು ಭಾಗವಹಿಸಿದ್ದರು.

  ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬರುವಾಗ ಹಿನಕಲ್ ರಿಂಗ್ ರೋಡ್ ಬಳಿ ದರ್ಶನ್‍ರ ಆಡಿ ಕಾರು ಸ್ಕಿಡ್ ಆಗಿದೆ. ಅಪಘಾತದಲ್ಲಿ ದರ್ಶನ್ ಬಲಗೈ  ಮೂಳೆ ಮುರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್‍ಗೂ ಕೂಡಾ ಗಾಯಗಳಾಗಿವೆ.

  ಮುಂಜಾನೆ 3 ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ದರ್ಶನ್ ಅವರ ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮೈಸೂರಿಗೆ ಧಾವಿಸಿದ್ದಾರೆ.

 • ಮ್ಯಾಜಿಕ್ ಸೃಷ್ಟಿಸಿದ ಯಜಮಾನ ಟೈಟಲ್ ಸಾಂಗ್

  yajamana's title rack creates magic

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟೈಟಲ್ ಸಾಂಗ್ ಅಕ್ಷರಶಃ ಮ್ಯಾಜಿಕ್ ಮಾಡಿಬಿಟ್ಟಿದೆ. ಸಂತೋಷ್ ಆನಂದ್ ರಾಮ್ ಬರೆದಿರುವ ಮಾತು ತಪ್ಪದ ಯಜಮಾನ.. ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಅವರ ಇದುವರೆಗಿನ ಎಲ್ಲ ಚಿತ್ರಗಳ ಹಾಡುಗಳಿಗೆ ಹೋಲಿಸಿದರೆ, ಇದು ಕಂಪ್ಲೀಟ್ ಡಿಫರೆಂಟ್. 

  ಹಾಡು ರಿಲೀಸ್ ಆದ ಕೇವಲ 6 ನಿಮಿಷದಲ್ಲಿ 1 ಲಕ್ಷ ಮಂದಿ, 20 ನಿಮಿಷದಲ್ಲಿ 2 ಲಕ್ಷ ಮಂದಿ ವೀಕ್ಷಿಸಿ ದಾಖಲೆ ಬರೆದಿದೆ ಯಜಮಾನ ಟೈಟಲ್ ಸಾಂಗ್. ಈಗ ಒಂದು ಮಿಲಿಯನ್ ವ್ಯೂ ದಾಟಿ ಮುನ್ನುಗ್ಗುತ್ತಿದೆ ಯಜಮಾನನ ಟೈಟಲ್ ಸಾಂಗ್.

  ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಹರಿಕೃಷ್ಣ, ಕುಮಾರ್ ನಿರ್ದೇಶನದ ಸಿನಿಮಾಗೆ ಹರಿಕೃಷ್ಣ ಅವರೇ ಮ್ಯೂಸಿಕ್ ಡೈರೆಕ್ಟರ್. ವಿಜಯ್ ಪ್ರಕಾಶ್ ಹಾಡಿರುವ ಹಾಡು, ಈಗ ಸೃಷ್ಟಿಸಿರುದು ಮ್ಯಾಜಿಕ್.

 • ಯಜಮಾನ 800+

  yajamana to release in more than 800 screens

  ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಯಜಮಾನ ಸಿನಿಮಾ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ. ದರ್ಶನ್ ಚಿತ್ರ ಮಾರ್ಚ್ 1ರಂದು 800ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ. ಅದು ದರ್ಶನ್ ಕ್ರೇಜ್.

  ಕಲಾತ್ಮಕ ಚಿತ್ರಗಳ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕರಾದ ಶೈಲಜಾ ನಾಗ್, ಬಿ.ಸುರೇಶ್ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ. ಹರಿಕೃಷ್ಣ, ಕುಮಾರ್ ಜಂಟಿ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್ ನಾಯಕಿಯರು. ದೇವರಾಜ್, ಧನಂಜಯ್, ರವಿಶಂಕರ್, ಸಾಧುಕೋಕಿಲ ನಸಿರುವ ಯಜಮಾನ, ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

 • ಯಜಮಾನ ಚಿತ್ರದಲ್ಲಿ ನರೇಂದ್ರ ಮೋದಿ ಸಂದೇಶ..!

  does yajamana movie have modi;'s make in india concept

  ಸಿನಿಮಾ ರಿಲೀಸ್‍ಗೂ ಮೊದಲೆ ಚಿತ್ರದಲ್ಲಿ ಮನರಂಜನೆ ಜೊತೆಗೆ ಸಂದೇಶವೂ ಇದೆ ಎಂದಿದ್ದರು ದರ್ಶನ್. ಅಷ್ಟೇ ಅಲ್ಲ, ಚಿತ್ರದ ಕಥೆ ಡಿಫರೆಂಟ್ ಎಂದಿದ್ದರು. ಹಾಗೆಯೇ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಪ್ರಬಲ ಸಂದೇಶವಿದೆ. ಅದು ಮೇಕ್ ಇನ್ ಇಂಡಿಯಾ. 

  ಚಿತ್ರದಲ್ಲಿ ದರ್ಶನ್, ಸ್ವೀಟ್ ಬ್ರಾಂಡ್ ಕಂಪೆನಿಯ ಓನರ್. ಆ ಬ್ರಾಂಡ್ ಕಸಿದುಕೊಳ್ಳೋಕೆ ನಡೆಯುವ ಸಂಚಿನ ವಿರುದ್ಧ ಹೋರಾಡುತ್ತಾನೆ. ಅದು ಮೋದಿಯ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟಿಗೆ ಹತ್ತಿರವಾಗಿದೆ ಅನ್ನೋದು ದರ್ಶನ್ ಮತ್ತು ಮೋದಿ.. ಇಬ್ಬರಿಗೂ ಅಭಿಮಾನಿಗಳಾಗಿರುವವರ ಮಾತು. 

 • ಯಜಮಾನ ದರ್ಶನ್ ಚಿತ್ರಕ್ಕೆ ತಾರೆಯರ ನೃತ್ಯ

  stars come together for a song in yajamana

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಶೈಲಜಾ ಸುರೇಶ್ ನಿರ್ಮಾಪಕಿ. ಧನಂಜಯ್ ನೆಗೆಟಿವ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪಿ. ಕುಮಾರ್ ಚಿತ್ರಕ್ಕಾಗಿಯೇ ಹಳ್ಳಿಯ ಸೆಟ್‍ವೊಂದನ್ನು ಹಾಕಿಸಿದ್ದಾರೆ. ಇವರೆಲ್ಲರ ಹೊರತಾಗಿ ಚಿತ್ರದಲ್ಲಿ ಚಿತ್ರರಂಗದ ತಾರಾಬಳಗವೇ ಕಾಣಿಸಿಕೊಳ್ಳಲಿದೆ. 

  ಯಜಮಾನ ಚಿತ್ರದ ಒಂದು ಹಾಡಿನಲ್ಲಿ ರೆಬಲ್‍ಸ್ಟಾರ್ ಅಂಬರೀಷ್ ಬರಲಿದ್ದಾರೆ. ಲವ್ಲೀಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್, ಜ್ಯೂ. ಟೈಗರ್ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ಸ್ನೇಹಿತರು ದರ್ಶನ್ ಚಿತ್ರದಲ್ಲಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. 

  ಇದುವರೆಗೆ ದರ್ಶನ್ ಹಲವು ನಟರ ಚಿತ್ರಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ದರ್ಶನ್ ಚಿತ್ರದಲ್ಲಿ ಕಲಾವಿದರು ಅತಿಥಿಗಳಾಗಿ ಬರುತ್ತಿದ್ದಾರೆ. ಪ್ರೀತಿಯಿಂದ.. ಸ್ನೇಹಕ್ಕಾಗಿ..

 • ಯಜಮಾನ ದರ್ಶನ್ ಚಿತ್ರದಲ್ಲಿರೋ ನಿರ್ದೇಶಕರೆಷ್ಟು ಜನ..?

  army of director's in darshan's yajamana

  ಯಜಮಾನ. ಬಹುನಿರೀಕ್ಷಿತ ದರ್ಶನ್ ಸಿನಿಮಾ. ಎರಡು ವರ್ಷಗಳಿಂದ ದರ್ಶನ್ ಚಿತ್ರಗಳಿಲ್ಲದೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ದರ್ಶನ್ ಫ್ಯಾನ್ಸ್ ಸಿನಿಮಾ ಥಿಯೇಟರಿಗೆ ಬರುವುದನ್ನೇ ಎದುರು ನೋಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರಕ್ಕೆ ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಪಕರು. ಆದರೆ, ಕುತೂಹಲದ ಸಂಗತಿ ಇದ್ಯಾವುದೂ ಅಲ್ಲ. ಟೋಟಲ್ ಟೀಂನಲ್ಲೇ ನಿರ್ದೇಶಕರ ಸಂಗಮವಿದೆ.

  ಸುಮ್ಮನೆ ನೋಡಿ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಬಿ.ಸುರೇಶ್ ಸ್ವತಃ ಒಬ್ಬ ನಿರ್ದೇಶಕರು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವವರು. ಪಿ.ಕುಮಾರ್ ಮತ್ತು ಹರಿಕೃಷ್ಣ ಚಿತ್ರದ ನಿರ್ದೇಶಕರು. ಹರಿಕೃಷ್ಣ ಈ ಸಿನಿಮಾದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.

  ಇನ್ನು ಚಿತ್ರಕ್ಕೆ ಹಾಡು ಬರೆದಿರುವ ಚೇತನ್ ಕುಮಾರ್, ಯೋಗರಾಜ್ ಭಟ್, ಕವಿರಾಜ್, ಎಲ್ಲರೂ ನಿರ್ದೇಶಕರೇ. ಅಂದಹಾಗೆ ಸಂತೋಷ್ ಆನಂದ್‍ರಾಮ್ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಒಟ್ಟಿನಲ್ಲಿ ಯಜಮಾನನ ಮನೆಯಲ್ಲಿ ನಿರ್ದೇಶಕರದ್ದೇ ದರ್ಬಾರು.

 • ಯಜಮಾನ ದರ್ಶನ್ ಜೊತೆ ದರ್ಶನ್ ಪುತ್ರ

  darshan son vineesh to act with his dad

  ಯಜಮಾನ ಚಿತ್ರದ ಹಾಡೊಂದರಲ್ಲಿ ದರ್ಶನ್ ಪುತ್ರ ವಿನೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಐರಾವತ ಚಿತ್ರದ ಕ್ಲೈಮಾಕ್ಸ್‍ನ ಒಂದು ದೃಶ್ಯದಲ್ಲಿ ನಟಿಸಿದ್ದ ವಿನೀಶ್, ಈಗ ಯಜಮಾನ ಚಿತ್ರದಲ್ಲಿ ಮತ್ತೊಮ್ಮೆ 2ನೇ ಬಾರಿ ಅಪ್ಪನ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡೊಂದರಲ್ಲಿ ವಿನೀಶ್, ತಂದೆಯ ಜೊತೆ ಹೆಜ್ಜೆ ಹಾಕಿದ್ದಾರಂತೆ.

  ತಂದೆ-ಮಗನ ಹಾಡಿನ ಚಿತ್ರೀಕರಣವನ್ನು ಸ್ವತಃ ವಿಜಯಲಕ್ಷ್ಮಿ ದರ್ಶನ್ ನೋಡಿ, ಕಣ್ತುಂಬಿಕೊಂಡಿದ್ದಾರೆ. ವಿನೀಶ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರೋದು ಏಕೆ ಅನ್ನೋದಕ್ಕೆ ಉತ್ತರ ಇಲ್ಲ. ಅದು ತಿಳಿಯೋಕೆ ಸಿನಿಮಾ ರಿಲೀಸ್‍ವರೆಗೂ ಕಾಯಲೇಬೇಕು.

 • ಯಜಮಾನ ದರ್ಶನ್.. ಸಾರಥಿ ದರ್ಶನ್..!

  darshan;s name is krishna in yajamana

  ಸಾರಥಿ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರೇನು..? ರಾಜ ಮತ್ತು ಕೃಷ್ಣ. ಆ ಎರಡೂ ಹೆಸರಲ್ಲಿ ಕಾಣಿಸಿಕೊಳ್ತಾರೆ ದರ್ಶನ್. ಈಗ ಯಜಮಾನ ಚಿತ್ರದಲ್ಲೂ ಅದೇ ಹೆಸರು. ಕೃಷ್ಣ. 

  ಯಜಮಾನ ಚಿತ್ರದಲ್ಲಿ ದರ್ಶನ್ ಒಬ್ಬ ಗೌಳಿಗ. ಹೆಸರು ಕೃಷ್ಣ. ಕೊಳಲನೂದುವಷ್ಟೇ ಸಹಜವಾಗಿ ರೌಡಿಗಳನ್ನೂ ಮಟ್ಟ ಹಾಕಬಲ್ಲ ವೀರನಂದಿ.

  ಹಾಗಾದರೆ ಯಜಮಾನ ಯಾರಿರಬಹುದು..? ದೇವರಾಜ್ ಇರಬಹುದಾ..? 

  ಮಾರ್ಚ್ 1ರ ನಂತರ ಯಾವುದೂ ಸೀಕ್ರೆಟ್ ಆಗಿರಲ್ಲ. ಮೊದಲ ಶೋ ಮುಗಿಯುವ ಹೊತ್ತಿಗೆ ಎಲ್ಲವೂ ಗೊತ್ತಾಗಿರುತ್ತೆ. ನಮ್ಮ ಹಣೆಬರಹವೂ ಗೊತ್ತಾಗಿರುತ್ತೆ ಅನ್ನೋ ದರ್ಶನ್, ಯಜಮಾನ ಒಂದು ಪಕ್ಕಾ ಕಮರ್ಷಿಯಲ್ ಮೂವಿ ಅಂತಾರೆ.

 • ಯಜಮಾನ ನಾಯಕಿಗೆ ಒಂದೇ ದಿನ ಎರಡು ಲಡ್ಡು..!

  tanya hope has two bog releases on same day

  ಯಜಮಾನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಹಾಗಂತ, ಅವರೊಬ್ಬರೇ ನಾಯಕಿ ಅಲ್ಲ. ದರ್ಶನ್ ಎದುರು ತಾನ್ಯಾ ಹೋಪ್ ಎಂಬ ಇನ್ನೊಬ್ಬ ನಾಯಕಿಯೂ ನಟಿಸಿದ್ದಾರೆ. ಬಸಣ್ಣಿ ಹಾಡಿನಲ್ಲಿ ಬೊಂಬಾಟಾಗಿ ಕುಣಿದಿರುವುದು ಅವರೇ. ಅವರಿಗೆ ಒಂದೇ ದಿನ ಎರಡು ಲಡ್ಡು ಬಿದ್ದಿದೆ.

  ಮಾರ್ಚ್ 1ಕ್ಕೆ ಕನ್ನಡದಲ್ಲಿ ತಾನ್ಯಾ ಹೋಪ್ ಅವರ ಯಜಮಾನ ರಿಲೀಸ್ ಆಗುತ್ತಿದೆ. ಅದೇ ದಿನ.. ತಮಿಳಿನಲ್ಲಿ ನಟಿಸಿರುವ ತಾಡಂ ಚಿತ್ರವೂ ರಿಲೀಸ್ ಆಗುತ್ತಿದೆ. ಯಜಮಾನ ಆ್ಯಕ್ಷನ್, ಫ್ಯಾಮಿಲಿ ಡ್ರಾಮ. ತಾಡಂ, ಥ್ರಿಲ್ಲರ್ ಸಿನಿಮಾ. ಒಟ್ಟಿನಲ್ಲಿ ತಾನ್ಯಾಗೆ ಒಂದೇ ದಿನ ಎರಡು ಲಡ್ಡು.

 • ಯಜಮಾನ ರೈತರ ಕಥೆನಾ..?

  is yajamana stor about farmers

  ಯಜಮಾನ ಚಿತ್ರದಲ್ಲಿರೋದು ರೈತರ ಕಥೆನಾ..? ಅಂಥಾದ್ದೊಂದು ನಿರೀಕ್ಷೆ ಚಿತ್ರದಲ್ಲಿದೆ. ಚಿತ್ರದಲ್ಲಿ ಅಂತಹುದ್ದೇನಿದೆ ಅನ್ನೋ ಮಾತಿಗೆ ದರ್ಶನ್ ಕೊಟ್ಟಿರೋ ಉತ್ತರ ಅದು. ರೈತನೊಬ್ಬ ಕಷ್ಟಪಟ್ಟು ದುಡೀತಾನೆ. ಬೆವರು ಬಸೀತಾನೆ. ಆದರೆ, ಬೆವರನ್ನೇ ಸುರಿಸದ ಮಧ್ಯವರ್ತಿ ಅದರ ಲಾಭ ಪಡೀತಾನೆ. ಇತ್ತ, ಅದೇ ರೈತ ಬೆಂಗಳೂರಿನ ಹೋಟೆಲ್ಲು, ಮಾರ್ಕೆಟ್ಟುಗಳಲ್ಲಿ ಕೂಲಿಯಾಗ್ತಾನೆ. ರೈತನಿಗೆ ನ್ಯಾಯ ಎಲ್ಲಿ ಸಿಗುತ್ತೆ.. ಇಂಥ ಪ್ರಶ್ನೆಯನ್ನ ನಮ್ಮ ಸಿನಿಮಾ ಎತ್ತಿ ಹೇಳುತ್ತೆ ಎಂದಿದ್ದಾರೆ.

  ಸ್ವಲ್ಪ ನೆನಪಿಸಿಕೊಳ್ಳಿ, ಸಾರಥಿ ಚಿತ್ರದ ರೇಷ್ಮೆ ಬೆಳೆಯುವ ರೈತ ಮತ್ತು ಪೊಲೀಸ್ ದೃಶ್ಯವನ್ನು ಕಣ್ಣ ಮುಂದೆ ತಂದುಕೊಳ್ಳಿ. ಆ ಸೀನ್ ಅದೆಷ್ಟು ವೈರಲ್ ಎಂದರೆ, ಈಗಲೂ ಆಗಾಗ್ಗೆ ವಾಟ್ಸಪ್ಪು, ಫೇಸ್‍ಬುಕ್‍ಗಳಲ್ಲಿ ಮೆರೆದಾಡುತ್ತೆ. ಹಾಗಾದರೆ, ಹರಿಕೃಷ್ಣ ಯಜಮಾನನಲ್ಲಿ ಅದೇ ಕಥೆ ಹೇಳಿದ್ದಾರಾ..?

  ಇಷ್ಟೆ ದಿನ ಕಾದಿದ್ದೀವಂತೆ.. ಇನ್ನೊಂದು ದಿನ ಕಾಯೋಕಾಗಲ್ವಾ..? ಯಜಮಾನ ನಾಳೆಯೇ ರಿಲೀಸ್.

 • ಯಜಮಾನನ 4 ಪದಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ..?

  yajamana four words has many meanings

  ಯಜಮಾನ. ಇರೋದು 4 ಅಕ್ಷರ. ಈ ನಾಲ್ಕು ಅಕ್ಷರಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ ಅನ್ನಿಸುವಂತೆ ಮಾಡೋದು ಕವಿಗಳು. ಮೊದಲೇ ಗಾದೆ ಇದ್ಯಲ್ಲ.. ರವಿ ಕಾಣದ್ದನ್ನು ಕವಿ ಕಂಡ ಅಂತಾ. ಇಲ್ಲಿ ಸ್ವಲ್ಪ ಚೇಂಜ್ ಮಾಡ್ಕೊಳಿ, ನಿರ್ಮಾಪಕರು, ನಿರ್ದೇಶಕರು, ನಾಯಕ ನಟ, ಕಲಾವಿದ, ತಂತ್ರಜ್ಞರಾರೂ ಕಾಣದ ವಿಶೇಷಗಳನ್ನು ದರ್ಶನ್ ಅವರ ಅಭಿಮಾನಿಯೂ ಆಗಿರುವ ಕವಿ ಕವಿರಾಜ್ ಕಂಡಿದ್ದಾರೆ.  ಯಜಮಾನ ಚಿತ್ರದ 4 ಅಕ್ಷರಗಳನ್ನೇ ಒಡೆದಿದ್ದಾರೆ ಕವಿರಾಜ್.

  ಜನ : ಜನ ಈ ಸಿನಿಮಾ ನೋಡ್ತಾರೆ.

  ಜಯ : ಈ ಸಿನಿಮಾಗೆ ಜಯ ಗ್ಯಾರಂಟಿ.

  ಜಮಾ : ನಿರ್ಮಾಪಕರ ಖಾತೆಗೆ ಲಾಭ ಜಮಾ ಆಗುತ್ತೆ.

  ಜಮಾನ : ಈ ಜಮಾನ ಯಜಮಾನನ್ನು ಮೆಚ್ಚಿಕೊಳ್ಳುತ್ತೆ.

  ಅಂದಹಾಗೆ ದರ್ಶನ್, ಯಜಮಾನ ಚಿತ್ರದ ಒಂದು ಮುಂಜಾನೆ ಹಾಡು ಬರೆದಿದ್ದಾರೆ. ಕವಿರಾಜ್ ಬರೆದಿದ್ದ 50 ಪಲ್ಲವಿಗಳನ್ನು ಸೈಡಿಗಿಟ್ಟು, ನಿರ್ದೇಶಕ ಹರಿಕೃಷ್ಣ ಈ ಪಲ್ಲವಿ ಎತ್ತಿಕೊಂಡರಂತೆ.

 • ಯಜಮಾನನ ಜೊತೆ ಯಜಮಾನ್ತಿ ಕಟೌಟ್

  yajamani rashmika's cutout with darshan

  ಯಾವುದೇ ಸ್ಟಾರ್ ಸಿನಿಮಾ ರಿಲೀಸ್ ಆದರೆ, ಆ ನಟನ ಕಟೌಟ್ ಹಾಕುವುದು ಚಿತ್ರರಂಗದಲ್ಲಿ ಮಾಮೂಲು. ಕೆಲವೊಮ್ಮೆ ಹೀರೋಯಿನ್‍ಗಳ ಕಟೌಟ್ ಹಾಕುವುದೂ ಇದೆ. ಕನ್ನಡದಲ್ಲಿ ಹಾಗೆ ಅತೀ ಹೆಚ್ಚು ಕಟೌಟ್ ಹಾಕಿಸಿಕೊಂಡ ಹೀರೋಯಿನ್ ಆಗಿ ಖ್ಯಾತಿ ಹೊಂದಿರುವುದು ಒನ್ & ಓನ್ಲಿ ಮಾಲಾಶ್ರೀ. ಈಗ ಮತ್ತೊಮ್ಮೆ ಆ ಸಂಪ್ರದಾಯ ಶುರುವಾದಂತಿದೆ. ಯಜಮಾನತಿಯ ಕಟೌಟ್ ಕೂಡಾ ಬಂದಿದೆ.

  ರಶ್ಮಿಕಾ ಮಂದಣ್ಣ ಅಭಿಮಾನಿಗಳು ಯಜಮಾನ ದರ್ಶನ್ ಕಟೌಟ್ ಪಕ್ಕದಲ್ಲಿಯೇ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಕಟೌಟ್‍ನ್ನೂ ಹಾಕಿ ಸಂಭ್ರಮಿಸಿದ್ದಾರೆ. 

  ತುಮಕೂರು ಸೇರಿದಂತೆ ಹಲವೆಡೆ ಈ ಬಾರಿ ರಶ್ಮಿಕಾ ಮಂದಣ್ಣ ಕಟೌಟ್‍ಗಳು ರಾರಾಜಿಸಿವೆ. ಅಭಿಮಾನಿಗಳ ಕ್ರೇಜ್‍ಗೆ ಥ್ರಿಲ್ ಆಗಿರುವ ರಶ್ಮಿಕಾ ಕಟೌಟ್ ಹಾಕುವಾಗ ಅಪಾಯಕ್ಕೊಳಗಾಗದಂತೆ ಜಾಗ್ರತೆ ವಹಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹರಿಕೃಷ್ಣ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ಅಭಿನಯದ ಯಜಮಾನ, ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸುತ್ತಿದೆ.

 • ಯಜಮಾನನ ಪೋಸ್ಟರ್‍ನಲ್ಲೇ ಕಥೆ ಗೊತ್ತಾಯ್ತಾ..?

  yajamana first motion poster

  ಭೂಮಿ ತೂಕದ ಆನೆ.. ಬೆಳೆದ ತನ್ನಿಂದ ತಾನೆ.. ಕೂಗಿ ಹೇಳಿತು ಜಮಾನಾ.. ಅಭಿಮಾನಿಗಳ ಸುಲ್ತಾನ.. ಅಕ್ಷರಗಳ ಜೊತೆ ಆಟವಾಡುತ್ತಲೇ ಹೋರಿಗಳ ಜೊತೆ ನಿಂತಿರುವ ದರ್ಶನ್ ಕಾಣಿಸಿಕೊಳ್ತಾರೆ. ಇದು ಯಜಮಾನನ ಫಸ್ಟ್‍ಲುಕ್. ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾ ಟೀಂ.

  ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್‍ನಲ್ಲಿದ್ದ ಯಜಮಾನನ ಫಸ್ಟ್‍ಲುಕ್ ಪೋಸ್ಟರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವುದು ನಿಜ. ಕುಮಾರ್ ನಿರ್ದೇಶನದ ಚಿತ್ರದ ಪೋಸ್ಟರ್‍ನಲ್ಲಿ ಚಿತ್ರದ ಕಥೆಯ ಸುಳಿವೂ ಇದೆಯಂತೆ. 

  ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ದರ್ಶನ್‍ಗೆ ನಾಯಕಿ. 

 • ಯಜಮಾನನ ಬಸಣ್ಣಿ.. ಹಾಡು. ಎಲ್ಲಿಟ್ಟಿದ್ರಿ ಭಟ್ರೆ ಇಂಥಾ ಪದಗಳನ್ನ..?

  yogaraj bhatt thrills youth again

  ಯಜಮಾನ ಚಿತ್ರದ ಮೂರನೇ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಬಸಣ್ಣಿ ಹಾಡಿನ ಸಾಹಿತ್ಯ ಕೇಳಿದವರು ಭಟ್ಟರು ಇಂಥ ಪದಗಳನ್ನ ಅದೆಲ್ಲಿಟ್ಟಿದ್ರು ಅಂತಾ ಬೆರಗುಗೊಂಡಿದ್ದಾರೆ.

  ಹಾಡಿನಲ್ಲಿ ಭಟ್ಟರು ಗಾದೆ, ನಾಣ್ಣುಡಿ, ಆಡುಮಾತು, ಪೋಲಿಮಾತು ಎಲ್ಲವನ್ನೂ ಹದವಾಗಿ ಬೆರೆಸಿ ಕಟ್ಟಿಕೊಟ್ಟಿದ್ದಾರೆ.

  ಹುಡ್ಗೀನ ಕೈ ತೊಳ್ಕೊಂಡು ಮುಟ್ಬೇಕು.. ಸಂಬಂಧ ಫಿಕ್ಸ್ ಮಾಡೋಕೆ ಬಂದೀನಿ.. ಲಕ್ಸು ಸೋಪ್ ಹಾಕ್ಕೊಂಡು ಜಳಕ ಮಾಡೀನಿ.. ಉಳ್ಳಾಗಡ್ಡಿ ತಿನ್ನೋದು ಯಾಕೆ ಅನ್ನೋದೂ ಹಾಡಿನ ಪದವಾಗಿದೆ.

  ಇಳಕಲ್ ಸೀರೆ ಮೊಣಕಾಲಿನ ಮೇಲೆ ಉಡೋದ್ಯಾಕೆ, ಮಕಮಲ್ ಟೋಪಿ, ತಮ್ಮ ಶ್ರೀದೇವಿ ಮೇಲಿನ ಪ್ರೀತಿ.. ಎಲ್ಲವನ್ನೂ ಹಾಡಿಗೆ ತಂದಿದ್ದಾರೆ.  ದರ್ಶನ್ ಅವರಿಗಾಗಿ ಭಟ್ಟರು ಡಿಫರೆಂಟ್ ಡಿಫರೆಂಟ್ ಪದಗಳ ಹಾಡನ್ನು ಸೃಷ್ಟಿಸಿ ಒನ್ಸ್ ಎಗೇಯ್ನ್ ಹಾಡನ್ನು ಗೆಲ್ಲಿಸಿದ್ದಾರೆ.

  ಅಪ್ಪಟ ತುಂಡೈಕ್ಳ ಹಾಡಿಗೆ ಹರಿಕೃಷ್ಣ ಸಂಗೀತ ಜೋಡಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಚಿತ್ರಕ್ಕೆ ಶೈಲಜಾ ನಾಗ್ ನಿರ್ಮಾಪಕಿ. ಹಾಡು ಹಿಟ್ಟಾಗಿದೆ. ವೈರಲ್ಲಾಗಿದೆ.

 • ಯಜಮಾನನ ವಿತರಣೆ ಕಾರ್ತಿಕ್ ಗೌಡ ಪಾಲು

  karthik gowda to distribute yajamana

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಬಿಡುಗಡೆಗೆ ರೆಡಿಯಾಗುತ್ತಿರುವಾಗಲೇ ಚಿತ್ರಕ್ಕೆ ಡಿಮ್ಯಾಂಡ್ ಜೋರಾಗಿದೆ. ಚಿತ್ರದ ವಿತರಣೆ ಹೊಣೆಯನ್ನು ನಿರ್ಮಾಪಕ ಕಾರ್ತಿಕ್ ಗೌಡ ವಹಿಸಿಕೊಂಡಿದ್ದಾರೆ. ಕಾರ್ತಿಕ್ ಗೌಡ ಅವರ ಕೆ.ಆರ್.ಜಿ. ಸ್ಟುಡಿಯೋ ಮೂಲಕ ಯಜಮಾನ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

  ಯಜಮಾನ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಎಕ್ಸೈಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕಾರ್ತಿಕ್ ಗೌಡ. ಕೆಜಿಎಫ್‍ನ ಸಹನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ, ವಿಜಯ್ ಕಿರಗಂದೂರು ಅವರ ಸಂಬಂಧಿಯೂ ಹೌದು. ದರ್ಶನ್, ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾಗೆ ಪಿ.ಕುಮಾರ್, ಹರಿಕೃಷ್ಣ ನಿರ್ದೇಶಕರು. ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಅಥವಾ ಮಾರ್ಚ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

 • ಯಜಮಾನನ ಸೆಟ್‍ನಲ್ಲಿ ಯಜಮಾನ್ತಿ..!

  darshan's wife visits yajamana shooting spot

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ತಂಡಕ್ಕೆ ಅಚ್ಚರಿಯ ಶಾಕ್ ಕೊಟ್ಟಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಪ್ಯಾಲೇಸ್ ಗ್ರೌಂಡ್‍ನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಸೆಟ್‍ಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ, ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದರು. ವಿಜಯಲಕ್ಷ್ಮಿ, ದರ್ಶನ್ ಚಿತ್ರಗಳ ಚಿತ್ರೀಕರಣ ಜಾಗಕ್ಕೆ ಹೋಗುವುದು ಹೊಸದೇನೂ ಅಲ್ಲ. ಆದರೆ, ಇತ್ತೀಚೆಗೆ ಅದು ಅಪರೂಪವಾಗಿತ್ತು.

  ಯಜಮಾನರ ಜೊತೆ ಮಾತನಾಡಿ, ಚಿತ್ರತಂಡದವರೊಂದಿಗೆ ಬೆರೆತಿದ್ದ ವಿಜಯಲಕ್ಷ್ಮಿ, ಯಜಮಾನ ಚಿತ್ರತಂಡದ ಖುಷಿ ಇಮ್ಮಡಿಗೊಳಿಸಿದ್ದರು.

 • ಯಶ್-ದರ್ಶನ್ ಹಾವು ಮುಂಗುಸಿಯಂತಿದ್ರಾ..? - ಅವರೇ ಕೊಟ್ಟ ಉತ್ತರ ಇಲ್ಲಿದೆ ನೋಡಿ

  we are friends says yash and darshan

  ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್.. ಇಬ್ಬರ ಫ್ಯಾನ್ಸ್ ಮಧ್ಯೆ ಡೈಲಾಗುಗಳ ಸಮರ, ಆನ್‍ಲೈನ್ ಹೋರಾಟ ಸದಾ ಜಾರಿಯಲ್ಲಿತ್ತು. ಆ ಎಲ್ಲ ಸಮರಗಳಿಗೆ ಏಕಾಏಕಿ ಬ್ರೇಕ್ ಹಾಕಿದ್ದಾರೆ ಇಬ್ಬರೂ ನಟರು.

  ನಾವೇನೋ ಹಾವು ಮುಂಗುಸಿ ತರಾ ಕಿತ್ತಾಡ್ಕೊಂಡಿರ್ತಿದ್ವು. ಈಗ ಒಂದಾಗಿ ಬಂದ್ಬುಟ್ಟವ್ರೆ ಅಂತಾರೆ. ಸ್ವಾಮಿ.. ನಾವು ನಮ್ಮ ಹೊಟ್ಟೆಪಾಡು ನೋಡ್ಕೊತಿದ್ದೋ. ಇಲ್ಲಿಂದ ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಳ್ತಿದ್ವು. ಅನುಕೂಲಕ್ಕಾಗಿ.. ರಾತ್ರೋರಾತ್ರಿ ಬದಲಾಗುವವರು ನಾವಲ್ಲ ಎಂದು ಉತ್ತರ ಕೊಟ್ಟಿದ್ದಾರೆ ಯಶ್.

  ಯಶ್ ಮಾತಿಗೆ ಪ್ರತಿಕ್ರಿಯೆ ಕೊಟ್ಟ ದರ್ಶನ್ ಹೇಳಿದ್ದಿಷ್ಟೆ, ನಮ್ ಹೀರೋ ಹೇಳಿದ್ದು ಅರ್ಥವಾಯ್ತಾ. ಅಷ್ಟೆ. ನಾವು ಚೆನ್ನಾಗಿದ್ದೇವೆ ಎಂದಿದ್ದಾರೆ ದರ್ಶನ್.

Ayushmanbhava Movie Gallery

Ellidhe Illitanaka Movie Gallery