` darshan, - chitraloka.com | Kannada Movie News, Reviews | Image

darshan,

  • ಮಂಡ್ಯದ ನಡುವೆಯೂ ಒಡೆಯನ ಮರೆತಿಲ್ಲ ದರ್ಶನ್

    darshan did not miss odeya shooting amidst mandya election campaigning

    ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಗೆಲುವಿಗೆ ಟೊಂಕ ಕಟ್ಟಿದ್ದಾರೆ. ಇನ್ನು ಏಪ್ರಿಲ್ 18ರವರೆಗೆ ನಮ್ಮ ಪರೇಡ್ ಮಂಡ್ಯದಲ್ಲಿ ಎಂದಿದ್ದ ದರ್ಶನ್, ಸಿನಿಮಾಗಳಿಗೆ ಬ್ರೇಕ್ ಕೊಡ್ತಾರೆ ಎಂದು ಭಾವಿಸಲಾಗಿತ್ತು. ಹಾಗೇನೂ ಆಗಿಲ್ಲ. ಒಂದು ಕಡೆ ಪ್ರಚಾರ ಮಾಡುತ್ತಲೇ, ಹಳೆಯ ಕಮಿಟ್‍ಮೆಂಟ್ ಆಗಿದ್ದ ಒಡೆಯ ಚಿತ್ರದ ಶೂಟಿಂಗ್‍ನ್ನೂ ಮುಂದುವರಿಸಿದ್ದಾರೆ ದರ್ಶನ್.

    ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ, ಹೈದರಾಬಾದ್‍ಗೆ ತೆರಳಿರುವ ದರ್ಶನ್, ಸಿನಿಮಾ ತಂಡದ ಜೊತೆಯಲ್ಲಿದ್ದಾರೆ.

    ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರದಲ್ಲಿ, ಕೊಡಗಿನ ಚೆಲುವೆ ರಾಘವಿ ನಾಯಕಿ. ತಾರಕ್, ಯಜಮಾನ ಚಿತ್ರದಂತೆ, ಈ ಚಿತ್ರದಲ್ಲೂ ದೇವರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಎಸ್.ನಾರಾಯಣ್ ಪುತ್ರ ಪಂಕಜ್, ದರ್ಶನ್ ತಮ್ಮಂದಿರಲ್ಲಿ ಒಬ್ಬನಾಗಿ ನಟಿಸಿದ್ದಾರೆ. 

  • ಮಜೆಸ್ಟಿಕ್’ ಕನ್ನಡ ಸಿನಿಮಾ 16 ನೇ ವರ್ಷದ ನೆನಪು

    16 years to majestic

    ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸು ಗಳಿಕೆಯಲ್ಲಿ ಧೂಳೆಬ್ಬಿಸಿದ ‘ಮಜೆಸ್ಟಿಕ್’ ಕನ್ನಡ ಸಿನೆಮಾ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಬದುಕಿನ ಒಂದು ಹೊಸ ಅಧ್ಯಾಯ ಬರೆದ ಚಿತ್ರ ಸಹ ಹೌದು.

    ಗುರುವಾರ ನೆಲಮಂಗಲ ಬಳಿಯ ಒಂದು ಖಾಸಗಿ ರೆಸಾರ್ಟ್ ಅಲ್ಲಿ ‘ಮಜೆಸ್ಟಿಕ್’ ಸಿನಿಮಾದ 16ನೇ ವರ್ಷದ ನೆನಪು ಹಾಗೂ ಅದಕ್ಕೆ ದುಡಿದ ವ್ಯಕ್ತಿಗಳನ್ನು ಗೌರವಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ಹಾರ, ಶಾಲು, ಮೈಸೂರು ಟೋಪಿ ಹಾಗೂ ಹಣ್ಣಿನ ಬುಟ್ಟಿ ಗೌರವರ್ಪಣೆಯ ಭಾಗವಾಗಿತ್ತು.

    ನಾಯಕ ದರ್ಶನ್ ಅವರು ಅಂದು ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರು ಬಳಸುತ್ತಾ ಇದ್ದ ಮಾರುತಿ 800 ಕಾರನ್ನು ಅವರಿಂದ ಪಡೆದದ್ದು ವಿಶೇಷವಾಗಿತ್ತು. ಅಂದಿನ ದಿನಗಳನ್ನು ಮೆಲುಕು ಹಾಕುತ್ತಾ ಮಾರುತಿ 800 ಕಾರಿನಲ್ಲಿ ದರ್ಶನ್ ಒಂದು ಸುತ್ತು ಹೋಗಿ ಬಂದರು. ಆ ಮಾರುತಿ 800 ಕಾರಿನ ಸಂಖ್ಯೆ 3483 ದರ್ಶನ್ ಅವರ ನೆನಪಿನಲ್ಲಿ ಇತ್ತು. ಅಂದು ಆಸೆ ಪಟ್ಟ ಕಾರು ಇಂದು ದರ್ಶನ್ ಅವರ ಮನೆಯಲ್ಲಿ ಒಂದು ಅಮೂಲ್ಯ ನೆನಪಾಗಿ ಉಳಿಯಲಿದೆ.

    ‘ಮಜೆಸ್ಟಿಕ್’, ‘ಧರ್ಮ’ ಸಿನಿಮಾಗಳನ್ನು ಎಂ ಜಿ ರಾಮಮೂರ್ತಿ ಅವರು ನಿರ್ಮಾಣ ಮಾಡಿರುವುದು ತಿಳಿದಿದೆ. ಈಗ ಅವರದು ದರ್ಶನ್ ಅವರ ಜೊತೆ ಮೂರನೇ ಚಿತ್ರ ಹಾಗೂ ಅದು ದರ್ಶನ್ ಅವರ 53 ನೇ ಸಿನಿಮಾ ಎಂದು ಸಹ ಘೋಷಣೆ ಆಯಿತು.

    ಮಜೆಸ್ಟಿಕ್ ಸಿನಿಮಾದ ನಿರ್ದೇಶಕರಾದ ಪಿ ಎನ್ ಸತ್ಯ, ಸಹ ನಿರ್ದೇಶಕರಾಗಿದ್ದ ಮಾದೇಶ್ ಹಾಗೂ ಸುರೇಶ್ ಗೋಸ್ವಾಮಿ, ಪ್ರಚಾರಕರ್ತ ವಿಜಯಕುಮಾರ್, ಛಾಯಾಗ್ರಾಹಕರಾದ ಎಂ ಆರ್ ಸೀನು ಹಾಗೂ ಅಣಜಿ ನಾಗರಾಜ್ , ಮ್ಯಾನೇಜರ್ ರಾಮು ಸ್ಥಿರ ಛಾಯಾಗ್ರಹಕ ರಮೇಶ್ ಹಾಗೂ ಇನ್ನಿತರರನ್ನು ಅಂದು ಸನ್ಮಾನಿಸಲಾಯಿತು. ಎಂ ಜಿ ರಾಮಮೂರ್ತಿ ಹಾಗೂ ದರ್ಶನ್ ಅವರ ಲವಲವಿಕೆಯ ಉಪಸ್ಥಿತಿ ಅಂದು ನೆರದವರಿಗೆ ಆತ್ಮೀಯತೆ ತುಂಬಿದ ಕಾರ್ಯಕ್ರಮ ಆಗಿ ಕಂಡುಬಂದಿತು.

    ಹಿರಿಯ ನಟರುಗಳಾದ ಜೈ ಜಗದೀಶ್, ಹರೀಶ್ ರಾಯ್, ನಿರ್ಮಾಪಕ ಭೋಜರಾಜ ರೈ ಹಾಗೂ 200ಕ್ಕು ಹೆಚ್ಚು ಮಂದಿ ಅಂದಿನ ಔತಣ ಕೂಟದಲ್ಲಿ ಪಾಲ್ಗೊಂಡು ಹರ್ಷದ ದಿವಸಗಳನ್ನು ಮೆಲುಕು ಹಾಕಿ ನೆಮ್ಮದಿ ಪಟ್ಟುಕೊಂಡರು.

  • ಮದಕರಿ ಜಾತಿ ವಿವಾದ - ಕಲಾ ದೇವಿಗೇಕೆ ಜಾತಿ..?

    caste ism is non sense to film industry

    ಚಿತ್ರದುರ್ಗದ ಕೋಟೆಯನ್ನು ನೋಡಲು ಹೋಗುವವರು ಮದಕರಿ ನಾಯಕನ ಜಾತಿ ನೋಡಿ ಹೋಗ್ತಾರಾ..? ಓಬವ್ವನ ಕಥೆ ಕೇಳಿ ಹೆಮ್ಮೆ ಪಟ್ಟುಕೊಂಡವರಿಗೆ ಆಕೆಯ ಜಾತಿ ಯಾವುದೆಂದು ಗೊತ್ತಾ..? ಅನಗತ್ಯವಾಗಿದ್ದ ವಿವಾದವೊಂದನ್ನು ಸೃಷ್ಟಿಸಿದ ವಾಲ್ಮೀಕಿ ಸ್ವಾಮೀಜಿ, ಪದೇ ಪದೇ ವಿವಾದದ ಬೆಂಕಿ ಹಚ್ಚುತ್ತಲೇ ಹೋಗಿಬಿಟ್ಟರು. ಕಲಾದೇವಿಗೊಂದು ಜಾತಿಯ ಕಳಂಕ ಅಂಟಿಸಿಬಿಟ್ಟರು.

    ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿದ್ದೂ ಇದನ್ನೇ. ಎಲ್ಲವನ್ನೂ ಜಾತಿ ನೋಡಿಕೊಂಡು ಮಾಡಿದ್ದರೆ, ಡಾ.ರಾಜ್ ಒಂದೇ ಒಂದು ಐತಿಹಾಸಿಕ ಪಾತ್ರವನ್ನೂ ಮಾಡುವಂತಿರಲಿಲ್ಲ. ಕನಕದಾಸ ಎನ್ನಿ, ಪುರಂದರದಾಸ ಎನ್ನಿ, ಶ್ರೀಕೃಷ್ಣ ದೇವರಾಯ ಎನ್ನಿ, ಮಯೂರ ಎನ್ನಿ, ಬಭ್ರುವಾಹನ ಎನ್ನಿ, ಭಕ್ತ ಕುಂಬಾರ ಎನ್ನಿ, ಭಕ್ತ ಚೇತ ಎನ್ನಿ, ಸರ್ವಜ್ಞಮೂರ್ತಿ ಎನ್ನಿ, ರಾಘವೇಂದ್ರ ಸ್ವಾಮಿ ಎನ್ನಿ, ರಣಧೀರ ಕಂಠೀರವ ಎನ್ನಿ.. ಕಣ್ಣ ಮುಂದೆ ಬರುವುದು ಡಾ.ರಾಜ್‍ಕುಮಾರ್. ರಾಜಕೀಯದಲ್ಲಿ ಜಾತಿಯಿಲ್ಲದೆ ಏನೂ ನಡೆಯಲ್ಲ. ಜಾತ್ಯತೀ ಪಕ್ಷ ಎಂದು ಕರೆಸಿಕೊಳ್ಳುವವರೂ ಜಾತಿ ರಾಜಕೀಯವನ್ನೇ ಮಾಡೋದು. ಅದು ದೇಶದ ಜನರಿಗೆಲ್ಲ ಗೊತ್ತಿರುವ ಬಹಿರಂಗ ಗುಟ್ಟು. ಆದರೆ, ಚಿತ್ರರಂಗದಲ್ಲಿ ಜಾತಿ ಇರಲಿಲ್ಲ. 

    ಒಬ್ಬ ಕಲಾವಿದನನ್ನು ಆತನ ಶ್ರೇಷ್ಟತೆಯಿಂದಲೇ ಗೌರವಿಸುತ್ತಿದ್ದರು. ಗೌರವಿಸುತ್ತಿದ್ದಾರೆ. ಕನ್ನಡದಲ್ಲಿ ಕೆಲವು ಹಿರಿಯ ನಿರ್ದೇಶಕರು, ಕಲಾವಿದರಿಗೆ.. ಕಣ್ಣಿಗೆ ಕಂಡ ತಕ್ಷಣ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಚಿತ್ರರಂಗದ ಕಿರಿಯರು. ಅಲ್ಲಿ ಜಾತಿ ನೋಡುವುದಿಲ್ಲ. ಕಾಣುವುದು ಕಲಾ ಸರಸ್ವತಿ. ಡಾ.ರಾಜ್, ವಿಷ್ಣು, ಪುಟ್ಟಣ್ಣನಂತಹವರಿಗೆ ಆ ಗೌರವ ಸಿಗುತ್ತಿತ್ತು. ಈಗಲೂ.. ಅಂಬಿ, ರವಿಚಂದ್ರನ್, ಶಿವಣ್ಣ, ಭಾರ್ಗವ, ಭಗವಾನ್.. ರಂತಹ ಹಿರಿಯರಿಗೆ ನಮಸ್ಕರಿಸುವಾಗ.. ಅವರ ಜಾತಿ ಯಾವುದೆಂದು ನಮ್ಕಸರಿಸುವವರು ನೆನಪಿಸಿಕೊಳ್ಳಲ್ಲ. ಇಷ್ಟಕ್ಕೂ ಅವರಿಗೆ ಆ ಗೌರವ ಸಿಕ್ಕಿದ್ದೇ ಕಲಾದೇವಿ ಒಲಿದ ಮೇಲೆ. ಕಲಾದೇವಿ ಒಲಿಯುವುದೇ ಜಾತಿಯ ಅರಿವು ಸತ್ತ ಮೇಲೆ. 

    ಜಗ್ಗೇಶ್ ಹೇಳಿದ ಮಾತಿನಲ್ಲಿ ಅರ್ಥವಿದೆ ಎನಿಸುವುದು ಆಗಲೇ. ಕಲೆಗೆ ಜಾತಿ ಎಲ್ಲಿಯದು..? ಇಷ್ಟಕ್ಕೂ ಮದಕರಿ ನಾಯಕನನ್ನು ಒಬ್ಬ ಜಾತಿಯ ನಾಯಕ ಎಂದು ಸೀಮಿತಗೊಳಿಸುವುದೇ ನಮಗೆ ನಾವು ಮಾಡಿಕೊಳ್ಳುವ ಅವಮಾನ. ಈಗ ಈ ಸ್ವಾಮೀಜಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ.. ಆ ಪಾತ್ರದಲ್ಲಿ ನಟಿಸುವ ಕಲಾವಿದನ ಜಾತಿಯನ್ನೂ ಎತ್ತಿಬಿಟ್ಟಿದ್ದಾರೆ.

    ಒಬ್ಬ ಸ್ವಾಮೀಜಿಯ ಅತಿರೇಕದಿಂದ ಒಬ್ಬ ಕಲಾವಿದನ ಜಾತಿ ಗೊತ್ತಾಗುವಂತಾಯ್ತೇ ಹೊರತು, ಮತ್ತೇನಲ್ಲ. ಸುದೀಪ್‍ರನ್ನು ಕನ್ನಡಿಗರು ಪ್ರೀತಿಸುವುದು ಆತ ಒಬ್ಬ ಕಲಾವಿದ. ಕನ್ನಡದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳಗಲು ಪ್ರಯತ್ನಿಸುತ್ತಿರುವ ಸಾಹಸಿ ಎಂಬ ಕಾರಣಕ್ಕೆ. ಜಾತಿ ಕಟ್ಟಿಕೊಂಡು ಆಗಬೇಕಾದ್ದೇನು..? ದರ್ಶನ್ ಜಾತಿಯೂ ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಾಗುವ ಅಗತ್ಯವೂ ಇಲ್ಲ. ಕಲಾವಿದರ ಜಾತಿ ಕಟ್ಟಿಕೊಂಡು ನಮಗೇನಾಗಬೇಕು..? 

    ಇಷ್ಟಕ್ಕೂ ಮದಕರಿ ನಾಯಕನ ಎರಡು ಸಿನಿಮಾ ಬರುತ್ತವಾ..? ಬರಲಿ ಬಿಡಿ. ನಮ್ಮ ಮದಕರಿ ನಾಯಕನ ಇತಿಹಾಸ ಮನೆ ಮನೆಗೂ ತಲುಪಲಿ. ಅದಕ್ಕೆ ಹೆಮ್ಮೆ ಪಡೋಣ.

    ಕೆ.ಎಂ.ವೀರೇಶ್

    ಸಂಪಾದಕರು

    ಚಿತ್ರಲೋಕ.ಕಾಮ್

  • ಮದಕರಿ ನಾಯಕನಾಗುತ್ತಾರಾ ದರ್ಶನ್..?

    will darshan act as madakari nayaka

    ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಹೊಸ ಹೆಸರು ತಂದುಕೊಟ್ಟ ಸಿನಿಮಾ ಸಂಗೊಳ್ಳಿ ರಾಯಣ್ಣ. ಅದಾದ ಮೇಲೆ ಪೌರಾಣಿಕ, ಐತಿಹಾಸಿಕ ಚಿತ್ರಗಳಿಗೆ ನಾನು ಯಾವಾಗ ಬೇಕಾದರೂ ಸಿದ್ಧ ಎಂದು ಸಾರಿದ್ದ ದರ್ಶನ್‍ಗೆ, ಮದಕರಿ ನಾಯಕನಾಗುವ ಆಸೆಯಾಗಿದೆಯಂತೆ. ಆ ಆಸೆಗೆ ನೀರೆರೆಯುತ್ತಿರುವುದು ರಾಕ್‍ಲೈನ್ ವೆಂಕಟೇಶ್. ಅಂದರೆ, ನಿರ್ಮಾಪಕರಾಗುತ್ತಿರುವುದು ಅವರೇ.

    ದರ್ಶನ್ ಅವರನ್ನು ಮದಕರಿ ನಾಯಕನಾಗಿ ಚಿತ್ರಿಸಿಕೊಂಡು ಕಥೆ ಬರೆಯುತ್ತಿರುವುದು ಬಿ.ಎಲ್.ವೇಣು. ಚಿತ್ರದುರ್ಗದ ಕುರಿತು ಈಗಾಗಲೇ ಬಹಳಷ್ಟು ಸಾಹಿತ್ಯ ಸೃಷ್ಟಿಸಿರುವ ಬಿ.ಎಲ್.ವೇಣು, ಪಾತ್ರ, ಚಿತ್ರಕಥೆ ಹೊಸೆಯುತ್ತಿದ್ದಾರೆ. ನಿರ್ದೇಶಕರು ಯಾರು ಅನ್ನೋದು ಇನ್ನೂ ಪ್ರಶ್ನೆಯಾಗಿಯೇ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ದರ್ಶನ್ ಮದಕರಿ ನಾಯಕನಾಗಿ ಮಿಂಚಲಿದ್ದಾರೆ.

  • ಮನೆಯಲ್ಲೇ ತಾರಕೋತ್ಸವ ಕಣ್ತುಂಬಿಕೊಳ್ಳಿ..

    tarakotsava to be elecasted in tv

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.  ಈ ಚಿತ್ರದ ದೊಡ್ಡದೊಂದು ಉತ್ಸವ ಮೈಸೂರಿನ ಬಯಲುರಂಗಮಂದಿರದಲ್ಲಿ ಸೆಪ್ಟೆಂಬರ್ 9ರಂದು ನೆರವೇರಿತ್ತು. ಆ ವೇದಿಕೆಯಲ್ಲಿ ತಾರಕ್​ ನಾಯಕಿಯರಾದ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವಾತ್ಸವ್ ಚಿತ್ರದ ಹಾಡಿಗೆ ಹೆಜ್ಜೆಹಾಕಿದ್ದರು. ಇದರ ಜೊತೆಗೆ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್'  ಸ್ಪರ್ಧಿಗಳು ಕೂಡ ಕುಣಿದು ಕುಪ್ಪಳಿಸಿದ್ದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಡೈನಮಿಕ್ ಸ್ಟಾರ್ ದೇವರಾಜ್, ನಿರ್ಮಾಪಕ ಕೆ.ಎಸ್.ದುಶ್ಯಂತ್, ನಿರ್ದೇಶಕ ಮಿಲನ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಚಿತ್ರತಂಡದ ಕಲಾವಿದರು ಭಾಗವಹಿಸಿದ್ದರು.

    ಅಂದು ಮಿಸ್ ಮಾಡಿಕೊಂಡಿದ್ದ ಲಕ್ಷಾಂತರ ದರ್ಶನ್ ಅಭಿಮಾನಿಗಳಿಗಾಗಿ ಆ ಕಾರ್ಯಕ್ರಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಯಾವಾಗ, ಯಾವ ಸಮಯ ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಸಿನಿಮಾ ಬಿಡುಗಡೆಗೆ ಮುನ್ನ ಎನ್ನುವುದಂತೂ ಖಚಿತ. ಮನೆಯಲ್ಲೇ ತಾರಕೋತ್ಸವ ಕಣ್ತುಂಬಿಕೊಳ್ಳಿ.

  • ಮರಳಿ ಬಾರದ ಲೋಕಕ್ಕೆ ದರ್ಶನ್ ಅಭಿಮಾನಿ 

    darshan fan revanth no more

    ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದ, ಸಾವಿನ ಹೊಸ್ತಿಲಲ್ಲಿದ್ದುಕೊಂಡು ದರ್ಶನ್‍ರನ್ನು ನೋಡಬೇಕು, ಮಾತನಾಡಬೇಕು ಎಂದು ಹಂಬಲಿಸುತ್ತಿದ್ದ ದರ್ಶನ್ ಅವರ ಅಭಿಮಾನಿ ರೇವಂತ್ ಚಿರನಿದ್ರೆಗೆ ಜಾರಿದ್ದಾರೆ. ಶಿವಮೊಗ್ಗದ ರೇವಂತ್, ಸಾಯುವ ಮುನ್ನ ಒಮ್ಮೆ ದರ್ಶನ್‍ರನ್ನು ನೋಡಬೇಕು ಎಂದು ಬಯಸಿದ್ದರು. ಶಿವಮೊಗ್ಗಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ತಪ್ಪದೇ ಬರುತ್ತೇನೆ ಎಂದು ಹೇಳಿದ್ದ ದರ್ಶನ್, ಅಭಿಮಾನಿಯ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದರು. 

    ಸಾರಿ ಅಣ್ಣಾ, ನಿಮಗೆ ತೊಂದರೆ ಕೊಟ್ಟೆ ಎಂದು ಹೇಳಿದ್ದ ರೇವಂತ್‍ಗೆ ಏನೂ ಆಗಿಲ್ಲ, ಸರಿಯಾಗಿ ಚಿಕಿತ್ಸೆ ತೆಗೆದುಕೊ ಎಂದು ಸಾಂತ್ವನ ಹೇಳಿದ್ದರು ದರ್ಶನ್. ರೇವಂತ್ ತಂದೆ, ತಾಯಿಗೂ ಸಮಾಧಾನ ಪಡಿಸಿದ್ದರು. ಈಗ ಫೆಬ್ರವರಿ 10ರಂದು ರೇವಂತ್ ನಿಧನರಾಗಿದ್ದಾರೆ. ತಮ್ಮ ಆಸೆಯಂತೆ ದರ್ಶನ್ ಜೊತೆ ಮಾತನಾಡಿದ ನಂತರ ರೇವಂತ್ ಚಿರನಿದ್ರೆಗೆ ಜಾರಿದ್ದಾರೆ.

    Related Articles :-

    ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ದರ್ಶನ್

    ದರ್ಶನ್ ಅಭಿಮಾನಿಯ ಕೊನೆಯ ಆಸೆ

  • ಮರಿ ಟೈಗರ್ ಶಕ್ತಿ ತುಂಬಿದ್ದೇ ಗೆಳೆಯ ದರ್ಶನ್..!

    vinod prabhakar praised darshan for his support

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರರಂಗದಲ್ಲಿ ಹಲವರಿಗೆ ಸಹಾಯ ಮಾಡುವುದು ಹೊಸದೇನಲ್ಲ. ಖಳನಾಯಕರ ಮಕ್ಕಳಿಗಾಗಿಯೇ ನವಗ್ರಹ ಸಿನಿಮಾ ನಿರ್ಮಿಸಿದ್ದವರು ದರ್ಶನ್. ಇಂತಹ ದರ್ಶನ್ ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಅವರಿಗೆ ಶಕ್ತಿ ತುಂಬಿದ್ದನ್ನು ಸ್ವತಃ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ.

    ಸತತ ಸೋಲಿನಿಂದ ಕಂಗೆಟ್ಟು ಕುಳಿತಿದ್ದ ನನಗೆ, ಕಷ್ಟದಲ್ಲಿದ್ದಾಗ ಬಂದು ಕೈ ಹಿಡಿದು ಮೇಲೆತ್ತಿದ್ದವರೇ ದರ್ಶನ್. ಅವರಿಗೆ ಎಷ್ಟು ಕೃತಜ್ಞತೆ ಹೇಳಬೇಕೋ ಗೊತ್ತಿಲ್ಲ ಎಂದಿದ್ದಾರೆ ಮರಿಟೈಗರ್.

    ವಿನೋದ್ ಪ್ರಭಾಕರ್ ಅವರ ಶಾಡೋ ಚಿತ್ರದ ಟೀಸರ್ ರಿಲೀಸ್ ಮಾಡಿ ಮಾತನಾಡಿದ ದರ್ಶನ್, ಈ ವರ್ಷ ವಿನೋದ್ ಅವರ 3 ಸಿನಿಮಾಗಳಿಗೆ ಕ್ಲಾಪ್ ಮಾಡಿದ್ದೇನೆ. ಮರಿಟೈಗರ್ ಈಗ ತಾನೆ  ಎದ್ದು ಕುಳಿತಿದೆ. ಅವರ ಸಕ್ಸಸ್‍ನ ಹಿಂದೆ ಅವರ ಪತ್ನಿ ನಿಶಾ ಕೂಡಾ ಇದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.

  • ಮರಿ ಟೈಗರ್‍ಗೆ ದಾಸ ದರ್ಶನ್ ಬೆಂಬಲ

    darshan supports vinod prabhakar

    ಮರಿ ಟೈಗರ್ ಎಂದೇ ಖ್ಯಾತರಾಗಿರುವ ವಿನೋದ್ ಪ್ರಭಾಕರ್ ಅಭಿನಯದ ಕ್ರ್ಯಾಕ್ ಚಿತ್ರ ಬಿಡುಗಡೆಯಾಗಿದೆ. ಅಭಿಮಾನಿಗಳಿಗೂ ಇಷ್ಟವಾಗಿದೆ. ಹಾಗೆಯೇ ಚಿತ್ರ ದಾಸ ದರ್ಶನ್‍ಗೂ ಇಷ್ಟವಾಗಿಬಿಟ್ಟಿದೆ. ಕುರುಕ್ಷೇತ್ರ ಚಿತ್ರದ ಶೂಟಿಂಗ್, ತಾರಕ್ ಬಿಡುಗಡೆ ಟೆನ್ಷನ್ ಮಧ್ಯೆಯೂ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡಿರುವ ದರ್ಶನ್, ಗೆಳೆಯನ ಬೆನ್ನು ತಟ್ಟಿದ್ದಾರೆ.

    ಪೊಲೀಸ್ ಪಾತ್ರವನ್ನು ನಾನೂ ಮಾಡಿದ್ದೇನೆ. ಇನ್ನೂ ಹಲವರು ಮಾಡಿದ್ದಾರೆ. ಆದರೆ, ಅದಕ್ಕೊಂದು ಕಾಮಿಡಿ ಟಚ್ ಕೊಟ್ಟು ನಟಿಸಿರುವ ವಿನೋದ್, ಅವರ ಸ್ಟೈಲ್, ಡೈಲಾಗ್ ಎಲ್ಲವೂ ಸ್ಪೆಷಲ್ ಎಂದಿದ್ದಾರೆ ದರ್ಶನ್.

    ದರ್ಶನ್‍ಗೆ ತುಂಬಾ ಇಷ್ಟವಾಗಿರುವುದು ಚಿತ್ರದ ಕ್ಲೈಮಾಕ್ಸ್. ಎಲ್ಲೂ ಬೋರ್ ಹೊಡೆಸದ ಕಥೆ, ಕ್ಲೈಮಾಕ್ಸ್‍ನಲ್ಲಿ ಬೇರೆಯೇ ಫೀಲ್ ಕೊಡುತ್ತೆ. ಫೈಟ್ಸ್ ಅಂತೂ ವಂಡರ್‍ಫುಲ್. ನಿರ್ದೇಶಕರ ಶ್ರಮವೂ ಎದ್ದು ಕಾಣುತ್ತೆ. ಟೈಗರ್ ಪ್ರಭಾಕರ್ ಮಗನ ಚಿತ್ರವನ್ನು ನೋಡಿ, ಅಭಿಮಾನಿಗಳು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ ದರ್ಶನ್.

    ಸಮಕಾಲೀನ ಕಲಾವಿದನ ಚಿತ್ರದ ಬಗ್ಗೆ ಸ್ಟಾರ್ ನಟನೊಬ್ಬ ಈ ರೀತಿ ನಡೆದುಕೊಳ್ಳುವುದು ಅಭಿಮಾನಿಗಳಿಗೆ ಖುಷಿ ಕೊಡುವುದು ನಿಜ. ಹಾಗಾಗಿಯೇ ದರ್ಶನ್ ಗ್ರೇಟ್ ಎನಿಸಿಬಿಡ್ತಾರೆ.

  • ಮಹಾಕಾಳಿಯಮ್ಮನಿಗೆ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತಾ..?

    darshan's unique gift to mahakali temple

    ದರ್ಶನ್ ಚಾಮುಂಡೇಶ್ವರಿಯ ಪರಮ ಭಕ್ತ ಎನ್ನುವುದು ಪ್ರತಿಯೊಬ್ಬ ಅಭಿಮಾನಿಗೂ ಗೊತ್ತು. ಹಾಗೆಯೇ ದರ್ಶನ್ ಪ್ರಾಣಿಪ್ರೇಮಿ ಎನ್ನುವುದೂ ಗೊತ್ತು. ಇಂತಹ ದರ್ಶನ್ ಈಗ ಬೆಂಗಳೂರಿನಲ್ಲಿರುವ ಬಂಡಿ ಮಹಾಕಾಳಿಯಮ್ಮನ ದೇವಸ್ಥಾನಕ್ಕೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. 

    ದರ್ಶನ್ ಕೊಟ್ಟಿರುವ ಉಡುಗೊರೆ ಏನು ಗೊತ್ತಾ..? ಚೀನಾದ ಶಿಜು ತಳಿಯ ನಾಯಿಮರಿಗಳು. ಮುದ್ದು ಮುದ್ದಾದ ಈ ನಾಯಿಮರಿಗಳನ್ನು ಮಾತೆಯ ದೇಗುಲಕ್ಕೆ ಕಾಣಿಕೆಯಾಗಿ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ ದರ್ಶನ್.

  • ಮಾಸ್ಟರ್ ಆಫ್ ಸಸ್ಪೆನ್ಸ್ ಈಸ್ ಬ್ಯಾಕ್

    sunil kumar desai's udgarsha traile rreleased

    ತರ್ಕ, ಉತ್ಕರ್ಷ, ಸಂಘರ್ಷ, ನಿಷ್ಕರ್ಷ, ಮರ್ಮ ಚಿತ್ರಗಳ ಮೂಲಕ ಸುನಿಲ್ ಕುಮಾರ್ ದೇಸಾಯಿ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳಿಗೆ ಹೊಸ ರೂಪವನ್ನೆ ಕೊಟ್ಟವರು. ಈಗ ಉದ್ಘರ್ಷದ ಮೂಲಕ ಮತ್ತೆ ತಮ್ಮ ಥ್ರಿಲ್ಲರ್ ಜಾನರ್‍ಗೆ ವಾಪಸ್ ಆಗಿದ್ದಾರೆ. ಉದ್ಘರ್ಷದ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ದರ್ಶನ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

    ಇಡೀ ಚಿತ್ರದಲ್ಲಿ ಹಿನ್ನೆಲೆ ಸಂಗೀತ, ಅನೂಪ್ ಸಿಂಗ್ ಠಾಕೂರ್ ಡೈಲಾಗ್ ಬಿಟ್ಟರೆ ಕೇಳಿಸೋದು ಕಿಚ್ಚನ ಧ್ವನಿ. ಆಲ್‍ಮೋಸ್ಟ್ ಇಂಗ್ಲಿಷ್ ವಾಯ್ಸ್ ಓವರ್ ಇದೆ. ನಿರ್ಮಾಪಕ ದೇವರಾಜ್ 4 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.

  • ಮಿಠಾಯಿ ಸೂರಿಗೆ ಮಿಠಾಯಿ ಕೊಡೋರೇ ಇಲ್ವಂತೆ.. ಪಾಪ..!

    mitayi suri has no lady love in yajamana movie

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಮಿಠಾಯಿ ಸೂರಿ ಅನ್ನೋ ಪಾತ್ರವಿದೆ. ಆ ಪಾತ್ರ ಮಾಡಿರೋದು ಡಾಲಿ ಧನಂಜಯ್. ಟಗರು ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದ ಧನಂಜಯ್, ಇಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಮಿಠಾಯಿ ಸೂರಿಯಾಗಿದ್ದಾರೆ.

    `ನನ್ನದು ಮಿಠಾಯಿ ಸೂರಿ ಪಾತ್ರ. ಹುಂಬತನವೇ ಮೈವೆತ್ತಿಕೊಂಡಿರುವ ಕ್ಯಾರೆಕ್ಟರ್. ಸಿಕ್ಕಾಪಟ್ಟೆ ಕಿರಿಕ್ ಮಾಡುತ್ತೆ. ಆದರೆ ವಿಲನ್ ಅಲ್ಲ' ಎನ್ನುವ ಧನಂಜಯ್ ಅವರಿಗೆ ಅದೊಂದೇ ಬೇಜಾರು.

    ಮಿಠಾಯಿ ಸೂರಿಗೆ ಮಿಠಾಯಿ ತಿನ್ನಿಸೋರೇ ಇಲ್ಲ. ಸಿಂಗಲ್. ಅರ್ಥಾತ್.. ಮಿಠಾಯಿ ಸೂರಿಗೆ ಹೀರೋಯಿನ್ ಇಲ್ಲ.

    ಯಜಮಾನ ಚಿತ್ರ ಮಾರ್ಚ್ 1ರಂದು ತೆರೆಗೆ ಬರುತ್ತಿದ್ದು, ಭರ್ಜರಿ ಓಪನಿಂಗ್ ಎದುರು ನೋಡುತ್ತಿದೆ.

  • ಮಿಯರ್ ಪದ್ಮಿನಿ ಜಗ್ಗೇಶ್..ಯಜಮಾನ ದರ್ಶನ್ ಜನ ಮೆಚ್ಚಿದ ಕಾಯಕ

    jaggesh, darshan win hearts at premiere pamini audio launch

    ಜಗ್ಗೇಶ್, ಪ್ರೀಮಿಯರ್ ಪದ್ಮಿನಿ ಚಿತ್ರದ ಆಡಿಯೋ ಬಿಡುಗಡೆ ಸಂಭ್ರಮದಲ್ಲಿದ್ದರೆ, ದರ್ಶನ್, ಯಜಮಾನ ಚಿತ್ರದ ರಿಲೀಸ್ ಜೋಶ್‍ನಲ್ಲಿದ್ದಾರೆ. ಪ್ರೀಮಿಯರ್ ಪದ್ಮಿನಿ ಚಿತ್ರದ ಆಡಿಯೋ ರಿಲೀಸ್‍ಗೆ ದರ್ಶನ್ ಆಗಮಿಸಿದ್ದರು. ಆ ಖುಷಿಯ ಕೆಲಸದ ನಡುವೆ ಇಬ್ಬರೂ ಜನ ಮೆಚ್ಚುವ ಕೆಲಸಕ್ಕೆ ಕೈ ಹಾಕಿದ್ದು ವಿಶೇಷ.

    ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ಮಾಪಕಿ ಶೃತಿ ನಾಯ್ಡು, ನಟ ರಾಕೇಶ್ (ಚೆಲುವಿನ ಚಿತ್ತಾರದ ಪೆಪ್ಪುಸಿ ಖ್ಯಾತಿ) ಕುಟುಂಬಕ್ಕೆ 1 ಲಕ್ಷ ರೂ. ಚೆಕ್ ನೀಡಿದರು. ಅದನ್ನು ರಾಕೇಶ್ ಅವರ ತಾಯಿ ಆಶಾಲತ ಅವರಿಗೆ ಹಸ್ತಾಂತರಿಸಿದ್ದು ನಟ ದರ್ಶನ್.

    ಇತ್ತ ಇದೇ ವೇಳೆ ಜಗ್ಗೇಶ್ ಮತ್ತು ದರ್ಶನ್ `ಒಂದು ಗಿಡ ನೆಡಿ' ಅಭಿಯಾನ ಆರಂಭಿಸಿಬಿಟ್ಟರು. 

  • ಮುನಿರತ್ನ ಕುರುಕ್ಷೇತ್ರಕ್ಕೆ ರಾಕ್‍ಲೈನ್ ಬಲ

    kurukshetra to release in 5 languages

    ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಚಿತ್ರಕ್ಕೀಗ ರಾಕ್‍ಲೈನ್ ವೆಂಕಟೇಶ್ ಬಲ ಸಿಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ.. ಐದೂ ಭಾಷೆಗಳಲ್ಲಿ ಕುರುಕ್ಷೇತ್ರ ಚಿತ್ರವನ್ನು ವಿತರಣೆ ಮಾಡುತ್ತಿರುವುದು ರಾಕ್‍ಲೈನ್ ವೆಂಕಟೇಶ್. 2ಡಿ ಮತ್ತು 3ಡಿಯಲ್ಲಿ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ ಹೊಸ ದಾಖಲೆಯನ್ನೇ ಬರೆಯಲು ಸಿದ್ಧವಾಗಿದೆ.

    ಚಿತ್ರದ ಆಡಿಯೋ ರೈಟ್ಸ್ ಖರೀದಿಸಿರುವುದು ಲಹರಿ ವೇಲು. ದೇಶ ಹಾಗೂ ವಿದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ, 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿಯೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

    ಜುಲೈ 27ಕ್ಕೆ ಕರ್ನಾಟಕದಲ್ಲಿ ಆಡಿಯೋ ರಿಲೀಸ್, ಆಗಸ್ಟ್ 2ಕ್ಕೆ ಸಿನಿಮಾ ರಿಲೀಸ್. ಕುರುಕ್ಷೇತ್ರದ ಅದ್ಧೂರಿ ಬಿಡುಗಡೆಗೆ ಸಕಲ ಸಿದ್ಧತೆಯೂ ನಡೆಯುತ್ತಿದೆ.

  • ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

    kurukshtera movie image

    ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ. ಅಲ್ಲಲ್ಲ.. ಅದು ಮುನಿರತ್ನ ಕುರುಕ್ಷೇತ್ರ. ಚಿತ್ರದ ಮುಹೂರ್ತಕ್ಕೆ ಆಗಸ್ಟ್ 6ನೇ ತಾರೀಕು ಡೇಟ್ ಫ{ಇಕ್ಸ್ ಆಗಿರುವುದು ನಿಜವಾದರೂ, ಮುನಿರತ್ನಗೆ ಒಂದು ವಿಚಿತ್ರ ತಲೆನೋವು ಶುರುವಾಗಿದೆ. ಅದು ಡಿಕೆ ತಲೆನೋವು

    ಇನ್ನೇನಿಲ್ಲ, ಮುನಿರತ್ನ ಡಿಕೆ ಶಿವಕುಮಾರ್ ಆಪ್ತರಲ್ಲಿ ಒಬ್ಬರು. ಹೀಗಾಗಿಯೇ ಸಿನಿಮಾ ಮುಹೂರ್ತದ ಆಹ್ವಾನ ಪತ್ರಿಕೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಇಬ್ಬರ ಹೆಸರೂ ಇದೆ. ಆದರೆ ಈಗ ಕಂಪ್ಲೀಟ್ ಐಟಿ ಟೆನ್ಷನ್‍ನಲ್ಲಿರುವ ಡಿಕೆ ಬ್ರದರ್ಸ್, ಮುಹೂರ್ತ ಕಾರ್ಯಕ್ರಮಕ್ಕೆ ಬರುವುದು ಕಷ್ಟಸಾಧ್ಯ. ತನಿಖೆ ಮುಗಿಯಲೇ ಇಲ್ಲದವಾದರೆ ಬರಲು ಆಗುವುದೂ ಇಲ್ಲ. 

    ಈ ಮಧ್ಯೆ ಐಟಿಯವರು ಬೆಂಡೆತ್ತಿರುವಾಗಲೇ ಮುನಿರತ್ನ ಹೋಗಿ ಡಿಕೆ ಸುರೇಶ್ ಅವರಿಗೆ ಆಹ್ವಾನವನ್ನೂ ಕೊಟ್ಟು ಬಂದಿದ್ದಾರೆ. ಒಟ್ಟಿನಲ್ಲಿ ಮುನಿರತ್ನ ಕುರುಕ್ಷೇತ್ರದ ದಿನ ಏನೇ ಸಂಭ್ರಮವಿದ್ದರೂ, ಡಿಕೆ ತಲೆನೋವು ಎಲ್ಲರಿಗೂ ಕಾಡಲಿದೆ.

    Related Articles :-

    ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

    ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

    ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

    ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

    Kurukshetra To be Launched on July 30th

    ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

    ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

    Haripriya Confirmed For Kurukshetra

    Vivek Oberoi in Kurukshetra Say Reports

    Kurukshetra To Be Launched On July 23rd

  • ಮುನಿರತ್ನ ಕುರುಕ್ಷೇತ್ರದಲ್ಲಿ ಅವಕಾಶ - ಶಕುನಿ ರವಿಶಂಕರ್, ಧೃತರಾಷ್ಷ್ಟ್ರ ಶ್ರೀನಾಥ್​ಗೆ ಉತ್ಸಾಹವೋ ಉತ್ಸಾಹ

    ravishankar in kurukshetra

    ದರ್ಶನ್ ಅಭಿನಯದ 50ನೇ ಚಿತ್ರ ಮುನಿರತ್ನ ಕುರುಕ್ಷೇತ್ರ ಚಿತ್ರ, ಸೆಟ್ಟೇರುವ ಮೊದಲೇ ಅಪಾರ ನಿರೀಕ್ಷೆ ಹುಟ್ಟಿಸುತ್ತಿದೆ. ಈಗ ಚಿತ್ರದ ಅತ್ಯಂತ ಪ್ರಮುಖ ಪಾತ್ರಕ್ಕೆ ಆರ್ಮುಗಂ ಖ್ಯಾತಿಯ ರವಿಶಂಕರ್ ಸೇರ್ಪಡೆಯಾಗಿದ್ದಾರೆ. ರವಿಶಂಕರ್​ಗೆ ಕುರುಕ್ಷೇತ್ರ ಚಿತ್ರದಲ್ಲಿ ಶಕುನಿಯ ಪಾತ್ರ.

    ಕುರುಕ್ಷೇತ್ರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದೇ ನನ್ನ ಅದೃಷ್ಟ. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ರವಿಶಂಕರ್. ಅವರ ಎಕ್ಸೈಟ್​ಮೆಂಟ್​ಗೆ ಕಾರಣವೂ ಇದೆ. ಏಕೆಂದರೆ ಕುರುಕ್ಷೇತ್ರಕ್ಕೆ ಕಾರಣಕರ್ತನೇ ಶಕುನಿ. ಮಹಾಭಾರತದ ಅತ್ಯಂತ ಪ್ರಮುಖ ಪಾತ್ರವದು.

    ಇನ್ನು ಧೃತರಾಷ್ಟ್ರನ ಪಾತ್ರದಲ್ಲಿ ನಟಿಸುತ್ತಿರುವ ಶ್ರೀನಾಥ್​ಗೂ ಅಂಥದ್ದೇ ಉತ್ಸಾಹ. ಶ್ರೀನಾಥ್​ಗೆ ಪೌರಾಣಿಕ ಚಿತ್ರ ಮತ್ತು ಪಾತ್ರಗಳು ಹೊಸದಲ್ಲ. ಈ ಹಿಂದೆ ಅಣ್ಣಾವ್ರ ಜೊತೆ ನಾಲ್ಕು ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಮತ್ತೆ ಅಂಥಾದ್ದೊಂದು ಅದ್ಭುತ ಅವಕಾಶ ಸಿಕ್ಕಿದೆ. ಹಳೆಯದೆಲ್ಲ ನೆನಪಾಗುತ್ತಿದೆ. ಅಭಿನಯಿಸಲು ಕಾತುರನಾಗಿದ್ದೇನೆ ಎಂದಿದ್ದಾರೆ ಶ್ರೀನಾಥ್.

    Related Articles :-

    ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

    ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

    ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

    ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

    ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

    Kurukshetra To be Launched on July 30th

    ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

    ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

  • ಮುರುಘಾ ಶ್ರೀಗಳು ಮದಕರಿ ವಿವಾದ ತಣ್ಣಗಾಗಿಸ್ತಾರಾ..?

    will murugha mutt cools madakari nayaka issue

    ಮದಕರಿ ಚಿತ್ರದ ವಿವಾದ.. ಜಾತಿ ವಿವಾದಕ್ಕೆ ತಿರುಗಿರುವುದು ಗೊತ್ತೇ ಇದೆ. ಈಗ ಆ ವಿವಾದ ಮುರುಘಾ ಶರಣರ ಮಠದ ಅಂಗಳ ತಲುಪಿದೆ. ಶರಣರ ಉತ್ಸವಕ್ಕಾಗಿ ಚಿತ್ರದುರ್ಗಕ್ಕೆ ತೆರಳಿದ್ದ ದರ್ಶನ್ ಮತ್ತು ರಾಕ್‍ಲೈನ್ ವೆಂಕಟೇಶ್, ಈ ಕುರಿತು ಮುರುಘಾ ಶ್ರೀಗಳ ಜೊತೆ ಮಾತನಾಡಿದ್ದಾರಂತೆ.

    ವಾಲ್ಮೀಕಿ ಸಮುದಾಯದ ಶ್ರೀಗಳಾದ ಪ್ರಸನ್ನಾನಂದ ಸ್ವಾಮೀಜಿಗಳಿಗೆ ಮುರುಘಾ ಮಠದ ಶ್ರೀಗಳೆಂದರೆ ಅಪಾರ ಗೌರವ. ಹೀಗಾಗಿ ಮುರುಘಾ ಶರಣರ ಮೂಲಕ ವಾಲ್ಮೀಕಿ ಶ್ರೀಗಳನನ್ನು ಸುಮ್ಮನಾಗಿಸುವ ಪ್ರಯತ್ನ ಮಾಡಿದ್ದಾರಂತೆ ರಾಕ್‍ಲೈನ್ ವೆಂಕಟೇಶ್ ಮತ್ತು ದರ್ಶನ್.

    ಮದಕರಿ ಸಿನಿಮಾವನ್ನು ದರ್ಶನ್ ನಾಯಕತ್ವದಲ್ಲಿ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸಗಳು ಈಗಾಗಲೇ ಶುರುವಾಗಿವೆ ಎಂದಿರುವ ರಾಕ್‍ಲೈನ್ ವೆಂಕಟೇಶ್, ವಿವಾದದ ಬಗ್ಗೆ ಮಾತನಾಡುವುದಿಲ್ಲ. ಆದರೆ ವಿವಾದವನ್ನು ತಣ್ಣಗಾಗಿಸುವ ಕೆಲಸಕ್ಕೆ ಕೈ ಹಾಕಿರುವುದು ಸತ್ಯ.

  • ಮುಸುಕುಧಾರಿಯಾಗಿ ಯಜಮಾನನ ದರ್ಶನ ಪಡೆದ ಜಗ್ಗೇಶ್

    jaggesh watches yajamana movie in disguise

    ಕನ್ನಡದಲ್ಲಿ ತಮಗಿಷ್ಟವಾದ ಪ್ರತಿಯೊಬ್ಬರ ಚಿತ್ರವನ್ನೂ ಮೆಚ್ಚಿ, ಪ್ರೋತ್ಸಾಹಿಸುವ, ಬೆನ್ನುತಟ್ಟುವ, ಸಾಧ್ಯವಾದಷ್ಟೂ ಹೆಗಲಿಗೆ ಹೆಗಲು ಕೊಡುವ ನಟ ಜಗ್ಗೇಶ್, ದರ್ಶನ್‍ರ ಯಜಮಾನ ಚಿತ್ರವನ್ನು ಕದ್ದುಮುಚ್ಚಿ ನೋಡಿಕೊಂಡು ಬಂದಿದ್ದಾರೆ. ಥಿಯೇಟರಿನಲ್ಲೇ.

    ಕೆಜಿಎಫ್ ಚಿತ್ರವನ್ನು ಮಂಕಿ ಕ್ಯಾಪ್ ಹಾಕಿಕೊಂಡು ಹೋಗಿ ನೋಡಿ, ಮಿರ್ಚಿ ಮಂಡಕ್ಕಿ ತಿಂದು ಬಂದಿದ್ದ ಜಗ್ಗೇಶ್, ಯಜಮಾನ ಚಿತ್ರವನ್ನು ಮುಸುಕು ಹಾಕಿಕೊಂಡು ಹೋಗಿ ನೋಡಿ ಬಂದಿದ್ದಾರೆ.

    ಯಾವ ಥಿಯೇಟರಿನಲ್ಲಿ ಅಂತೀರಾ..? ಗೊತ್ತಾಗ್ಬಿಟ್ರೆ ಬಿಟ್‍ಬಿಡ್ತೀರಾ..? ಅದಕ್ಕೇ ಜಗ್ಗೇಶ್ ಅದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ.

    ಯಜಮಾನ ಚಿತ್ರವಂತೂ ದರ್ಶನ್‍ರ ಈ ಹಿಂದಿನ ಎಲ್ಲ ಚಿತ್ರಗಳ ಬಾಕ್ಸಾಫೀಸ್ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ. ದರ್ಶನ್ ಹ್ಯಾಪಿ. ಹರಿಕೃಷ್ಣ ಹ್ಯಾಪಿ. ನಿರ್ಮಾಪಕಿ ಶೈಲಜಾ ನಾಗ್ ಅವರಂತೂ ಡಬಲ್ ಹ್ಯಾಪಿ.

  • ಮೃಗಾಲಯದ ರಾಯಭಾರಿ ದರ್ಶನ್

    darshan is brand ambadassor for chamarajendra zoological gardens

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ, ಪಕ್ಷಿ ಪ್ರೇಮ ಹೊಸದೇನೂ ಅಲ್ಲ. ತಮ್ಮ ಫಾರ್ಮ್ ಹೌಸುಗಳಲ್ಲಿ ಹಸು, ಕುದುರೆ, ಗಿಣಿ, ನಾಯಿ ಸೇರಿದಂತೆ ಯಾವ್ಯಾವ ಪ್ರಾಣಿಗಳನ್ನು ಸಾಕಲು ಅವಕಾಶವಿದೆಯೋ.. ಎಲ್ಲವನ್ನೂ ಗುಡ್ಡೆ ಹಾಕಿಕೊಂಡು ಖುಷಿ ಪಡುವ ಪ್ರಾಣಿಪ್ರಿಯ ದರ್ಶನ್. ಮೈಸೂರು ಮೃಗಾಲಯದಲ್ಲಿ ಒಂದು ಆನೆ ಹಾಗೂ ಹುಲಿಯೊಂದನ್ನು ದತ್ತು ಪಡೆದುಕೊಂಡಿರುವ ದರ್ಶನ್, ಈಗ ಅದೇ ಮೃಗಾಲಯಕ್ಕೆ ರಾಯಭಾರಿಯೂ ಆಗಿದ್ದಾರೆ.

    ದರ್ಶನ್ ಅವರನ್ನು ವನ್ಯಜೀವಿ ಸಂರಕ್ಷಣೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದೇ ವನ್ಯಜೀವಿಗಳ ವಿಭಾಗದಲ್ಲಿ ಮೈಸೂರು ಮೃಗಾಲಯವೂ ಬರುತ್ತೆ. ಹೀಗಾಗಿ ದರ್ಶನ್ ಮೃಗಾಲಯಕ್ಕೂ ರಾಯಭಾರಿಯಾಗಲಿದ್ದಾರೆ. ಅಂದಹಾಗೆ ಆಗಾಗ್ಗೆ ತಮ್ಮ ಮಗನನ್ನು ಝೂಗೆ ಕರೆದುಕೊಂಡು ಹೋಗುವುದು ದರ್ಶನ್ ಅವರ ಹವ್ಯಾಸ.

  • ಮೇಘನಾ ರಾಜ್ ಕನಸು ಕುರುಕ್ಷೇತ್ರದಲ್ಲಿ ನನಸಾಯ್ತು..!!

    meghana raj's dreams come true with kurukshetra

    ಕನ್ನಡ ಮತ್ತು ಮಲಯಾಳಂನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಮೇಘನಾ ರಾಜ್, ಆರಂಭದಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಮಗಳಾಗಿ ಗುರುತಿಸಿಕೊಂಡರೂ, ಕೆಲವೇ ದಿನಗಳಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್.. ಮೇಘನಾ ರಾಜ್ ತಂದೆ ತಾಯಿಯಂತೆ ಎನ್ನುವಷ್ಟರ ಮಟ್ಟಿಗೆ ಬೆಳೆದವರು. ಅದು ಮೇಘನಾ ರಾಜ್ ಪ್ರತಿಭೆಗೆ ಸಾಕ್ಷಿ. ಹೀಗಿದ್ದರೂ ಮೇಘನಾ ರಾಜ್ ಅವರಿಗೆ ದರ್ಶನ್ ಜೊತೆ ನಟಿಸುವ ಕನಸಿತ್ತಂತೆ.

    ದರ್ಶನ್ ಜೊತೆ ನಟಿಸಬೇಕು ಎನ್ನುವುದು ನನ್ನ ಕನಸಾಗಿತ್ತು. ಆದರೆ, ಈಡೇರಿರಲೇ ಇಲ್ಲ. ಕುರುಕ್ಷೇತ್ರದಲ್ಲಿ ಭಾನುಮತಿಯ ಆಫರ್ ಬಂದಾಗ ಥ್ರಿಲ್ಲಾಗಿದ್ದೆ ಎನ್ನುವ ಮೇಘನಾಗೆ ಕುರುಕ್ಷೇತ್ರ ಹಲವು ಪ್ರಥಮಗಳ ಸಿನಿಮಾ.

    ಮೊದಲ ಪೌರಾಣಿಕ ಚಿತ್ರ, ಮೊದಲ 3ಡಿ ಸಿನಿಮಾ, ಸೆಟ್ಟಿನಲ್ಲಿಯೇ ಚಿತ್ರೀಕರಿಸಲ್ಪಟ್ಟ ಮೊದಲ ಸಿನಿಮಾ, ಮಾವ ಅರ್ಜುನ್ ಸರ್ಜಾ ಜೊತೆಯಲ್ಲೂ ಮೊದಲನೇ ಸಿನಿಮಾ ಮತ್ತು ದರ್ಶನ್ ಜೊತೆ ಮೊದಲ ಸಿನಿಮಾ. 

    ಮೊದಲ ದಿನವೇ ಅರ್ಜುನ್ ಸರ್ಜಾ ಮತ್ತು ದರ್ಶನ್ ಎದುರು ನಟಿಸುವ ದೃಶ್ಯ, ಜೊತೆಗೆ ದೊಡ್ಡ ಡೈಲಾಗು.. ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ ಮೇಘನಾ ರಾಜ್.

    ಕುರುಕ್ಷೇತ್ರದಲ್ಲಿ ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ನಟಿಸಿದ್ದು, ಚಾರುತಂತಿ ಹಾಡು ಹಿಟ್ ಆಗಿದೆ.  ಇಡೀ ಚಿತ್ರತಂಡದಲ್ಲಿ ನಾನೇ ಚಿಕ್ಕವಳು. ಜೊತೆಯಲ್ಲಿದ್ದವರೆಲ್ಲ ದಿಗ್ಗಜರು. ಹೀಗಾಗಿ ಸೆಟ್‍ಗೆ ಹೋಗುವಾಗ ಒಂದು ಭಯ ಇರುತ್ತಿತ್ತು ಎಂದಿದ್ದಾರೆ ಮೇಘನಾ.

     

  • ಮೈಸೂರು ಬಳಿ ದರ್ಶನ್ ಕಾರು ಅಪಘಾತ

    darshan met with an accident in mysore

    ಮೈಸೂರು ಬಳಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರ್‍ನಲ್ಲಿ ದರ್ಶನ್ ಜೊತೆ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೂಡಾ ಇದ್ದರು. ನಿನ್ನೆಯಷ್ಟೇ ಮೈಸೂರಿನಲ್ಲಿ ಗಜಪಡೆಯ ಮಾವುತರೊಂದಿಗೆ ವಿಶೇಷ ಭೋಜನ ಕಾರ್ಯಕ್ರಮ ಹಮ್ಮಿಕೊಂಡಿದ್ದ ದರ್ಶನ್ ಜೊತೆ ಸ್ಯಾಂಡಲ್‍ವುಡ್‍ನ ಹಲವರು ಭಾಗವಹಿಸಿದ್ದರು.

    ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬರುವಾಗ ಹಿನಕಲ್ ರಿಂಗ್ ರೋಡ್ ಬಳಿ ದರ್ಶನ್‍ರ ಆಡಿ ಕಾರು ಸ್ಕಿಡ್ ಆಗಿದೆ. ಅಪಘಾತದಲ್ಲಿ ದರ್ಶನ್ ಬಲಗೈ  ಮೂಳೆ ಮುರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್‍ಗೂ ಕೂಡಾ ಗಾಯಗಳಾಗಿವೆ.

    ಮುಂಜಾನೆ 3 ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ದರ್ಶನ್ ಅವರ ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮೈಸೂರಿಗೆ ಧಾವಿಸಿದ್ದಾರೆ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images