` darshan, - chitraloka.com | Kannada Movie News, Reviews | Image

darshan,

 • ಟಗರು 2ನಲ್ಲಿ ಶಿವಣ್ಣ-ದರ್ಶನ್ ಜೋಡಿ..!

  tagaru 2 gossip creates buzz

  ಟಗರು ಚಿತ್ರ ಬಾಕ್ಸಾಫೀಸ್‍ನಲ್ಲಿ ದಾಖಲೆ ಸೃಷ್ಟಿಸುತ್ತಿರುವಾಗಲೇ ಟಗರು 2ಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಟಗರು ಚಿತ್ರದ ಶೂಟಿಂಗ್ ಮುಗಿದ ಹೊತ್ತಿನಲ್ಲೇ ಟಗರು 2ಗೆ ಮುಹೂರ್ತವೂ ಆಗಿದೆ. ಅದೇ ಸೂರಿ, ಅದೇ ಶ್ರೀಕಾಂತ್ ಕಾಂಬಿನೇಷನ್‍ನಲ್ಲಿ ಟಗರು 2ಗೆ ಶಿವಣ್ಣ ಓಕೆ ಎಂದಿರುವುದೂ ನಿಜ.

  ಆದರೆ, ಈಗ ಟಗರು 2ನಲ್ಲಿ ಶಿವರಾಜ್ ಕುಮಾರ್ ಜೊತೆ ದರ್ಶನ್ ಅವರನ್ನು ಸೇರಿಸಲು ಸಿದ್ಧತೆ ನಡೆದಿವೆ. ಸ್ಟೋರಿ ಲೈನ್ ರೆಡಿ ಇದೆಯೇ ಹೊರತು, ಉಳಿದಂತೆ ಯಾವುದೂ ಸಿದ್ಧಗೊಂಡಿಲ್ಲ. ದರ್ಶನ್ & ಶಿವರಾಜ್‍ಕುಮಾರ್ ಒಟ್ಟಿಗೇ ನಟಿಸ್ತಾರೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಗಾಸಿಪ್ ಅಷ್ಟೆ. ನಿರ್ಮಾಪಕ, ನಿರ್ದೇಶಕರು ಈ ಬಗ್ಗೆ ಮಾತನಾಡಿಲ್ಲ. 

  ಈ ಹಿಂದೆ ದೇವರಮಗ ಚಿತ್ರದಲ್ಲಿ ಶಿವರಾಜ್‍ಕುಮಾರ್ ಜೊತೆ ದರ್ಶನ್ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ದರ್ಶನ್ ಚಾಲೆಂಜಿಂಗ್ ಸ್ಟಾರ್. ಒಟ್ಟಿನಲ್ಲಿ ಗಾಳಿಸುದ್ದಿಗೇ ಗಾಂಧಿನಗರ ಥ್ರಿಲ್ಲಾಗಿ ಹೋಗಿದೆ. 

 • ಡಿ ಬಾಸ್.. ಈಗ ಕನ್ನಡ ಕಲಾ ಕುಲ ತಿಲಕ

  darshan gets new title from qatar kannadigas

  ಚಾಲೆಂಜಿಂಗ್ ಸ್ಟಾರ್. ಅದು ಒನ್ & ಓನ್ಲಿ ದರ್ಶನ್. ಬಾಕ್ಸಾಫೀಸ್ ಸುಲ್ತಾನ್.. ಅದು ಅವರ ಚಿತ್ರಗಳು ಸೃಷ್ಟಿಸಿದ ಸೆನ್ಸೇಷನ್‍ನಿಂದಾಗಿ ಸಿಕ್ಕ ಬಿರುದು. ದಚ್ಚು, ಅದು ಗೆಳೆಯರು ಪ್ರೀತಿಯಿಂದ ಕರೆಯೋದು. ದಾಸ..

  ಅಭಿಮಾನಿಗಳ ಎದುರು ದರ್ಶನ್ ಹೇಳಿಕೊಳ್ಳೋ ಹೆಸರದು.ಗಜ, ಕರಿಯ, ಸಾರಥಿ, ಐರಾವತ, ಯಜಮಾನ.. ಹೀಗೆ ಅವರ ಚಿತ್ರದ ಟೈಟಲ್ಲುಗಳನ್ನೆಲ್ಲ ಅಭಿಮಾನಿಗಳು ಬಿರುದುಗಳಂತೆಯೇ ಬಳಸುವಾಗ ಅವರ ಖ್ಯಾತಿಯ ಕಿರೀಟಕ್ಕೆ ಹೊಸದೊಂದು ಬಿರುದು ಸೇರಿದೆ. ಅದು ಕನ್ನಡ ಕಲಾ ಕುಲ ತಿಲಕ.ದರ್ಶನ್‍ಗೆ ಈ ಬಿರುದು ನೀಡಿರುವುದು ದುಬೈನ ಕತಾರ್‍ನಲ್ಲಿ ನೆಲೆಸಿರುವ ಕನ್ನಡಿಗರು. ಇದೇ ವೇಳೆ ಸೃಜನ್ ಲೋಕೇಶ್‍ಗೆ ಅಭಿನಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಕತಾರ್ ಕನ್ನಡಿಗರು.

  ಇತ್ತೀಚೆಗೆ ನಿರ್ದೇಶಕ ನಾಗೇಂದ್ರ ಪ್ರಸಾದ್, ದರ್ಶನ್‍ರನ್ನು `ಶತಸೋದರಾಗ್ರಜ ಶರವೀರ' ಎಂದು ಕರೆದಿದ್ದರು. ಈಗ.. ದರ್ಶನ್ ಬಿರುದುಗಳ ಪಟ್ಟಿಗೆ ಹೊಸದೊಂದು ಬಿರುದು ಸೇರಿದೆ. ಕನ್ನಡ ಕಲಾ ಕುಲ ತಿಲಕ.

 • ಡಿ-ಬಾಸ್ ಅಂದ್ರೆ ದರ್ಶನ್ ಮಾತ್ರ, ನಾನಲ್ಲ - ಧ್ರುವ ಸರ್ಜಾ

  dhruva sarja reacts on d boss compliments

  ಡಿ-ಬಾಸ್ ಅನ್ನೊದು ಚಾಲೆಂಜಿಂಗ್ ಸ್ಟಾರ್‍ಗೆ ಅಭಿಮಾನಿಗಳು ಪ್ರೀತಿಯಿಂದ ಕರೆಯೋ ಹೆಸರು. ಈಗ ಅದನ್ನು ಧ್ರುವ ಸರ್ಜಾ ಕೂಡಾ ಹೇಳಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣವಾಗಿದ್ದು, ಅವರ ಹುಟ್ಟುಹಬ್ಬ. ಇತ್ತೀಚೆಗೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾಗೆ, ಅಭಿಮಾನಿಗಳು ಕೇಕ್ ತಂದಿದ್ದರು. ಕೆಲವು ಅಭಿಮಾನಿಗಳು ಕೇಕ್ ಮೇಲೆ ಹ್ಯಾಪಿ ಬರ್ತ್ ಡೇ ಡಿ ಬಾಸ್ ಎಂದು ಬರೆದಿದ್ದರು. ದರ್ಶನ್ ಮತ್ತು ಧ್ರುವ ಎರಡೂ ಹೆಸರಿನ ಆರಂಭದ ಅಕ್ಷರ ಡಿ ಆಗಿರುವುದು ಕೂಡಾ ಇದಕ್ಕೆ ಕಾರಣ. ಇದಕ್ಕೆ ಧ್ರುವ ಸರ್ಜಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ಡಿ ಬಾಸ್ ಅಂದ್ರೆ ದರ್ಶನ್ ಒಬ್ಬರೇ. ನನಗೆ ಯಾವತ್ತಿಗೂ ಆಂಜನೇಯನೇ ಬಾಸ್. ದರ್ಶನ್ ಹಿರಿಯ ನಟ. ನಿಮ್ಮಂತೆಯೇ ನಾನು ಕೂಡಾ ಅವರ ಅಭಿಮಾನಿ. ಅವರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ. ನಾನಿನ್ನೂ ಸಾಧಿಸುವುದು ಬಹಳಷ್ಟಿದೆ.  ದರ್ಶನ್, ಸದಾ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ ಧ್ರುವ ಸರ್ಜಾ.

  ಇದೇ ವೇಳೆ ಮುಂದಿನ ವರ್ಷ ಮದುವೆಯಾಗುವ ಸುಳಿವನ್ನೂ ಕೊಟ್ಟಿದ್ದಾರೆ ಧ್ರುವ. ಲವ್ ಮ್ಯಾರೇಜ್ ಆಗ್ತಾರಂತೆ. ಆದ್ರೆ, ಹುಡುಗಿಯೇ ಸಿಕ್ಕಿಲ್ವಂತೆ. ಇನ್ನೊಂದ್ ವರ್ಷದಲ್ಲಿ ಹುಡುಗಿ ಹುಡುಕಿ ಲವ್ ಮಾಡಿ ಮದ್ದೆ ಆಗ್ತಾರಂತೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್.

 • ಡಿ.19ಕ್ಕೆ ಕುರುಕ್ಷೇತ್ರದ ಮತ್ತೊಂದು ಟೀಸರ್

  kurukshetra movie image

  ಕುರುಕ್ಷೇತ್ರ. ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಪ್ರತಿದಿನವೂ ಸುದ್ದಿಯಲ್ಲಿದೆ. ಚಿತ್ರದ ಕ್ಯಾನ್‍ವಾಸ್ ಅಂಥಾದ್ದು. ದರ್ಶನ್ ಅಭಿನಯದ, ಮುನಿರತ್ನ ನಿರ್ಮಿಸುತ್ತಿರುವ ಚಿತ್ರದಿಂದ ಹೊರಬಿದ್ದಿರುವುದು ಒಂದೇ ಟೀಸರ್. ಅದೂ ದರ್ಶನ್ ಹುಟ್ಟುಹಬ್ಬಕ್ಕೆಂದು ಬಿಡುಗಡೆಯಾದ ಸ್ಪೆಷಲ್.

  ಈಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಡಿ.19ಕ್ಕೆ ಕುರುಕ್ಷೇತ್ರ ಚಿತ್ರದ 2ನೇ ಟೀಸರ್ ಬಿಡುಗಡೆಯಾಗಲಿದೆ. ಮೊದಲ ಟೀಸರ್‍ನಲ್ಲಿ ಕಂಗೊಳಿಸಿದ್ದವರು ದುರ್ಯೋಧನ ದರ್ಶನ್. ಎರಡನೇ ಟೀಸರ್‍ನಲ್ಲಿ ಮಿಂಚಲಿರುವುದು ಅಭಿಮನ್ಯು ನಿಖಿಲ್. ಅಂದಹಾಗೆ ಅಂದು ನಿಖಿಲ್ ಹುಟ್ಟುಹಬ್ಬ.

 • ಡಿ55 ಯಾರಿಗೆ ಅನ್ನೋದು ಫೈನಲ್ ಆಯ್ತು..!

  majestic rammurthy gets darshan's d55

  ದರ್ಶನ್ ಅಭಿನಯದ 55ನೇ ಸಿನಿಮಾದ ನಿರ್ಮಾಪಕರು ಯಾರು..? ಮೆಜೆಸ್ಟಿಕ್ ರಾಮಮೂರ್ತಿನಾ..? ತಾರಕ್ ಪ್ರಕಾಶ್ ಅವರಾ..? ಈ ಗೊಂದಲಕ್ಕೀಗ ತೆರೆ ಬಿದ್ದಿದೆ. ಡಿ 55 ಚಿತ್ರದ ನಿರ್ಮಾಪಕ ಮೆಜೆಸ್ಟಿಕ್ ರಾಮಮೂರ್ತಿ.

  ದರ್ಶನ್ ಅವರನ್ನು ಕೇಳಿಕೊಂಡೇ ಡೇಟ್ ಫಿಕ್ಸ್ ಮಾಡಿದ್ದೇನೆ. ಸದ್ಯಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ನಿರ್ದೇಶಕ, ತಾರಾಗಣ, ತಂತ್ರಜ್ಞರ ಆಯ್ಕೆಯೂ ಆಗಿಲ್ಲ. ಎರಡ್ಮೂರು ಕಥೆಗಳಿವೆ. ದರ್ಶನ್ ಮ್ಯಾನರಿಸಂ, ಇಮೇಜ್‍ಗೆ ಅನುಗುಣವಾದ ಕಥೆ ಸಿದ್ಧವಾಗುತ್ತಿದೆ ಎನ್ನುವುದು ರಾಮಮೂರ್ತಿ ಮಾತು.

  ಇತ್ತ ದರ್ಶನ್‍ಗೆ ತಾರಕ್ ಸಿನಿಮಾ ಮಾಡಿದ್ದ ದುಶ್ಯಂತ್, ``ಐವತ್ತೈದೋ.. ಐವತ್ತಾರೋ.. ಯಾವುದೇ ಆಗಲಿ, ನಂಬರ್ ಮುಖ್ಯ ಅಲ್ಲ. ಸಿನಿಮಾ ಮಾಡೋದು ಮುಖ್ಯ. ದರ್ಶನ್ ಕಾಲ್‍ಶೀಟ್ ಕೊಟ್ಟಿದ್ದಾರೆ. ತಾರಕ್ ನಿರ್ದೇಶಿಸಿದ್ದ ಮಿಲನ ಪ್ರಕಾಶ್ ಅವರೇ ಡೈರೆಕ್ಷನ್ ಮಾಡ್ತಾರೆ. ಸೆಪ್ಟೆಂಬರ್ ಅಥವಾ ನವೆಂಬರ್‍ನಲ್ಲಿ ಸಿನಿಮಾ ಶುರುವಾಗಲಿದೆ'' ಅಂತಾರೆ.

 • ಡಿಸೆಂಬರ್‍ನಲ್ಲಿ ದರ್ಶನ್ ಹೊಸ ಸಿನಿಮಾ

  darshan;s 51st moive

  ಚಾಲೆಂಜಿಂಗ್ ಸ್ಟಾರ್ ದರ್ಶನ್ 51ನೇ ಚಿತ್ರದ ಬಗ್ಗೆ ಸುದ್ದಿಗಳ ಮೇಲೆ ಸುದ್ದಿಗಳು ಬಂದಾಗ, ಸ್ವತಃ ದರ್ಶನ್ ಯಾವುದೂ ಫೈನಲ್ ಆಗಿಲ್ಲ. ಸ್ವಲ್ಪ ದಿನ ಸುಮ್ಮನಿರಿ ಎಂದಿದ್ದರು. ಈಗ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಿದೆ.

  ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದ ಚಿತ್ರಕ್ಕೆ ಸಿದ್ಧತೆಗಳು ಶುರುವಾಗಿದ್ದು, ಇದೇ ತಿಂಗಳ ಅಂತ್ಯಕ್ಕೆ ನಾಯಕಿಯ ಆಯ್ಕೆ ನಡೆಯಲಿದೆ. ಪಿ.ಕುಮಾರ್ ನಿರ್ದೇಶನದ ಚಿತ್ರ, ಪಕ್ಕಾ ಕಮರ್ಷಿಯಲ್ ಎಂದಿದ್ದಾರೆ ಬಿ.ಸುರೇಶ್.

  ಡಿಸೆಂಬರ್‍ನಲ್ಲಿ ಕುರುಕ್ಷೇತ್ರ ಚಿತ್ರದ ದರ್ಶನ್ ಭಾಗದ ದೃಶ್ಯಗಳ ಚಿತ್ರೀಕರಣ ಮುಗಿಯಲಿದೆ. ಅದಾದ ನಂತರ ದರ್ಶನ್ ಸುರೇಶ್ ನಿರ್ಮಾಣದ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

  Related Articles :-

  51, 52ನೇ ಸಿನಿಮಾ - ಸದ್ಯಕ್ಕೆ ಸುಮ್ಮನಿರಿ ಎಂದ ದರ್ಶನ್

 • ಡಿಸ್‍ಚಾರ್ಜ್ ಆದ ದರ್ಶನ್ ಹೇಳಿದ್ದೇನು..?

  darshan discharged from hospital

  ದರ್ಶನ್ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿದ್ದಾರೆ. ಸೆಪ್ಟೆಂಬರ್ 24ರಂದು ಅಪಘಾತದಲ್ಲಿ ಗಾಯಗೊಂಡಿದ್ದ ದರ್ಶನ್, ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್‍ಚಾರ್ಜ್ ಆಗಿದ್ದಾರೆ. ಬಲಗೈ ಮೂಳೆ ಮುರಿದಿರುವ ಕಾರಣ, ರಾಡ್ ಅಳವಡಿಸಲಾಗಿದೆ.

  10 ದಿನ ಸಂಪೂರ್ಣ ವಿಶ್ರಾಂತಿ ಪಡೆಯಬೇಕಿರುವ ದರ್ಶನ್, ಕನಿಷ್ಠ 6 ತಿಂಗಳು ಜಿಮ್ ಮಾಡುವಂತೆಯೇ ಇಲ್ಲ. ಭಾರದ ವಸ್ತುಗಳನ್ನು ಎತ್ತುವಂತಿಲ್ಲ. ವೈದ್ಯರ ಸಲಹೆ, ಸೂಚನೆ ಸಿಕ್ಕ ನಂತರ ಶೂಟಿಂಗ್‍ಗೆ ಹೋಗುವ ಬಗ್ಗೆ ತೀರ್ಮಾನಿಸುತ್ತೇನೆ ಎಂದಿದ್ದಾರೆ ದರ್ಶನ್.

  ಇದೇ ವೇಳೆ ಕಾರ್‍ನಲ್ಲಿ ನಾಲ್ವರಲ್ಲ, 6 ಜನರಿದ್ದರು. ಹುಡುಗಿಯೊಬ್ಬಳೂ ಇದ್ದಳು ಎಂಬ ಸುದ್ದಿಗಳಿಗೆ ತಮ್ಮದೇ ಸ್ಟೈಲ್‍ನಲ್ಲಿ ತಿರುಗೇಟು ಕೊಟ್ಟಿದ್ದಾರೆ. ಒಬ್ಬರಲ್ಲ ಸಾರ್.. ನಾಲ್ಕು ಜನ ಹುಡುಗೀರನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದೆ. ಹ್ಯಾಪಿನಾ ಸರ್ ಎಂದು ಮಾಧ್ಯಮದವರಿಗೇ ಪ್ರಶ್ನಿಸಿದ್ದಾರೆ ದರ್ಶನ್. ಕೆಲವು ಮಾಧ್ಯಮಗಳಲ್ಲಿ ತಮ್ಮ ಕಾರು ಅಪಘಾತದ ಬಗ್ಗೆ ಬರುತ್ತಿದ್ದ ವರದಿಗಳನ್ನು ನಗು ಬರುತ್ತಿತ್ತು ಎಂದಿದ್ದಾರೆ.

 • ಡೈನಮಿಕ್ ಸ್ಟಾರ್ ಗೆ ಯಜಮಾನ ಕೊಟ್ಟ ಅಚ್ಚರಿ..!

  darshan surprises devaraj

  ಡೈನಮಿಕ್ ಸ್ಟಾರ್ ದೇವರಾಜ್‍ಗೆ ಗುರುವಾರ ಹುಟ್ಟುಹಬ್ಬ. ಅದೂ 65ನೇ ವರ್ಷದ ಹುಟ್ಟುಹಬ್ಬ. ಪ್ರತೀ ವರ್ಷ ಹುಟ್ಟುಹಬ್ಬವನ್ನು ಮನೆ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಿದ್ದ ದೇವರಾಜ್, ಈ ಬಾರಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. ಯಜಮಾನ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ಬ್ಯುಸಿಯಾಗಿದ್ದ ದೇವರಾಜ್‍ಗೆ ಅಚ್ಚರಿಯೆಂಬಂತೆ ಕೇಕ್ ಬಂತು. ದರ್ಶನ್ ಬಂದ್ರು. ಇಡೀ ಚಿತ್ರತಂಡ ಬಂತು. 

  ದೇವರಾಜ್ ಅವರ ಹುಟ್ಟುಹಬ್ಬವನ್ನು ದರ್ಶನ್ ಸೆಲಬ್ರೇಟ್ ಮಾಡಿದ್ರು. ದೇವರಾಜ್ ಅವರಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ರು. ದೇವರಾಜ್ ಅವರಿಗೆ ಪ್ರಜ್ವಲ್ ದೇವರಾಜ್ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಶುಭ ಹಾರೈಸಿದ್ದಾರೆ.

 • ಡೈಲಾಗ್, ಕೌಂಟರ್ ಡೈಲಾಗ್​ಗೆ ದರ್ಶನ್ ಹೇಳಿದ್ದೇನು..?

  darshan clarifies on counter dialogue

  ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಸ್ಟಾರ್ ನಟರ ಚಿತ್ರಗಳ ಡೈಲಾಗುಗಳಿಗೆ ಅಭಿಮಾನಿಗಳು ವಿಶೇಷ ಅರ್ಥ ಕಲ್ಪಿಸಿಕೊಳ್ಳುತ್ತಿದ್ದಾರೆ. ಯಶ್ ಚಿತ್ರದಲ್ಲೊಂದು ಡೈಲಾಗ್ ಬಂದರೆ, ಅದನ್ನು ದರ್ಶನ್​ಗೆ ಹೇಳಿದ್ದಾರೆಂದೂ, ದರ್ಶನ್ ಚಿತ್ರದ ಡೈಲಾಗು ಇನ್ಯಾರಿಗೋ ಕೊಟ್ಟ ಸಂದೇಶವೆಂದು ಅಭಿಮಾನಿಗಳಲ್ಲಿ ಜಗಳ ನಡೆಯುವುದೂ ಇದೆ. ಆದರೆ, ಅಂಥವುಗಳಿಗೆಲ್ಲ ದರ್ಶನ್ ಫುಲ್​ಸ್ಟಾಪ್ ಇಟ್ಟಿದ್ದಾರೆ.

  ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿರುವ ದರ್ಶನ್, ನಾವು ಯಾರಿಗೋ ಡೈಲಾಗ್, ಕೌಂಟರ್ ಡೈಲಾಗ್ ಹೊಡೆಯಲ್ಲ. ಸಂಭಾಷಣೆ ಬರೆಯುವವರು ಡೈಲಾಗ್ ಕೊಟ್ಟಿರ್ತಾರೆ. ನಿರ್ದೇಶಕರು ಹೇಳಿಸ್ತಾರೆ. ಅಷ್ಟೆ. ಎಲ್ಲ ಹೊಟ್ಟೆಪಾಡಿನ ವಿಷಯ ಎಂದಿದ್ದಾರೆ.

  ನಾವು ಕಲಾವಿದರು, ಕಲಾವಿದರು ಮಾತ್ರ. ಯಾರು ಯಾರಿಗೂ ಕೌಂಟರ್ ಕೊಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ದರ್ಶನ್.

 • ತಮ್ಮನ ಚಿತ್ರಕ್ಕೆ ಕೊಡವರ ಗೀತೆಗೆ ದಚ್ಚು ಡ್ಯಾನ್ಸ್

  darshan rachita's kodava song released

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಡವನಾಗಿದ್ದಾರೆ. ಕೊಡವರೆಂದರೆ, ತಕ್ಷಣ ನೆನಪಾಗುವುದು ಜನರಲ್ ಕಾರಿಯಪ್ಪ, ತಿಮ್ಮಯ್ಯ. ಸಿನಿಮಾದಲ್ಲಿ ಕೊಡವರೆಂದರೆ ತಕ್ಷಣ ನೆನಪಾಗೋದು ಮುತ್ತಿನ ಹಾರ. ಕೊಡವರ ವೀರ.. ಹುಲಿ ಕೊಂದ ಧೀರ ಹಾಡು. ಈ ಬಾರಿ ಕೊಡವನಾಗಿ ಮುಂದೆ ಬಂದಿದ್ದಾರೆ ದರ್ಶನ್. ತಮ್ಮ ಅಮರ್ ಚಿತ್ರಕ್ಕಾಗಿ ದರ್ಶನ್ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.

  ಜೋರು ಪಾರು ಆಟ ಆಡೋಣ.. ಎಂಬ ಹಾಡು, ಸಂಪೂರ್ಣ ಕೊಡವ ಭಾಷೆಯಲ್ಲೇ ಇರುವುದು ವಿಶೇಷ. ಕಿರಣ್ ಕಾವೇರಪ್ಪ ಬರೆದಿರೋ ಹಾಡಿಗೆ ಧ್ವನಿ ನೀಡಿರುವುದು ಜೆಸ್ಸಿ ಗಿಫ್ಟ್. ಅರ್ಜುನ್ ಜನ್ಯ ಸಂಗೀತದ ಹಾಡು ಅದ್ಭುತವಾಗಿದೆ ಅನ್ನೋದು ನಿರ್ದೇಶಕ ನಾಗಶೇಖರ್ ಸರ್ಟಿಫಿಕೇಟ್. ನಾಗಶೇಖರ್ ನಿರ್ದೇಶನದ ಚಿತ್ರಗಳಲ್ಲಿ ಹಾಡು ಕೇಳುವಂತಿರುತ್ತವೆ ಹಾಗೂ ಕಣ್ಣು ಮಿಸುಕದೆ ನೋಡುವಂತಿರುತ್ತವೆ. ಹೀಗಾಗಿ ಹಾಡು ಹೇಗೆ ಬಂದಿರಬಹುದು ಅನ್ನೋ ಕುತೂಹಲ ಕನ್ನಡಿಗರಿಗೂ ಇದೆ.

 • ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  i am not tarak hero

  ತಾರಕ್, ದರ್ಶನ್ ಅಭಿನಯದ 49ನೇ ಚಿತ್ರ. ಚಿತ್ರದ ಹೀರೋ ಅವರೇ. ಹೀಗಿರುವಾಗ ಚಿತ್ರದ ಹೀರೋ ನಾನಲ್ಲ  ಎಂದು ದರ್ಶನ್ ಅವರೇ ಹೇಳಿದರೆ ಏನಪ್ಪಾ ಕಥೆ ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ದರ್ಶನ್ ಪ್ರಕಾರ ಚಿತ್ರದ ಹೀರೋ ಡೈನಮಿಕ್ ಸ್ಟಾರ್ ದೇವರಾಜ್. 

  ತಾರಕ್ ಚಿತ್ರದ ಆಡಿಯೋ ಬಿಡುಗಡೆ ವೇಳೆ, ದೇವರಾಜ್ ಅವರ ಪ್ರೀತಿ ಮತ್ತು ಪಾತ್ರವನ್ನು ಪ್ರೀತಿಯಿಂದ ಮೆಚ್ಚಿಕೊಂಡ ದರ್ಶನ್, ದೇವರಾಜ್ ಅವರನ್ನು ಹೊಗಳಿದರು. ದೇವರಾಜ್ ತಮಗಿಂತ ಎತ್ತರದ ಸ್ಥಾನದಲ್ಲಿದ್ಧಾರೆ ಎಂದು ಹೇಳಿ ಪ್ರೀತಿಯಿಂದ ಧನ್ಯವಾದ ಅರ್ಪಿಸಿದರು ದರ್ಶನ್.

  ಚಿತ್ರದಲ್ಲಿ ದೇವರಾಜ್ ದರ್ಶನ್ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಫುಟ್​ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಈ ಚಿತ್ರದಲ್ಲಿ ಹಳೆಯ ದರ್ಶನ್ ಸಿಕ್ಕೋದಿಲ್ಲ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ನಟ ದರ್ಶನ್ ಅವರನ್ನಷ್ಟೇ ನೋಡಬಹುದು ಎನ್ನುವ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದ್ರು ದರ್ಶನ್.

 • ತಾರಕ್ ಜೊತೆ ಬಂದ ದುರ್ಯೋಧನ

  kuruk teaser

  ತಾರಕ್ ಚಿತ್ರ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರವೇಶವಾಗಿದೆ. ಫ್ಯಾಮಿಲಿ ಮತ್ತು ಆಕ್ಷನ್ ಮಿಶ್ರಿತ ಸಿನಿಮಾ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಇದೆಲ್ಲದರ ಜೊತೆ ದರ್ಶನ್​ ಅಭಿಮಾನಿಗಳಿಗೆ ಡಬಲ್ ಧಮಾಕ. ತಾರಕ್ ಜೊತೆ ಅವರಿಗೆ ದುರ್ಯೋಧನನ ದರ್ಶನವೂ ಆಗಿದೆ. ತಾರಕ್ ಚಿತ್ರಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರದ ಟೀಸರ್ ಪ್ರದರ್ಶನವಾಗಿವೆ.

  ದುರ್ಯೋಧನನ ರಾಜಭವನ ಪ್ರವೇಶ, ದರ್ಶನ್​ರ ಆ ಠೀವಿ, ಹಿನ್ನೆಲೆಯಲ್ಲಿ ಕೇಳಿ ಬರುವ ಸಾರ್ವಭೌಮ ದುರ್ಯೋಧನ ಎಂಬ ಧ್ವನಿ, ದರ್ಶನ್​ ಗಹಗಹಿಸಿ ನಗುವ ಆ ನಗು ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹಚ್ಚಿರುವುದು ಸುಳ್ಳಲ್ಲ. ತಾರಕ್ ಎಂಜಾಯ್ ಮಾಡುತ್ತಲೇ ಕುರುಕ್ಷೇತ್ರಕ್ಕಾಗಿ ಕಾಯುವಂತೆ ಮಾಡಿದ್ದಾರೆ ದರ್ಶನ್.

 • ತಾರಕ್ ಡ್ಯಾನ್ಸ್ ಮಾಡಿ, ಬಹುಮಾನ ಗೆಲ್ಲಿ

  tarak dance competition

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ. ಆ ಕಾತುರಕ್ಕೆ ಕಿಚ್ಚು ಹಚ್ಚುವಂತೆ ವಿಶೇಷ ಅವಕಾಶವೊಂದನ್ನು ಒದಗಿಸಿದೆ ತಾಕರ್ ಚಿತ್ರತಂಡ.

  ತಾರಕ್ ಚಿತ್ರಗಳ ಹಾಡಿಗೆ ನೃತ್ಯ ಮಾಡುವುದು ಹಾಗೂ ಬಹುಮಾನ ಗೆಲ್ಲುವುದು. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 10 ಸಾವಿರ ರೂ. ನೀವು ಮಾಡಬೇಕಾದ್ದು ಇಷ್ಟೆ..ತಾರಕ್ ಚಿತ್ರದ ಯಾವುದಾದರೂ ಹಾಡನ್ನು ಆಯ್ಕೆ ಮಾಡಿಕೊಳ್ಳಿ. ಆ ಹಾಡಿಗೆ ನಿಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿ. ಅದನ್ನು ವಿಡಿಯೋ ಮಾಡಿ ಕಳುಹಿಸಿಕೊಡಿ. 

  ನಿಮ್ಮ ನೃತ್ಯದ ವಿಡಿಯೋಗಳನ್ನು  This email address is being protected from spambots. You need JavaScript enabled to view it.ಗೆ ಮೇಯ್ಲ್ ಮಾಡಿ. ವಿಡಿಯೋ ಕಳುಹಿಸಿಕೊಡಲು ಕೊನೆಯ ದಿನ ಸೆಪ್ಟೆಂಬರ್ 29.

 • ತಾರಕ್ ತರುಣಿಯರು..ಅವರು ಹಂಗೆ..ಇವರು ಹಿಂಗೆ..

  tarak movie image

  ತಾರಕ್ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರೂ ನಾಯಕಿಯರು. ಆ ಇಬ್ಬರು ಸುಂದರಿಯರಲ್ಲಿ ದರ್ಶನ್ ಒಲಿಯುವುದು ಯಾರಿಗೆ..? ಅದನ್ನು ನಿರ್ದೇಶಕ ಮಿಲನ ಪ್ರಕಾಶ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸಿನಿಮಾ ರಿಲೀಸ್ ಆಗುವವರೆಗೂ ಅದು ಗೊತ್ತಾಗಲ್ಲ. ಆದರೆ, ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರು ಅನುಭವಿಸಿದ ಕಷ್ಟವೇ ಬೇರೆ.

  ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅವರದ್ದು ಬಬ್ಲಿ ಬಬ್ಲಿ ಪಾತ್ರ. ಪಟಪಟನೆ ಮಾತನಾಡುವ ತುಂಟಾಟದ ಹುಡುಗಿ. ಎನ್‍ಆರ್‍ಐ ಬೇರೆ. ಶಾನ್ವಿಯನ್ನು ನೋಡಿದವರು, ಅವರು ಹಾಗೇನೇ ಇರ್ತಾರೆ ಬಿಡಿ ಅಂದ್ಕೋತಾರೆ. ಆದರೆ, ರಿಯಲ್ ಲೈಫಲ್ಲಿ ಶಾನ್ವಿ ಅದಕ್ಕೆ ಪೂರ್ತಿ ಉಲ್ಟಾ. ಸಿಕ್ಕಾಪಟ್ಟೆ ಸೈಲೆಂಟು.

  ಇನ್ನು ಅದೇ ಚಿತ್ರದಲ್ಲಿ ಶೃತಿ ಹರಿಹರನ್ ಅವರದ್ದು ಸೈಲೆಂಟ್ ಗರ್ಲ್ ಪಾತ್ರ. ಆದರೆ, ಅದಕ್ಕೆ ಕಂಪ್ಲೀಟ್ ಉಲ್ಟಾ ವ್ಯಕ್ತಿತ್ವ ಶೃತಿ ಅವರದ್ದು. ಕಲ್ಲನ್ನೂ ಕೂಡಾ ಕರಗಿಸಿ, ಅದಕ್ಕೆ ಮಾತು ಬರಿಸುವ ಕಲೆ ಶೃತಿ ಅವರಿಗೆ ಅದು ಹೇಗೋ ಸಿದ್ಧಿಸಿಬಿಟ್ಟಿದೆ. ಅವರಿದ್ದ ಕಡೆ, ನಗು, ಉಲ್ಸಾಸ, ಉತ್ಸಾಹಗಳಿಗೆ ಬರವಿಲ್ಲ. 

  ಹೀಗೆ ಕಲಾವಿದೆಯರ ವೊರಿಜಿನಲ್ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ ಕೊಟ್ಟು ಗೆದ್ದಿದ್ದಾರೆ ಪ್ರಕಾಶ್. ಇನ್ನು ಚಿತ್ರವನ್ನು ಗೆಲ್ಲಿಸುವ ಹೊಣೆ ದಾಸನ ಅಭಿಮಾನಿಗಳದ್ದು.

  Related Articles :-

  ಮನೆಯಲ್ಲೇ ತಾರಕೋತ್ಸವ ಕಣ್ತುಂಬಿಕೊಳ್ಳಿ..

  ಧೋನಿಗೂ ದರ್ಶನ್​ಗೂ ತಾರಕ್ ಲಿಂಕ್

  Tarak To Release On Sep 29th

  Tarak Teaser Gets Huge Response

  ದರ್ಶನ್ ತಾರಕ್ ಟ್ರೇಲರ್ ಸಖತ್ತಾಗಿದೆ ಗುರೂ..

  ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  Tarak Songs Released

  Tarak Songs To Release Today

  Tarak Will Have 6 Audio Teasers

  Darshan Off To Switzerland For Tarak Shooting

 • ತಾರಕ್ ತಾರಾಗಣದಲ್ಲಿ ಕಲಾವಿದರ ಹಬ್ಬ

  tarak movie image

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳಲ್ಲಿ ತಾರಕ್‍ನ ವಿಶೇಷತೆಯೇ ಬೇರೆ. ಈ ಚಿತ್ರದಲ್ಲಿ ದರ್ಶನ್ ಜೊತೆಗೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರೆಲ್ಲ ಸೇರಿ ಹಬ್ಬವನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಇತ್ತೀಚೆಗೆ ರಾಜಕುಮಾರ, ಮುಗುಳುನಗೆ ಚಿತ್ರಗಳಲ್ಲಿ ಇಂಥಾದ್ದೊಂದು ಜಾತ್ರೆ ಸೇರಿತ್ತು. ಅದೀಗ ತಾರಕ್‍ನಲ್ಲಿಯೂ ಮುಂದುವರೆದಿದೆ. 

  ಹಾಗೇ ನೋಡಿ, ದರ್ಶನ್, ಚಿತ್ರದ ಹೀರೋ. ಚಿತ್ರಕ್ಕಾಗಿ ಮೈಕಟ್ಟನ್ನೆಲ್ಲ ಹುರಿಗೊಳಿಸಿ ತಯಾರಾಗಿದ್ದಾರೆ. ಇನ್ನು ದರ್ಶನ್ ತಾತನಾಗಿರುವ ಡೈನಮಿಕ್ ಸ್ಟಾರ್ ದೇವರಾಜ್, 80ರ ವಯಸ್ಸಿನ ಅಜ್ಜನ ಪಾತ್ರದಲ್ಲಿದ್ದಾರೆ. ಅಷ್ಟು ದೊಡ್ಡ ವಯಸ್ಸಿನ ವೃದ್ಧನಾಗಿ ನಟಿಸುತ್ತಿರುವುದು ದೇವರಾಜ್‍ಗೂ ಹೊಸ ಅನುಭವ.

  ಇನ್ನು ಶೃತಿ ಹರಿಹರನ್ ನಾಯಕಿ. ಈ ರಾಜ್ಯ ಪ್ರಶಸ್ತಿ ವಿಜೇತ ನಟಿಗೆ ದರ್ಶನ್ ಜೊತೆ ಮೊದಲ ಚಿತ್ರ. ಇನ್ನು ಸ್ಯಾಂಡಲ್‍ವುಡ್‍ನ ಸುಂದರ ದೆವ್ವ ಎಂದೇ ತಮಾಷೆಯಿಂದ ಕರೆಯಲ್ಪಡುತ್ತಿರುವ ಶಾನ್ವಿ ಶ್ರೀವಾಸ್ತವ್ ಚಿತ್ರದ ಇನ್ನೊಬ್ಬ ನಾಯಕಿ. 

  ದೇವರಾಜ್ ಅಳಿಯನ ಪಾತ್ರದಲ್ಲಿ ಅವಿನಾಶ್, ಅವರ ಪತ್ನಿಯಾಗಿ ಚಿತ್ರಾ ಶೆಣೈ, ಅರವಿಂದ್, ಭಾಗ್ಯಶ್ರೀ, ಕುಲದೀಪ್, ರಕ್ಷಾ ಹೊಳ್ಳ, ಕುರಿ ಪ್ರತಾಪ್..ಹೀಗೆ ಕಲಾವಿದರ ದಂಡೇ ಇದೆ.

  ಚಿತ್ರದಲ್ಲಿ ವಸ್ತ್ರ ವಿನ್ಯಾಸ ಮಾಡಿರುವುದು ನಿರ್ದೇಶಕ ಪ್ರಕಾಶ್ ಅವರ ಪತ್ನಿ ಅಶ್ವಿನಿ ಹಾಗೂ ಅವರ ಸ್ನೇಹಿತೆ ಪ್ರತೀಕ್ಷಾ. ಒಟ್ಟಿನಲ್ಲಿ ತಾರಕ್ ನೋಡಿದರೆ, ಹಬ್ಬದ ಮನೆ ನೋಡಿದಂತಾಗುವುದು ಸುಳ್ಳಲ್ಲ.

 • ತಾರಕ್​ಗೂ ಪೈರಸಿ ಕಾಟ

  tarak movie image

  ಚಾಲೆಂಜಿಂಗ್ ಸ್ಟಾರ್ ಅಭಿನಯದ ತಾರಕ್ ಚಿತ್ರ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದರ್ಶನ್​ರ ಲುಕ್ ಹಾಗೂ ಚಿತ್ರದ ಕಥೆ ಬಗ್ಗೆ ಎಲ್ಲ ಕಡೆ ಪಾಸಿಟಿವ್ ಅಭಿಪ್ರಾಯಗಳೇ ಬರತ್ತಿವೆ. ಚಿತ್ರ ದೊಡ್ಡ ಮಟ್ಟದ ಹಿಟ್ ಆಗುವ ಮುನ್ಸೂಚನೆ ಕೊಟ್ಟಿದೆ.

  ಆದರೆ, ಚಿತ್ರಕ್ಕೆ ಆಗಲೇ ಪೈರಸಿ ಕಾಟ ಶುರುವಾಗಿದೆ. ಚಿತ್ರವನ್ನು ಮೊದಲ ದಿನವೇ ಚಿತ್ರಮಂದಿರಲದಲ್ಲಿ ನೋಡಿರುವ ಕೆಲವರು, ಚಿತ್ರದ ಕೆಲವು ದೃಶ್ಯಗಳನ್ನು ರೆಕಾರ್ಡ್ ಮಾಡಿ, ಫೇಸ್​ಬುಕ್​ಗೆ ಬಿಟ್ಟಿದ್ದಾರೆ. ಚಿತ್ರದ ಕೆಲವು ದೃಶ್ಯಗಳು, ರಗ್ಬಿ ಆಡುವ ದೃಶ್ಯಗಳ ತುಣುಕುಗಳು ಫೇಸ್​ಬುಕ್​ನಲ್ಲಿ ಹರಿದಾಡುತ್ತಿವೆ.

  ಇದು ಈಗಾಗಲೇ ಚಿತ್ರತಂಡಕ್ಕೂ ಗೊತ್ತಾಗಿದೆ. ಲೀಕ್ ಮಾಡಿರುವುದು ಯಾರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಚಿತ್ರತಂಡದ ಹಾಗೂ ಚಿತ್ರಲೋಕದ ಮನವಿ ಇಷ್ಟೆ. ಒಂದು ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಿರುತ್ತಾರೆ. ಆದರೆ, ಈ ರೀತಿಯ ಘಟನೆಗಳು ಚಿತ್ರವನ್ನಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೂ ಹಾನಿಕರ.  ಇಂತಹ ಘಟನೆಗಳು  ಅಭಿಮಾನದಿಂದ ನಡೆದಿರುತ್ತವೋ, ದುರುದ್ದೇಶದಿಂದಲೇ ನಡೆದಿರುತ್ತವೋ ಬೇರೆ ಮಾತು. ಅದರಿಂದ ಚಿತ್ರಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಿ, ಚಿತ್ರರಂಗವನ್ನು ಬೆಳೆಸಿ, ಉಳಿಸಿ ಎಂಬುದಷ್ಟೇ ಎಲ್ಲರ ಮನವಿ.

 • ತಾರಕ್​ಗೆ ಗಾಂಧಿನಗರದ ಶುಭಾಶಯ

  tarak movie image

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಯಶಸ್ವಿಯಾಗಲಿ, ಶತದಿನೋತ್ಸವ ಆಚರಿಸಲಿ, ರಜತ ಮಹೋತ್ಸವ ಕಾಣಲಿ..ಇದು ಅಭಿಮಾನಿಗಳ ಹಾರೈಕೆ ಮತ್ತು ನಿರೀಕ್ಷೆ. ಆದರೆ, ತಾರಕ್​ಗೆ ಶುಭ ಹಾರೈಸಿರುವುದು ಕೇವಲ ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದ ಹಲವರು ದರ್ಶನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

  ನವರಸ ನಾಯಕ ಜಗ್ಗೇಶ್, ಮನೋರಂಜನ್ ರವಿಚಂದ್ರನ್, ಪ್ರೇಮ್, ರಕ್ಷಿತಾ ಪ್ರೇಮ್, ದಿ ವಿಲನ್ ಚಿತ್ರತಂಡ, ಕೌರವ ಚಿತ್ರತಂಡ ಸೇರಿದಂತೆ ಹಲವರು ಚಿತ್ರವು ಯಶಸ್ಸು ಕಾಣಲಿ ಎಂದು ಶುಭ ಕೋರಿದ್ದಾರೆ.

 • ತಾರಕ್‍ನಲ್ಲಿ ದರ್ಶನ್‍ಗೆ ದೇಸೀ..ವಿದೇಶಿ ರಸಗವಳ

  desi videshi mix in tarak

  ತಾರಕ್ ಚಿತ್ರ ರಿಲೀಸ್‍ಗೆ ಹತ್ತಿರವಾಗುತ್ತಿದ್ದಂತೆ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಅಭಿಮಾನಿಗಳಿಗೆ ಆ ಕುತೂಹಲ ಡಬಲ್ ಆಗಿದೆ. ಚಿತ್ರದಲ್ಲಿ ದರ್ಶನ್ ವಿದೇಶಿ ಹುಡುಗ. ಅಂದರೆ, ಭಾರತದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಪಾತ್ರ. ಚಿತ್ರದ ಕಥೆಯೂ ಅದೇ. ವಿದೇಶದಲ್ಲಿ ನೆಲೆಸಿರುವವರ ಸಂಭ್ರಮ, ಸಂಕಟ, ತಾಕಲಾಟ, ಸಂಬಂಧಗಳ ಕುರಿತಾದದ್ದು. 

  ಹಾಗಂತ ಸಿನಿಮಾ ಪೂರ್ತಿ ಅಲ್ಲಿಯೇ ಇರಲ್ಲ. ಸ್ವದೇಶಕ್ಕೆ ಬರುತ್ತೆ. ಹೀಗಾಗಿ ದರ್ಶನ್‍ಗೆ ಚಿತ್ರದಲ್ಲಿ ಎರಡುಮೂರು ಗೆಟಪ್‍ಗಳಿವೆ. ಸ್ವದೇಶಕ್ಕೆ ಬರುವ ನಾಯಕ, ಆತನ ತಾತ, ಮತ್ತವರ ಕುಟುಂಬದ ಜೊತೆ ದರ್ಶನ್ ಜರ್ನಿಯೇ ಸಿನಿಮಾ ಸ್ಟೋರಿ. ದರ್ಶನ್ ಕೇರ್‍ಟೇಕರ್‍ಗಳಾಗಿ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ.

  ದರ್ಶನ್ ಮಾಸ್ ಹೀರೋ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಮಾಡದ ರೀತಿಯಲ್ಲಿ ಫೈಟ್ಸ್, ಡೈಲಾಗ್ಸ್ ಇವೆ. ಹಾಗೆಂದು ಸಂಪೂರ್ಣವಾಗಿ ಇದು ರೆಗ್ಯುಲರ್ ದರ್ಶನ್ ಸಿನಿಮಾ ಅಲ್ಲ. ಮಿಲನ ಪ್ರಕಾಶ್ ಅವರ ಫ್ಯಾಮಿಲಿ ಟಚ್ ಕೂಡಾ ಚಿತ್ರದಲ್ಲಿದೆ. ಹೀಗಾಗಿ ತಾರಕ್ ರಸಗವಳವಾಗುವುದು ಗ್ಯಾರಂಟಿ.

  Related Articles :-

  ತಾರಕ್ : ಬಾವ ಬಾಮೈದರೇ ನಿರ್ಮಾಪಕ, ನಿರ್ದೇಶಕ

  ಶಾನ್ವಿಗೇಕೆ ಪದೇ ಪದೇ ದೆವ್ವ ಹಿಡಿಯುತ್ತೆ..?

  ದರ್ಶನ್‍ಗೆ ಅಜ್ಜನಾಗಲು ದೇವರಾಜ್ ಒಪ್ಪಿದ್ದು ಹೇಗೆ..?

  ತಾರಕ್ ತಾರಾಗಣದಲ್ಲಿ ಕಲಾವಿದರ ಹಬ್ಬ

  ಸೈಲೆಂಟ್ ಸುನಾಮಿಯಾಗುತ್ತಿದೆ ತಾರಕ್

  ಸಖತ್ತಾಗಿದೆ ತಾರಕ್ ಟ್ರೇಲರ್

  ಇಬ್ಬರು ಮಹಾಮೌನಿಗಳ ಮಿಲನ ತಾರಕ್

  ಯೂರೋಪ್‍ನ 20 ಸ್ಥಳಗಳಲ್ಲಿ ತಾರಕ್

 • ತಾರಕ್‍ನಲ್ಲಿ ದೇವರಾಜ್ ಅವರೇ ಹೀರೋ - ದರ್ಶನ್

  devraj is real hero says darshan

  ತಾರಕ್ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಆಗಿ ನಟಿಸಿರುವ ಸಿನಿಮಾ. ಆದರೆ, ದರ್ಶನ್ ಹೇಳೋದೇ ಬೇರೆ. ಒಂದ್ಸಲ ಸಿನಿಮಾ ನೋಡಿ. ನಿಮಗೇ ಗೊತ್ತಾಗುತ್ತೆ. ಸಿನಿಮಾದ ರಿಯಲ್ ಹೀರೋ ಡೈನಮಿಕ್ ಸ್ಟಾರ್ ದೇವರಾಜ್ ಅಂತಾರೆ ದರ್ಶನ್.

  ದೇವರಾಜ್‍ರಂತ ಹಿರಿಯ ಕಲಾವಿದ 80 ವರ್ಷದ ಅಜ್ಜನ ಪಾತ್ರಕ್ಕೆ ಒಪ್ಪಿಕೊಂಡಿದ್ದೇ ದರ್ಶನ್‍ಗೆ ಖುಷಿ ಕೊಟ್ಟಿದೆ. ತಾತನ ಗೆಟಪ್‍ನಲ್ಲಿ ದೇವರಾಜ್ ಅವರ ನಟನೆ ನೋಡಿದರೆ, ಚಿತ್ರದ ಹೀರೋಗಿರಿಯನ್ನ ದೇವರಾಜ್‍ಗೇ ಕೊಡ್ತಾರೆ ಅನ್ನೋದು ದರ್ಶನ್ ಮಾತು.

  ಸ್ವತಃ ಚಿತ್ರದ ನಾಯಕನಾಗಿದ್ದರೂ, ಚಿತ್ರದ ಹಿರಿಯ ಕಲಾವಿದರ ಬಗ್ಗೆ ದರ್ಶನ್ ಆಡಿರುವ ಮಾತುಗಳು, ದರ್ಶನ್ ಅವರ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತಿವೆ. 

 • ತೂಗುದೀಪ ಫ್ಯಾಮಿಲಿಯಿಂದ ಇನ್ನೊಬ್ಬ ಹೀರೋ

  darshan relative o enter films

  ತೂಗುದೀಪ ಶ್ರೀನಿವಾಸ್ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೂರದ ಸಂಬಂಧಿಯಾಗಿರುವ ಮನೋಜ್, ಈಗ ಹೀರೋ ಆಗಿ ತೆರೆಗೆ ಬರುತ್ತಿದ್ದಾರೆ. ದರ್ಶನ್ ಜೊತೆ ಅಂಬರೀಷ, ಚಕ್ರವರ್ತಿ ಸಿನಿಮಾಗಳಲ್ಲಿ ನಟಿಸಿರುವ ಮನೋಜ್, ದರ್ಶನ್ ಅವರಷ್ಟೇ ಹೈಟ್ ಇದ್ದಾರೆ. ಪರ್ಸನಾಲಿಟಯೂ ಜಬರ್‍ದಸ್ತಾಗಿದೆ.

  ಸದ್ಯಕ್ಕೆ ಮನೋಜ್ ಅರವಿಂದ್ ಕೌಶಿಕ್ ಅವರ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸುತ್ತಾಡುತ್ತಿದೆ. ಆದರೆ, ಅಧಿಕೃತವಾಗಿಲ್ಲ.

   

   

#

Adi Lakshmi Purana Movie Gallery

Rightbanner02_butterfly_inside

Yaana Movie Gallery