` darshan, - chitraloka.com | Kannada Movie News, Reviews | Image

darshan,

 • ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

  shivarajkumar, darshan

  ದರ್ಶನ್ ಅಭಿನಯದ 50ನೇ ಚಿತ್ರ, ಸೆಟ್ಟೇರುವ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ. ದರ್ಶನ್ ಅಭಿನಯದ 50ನೇ ಚಿತ್ರ ಎಂಬುದಷ್ಟೇ ಕಾರಣವಲ್ಲ, ಕನ್ನಡದಲ್ಲಿ ಪೌರಾಣಿಕ ಚಿತ್ರವೊಂದು ಎಷ್ಟೋ ವರ್ಷಗಳ ನಂತರ ದೊಡ್ಡ ಮಟ್ಟದಲ್ಲಿ ಸೆಟ್ಟೇರುತ್ತಿರುವುದು ಕೂಡಾ ಕುತೂಹಲಕ್ಕೆ ಕಾರಣ. ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಬೇಕಿತ್ತು. ಆದರೆ, ನಟಿಸುತ್ತಿಲ್ಲ. ಆಫರ್​ನ್ನು ನಿರಾಕರಿಸಿರುವ ಶಿವಣ್ಣ, ಅದಕ್ಕೆ ಕಾರಣಗಳನ್ನೂ ಕೊಟ್ಟಿದ್ದಾರೆ. ಕುರುಕ್ಷೇತ್ರದ ಸಂಪೂರ್ಣ ವಿವರವನ್ನು ಹೇಳಿಕೊಂಡಿದ್ದಾರೆ.

  ಅರ್ಜುನನ ಪಾತ್ರವಲ್ಲ, ಕರ್ಣನ ಪಾತ್ರಕ್ಕೆ ಆಫರ್

  ಎಲ್ಲರೂ ಅಂದುಕೊಂಡಿದ್ದಂತೆ ಶಿವರಾಜ್​ ಕುಮಾರ್​ಗೆ ಬಂದಿದ್ದದ್ದು ಅರ್ಜುನನ ಪಾತ್ರವಲ್ಲ. ಕರ್ಣನ ಪಾತ್ರವಲ್ಲ. ಕರ್ಣ ಮತ್ತು ದುರ್ಯೋಧನರ ಸ್ನೇಹದ ಬಗ್ಗೆ ಮಹಾಭಾರತದಲ್ಲಿ ಅದ್ಭುತ ಕಥೆಯಿದೆ. 

  ಡೇಟ್ ಸಮಸ್ಯೆ

  ಬಹುಶಃ ಕನ್ನಡದಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟರೆಂದರೆ, ಅದು ಶಿವರಾಜ್ ಕುಮಾರ್ ಮಾತ್ರ. ಸದ್ಯಕ್ಕೆ "ದಿ ವಿಲನ್‌', "ಟಗರು' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾಸ್ ಲೀಡರ್ ಬಿಡುಗಡೆ ಹಂತದಲ್ಲಿದೆ. ಕೈಯಲ್ಲಿ 10ಕ್ಕೂ ಹೆಚ್ಚು ಚಿತ್ರಗಳಿವೆ. ಅಷ್ಟು ಚಿತ್ರಗಳ ಮಧ್ಯೆ ಕುರುಕ್ಷೇತ್ರಕ್ಕೆ ಡೇಟ್ಸ್ ಹೊಂದಾಣಿಕೆ ಸಾಧ್ಯವಾಗಿಲ್ಲ

  ತೂಕದ ಸಮಸ್ಯೆ

  ಎಲ್ಲರಿಗೂ ಗೊತ್ತಿರುವಂತೆ ಕರ್ಣ ಮಹಾರಥಿ ಯೋಧ. ಅಪ್ರತಿಮ ವೀರ. ಆ ಪಾತ್ರಕ್ಕೆ ಅಭಿನಯದಷ್ಟೇ ದೇಹದಾರ್ಢ್ಯತೆಯೂ ಮುಖ್ಯ. ಶಿವರಾಜ್ ಕುಮಾರ್ ನೋಡಿದರೆ ಸ್ಲಿಮ್ & ಸ್ಮಾರ್ಟ್. ಕರ್ಣನ ಪಾತ್ರಕ್ಕೆ ಏನಿಲ್ಲವೆಂದರೂ 5 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. 67 ಕೆಜಿ ತೂಕವಿರುವ ಶಿವಣ್ಣ, 72 ಕೆಜಿಗೆ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಈಗಿನ ಸ್ಥಿತಿಯಲ್ಲಿ ಅದು ಅಸಾಧ್ಯ ಎಂದು ಹೇಳಿದ್ದಾರೆ ಶಿವರಾಜ್​ ಕುಮಾರ್.

  ಯಾವ ವೈರತ್ವವೂ ಇಲ್ಲ

  ದರ್ಶನ್‌ ಜೊತೆಗೆ ನಟಿಸಬೇಕು ಎಂಬ ಕಾರಣಕ್ಕೆ ಸಿನಿಮಾ ಬಿಡಲಿಲ್ಲ. ನಿಜ ಹೇಳಬೇಕೆಂದರೆ, ಕರ್ಣನ ಪಾತ್ರವನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಮಹಾಭಾರತದಲ್ಲಿ ಕರ್ಣ, ದುರ್ಯೋಧನರ ಮಧ್ಯೆ ಎಂತಹ ಸ್ನೇಹವಿತ್ತೋ ಅಂಥದ್ದೇ ಸ್ನೇಹ ನಮ್ಮಿಬ್ಬರ ಮಧ್ಯೆ ಈಗಲೂ ಇದೆ. ದರ್ಶನ್​ರನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದೇನೆ. ನಾವಿಬ್ಬರೂ ಈಗಲೂ ಸ್ನೇಹಿತರು.

  ದರ್ಶನ್ ಅದ್ಭುತವಾಗಿ ನಟಿಸುತ್ತಾರೆ

  ಅದು ನನ್ನ ನಂಬಿಕೆ. ದರ್ಶನ್‌ ಅವರ ಜೀನ್ಸ್‌ನಲ್ಲೇ ಆ ಶಕ್ತಿಯಿದೆ. ದುರ್ಯೋಧನನ ಪಾತ್ರವನ್ನು ದರ್ಶನ್‌ ಅದ್ಭುತವಾಗಿ ನಿರ್ವಹಿಸುತ್ತಾರೆ ಎಂಬ ನಂಬಿಕೆ ನನ್ನದು. ದರ್ಶನ್ ಕೆಪ್ಯಾಸಿಟಿಗೆ ಆ ತರಹದ ಪಾತ್ರಗಳು ಅತ್ಯಂತ ಸುಲಭ ಎಂದಿದ್ದಾರೆ ಶಿವಣ್ಣ. ಕುರುಕ್ಷೇತ್ರ ಚಿತ್ರ ಅದ್ಭುತವಾಗಿ ಮೂಡಿಬರಲಿ ಎಂದು ಶುಭ ಹಾರೈಸಿದ್ದಾರೆ.

  Actor Shivarajakumar who is back from London after acting in 'The Villain', says that he couldn't act in 'Kurukshetra' because of date clash and he is missing the role of Karna very much.

  'I was offered the role of Karna in the movie, but I couldn't act in the film because of date clash. I have given the dates for 'The Villain' and 'Tagaru'. Moreover, I had to increase my weight, which I cannot do now. Firstly, I need some time to gain my weight and if I increase my weight, then I would become a problem from other films' said Shivarajakumar.

  Shivarajakumar said his decision to opt out of the film has nothing to do with Darshan. 'I and Darshan are very good friends and I know him from many years. Our friendship is like of Duryodhana and Karna's and I am very much missing an opportunity to act with him' said Shivarajakumar.

 • ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

  haripriya in kurukshetra

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಕುರುಕ್ಷೇತ್ರ ಸಿನಿಮಾಕ್ಕೆ ಇಬ್ಬರು ನಾಯಕಿಯರ ಆಗಮನವಾಗಿದೆ..ಇದು ದರ್ಶನ್ಗೆ 50 ನೇ ಸಿನಿಮಾ, ಅದೂ ಮಹಾಭಾರತದ ಗದಾಯುದ್ಧ ದ ಕಥೆಯಿರುವ ಚಿತ್ರ. ದರ್ಶನ್ ದುರ್ಯೋಧನನಾಗಿದ್ದಾರೆ.

  ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು ಹರಿಪ್ರಿಯ. ದರ್ಶನ್ ಜೊತೆಗೆ ಇದು ಹರಿಪ್ರಿಯಾಗೆ ಮೊತ್ತ ಮೊದಲ ಚಿತ್ರ. ಆದರೆ, ಚಿತ್ರದ ಪ್ರಮುಖ ಪಾತ್ರವಾದ ದ್ರೌಪದಿ ಪಾತ್ರ ಅಲ್ಲವಂತೆ. ನರ್ತಕಿಯ ಪಾತ್ರವಂತೆ. ಆದರೆ, ಪಾತ್ರದಲ್ಲಿ ಅಭಿನಯಕ್ಕೆ ಒಳ್ಳೆಯ ಅವಕಾಶ ಇರುವ ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ಹರಿಪ್ರಿಯ. ಇನ್ನು  ಕುರುಕ್ಷೇತ್ರ ಸಿನಿಮಾಗೆ ಸಿಕ್ಕ ಮತ್ತೊಬ್ಬ ನಟಿ ರೆಜಿನಾ..ತೆಲುಗು ನಟಿಯಾದ್ರೂ ಕನ್ನಡದ ಸುರ್ಯಕಾಂತಿ ಸಿನಿಮಾದಲ್ಲಿ  ನಟಿಸಿದ ಅನುಭವವಿದೆ.

  ಬಹುಶಃ ರೆಜಿನಾ ದರ್ಶನ್ಗೆ ಜೋಡಿಯಾಗಬಹುದು. ರೆಜಿನಾ ಭಾನುಮತಿ ಪಾತ್ರ ವಹಿಸಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ ನಾಗಣ್ಣ ಪಾತ್ರಗಳಿಗೆ ಕಲಾವಿದರನ್ನು ಅಳೆದೂ ತೂಗಿ ಆಯ್ಕೆ ಮಾಡುತ್ತಿದ್ದಾರೆ. ಜುಲೈ 30ಕ್ಕೆ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.

  ಆದರೆ, ದ್ರೌಪದಿ ಇನ್ನೂ ಸಿಕ್ಕಿಲ್ಲ.

  Related Articles :-

  Haripriya Confirmed For Kurukshetra

  ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

  Vivek Oberoi in Kurukshetra Say Reports

  Kurukshetra To Be Launched On July 23rd

 • ಕುಸ್ತಿ ಪೈಲ್ವಾನ್ ಆಗ್ತಾರಾ ದರ್ಶನ್..?

  will darshan act as phailwan

  ಕಿಚ್ಚ ಸುದೀಪ್ ಪೈಲ್ವಾನ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಕುಸ್ತಿ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಕಥೆಗಳು ಬೇರೆಯಾದರೂ, ಇಬ್ಬರೂ ಚಿತ್ರದಲ್ಲಿ ಪೈಲ್ವಾನರೇ. ಈಗ ದರ್ಶನ್ ಕೂಡಾ ಪೈಲ್ವಾನನ ಕಥೆ ಆಧರಿಸಿದ ಸಿನಿಮಾ ಮಾಡುತ್ತಿದ್ದಾರಾ..? ಸದ್ಯಕ್ಕೆ ಇದು ಕುತೂಹಲಕ್ಕೆ ಮಾತ್ರ ಸೀಮಿತ.

  ದರ್ಶನ್, ಡಿ.ಉಮಾಪತಿ, ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ 53ನೇ ಸಿನಿಮಾ ಸೆಟ್ಟೇರುತ್ತಿದೆ. ಆ ಚಿತ್ರಕ್ಕೆ ರಾಬರ್ಟ್ (ಚೌಕ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರು), ವಜ್ರಮುನಿ, ಕಾಟೇರ ಹೆಸರುಗಳು ಲಿಸ್ಟಿನಲ್ಲಿವೆ. ಯಾವುದೂ ಫೈನಲ್ ಆಗಿಲ್ಲ. 

  ಪಟ್ಟಿಯಲ್ಲಿ ಕಾಟೇರ ಅನ್ನೋ ಹೆಸರು ಇರೋದೇ ದರ್ಶನ್ ಪೈಲ್ವಾನ್ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಅನುಮಾನ ಮೂಡೋಕೆ ಕಾರಣ. ಕಾಟೇರ ಅನ್ನೋದು ದಾವಣಗೆರೆ ಸಮೀಪದಲ್ಲಿದ್ದ ಪೈಲ್ವಾನ್‍ನ ಹೆಸರು. 

  ಅದೂ ಅಂತಿಂತಾ ಪೈಲ್ವಾನ್ ಅಲ್ಲ, ಒಂದ್ಸಲ ಊಟಕ್ಕೆ ಕುಂತ್ರೆ 35 ಚಪಾಯಿ, 20 ರೊಟ್ಟಿ, ಎರಡುಮೂರು ಕೋಳಿ, 15 ಕಲ್ಲಂಗಡಿ ಜ್ಯೂಸ್ ಕುಡಿಯೋ ಜಟ್ಟಿಯಂತೆ. ಹಾಗಾದರೆ, ಇದು ಕೂಡಾ ಜಟ್ಟಿಯ ಕಥೆ ಆಧರಿಸಿದ ಸಿನಿಮಾನಾ..?

  ಸದ್ಯಕ್ಕೆ ಎಲ್ಲವೂ ಸೀಕ್ರೆಟ್. ಒಂದು ನಿರ್ದಿಷ್ಟ ಹಂತಕ್ಕೆ ಬರುವವರೆಗೆ ಯಾವುದೂ ಅಧಿಕೃತವಲ್ಲ

 • ಗೋಮಾತೆಯ ಜೊತೆ ಕಿಚ್ಚು ಹಾಯಿಸಿದ ದರ್ಶನ್

  darshan's sankranthi kichchu with bullocks

  ದರ್ಶನ್‍ಗೆ ಪ್ರಾಣಿಗಳು ಅದರಲ್ಲೂ ಹಸುಗಳೆಂದರೆ ಅದೆಷ್ಟು ಪ್ರೀತಿ ಅನ್ನೋದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಒಂದು ಕಾಲದಲ್ಲಿ ಹಾಲು ಮಾರಿಯೇ ಜೀವನ ನಡೆಸಿದ್ದೆ ಎಂದು ಸದಾ ನೆನಪಿಸಿಕೊಳ್ಳುವ ದರ್ಶನ್‍ಗೆ, ಹಸುಗಳೆಂದರೆ ಅಕ್ಷರಶಃ ಗೋಮಾತೆಯೇ. ಇಂದಿಗೂ ಹಾಲು ಕರೆಯಲು ಕುಳಿತರೆ ಎಂಥ ಗೌಳಿಗನಿಗೂ ಸವಾಲು ಹಾಕಬಲ್ಲಷ್ಟು ವೇಗವಾಗಿ ಹಾಲು ಕರೆಯಬಲ್ಲರು ದರ್ಶನ್.

  ಇನ್ನು ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಈ ಹಬ್ಬದಲ್ಲಿ ಹಸುಗಳನ್ನು ಕಿಚ್ಚು ಹಾಯಿಸುವುದು ವಾಡಿಕೆ. ಹೊಸ ಲ್ಯಾಂಬೊರ್ಗಿನಿ ಖರೀದಿಸಿ ಮೈಸೂರಿನ ಫಾರ್ಮ್ ಹೌಸ್‍ಗೆ ಹೋದ ದರ್ಶನ್, ಅಲ್ಲಿ ಹಸುಗಳನ್ನು ಕಿಚ್ಚು ಹಾಯಿಸಿದ್ದಾರೆ. ಎರಡು ಎತ್ತುಗಳನ್ನು ಸಿಂಗಾರ ಮಾಡಿ, ಪೂಜಿಸಿ ಎತ್ತುಗಳ ಜೊತೆಯಲ್ಲೇ ಕಿಚ್ಚು ಹಾದಿದ್ದಾರೆ ದರ್ಶನ್.

 • ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಕಾರ್ ಅಡ್ಡಗಟ್ಟಿದ ಪೊಲೀಸರು..!

  darshan's car stopped by cops

  ದರ್ಶನ್ ಸಂಕ್ರಾಂತಿ ಹಬ್ಬದ ದಿನ ತಾನೇ ಲ್ಯಾಂಬೊರ್ಗಿನಿ ಕಾರು ಖರೀದಿಸಿ, ಪೂಜೆ ಮಾಡಿಸಿಕೊಂಡು, ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು. ಹೊಸ ಕಾರು ತೆಗೆದುಕೊಂಡ ನಂತರ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸುವುದು ದರ್ಶನ್ ನಂಬಿಕೆ ಮತ್ತು ಪದ್ಧತಿ. ಹಾಗೆಯೇ ಬೆಟ್ಟಕ್ಕೆ ಹೋಗಿ ವಾಪಸ್ ಬರುತ್ತಿದ್ದ ದರ್ಶನ್ ಅವರ ಕಾರ್‍ನ್ನ ಪೊಲೀಸರು ಅಡ್ಡಗಟ್ಟಿದ್ದಾರೆ. 

  ಡಾಕ್ಯುಮೆಂಟ್ಸ್ ಚೆಕ್ ಮಾಡೋಕೆ ಅಂದ್ಕೋಬೇಡಿ. ಅವರು ಕೂಡಾ ದರ್ಶನ್ ಅಭಿಮಾನಿಗಳೇ. ಕಾರ್‍ನ್ನು ನಿಲ್ಲಿಸಿ, ದರ್ಶನ್‍ರನ್ನು ನಿಲ್ಲಿಸಿಕೊಂಡು ಸೆಲ್ಫಿ ತೆಗೆಸಿಕೊಂಡು ಖುಷಿ ಖುಷಿಯಾಗಿ ದರ್ಶನ್‍ರನ್ನು ಕಳಿಸಿಕೊಟ್ಟಿದ್ದಾರೆ.

 • ಚಾಲೆಂಜಿಂಗ್ ಸ್ಟಾರ್ ತೀರ್ಥಯಾತ್ರೆ

  darshan on pilgrimage

  ಚಾಲೆಂಜಿಂಗ್ ಸ್ಟಾರ್ ದರ್ಶನ್, ತೀರ್ಥಯಾತ್ರೆ ನಡೆಸುತ್ತಿದ್ದಾರೆ. ಈ ಬಾರಿ ಅವರ ಜೊತೆ ಗೆಳೆಯರಾದ ಸೃಜನ್ ಲೋಕೇಶ್, ಧನಂಜಯ ಕೂಡ ಇರೋದು ವಿಶೇಷ.

  ಎಲ್ಲರೂ ಒಟ್ಟಿಗೇ ಮೊದಲು ಹೋಗಿರುವುದು ಉಡುಪಿಯ ಹಿರಿಯಡ್ಕದಲ್ಲಿರುವ ವೀರಭದ್ರಸ್ವಾಮಿ ದೇವಸ್ಥಾನಕ್ಕೆ. ಅಲ್ಲಿ ಜೀರ್ಣೋದ್ಧಾರಗೊಂಡಿರುವ ವೀರಭದ್ರ ಸ್ವಾಮಿಯ ದರ್ಶನ ಪಡೆದ ದರ್ಶನ್ ಮತ್ತು ಗೆಳೆಯರು, ನಂತರ ಧರ್ಮಸ್ಥಳಕ್ಕೆ ಹೋಗಿದ್ದಾರೆ.

  ಧರ್ಮಸ್ಥಳ ಮಂಜನಾಥ ಸ್ವಾಮಿಯ ದರ್ಶನ ಪಡೆದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದಾರೆ.

  ಇದಾದ ನಂತರ ಗೆಳೆಯರ ಬಳಗ ಹೋಗಿರುವುದು ಕುಕ್ಕೆ ಸುಬ್ರಹ್ಮಣ್ಯಕ್ಕೆ. ಅಲ್ಲಿ ಪೂಜೆ ಮುಗಿಸಿದ ನಂತರ, ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

 • ಚಾಲೆಂಜಿಂಗ್ ಸ್ಟಾರ್ ಸಾಕು, ಮೈಸೂರು ರತ್ನ ಬೇಡ - ಬಿರುದನ್ನು ಒಲ್ಲೆ ಎಂದ ದರ್ಶನ್

  darshan rejects new title

  ಚಾಲೆಂಜಿಂಗ್ ಸ್ಟಾರ್ ಎಂದರೆ, ದರ್ಶನ್ ಅನ್ನೋದು ಕನ್ನಡ ಚಿತ್ರರಸಿಕರಿಗೆ ಗೊತ್ತಿರೋ ವಿಚಾರವೇ. ಅದನ್ನು ಹೊರತುಪಡಿಸಿ ಬೇರೆ ಯಾವ ಬಿರುದನ್ನೂ ದರ್ಶನ್ ಇಟ್ಟುಕೊಂಡಿಲ್ಲ. ಇದರ ನಡುವೆಯೇ ತಮಗೆ ನೀಡಲು ಬಂದಿದ್ದ ಮೈಸೂರು ರತ್ನ ಬಿರುದನ್ನು ನಯವಾಗಿಯೇ ಬೇಡ ಎಂದಿದ್ದಾರೆ ನಟ ದರ್ಶನ್. 

  ದರ್ಶನ್ ಕೆರಿಯರ್‍ನಲ್ಲಿ ಕರಿಯ ಒಂದು ಮೈಲುಲ್ಲು ಎಂದೇ ಹೇಳಬೇಕು. ದರ್ಶನ್‍ಗೆ ಸ್ಟಾರ್ ಪಟ್ಟ ಕೊಟ್ಟ ಆ ಚಿತ್ರದ ನಿರ್ಮಾಪಕರೇ ಈಗ ಕರಿಯ 2 ಚಿತ್ರ ಮಾಡುತ್ತಿದ್ದಾರೆ. ಆನೇಕಲ್ ಬಾಲರಾಜ್ ನಿರ್ಮಾಣದ ಆ ಚಿತ್ರದ ಹೀರೋ ಗಣಪ ಖ್ಯಾತಿಯ ಸಂತೋಷ್. ನಾಯಕಿ ಮಯೂರಿ. 

  ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿದ್ದ ದರ್ಶನ್‍ಗೆ ಚಿತ್ರದ ನಿರ್ಮಾಪಕರು ಮೈಸೂರು ರತ್ನ ಬಿರುದು ನೀಡಿದರು. ಆದರೆ ಆ ಬಿರುದನ್ನು ನಯವಾಗಿ ನಿರಾಕರಿಸಿದ ದರ್ಶನ್, ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದೇ ಸಾಕಾಗಿದೆ. ಮೈಸುರು ರತ್ನ ಬೇಡ. ಅದು ಚಿತ್ರದ ಹೀರೋ ಸಂತೋಷ್‍ಗೇ ಇರಲಿ ಎಂದರು. 

  ಹೀಗೆ ಹೇಳುವ ದರ್ಶನ್, ತಮ್ಮ ಅಭಿಮಾನಿಗಳಿಗೆ ಮಾತ್ರ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅಭಿಮಾನಿಗಳು  ಚಾಲೆಂಜಿಂಗ್ ಸ್ಟಾರ್  ಹೊರತಾಗಿ ದಾಸ ದರ್ಶನ್, ಕರಿಯ ದರ್ಶನ್, ರಾಯಣ್ಣ ದರ್ಶನ್.. ಎಂದೆಲ್ಲ ಕರೆಯೋದು ಇದೆ. ಅಭಿಮಾನಿಗಳ ಆ ಪ್ರೀತಿಯನ್ನು ಮಾತ್ರ ದರ್ಶನ್ ಯಾವತ್ತೂ ಬೇಡ ಎಂದಿಲ್ಲ. 

 • ಚಿತ್ರರಂಗಕ್ಕೆ ಒಬ್ಬರೇ ಯಜಮಾನ, ನಾನಲ್ಲ - ದರ್ಶನ್

  i am not yajamana

  ದರ್ಶನ್ ಅಭಿನಯದ 51ನೇ ಚಿತ್ರದ ಟೈಟಲ್ ಯಜಮಾನ. ಅದು ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಚಿತ್ರದ ಟೈಟಲ್. ಅದೇ ಟೈಟಲ್‍ನಲ್ಲಿ ಅಭಿನಯಿಸುತ್ತಿರುವ ದರ್ಶನ್, ಚಿತ್ರದ ಟೈಟಲ್ ಮತ್ತು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

  ನನ್ನ ಚಿತ್ರದ ಟೈಟಲ್ ಯಜಮಾನ ಎಂದೇ ಇರಬಹುದು. ಆದರೆ, ಇಂದಿಗೂ...ಎಂದೆಂದಿಗೂ ಚಿತ್ರರಂಗಕ್ಕೆ ಒಬ್ಬರೇ ಯಜಮಾನ. ಅದು ವಿಷ್ಣುವರ್ಧನ್ ಮಾತ್ರ ಎಂದಿದ್ದಾರೆ ದರ್ಶನ್. ಯಜಮಾನ ಟೈಟಲ್‍ನ  ಚಿತ್ರದಲ್ಲಿ ನಟಿಸುತ್ತಿದ್ದೇನೆ ಎನ್ನುವುದೇ ಖುಷಿಯ ವಿಚಾರ ಎಂದು ಖುಷಿಗೊಂಡಿದ್ದಾರೆ ದರ್ಶನ್.

 • ಚಿತ್ರಲೋಕ ಹೇಳಿದ್ದನ್ನೇ ಪ್ರಥಮ್ ಹೇಳಿದಾಗ..

  pratham reveals what chitraloka exposed

  ಸಂಜನಾ ಅವರ ಬಿಲ್ಡಪ್ ದರ್ಶನ್ ಹೇಳಿಕೆ ಸಡನ್ನಾಗಿ ಬಂದಿದ್ದೇನೂ ಅಲ್ಲ. ಆ ಹೇಳಿಕೆ ಕೊಡುವಾಗ ಪ್ಲಾನ್ ಹಾಕಿಕೊಂಡೇ ಹೇಳಿದ್ದರು. ಅಂಥಾದ್ದೊಂದು ಸ್ಟೇಟ್‍ಮೆಂಟ್ ಕೊಡುವಾಗ ಅವರಿಗೆ ಅದು ಹೋಗುವ ರೀತಿ, ವಿವಾದವಾಗುವ ಬಗೆ ಎಲ್ಲದರ ಅರಿವೂ ಇತ್ತು. ಕೇವಲ ಸುದ್ದಿಯಲ್ಲಿರುವ ಕಾರಣಕ್ಕಾಗಿ ಸಂಜನಾ ಅಂತಹ ಹೇಳಿಕೆ ಕೊಟ್ಟಿದ್ದರು ಎನ್ನುವುದನ್ನು ಚಿತ್ರಲೋಕ ನಿನ್ನೆಯಷ್ಟೇ ವರದಿ ಮಾಡಿತ್ತು. ಈಗ ಆ ಮಾತಿಗೆ ಪುಷ್ಠಿ ನೀಡುವಂತೆ ಪ್ರಥಮ್ ಕೂಡಾ ಅದೇ ಮಾತು ಹೇಳಿದ್ದಾರೆ. ಅಂದಹಾಗೆ ಪ್ರಥಮ್, ಸಂಜನಾ ಜೊತೆಗೆ ಅದೇ ಶೋನಲ್ಲಿ ಪಾಲ್ಗೊಂಡಿದ್ದ ನಟ.

  ಶೋ ಮುಗಿದ ಮೇಲೆ ಮಾತನಾಡುವಾಗ ನನ್ನ ಎದುರೇ ಒಬ್ಬರು ಸಂಜನಾಗೆ ಹೇಳಿದರು. ಟ್ರಸ್ಟ್ ಮೀ, ಇಟ್ಸ್ ವಿಲ್ ಬಿ ಬಿಗ್ಗೆಸ್ಟ್ ಟ್ರೋಲ್ ಎವರ್ ಎಂದರು. ಆಗ ಸಂಜನಾ ಹಾಗೂ ಅವರ ಜೊತೆಯಲ್ಲಿದ್ದ ಇನ್ನೊಬ್ಬ ಏನು ಹೇಳಿದ ಗೊತ್ತಾ..? ಒಳ್ಳೆಯದೋ.. ಕೆಟ್ಟದ್ದೋ.. ನನಗೆ ಬೇಡ. ಇವಳ ಹೆಸರು ಪಬ್ಲಿಸಿಟಿಯಲ್ಲಿರಬೇಕು. ಇವಳು ದರ್ಶನ್ ಹೆಸರು ಹೇಳಿರೋದ್ರಿಂದ ಒಂದು ವಾರ ಇವಳ ಹೆಸರು ಪಬ್ಲಿಸಿಟಿಯಲ್ಲಿ ಇರುತ್ತಾ..? ಜಸ್ಟ್ ಚಿಲ್ ಎಂದ.

  ಆದರೆ, ಇದರ ಬಗ್ಗೆ ಪ್ರಥಮ್ ಬಳಿ ಏನೂ ಸಾಕ್ಷಿ ಇಲ್ಲವಂತೆ. ನನಗೆ ಹೊಡೆದಾಗಲೇ ಸಾಕ್ಷಿ ಇಟ್ಟುಕೊಳ್ಳದ ದಡ್ಡನಾನು, ಇದಕ್ಕೆಲ್ಲಿಂದ ಸಾಕ್ಷಿ ತರಲಿ ಎಂದಿದ್ದಾರೆ ಪ್ರಥಮ್. ದರ್ಶನ್ ಮೇಲೇಕೆ ಪ್ರೀತಿ ಎಂಬ ಬಗ್ಗೆಯೂ ಪ್ರಥಮ್ ಬರೆದುಕೊಂಡಿದ್ದಾರೆ. ಪ್ರಥಮ್ ಅವರನ್ನು ಪ್ರಥಮ್ ಸರ್ ಎಂದು ಕರೆದ ಮೊದಲ ವ್ಯಕ್ತಿ ದರ್ಶನ್ ಅಂತೆ. ಹಾಗಾಗಿ ದರ್ಶನ್ ಅವರನ್ನು ತುಂಬಾ ಗೌರವಿಸುತ್ತೇನೆ. 

  ಅವರ ಬಗ್ಗೆ ಹಾಗೆ ಹೇಳಿದಾಗ ಸಹಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ ಪ್ರಥಮ್.

  Related Articles :-

  ದರ್ಶನ್ ಸರ್, ನನ್ನನ್ನೂ ಕ್ಷಮಿಸಿಬಿಡಿ - ಬಿಗ್‍ಬಾಸ್ ಪ್ರಥಮ್ 

  ದರ್ಶನ್ ಅಭಿಮಾನಿಗಳೇ.. ದಯವಿಟ್ಟು ಕ್ಷಮಿಸಿ - ಸಾರಿ ಕೇಳಿದ ಸಂಜನಾ 

  ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

  ದರ್ಶನ್ ಅಂದ್ರೆ ಬಿಲ್ಡಪ್ - ಬಿಗ್ಬಾಸ್ ಸಂಜನಾಗೆ ದರ್ಶನ್ ಅಭಿಮಾನಿಗಳಿಂದ ಟ್ರೋಲ್

 • ಟಗರು 2ನಲ್ಲಿ ಶಿವಣ್ಣ-ದರ್ಶನ್ ಜೋಡಿ..!

  tagaru 2 gossip creates buzz

  ಟಗರು ಚಿತ್ರ ಬಾಕ್ಸಾಫೀಸ್‍ನಲ್ಲಿ ದಾಖಲೆ ಸೃಷ್ಟಿಸುತ್ತಿರುವಾಗಲೇ ಟಗರು 2ಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಟಗರು ಚಿತ್ರದ ಶೂಟಿಂಗ್ ಮುಗಿದ ಹೊತ್ತಿನಲ್ಲೇ ಟಗರು 2ಗೆ ಮುಹೂರ್ತವೂ ಆಗಿದೆ. ಅದೇ ಸೂರಿ, ಅದೇ ಶ್ರೀಕಾಂತ್ ಕಾಂಬಿನೇಷನ್‍ನಲ್ಲಿ ಟಗರು 2ಗೆ ಶಿವಣ್ಣ ಓಕೆ ಎಂದಿರುವುದೂ ನಿಜ.

  ಆದರೆ, ಈಗ ಟಗರು 2ನಲ್ಲಿ ಶಿವರಾಜ್ ಕುಮಾರ್ ಜೊತೆ ದರ್ಶನ್ ಅವರನ್ನು ಸೇರಿಸಲು ಸಿದ್ಧತೆ ನಡೆದಿವೆ. ಸ್ಟೋರಿ ಲೈನ್ ರೆಡಿ ಇದೆಯೇ ಹೊರತು, ಉಳಿದಂತೆ ಯಾವುದೂ ಸಿದ್ಧಗೊಂಡಿಲ್ಲ. ದರ್ಶನ್ & ಶಿವರಾಜ್‍ಕುಮಾರ್ ಒಟ್ಟಿಗೇ ನಟಿಸ್ತಾರೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಗಾಸಿಪ್ ಅಷ್ಟೆ. ನಿರ್ಮಾಪಕ, ನಿರ್ದೇಶಕರು ಈ ಬಗ್ಗೆ ಮಾತನಾಡಿಲ್ಲ. 

  ಈ ಹಿಂದೆ ದೇವರಮಗ ಚಿತ್ರದಲ್ಲಿ ಶಿವರಾಜ್‍ಕುಮಾರ್ ಜೊತೆ ದರ್ಶನ್ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ದರ್ಶನ್ ಚಾಲೆಂಜಿಂಗ್ ಸ್ಟಾರ್. ಒಟ್ಟಿನಲ್ಲಿ ಗಾಳಿಸುದ್ದಿಗೇ ಗಾಂಧಿನಗರ ಥ್ರಿಲ್ಲಾಗಿ ಹೋಗಿದೆ. 

 • ಡಿ.19ಕ್ಕೆ ಕುರುಕ್ಷೇತ್ರದ ಮತ್ತೊಂದು ಟೀಸರ್

  kurukshetra movie image

  ಕುರುಕ್ಷೇತ್ರ. ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಪ್ರತಿದಿನವೂ ಸುದ್ದಿಯಲ್ಲಿದೆ. ಚಿತ್ರದ ಕ್ಯಾನ್‍ವಾಸ್ ಅಂಥಾದ್ದು. ದರ್ಶನ್ ಅಭಿನಯದ, ಮುನಿರತ್ನ ನಿರ್ಮಿಸುತ್ತಿರುವ ಚಿತ್ರದಿಂದ ಹೊರಬಿದ್ದಿರುವುದು ಒಂದೇ ಟೀಸರ್. ಅದೂ ದರ್ಶನ್ ಹುಟ್ಟುಹಬ್ಬಕ್ಕೆಂದು ಬಿಡುಗಡೆಯಾದ ಸ್ಪೆಷಲ್.

  ಈಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಡಿ.19ಕ್ಕೆ ಕುರುಕ್ಷೇತ್ರ ಚಿತ್ರದ 2ನೇ ಟೀಸರ್ ಬಿಡುಗಡೆಯಾಗಲಿದೆ. ಮೊದಲ ಟೀಸರ್‍ನಲ್ಲಿ ಕಂಗೊಳಿಸಿದ್ದವರು ದುರ್ಯೋಧನ ದರ್ಶನ್. ಎರಡನೇ ಟೀಸರ್‍ನಲ್ಲಿ ಮಿಂಚಲಿರುವುದು ಅಭಿಮನ್ಯು ನಿಖಿಲ್. ಅಂದಹಾಗೆ ಅಂದು ನಿಖಿಲ್ ಹುಟ್ಟುಹಬ್ಬ.

 • ಡಿಸೆಂಬರ್‍ನಲ್ಲಿ ದರ್ಶನ್ ಹೊಸ ಸಿನಿಮಾ

  darshan;s 51st moive

  ಚಾಲೆಂಜಿಂಗ್ ಸ್ಟಾರ್ ದರ್ಶನ್ 51ನೇ ಚಿತ್ರದ ಬಗ್ಗೆ ಸುದ್ದಿಗಳ ಮೇಲೆ ಸುದ್ದಿಗಳು ಬಂದಾಗ, ಸ್ವತಃ ದರ್ಶನ್ ಯಾವುದೂ ಫೈನಲ್ ಆಗಿಲ್ಲ. ಸ್ವಲ್ಪ ದಿನ ಸುಮ್ಮನಿರಿ ಎಂದಿದ್ದರು. ಈಗ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಿದೆ.

  ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದ ಚಿತ್ರಕ್ಕೆ ಸಿದ್ಧತೆಗಳು ಶುರುವಾಗಿದ್ದು, ಇದೇ ತಿಂಗಳ ಅಂತ್ಯಕ್ಕೆ ನಾಯಕಿಯ ಆಯ್ಕೆ ನಡೆಯಲಿದೆ. ಪಿ.ಕುಮಾರ್ ನಿರ್ದೇಶನದ ಚಿತ್ರ, ಪಕ್ಕಾ ಕಮರ್ಷಿಯಲ್ ಎಂದಿದ್ದಾರೆ ಬಿ.ಸುರೇಶ್.

  ಡಿಸೆಂಬರ್‍ನಲ್ಲಿ ಕುರುಕ್ಷೇತ್ರ ಚಿತ್ರದ ದರ್ಶನ್ ಭಾಗದ ದೃಶ್ಯಗಳ ಚಿತ್ರೀಕರಣ ಮುಗಿಯಲಿದೆ. ಅದಾದ ನಂತರ ದರ್ಶನ್ ಸುರೇಶ್ ನಿರ್ಮಾಣದ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

  Related Articles :-

  51, 52ನೇ ಸಿನಿಮಾ - ಸದ್ಯಕ್ಕೆ ಸುಮ್ಮನಿರಿ ಎಂದ ದರ್ಶನ್

 • ಡೈನಮಿಕ್ ಸ್ಟಾರ್ ಗೆ ಯಜಮಾನ ಕೊಟ್ಟ ಅಚ್ಚರಿ..!

  darshan surprises devaraj

  ಡೈನಮಿಕ್ ಸ್ಟಾರ್ ದೇವರಾಜ್‍ಗೆ ಗುರುವಾರ ಹುಟ್ಟುಹಬ್ಬ. ಅದೂ 65ನೇ ವರ್ಷದ ಹುಟ್ಟುಹಬ್ಬ. ಪ್ರತೀ ವರ್ಷ ಹುಟ್ಟುಹಬ್ಬವನ್ನು ಮನೆ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಿದ್ದ ದೇವರಾಜ್, ಈ ಬಾರಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. ಯಜಮಾನ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ಬ್ಯುಸಿಯಾಗಿದ್ದ ದೇವರಾಜ್‍ಗೆ ಅಚ್ಚರಿಯೆಂಬಂತೆ ಕೇಕ್ ಬಂತು. ದರ್ಶನ್ ಬಂದ್ರು. ಇಡೀ ಚಿತ್ರತಂಡ ಬಂತು. 

  ದೇವರಾಜ್ ಅವರ ಹುಟ್ಟುಹಬ್ಬವನ್ನು ದರ್ಶನ್ ಸೆಲಬ್ರೇಟ್ ಮಾಡಿದ್ರು. ದೇವರಾಜ್ ಅವರಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ರು. ದೇವರಾಜ್ ಅವರಿಗೆ ಪ್ರಜ್ವಲ್ ದೇವರಾಜ್ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಶುಭ ಹಾರೈಸಿದ್ದಾರೆ.

 • ಡೈಲಾಗ್, ಕೌಂಟರ್ ಡೈಲಾಗ್​ಗೆ ದರ್ಶನ್ ಹೇಳಿದ್ದೇನು..?

  darshan clarifies on counter dialogue

  ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಸ್ಟಾರ್ ನಟರ ಚಿತ್ರಗಳ ಡೈಲಾಗುಗಳಿಗೆ ಅಭಿಮಾನಿಗಳು ವಿಶೇಷ ಅರ್ಥ ಕಲ್ಪಿಸಿಕೊಳ್ಳುತ್ತಿದ್ದಾರೆ. ಯಶ್ ಚಿತ್ರದಲ್ಲೊಂದು ಡೈಲಾಗ್ ಬಂದರೆ, ಅದನ್ನು ದರ್ಶನ್​ಗೆ ಹೇಳಿದ್ದಾರೆಂದೂ, ದರ್ಶನ್ ಚಿತ್ರದ ಡೈಲಾಗು ಇನ್ಯಾರಿಗೋ ಕೊಟ್ಟ ಸಂದೇಶವೆಂದು ಅಭಿಮಾನಿಗಳಲ್ಲಿ ಜಗಳ ನಡೆಯುವುದೂ ಇದೆ. ಆದರೆ, ಅಂಥವುಗಳಿಗೆಲ್ಲ ದರ್ಶನ್ ಫುಲ್​ಸ್ಟಾಪ್ ಇಟ್ಟಿದ್ದಾರೆ.

  ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿರುವ ದರ್ಶನ್, ನಾವು ಯಾರಿಗೋ ಡೈಲಾಗ್, ಕೌಂಟರ್ ಡೈಲಾಗ್ ಹೊಡೆಯಲ್ಲ. ಸಂಭಾಷಣೆ ಬರೆಯುವವರು ಡೈಲಾಗ್ ಕೊಟ್ಟಿರ್ತಾರೆ. ನಿರ್ದೇಶಕರು ಹೇಳಿಸ್ತಾರೆ. ಅಷ್ಟೆ. ಎಲ್ಲ ಹೊಟ್ಟೆಪಾಡಿನ ವಿಷಯ ಎಂದಿದ್ದಾರೆ.

  ನಾವು ಕಲಾವಿದರು, ಕಲಾವಿದರು ಮಾತ್ರ. ಯಾರು ಯಾರಿಗೂ ಕೌಂಟರ್ ಕೊಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ದರ್ಶನ್.

 • ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  i am not tarak hero

  ತಾರಕ್, ದರ್ಶನ್ ಅಭಿನಯದ 49ನೇ ಚಿತ್ರ. ಚಿತ್ರದ ಹೀರೋ ಅವರೇ. ಹೀಗಿರುವಾಗ ಚಿತ್ರದ ಹೀರೋ ನಾನಲ್ಲ  ಎಂದು ದರ್ಶನ್ ಅವರೇ ಹೇಳಿದರೆ ಏನಪ್ಪಾ ಕಥೆ ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ದರ್ಶನ್ ಪ್ರಕಾರ ಚಿತ್ರದ ಹೀರೋ ಡೈನಮಿಕ್ ಸ್ಟಾರ್ ದೇವರಾಜ್. 

  ತಾರಕ್ ಚಿತ್ರದ ಆಡಿಯೋ ಬಿಡುಗಡೆ ವೇಳೆ, ದೇವರಾಜ್ ಅವರ ಪ್ರೀತಿ ಮತ್ತು ಪಾತ್ರವನ್ನು ಪ್ರೀತಿಯಿಂದ ಮೆಚ್ಚಿಕೊಂಡ ದರ್ಶನ್, ದೇವರಾಜ್ ಅವರನ್ನು ಹೊಗಳಿದರು. ದೇವರಾಜ್ ತಮಗಿಂತ ಎತ್ತರದ ಸ್ಥಾನದಲ್ಲಿದ್ಧಾರೆ ಎಂದು ಹೇಳಿ ಪ್ರೀತಿಯಿಂದ ಧನ್ಯವಾದ ಅರ್ಪಿಸಿದರು ದರ್ಶನ್.

  ಚಿತ್ರದಲ್ಲಿ ದೇವರಾಜ್ ದರ್ಶನ್ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಫುಟ್​ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಈ ಚಿತ್ರದಲ್ಲಿ ಹಳೆಯ ದರ್ಶನ್ ಸಿಕ್ಕೋದಿಲ್ಲ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ನಟ ದರ್ಶನ್ ಅವರನ್ನಷ್ಟೇ ನೋಡಬಹುದು ಎನ್ನುವ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದ್ರು ದರ್ಶನ್.

 • ತಾರಕ್ ಜೊತೆ ಬಂದ ದುರ್ಯೋಧನ

  kuruk teaser

  ತಾರಕ್ ಚಿತ್ರ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರವೇಶವಾಗಿದೆ. ಫ್ಯಾಮಿಲಿ ಮತ್ತು ಆಕ್ಷನ್ ಮಿಶ್ರಿತ ಸಿನಿಮಾ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಇದೆಲ್ಲದರ ಜೊತೆ ದರ್ಶನ್​ ಅಭಿಮಾನಿಗಳಿಗೆ ಡಬಲ್ ಧಮಾಕ. ತಾರಕ್ ಜೊತೆ ಅವರಿಗೆ ದುರ್ಯೋಧನನ ದರ್ಶನವೂ ಆಗಿದೆ. ತಾರಕ್ ಚಿತ್ರಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರದ ಟೀಸರ್ ಪ್ರದರ್ಶನವಾಗಿವೆ.

  ದುರ್ಯೋಧನನ ರಾಜಭವನ ಪ್ರವೇಶ, ದರ್ಶನ್​ರ ಆ ಠೀವಿ, ಹಿನ್ನೆಲೆಯಲ್ಲಿ ಕೇಳಿ ಬರುವ ಸಾರ್ವಭೌಮ ದುರ್ಯೋಧನ ಎಂಬ ಧ್ವನಿ, ದರ್ಶನ್​ ಗಹಗಹಿಸಿ ನಗುವ ಆ ನಗು ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹಚ್ಚಿರುವುದು ಸುಳ್ಳಲ್ಲ. ತಾರಕ್ ಎಂಜಾಯ್ ಮಾಡುತ್ತಲೇ ಕುರುಕ್ಷೇತ್ರಕ್ಕಾಗಿ ಕಾಯುವಂತೆ ಮಾಡಿದ್ದಾರೆ ದರ್ಶನ್.

 • ತಾರಕ್ ಡ್ಯಾನ್ಸ್ ಮಾಡಿ, ಬಹುಮಾನ ಗೆಲ್ಲಿ

  tarak dance competition

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ. ಆ ಕಾತುರಕ್ಕೆ ಕಿಚ್ಚು ಹಚ್ಚುವಂತೆ ವಿಶೇಷ ಅವಕಾಶವೊಂದನ್ನು ಒದಗಿಸಿದೆ ತಾಕರ್ ಚಿತ್ರತಂಡ.

  ತಾರಕ್ ಚಿತ್ರಗಳ ಹಾಡಿಗೆ ನೃತ್ಯ ಮಾಡುವುದು ಹಾಗೂ ಬಹುಮಾನ ಗೆಲ್ಲುವುದು. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 10 ಸಾವಿರ ರೂ. ನೀವು ಮಾಡಬೇಕಾದ್ದು ಇಷ್ಟೆ..ತಾರಕ್ ಚಿತ್ರದ ಯಾವುದಾದರೂ ಹಾಡನ್ನು ಆಯ್ಕೆ ಮಾಡಿಕೊಳ್ಳಿ. ಆ ಹಾಡಿಗೆ ನಿಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿ. ಅದನ್ನು ವಿಡಿಯೋ ಮಾಡಿ ಕಳುಹಿಸಿಕೊಡಿ. 

  ನಿಮ್ಮ ನೃತ್ಯದ ವಿಡಿಯೋಗಳನ್ನು  This email address is being protected from spambots. You need JavaScript enabled to view it.ಗೆ ಮೇಯ್ಲ್ ಮಾಡಿ. ವಿಡಿಯೋ ಕಳುಹಿಸಿಕೊಡಲು ಕೊನೆಯ ದಿನ ಸೆಪ್ಟೆಂಬರ್ 29.

 • ತಾರಕ್ ತರುಣಿಯರು..ಅವರು ಹಂಗೆ..ಇವರು ಹಿಂಗೆ..

  tarak movie image

  ತಾರಕ್ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರೂ ನಾಯಕಿಯರು. ಆ ಇಬ್ಬರು ಸುಂದರಿಯರಲ್ಲಿ ದರ್ಶನ್ ಒಲಿಯುವುದು ಯಾರಿಗೆ..? ಅದನ್ನು ನಿರ್ದೇಶಕ ಮಿಲನ ಪ್ರಕಾಶ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸಿನಿಮಾ ರಿಲೀಸ್ ಆಗುವವರೆಗೂ ಅದು ಗೊತ್ತಾಗಲ್ಲ. ಆದರೆ, ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರು ಅನುಭವಿಸಿದ ಕಷ್ಟವೇ ಬೇರೆ.

  ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅವರದ್ದು ಬಬ್ಲಿ ಬಬ್ಲಿ ಪಾತ್ರ. ಪಟಪಟನೆ ಮಾತನಾಡುವ ತುಂಟಾಟದ ಹುಡುಗಿ. ಎನ್‍ಆರ್‍ಐ ಬೇರೆ. ಶಾನ್ವಿಯನ್ನು ನೋಡಿದವರು, ಅವರು ಹಾಗೇನೇ ಇರ್ತಾರೆ ಬಿಡಿ ಅಂದ್ಕೋತಾರೆ. ಆದರೆ, ರಿಯಲ್ ಲೈಫಲ್ಲಿ ಶಾನ್ವಿ ಅದಕ್ಕೆ ಪೂರ್ತಿ ಉಲ್ಟಾ. ಸಿಕ್ಕಾಪಟ್ಟೆ ಸೈಲೆಂಟು.

  ಇನ್ನು ಅದೇ ಚಿತ್ರದಲ್ಲಿ ಶೃತಿ ಹರಿಹರನ್ ಅವರದ್ದು ಸೈಲೆಂಟ್ ಗರ್ಲ್ ಪಾತ್ರ. ಆದರೆ, ಅದಕ್ಕೆ ಕಂಪ್ಲೀಟ್ ಉಲ್ಟಾ ವ್ಯಕ್ತಿತ್ವ ಶೃತಿ ಅವರದ್ದು. ಕಲ್ಲನ್ನೂ ಕೂಡಾ ಕರಗಿಸಿ, ಅದಕ್ಕೆ ಮಾತು ಬರಿಸುವ ಕಲೆ ಶೃತಿ ಅವರಿಗೆ ಅದು ಹೇಗೋ ಸಿದ್ಧಿಸಿಬಿಟ್ಟಿದೆ. ಅವರಿದ್ದ ಕಡೆ, ನಗು, ಉಲ್ಸಾಸ, ಉತ್ಸಾಹಗಳಿಗೆ ಬರವಿಲ್ಲ. 

  ಹೀಗೆ ಕಲಾವಿದೆಯರ ವೊರಿಜಿನಲ್ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ ಕೊಟ್ಟು ಗೆದ್ದಿದ್ದಾರೆ ಪ್ರಕಾಶ್. ಇನ್ನು ಚಿತ್ರವನ್ನು ಗೆಲ್ಲಿಸುವ ಹೊಣೆ ದಾಸನ ಅಭಿಮಾನಿಗಳದ್ದು.

  Related Articles :-

  ಮನೆಯಲ್ಲೇ ತಾರಕೋತ್ಸವ ಕಣ್ತುಂಬಿಕೊಳ್ಳಿ..

  ಧೋನಿಗೂ ದರ್ಶನ್​ಗೂ ತಾರಕ್ ಲಿಂಕ್

  Tarak To Release On Sep 29th

  Tarak Teaser Gets Huge Response

  ದರ್ಶನ್ ತಾರಕ್ ಟ್ರೇಲರ್ ಸಖತ್ತಾಗಿದೆ ಗುರೂ..

  ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  Tarak Songs Released

  Tarak Songs To Release Today

  Tarak Will Have 6 Audio Teasers

  Darshan Off To Switzerland For Tarak Shooting

 • ತಾರಕ್ ತಾರಾಗಣದಲ್ಲಿ ಕಲಾವಿದರ ಹಬ್ಬ

  tarak movie image

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳಲ್ಲಿ ತಾರಕ್‍ನ ವಿಶೇಷತೆಯೇ ಬೇರೆ. ಈ ಚಿತ್ರದಲ್ಲಿ ದರ್ಶನ್ ಜೊತೆಗೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರೆಲ್ಲ ಸೇರಿ ಹಬ್ಬವನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಇತ್ತೀಚೆಗೆ ರಾಜಕುಮಾರ, ಮುಗುಳುನಗೆ ಚಿತ್ರಗಳಲ್ಲಿ ಇಂಥಾದ್ದೊಂದು ಜಾತ್ರೆ ಸೇರಿತ್ತು. ಅದೀಗ ತಾರಕ್‍ನಲ್ಲಿಯೂ ಮುಂದುವರೆದಿದೆ. 

  ಹಾಗೇ ನೋಡಿ, ದರ್ಶನ್, ಚಿತ್ರದ ಹೀರೋ. ಚಿತ್ರಕ್ಕಾಗಿ ಮೈಕಟ್ಟನ್ನೆಲ್ಲ ಹುರಿಗೊಳಿಸಿ ತಯಾರಾಗಿದ್ದಾರೆ. ಇನ್ನು ದರ್ಶನ್ ತಾತನಾಗಿರುವ ಡೈನಮಿಕ್ ಸ್ಟಾರ್ ದೇವರಾಜ್, 80ರ ವಯಸ್ಸಿನ ಅಜ್ಜನ ಪಾತ್ರದಲ್ಲಿದ್ದಾರೆ. ಅಷ್ಟು ದೊಡ್ಡ ವಯಸ್ಸಿನ ವೃದ್ಧನಾಗಿ ನಟಿಸುತ್ತಿರುವುದು ದೇವರಾಜ್‍ಗೂ ಹೊಸ ಅನುಭವ.

  ಇನ್ನು ಶೃತಿ ಹರಿಹರನ್ ನಾಯಕಿ. ಈ ರಾಜ್ಯ ಪ್ರಶಸ್ತಿ ವಿಜೇತ ನಟಿಗೆ ದರ್ಶನ್ ಜೊತೆ ಮೊದಲ ಚಿತ್ರ. ಇನ್ನು ಸ್ಯಾಂಡಲ್‍ವುಡ್‍ನ ಸುಂದರ ದೆವ್ವ ಎಂದೇ ತಮಾಷೆಯಿಂದ ಕರೆಯಲ್ಪಡುತ್ತಿರುವ ಶಾನ್ವಿ ಶ್ರೀವಾಸ್ತವ್ ಚಿತ್ರದ ಇನ್ನೊಬ್ಬ ನಾಯಕಿ. 

  ದೇವರಾಜ್ ಅಳಿಯನ ಪಾತ್ರದಲ್ಲಿ ಅವಿನಾಶ್, ಅವರ ಪತ್ನಿಯಾಗಿ ಚಿತ್ರಾ ಶೆಣೈ, ಅರವಿಂದ್, ಭಾಗ್ಯಶ್ರೀ, ಕುಲದೀಪ್, ರಕ್ಷಾ ಹೊಳ್ಳ, ಕುರಿ ಪ್ರತಾಪ್..ಹೀಗೆ ಕಲಾವಿದರ ದಂಡೇ ಇದೆ.

  ಚಿತ್ರದಲ್ಲಿ ವಸ್ತ್ರ ವಿನ್ಯಾಸ ಮಾಡಿರುವುದು ನಿರ್ದೇಶಕ ಪ್ರಕಾಶ್ ಅವರ ಪತ್ನಿ ಅಶ್ವಿನಿ ಹಾಗೂ ಅವರ ಸ್ನೇಹಿತೆ ಪ್ರತೀಕ್ಷಾ. ಒಟ್ಟಿನಲ್ಲಿ ತಾರಕ್ ನೋಡಿದರೆ, ಹಬ್ಬದ ಮನೆ ನೋಡಿದಂತಾಗುವುದು ಸುಳ್ಳಲ್ಲ.

 • ತಾರಕ್​ಗೂ ಪೈರಸಿ ಕಾಟ

  tarak movie image

  ಚಾಲೆಂಜಿಂಗ್ ಸ್ಟಾರ್ ಅಭಿನಯದ ತಾರಕ್ ಚಿತ್ರ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದರ್ಶನ್​ರ ಲುಕ್ ಹಾಗೂ ಚಿತ್ರದ ಕಥೆ ಬಗ್ಗೆ ಎಲ್ಲ ಕಡೆ ಪಾಸಿಟಿವ್ ಅಭಿಪ್ರಾಯಗಳೇ ಬರತ್ತಿವೆ. ಚಿತ್ರ ದೊಡ್ಡ ಮಟ್ಟದ ಹಿಟ್ ಆಗುವ ಮುನ್ಸೂಚನೆ ಕೊಟ್ಟಿದೆ.

  ಆದರೆ, ಚಿತ್ರಕ್ಕೆ ಆಗಲೇ ಪೈರಸಿ ಕಾಟ ಶುರುವಾಗಿದೆ. ಚಿತ್ರವನ್ನು ಮೊದಲ ದಿನವೇ ಚಿತ್ರಮಂದಿರಲದಲ್ಲಿ ನೋಡಿರುವ ಕೆಲವರು, ಚಿತ್ರದ ಕೆಲವು ದೃಶ್ಯಗಳನ್ನು ರೆಕಾರ್ಡ್ ಮಾಡಿ, ಫೇಸ್​ಬುಕ್​ಗೆ ಬಿಟ್ಟಿದ್ದಾರೆ. ಚಿತ್ರದ ಕೆಲವು ದೃಶ್ಯಗಳು, ರಗ್ಬಿ ಆಡುವ ದೃಶ್ಯಗಳ ತುಣುಕುಗಳು ಫೇಸ್​ಬುಕ್​ನಲ್ಲಿ ಹರಿದಾಡುತ್ತಿವೆ.

  ಇದು ಈಗಾಗಲೇ ಚಿತ್ರತಂಡಕ್ಕೂ ಗೊತ್ತಾಗಿದೆ. ಲೀಕ್ ಮಾಡಿರುವುದು ಯಾರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಚಿತ್ರತಂಡದ ಹಾಗೂ ಚಿತ್ರಲೋಕದ ಮನವಿ ಇಷ್ಟೆ. ಒಂದು ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಿರುತ್ತಾರೆ. ಆದರೆ, ಈ ರೀತಿಯ ಘಟನೆಗಳು ಚಿತ್ರವನ್ನಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೂ ಹಾನಿಕರ.  ಇಂತಹ ಘಟನೆಗಳು  ಅಭಿಮಾನದಿಂದ ನಡೆದಿರುತ್ತವೋ, ದುರುದ್ದೇಶದಿಂದಲೇ ನಡೆದಿರುತ್ತವೋ ಬೇರೆ ಮಾತು. ಅದರಿಂದ ಚಿತ್ರಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಿ, ಚಿತ್ರರಂಗವನ್ನು ಬೆಳೆಸಿ, ಉಳಿಸಿ ಎಂಬುದಷ್ಟೇ ಎಲ್ಲರ ಮನವಿ.

Padarasa Movie Gallery

Kumari 21 Movie Gallery