` darshan, - chitraloka.com | Kannada Movie News, Reviews | Image

darshan,

 • ಅಂಬರೀಷ್ @66 - ಮೊದಲ ಕೇಕ್ ತಂದವರು ಯಾರು..?

  rebel star 's 69th birthday

  ರೆಬಲ್‍ಸ್ಟಾರ್ ಅಂಬರೀಷ್‍ಗೆ ಇದು 66ನೇ ಹುಟ್ಟುಹಬ್ಬ. ಚಿತ್ರರಂಗದಲ್ಲಿ 49 ವಸಂತ ಪೂರೈಸಿರುವ ರೆಬಲ್‍ಸ್ಟಾರ್, ಪ್ರತಿವರ್ಷದಂತೆ ಈ ಬಾರಿಯೂ ಅಭಿಮಾನಿಗಳ ಮಧ್ಯೆಯೇ ಹುಟ್ಟುಹಬ್ಬ ಆಚರಿಸಿಕೊಂಡರು. ರಾತ್ರಿಯೇ ಮನೆಯ ಬಳಿ ಜಮಾಯಿಸಿದ್ದ ಅಭಿಮಾನಿಗಳನ್ನು ಎಂದಿನಂತೆ ಪ್ರೀತಿಯಿಂದ ಗದರಿ, ಕೇಕ್ ಕತ್ತಿರಿಸಿ ಖುಷಿಪಟ್ಟರು ಅಂಬರೀಷ್. ನಾನು ಇಷ್ಟು ವರ್ಷ ಸಂಪಾದಿಸಿದ್ದ ಅತಿದೊಡ್ಡ ಆಸ್ತಿಯೇ ಈ ಅಭಿಮಾನಿಗಳು, ಅವರ ಪ್ರೀತಿ ಎಂದ ಅಂಬರೀಷ್, ಹಿಂದಿನ ದಿನವಷ್ಟೇ ಮಗನ ಮೊದಲ ಚಿತ್ರದ ಮುಹೂರ್ತ ಮಾಡಿದ್ದ ಸಂಭ್ರಮದಲ್ಲಿದ್ದರು.

  ಮನೆಯಲ್ಲಿ ನಟಿಸೋಕೆ ಕಾಂಪಿಟೇಷನ್ ಜಾಸ್ತಿಯಾಗಿ ಬಿಟ್ಟಿದೆ. ಮೊದಲು ಇವಳಷ್ಟೇ ನಟಿಸ್ತಾ ಇದ್ಲು. ಈಗ ಮಗನೂ ಎಂಟ್ರಿ ಕೊಟ್ಟಿದ್ದಾನೆ. ರಾಜಕೀಯಕ್ಕೆ ನಿವೃತ್ತಿ ಹೇಳಿದಂತೆಯೇ ಸಿನಿಮಾದಿಂದಲೂ ದೂರ ಉಳಿದು ಆರಾಮ್ ಆಗಿರುವ ಆಲೋಚನೆಯಲ್ಲಿದ್ದೇನೆ ಎಂದರು ಅಂಬಿ. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಗಳ ನಂತರ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ ಅನ್ನೋ ಸುಳಿವು ಕೊಟ್ಟರು ಅಂಬರೀಷ್.

  ಅಂದಹಾಗೆ ಅಂಬರೀಷ್ ಮನೆಗೆ ಮೊದಲ ಕೇಕ್ ತಂದ ಅತಿ ದೊಡ್ಡ ಅಭಿಮಾನಿ ಯಾರು ಗೊತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್.

 • ಅಂಬರೀಷ್ ಬಾರೋ ಅಂದ್ರೆ ಬರ್ಬೇಕ್.. ಅಷ್ಟೆ..

  ambi calls darshan on stage

  ರೆಬಲ್‍ಸ್ಟಾರ್ ಅಂಬರೀಷ್, ಚಿತ್ರರಂಗದಲ್ಲೇ ಆಗಲೀ, ರಾಜಕೀಯದಲ್ಲೇ ಆಗಲಿ, ಮಂತ್ರಿಯೇ ಆಗಿರಲಿ.. ಆಗಿರದೇ ಇರಲಿ.. ಅವರು ಯಾವತ್ತಿಗೂ ಸ್ಟಾರ್. ಅದು ಮತ್ತೊಮ್ಮೆ ಸಾಬೀತಾಗಿದ್ದು, ಫಿಲಂಚೇಂಬರ್‍ನಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವೆ ಜಯಮಾಲಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ. ಅಂಬರೀಷ್ ಅವರ ಒಂದೊಂದೇ ಝಲಕ್‍ಗಳನ್ನು ಸುಮ್ಮನೆ ನೋಡಿ. 

  ಸಮಾರಂಭಕ್ಕೆ ಬಂದಿದ್ದ ದರ್ಶನ್, ಸಾಮಾನ್ಯರಂತೆ ವೇದಿಕೆಯ ಕೆಳಗೆ ಕುಳಿತಿದ್ದರು. ಅದು ಅಂಬರೀಷ್ ಕಣ್ಣಿಗೆ ಬಿತ್ತು. ದರ್ಶನ್‍ರನ್ನ ಕರೀರಿ ಅಂದ್ರೂ ದರ್ಶನ್, ನಾನು ಇಲ್ಲೇ ಇರುತ್ತೇನೆ ಎಂದು ಸನ್ನೆ ಮಾಡಿದರು. ಹೇಯ್.. ಎದ್ ಬಾರಯ್ಯ ಎಂದು ಗದರಿಸುತ್ತಿದ್ದಂತೆ, ಮರುಮಾತನಾಡದೆ ವೇದಿಕೆ ಮೇಲಿದ್ದರು ದರ್ಶನ್. ನಂತರವೂ ಅಷ್ಟೆ, ಇಳಿದು ಹೋಗೋಕೆ ಯತ್ನಿಸಿದ ದರ್ಶನ್‍ಗೆ ಹೇಯ್.. ಸುಮ್ನೆ ಕೂತ್ಕೋಬೇಕು ಅಂದ್ರು. ದರ್ಶನ್ ಗಪ್‍ಚುಪ್. ವೇದಿಕೆಯಲ್ಲೇ ಕುಳಿತುಬಿಟ್ರು.

  ಸಿಎಂಗೆ ಹೂಗುಚ್ಛ ನೀಡೋಕೆ ನೂಕುನುಗ್ಗಲಾಯ್ತು. ವೇದಿಕೆ ಮೆಲೆಲ್ಲ ಅಯೋಮಯ.  ಸಿಎಂ ಕೂಡಾ ಕಕ್ಕಾಬಿಕ್ಕಿಯಾದರು. ಆಗ ಇಡೀ ವೇದಿಕೆಯನ್ನು ಕ್ಷಣದಲ್ಲಿ ಕಂಟ್ರೋಲ್‍ಗೆ ತಗೊಂಡಿದ್ದು ಅಂಬಿ. ಏಯ್ ಹೋಗ್ರೋ ಸಾಕು, ಇನ್ನೂ ಯಾಕೆ ಇಲ್ಲೇ ನಿಂತಿದ್ದೀಯ.. ಕೆಳಗಡೆ ಹೋಗು.. ಎಂದ ಅಂಬರೀಷ್, ಚಿನ್ನೇಗೌಡರನ್ನು ವಿಶೇಷವಾಗಿ ಕರೆದರು. ಬನ್ನಿ ಚಿನ್ನೇಗೌಡ್ರೇ, ನೀವು ಎಲೆಕ್ಷನ್‍ಗೆ ನಿಂತಿದ್ದೀರ ಅಂತಾ ಗೊತ್ತು, ಬನ್ನಿ.. ಬನ್ನಿ ಎಂದು ವೇದಿಕೆಗೆ ಕರೆದರು. 

  ಅಂಬರೀಷ್ ಮಾತನಾಡುವಾಗಲೂ ಅಷ್ಟೆ, ಪಕ್ಕದ ಹಾಲ್‍ನ ಸೌಂಡು ಕಿವಿಗೆ ಬಿದ್ದಾಗ, 

  ಯಾವನೋ ಅವ್ನು, ಡೋರ್ ಕ್ಲೋಸ್ ಮಾಡಲೇ ಎಂದಿದ್ದೇ ತಡ, ಡೋರ್ ಕ್ಲೋಸ್ ಆಯ್ತು.

  ತಮ್ಮದೇ ಸ್ಟೈಲ್‍ನಲ್ಲಿ ಜಯಮಾಲಾಗೆ ಹಿತವಚನ ಹೇಳಿದ ಅಂಬಿ, ಇಷ್ಟು ದಿನ ರೀಲ್ ನಾಯಕಿ ಆಗಿದ್ದೆ. ಈಗ ರಿಯಲ್ ನಾಯಕಿ ಆಗಿದ್ದೀಯ. ಜನ ಸಾವಿರ ಮಾತಾಡಿಕೊಳ್ಳಲಿ, ತಲೆ ಕೆಡಿಸಿಕೊಳ್ಳಬೇಡ, ಕೆಲಸ ಮಾಡು ಎಂದರು. ಡಾ.ರಾಜ್ ಹಿತವಚನವನ್ನೂ ನೆನಪಿಸಿದ್ರು. 

  ರಾಜ್‍ಕುಮಾರ್ ಅವರಿಗೂ ಮೇಕಪ್ ಮಾಡಿಸಿಕೊಳ್ಳುವಾಗ, ಅವಳು ಹಂಗೆ, ಇವರು  ಹಿಂಗೆ ಎನ್ನುತ್ತಿದ್ದರಂತೆ. ಅದೆಲ್ಲವನ್ನೂ ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಡುತ್ತಿದ್ದರಂತೆ ರಾಜ್. ನೀನೂ ಹಾಗೆಯೇ ಇರು ಎಂದರು ಅಂಬಿ.

  ಅಂಬರೀಷ್ ಗರ್ಜನೆಯನ್ನು ನೋಡುತ್ತಾ ನಗುತ್ತಾ ಕುಳಿತಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ.

 • ಅಂಬಿಗೆ ದರ್ಶನ್ ಕೊಟ್ಟಿದ್ದ ಆ ಮಾತು ಈಡೇರಲಿಲ್ಲ..!

  darshan's promise to ambareesh which is not fullfilled

  ದರ್ಶನ್, ಅಂಬರೀಷ್ ಅವರನ್ನು ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದರು. ತಂದೆಯಂತೆಯೇ ಅವರನ್ನು ಗೌರವಿಸುತ್ತಿದ್ದ ದರ್ಶನ್, ಪ್ರತಿ ಬಾರಿ ವಿದೇಶಕ್ಕೆ ಹೋದಾಗಲೂ ಅಂಬಿಗಾಗಿ ಒಂದು ಗಿಫ್ಟ್ ತಂದೇ ತರುತ್ತಿದ್ದರು. ಅದು ದರ್ಶನ್ ಪಾಲಿಗೆ ಸಂಪ್ರದಾಯವೇ ಆಗಿ ಹೋಗಿತ್ತು.

  ಯಜಮಾನ ಚಿತ್ರದ ಶೂಟಿಂಗಿಗಾಗಿ ಸ್ವೀಡನ್ನಿಗೆ ಹೊರಟಾಗ ಅಂಬರೀಷ್, ಒಂದು ವಾಚ್ ತೆಗೆದುಕೊಂಡು ಬಾ ಎಂದಿದ್ದರಂತೆ. ಖಂಡಿತಾ ಎಂದು ಹೇಳಿ ಹೋಗಿದ್ದ ದರ್ಶನ್, ವಾಪಸ್ ಬರುವಾಗ ಸಮಯವೇ ಮೀರಿ ಹೋಗಿತ್ತು.

 • ಅಣ್ಣಾವ್ರನ್ನು ಬಿಟ್ಟರೆ, ಈ ಸಾಹಸ ಮಾಡಿದ್ದು ದರ್ಶನ್ ಮಾತ್ರ..!

  ravishankar gowda compares darshan to raj

  ಡಾ.ರಾಜ್‍ರನ್ನು ಬಿಟ್ಟರೆ, ಅಂಥಾದ್ದೊಂದು ಧೈರ್ಯ, ಸಾಹಸ ಮೆರೆದಿರುವುದು ಕೇವಲ ದರ್ಶನ್. ಇಂಥಾದ್ದೊಂದು ಮಾತು ಹೇಳಿರುವುದು ರವಿಶಂಕರ್ ಗೌಡ. ಸಿಲ್ಲಿ ಲಲ್ಲಿ ಧಾರಾವಾಹಿಯ ಮೂಲಕವೇ ಸ್ಟಾರ್ ಆದ ರವಿಶಂಕರ್ ಗೌಡ, ಸಮಾರಂಭವೊಂದರಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

  ರವಿಶಂಕರ್ ಗೌಡ, ಇಂಥಾದ್ದೊಂದು ಹೇಳಿಕೆ ಕೊಡೋಕೆ ಕಾರಣ, ಕುರುಕ್ಷೇತ್ರ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ನಟಿಸುತ್ತಿರುವುದು ದುರ್ಯೋಧನನ ಪಾತ್ರದಲ್ಲಿ. ಅದು ಮಹಾಭಾರತದ ಖಳನಾಯಕನ ಪಾತ್ರ. ಮಾಸ್ ಹೀರೋ ಆಗಿದ್ದುಕೊಂಡು ಇಂಥ ಖಳನಟನ ಪಾತ್ರ ಮಾಡೋಕೆ ಎಂಟೆದೆ ಬೇಕು. ಅಂಥಾದ್ದೊಂದು ಧೈರ್ಯ ಡಾ.ರಾಜ್ ಅವರಿಗೆ ಇತ್ತು ಎಂದಿದ್ದಾರೆ ರವಿಶಂಕರ್.

  ಡಾ.ರಾಜ್, ತಮ್ಮ ಖ್ಯಾತಿಯ ಉತ್ತುಂಗದಲ್ಲಿದ್ದಾಗ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ನಟಿಸಿದ್ದರು. ಅದು ದೇವರನ್ನೇ ದ್ವೇಷಿಸುವ, ತನ್ನನ್ನು ತಾನೇ ದೇವರು ಎಂದು ಕರೆದುಕೊಳ್ಳುವ ರಾಕ್ಷಸನ ಪಾತ್ರ. ಇಂದಿಗೂ ಅಭಿಮಾನಿಗಳ ಕಣ್ಣೆದುರು ಅಣ್ಣಾವ್ರ ಆ ಪಾತ್ರದ ಗತ್ತು, ಗಾಂಭೀರ್ಯ, ನಡಿಗೆ, ಧ್ವನಿ ಕಣ್ಣಿಗೆ ಕಟ್ಟಿದಂತಿದೆ. ಈಗ ದರ್ಶನ್, ದುರ್ಯೋಧನನ ಪಾತ್ರ ಮಾಡುತ್ತಿದ್ದಾರೆ. 

  ದರ್ಶನ್ ದುರ್ಯೋಧನನ ಗೆಟಪ್‍ನಲ್ಲಿ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂದ್ರೆ, ಯಾರ ದೃಷ್ಟಿಯೂ ದರ್ಶನ್ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ ರವಿಶಂಕರ್ ಗೌಡ. 

 • ಅಪ್ಪ ಇಂಡಸ್ಟ್ರಿಯಲ್ಲಿದ್ರೆ ಬೆಳೆಯೋದು ಕಷ್ಟ - ದರ್ಶನ್ 

  darshan talks about problems faced by star kids

  ಅವರು ಬಿಡಿ, ಅವರ ಅಪ್ಪ ಇಂಡಸ್ಟ್ರಿಯಲ್ಲೇ ಇದ್ದವರು. ಹೀಗಾಗಿ ಸಲೀಸಾಗಿ ಬಂದು ಬಿಟ್ರು. ಇಂಥ ಮಾತನ್ನು ಹಲವರು ಹೇಳ್ತಾ ಇರ್ತಾರೆ. ನಮ್ಮ ಅಪ್ಪಂದಿರು ಇಂಡಸ್ಟ್ರಿಯಲ್ಲಿ ಇರೋ ಕಾರಣಕ್ಕೆ ನಾವು ಪಟ್ಟಿರೋ ಕಷ್ಟವೇ ಬೇರೆ. ಅಪ್ಪ ಇಂಡಸ್ಟ್ರಿಯಲ್ಲಿದ್ರೆ ಬೆಳೆಯೋದು ಅಷ್ಟು ಸುಲಭ ಅಲ್ಲ' ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ ಮಾತು.

  ದರ್ಶನ್ ಈ ಮಾತು ಹೇಳಿದ್ದು ಚಾಣಾಕ್ಷ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ. ಅದು ಕೀರ್ತಿರಾಜ್ ಅವರ ಪುತ್ರ ಧರ್ಮ ಅಭಿನಯದ ಚಿತ್ರ. ನವಗ್ರಹ ಚಿತ್ರದಲ್ಲಿ ಕಣ್ ಕಣ್ಣ ಸಲಿಗೆ ಎಂದಿದ್ದ ಧರ್ಮ ಕೀರ್ತಿರಾಜ್, ಈ ಚಿತ್ರದಲ್ಲಿ ಆ್ಯಕ್ಷನ್ ಹೀರೋ. ಚಿತ್ರದ ಟ್ರೇಲರ್, ಹಾಡುಗಳು, ಆ್ಯಕ್ಷನ್ ಎಲ್ಲವೂ ಚೆನ್ನಾಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ ದರ್ಶನ್, ತಂದೆಯ ನೆರಳು.. ಅದರಲ್ಲೂ ಚಿತ್ರರಂಗದಲ್ಲಿ ಮಕ್ಕಳನ್ನು ಹೇಗೆ ಕಾಡುತ್ತೆ ಅನ್ನೋದನ್ನ ಬಿಚ್ಚಿಟ್ಟರು.

  ನಾವು ಮಾಡಿದ ಪ್ರತೀ ಕೆಲಸವನ್ನೂ ತಮ್ಮ ತಂದೆಗೆ ಹೋಲಿಸಿ ಮಾತನಾಡುತ್ತಾರೆ. ಅವರ ತಂದೆ ಹಾಗೆ ಮಾಡ್ತಾ ಇದ್ರು. ಇವನ್ಯಾಕೆ ಹೀಗೆ ಎಂದುಬಿಟ್ಟರೆ ನಮ್ಮ ಕಥೆ ಮುಗಿಯಿತು ಅಂದ್ರು ದರ್ಶನ್. ಅಫ್‍ಕೋರ್ಸ್.. ದರ್ಶನ್ ಮಾತುಗಳಲ್ಲಿ ಅರ್ಥವಿದೆ. ಅವರ ವಿಚಾರವನ್ನೇ ತೆಗೆದುಕೊಂಡರೆ ತೂಗುದೀಪ ಶ್ರೀನಿವಾಸ್ ಪ್ರತಿಭೆ, ತಾಕತ್ತೇ ಬೇರೆ. ದರ್ಶನ್ ಪ್ರತಿಭೆ, ತಾಕತ್ತೇ ಬೇರೆ. ಹೋಲಿಸಿ ನೋಡಿದರೆ.. ನೋಡಲು ಹೋದರೆ.. ಯಾರು ಹೆಚ್ಚು.. ಯಾರು ಕಡಿಮೆ ಎಂದು ಲೆಕ್ಕ ಹಾಕುತ್ತಾ ಕೂತರೆ.. ಹ್ಞಾಂ.. ಅದನ್ನೇ ದರ್ಶನ್ ಹೇಳಿದ್ದು. ಹೋಲಿಕೆ ಮಾಡಬಾರದು. 

 • ಅಪ್ಪಾಜಿ ಸಂಸ್ಕಾರಕ್ಕೆ ಬರಲು ಯಜಮಾನ ಖರ್ಚು ಮಾಡಿದ್ದೆಷ್ಟು..?

  yajamana team returns from sweden

  ಅಂಬರೀಷ್ ಮೃತಪಟ್ಟ ದಿನ ಸ್ವೀಡನ್‍ನಲ್ಲಿದ್ದ ದರ್ಶನ್, ತರಾತುರಿಯಲ್ಲಿ ಬೆಂಗಳೂರಿಗೆ ಬಂದರು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರು. ಅಮ್ಮ ಸುಮಲತಾ, ಅಭಿಷೇಕ್‍ಗೆ ಆಸರೆಯಾದರು.

  ಆದರೆ, ಸ್ವೀಡನ್‍ನಿಂದ ಬೆಂಗಳೂರಿಗೆ ಬರುವುದು ಸುಲಭವಾಗಿರಲಿಲ್ಲ. ಭಾರತ ಮತ್ತು ಸ್ವೀಡನ್ ನಡುವೆ ಸಂಚಾರ ಕಡಿಮೆ. ಹೀಗಾಗಿ ವಿಮಾನಗಳೂ ಕಡಿಮೆ. ಟಿಕೆಟ್ ಸಿಗುವುದಿಲ್ಲ. ವಿಷಯ ಗೊತ್ತಾದ ಕ್ಷಣದಿಂದ ಚಡಪಡಿಸುತ್ತಿದ್ದ ದರ್ಶನ್, ಪತ್ನಿ ವಿಜಯಲಕ್ಷ್ಮಿಯನ್ನು ತಕ್ಷಣ ಅಂಬಿ ಮನೆಗೆ ಕಳಿಸಿದರು. ಸುಮಲತಾರನ್ನು ಬಿಟ್ಟು ಹೋಗದಂತೆ ಸೂಚಿಸಿದರು. ಇತ್ತ ನಾವು ಟಿಕೆಟ್ ಹೊಂದಿಸಲು ಒದ್ದಾಡುತ್ತಿದ್ದೆವು ಎಂದು ಆ ದಿನದ ಘಟನೆ ಹೇಳಿದ್ದಾರೆ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್.

  ಬಿ.ಸುರೇಶ್, ಸ್ವೀಡನ್‍ನಿಂದ ಫ್ಲೈಟ್ ಸಿಗದೆ ಸ್ವೀಡನ್‍ನಿಂದ ದುಬೈಗೆ ಒಂದು, ದುಬೈನಿಂದ ಬೆಂಗಳೂರಿಗೆ ಒಂದು ಫ್ಲೈಟ ಬುಕ್ ಮಾಡಿದ್ರು. ಬೇರೆ ಮಾರ್ಗವೇ ಇರಲಿಲ್ಲ. ದುಬೈನಲ್ಲಿ ಬೆಂಗಳೂರಿನ ವಿಮಾನಕ್ಕಾಗಿಯೇ 4 ಗಂಟೆ ಕಾಯಬೇಕಾಯ್ತು. ಎಮರ್ಜೆನ್ಸಿಯಲ್ಲಿ ಟಿಕೆಟ್ ಬುಕ್ ಮಾಡಿದ್ದರಿಂದಾಗಿ 4 ಲಕ್ಷ ರೂ. ಖರ್ಚಾಯ್ತು. ಹಣ ಮುಖ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ ಶೈಲಜಾ ನಾಗ್.

  ಸ್ವೀಡನ್‍ನಲ್ಲಿ ನಡೆಯಬೇಕಿದ್ದ ಯಜಮಾನ ಚಿತ್ರದ ಇನ್ನೊಂದು ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಇಡೀ ಚಿತ್ರತಂಡ ಈಗ ಬೆಂಗಳೂರಿಗೆ ವಾಪಸ್ ಆಗಿದೆ. ಜನವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

 • ಅಪ್ಪಾಜಿ ಸುದ್ದಿ ತಿಳಿದಾಗ ದರ್ಶನ್ ರಿಯಾಕ್ಷನ್ ಹೇಗಿತ್ತು..?

  darshan was in state of shock when he heard of ambi's death

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬರೀಷ್ ಮೇಲೆ ಇಟ್ಟಿದ್ದ ಗೌರವ ಗುಟ್ಟೇನಲ್ಲ. ಅವರು ತಲೆ ಕೊಡು ಅಂದ್ರೆ ನಾನು ಅದಕ್ಕೂ ರೆಡಿ ಎನ್ನುತ್ತಿದ್ದ ದರ್ಶನ್, ಅಂಬಿಯ ಸಾವಿನ ಸುದ್ದಿ ತಿಳಿದಾಗ ಸ್ವೀಡನ್‍ನಲ್ಲಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ದಿಗ್ಭ್ರಾಂತರಾಗಿ ಕುಳಿತುಬಿಟ್ಟರು. ಕಣ್ಣಲ್ಲಿ ನೀರು ಹರಿಯುತ್ತಿತ್ತು. ಮಾತಿಲ್ಲ.. ಏನಿಲ್ಲ. ಅವರನ್ನು ಸಮಾಧಾನಿಸುವುದು ಹೇಗೆಂದು ನಮಗೂ ಗೊತ್ತಾಗಲಿಲ್ಲ. ನಾವು ಅವರನ್ನು ನೋಡುತ್ತಾ ಶಾಕ್‍ನಲ್ಲಿದ್ದೆವು. ಸುಮಾರು ಹೊತ್ತಿನ ನಂತರ ದರ್ಶನ್ ಅವರೇ ಸಾವರಿಸಿಕೊಂಡು ಎದ್ದು ಬಂದು ನಾನು ಈಗಲೇ ಹೊರಡಬೇಕು ಎಂದರು. ನೀವೊಬ್ಬರೇ ಅಲ್ಲ, ನಾವೆಲ್ಲರೂ ಬರುತ್ತೇವೆ ಎಂದು ಹೇಳಿದೆವು ಎಂದು ತಿಳಿಸಿದ್ದಾರೆ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್.

  ಆದರೆ, ಅದೇನೇ ಪ್ರಯತ್ನ ಪಟ್ಟರೂ ಸಿಕ್ಕಿದ್ದು ಒಂದೇ ಟಿಕೆಟ್. ದರ್ಶನ್ ಇದ್ದ ಸ್ಥಿತಿಯಲ್ಲಿ ಒಬ್ಬರನ್ನೇ ಕಳಿಸುವುದು ಹೇಗೆ ಅನ್ನೋ ಚಿಂತೆ. ಆದರೆ, ಅದನ್ನೂ ಬಿಟ್ಟರೆ ಬೇರೆ ಮಾರ್ಗವಿಲ್ಲ ಅನ್ನೋ ಸ್ಥಿತಿ. ಹೀಗಾಗಿ ನಾವು ಸ್ವೀಡನ್‍ನಲ್ಲೇ ಉಳಿದುಕೊಂಡು ದರ್ಶನ್ ಅವರನ್ನು ಕಳಿಸಿಕೊಟ್ಟೆವು ಎಂದು ಘಟನೆ ವಿವರಿಸಿದ್ದಾರೆ ಶೈಲಜಾ ನಾಗ್.

  ಸ್ವೀಡನ್‍ನಿಂದ ದುಬೈಗೆ ಬಂದ ದರ್ಶನ್, ಅಲ್ಲಿ ಕನೆಕ್ಟಿಂಗ್ ಫ್ಲೈಟ್‍ಗಾಗಿ 4 ಗಂಟೆ ಕಾದು.. ಅಲ್ಲಿಂದ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದಿಳಿದ ಮೇಲೆ ಮನೆಗೆ ಹೋಗದೆ, ಅಂತ್ಯ ಸಂಸ್ಕಾರದಲ್ಲಿ ದಿನವಿಡೀ ಇದ್ದರು ದರ್ಶನ್.

 • ಅಪ್ಪು ಅಷ್ಟೇ ಅಲ್ಲ, ಅಪ್ಪು ಅಭಿಮಾನಿಗಳೂ ಕುರುಕ್ಷೇತ್ರಕ್ಕೆ ವೇಯ್ಟಿಂಗ್

  puneeth waiting for kurukshetra

  ಕುರುಕ್ಷೇತ್ರ ಚಿತ್ರ ರಿಲೀಸ್‍ಗೂ ಮುನ್ನವೇ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಸಿನಿಮಾ ಎಂಬ ಕಾರಣಕ್ಕೆ ಅಲ್ಲ. ಅದು ಇಡೀ ಕನ್ನಡ ಚಿತ್ರರಂಗದ ಕಲಾವಿದರ ದಂಡನ್ನೇ ಒಟ್ಟುಗೂಡಿಸಿರುವ ಸಿನಿಮಾ. ಅದರಲ್ಲೂ ದುರ್ಯೋಧನನಾಗಿ ಕಾಣಿಸಿಕೊಂಡಿರುವ ದರ್ಶನ್ ನಿರೀಕ್ಷೆಯ ಶಿಖರವನ್ನೇ ಅಭಿಮಾನಿಗಳ ಎದುರು ಇಟ್ಟುಬಿಟ್ಟಿದ್ದಾರೆ.

  ಸಹಜವಾಗಿಯೇ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗದ ಎಲ್ಲ ತಾರೆಯರೂ ನಿರೀಕ್ಷೆಯಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕುರುಕ್ಷೇತ್ರ ಚಿತ್ರದ ಬಗ್ಗೆ ಪ್ರಶ್ನೆಗಳು ಎದುರಾದವು. ದರ್ಶನ್ ಅವರ ಲುಕ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪುನೀತ್, ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದರು.

  ಈಗ ಡಿ ಬಾಸ್ ಫ್ಯಾನ್ಸ್ ಅಷ್ಟೇ ಅಲ್ಲ, ಅಪ್ಪು ಫ್ಯಾನ್ಸ್ ಕೂಡಾ ದರ್ಶನ್ ಲುಕ್ಕು, ಗೆಟಪ್‍ಗೆ ಮಾರು ಹೋಗಿದ್ದಾರೆ. ದರ್ಶನ್, ದುರ್ಯೋಧನನ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಎಂದು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಐತಿಹಾಸಿಕ ಅಥವಾ ಪೌರಾಣಿಕ ಪಾತ್ರಗಳಿದ್ದರೆ, ಅದಕ್ಕೆ ದರ್ಶನ್ ಮೊದಲ ಆಯ್ಕೆ ಎಂದಿದ್ದಾರೆ.

  ಇತ್ತೀಚೆಗೆ ಕನ್ನಡದ ಸ್ಟಾರ್‍ಗಳ ಅಭಿಮಾನಿಗಳ ನಡುವೆ ವಾರ್‍ಗಷ್ಟೇ ಸಾಕ್ಷಿಯಾಗುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಂಚಲನ ಸೃಷ್ಟಿಸಿರುವುದು ನಿಜ. ಎಲ್ಲ ನಟರು, ಕಲಾವಿದರನ್ನೂ ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಕೋಟಿಯಾಗಲಿ.

 • ಅಭಿಮಾನಿಗಳ ಕೆಲಸವನ್ನು ಅಭಿಮಾನದಿಂದ ಮಾಡ್ತಿರೋ ದರ್ಶನ್

  darshan busy with distribution of fan's donations

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಈ ಬಾರಿ ಯಾವುದೇ ಆಡಂಬರ, ಅಬ್ಬರವಿಲ್ಲದೆ ಸರಳವಾಗಿ ಆಚರಿಸಲಾಗಿತ್ತು. ಹುಟ್ಟುಹಬ್ಬಕ್ಕೆ ಕೇಕ್, ಹಾರಗಳ ಬದಲು, ಧವಸ ಧಾನ್ಯ ತನ್ನಿ, ಅದನ್ನು ಸಿದ್ಧಗಂಗಾ ಮಠ ಸೇರಿದಂತೆ ವಿವಿಧ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುತ್ತೇನೆ ಎಂದು ಜವಾಬ್ದಾರಿ ಹೊತ್ತುಕೊಂಡಿದ್ದರು ದರ್ಶನ್.

  ಅಭಿಮಾನಿಗಳು, ಅಭಿಮಾನದಿಂದ ಹೊತ್ತು ತಂದಿದ್ದ ಧವಸ, ಧಾನ್ಯ, ಕಾಳು, ಬೇಳೆಗಳನ್ನು ದರ್ಶನ್ ಈಗ ರಾಜ್ಯದ ವಿವಿಧ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುತ್ತಿದ್ದಾರೆ. ಹಲವು ಲಾರಿಗಳ ಮೂಲಕ ಧವಸ, ಧಾನ್ಯ ಅಗತ್ಯವಿರುವವರ ಮಡಿಲು ಸೇರುತ್ತಿದೆ.

 • ಅಭಿಮಾನಿಗಳಿಗೆ ದರ್ಶನ್ ಬರೆದ ಪತ್ರ.. ಓದಲೇಬೇಕು

  darshan's letter to fans is a must read

  ಹುಟ್ಟುಹಬ್ಬದ ದಿನ ಸಂಭ್ರಮ ಬೇಡ. ಹಾರ ಬೇಡ. ಕೇಕ್ ಬೇಡ. ದಯವಿಟ್ಟು ಈ ವರ್ಷ ಆಚರಣೆ ಬೇಡ.. ಎಂದೆಲ್ಲ ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದ ಅಭಿಮಾನಿಗಳು `ನಾವು ನಿಮ್ಮ ಮನೆಗೆ ಅಕ್ಕಿ, ಬೇಳೆ ಮೊದಲಾದ ಆಹಾರ ಪದಾರ್ಥ ತಲುಪಿಸುತ್ತೇವೆ. ಅವುಗಳನ್ನು ಸಿದ್ಧಗಂಗಾ ಮಠಕ್ಕೆ ತಲುಪಿಸಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್, ಒನ್ಸ್ ಎಗೇಯ್ನ್ ಅಭಿಮಾನಿಗಳ ಎದುರು ಶರಣಾಗಿದ್ದಾರೆ.

  `ನನ್ನ ಹುಟ್ಟುಹಬ್ಬಕ್ಕೆ ನೀವು ಕೊಡುತ್ತಿರುವ ಆ ಉಡುಗೊರೆಯನ್ನು ಪ್ರತಿ ಜಿಲ್ಲೆಯ ಒಂದು ಅನಾಥಾಶ್ರಮಕ್ಕೆ, ಒಂದು ವೃದ್ಧಾಶ್ರಮಕ್ಕೆ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿ ನನ್ನದು. ಅದನ್ನು ನಾನು ಸಂತೋಷದಿಂದಲೇ ಮಾಡುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್‍ಗಳನ್ನು ಕಳುಹಿಸಿಕೊಡಿ' ಎಂದು ಮನವಿ ಮಾಡಿದ್ದಾರೆ.

  ಸ್ಸೋ.. ದರ್ಶನ್ ಅಭಿಮಾನಿಗಳೇ.. ಇನ್ನು ಸರದಿ ನಿಮ್ಮದು. ದವಸ ಧಾನ್ಯಗಳನ್ನು ಬಟ್ಟೆಯ ಬ್ಯಾಗುಗಳಲ್ಲಿ ದರ್ಶನ್ ಮನೆಗೆ ತಲುಪಿಸಿ. ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಹೊಣೆಯನ್ನು ದರ್ಶನ್ ಅವರೇ ಹೊತ್ತುಕೊಂಡಿದ್ದಾರೆ. 

 • ಅಭಿಮಾನಿಗಳಿಗೆ ಮತ್ತೊಮ್ಮೆ ದಾಸನಾದ ದರ್ಶನ್

  darshan autographs on fans auto

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ದಾಸನಾಗಿದ್ದಾರೆ. ಒನ್ಸ್ ಎಗೇಯ್ನ್.. ಅಭಿಮಾನಿಗಳ ಎದುರು. ಇತ್ತೀಚೆಗೆ ದರ್ಶನ್ ಅವರ ಆಟೋ ಡ್ರೈವರ್ ಅಭಿಮಾನಿಗಳು ಸೀದಾ ಅವರ ಮನೆಗೇ ಹೋಗುತ್ತಿದ್ದಾರೆ. ಮನೆಯಲ್ಲಿದ್ದರೆ ಅಭಿಮಾನಿಗಳನ್ನು ಸದಾ ಭೇಟಿ ಮಾಡುವ ದರ್ಶನ್‍ಗೆ ಅಭಿಮಾನಿಗಳದ್ದು ಒಂದೇ ಡಿಮ್ಯಾಂಡ್. ಆಟೊಗ್ರಾಫ್ ಪ್ಲೀಸ್.. ಅದೂ ಆಟೋ ಮೇಲೆ.

  ಇದು ದರ್ಶನ್ ಅಭಿಮಾನಿಗಳ ಕ್ರೇಜ್. ಇಷ್ಟು ದಿನ ಆಟೋಗಳ ಹಿಂದೆ, ದರ್ಶನ್ ಚಿತ್ರದ ಹೆಸರು, ಬಿರುದು, ಫೋಟೋ, ಚಿತ್ರ ಹಾಕಿಕೊಂಡು ಖುಷಿ ಪಡುತ್ತಿದ್ದ ಅಭಿಮಾನಿಗಳು, ಈಗ ದರ್ಶನ್ ಅವರಿಂದಲೇ ಆಟೋಗ್ರಾಫ್ ಹಾಕಿಸಿಕೊಳ್ಳುವ ಐಡಿಯಾ ಕಂಡುಕೊಂಡಿದ್ದಾರೆ.

 • ಅಭಿಮಾನಿಗಳೇ.. ದರ್ಶನ್ ಮನವಿಯನ್ನೊಮ್ಮೆ ಕೇಳಿ

  darshan image

  ನಲ್ಮೆಯ ಅಭಿಮಾನಿಗಳಲ್ಲಿ

  ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. ನನ್ನ ಹುಟ್ಟುಹಬ್ಬದ ದಿನ ನೀವೆಲ್ಲ ದೂರ ದೂರದ ಊರುಗಳಿಂದ ಬಂದು ನನಗೆ ಶುಭಾಶಯ ಕೋರಿ, ನಿಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುತ್ತೀರಿ. ಅದನ್ನು ನನ್ನ ಯಾವುದೋ ಪೂರ್ವಜನ್ಮದ ಪುಣ್ಯ ಎಂದೇ ಭಾವಿಸಿದ್ದೇನೆ. ಆದರೆ, ಹಾಗೆ ಸಂಭ್ರಮಪಡುವಾಗ ದಯವಿಟ್ಟು ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ. ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ. 

  ಅಕ್ಕಪಕ್ಕದ ಮನೆಯವರ ಕಾಂಪೌಂಡ್ ಪ್ರವೇಶಿಸುವುದು, ಹೂಕುಂಡಗಳನ್ನು ಒಡೆಯುವುದು, ಅವರ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಅನುಚಿತ ವರ್ತನೆಗಳನ್ನು ತೋರಿಸಬೇಡಿ. ನನ್ನ ಮೇಲೆ ಅಭಿಮಾನ ಇಟ್ಟಿರುವ ನೀವೆಲ್ಲ ನನ್ನ ಈ ಪ್ರಾರ್ಥನೆಯನ್ನು ಈಡೇರಿಸುತ್ತೀರಿ ಎಂದು ನಂಬಿದ್ದೇನೆ.

  ಇಂತಿ 

  ನಿಮ್ಮ ಪ್ರೀತಿಯ ದಾಸ 

  ದರ್ಶನ್

  ಅಂದಹಾಗೆ ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬವಿದೆ. ದರ್ಶನ್, ಅಭಿಮಾನಿಗಳನ್ನು ಯಾವತ್ತಿಗೂ ಮಿಸ್ ಮಾಡಿಕೊಳ್ಳೋದಿಲ್ಲ. ಅಭಿಮಾನಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಅವರ ಈ ಮನವಿಯನ್ನು ಅಭಿಮಾನಿಗಳೂ ಈಡೇರಿಸ್ತಾರಾ..ನೋಡೋಣ.

 • ಅಭಿಮಾನಿಗಳೇ.. ಹುಟ್ಟುಹಬ್ಬ ಬೇಡ - ದರ್ಶನ್ ಮನವಿ

  darshan requests fans not to celebrate birthday

  ಇದು ಅನಿರೀಕ್ಷಿತವೇನಲ್ಲ. ಅಂಬರೀಷ್ ಮತ್ತು ದರ್ಶನ್ ನಡುವಿನ ಬಾಂಧವ್ಯ ನೋಡಿದ್ದವರಿಗೆ ಇದು ಅಚ್ಚರಿಯೂ ಅಲ್ಲ. ದರ್ಶನ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ, ಯಾರೇ ಕೇಕ್ ತಂದರೂ ಕೇಕ್ ಕತ್ತರಿಸುವುದಿಲ್ಲ. ದಯವಿಟ್ಟು ಒತ್ತಾಯ ಮಾಡಬೇಡಿ. ಇದೊಂದು ವರ್ಷ ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ ದರ್ಶನ್. ಅವರು ಅಂಬಿ ಹೆಸರು ಹೇಳುತ್ತಿಲ್ಲ.. ಅಷ್ಟೆ..

  ಇತ್ತ.. ತಿಂಗಳಿಗೆ ಮೊದಲೇ ದರ್ಶನ್ ಹುಟ್ಟುಹಬ್ಬಕ್ಕೆ ಪ್ಲಾನ್ ಮಾಡಿಕೊಂಡಿರೋ ಅಭಿಮಾನಿಗಳು, ಡಿ ಬಾಸ್ ಎಂಬ ಬೆಳ್ಳಿ ಕಡಗಗಳನ್ನು ಮಾಡಿಸಿ, ಗಿಫ್ಟ್ ಕೊಡೋಕೆ ರೆಡಿಯಾಗುತ್ತಿದ್ದಾರೆ. 

 • ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ದರ್ಶನ್

  darshan fulfills his last wish

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪ್ರೀತಿಯ ದಾಸ. ಇತ್ತೀಚೆಗೆ ತಾನೆ ಚಿತ್ರಲೋಕದಲ್ಲಿ ದರ್ಶನ್ ಅಭಿಮಾನಿಯೊಬ್ಬನ ಕೊನೆಯ ಆಸೆ ಸ್ಟೋರಿ ನೋಡಿದ್ದಿರಿ. ಶಿವಮೊಗ್ಗದ ರೇವಂತ್ ಎಂಬ ದರ್ಶನ್ ಅಭಿಮಾನಿ, ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಸಾವಿನ ಸನಿಹದಲ್ಲಿದ್ದಾರೆ. ಆದರೆ, ಕೊನೆಯದಾಗಿ ದರ್ಶನ್ ಅವರನ್ನೊಮ್ಮೆ ನೋಡಬೇಕು ಅನ್ನೋದು ಅವರ ಆಸೆಯಾಗಿತ್ತು. ಅಭಿಮಾನಿಯ ಅಂತಿಮ ಆಸೆಯನ್ನು ದರ್ಶನ್ ಈಡೇರಿಸಿದ್ದಾರೆ.

  ಆದರೆ, ವೈಯಕ್ತಿಕವಾಗಿ ಶಿವಮೊಗ್ಗಕ್ಕೆ ಹೋಗಲು ಸಾಧ್ಯವಾಗಿಲ್ಲ. ವಿಡಿಯೋ ಕಾಲ್ ಮೂಲಕ ಅಭಿಮಾನಿಯ ಜೊತೆ ಮಾತನಾಡಿದ ದರ್ಶನ್, ವೈದ್ಯರು ಹೇಳುವ ಸೂಚನೆಗಳನ್ನು ಪಾಲಿಸುವಂತೆ ಹೇಳಿದ್ದಾರೆ. ರೇವಂತ್ ತಂದೆ, ತಾಯಿಗೂ ಧೈರ್ಯ ಹೇಳಿದ್ದಾರೆ. ಶೀಘ್ರದಲ್ಲೇ ಶಿವಮೊಗ್ಗಕ್ಕೆ ಬಂದು ಭೇಟಿ ಮಾಡುತ್ತೇನೆ ಎಂದು ಧೈರ್ಯ ತುಂಬಿದ್ದಾರೆ ದರ್ಶನ್. 

   

   

 • ಅಭಿಮಾನಿಯಾಗಿ.. ಅಭಿಮಾನದಿಂದ ದರ್ಶನ್‍ಗೆ ನಾಗೇಂದ್ರ ಪ್ರಸಾದ್ ಹಾಡಿನ ಕಾಣಿಕೆ

  darshan receives gift from v nagendra prasad

  ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಈ ಬಾರಿಯ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್ ಕೊಡುತ್ತಿದ್ದಾರೆ. ಈ ಹಾಡು ಅಭಿಮಾನಿಗಳ ಕಣ್ಣಲ್ಲಿ ದರ್ಶನ್ ಹೇಗೆ ಕಾಣ್ತಾರೆ ಅನ್ನೋದ್ರ ಮೇಲೆಯೇ ರಚಿತವಾಗಿದೆ. ಫೆಬ್ರವರಿ 16ರಂದು ಈ ಹಾಡನ್ನು ನಾಗೇಂದ್ರ ಪ್ರಸಾದ್ ದರ್ಶನ್  ಅವರಿಗಾಗಿ ಅರ್ಪಿಸಲಿದ್ದಾರೆ.

  ದರ್ಶನ್ ಚಿತ್ರಗಳಲ್ಲಿ ಬಹುತೇಕ ಚಿತ್ರಗಳಿಗೆ ಹಾಡು ಬರೆದಿರುವ ನಾಗೇಂದ್ರ ಪ್ರಸಾದ್, ಪ್ರತಿ ವರ್ಷವೂ ಗೆಳೆಯನಿಗೆ ಒಂದಲ್ಲಾ ಒಂದು ವಿಶೇಷ ಉಡುಗೊರೆ ಕೊಡುತ್ತಾರೆ. ಕಳೆದ ಬಾರಿ ಗೆಳೆಯನಿಗೆ `ಶತಸೋದರಾಗ್ರಜ ಶರವೀರ' ಅನ್ನೋ ಬಿರುದು ಕೊಟ್ಟಿದ್ದ ನಾಗೇಂದ್ರ ಪ್ರಸಾದ್, ಈಗ ಹಾಡಿಗೆ ಅಂತಿಮ ರೂಪ ಕೊಡುತ್ತಿದ್ದಾರೆ.

  ಈ ಹಾಡು ಅಭಿಮಾನಿಗಳಿಗೆ ಖಂಡಿತಾ ಇಷ್ಟವಾಗಲಿದೆ. ಹಾಡಿಗೆ ಸಂಗೀತವನ್ನೂ ನಾನೇ ನೀಡುತ್ತಿದ್ದೇನೆ ಎಂದಿದ್ದಾರೆ ನಾಗೇಂದ್ರ ಪ್ರಸಾದ್.

 • ಅಮರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರಾ..?

  darshan in guest role for abishek ambi's amar

  ರೆಬಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ ಅಮರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಾಗಶೇಖರ್. ಬೈಕ್ ರೇಸ್ ಹಿನ್ನೆಲೆಯ ಲವ್ ಸ್ಟೋರಿಯಲ್ಲಿ ಈಗ ಹೊಸ ಅತಿಥಿ.. ಅಲ್ಲಲ್ಲ ಸಾರಥಿಯ ಆಗಮನವಾಗಿದೆಯಂತೆ.

  ಅಪ್ಪಾಜಿ ಮಗನ ಮೊದಲ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಅತಿಥಿ ನಟನಾಗಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. 

  ಆದರೆ, ದರ್ಶನ್ ಪಾತ್ರ ಏನು..? ಸಿನಿಮಾದಲ್ಲಿ ಎಷ್ಟು ಹೊತ್ತು ಇರುತ್ತಾರೆ ಎಂಬ ಸುದ್ದಿ ಸದ್ಯಕ್ಕೆ ಸೀಕ್ರೆಟ್.

  ಅಂದಹಾಗೆ ಕನ್ನಡದಲ್ಲಿ ಅತೀ ಹೆಚ್ಚು ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿರುವ ಹೆಗ್ಗಳಿಕೆ ಅಂಬರೀಶ್ ಅವರದ್ದು. ಶಂಕರ್‍ನಾಗ್, ಪ್ರಭಾಕರ್, ಜಗ್ಗೇಶ್, ದೇವರಾಜ್ ಸೇರಿದಂತೆ ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿ ಪ್ರೋತ್ಸಾಹಿಸಿದ್ದವರು ಅಂಬರೀಶ್. 

 • ಅರ್ಜುನನ ಜೊತೆ ಐರಾವತ

  darshan meets airavatha

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳ ಪ್ರೇಮಿ ಅನ್ನೋದು ಗೊತ್ತು. ಮೈಸೂರಿನ ತಮ್ಮ ಫಾರ್ಮ್‍ಹೌಸ್‍ನಲ್ಲಿ ಹಲವಾರು ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿರುವ ದರ್ಶನ್, ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಕೂಡಾ ಪಡೆದಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿರುವ ದರ್ಶನ್, ಕಾಡಿನಲ್ಲಿ ಸಫಾರಿ ಮಾಡಿದ್ದಾರೆ.

  ನಾಗರಹೊಳೆ ಅಭಯಾರಣ್ಯಕ್ಕೆ ತೆರಳಿ ಅರ್ಜುನನ ಜೊತೆ ಸಮಯ ಕಳೆದಿದ್ದಾರೆ. ಅರ್ಜುನ ಎಂದರೆ ಗೊತ್ತಲ್ಲ, ದಸರಾದಲ್ಲಿ ಚಾಮುಂಡೇಶ್ವರಿ ವಿಗ್ರಹ ಇರುವ ಅಂಬಾರಿ ಹೊರುವ ಭಾಗ್ಯವಂತ. ಅರ್ಜುನನಿಗೆ ಇಷ್ಟವಾದ ಬೆಲ್ಲವನ್ನು ತಿನ್ನಿಸಿ ಸಂಭ್ರಮಿಸಿರುವ ದರ್ಶನ್, ಕಾಡಿನಲ್ಲೆಲ್ಲ ಸುತ್ತಾಡಿದ್ದಾರೆ. ಅರ್ಜುನನ ಜೊತೆ ನಿಂತಿರುವ ದರ್ಶನ್ ಫೋಟೋ ನೋಡಿದ ಅಭಿಮಾನಿಗಳು, ಅರ್ಜುನನ ಜೊತೆ ಐರಾವತ ಎನ್ನುತ್ತಿದ್ದಾರೆ. 

 • ಅರ್ಜುನ್, ಚಿರಂಜೀವಿ & ಧ್ರುವ ಸರ್ಜಾ ಜೊತೆ ದರ್ಶನ್

  darshan and sarja's team up

  ಸರ್ಜಾ ಕುಟುಂಬದಿಂದ ಮೂವರು ಹೀರೋಗಳು. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಈಗ ಅವರ ಜೊತೆಗೊಬ್ಬ ಹೀರೋಯಿನ್. ಐಶ್ವರ್ಯಾ. ಅರ್ಜುನ್ ಸರ್ಜಾರ ಮಗಳು ಐಶ್ವರ್ಯಾ ನಟಿಸುತ್ತಿರುವ ಮೊದಲ ಚಿತ್ರ ಪ್ರೇಮಬರಹ. 

  darshan_sarjas_1prema_barah.jpgಆ ಚಿತ್ರದಲ್ಲಿ ಸರ್ಜಾ ಫ್ಯಾಮಿಲಿ ಜೊತೆ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ಹನುಮನ ಭಕ್ತರಾಗಿ ಹೆಜ್ಜೆ ಹಾಕಿದ್ದಾರೆ. ತಿಪ್ಪಸಂದ್ರ ಬಳಿಯ ಆಂಜನೇಯ ದೇಗುದಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್, ಅರ್ಜುನ್, ಧ್ರುವ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೇ ಹೆಜ್ಜೆ ಹಾಕಿರುವುದು ವಿಶೇಷ.

  ಅಂದಹಾಗೆ ದರ್ಶನ್, ಹೀಗೆ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಹೊಸದೇನಲ್ಲ. ಅರಸು, ಮೊನಾಲಿಸಾ, ಚೌಕ, ನಾಗರಹಾವು.. ಹೀಗೆ ಹಲವು ಚಿತ್ರಗಳಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಪ್ರೇಮ ಬರಹದಲ್ಲಿ ಹೆಜ್ಜೆ ಹಾಕಿರುವುದು ಸರ್ಜಾ ಫ್ಯಾಮಿಲಿ ಮೇಲಿನ ಗೌರವಕ್ಕೆ.

 • ಆಂಜನೇಯ ಆಗ್ತಾರಾ ದರ್ಶನ್..?

  will darshan act in anjaneya

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಂಜನೇಯ ಆಗ್ತಾರಾ..? ಅಂಬರೀಷನಾಗಿ, ಕೆಂಪೇಗೌಡನಾಗಿ, ಚಕ್ರವರ್ತಿಯಾಗಿ ಮಿಂಚಿರುವ ದರ್ಶನ್ ಮುಂದಿನ ಸಿನಿಮಾದಲ್ಲಿ ಆಂಜನೇಯ ಆಗ್ತಾರೆ ಅನ್ನೋ ಸುದ್ದಿ ಇದೆ. ಅದು ಪ್ರೇಮ್ ನಿರ್ದೇಶನದ ಸಿನಿಮಾ. ಪ್ರೇಮ್ ವಿಲನ್ ಚಿತ್ರ ಮುಗಿಸಿ, ಇತ್ತ ದರ್ಶನ್ ಬಿ.ಕುಮಾರ್ ಸಿನಿಮಾ ಮುಗಿಸಿದ ಮೇಲೆ ಸೆಟ್ಟೇರಬೇಕಿರುವ ಸಿನಿಮಾ.

  ಕರಿಯ ಚಿತ್ರದ ನಂತರ ದರ್ಶನ್ ಮತ್ತು ಪ್ರೇಮ್ ಜೋಡಿ ಮತ್ತೆ ಒಂದಾಗುತ್ತಿದೆ. ಮೂಲಗಳ ಪ್ರಕಾರ, ಆ ಚಿತ್ರಕ್ಕೆ ಆಂಜನೇಯ ಅನ್ನೋ ಟೈಟಲ್ ಫಿಕ್ಸ್ ಆಗಿದೆ. ಆದರೆ ಫೈನಲ್ ಆಗಿಲ್ಲ. ಏಕೆಂದರೆ, ಆ ಚಿತ್ರದ ನಿರ್ದೇಶಕ ಪ್ರೇಮ್. 

 • ಆಗೋಯ್ತು ಮರ್ಯಾದೆ ಸಸ್ತಾ ಮಾಲು..

  yajamana shooting completed

  ಯಜಮಾನ ಚಿತ್ರದ ಹಾಡುಗಳ ಶೂಟಿಂಗ್ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಆಗೋಯ್ತು ಮರ್ಯಾದೆ ಸಸ್ತಾ ಮಾಲು.. ಹಾಡನ್ನು ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಮೇಲೆ ಚಿತ್ರೀಕರಿಸಲಾಗಿದ್ದು, ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಈ ಹಾಡಿನೊಂದಿಗೆ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸೆನ್ಸಾರ್ ಮುಂದೆ ಬರಲಿದ್ದಾನೆ ಯಜಮಾನ.

  ಯಜಮಾನ ಮುಗಿಯುತ್ತಿದ್ದಂತೆ ಚುರುಕಾಗುವುದು ಒಡೆಯ ಚಿತ್ರದ ಚಿತ್ರೀಕರಣ. ಜೊತೆ ಜೊತೆಯಲ್ಲೇ ರಾಬರ್ಟ್ ಚಿತ್ರದ ಚಿತ್ರೀಕರಣ ಶುರುವಾಗಲಿದೆ. 2019ರಲ್ಲಿ ಯಜಮಾನ ಚಿತ್ರವೇ ಮೊದಲು ತೆರೆಗೆ ಬರಲಿದ್ದು, ಕುರುಕ್ಷೇತ್ರ ಆನಂತರ ರಿಲೀಸ್ ಆಗಲಿದೆ ಎನ್ನಲಾಗಿದೆ.

Chemistry Of Kariyappa Movie Gallery

BellBottom Movie Gallery