` darshan, - chitraloka.com | Kannada Movie News, Reviews | Image

darshan,

 • Virat Audio Release on January 12th

  viraat image

  The songs of season's most anticipated release 'Virat' starring Darshan is all set to be released on the 12th of January in Bangalore. The songs for 'Virat' has been composed by Darshan's regular music composer V Harikrishna and the songs will be released by dignitaries of Kannada cinema in a low profile function organised in Bangalore.

  'Virat' is expected to release on January 29th. M N Kumar will be distributing the film in Bangalore-Kolar-Tumkur and Mysore-Mandya-Hassan-Coorg sectors.

 • Will Concentrate on My Work - Nikitha

  nikitha tukral image

  Actress Nikitha and the controversies have gone together ever since the Bollywood girl had signed her film 'Prince' with Challenging Star Darshan.  The actress has been part of controversies eversince she signed this film and gossip mills were hinting about her marriage with Darshan.   But the worst followed later when Nikitha was blamed for the deep  fissures in the marital life of Darshan and Ms. Vijayalakshmi.

  Now, that Nikitha  has come out stronger from all the controversies and has been working in many good films, she is establishing her firm foothold in South Indian film industry again.  She has been working with Tamil Hero Karthi and she has recently did an item number in the film Snehitharu which had  Darshan also doing a special role.  But wait, the sequences featuring Darshan and Nikitha were separately shot for two different story plots.   Nikitha did an item number with the film's heroes Vijaya Raghavendra,  Tarun, Ravi Shankar and Srujan

  Lokesh which was shot in Nice Road in Bengaluru while Darshan's fight sequence and a few sequences were shot in Chennai Port.

  But Nikitha herself is not worried about the controversies surrounding her selection in "Snehitharu'.   "When producer Soundarya approached me for being part of the film for a special song, I asked him whether he really needed me to perform.  He and the film's director Ram Narayan spoke to me and convinced how my song is important for the forward movement of the story and reiterated that I was a unanimous choice for the song number.  I later agreed to be part of this film. It is a cool song and I really liked performing for the number' says Nikitha.

 • `ಕರಿಯ' ಪ್ರೇಮ್‍ಗೆ 15 ವರ್ಷ

  kariya prem, darshan image

  ಕರಿಯ. 2003ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬೆಳಕಿಗೆ ಬಂದವರು ಪ್ರೇಮ್. ಮೆಜೆಸ್ಟಿಕ್‍ನಿಂದ ಹೀರೋ ಆಗಿದ್ದ ದರ್ಶನ್‍ಗೆ ಸ್ಟಾರ್ ಪಟ್ಟ ನೀಡಿದ ಚಿತ್ರವೂ ಹೌದು. ಕರಿಯ ಚಿತ್ರದ ಕೆಂಚಾಲೋ.. ಮಚ್ಚಲೋ.., ಹೃದಯದ ಒಳಗೆ ಹೃದಯವಿದೆ.. ಮಾತಾಡು ಸಾಕು.. ನನ್ನಲಿ ನಾನಿಲ್ಲ.. ಹೀಗೆ ಎಲ್ಲ ಹಾಡುಗಳು ಇಂದಿಗೂ ಕೇಳುತ್ತವೆ. ಕಿವಿಯಲ್ಲಿ ಗುನುಗುಡುತ್ತವೆ.

  ಆ ಚಿತ್ರ ರಿಲೀಸ್ ಆಗಿ 15 ವರ್ಷ. ಕರಿಯ ಸಿನಿಮಾ ರಿಲೀಸ್ ಆದಾಗ ಕರಿಯ ಪ್ರೇಮ್ ಆಗಿ, ಎಕ್ಸ್‍ಕ್ಯೂಸ್ ಮಿ ಪ್ರೇಮ್ ಆಗಿ, ಜೋಗಿ ಪ್ರೇಮ್ ಆಗಿ.. ಚಿತ್ರಗಳ ಮೂಲಕವೇ ಸ್ಟಾರ್ ಆದವರು ನಿರ್ದೇಶಕ ಪ್ರೇಮ್. ಅವರಿಗೀಗ ಚಿತ್ರರಂಗಕ್ಕೆ ಬಂದ 15ನೇ ವರ್ಷದ ಸಂಭ್ರಮ.

  ಕರಿಯ ಚಿತ್ರದಿಂದ ನನ್ನ ಚಿತ್ರಜೀವನ ಆರಂಭವಾಯಿತು. ಆ ಚಿತ್ರಕ್ಕೆ ಅವಕಾಶ ಕೊಟ್ಟ ನಿರ್ಮಾಪಕ ಆನೇಕಲ್ ಬಾಲರಾಜ್, ನಟ ದರ್ಶನ್ ಹಾಗೂ ತಂತ್ರಜ್ಞರು ಎಲ್ಲರಿಗೂ ಧನ್ಯವಾದಗಳು ಎಂದಿರುವ ಪ್ರೇಮ್, ಕರಿಯ ಚಿತ್ರ ಹಿಟ್ ಆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

  ಈಗ ದಿ ವಿಲನ್ ಚಿತ್ರ ನಿರ್ದೇಶಿಸುತ್ತಿರುವ ಪ್ರೇಮ್‍ಗೆ ಶುಭವಾಗಲಿ.

 • ಅಂತಿಮ ಹಂತದಲ್ಲಿ ಕುರುಕ್ಷೇತ್ರ

  kurukshetra image

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಅಂತಿಮ ಹಂತದಲ್ಲಿದೆ. ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾ, 20 ಸೆಟ್‍ಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ದಿನಕ್ಕೆ 700ರಿಂದ 800 ಕೆಲಸಗಾರರು ಕೆಲಸ ಮಾಡುತ್ತಿರುವುದು ವಿಶೇಷ.

  ಪತ್ರಕರ್ತರನ್ನೆಲ್ಲ ಹೈದರಾಬಾದ್‍ನ ಸೆಟ್‍ಗೆ ಕರೆಸಿಕೊಂಡು ಚಿತ್ರದ ಶೂಟಿಂಗ್ ವೈಭವ ಪರಿಚಯಿಸಿದ್ದಾರೆ ಮುನಿರತ್ನ. ಅಂಬಾರಿ ಮೇಲೆ ಬರುತ್ತಿರುವ ದರ್ಶನ್, ದುರ್ಯೋಧನನಿಗೆ ಬಹುಪರಾಕ್ ಹೇಳುವ ದೃಶ್ಯ, ಆ ದೃಶ್ಯದ ರಾಜವೈಭವ ಎಲ್ಲವನ್ನೂ ಅದ್ದೂರಿಯಾಗಿ ತರಲಾಗುತ್ತಿದೆ.

  ಚಿತ್ರದ ಸೆಟ್‍ಗೆ ಬೇರೆ ಚಿತ್ರರಂಗದ ಹಲವಾರು ಜನ ಬಂದು ನೋಡಿಕೊಂಡು ಹೋಗಿದ್ದಾರೆ. ಇಷ್ಟು ಅದ್ದೂರಿತನ ನಿಮ್ಮ ಕನ್ನಡಕ್ಕೆ ವರ್ಕೌಟ್ ಆಗುತ್ತಾ ಎಂದು ಹಲವರು ಕೇಳಿದ್ದಾರಂತೆ. ಅದನ್ನು ಸವಾಲಾಗಿ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಮುನಿರತ್ನ.

 • ಅಂದು ವಿಷ್ಣು.. ಈಗ ದರ್ಶನ್ ಯಜಮಾನ

  darshan becomes yajamana

  18 ವರ್ಷಗಳ ಹಿಂದೆ, ವಿಷ್ಣುವರ್ಧನ್ ಅಭಿನಯದ ಯಜಮಾನ ಚಿತ್ರ ತೆರೆಕಂಡಿತ್ತು. ವಿಷ್ಣು ದ್ವಿಪಾತ್ರದಲ್ಲಿ ನಟಿಸಿದ್ದ ಚಿತ್ರದಲ್ಲಿ ಪ್ರೇಮಾ, ಶಶಿಕುಮಾರ್, ಅಭಿಜಿತ್.. ಮೊದಲಾದವರು ನಟಿಸಿದ್ದರು. ಸೋದರ ಬಾಂಧವ್ಯದ ಆ ಚಿತ್ರ ಬಾಕ್ಶಾಫೀಸ್‍ನಲ್ಲಿ ಇತಿಹಾಸವನ್ನೇ ಸೃಷ್ಟಿಸಿತ್ತು. ಅದಾದ ನಂತರ ಅದೇ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿದೆ. ಹೊಸ ಯಜಮಾನನಾಗುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

  ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ನಿರ್ಮಾಪಕರಾದ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಯಜಮಾನ ಟೈಟಲ್‍ನ್ನು ಅಂತಿಮಗೊಳಿಸಿದ್ದಾರೆ. ಕುಮಾರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿತ್ತು. ಚಿತ್ರದ ಫಸ್ಟ್ ಲುಕ್, ದರ್ಶನ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗಲಿದೆ. ದರ್ಶನ್‍ರ ಯಜಮಾನ ಚಿತ್ರ ಕೂಡಾ, ವಿಷ್ಣು ಯಜಮಾನನಂತೆಯೇ ದಾಖಲೆ ಸೃಷ್ಟಿಸಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

  Related Articles :-

  Darshan's 51st Film Titled 'Yajamana'

  Darshan's 51st Film From Feb 19th

   

 • ಅಂಬರೀಷ್ @66 - ಮೊದಲ ಕೇಕ್ ತಂದವರು ಯಾರು..?

  rebel star 's 69th birthday

  ರೆಬಲ್‍ಸ್ಟಾರ್ ಅಂಬರೀಷ್‍ಗೆ ಇದು 66ನೇ ಹುಟ್ಟುಹಬ್ಬ. ಚಿತ್ರರಂಗದಲ್ಲಿ 49 ವಸಂತ ಪೂರೈಸಿರುವ ರೆಬಲ್‍ಸ್ಟಾರ್, ಪ್ರತಿವರ್ಷದಂತೆ ಈ ಬಾರಿಯೂ ಅಭಿಮಾನಿಗಳ ಮಧ್ಯೆಯೇ ಹುಟ್ಟುಹಬ್ಬ ಆಚರಿಸಿಕೊಂಡರು. ರಾತ್ರಿಯೇ ಮನೆಯ ಬಳಿ ಜಮಾಯಿಸಿದ್ದ ಅಭಿಮಾನಿಗಳನ್ನು ಎಂದಿನಂತೆ ಪ್ರೀತಿಯಿಂದ ಗದರಿ, ಕೇಕ್ ಕತ್ತಿರಿಸಿ ಖುಷಿಪಟ್ಟರು ಅಂಬರೀಷ್. ನಾನು ಇಷ್ಟು ವರ್ಷ ಸಂಪಾದಿಸಿದ್ದ ಅತಿದೊಡ್ಡ ಆಸ್ತಿಯೇ ಈ ಅಭಿಮಾನಿಗಳು, ಅವರ ಪ್ರೀತಿ ಎಂದ ಅಂಬರೀಷ್, ಹಿಂದಿನ ದಿನವಷ್ಟೇ ಮಗನ ಮೊದಲ ಚಿತ್ರದ ಮುಹೂರ್ತ ಮಾಡಿದ್ದ ಸಂಭ್ರಮದಲ್ಲಿದ್ದರು.

  ಮನೆಯಲ್ಲಿ ನಟಿಸೋಕೆ ಕಾಂಪಿಟೇಷನ್ ಜಾಸ್ತಿಯಾಗಿ ಬಿಟ್ಟಿದೆ. ಮೊದಲು ಇವಳಷ್ಟೇ ನಟಿಸ್ತಾ ಇದ್ಲು. ಈಗ ಮಗನೂ ಎಂಟ್ರಿ ಕೊಟ್ಟಿದ್ದಾನೆ. ರಾಜಕೀಯಕ್ಕೆ ನಿವೃತ್ತಿ ಹೇಳಿದಂತೆಯೇ ಸಿನಿಮಾದಿಂದಲೂ ದೂರ ಉಳಿದು ಆರಾಮ್ ಆಗಿರುವ ಆಲೋಚನೆಯಲ್ಲಿದ್ದೇನೆ ಎಂದರು ಅಂಬಿ. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಗಳ ನಂತರ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ ಅನ್ನೋ ಸುಳಿವು ಕೊಟ್ಟರು ಅಂಬರೀಷ್.

  ಅಂದಹಾಗೆ ಅಂಬರೀಷ್ ಮನೆಗೆ ಮೊದಲ ಕೇಕ್ ತಂದ ಅತಿ ದೊಡ್ಡ ಅಭಿಮಾನಿ ಯಾರು ಗೊತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್.

 • ಅಂಬರೀಷ್ ಬಾರೋ ಅಂದ್ರೆ ಬರ್ಬೇಕ್.. ಅಷ್ಟೆ..

  ambi calls darshan on stage

  ರೆಬಲ್‍ಸ್ಟಾರ್ ಅಂಬರೀಷ್, ಚಿತ್ರರಂಗದಲ್ಲೇ ಆಗಲೀ, ರಾಜಕೀಯದಲ್ಲೇ ಆಗಲಿ, ಮಂತ್ರಿಯೇ ಆಗಿರಲಿ.. ಆಗಿರದೇ ಇರಲಿ.. ಅವರು ಯಾವತ್ತಿಗೂ ಸ್ಟಾರ್. ಅದು ಮತ್ತೊಮ್ಮೆ ಸಾಬೀತಾಗಿದ್ದು, ಫಿಲಂಚೇಂಬರ್‍ನಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವೆ ಜಯಮಾಲಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ. ಅಂಬರೀಷ್ ಅವರ ಒಂದೊಂದೇ ಝಲಕ್‍ಗಳನ್ನು ಸುಮ್ಮನೆ ನೋಡಿ. 

  ಸಮಾರಂಭಕ್ಕೆ ಬಂದಿದ್ದ ದರ್ಶನ್, ಸಾಮಾನ್ಯರಂತೆ ವೇದಿಕೆಯ ಕೆಳಗೆ ಕುಳಿತಿದ್ದರು. ಅದು ಅಂಬರೀಷ್ ಕಣ್ಣಿಗೆ ಬಿತ್ತು. ದರ್ಶನ್‍ರನ್ನ ಕರೀರಿ ಅಂದ್ರೂ ದರ್ಶನ್, ನಾನು ಇಲ್ಲೇ ಇರುತ್ತೇನೆ ಎಂದು ಸನ್ನೆ ಮಾಡಿದರು. ಹೇಯ್.. ಎದ್ ಬಾರಯ್ಯ ಎಂದು ಗದರಿಸುತ್ತಿದ್ದಂತೆ, ಮರುಮಾತನಾಡದೆ ವೇದಿಕೆ ಮೇಲಿದ್ದರು ದರ್ಶನ್. ನಂತರವೂ ಅಷ್ಟೆ, ಇಳಿದು ಹೋಗೋಕೆ ಯತ್ನಿಸಿದ ದರ್ಶನ್‍ಗೆ ಹೇಯ್.. ಸುಮ್ನೆ ಕೂತ್ಕೋಬೇಕು ಅಂದ್ರು. ದರ್ಶನ್ ಗಪ್‍ಚುಪ್. ವೇದಿಕೆಯಲ್ಲೇ ಕುಳಿತುಬಿಟ್ರು.

  ಸಿಎಂಗೆ ಹೂಗುಚ್ಛ ನೀಡೋಕೆ ನೂಕುನುಗ್ಗಲಾಯ್ತು. ವೇದಿಕೆ ಮೆಲೆಲ್ಲ ಅಯೋಮಯ.  ಸಿಎಂ ಕೂಡಾ ಕಕ್ಕಾಬಿಕ್ಕಿಯಾದರು. ಆಗ ಇಡೀ ವೇದಿಕೆಯನ್ನು ಕ್ಷಣದಲ್ಲಿ ಕಂಟ್ರೋಲ್‍ಗೆ ತಗೊಂಡಿದ್ದು ಅಂಬಿ. ಏಯ್ ಹೋಗ್ರೋ ಸಾಕು, ಇನ್ನೂ ಯಾಕೆ ಇಲ್ಲೇ ನಿಂತಿದ್ದೀಯ.. ಕೆಳಗಡೆ ಹೋಗು.. ಎಂದ ಅಂಬರೀಷ್, ಚಿನ್ನೇಗೌಡರನ್ನು ವಿಶೇಷವಾಗಿ ಕರೆದರು. ಬನ್ನಿ ಚಿನ್ನೇಗೌಡ್ರೇ, ನೀವು ಎಲೆಕ್ಷನ್‍ಗೆ ನಿಂತಿದ್ದೀರ ಅಂತಾ ಗೊತ್ತು, ಬನ್ನಿ.. ಬನ್ನಿ ಎಂದು ವೇದಿಕೆಗೆ ಕರೆದರು. 

  ಅಂಬರೀಷ್ ಮಾತನಾಡುವಾಗಲೂ ಅಷ್ಟೆ, ಪಕ್ಕದ ಹಾಲ್‍ನ ಸೌಂಡು ಕಿವಿಗೆ ಬಿದ್ದಾಗ, 

  ಯಾವನೋ ಅವ್ನು, ಡೋರ್ ಕ್ಲೋಸ್ ಮಾಡಲೇ ಎಂದಿದ್ದೇ ತಡ, ಡೋರ್ ಕ್ಲೋಸ್ ಆಯ್ತು.

  ತಮ್ಮದೇ ಸ್ಟೈಲ್‍ನಲ್ಲಿ ಜಯಮಾಲಾಗೆ ಹಿತವಚನ ಹೇಳಿದ ಅಂಬಿ, ಇಷ್ಟು ದಿನ ರೀಲ್ ನಾಯಕಿ ಆಗಿದ್ದೆ. ಈಗ ರಿಯಲ್ ನಾಯಕಿ ಆಗಿದ್ದೀಯ. ಜನ ಸಾವಿರ ಮಾತಾಡಿಕೊಳ್ಳಲಿ, ತಲೆ ಕೆಡಿಸಿಕೊಳ್ಳಬೇಡ, ಕೆಲಸ ಮಾಡು ಎಂದರು. ಡಾ.ರಾಜ್ ಹಿತವಚನವನ್ನೂ ನೆನಪಿಸಿದ್ರು. 

  ರಾಜ್‍ಕುಮಾರ್ ಅವರಿಗೂ ಮೇಕಪ್ ಮಾಡಿಸಿಕೊಳ್ಳುವಾಗ, ಅವಳು ಹಂಗೆ, ಇವರು  ಹಿಂಗೆ ಎನ್ನುತ್ತಿದ್ದರಂತೆ. ಅದೆಲ್ಲವನ್ನೂ ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಡುತ್ತಿದ್ದರಂತೆ ರಾಜ್. ನೀನೂ ಹಾಗೆಯೇ ಇರು ಎಂದರು ಅಂಬಿ.

  ಅಂಬರೀಷ್ ಗರ್ಜನೆಯನ್ನು ನೋಡುತ್ತಾ ನಗುತ್ತಾ ಕುಳಿತಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ.

 • ಅಣ್ಣಾವ್ರನ್ನು ಬಿಟ್ಟರೆ, ಈ ಸಾಹಸ ಮಾಡಿದ್ದು ದರ್ಶನ್ ಮಾತ್ರ..!

  ravishankar gowda compares darshan to raj

  ಡಾ.ರಾಜ್‍ರನ್ನು ಬಿಟ್ಟರೆ, ಅಂಥಾದ್ದೊಂದು ಧೈರ್ಯ, ಸಾಹಸ ಮೆರೆದಿರುವುದು ಕೇವಲ ದರ್ಶನ್. ಇಂಥಾದ್ದೊಂದು ಮಾತು ಹೇಳಿರುವುದು ರವಿಶಂಕರ್ ಗೌಡ. ಸಿಲ್ಲಿ ಲಲ್ಲಿ ಧಾರಾವಾಹಿಯ ಮೂಲಕವೇ ಸ್ಟಾರ್ ಆದ ರವಿಶಂಕರ್ ಗೌಡ, ಸಮಾರಂಭವೊಂದರಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

  ರವಿಶಂಕರ್ ಗೌಡ, ಇಂಥಾದ್ದೊಂದು ಹೇಳಿಕೆ ಕೊಡೋಕೆ ಕಾರಣ, ಕುರುಕ್ಷೇತ್ರ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ನಟಿಸುತ್ತಿರುವುದು ದುರ್ಯೋಧನನ ಪಾತ್ರದಲ್ಲಿ. ಅದು ಮಹಾಭಾರತದ ಖಳನಾಯಕನ ಪಾತ್ರ. ಮಾಸ್ ಹೀರೋ ಆಗಿದ್ದುಕೊಂಡು ಇಂಥ ಖಳನಟನ ಪಾತ್ರ ಮಾಡೋಕೆ ಎಂಟೆದೆ ಬೇಕು. ಅಂಥಾದ್ದೊಂದು ಧೈರ್ಯ ಡಾ.ರಾಜ್ ಅವರಿಗೆ ಇತ್ತು ಎಂದಿದ್ದಾರೆ ರವಿಶಂಕರ್.

  ಡಾ.ರಾಜ್, ತಮ್ಮ ಖ್ಯಾತಿಯ ಉತ್ತುಂಗದಲ್ಲಿದ್ದಾಗ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ನಟಿಸಿದ್ದರು. ಅದು ದೇವರನ್ನೇ ದ್ವೇಷಿಸುವ, ತನ್ನನ್ನು ತಾನೇ ದೇವರು ಎಂದು ಕರೆದುಕೊಳ್ಳುವ ರಾಕ್ಷಸನ ಪಾತ್ರ. ಇಂದಿಗೂ ಅಭಿಮಾನಿಗಳ ಕಣ್ಣೆದುರು ಅಣ್ಣಾವ್ರ ಆ ಪಾತ್ರದ ಗತ್ತು, ಗಾಂಭೀರ್ಯ, ನಡಿಗೆ, ಧ್ವನಿ ಕಣ್ಣಿಗೆ ಕಟ್ಟಿದಂತಿದೆ. ಈಗ ದರ್ಶನ್, ದುರ್ಯೋಧನನ ಪಾತ್ರ ಮಾಡುತ್ತಿದ್ದಾರೆ. 

  ದರ್ಶನ್ ದುರ್ಯೋಧನನ ಗೆಟಪ್‍ನಲ್ಲಿ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂದ್ರೆ, ಯಾರ ದೃಷ್ಟಿಯೂ ದರ್ಶನ್ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ ರವಿಶಂಕರ್ ಗೌಡ. 

 • ಅಪ್ಪು ಅಷ್ಟೇ ಅಲ್ಲ, ಅಪ್ಪು ಅಭಿಮಾನಿಗಳೂ ಕುರುಕ್ಷೇತ್ರಕ್ಕೆ ವೇಯ್ಟಿಂಗ್

  puneeth waiting for kurukshetra

  ಕುರುಕ್ಷೇತ್ರ ಚಿತ್ರ ರಿಲೀಸ್‍ಗೂ ಮುನ್ನವೇ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಸಿನಿಮಾ ಎಂಬ ಕಾರಣಕ್ಕೆ ಅಲ್ಲ. ಅದು ಇಡೀ ಕನ್ನಡ ಚಿತ್ರರಂಗದ ಕಲಾವಿದರ ದಂಡನ್ನೇ ಒಟ್ಟುಗೂಡಿಸಿರುವ ಸಿನಿಮಾ. ಅದರಲ್ಲೂ ದುರ್ಯೋಧನನಾಗಿ ಕಾಣಿಸಿಕೊಂಡಿರುವ ದರ್ಶನ್ ನಿರೀಕ್ಷೆಯ ಶಿಖರವನ್ನೇ ಅಭಿಮಾನಿಗಳ ಎದುರು ಇಟ್ಟುಬಿಟ್ಟಿದ್ದಾರೆ.

  ಸಹಜವಾಗಿಯೇ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗದ ಎಲ್ಲ ತಾರೆಯರೂ ನಿರೀಕ್ಷೆಯಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕುರುಕ್ಷೇತ್ರ ಚಿತ್ರದ ಬಗ್ಗೆ ಪ್ರಶ್ನೆಗಳು ಎದುರಾದವು. ದರ್ಶನ್ ಅವರ ಲುಕ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪುನೀತ್, ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದರು.

  ಈಗ ಡಿ ಬಾಸ್ ಫ್ಯಾನ್ಸ್ ಅಷ್ಟೇ ಅಲ್ಲ, ಅಪ್ಪು ಫ್ಯಾನ್ಸ್ ಕೂಡಾ ದರ್ಶನ್ ಲುಕ್ಕು, ಗೆಟಪ್‍ಗೆ ಮಾರು ಹೋಗಿದ್ದಾರೆ. ದರ್ಶನ್, ದುರ್ಯೋಧನನ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಎಂದು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಐತಿಹಾಸಿಕ ಅಥವಾ ಪೌರಾಣಿಕ ಪಾತ್ರಗಳಿದ್ದರೆ, ಅದಕ್ಕೆ ದರ್ಶನ್ ಮೊದಲ ಆಯ್ಕೆ ಎಂದಿದ್ದಾರೆ.

  ಇತ್ತೀಚೆಗೆ ಕನ್ನಡದ ಸ್ಟಾರ್‍ಗಳ ಅಭಿಮಾನಿಗಳ ನಡುವೆ ವಾರ್‍ಗಷ್ಟೇ ಸಾಕ್ಷಿಯಾಗುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಂಚಲನ ಸೃಷ್ಟಿಸಿರುವುದು ನಿಜ. ಎಲ್ಲ ನಟರು, ಕಲಾವಿದರನ್ನೂ ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಕೋಟಿಯಾಗಲಿ.

 • ಅಭಿಮಾನಿಗಳಿಗೆ ಮತ್ತೊಮ್ಮೆ ದಾಸನಾದ ದರ್ಶನ್

  darshan autographs on fans auto

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ದಾಸನಾಗಿದ್ದಾರೆ. ಒನ್ಸ್ ಎಗೇಯ್ನ್.. ಅಭಿಮಾನಿಗಳ ಎದುರು. ಇತ್ತೀಚೆಗೆ ದರ್ಶನ್ ಅವರ ಆಟೋ ಡ್ರೈವರ್ ಅಭಿಮಾನಿಗಳು ಸೀದಾ ಅವರ ಮನೆಗೇ ಹೋಗುತ್ತಿದ್ದಾರೆ. ಮನೆಯಲ್ಲಿದ್ದರೆ ಅಭಿಮಾನಿಗಳನ್ನು ಸದಾ ಭೇಟಿ ಮಾಡುವ ದರ್ಶನ್‍ಗೆ ಅಭಿಮಾನಿಗಳದ್ದು ಒಂದೇ ಡಿಮ್ಯಾಂಡ್. ಆಟೊಗ್ರಾಫ್ ಪ್ಲೀಸ್.. ಅದೂ ಆಟೋ ಮೇಲೆ.

  ಇದು ದರ್ಶನ್ ಅಭಿಮಾನಿಗಳ ಕ್ರೇಜ್. ಇಷ್ಟು ದಿನ ಆಟೋಗಳ ಹಿಂದೆ, ದರ್ಶನ್ ಚಿತ್ರದ ಹೆಸರು, ಬಿರುದು, ಫೋಟೋ, ಚಿತ್ರ ಹಾಕಿಕೊಂಡು ಖುಷಿ ಪಡುತ್ತಿದ್ದ ಅಭಿಮಾನಿಗಳು, ಈಗ ದರ್ಶನ್ ಅವರಿಂದಲೇ ಆಟೋಗ್ರಾಫ್ ಹಾಕಿಸಿಕೊಳ್ಳುವ ಐಡಿಯಾ ಕಂಡುಕೊಂಡಿದ್ದಾರೆ.

 • ಅಭಿಮಾನಿಗಳೇ.. ದರ್ಶನ್ ಮನವಿಯನ್ನೊಮ್ಮೆ ಕೇಳಿ

  darshan image

  ನಲ್ಮೆಯ ಅಭಿಮಾನಿಗಳಲ್ಲಿ

  ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. ನನ್ನ ಹುಟ್ಟುಹಬ್ಬದ ದಿನ ನೀವೆಲ್ಲ ದೂರ ದೂರದ ಊರುಗಳಿಂದ ಬಂದು ನನಗೆ ಶುಭಾಶಯ ಕೋರಿ, ನಿಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುತ್ತೀರಿ. ಅದನ್ನು ನನ್ನ ಯಾವುದೋ ಪೂರ್ವಜನ್ಮದ ಪುಣ್ಯ ಎಂದೇ ಭಾವಿಸಿದ್ದೇನೆ. ಆದರೆ, ಹಾಗೆ ಸಂಭ್ರಮಪಡುವಾಗ ದಯವಿಟ್ಟು ಅಕ್ಕಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ. ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ. 

  ಅಕ್ಕಪಕ್ಕದ ಮನೆಯವರ ಕಾಂಪೌಂಡ್ ಪ್ರವೇಶಿಸುವುದು, ಹೂಕುಂಡಗಳನ್ನು ಒಡೆಯುವುದು, ಅವರ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಅನುಚಿತ ವರ್ತನೆಗಳನ್ನು ತೋರಿಸಬೇಡಿ. ನನ್ನ ಮೇಲೆ ಅಭಿಮಾನ ಇಟ್ಟಿರುವ ನೀವೆಲ್ಲ ನನ್ನ ಈ ಪ್ರಾರ್ಥನೆಯನ್ನು ಈಡೇರಿಸುತ್ತೀರಿ ಎಂದು ನಂಬಿದ್ದೇನೆ.

  ಇಂತಿ 

  ನಿಮ್ಮ ಪ್ರೀತಿಯ ದಾಸ 

  ದರ್ಶನ್

  ಅಂದಹಾಗೆ ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬವಿದೆ. ದರ್ಶನ್, ಅಭಿಮಾನಿಗಳನ್ನು ಯಾವತ್ತಿಗೂ ಮಿಸ್ ಮಾಡಿಕೊಳ್ಳೋದಿಲ್ಲ. ಅಭಿಮಾನಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಅವರ ಈ ಮನವಿಯನ್ನು ಅಭಿಮಾನಿಗಳೂ ಈಡೇರಿಸ್ತಾರಾ..ನೋಡೋಣ.

 • ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ದರ್ಶನ್

  darshan fulfills his last wish

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪ್ರೀತಿಯ ದಾಸ. ಇತ್ತೀಚೆಗೆ ತಾನೆ ಚಿತ್ರಲೋಕದಲ್ಲಿ ದರ್ಶನ್ ಅಭಿಮಾನಿಯೊಬ್ಬನ ಕೊನೆಯ ಆಸೆ ಸ್ಟೋರಿ ನೋಡಿದ್ದಿರಿ. ಶಿವಮೊಗ್ಗದ ರೇವಂತ್ ಎಂಬ ದರ್ಶನ್ ಅಭಿಮಾನಿ, ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಸಾವಿನ ಸನಿಹದಲ್ಲಿದ್ದಾರೆ. ಆದರೆ, ಕೊನೆಯದಾಗಿ ದರ್ಶನ್ ಅವರನ್ನೊಮ್ಮೆ ನೋಡಬೇಕು ಅನ್ನೋದು ಅವರ ಆಸೆಯಾಗಿತ್ತು. ಅಭಿಮಾನಿಯ ಅಂತಿಮ ಆಸೆಯನ್ನು ದರ್ಶನ್ ಈಡೇರಿಸಿದ್ದಾರೆ.

  ಆದರೆ, ವೈಯಕ್ತಿಕವಾಗಿ ಶಿವಮೊಗ್ಗಕ್ಕೆ ಹೋಗಲು ಸಾಧ್ಯವಾಗಿಲ್ಲ. ವಿಡಿಯೋ ಕಾಲ್ ಮೂಲಕ ಅಭಿಮಾನಿಯ ಜೊತೆ ಮಾತನಾಡಿದ ದರ್ಶನ್, ವೈದ್ಯರು ಹೇಳುವ ಸೂಚನೆಗಳನ್ನು ಪಾಲಿಸುವಂತೆ ಹೇಳಿದ್ದಾರೆ. ರೇವಂತ್ ತಂದೆ, ತಾಯಿಗೂ ಧೈರ್ಯ ಹೇಳಿದ್ದಾರೆ. ಶೀಘ್ರದಲ್ಲೇ ಶಿವಮೊಗ್ಗಕ್ಕೆ ಬಂದು ಭೇಟಿ ಮಾಡುತ್ತೇನೆ ಎಂದು ಧೈರ್ಯ ತುಂಬಿದ್ದಾರೆ ದರ್ಶನ್. 

   

   

 • ಅರ್ಜುನನ ಜೊತೆ ಐರಾವತ

  darshan meets airavatha

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳ ಪ್ರೇಮಿ ಅನ್ನೋದು ಗೊತ್ತು. ಮೈಸೂರಿನ ತಮ್ಮ ಫಾರ್ಮ್‍ಹೌಸ್‍ನಲ್ಲಿ ಹಲವಾರು ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿರುವ ದರ್ಶನ್, ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಕೂಡಾ ಪಡೆದಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿರುವ ದರ್ಶನ್, ಕಾಡಿನಲ್ಲಿ ಸಫಾರಿ ಮಾಡಿದ್ದಾರೆ.

  ನಾಗರಹೊಳೆ ಅಭಯಾರಣ್ಯಕ್ಕೆ ತೆರಳಿ ಅರ್ಜುನನ ಜೊತೆ ಸಮಯ ಕಳೆದಿದ್ದಾರೆ. ಅರ್ಜುನ ಎಂದರೆ ಗೊತ್ತಲ್ಲ, ದಸರಾದಲ್ಲಿ ಚಾಮುಂಡೇಶ್ವರಿ ವಿಗ್ರಹ ಇರುವ ಅಂಬಾರಿ ಹೊರುವ ಭಾಗ್ಯವಂತ. ಅರ್ಜುನನಿಗೆ ಇಷ್ಟವಾದ ಬೆಲ್ಲವನ್ನು ತಿನ್ನಿಸಿ ಸಂಭ್ರಮಿಸಿರುವ ದರ್ಶನ್, ಕಾಡಿನಲ್ಲೆಲ್ಲ ಸುತ್ತಾಡಿದ್ದಾರೆ. ಅರ್ಜುನನ ಜೊತೆ ನಿಂತಿರುವ ದರ್ಶನ್ ಫೋಟೋ ನೋಡಿದ ಅಭಿಮಾನಿಗಳು, ಅರ್ಜುನನ ಜೊತೆ ಐರಾವತ ಎನ್ನುತ್ತಿದ್ದಾರೆ. 

 • ಅರ್ಜುನ್, ಚಿರಂಜೀವಿ & ಧ್ರುವ ಸರ್ಜಾ ಜೊತೆ ದರ್ಶನ್

  darshan and sarja's team up

  ಸರ್ಜಾ ಕುಟುಂಬದಿಂದ ಮೂವರು ಹೀರೋಗಳು. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಈಗ ಅವರ ಜೊತೆಗೊಬ್ಬ ಹೀರೋಯಿನ್. ಐಶ್ವರ್ಯಾ. ಅರ್ಜುನ್ ಸರ್ಜಾರ ಮಗಳು ಐಶ್ವರ್ಯಾ ನಟಿಸುತ್ತಿರುವ ಮೊದಲ ಚಿತ್ರ ಪ್ರೇಮಬರಹ. 

  darshan_sarjas_1prema_barah.jpgಆ ಚಿತ್ರದಲ್ಲಿ ಸರ್ಜಾ ಫ್ಯಾಮಿಲಿ ಜೊತೆ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ಹನುಮನ ಭಕ್ತರಾಗಿ ಹೆಜ್ಜೆ ಹಾಕಿದ್ದಾರೆ. ತಿಪ್ಪಸಂದ್ರ ಬಳಿಯ ಆಂಜನೇಯ ದೇಗುದಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್, ಅರ್ಜುನ್, ಧ್ರುವ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೇ ಹೆಜ್ಜೆ ಹಾಕಿರುವುದು ವಿಶೇಷ.

  ಅಂದಹಾಗೆ ದರ್ಶನ್, ಹೀಗೆ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಹೊಸದೇನಲ್ಲ. ಅರಸು, ಮೊನಾಲಿಸಾ, ಚೌಕ, ನಾಗರಹಾವು.. ಹೀಗೆ ಹಲವು ಚಿತ್ರಗಳಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಪ್ರೇಮ ಬರಹದಲ್ಲಿ ಹೆಜ್ಜೆ ಹಾಕಿರುವುದು ಸರ್ಜಾ ಫ್ಯಾಮಿಲಿ ಮೇಲಿನ ಗೌರವಕ್ಕೆ.

 • ಆಂಜನೇಯ ಆಗ್ತಾರಾ ದರ್ಶನ್..?

  will darshan act in anjaneya

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಂಜನೇಯ ಆಗ್ತಾರಾ..? ಅಂಬರೀಷನಾಗಿ, ಕೆಂಪೇಗೌಡನಾಗಿ, ಚಕ್ರವರ್ತಿಯಾಗಿ ಮಿಂಚಿರುವ ದರ್ಶನ್ ಮುಂದಿನ ಸಿನಿಮಾದಲ್ಲಿ ಆಂಜನೇಯ ಆಗ್ತಾರೆ ಅನ್ನೋ ಸುದ್ದಿ ಇದೆ. ಅದು ಪ್ರೇಮ್ ನಿರ್ದೇಶನದ ಸಿನಿಮಾ. ಪ್ರೇಮ್ ವಿಲನ್ ಚಿತ್ರ ಮುಗಿಸಿ, ಇತ್ತ ದರ್ಶನ್ ಬಿ.ಕುಮಾರ್ ಸಿನಿಮಾ ಮುಗಿಸಿದ ಮೇಲೆ ಸೆಟ್ಟೇರಬೇಕಿರುವ ಸಿನಿಮಾ.

  ಕರಿಯ ಚಿತ್ರದ ನಂತರ ದರ್ಶನ್ ಮತ್ತು ಪ್ರೇಮ್ ಜೋಡಿ ಮತ್ತೆ ಒಂದಾಗುತ್ತಿದೆ. ಮೂಲಗಳ ಪ್ರಕಾರ, ಆ ಚಿತ್ರಕ್ಕೆ ಆಂಜನೇಯ ಅನ್ನೋ ಟೈಟಲ್ ಫಿಕ್ಸ್ ಆಗಿದೆ. ಆದರೆ ಫೈನಲ್ ಆಗಿಲ್ಲ. ಏಕೆಂದರೆ, ಆ ಚಿತ್ರದ ನಿರ್ದೇಶಕ ಪ್ರೇಮ್. 

 • ಇನ್ಸ್‍ಪೆಕ್ಟರ್ ವಿಕ್ರಂಗೆ ದರ್ಶನ್ ಪವರ್

  darshan in guest role for prajwal' devaraj's movie

  ಇನ್ಸ್‍ಪೆಕ್ಟರ್ ವಿಕ್ರಂ. ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಪ್ರಜ್ವಲ್‍ಗೆ ಜೋಡಿಯಾಗಿ ಭಾವನಾ ಬರುತ್ತಿದ್ದಾರೆ. ಇದೆಲ್ಲದರ ಜೊತೆಗೆ ಈಗ ಚಾಲೆಂಜಿಂಗ್ ಸ್ಟಾರ್ ಪವರ್ ಕೂಡಾ ಸಿಕ್ಕಿದೆ. ಚಿತ್ರದ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ದರ್ಶನ್ ನಟಿಸೋಕೆ ಒಪ್ಪಿಕೊಂಡಿದ್ದಾರಂತೆ.

  ಅರಸು, ನಾಗರಹಾವು, ಚೌಕ, ಪ್ರೇಮ ವಿರಹ.. ಹೀಗೆ ಹಲವು ಚಿತ್ರಗಳಲ್ಲಿ ಸ್ನೇಹಕ್ಕಾಗಿ ಅತಿಥಿ ಪಾತ್ರಗಳಲ್ಲಿ ನಟಿಸಿರುವ ದರ್ಶನ್, ಇನ್ಸ್‍ಪೆಕ್ಟರ್ ವಿಕ್ರಂನಲ್ಲೂ ಅಂಥದ್ದೇ ಪುಟ್ಟ ಪಾತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ.

  ಪುಷ್ಪಕವಿಮಾನ ವಿಖ್ಯಾತ್ ನಿರ್ಮಾಣದ ಚಿತ್ರಕ್ಕೆ ಹೊಸ ಪ್ರತಿಬೇ ನರಸಿಂಹ ನಿರ್ದೇಶಕರು. ಸದ್ಯಕ್ಕೆ ಚಿತ್ರತಂಡ ಅದನ್ನು ಗುಟ್ಟಾಗಿಟ್ಟಿದೆ. ಅಧಿಕೃತಗೊಳಿಸಿಲ್ಲ. 

 • ಇಬ್ಬರು ಮಹಾಮೌನಿಗಳ ಮಿಲನ ತಾರಕ್

  tarak is a combination of two silent stars

  ಒಬ್ಬರು ಚಾಲೆಂಜಿಂಗ್ ಸ್ಟಾರ್. ಕರ್ನಾಟಕದಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಇರುವ ನಟ. ಮತ್ತೊಬ್ಬರು ಮಿಲನ ಪ್ರಕಾಶ್. ಹಿಟ್ ಮೇಲೆ ಹಿಟ್ ಕೊಟ್ಟಿರುವ ನಿರ್ದೇಶಕ. ಈ ಇಬ್ಬರೂ ಒಟ್ಟಾಗಿರುವುದು ತಾರಕ್ ಚಿತ್ರದಲ್ಲಿ. ಈ ಇಬ್ಬರದ್ದೂ ಒಂದೇ ಒಂದು ವಿಶೇಷತೆಯೆಂದರೆ, ಇಬ್ಬರೂ ಮಹಾಮೌನಿಗಳು. ಹಾಗೆಂದು ಮಾತನಾಡುವುದೇ ಇಲ್ಲ ಎಂದಲ್ಲ. ಆದರೆ, ಮಾಧ್ಯಮಗಳಿಂದ ಒಂದು ಅಂತರ ಕಾಯ್ದುಕೊಂಡೇ ಬಂದವರು.

  ತಮ್ಮ ಚಿತ್ರದ ಬಗ್ಗೆ ದರ್ಶನ್ ಮಾತನಾಡುವುದು ಕಡಿಮೆ ಎಂದೇ ಹೇಳಬೇಕು. ಏಕೆಂದರೆ, ಆ ಕೆಲಸವನ್ನು ಅಭಿಮಾನಿಗಳು ಮಾಡಿಬಿಡುತ್ತಾರೆ. ಹೀಗಾಗಿ ದರ್ಶನ್ ಮಾತನಾಡಲಿ, ಬಿಡಲಿ.. ಚಿತ್ರಕ್ಕೊಂದು ಹೈಪ್ ಅಭಿಮಾನಿಗಳಿಂದಲೇ ಸೃಷ್ಟಿಯಾಗಿಬಿಟ್ಟಿರುತ್ತೆ. 

  ಇನ್ನು ಮಿಲನ ಪ್ರಕಾಶ್ ವಿಚಾರಕ್ಕೆ ಬಂದರೆ, ಅವರು ಹೇಳೊದೇ ಬೇರೆ. ನಾವು ಮಾತನಾಡೋದಲ್ಲ. ಚಿತ್ರ ಮಾತನಾಡಬೇಕು ಅಂತಾರೆ ಪ್ರಕಾಶ್. ಸಿನಿಮಾಗೆ ಪಬ್ಲಿಸಿಟಿ ಕೊಡಬೇಕು ನಿಜ. ಅದನ್ನು ನಾವು ಮಾಡಿದ್ದೇವೆ. ಹಾಗೆಂದು ಚಿತ್ರವನ್ನು ವಿನಾಕಾರಣ ಉಬ್ಬಿಸಬಾರದು. ಚಿತ್ರದ ಕಥೆ ಮತ್ತು ಸಿನಿಮಾ ಬಗ್ಗೆ ನಮಗೆ ನಂಬಿಕೆಯಿರಬೇಕು. ಚಿತ್ರವನ್ನು ಗೆಲ್ಲಿಸುವುದೇ ಚಿತ್ರದ ಕಥೆ ಅಂತಾರೆ ಪ್ರಕಾಶ್.

 • ಈಗ ದರ್ಶನ್ ಬಾಸ್..

  darshan rides 8055 bike

  ಸ್ಯಾಂಡಲ್‍ವುಡ್ ಬಾಸ್  ಯಾರು ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿರುವಾಗ, ಯಶ್ ಬಾಸ್ ಎಂದರ್ಥ ಬರುವ 8055 ನಂಬರ್ ಖರೀದಿಸಿರುವಾಗ, ದರ್ಶನ್ ಕೂಡಾ ಬಾಸ್ ಆಗಿದ್ದಾರೆ. ಅವರು ಬಾಸ್ ನಂಬರ್‍ನ ಬೈಕ್‍ನಲ್ಲಿ ಅಂದರೆ, 8055 ನಂಬರ್ ಇರುವ ಬೈಕ್ ಸವಾರಿ ಮಾಡಿದ್ದಾರೆ ದರ್ಶನ್.

  ಜಯಕಾಂತ್ ಎಂಬುವರು ದರ್ಶನ್ ಅಭಿಮಾನಿ. ಅವರ ಬಳಿ ಹಾರ್ಲೆ ಡೆವಿಡ್‍ಸನ್ ಬೈಕ್ ಇದೆ. ಆ ಬೈಕ್‍ನ ನಂಬರ್ ಕೆಎ-51 ಹೆಚ್‍ಡಿ8055. ಅಂದರೆ ಬಾಸ್ ಅರ್ಥ ಕೊಡುವ ನಂಬರ್. ಆ ನಂಬರ್‍ಗಾಗಿ ಜಯಕಾಂತ್ 30 ಸಆವಿರ ರೂ. ಖರ್ಚು ಮಾಡಿದ್ದರಂತೆ.

  ನೆಲಮಂಗಲ ಬಳಿ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ವೇಳೆ ದರ್ಶನ್, ತಮ್ಮ ಅಭಿಮಾನಿಯ ಬೈಕ್‍ನನ್ನು ರೈಡ್ ಮಾಡಿ ಸುದ್ದಿ ಮಾಡಿದ್ದಾರೆ. 

 • ಎಂಎಲ್‍ಎ ಪ್ರಥಮ್‍ಗೆ ಪುನೀತ್, ದರ್ಶನ್ ಬೆಂಬಲ

  mla pratham gets support from puneeth, darshan

  ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದ ಆಡಿಯೋ ಬಿಡುಗಡೆಗೆ ವೇದಿಕೆ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ಪ್ರಥಮ್‍ಗೆ ಕನ್ನಡದ ಇಬ್ಬರು ಸ್ಟಾರ್‍ಗಳ ಬೆಂಬಲ ಸಿಕ್ಕಿರುವುದು ವಿಶೇಷ. ಪವರ್ ಸ್ಟಾರ್ ಪುನೀತ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ ಬೆಂಬಲ, ಪ್ರೋತ್ಸಾಹ ಪ್ರಥಮ್ ಹೊಸ ಸಿನಿಮಾಗೆ ಸಿಕ್ಕಿದೆ.

  ಕಾರ್ಮಿಕರ ದಿನಾಚರಣೆ ದಿನದಂದೇ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

  ಮೈಸೂರಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋಗಿದ್ದ ಪ್ರಥಮ್‍ಗೆ, ಬಂದೇ ಬರ್ತೀನಿ ಅನ್ನೋ ಭರವಸೆ ಕೊಟ್ಟಿದ್ದಾರೆ ದರ್ಶನ್. ದರ್ಶನ್ ಅವರು ಯಾವತ್ತೂ ಕೊಟ್ಟ ಮಾತು ತಪ್ಪಿಲ್ಲ. ಅದು ನಾನು ಅವರಿಂದ ಕಲಿತ ಪಾಠವೂ ಹೌದು. ದರ್ಶನ್ ಅವರನ್ನು ಚಿತ್ರದ ಆಡಿಯೋ ಬಿಡಗಡೆಗೆ ಕರೆತರಲು ಸಹಕರಿಸಿದ ಎಲ್ಲರಿಗೂ ನಾನು ಋಣಿ ಎಂದಿದ್ದಾರೆ ಪ್ರಥಮ್.

  ಇನ್ನು ಎಂಎಲ್‍ಎ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿರುವುದು ಪುನೀತ್ ರಾಜ್‍ಕುಮಾರ್ ಒಡೆತನದ ಪಿಆರ್‍ಕೆ ಆಡಿಯೋ ಕಂಪೆನಿ. ಸೋನಲ್ ಮಂಟಾರಿಯೋ ಪ್ರಥಮ್‍ಗೆ ನಾಯಕಿಯಾಗಿದ್ದು, ಮಜಾ ಟಾಕೀಸ್ ಮೌರ್ಯ ಚಿತ್ರದ ನಿರ್ದೇಶಕ. ವೆಂಕಟೇಶ್ ರೆಡ್ಡಿ ಚಿತ್ರದ ನಿರ್ಮಾಪಕರು.

 • ಒಡೆಯ ದರ್ಶನ್‍ಗೆ ಅಂಬರೀಷ್ ಕ್ಲಾಪ್

  odeya movie launched

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರ ಶುರುವಾಗಿದೆ. ಮೈಸೂರಿನಲ್ಲಿ ನಡೆದ ಮುಹೂರ್ತದಲ್ಲಿ ದರ್ಶನ್ ಚಿತ್ರಕ್ಕೆ ಕ್ಲಾಪ್ ಮಾಡಿದವರು ಅಪ್ಪಾಜಿ ಅಂಬರೀಷ್. ಹೌದು, ಅಂಬರೀಷ್ ಅವರನ್ನು ದರ್ಶನ್ ಕರೆಯೋದೇ ಹಾಗೆ. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಅವರ ಹುಟ್ಟುಹಬ್ಬದಂದೇ ಸೆಟ್ಟೇರಿತು. ಸೆಪ್ಟೆಂಬರ್ 10ರಿಂದ ಶೂಟಿಂಗ್ ಶುರುವಾಗಲಿದೆ. ಅಂಬರೀಷ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.

  ಇದು ತಮಿಳಿನ ವೀರಂ ಚಿತ್ರದ ರೀಮೇಕ್. ಚಿತ್ರದ ಕಥೆಗೆ ಒಡೆಯ ಅನ್ನೋ ಟೈಟಲ್ ಸರಿಯಾಗಿ ಹೊಂದುತ್ತೆ. ನಾವು ಒಡೆಯರ್ ಅನ್ನೋ ಟೈಟಲ್‍ನ್ನ ರಿಜಿಸ್ಟರ್ ಮಾಡಿಸಿಯೇ ಇಲ್ಲ ಎಂದು ತಿಳಿಸಿದ್ದಾರೆ ದರ್ಶನ್. 

  ಮಾಸ್ ಸಿನಿಮಾಗಳಷ್ಟೆ ಅಲ್ಲ, ಫ್ಯಾಮಿಲಿ ಸೆಂಟಿಮೆಂಟ್ ಚಿತ್ರಗಳನ್ನೂ ಮಾಡೋಕೆ ನನಗಿಷ್ಟ. ಈ ಚಿತ್ರದ ಕಥೆಯೇ ಈ ಸಿನಿಮಾ ಒಪ್ಪಿಕೊಳ್ಳೋಕೆ ಕಾರಣ ಅಂತಾರೆ ದರ್ಶನ್. 

  ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ದೇವರಾಜ್, ಚಿಕ್ಕಣ್ಣ, ರವಿಶಂಕರ್.. ಮೊದಲಾದವರು ನಟಿಸುತ್ತಿದ್ದಾರೆ

Padarasa Movie Gallery

Kumari 21 Movie Gallery