ಕೆಜಿಎಫ್, ಹೊಸ ಇತಿಹಾಸವನ್ನೇ ಬರೆದ ಸಿನಿಮಾ. ಬಾಕ್ಸಾಫೀಸಿನಲ್ಲಷ್ಟೇ ಅಲ್ಲ, ಟಿವಿ ರೇಟಿಂಗ್ನಲ್ಲೂ ಭರ್ಜರಿ ದುಡ್ಡು ಮಾಡ್ತಿರೋ ಕೆಜಿಎಫ್, ಇಂದಿಗೂ ಹವಾ ಉಳಿಸಿಕೊಂಡಿದೆ. ಟಿವಿ ಚಾನೆಲ್ಲುಗಳಲ್ಲಿ ಈಗಲೂ ಒಳ್ಳೆಯ ಹಣ ಗಳಿಸುತ್ತಿರುವ ಸಿನಿಮಾ ಕೆಜಿಎಫ್. ಹೀಗಾಗಿಯೇ ಸಹಜವಾಗಿಯೇ ಕೆಜಿಎಫ್ ಮೇಲೆ ಕಳ್ಳರ ಕಣ್ಣು ಬಿದ್ದಿದೆ.
ಕೆಜಿಎಫ್ ಚಾಪ್ಟರ್ 1 ಕನ್ನಡದ ಜೊತೆ ತಮಿಳು,ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಿತ್ತು. ಟಿವಿ ರೈಟ್ಸ್ಗಳೂ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿತ್ತು. ಆದರೆ, ಆಂಧ್ರದಲ್ಲಿ ರೈಟ್ಸ್ ಪಡೆದ ಚಾನೆಲ್ ಬಿಟ್ಟು, ಇನ್ನೊಂದು ಚಾನೆಲ್ ದುಡ್ಡಿನ ಆಸೆಗೆ ಅಡ್ಡದಾರಿ ಹಿಡಿದಿದೆ. ನಿರ್ಮಾಪಕರಿಂದ ಅನುಮತಿಯನ್ನೂ ಪಡೆದಿಲ್ಲ. ಹಣವನ್ನೂ ಕೊಟ್ಟಿಲ್ಲ. ಮಾಹಿತಿಯನ್ನೂ ನೀಡಿಲ್ಲ. ಹಕ್ಕುಗಳೇ ಇಲ್ಲದೆ ಟಿವಿಯಲ್ಲಿ ಸಿನಿಮಾ ಪ್ರಸಾರ ಮಾಡಿದೆ.
Every ಹೆಸರಿನ ಲೋಕಲ್ ತೆಲುಗು ಚಾನಲ್ ಕೆಜಿಎಫ್ ಸಿನಿಮಾವನ್ನು ಅಕ್ರಮವಾಗಿ ಪ್ರಸಾರ ಮಾಡಿದೆ. ಹೀಗಾಗಿಯೇ ಗರಂ ಆಗಿರುವ ನಿರ್ಮಾಪಕ ಕಾರ್ತಿಕ್ ಗೌಡ, ಚಾನೆಲ್ ವಿರುದ್ಧ
ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ಧಾರೆ. ಆ ಚಾನೆಲ್ಲಿನಲ್ಲಿ ಪ್ರಸಾರವಾದ ವಿಡಿಯೋ ಮತ್ತು ಸ್ಕ್ರೀನ್ ಶಾಟ್ ಇಟ್ಟುಕೊಂಡು ಕೇಸ್ ಹಾಕುವುದಾಗಿ ತಿಳಿಸಿದ್ಧಾರೆ ಕಾರ್ತಿಕ್ ಗೌಡ.
ಹೊಂಬಾಳೆ ಫಿಲಂಸ್ನ ಟೀಂನಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ, ಕೋರ್ಟ್ ಮೆಟ್ಟಿಲೇರುವುದು ಖಚಿತ.
ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದರು. ಯಶ್ ಅವರಿಗೆ ನ್ಯಾಷನಲ್ ಲೆವೆಲ್ ಸ್ಟಾರ್ ಪಟ್ಟ ಕೊಟ್ಟಿರುವ ಚಿತ್ರದ ಸೀಕ್ವೆಲ್, ಈ ವರ್ಷ ಅಕ್ಟೋಬರ್ನಲ್ಲಿ ರಿಲೀಸ್ ಆಗುತ್ತಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಯಶ್ ಜೊತೆ ಸಂಜಯ್ ದತ್, ರವೀನಾ ಟಂಡನ್ ಮೊದಲಾದ ಬಾಲಿವುಡ್ ಸ್ಟಾರ್ಗಳೂ ಇದ್ಧಾರೆ.