` filmfare awards - chitraloka.com | Kannada Movie News, Reviews | Image

filmfare awards

  • ಅನಂತ್, ಶ್ರದ್ಧಾ ಬೆಸ್ಟ್. ಫಿಲ್ಮ್ ಫೇರ್ ನಲ್ಲೂ ತಿಥಿ

    ananth, shradhan best
    2016ನೇ ಸಾಲಿನ   ಫಿಲ್ಮ್​ಫೇರ್​ ಪ್ರಶಸ್ತಿ ವಿತರಣೆ ಮುಕ್ತಾಯವಾಗಿದೆ. ರಿಲೀಸ್ ಆದಾಗಿನಿಂದಲೂ ಸದ್ದು ಮಾಡುತ್ತಲೇ ಇರುವ ತಿಥಿಗೆ ಫಿಲ್ಮ್ ಫೇರ್ ನಲ್ಲೂ ಬೆಸ್ಟ್ ಫಿಲ್ಮ್ ಮನ್ನಣೆ ಸಿಕ್ಕಿದೆ. 

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಲ್ಜೈಮರ್ ಪೀಡಿತನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ಅನಂತ್ ನಾಗ್ ಗೆ ಬೆಸ್ಟ್ ನಟ ಅವಾರ್ಡ್ ಸಿಕ್ಕರೆ, ಯು ಟರ್ನ್ ಚಿತ್ರದಲ್ಲಿ ಕಣ್ಣಲ್ಲೇ ಭಯದ ಭಾವನೆ ಮೂಡಿಸಿದ್ದ ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟಿಯಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 
    ವಿಮರ್ಶಕರ ವಿಶೇಷ ಪ್ರಶಸ್ತಿ ರಕ್ಷತ್ ಶೆಟ್ಟಿ ಮತ್ತು ಶೃತಿ ಹರಿಹರನ್ ಗೆ ದಕ್ಕಿದೆ. ಶನಿವಾರ ಹೈದರಾಬಾದ್ ನಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ5 ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ 3 ಪ್ರಶಸ್ತಿ ಬಂದಿರುವುದು ವಿಶೇಷ.

    ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು

    ಉತ್ತಮ ಚಿತ್ರ 
    ತಿಥಿ

    ಉತ್ತಮ ನಿರ್ದೇಶಕ 
    ರಿಷಬ್ ಶೆಟ್ಟಿ (ಕಿರಿಕ್ ಪಾರ್ಟಿ)

    ಉತ್ತಮ ನಟ 
    ಅನಂತ್ ನಾಗ್​​ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

    ಅತ್ಯುತ್ತಮ ನಟಿ 
    ಶ್ರದ್ಧಾ ಶ್ರೀನಾಥ್ (ಯು ಟರ್ನ್)

    ಅತ್ಯುತ್ತಮ ಪೋಷಕ ನಟ
    ವಶಿಷ್ಟ ಸಿಂಹ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

    ಅತ್ಯುತ್ತಮ ಪೋಷಕ ನಟಿ
    ಸಂಯುಕ್ತ ಹೆಗ್ಡೆ (ಕಿರಿಕ್ ಪಾರ್ಟಿ)

    ಅತ್ಯುತ್ತಮ ಸಂಗೀತ
    ಅಜನೀಶ್ ಲೋಕನಾಥ್ (ಕಿರಿಕ್ ಪಾರ್ಟಿ)

    ಅತ್ಯುತ್ತಮ ಹಿನ್ನೆಲೆ ಗಾಯಕ

    ವಿಜಯ್ ಪ್ರಕಾಶ್  ( ಬೆಳಗೆದ್ದು ಯಾರ ಮುಖವ.. ಚಿತ್ರ - ಕಿರಿಕ್ ಪಾರ್ಟಿ)

    ಅತ್ಯುತ್ತಮ ಹಿನ್ನೆಲೆ ಗಾಯಕಿ
    ಅನನ್ಯಾ ಭಟ್ ( ಹಾಡು: ನಮ್ಮ ಕಾಯೋ ದೇವರೇ.. ಚಿತ್ರ-ರಾಮಾ ರಾಮ ರೇ)

    ಅತ್ಯುತ್ತಮ ಸಾಹಿತ್ಯ
    ಜಯಂತ್ ಕಾಯ್ಕಿಣಿ (ಸರಿಯಾಗಿ ನೆನಪಿದೆ ನನಗೆ. ಚಿತ್ರ: ಮುಂಗಾರು ಮಳೆ 2)

    ವಿಮರ್ಶಕರ ವಿಶೇಷ ಪ್ರಶಸ್ತಿ
    ಉತ್ತಮ ನಟ - ರಕ್ಷಿತ್ ಶೆಟ್ಟಿ (ಕಿರಿಕ್ ಪಾರ್ಟಿ)

    ಉತ್ತಮ ನಟಿ - ಶೃತಿ ಹರಿಹರನ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು) 

  • ಈ ವರ್ಷದ ಫಿಲ್ಮ್​ಫೇರ್​ ನಾಮಿನೇಷನ್​ನಲ್ಲಿ ಯಾಯಾರಿದ್ದಾರೆ?

    kirik party image

    ಫಿಲ್ಮ್​ಫೇರ್​ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ನಾಮಿನೇಷನ್ ಶುರುವಾಗಿದೆ. ನಾಮಿನೇಷನ್​ನಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮುಂದಿದೆ. ಪ್ರತಿ ವಿಭಾಗದಲ್ಲೂ ಕಿರಿಕ್ ಪಾರ್ಟಿಯ ಒಂದಲ್ಲಾ ಒಂದು ನಾಮಿನೇಷನ್ ಇರೋದು ವಿಶೇಷ. 

    ಉತ್ತಮ ಚಿತ್ರ 

    ಗೋಧಿ ಬಣ್ಣ ಸಾಧಾರಣ ಮೈಕಟ್ಟು

    ಲಾಸ್ಟ್ ಬಸ್

    ರಾಮ ರಾಮಾ ರೆ

    ತಿಥಿ

    ಯು ಟರ್ನ್

     

    ಉತ್ತಮ ನಿರ್ದೇಶಕ

    ಹೇಮಂತ್ ರಾವ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

    ನರೇಂದ್ರ ಬಾಬು (ಸಂತೆಯಲ್ಲಿ ನಿಂತ ಕಬೀರ)

    ಪವನ್ ಕುಮಾರ್ (ಯು ಟರ್ನ್)

    ರಿಷಬ್ ಶೆಟ್ಟಿ (ಕಿರಿಕ್ ಪಾರ್ಟಿ)

    ಸುಮನಾ ಕಿತ್ತೂರು (ಕಿರಗೂರಿನ ಗಯ್ಯಾಳಿಗಳು)

     

    ಉತ್ತಮ ನಟ

    ಅನಂತ್ ನಾಗ್​​ (ಗೋಧಿ ಬಣ್ಣ ಸಾಧಾರಣ ಮೈಕಟ್ಟು) 

    ಪುನೀತ್ ರಾಜ್​ಕುಮಾರ್ (ದೊಡ್ಮನೆ ಹುಡ್ಗ)

    ರಕ್ಷಿತ್ ಶೆಟ್ಟಿ (ಕಿರಿಕ್ ಪಾರ್ಟಿ)

    ಶಿವರಾಜ್ ಕುಮಾರ್ (ಸಂತೆಯಲ್ಲಿ ನಿಂತ ಕಬೀರ)

    ಸುದೀಪ್ (ಕೋಟಿಗೊಬ್ಬ 2)

     

    ಅತ್ಯುತ್ತಮ ನಟಿ

    ಹರಿಪ್ರಿಯ (ನೀರ್​ದೋಸೆ)

    ಪಾರುಲ್ ಯಾದವ್ (ಕಿಲ್ಲಿಂಗ್ ವೀರಪ್ಪನ್)

    ಶ್ರದ್ಧಾ ಶ್ರೀನಾಥ್ (ಯು ಟರ್ನ್)

    ಶೃತಿ ಹರಿಹರನ್ ( ಗೋಧಿ ಬಣ್ಣ ಸಾಧಾರಣ ಮೈಕಟ್ಟು)

    ಶ್ವೇತಾ ಶ್ರೀವಾಸ್ತವ (ಕಿರಗೂರಿನ ಗಯ್ಯಾಳಿಗಳು)

     

    ಅತ್ಯುತ್ತಮ ಪೋಷಕ ನಟ

    ಅಚ್ಯುತ್ ಕುಮಾರ್ (ಕಿರಗೂರಿನ ಗಯ್ಯಾಳಿಗಳು)

    ಹೆಚ್.ಜಿ. ದತ್ತಾತ್ರೇಯ (ನೀರ್ ದೋಸೆ)

    ರೋಜರ್ ನಾರಾಯಣ್ (ಯು ಟರ್ನ್)

    ಸಾಧು ಕೋಕಿಲ (ಝೂಮ್)

    ವಶಿಷ್ಟ ಸಿಂಹ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

     

    ಅತ್ಯುತ್ತಮ ಪೋಷಕ ನಟಿ

    ಐಂದ್ರಿತಾ ರೇ (ನಿರುತ್ತರ)

    ಮೇಘಶ್ರೀ ಭಾಗವತರ್ (ಲಾಸ್ಟ್ ಬಸ್)

    ಸಂಯುಕ್ತ ಹೆಗ್ಡೆ (ಕಿರಿಕ್ ಪಾರ್ಟಿ)

    ಸೋನು ಗೌಡ (ಕಿರಗೂರಿನ ಗಯ್ಯಾಳಿಗಳು)

    ಸುಮನ್ ರಂಗನಾಥ್ (ನೀರ್​ದೋಸೆ)

     

    ಅತ್ಯುತ್ತಮ ಸಂಗೀತ

    ಅಜನೀಶ್ ಲೋಕನಾಥ್ (ಕಿರಿಕ್ ಪಾರ್ಟಿ)

    ಅನೂಪ್ ಸೀಳಿನ್ (ನೀರ್ ದೋಸೆ)

    ಅರ್ಜುನ್ ಜನ್ಯ (ಮುಂಗಾರು ಮಳೆ 2)

    ಚರಣ್ ರಾಜ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

    ವಿ. ಹರಿಕೃಷ್ಣ (ದೊಡ್ಮನೆ ಹುಡ್ಗ)

    ಅತ್ಯುತ್ತಮ ಹಿನ್ನೆಲೆ ಗಾಯಕ 

     

    ಅನೂಪ್ ಸೀಳಿನ್ (ಹಾಡು : ಅಲ್ಲಾ ಕ್ಯಾ ಅಲ್ಲಾ.. ಚಿತ್ರ - ನಟರಾಜ ಸರ್ವಿಸ್)

    ಪುನೀತ್ ರಾಜ್​ಕುಮಾರ್ (ಹಾಡು : ಝನಕ್ ಝನಕ್.. ಚಿತ್ರ - ರನ್ ಌಂಟನಿ)

    ಸಂತೋಷ್ ವೆಂಕಿ ( ಹಾಡು: ಮಂದಾರ ಮಂದಾರ.. ಚಿತ್ರ - ಮಾರುತಿ 800)

    ಶಂಕರ್ ಮಹದೇವ್ (ಹಾಡು : ಮುಕುಂದಾ ಮುರಾರಿ.. ಚಿತ್ರ - ಮುಕುಂದ ಮುರಾರಿ)

    ವಿಜಯ್ ಪ್ರಕಾರ್ಶ ( ಬೆಳಗೆದ್ದು ಯಾರ ಮುಖವ.. ಚಿತ್ರ - ಕಿರಿಕ್ ಪಾರ್ಟಿ)

     

    ಅತ್ಯುತ್ತಮ ಹಿನ್ನೆಲೆ ಗಾಯಕಿ

    ಅನನ್ಯಾ ಭಟ್ ( ಹಾಡು: ನಮ್ಮ ಕಾಯೋ ದೇವರೇ.. ಚಿತ್ರ-ರಾಮಾ ರಾಮ ರೇ)

    ಅನುರಾಧಾ ಭಟ್( ಹಾಡು: ಯಾವೂರ ಗೆಳೆಯ.. ಚಿತ್ರ- ರಿಕ್ಕಿ)

    ಇಂದು ನಾಗರಾಜ್( ತ್ರಾಸಕ್ಕತಿ.. ಚಿತ್ರ - ದೊಡ್ಮನೆ ಹುಡ್ಗ)

    ಶ್ರೇಯಾ ಘೋಷಾಲ್ (ನೀನಿರೆ ಸನಿಹ ನೀನಿರೆ.. ಚಿತ್ರ - ಕಿರಿಕ್ ಪಾರ್ಟಿ)

    ವಾಣಿ ಹರಿಕೃಷ್ಣ (ನೀನಾಗಿ ಹೇಳಲಿಲ್ಲ.. ಚಿತ್ರ -ಹ್ಯಾಪಿ ಬರ್ತ್ ಡೇ)

  • ಫಿಲಂಫೇರ್ ಪ್ರಶಸ್ತಿಯೂ, ಸುಧೀರ್ ನೋವಿನ ಕಥೆಯೂ..

    tharun sudhir shares heartfelt story after winning filmfare

    ಮೊನ್ನೆ ಮೊನ್ನೆಯಷ್ಟೇ ತರುಣ್ ಸುಧೀರ್ ತಮ್ಮ ಚೌಕ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದು ಸಂಭ್ರಮಿಸಿದ್ದರು. ಫಾದರ್ಸ್ ಡೇ ದಿನವೇ ಪಡೆದ ಆ ಪ್ರಶಸ್ತಿಯನ್ನೂ ತಮ್ಮ ತಂದೆಗೇ ಅರ್ಪಿಸಿದ್ದ ತರುಣ್ ಸುಧೀರ್, ಒಂದು ನೋವಿನ ಕಥೆಯನ್ನೂ ಬಿಚ್ಚಿಟ್ಟಿದ್ದಾರೆ. 

    ಸುಧೀರ್ ಎಂದರೆ ತಕ್ಷಣ ನೆನಪಾಗುವುದು ಅವರ ಪ್ರಖ್ಯಾತ ಸಿಂಧೂರ ಲಕ್ಷ್ಮಣ ನಾಟಕ. ಸಿಂಧೂರ ಲಕ್ಷ್ಮಣನ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸುಧೀರ್, 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಸುಧೀರ್ ಮಾಡಿ ಮಡಿದವರು, ಬಂಧಮುಕ್ತ, ಬೀಸಿದ ಬಲೆ.. ಮೊದಲಾದ ಚಿತ್ರಗಳಿಗೆ ಪ್ರಶಸ್ತಿಗಳೂ ಬಂದಿದ್ದವು. ಆದರೆ, ಸುಧೀರ್‍ಗೆ ಬಂದಿರಲಿಲ್ಲ. ಜನಮೆಚ್ಚುಗೆಯೇ ಅವರು ಗಳಿಸಿದ್ದ ಅತಿದೊಡ್ಡ ಪ್ರಶಸ್ತಿಯಾಗಿತ್ತು. ಏನೇ ಜನಮೆಚ್ಚುಗೆಯಿದ್ದರೂ, ನನಗೊಂದು ಪ್ರಶಸ್ತಿ ಬರಲಿಲ್ಲ ಎಂಬ ಕೊರಗು ಇದ್ದೇ ಇತ್ತು. ಆ ಕೊರಗು ಈಗ ನೀಗಿದಂತಾಗಿದೆ.

    ಇದು ನಮ್ಮ ಕುಟುಂಬಕ್ಕೆ ಸಿಕ್ಕಿರುವ ಮೊದಲ ಪ್ರಶಸ್ತಿಎಂದು ಸಂಭ್ರಮ ಹಂಚಿಕೊಂಡಿದ್ದಾರೆ ತರುಣ್ ಸುಧೀರ್. ಅಪ್ಪಾ ದಿಸ್ ಈಸ್ ಫಾರ್ ಯೂ ಎಂದಿರುವ ತರುಣ್ ಸುಧೀರ್, ತಂದೆಗೆ ಅಷ್ಟು ವರ್ಷ ಕಲಾಸೇವೆಯಲ್ಲಿಯೂ ಒಂದೇ ಒಂದು ಪ್ರಶಸ್ತಿ ದೊರೆತಿರಲಿಲ್ಲ ಎಂಬ ಕಥೆಯನ್ನೂ ಹೇಳಿಕೊಂಡಿದ್ದಾರೆ. ಅವರಷ್ಟೇ ಅಲ್ಲ, ತರುಣ್ ಅವರ ಸೋದರ ನಂದಕಿಶೋರ್ ಕೂಡಾ ಬೆನ್ನು ಬೆನ್ನಿಗೆ ಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ಅವರಿಗೂ ಪ್ರಶಸ್ತಿ ಸಿಕ್ಕಿಲ್ಲ. ಹೀಗಾಗಿ ಈ ಫಿಲಂಫೇರ್ ಅವಾರ್ಡ್, ಸುಧೀರ್ ಕುಟುಂಬಕ್ಕೆ ಮೊತ್ತಮೊದಲ ಪ್ರಶಸ್ತಿ.

  • ಫಿಲ್ಮ್‍ಫೇರ್‍ನಲ್ಲಿ ಪುನೀತ್, ಶೃತಿ, ಚೌಕ ದಿ ಬೆಸ್ಟ್

    film fare award list

    ಪ್ರತಿಷ್ಟಿತ ಫಿಲ್ಮ್‍ಫೇರ್ ಪ್ರಶಸ್ತಿ ಪ್ರಕಟಗೊಂಡಿದೆ. ಈ ಬಾರಿಯ ಶ್ರೇಷ್ಟ ನಟ ಪ್ರಶಸ್ತಿ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಲಾಗಿದೆ. ರಾಜಕುಮಾರ ಚಿತ್ರದ ನಟನೆಗೆ ಪುನೀತ್ ಶ್ರೇಷ್ಟರಾಗಿದ್ದರೆ, ಶ್ರೇಷ್ಟ ನಟಿಯಾಗಿರುವುದು ಶೃತಿ ಹರಿಹರನ್. ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿರುವ ಶೃತಿ, ಫಿಲ್ಮ್‍ಫೇರ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ.

    ಈ ಬಾರಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ಚಿತ್ರ, ಯೋಗಿ ದ್ವಾರಕೀಶ್ ನಿರ್ಮಾಣದ ಚೌಕ. ಚೌಕ ಚಿತ್ರದ ನಿರ್ದೆಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ತರುಣ್ ಸುಧೀರ್ ಪಾಲಾದರೆ, ಚಿತ್ರದ ಅಪ್ಪಾ ಐ ಲವ್ ಯೂ ಪಾ ಹಾಡಿಗಾಗಿ ಗಾಯಕಿ ಅನುರಾಧಾ ಭಟ್ ಹಾಗೂ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದ್ರು. ಒಟ್ಟಿನಲ್ಲಿ ಚೌಕ ಚಿತ್ರ 3 ಫಿಲ್ಮ್‍ಫೇರ್ ಪ್ರಶಸ್ತಿ ಪಡೆಯಿತು.

    ಶ್ರೇಷ್ಟ ಪೋಷಕ ನಟ ಪ್ರಶಸ್ತಿ ರವಿಶಂಕರ್ (ಕಾಲೇಜ್ ಕುಮಾರ), ಶ್ರೇಷ್ಟ ಪೋಷಕ ನಟಿ ಪ್ರಶಸ್ತಿ ಭವಾನಿ ಪ್ರಕಾಶ್(ಉರ್ವಿ) ಅವರಿಗೆ ಸಂದಿದ್ದರೆ, ಈ ವರ್ಷದ ಬೆಸ್ಟ್ ಸಿನಿಮಾ ಪ್ರಶಸ್ತಿ, ಒಂದು ಮೊಟ್ಟೆಯ ಕಥೆ ಚಿತ್ರಕ್ಕೆ ಸಂದಿದೆ. 

    ಅತ್ಯುತ್ತಮ ಸಂಗೀತ ನಿರ್ದೇಶಕ ಭರತ್ (ಬ್ಯೂಟಿಫುಲ್ ಮನಸುಗಳು), ಅತ್ಯುತ್ತಮ ಗಾಯಕ ಅರ್ಮಾನ್ ಮಲಿಕ್ ಅತ್ಯುತ್ತಮ ಗಾಯಕ (ಒಂದು ಮಳೆಬಿಲ್ಲು.. ಚಿತ್ರ: ಚಕ್ರವರ್ತಿ) ಪ್ರಶಸ್ತಿ  ಮುಡಿಗೇರಿಸಿಕೊಂಡಿದ್ದಾರೆ.

    ಇನ್ನು ವಿಮರ್ಶಕರ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಟನಟಿಯಾಗಿ ಶ್ರದ್ಧಾ ಶ್ರೀನಾಥ್ (ಚಿತ್ರ:ಆಪರೇಷನ್ ಅಲಮೇಲಮ್ಮ) ಹಾಗೂ ಶ್ರೇಷ್ಟನಟನಾಗಿ ಧನಂಜಯ್ (ಚಿತ್ರ: ಅಲ್ಲಮ) ಹೊರಹೊಮ್ಮಿದ್ದಾರೆ.