` kp nanjundi, - chitraloka.com | Kannada Movie News, Reviews | Image

kp nanjundi,

 • `ಕನಕ'ನಿಗೆ ವಿಲನ್ ಆದರೇಕೆ ನಂಜುಂಡಿ..?

  kp nanjundi

  ಕನಕ ಚಿತ್ರದಲ್ಲಿ ದುನಿಯಾ ವಿಜಯ್, ಹರಿಪ್ರಿಯಾ, ಮಾನ್ವಿತಾ ಹರೀಶ್ ಜೊತೆಗೆ ಚಿತ್ರದ ಖಳನಾಯಕನ ಖದರ್ ಕೂಡಾ ಎದ್ದು ಕಾಣ್ತಿದೆ. ಪಂಚಕರ್ಮಗಳನ್ನು ಭೂಮಿಗೆ ಪರಿಚಯಿಸಿದ ಆ ಭಗವಂತನ ಮಗ ಕಣೋ ನಾನು ಎನ್ನುವ ಡೈಲಾಗ್ ಕಿವಿಯಲ್ಲಿ ಮಾರ್ದನಿಸುತ್ತಿದೆ. ಅದು ಕೆ.ಪಿ.ನಂಜುಂಡಿ. ಆ ಡೈಲಾಗ್ ಹೊಡೆದು ನಾಯಕ ವಿಜಯ್ ಎದೆಗೆ ಒದೆಯುವ ಆ ದೃಶ್ಯ, ಕನಕ ಟ್ರೇಲರ್‍ನ ಹೈಲೈಟ್.

  14 ವರ್ಷಗಳ ಬಳಿಕ ಬಣ್ಣ ಹಚ್ಚಿರುವ ಕೆ.ಪಿ.ನಂಜುಂಡಿ, ಒದೆಯುವ ಸೀನ್ ಬಹಳ ಕಷ್ಟವಾಗಿತ್ತು. ಏಕೆಂದರೆ, ಅದು ನನ್ನ ವ್ಯಕ್ತಿತ್ವ ಅಲ್ಲ. ನಿರ್ದೇಶಕರು ಅದಕ್ಕಾಗಿ ನನ್ನ ಮನವೊಲಿಸಬೇಕಾಯ್ತು ಎಂದು ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ನಂಜುಂಡಿ ಅವರದ್ದು ಕ್ಲಾಸ್ ವಿಲನ್ ಪಾತ್ರವಂತೆ. ಭಾಷೆಯಷ್ಟೇ ಅಲ್ಲ, ಕ್ಯಾರೆಕ್ಟರ್ ಕೂಡಾ.

  ಚಿತ್ರದಲ್ಲಿ ನಂಜುಂಡಿಯವರಷ್ಟೇ ಅಲ್ಲ, ರವಿಶಂಕರ್ ಕೂಡಾ ವಿಲನ್. ರವಿಶಂಕರ್ ಮಾಸ್ ವಿಲನ್ ಆದರೆ, ನಾನು ಕ್ಲಾಸ್ ವಿಲನ್ ಅಂತಾರೆ ನಂಜುಂಡಿ. ಕೇವಲ ಸ್ನೇಹಕ್ಕಾಗಿ ಒಪ್ಪಿಕೊಂಡು ಈ ಸಿನಿಮಾದಲ್ಲಿ ನಟಿಸಿರುವ ನಂಜುಂಡಿ, ಇದಕ್ಕಾಗಿ ಎಂದಿನಂತೆ ಸಂಭಾವನೆ ಪಡೆದಿಲ್ಲ. 

  ಚಿನ್ನದ ಬ್ಯುಸಿನೆಸ್, ಸಮಾಜಸೇವೆ, ರಾಜಕೀಯ ಎಲ್ಲವನ್ನೂ ನಿಭಾಯಿಸುತ್ತಿರುವ ನಂಜುಂಡಿ, ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಆರ್ಭಟಿಸಲು ಬರುತ್ತಿದ್ದಾರೆ. ಕನಕನಿಗೆ ವಿಲನ್ ಆಗಿ.

 • K P Nanjundi To Act In Kanaka

  kp nanjundi to act in kanaka

  Actor-producer and film financier K P Nanjundi who was away from films is all set to make a comeback with 'Duniya' Vijay starrer 'Kanaka'.

  K P Nanjundi is playing the role of a pro-Kannada activist in the film and even has a fight with Vijay. The shooting for Nanjundi's portion is all ready started and currently the shooting is in progress in NICE Road in Bangalore.

  R Chandru is directing the movie, apart from producing the film. Satya Hegade is the cameraman of the film, while Naveen Sajju has composed the songs for the film. Vijay, Rachita Ram, Manvita Harish, Sadhu Kokila and others are playing prominent roles in the film.

  Related Articles :-

  Rachita Ram Is Vijay's Heroine In Kanaka

  Manvita Is Vijay's Heroine In Kanaka

  First Look Of Kanaka Released

  Kanaka Shooting Starts From Today

  Song Recording For Kanaka Starts

  R Chandru To Direct Duniya Vijay In Kanaka - Exclusive

  R Chandru's New Film Is Kanaka

 • ಚಿನ್ನದ ನಂಜುಂಡಿ ಬಾಡಿಬಿಲ್ಡಿಂಗ್ ಮಾಡಲು ಹೊರಟಾಗ..

  kp nanjundi six pack story

  ಕೆ.ಪಿ. ನಂಜುಂಡಿ ಎಂದರೆ ಕನ್ನಡಿಗರಿಗೆ ಚಿನ್ನದ ವ್ಯಾಪಾರಿಯಾಗಿ, ವಿಶ್ವಕರ್ಮ ಸಮುದಾಯದ ನಾಯಕರಾಗಿ ಗೊತ್ತು. ಆದರೆ, ಅವರು ನಟರೂ ಹೌದು. ಬರೋಬ್ಬರಿ 12 ವರ್ಷಗಳ ನಂತರ ಕೆ.ಪಿ. ನಂಜುಂಡಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅದು ಕನಕ ಚಿತ್ರಕ್ಕಾಗಿ. 

  ಕನಕ ಆರ್.ಚಂದ್ರು ನಿರ್ದೇಶನದ, ದುನಿಯಾ ವಿಜಿ ಅಭಿನಯದ ಸಿನಿಮಾ. ದುನಿಯಾ ವಿಜಿ ಎದುರಿಗೆ ನಾಯಕಿಯರಾಗಿ ಕೆಂಡಸಂಪಿಗೆಯ ಮಾನ್ವಿತಾ ಮತ್ತು ರಚಿತಾ ರಾಮ್ ಇದ್ದಾರೆ. ಈ ಇಬ್ಬರು ನಾಯಕಿಯರಲ್ಲಿ ಮಾನ್ವಿತಾಗೆ ಕೆ.ಪಿ. ನಂಜುಂಡಿ ತಂದೆಯ ಪಾತ್ರ ಮಾಡಲಿದ್ದಾರೆ. ಹೀರೋಯಿನ್ ತಂದೆಯ ಪಾತ್ರಕ್ಕೂ, ಬಾಡಿಬಿಲ್ಡಿಂಗ್, ಸಿಕ್ಸ್​ಪ್ಯಾಕ್​ಗೂ ಏನು ನಂಟು ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

  ನಂಜುಂಡಿ, ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಎಸ್. ನಾರಾಯಣ್ ಧಾರಾವಾಹಿಗಳಲ್ಲಿ. ಅಂಬಿಕಾ, ಪಾರ್ವತಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದ ಕೆ.ಪಿ. ನಂಜುಂಡಿ ನಟಿಸಿದ್ದ ಕೊನೆಯ ಚಿತ್ರ ಲವ್ ಯು.

  ಈಗ 12 ವರ್ಷಗಳ ನಂತರ ಸಿಕ್ಸ್​ಪ್ಯಾಕ್ ಕೂಡಾ ಮಾಡಿಸಿಕೊಂಡು ಬಣ್ಣ ಹಚ್ಚುತ್ತಿದ್ದಾರೆ ನಂಜುಂಡಿ. ಕನಕ ಚಿತ್ರದ ಡೈರೆಕ್ಟರ್ ಆರ್. ಚಂದ್ರು ಎಸ್.ನಾರಾಯಣ್ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು. ಆಗಿನ ಪರಿಚಯವೇ ಈಗ ಬಣ್ಣ ಹಚ್ಚಲು ಕಾರಣವಂತೆ.

  ಸಂಬಂಧಿಸಿದ ಲೇಖನಗಳು ಓದಿರಿ :-

  K P Nanjundi To Act In Kanaka