` kurukshetra, - chitraloka.com | Kannada Movie News, Reviews | Image

kurukshetra,

 • ಕೃಷ್ಣ ರವಿಚಂದ್ರನ್‍ಗೆ ಶ್ರೀನಿವಾಸಪ್ರಭು ಡಬ್ಬಿಂಗ್

  srinivasa prabhu to dub for ravichandran's krithsna role

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು ವಿಶಿಷ್ಟವಾದ ಧ್ವನಿ. ಇಂದಿಗೂ ರವಿಚಂದ್ರನ್ ಅವರನ್ನು ಮಿಮಿಕ್ರಿ ಮಾಡುವವರು, ಪ್ರೇಮಲೋಕ, ರಣಧೀರ, ಅಂಜದಗಂಡು ಮೊದಲಾದ ಚಿತ್ರಗಳಲ್ಲಿನ ಧ್ವನಿಯನ್ನೇ ಅನುಸರಿಸ್ತಾರೆ. ಆದರೆ, ಸ್ವಾರಸ್ಯವೇನೂ ಗೊತ್ತೇ.. ಅದು ರವಿಚಂದ್ರನ್ ಧ್ವನಿಯಲ್ಲ. ಆರಂಭದ ದಿನಗಳಲ್ಲಿ ರವಿಚಂದ್ರನ್ ತಮ್ಮ ಪಾತ್ರಗಳಿಗೆ ಶ್ರೀನಿವಾಸಪ್ರಭು ಅವರಿಂದ ಡಬ್ ಮಾಡಿಸ್ತಾ ಇದ್ರು. ಈಗ ಮತ್ತೊಮ್ಮೆ ರವಿಚಂದ್ರನ್‍ಗೆ ಕಂಠವಾಗಲು ಬಂದಿದ್ದಾರೆ ಶ್ರೀನಿವಾಸಪ್ರಭು.

  ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿರುವ ರವಿಚಂದ್ರನ್‍ಗೆ ಶ್ರೀನಿವಾಸಪ್ರಭು ಅವರೇ ಧ್ವನಿ ಕೊಡಲಿದ್ದಾರೆ. ಕನ್ನಡದ ಮೇಲೆ ಅದ್ಭುತ ಹಿಡಿತ ಹೊಂದಿರುವ, ರಂಗಭೂಮಿಯ ನಂಟೂ ಇರುವ ಶ್ರೀನಿವಾಸ್‍ಪ್ರಭು ಅವರಿಗೆ ಪೌರಾಣಿಕ ಚಿತ್ರದ ಡೈಲಾಗ್ ಹೇಳುವುದು ನೀರು ಕುಡಿದಷ್ಟೇ ಸುಲಭ.

  ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕುರುಕ್ಷೇತ್ರ ಕೆಲವೇ ದಿನಗಳಲ್ಲಿ ಡಬ್ಬಿಂಗ್ ಮುಗಿಸಿ, ಆಡಿಯೋ ಲಾಂಚ್ ಮಾಡೋಕೆ ಸಿದ್ಧವಾಗುತ್ತಿದೆ. ದರ್ಶನ್ ಅಭಿನಯದ 50ನೇ ಸಿನಿಮಾ ಅಷ್ಟೇ ಅಲ್ಲ, ಹೆಚ್ಚೂ ಕಡಿಮೆ ಅರ್ಧಕ್ಕರ್ಧ ಕನ್ನಡ ಚಿತ್ರರಂಗವೇ ಪಾಲ್ಗೊಂಡಿರುವ ಸಿನಿಮಾ ಕುರುಕ್ಷೇತ್ರ.

 • ಡಿ.19ಕ್ಕೆ ಕುರುಕ್ಷೇತ್ರದ ಮತ್ತೊಂದು ಟೀಸರ್

  kurukshetra movie image

  ಕುರುಕ್ಷೇತ್ರ. ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಪ್ರತಿದಿನವೂ ಸುದ್ದಿಯಲ್ಲಿದೆ. ಚಿತ್ರದ ಕ್ಯಾನ್‍ವಾಸ್ ಅಂಥಾದ್ದು. ದರ್ಶನ್ ಅಭಿನಯದ, ಮುನಿರತ್ನ ನಿರ್ಮಿಸುತ್ತಿರುವ ಚಿತ್ರದಿಂದ ಹೊರಬಿದ್ದಿರುವುದು ಒಂದೇ ಟೀಸರ್. ಅದೂ ದರ್ಶನ್ ಹುಟ್ಟುಹಬ್ಬಕ್ಕೆಂದು ಬಿಡುಗಡೆಯಾದ ಸ್ಪೆಷಲ್.

  ಈಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಡಿ.19ಕ್ಕೆ ಕುರುಕ್ಷೇತ್ರ ಚಿತ್ರದ 2ನೇ ಟೀಸರ್ ಬಿಡುಗಡೆಯಾಗಲಿದೆ. ಮೊದಲ ಟೀಸರ್‍ನಲ್ಲಿ ಕಂಗೊಳಿಸಿದ್ದವರು ದುರ್ಯೋಧನ ದರ್ಶನ್. ಎರಡನೇ ಟೀಸರ್‍ನಲ್ಲಿ ಮಿಂಚಲಿರುವುದು ಅಭಿಮನ್ಯು ನಿಖಿಲ್. ಅಂದಹಾಗೆ ಅಂದು ನಿಖಿಲ್ ಹುಟ್ಟುಹಬ್ಬ.

 • ತಾರಕ್ ಜೊತೆ ಬಂದ ದುರ್ಯೋಧನ

  kuruk teaser

  ತಾರಕ್ ಚಿತ್ರ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರವೇಶವಾಗಿದೆ. ಫ್ಯಾಮಿಲಿ ಮತ್ತು ಆಕ್ಷನ್ ಮಿಶ್ರಿತ ಸಿನಿಮಾ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಇದೆಲ್ಲದರ ಜೊತೆ ದರ್ಶನ್​ ಅಭಿಮಾನಿಗಳಿಗೆ ಡಬಲ್ ಧಮಾಕ. ತಾರಕ್ ಜೊತೆ ಅವರಿಗೆ ದುರ್ಯೋಧನನ ದರ್ಶನವೂ ಆಗಿದೆ. ತಾರಕ್ ಚಿತ್ರಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರದ ಟೀಸರ್ ಪ್ರದರ್ಶನವಾಗಿವೆ.

  ದುರ್ಯೋಧನನ ರಾಜಭವನ ಪ್ರವೇಶ, ದರ್ಶನ್​ರ ಆ ಠೀವಿ, ಹಿನ್ನೆಲೆಯಲ್ಲಿ ಕೇಳಿ ಬರುವ ಸಾರ್ವಭೌಮ ದುರ್ಯೋಧನ ಎಂಬ ಧ್ವನಿ, ದರ್ಶನ್​ ಗಹಗಹಿಸಿ ನಗುವ ಆ ನಗು ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹಚ್ಚಿರುವುದು ಸುಳ್ಳಲ್ಲ. ತಾರಕ್ ಎಂಜಾಯ್ ಮಾಡುತ್ತಲೇ ಕುರುಕ್ಷೇತ್ರಕ್ಕಾಗಿ ಕಾಯುವಂತೆ ಮಾಡಿದ್ದಾರೆ ದರ್ಶನ್.

 • ದರ್ಶನ್ ಅನುಭವದಲ್ಲಿ ಕುರುಕ್ಷೇತ್ರ ಶೂಟಿಂಗ್ 

  darshan shares kurukshetra experiences

  ಗದೆ ಬಿಟ್ಟರೆ, ಮೈಮೇಲೆ 35ರಿಂದ 40 ಕೆಜಿ ತೂಕದ ಒಡವೆಗಳಿರುತ್ತವೆ. ಡಿಸೈನ್ ಕಚ್ಚೆಯ ತೂಕವೇ ಎರಡ್ಮೂರು ಕೆಜಿ ಇರುತ್ತೆ. ಮೈಮೇಲಿನ ಒಡವೆ, ಕಿರೀಟ, ಗದೆ, ಐದಾರು ಇಂದು ಎತ್ತರದ ಗೋಲ್ಡ್ ಕಲರ್ ಚಪ್ಪಲಿ..ಇವೆಲ್ಲವನ್ನೂ ಹೊತ್ತುಕೊಂಡೇ ಓಡಾಡಬೇಕು. ಗದೆ, ಕಿರೀಟವನ್ನಷ್ಟೇ ಬದಿಗಿಡಬಹುದು ಹೊರತು, ಉಳಿದವೆಲ್ಲ ಮೈಮೇಲೆ ಇರುತ್ತವೆ. ಮೇಕಪ್ ಮಾಡಿಕೊಳ್ಳೋಕೆ ಎರಡೂವರೆ ಗಂಟೆ ಬೇಕು. ಮೇಕಪ್ ಹಾಕಿಕೊಂಡು ಕ್ಯಾರವಾನ್‍ನಿಂದ ಇಳಿದರೆ, ಸಂಜೆ 6ರ ತನಕ ಶೂಟಿಂಗ್. ಕಾಸ್ಟ್ಯೂಮ್ ತೆಗೆಯುವಂತೆಯೇ ಇಲ್ಲ. ಇದು ಸ್ವತಃ ದರ್ಶನ್ ಬಿಚ್ಚಿಟ್ಟಿರುವ ಕುರುಕ್ಷೇತ್ರದ ಶೂಟಿಂಗ್ ಅನುಭವ.

  ಒಂದು ದಿನಕ್ಕೆ ಒಂದು ಅಥವಾ ಎರಡು ಸೀನ್‍ಗಳನ್ನಷ್ಟೇ ಶೂಟ್ ಮಾಡಲಾಗುತ್ತಿದೆಯಂತೆ. ಅದರಲ್ಲಿಯೂ ಎರಡು ಬಾರಿ. 2ಡಿ ವರ್ಷನ್‍ಗೆ ಒಂದ್ಸಾರಿ, 3ಡಿ ವರ್ಷನ್‍ಗೆ ಇನ್ನೊಂದ್ಸಾರಿ ಶೂಟಿಂಗ್ ನಡೆಯುತ್ತಿದೆಯಂತೆ. ಡಬ್ಬಿಂಗ್ ಕೂಡಾ ಎರಡೆರಡು ಸಲ ಮಾಡಬೇಕಾಗಿದೆ. ನಿರ್ಮಾಪಕ ಮುನಿರತ್ನ, ಒಂದೇ ಸಂಭಾವನೆಯಲ್ಲಿ ಎರಡು ಸಿನಿಮಾ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ದರ್ಶನ್.

  ಇನ್ನು ನಿರ್ದೇಶಕ ನಾಗಣ್ಣನವರಿಗೆ ಇನ್ನೂ ದರ್ಶನ್‍ಗೆ ಹೊಂದಬಲ್ಲ ನಾಯಕಿ ಸಿಕ್ಕಿಲ್ಲ. ಭಾನುಮತಿಯ ಪಾತ್ರಕ್ಕೆ ಹುಡುಕಾಟ ನಡೆಯುತ್ತಲೇ ಇದೆ.

  ಇನ್ನು ದರ್ಶನ್ ಟೈಂ ಟೇಬಲ್ ಕೂಡಾ ಬದಲಾಗಿದೆ. ಬೆಳಗ್ಗೆ ಎದ್ದವರೇ ಎರಡು ಗಂಟೆ ಜಿಮ್‍ನಲ್ಲಿ ಬೆವರು ಹರಿಸಿ, ಜಾಗಿಂಗ್ ಮಾಡ್ತಾರೆ. ಆಮೇಲೆ ಸೆಟ್‍ಗೆ ಹೋದರೆ, ಎರಡು ಗಂಟೆ ಮೇಕಪ್‍ಗೇ ಸಮಯ ತೆಗೆದುಕೊಳ್ಳುತ್ತೆ. ಇದರ ನಡುವೆ ತಮ್ಮದೇ ಸೈಕಲ್‍ನಲ್ಲಿ ರಾಮೋಜಿಫಿಲ್ಮ್ ಸಿಟಿ ರೌಂಡ್ ಹಾಕ್ತಾರಂತೆ ದರ್ಶನ್. ಒಟ್ಟಿನಲ್ಲಿ ಕುರುಕ್ಷೇತ್ರ ಚಿತ್ರದ ಅನುಭವ ಡಿಫರೆಂಟಾಗಿಯಂತೂ ಇದೆ.

 • ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

  nikhil gowda as abhimanyu

  ಜಾಗ್ವಾರ್ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಿಖಿಲ್ ಕುಮಾರಸ್ವಾಮಿ, ಕುರುಕ್ಷೇತ್ರ ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್, ಕುರುಕ್ಷೇತ್ರ ಚಿತ್ರದಲ್ಲಿ ಅಬಿಮನ್ಯು ಪಾತ್ರ ಮಾಡುತ್ತಿದ್ದಾರಂತೆ.

  ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರಕ್ಕೆ ಪಾತ್ರಧಾರಿಗಳ ಆಯ್ಕೆಯೇ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈಗಾಗಲೇ ಹರಿಪ್ರಿಯ ನರ್ತಕಿ ಪಾತ್ರದಲ್ಲಿ, ರೆಜಿನಾ ಭಾನುಮತಿ ಪಾತ್ರದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ.

  ದ್ರೌಪದಿಯ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಹೆಸರು ಖಚಿತವಾಗಿಲ್ಲ. ಬಹುತೇಕ ಮುಗುಳ್ನಗೆ ಸುಂದರಿ ಸ್ನೇಹಾ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ.

  ಇನ್ನು ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯರ ಪಾತ್ರದಲ್ಲಿ ನಟಿಸುತ್ತಿದ್ದು, ಶ್ರೀನಾಥ್ ದೃತರಾಷ್ಟ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಾಯಿಕುಮಾರ್, ಶಶಿಕುಮಾರ್ಗೆ ಪಾತ್ರವಿದೆಯಂತೆ. ಯಾವ ಪಾತ್ರ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

  ಕುಂತಿಯ ಪಾತ್ರಕ್ಕೆ ಜ್ಯೂಲಿ ಲಕ್ಷ್ಮಿಯನ್ನು ಕೇಳಲಾಗಿದ್ದು, ಅವರಿನ್ನೂ ಕನ್ಫರ್ಮ್ ಮಾಡಿಲ್ಲ. ಒಟ್ಟಿನಲ್ಲಿ ದರ್ಶನ್ ದುರ್ಯೋಧನನಾಗಿ, ರವಿಚಂದ್ರನ್ ಶ್ರೀಕೃಷ್ಣನಾಗಿ ನಟಿಸುತ್ತಿರುವ ಚಿತ್ರ, ಸೆಟ್ಟೇರುವ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ.

  ಚಿತ್ರ ಇದೇ ತಿಂಗಳು 29ರಂದು ಸೆಟ್ಟೇರಲಿದೆ.

  Related Articles :-

  ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

  Haripriya Confirmed For Kurukshetra

  ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

  Vivek Oberoi in Kurukshetra Say Reports

  Kurukshetra To Be Launched On July 23rd

  Krishna Ravichandran Stops Eating Meat

 • ದರ್ಶನ್ ದುರ್ಯೋಧನ ಅಲ್ಲ, ಸುಯೋಧನ..!

  kurukshetra image

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರ ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಈಗಾಗಲೇ ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅವರ ನಡಿಗೆಯ ಗತ್ತು, ಆ ಅಟ್ಟಹಾಸದ ನಗು ನೋಡಿದವರು ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. 

  ಆದರೆ, ದರ್ಶನ್ ಹೇಳೋದೇ ಬೇರೆ. ಎಲ್ಲರಿಗೂ ಗೊತ್ತಿರುವಂತೆ ಮಹಾಭಾರತದಲ್ಲಿ ದುರ್ಯೋಧನ ಖಳನಾಯಕ. ದುರ್ಯೋಧನನನ್ನು ಒಳ್ಳೆಯ ಆದರ್ಶ ಪುರುಷನಂತೆ ಚಿತ್ರಿಸುವ ಮೊದಲ ಪ್ರಯತ್ನ ನಡೆದಿದ್ದು ಕನ್ನಡದ ಹೆಮ್ಮೆ ಕವಿಗಳಲ್ಲಿ ಒಬ್ಬನಾದ ರನ್ನನಿಂದ. ರನ್ನನ ಗದಾಯುದ್ಧ ಕಾವ್ಯದಲ್ಲಿ ದುರ್ಯೋಧನನನ್ನು ಸುಯೋಧನ ಎಂದು ಬದಲಿಸಿ ಚಿತ್ರಿಸಲಾಗಿತ್ತು. ಈಗ ಕುರುಕ್ಷೇತ್ರದಲ್ಲಿ ಕೂಡಾ ಹಾಗೆ. ಇದನ್ನು ಸ್ವತಃ ದರ್ಶನ್ ಹೇಳಿಕೊಂಡಿದ್ದಾರೆ.

  ಇದು ಸಣ್ಣ ಪಾತ್ರವಲ್ಲ. ಸಣ್ಣ ಸವಾಲೂ ಅಲ್ಲ. ಅದರಲ್ಲೂ ಹಳಗನ್ನಡದ ಸಂಭಾಷಣೆ. ಹಲವು ಬಾರಿ ಹೇಳಿಕೊಂಡು, ಸ್ಕ್ರಿಪ್ಟ್‍ನ್ನು ಮನೆಗೇ ತೆಗೆದುಕೊಂಡು ಹೋಗಿ, ಉರುಹೊಡೆದು ಅಭ್ಯಾಸ ಮಾಡಿದ್ದೇನೆ. ತಪ್ಪಾಗಬಾರದು ಎಂಬ ಕಾಳಜಿಯಿಂದ ಚಿತ್ರದ ಸಂಪೂರ್ಣ ಸಂಭಾಷಣೆಯನ್ನು ಅಭ್ಯಾಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

  ನಾನೂ ಕೂಡಾ ದುರ್ಯೋಧನನನ್ನು ಒಬ್ಬ ಖಳನಂತೆಯೇ ಚಿತ್ರಿಸಿಕೊಂಡಿದ್ದೆ. ಆದರೆ, ಈ ಚಿತ್ರದಲ್ಲಿ ನಟಿಸಿದ ಮೇಲೆ ದುರ್ಯೋಧನನ ಒಳ್ಳೆಯ ಗುಣಗಳ ಪರಿಚಯವೂ ನನಗಾಯಿತು. ಅವನು ದುರ್ಯೋಧನ ಅಲ್ಲ, ಸುಯೋಧನ ಎಂದಿದ್ದಾರೆ. 

  ಹಾಗಾದರೆ, ಕುರುಕ್ಷೇತ್ರ ಸಿನಿಮಾಗೆ ಕವಿ ರನ್ನನ ಗದಾಯುದ್ಧ ಸ್ಫೂರ್ತಿಯಾ..? ನಿರ್ದೇಶಕ ನಾಗಣ್ಣನವರೇ ಹೇಳಬೇಕು. ಹಾಗೇನಾದರೂ ಆಗಿದ್ದರೆ, ಅವರು ಅಭಿನಂದನಾರ್ಹರು. ಏಕೆಂದರೆ, ರನ್ನನ ಕಾವ್ಯವೊಂದು ಸಿನಿಮಾಗೆ ಸ್ಫೂರ್ತಿಯಾಗುವುದೆಂದರೆ ಸುಮ್ಮನೆ ಮಾತಲ್ಲ.

 • ದರ್ಶನ್ ಮೈಮೇಲೆ 50 ಕೆಜಿ ಭಾರ..!

  darshan wears 50kg jewelley

  ಕುರುಕ್ಷೇತ್ರ ಚಿತ್ರವನ್ನು ಮಾಡುತ್ತಿರುವ ನಿರ್ದೇಶಕ ನಾಗಣ್ಣ, ದುರ್ಯೋಧನನ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಪೌರಾಣಿಕ ಚಿತ್ರದಲ್ಲಿ ದರ್ಶನ್‍ಗೆ ಇದ್ದ ಸವಾಲು ಮೈಮೇಲೆ ಆಭರಣ, ಕಾಸ್ಟ್ಯೂಮ್ ಹಾಕಿಕೊಳ್ಳೋದು.

  ಇವುಗಳ ಭಾರವೇ 50 ಕೆಜಿ ಇತ್ತಂತೆ. ಸದಾ ಲವಲವಿಕೆಯಿಂದ ಓಡಾಡಿಕೊಂಡಿರುವ ದರ್ಶನ್, ಮೈಮೇಲೆ ಆಭರಣ, ಕಾಸ್ಟ್ಯೂಮ್ ಹೊತ್ತು ಓಡಾಡಿ ಸುಸ್ತಾಗಿ ಹೋದರಂತೆ. ಒಮ್ಮೆಯಂತೂ ಎರಡು ದಿನ ರೆಸ್ಟ್ ಕೊಡಿ ಎಂದು ಕೇಳಿಕೊಂಡರಂತೆ.

  ದರ್ಶನ್ ಕಷ್ಟವನ್ನು ಅರ್ಥ ಮಾಡಿಕೊಂಡ ನಿರ್ಮಾಪಕ ಮುನಿರತ್ನ, ದುರ್ಯೋಧನನ ಪಾತ್ರಕ್ಕೆ ಹೊಸ ಕಿರೀಟ ಮಾಡಿಸಿಕೊಟ್ಟರಂತೆ. ಹಾಗಂತ ಅದೇನೂ ಹಗುರವಾದದ್ದಲ್ಲ. ಹಗುರವಾದ ಆ ಕಿರೀಟದ ತೂಕ 22 ಕೆಜಿ. ದರ್ಶನ್ ಪಾತ್ರದ ಕಷ್ಟವನ್ನು ನೀವೇ ಅರ್ಥ ಮಾಡಿಕೊಳ್ಳಿ.

 • ದರ್ಶನ್‍ಗೆ ಹರಿಪ್ರಿಯಾ `ಮಾಯೆ'

  hari priya image

  ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾರೆ ಹರಿಪ್ರಿಯಾ. ಚಿತ್ರದಲ್ಲಿ ಹರಿಪ್ರಿಯಾ ಅವರದ್ದು ನರ್ತಕಿಯ ಪಾತ್ರ ಎನ್ನಲಾಗಿತ್ತು. ಈಗ ಚಿತ್ರದ ಇನ್ನೊಂದು ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ಹರಿಪ್ರಿಯಾ ಅವರ ಪಾತ್ರದ ಹೆಸರು ಮಾಯೆ. ದುರ್ಯೋಧನನನ್ನು ಮರಳು ಮಾಡುವ ಮಾಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹರಿಪ್ರಿಯಾ.

  ಚಿತ್ರವನ್ನು 3ಡಿಯಲ್ಲಿ ಚಿತ್ರೀಕರಿಸಿರುವುದನ್ನು ಥ್ರಿಲ್ಲಾಗಿ ನೋಡಿರುವ ಹರಿಪ್ರಿಯಾ, ಶೂಟಿಂಗ್ ಮಾನಿಟರ್ ನೋಡುವಾಗಲೂ 3ಡಿ ಕನ್ನಡಕ ಬಳಸುತ್ತಿರುವುದನ್ನು ನೋಡಿ ಬೆರಗಾಗಿದ್ದರಂತೆ. ಒಟ್ಟಿನಲ್ಲಿ ಕುರುಕ್ಷೇತ್ರದ ಒಂದೊಂದು ಸುದ್ದಿಯೂ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ.

 • ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

  bollywood anjaneya in kurukshtera ?

  ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ ಕುರುಕ್ಷೇತ್ರ ಪ್ರತಿದಿನವೂ ಕುತೂಹಲ ಮೂಡಿಸುತ್ತಿದೆ.  ಚಿತ್ರದ ಬಹುತೇಕ ಪಾತ್ರಗಳು ಅಂತಿಮಗೊಂಡಿದ್ದರೂ, ಭೀಮ ಯಾರು ಎನ್ನುವುದು ಇನ್ನೂ ಫೈನಲ್ ಆಗಿರಲಿಲ್ಲ. 

  ಈಗ ಆ ಪಾತ್ರಕ್ಕೆ  ಬಾಲಿವುಡ್ ಆಂಜನೇಯ ಡ್ಯಾನಿಶ್ ಅಖ್ತರ್ ಸೈಫಿ ಆಯ್ಕೆಯಾಗಿದ್ದಾರಂತೆ. ಆರೂವರೆ ಅಡಿ ಎತ್ತರದ ಡ್ಯಾನಿಶ್, 125 ಕೆಜಿ ತೂಕವಿದ್ದಾರೆ. ಸಿಯಾ ಕೇ ರಾಮ್ ಚಿತ್ರದಲ್ಲಿ ಆಂಜನೇಯನ ಪಾತ್ರ ಮಾಡಿದ್ದ ಡ್ಯಾನಿಶ್, ಬಾಲಿವುಡ್ ಆಂಜನೇಯ ಎಂದೇ ಫೇಮಸ್. ಆದರೆ, ಚಿತ್ರತಂಡ ಇನ್ನೂ ಡ್ಯಾನಿಶ್​ರೇ ಭೀಮನ ಪಾತ್ರಧಾರಿನಾ ಎನ್ನುವುದನ್ನು ಫೈನಲ್ ಮಾಡಿಲ್ಲ. ಚಿತ್ರ ಜುಲೈ 30ರಂದು ಸೆಟ್ಟೇರುತ್ತಿದೆ.

  Related Articles :-

  Kurukshetra To be Launched on July 30th

  ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

  ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

  Haripriya Confirmed For Kurukshetra

  ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

  Vivek Oberoi in Kurukshetra Say Reports

  Kurukshetra To Be Launched On July 23rd

 • ದುರ್ಯೋಧನನ ಪಾತ್ರಕ್ಕೆ ದರ್ಶನ್ ತಯಾರಿ ಹೇಗಿದೆ..?

  darshan as duryodhana

  ಕುರುಕ್ಷೇತ್ರ ಚಿತ್ರದಲ್ಲಿ ನಟಿಸುತ್ತಿರುವ ದರ್ಶನ್, ಆ ಪಾತ್ರಕ್ಕೆ ಸಿದ್ಧತೆಯನ್ನಂತೂ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಪೌರಾಣಿಕ ಪಾತ್ರದ ವಿಚಾರ ಬಂದಾಗ ಯಾವ ನಟನಾದರೂ ಅಷ್ಟೆ, ಸಿದ್ಧತೆ ಇಲ್ಲದೆ ನಟಿಸುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ದರ್ಶನ್. ಹೀಗಾಗಿಯೇ ದರ್ಶನ್, ಡಾ. ರಾಜ್ ಕುಮಾರ್ ಅವರ ಹಳೆಯ ಚಿತ್ರಗಳನ್ನೆಲ್ಲ ಮತ್ತೊಮ್ಮೆ, ಮಗದೊಮ್ಮೆ ನೋಡುತ್ತಿದ್ದಾರಂತೆ. ಪೌರಾಣಿಕ ಚಿತ್ರಗಳಲ್ಲಿ ರಾಜ್ ಅಭಿನಯಕ್ಕೆ ಸಾಟಿಯಾಗಬಲ್ಲ ನಟರು ಕೂಡಾ ಇಲ್ಲ. ಹೀಗಾಗಿಯೇ ದರ್ಶನ್, ರಾಜ್ ಚಿತ್ರಗಳಲ್ಲಿನ ರಾಜ್ ಅಭಿನಯ, ಧ್ವನಿಯ ಏರಿಳಿತ, ಭಾವಭಂಗಿ, ನಡಿಗೆ.. ಹೀಗೆ ಪ್ರತಿಯೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ.

  ಇನ್ನು ನೀನಾಸಂ ಮೂಲಕ ಬಂದಿರುವ ದರ್ಶನ್‍ಗೆ ರಂಗಭೂಮಿಯ ಪಾಠವೂ ಇದೆ. ನೀನಾಸಂನಲ್ಲಿದ್ದಾಗ ನಿರ್ದೇಶಕ ಚಿದಂಬರ ಸುಬ್ಬಾರಾವ್, ರಂಗದಲ್ಲಿ ಅಂತರಂಗ ಎಂಬ ಪುಸ್ತಕ ಕೊಟ್ಟಿದ್ದರಂತೆ. ಆ ಪುಸ್ತಕವನ್ನು ಮತ್ತೆ ಎರಡು ಬಾರಿ ಓದಿಕೊಂಡಿದ್ದಾರಂತೆ. 

  ಇನ್ನು ದೈಹಿಕ ಕಸರತ್ತಿನ ಬಗ್ಗೆ ಹೇಳಲೇಬೇಕಿಲ್ಲ. ಅದು ದರ್ಶನ್‍ಗೀಗ ದಿನಚರಿಯಾಗಿ ಹೋಗಿದೆ.

  Related Articles :-

  ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

  Kurukshetra To be Launched on July 30th

  ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

  ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

  Haripriya Confirmed For Kurukshetra

  ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

  Vivek Oberoi in Kurukshetra Say Reports

  Kurukshetra To Be Launched On July 23rd

  Krishna Ravichandran Stops Eating Meat

 • ದುರ್ಯೋಧನನಿಗೆ ಮೇಘನಾ ಭಾನುಮತಿ

  meghana as bhanumathi

  ಕುರುಕ್ಷೇತ್ರ, ಚಿತ್ರ ಶುರುವಾದಾಗಿನಿಂದ ಪಾತ್ರಧಾರಿಗಳ ಆಯ್ಕೆ, ಬದಲಾವಣೆ ಸುದ್ದಿಯಾಗುತ್ತಲೇ ಇದೆ. ಚಿತ್ರದ ಚಿತ್ರೀಕರಣ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಡಬ್ಬಿಂಗ್ ಕೂಡಾ ಶುರುವಾಗಿದೆ. ಆದರೆ, ದುರ್ಯೋಧನನಿಗೆ ನಾಯಕಿ ಯಾರು ಎಂಬುದರ ಬಗ್ಗೆ ಗೊಂದಲವಿದ್ದೇ ಇತ್ತು.

  ರಮ್ಯಾ ನಂಬೀಸನ್ ಭಾನುಮತಿಯಾಗಿ ನಟಿಸುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತಾದರೂ, ರಮ್ಯಾ ನಂಬೀಸನ್ ಡೇಟ್ಸ್ ಸಿಗಲೇ ಇಲ್ಲವಂತೆ. ಹೀಗಾಗಿ ರಮ್ಯಾ ನಂಬೀಸನ್ ಅವರನ್ನು ಕೈಬಿಟ್ಟಿರುವ ಚಿತ್ರತಂಡ ಈಗ ಆ ಪಾತ್ರಕ್ಕೆ ಮೇಘನಾ ಅವರನ್ನು ಆಯ್ಕೆ ಮಾಡಿದೆ. ಅಲ್ಲಿಗೆ ಮೇಘನಾ ಭಾನುಮತಿಯಾಗಿ ನಟಿಸಲಿರುವುದು ಖಚಿತ.

  ಕುರುಕ್ಷೇತ್ರ ಚಿತ್ರದಲ್ಲಿ ಸ್ಟಾರ್‍ಗಳ ಸಮಾಗಮವೇ ಆಗಿದೆ. ಆ ಸ್ಟಾರ್‍ಗಳ ಪಟ್ಟಿಗೆ ಹೊಸ ಸೇರ್ಪಡೆ ಮೇಘನಾ ರಾಜ್. ಟೆಸ್ಟ್ ಶೂಟ್ ಮುಗಿದಿದ್ದು, ಮೇಘನಾ ಅವರ ಪಾತ್ರದ  ಚಿತ್ರೀಕರಣ ಕೆಲವೇ ದಿನಗಳಲ್ಲಿ ಶುರುವಾಗಲಿದೆ.

 • ಪರಭಾಷಿಕರಿಗೆ ಚಾಲೆಂಜಿಂಗ್ ಸ್ಟಾರ್ ಚಾಲೆಂಜ್

  darshan challengs other language

  ಕುರುಕ್ಷೇತ್ರ ಚಿತ್ರದ ಶೂಟಿಂಗ್, ಇಂದು (ಜನವರಿ 5) ಕಂಪ್ಲೀಟ್ ಆಗಲಿದೆ. ಮುಂದಿನದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ. ಮಾರ್ಚ್‍ನಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸಿರುವ ನಿರ್ಮಾಪಕ ಮುನಿರತ್ನ, ಚಿತ್ರದ ಬಗ್ಗೆ ಖುಷಿಯಿಂದಿದ್ದಾರೆ. ಫೆ.10ರೊಳಗೆ ಎಲ್ಲ ಕೆಲಸ ಮುಗಿಸಿ, ಮಾ.2ಕ್ಕೆ ಸೆನ್ಸಾರ್ ಮಾಡಿಸಿ, ಮಾ.9ಕ್ಕೆ ರಿಲೀಸ್ ಮಾಡುವುದು ಮುನಿರತ್ನ ಪ್ಲಾನ್.

  ದರ್ಶನ್ ಹೇಳಿಕೊಂಡಿರೋದು ಇದನ್ನೇ. ಅದು ಪರಭಾಷಿಕರಿಗೆ ದರ್ಶನ್ ಹಾಕಿದ ಚಾಲೆಂಜ್ ಎಂದಾದರೂ ಎಂದುಕೊಳ್ಳಿ. ತಮ್ಮ ಚಿತ್ರದ ಮೇಲಿರುವ ಆತ್ಮವಿಶ್ವಾಸ ಎಂದು ಬೇಕಾದರೂ  ಎಂದುಕೊಳ್ಳಿ. ದರ್ಶನ್ ಓಪನ್ ಆಗಿ ಮಾತನಾಡಿದ್ದಾರೆ.

  ಇತ್ತೀಚೆಗೆ ಬಂದ ಪರಭಾಷೆಯ ಚಿತ್ರವೊಂದರ ಬಗ್ಗೆ ಭಾರಿ ಬಿಲ್ಡಪ್ ಕೊಟ್ರು. ಅದಕ್ಕೋಸ್ಕರ ಅವರು ಮೂರೂವರೆ ವರ್ಷ ತೆಗೆದುಕೊಂಡಿದ್ದರಂತೆ. ನಮ್ಮ ಬಳಿ ಬರಲಿ, ಕಡಿಮೆ ಅವಧಿಯಲ್ಲಿ ಸಿದ್ಧತೆ ಮಾಡಿಕೊಂಡು ಸಿನಿಮಾ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಕನ್ನಡದಲ್ಲಿ ಎಲ್ಲವೂ ಇದೆ. ಪ್ರೋತ್ಸಾಹ ಬೇಕಷ್ಟೆ ಎಂದಿದ್ದಾರೆ ದರ್ಶನ್. 

  ದರ್ಶನ್ ಹೇಳಿರುವ ಪರಭಾಷೆಯ ಸಿನಿಮಾ ಬಾಹುಬಲಿ ಎಂದು ಪ್ರತ್ಯೇಕವಾಗಿ ಬೇರೆ ಹೇಳಬೇಕಿಲ್ಲ. ಬಾಹುಬಲಿ ಸಿನಿಮಾ ವೇಳೆಯಲ್ಲಿ ಕೂಡಾ ದರ್ಶನ್ ಕನ್ನಡದ ಪತ್ರಿಕೆ, ಟಿವಿ ಚಾನೆಲ್‍ಗಳ ವಿರುದ್ಧ ಕಿಡಿ ಕಾರಿದ್ದರು. ಪರಭಾಷೆಯ ಚಿತ್ರಕ್ಕೆ ಕೊಡುವ ಪ್ರಚಾರವನ್ನು ಕನ್ನಡ ಚಿತ್ರಗಳಿಗೆ ಕೊಡಿ ಎಂದು ಬಹಿರಂಗವಾಗಿಯೇ ಹೇಳಿದ್ದರು. 

 • ಬೆಳ್‍ಬೆಳಗ್ಗೇನೇ ಸ್ಟುಡಿಯೋಗೆ ಹೋಗ್ತಾರೆ ದರ್ಶನ್..!

  darshan dubs for kurukshetra

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ. ಚಿತ್ರತಂಡ ಹೇಳಿದ್ದಂತೆಯೇ ಎಲ್ಲವೂ ಆಗಿದ್ದರೆ, ಸಿನಿಮಾ ಇಷ್ಟು ಹೊತ್ತಿಗೆ ಥಿಯೇಟರ್‍ನಲ್ಲಿರಬೇಕಿತ್ತು. ಚಿತ್ರದ ಡಬ್ಬಿಂಗ್ ಭಾರಿ ವೇಗವಾಗಿ ನಡೆಯುತ್ತಿದ್ದು, ದರ್ಶನ್ ಅಂತೂ ತಪಸ್ಸಿನಂತೆ ಮಾಡುತ್ತಿದ್ದಾರೆ.

  ದರ್ಶನ್ ಮುಂಜಾನೆಯೇ ಎದ್ದು ಸ್ಟುಡಿಯೋಗೆ ಬಂದು ಫ್ರೆಶ್ ವಾಯ್ಸ್‍ನಲ್ಲೆ ಡಬ್ಬಿಂಗ್ ಮಾಡುತ್ತಿರುವುದು ವಿಶೇಷ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಇದೇ ರೀತಿ ಡಬ್ ಮಾಡಿದ್ದ ದರ್ಶನ್, ಕುರುಕ್ಷೇತ್ರ ಚಿತ್ರಕ್ಕೂ ಅದೇ ಮಾದರಿ ಅನುಸರಿಸುತ್ತಿದ್ದಾರೆ.

  ಡಬ್ಬಿಂಗ್ ಒಂದು ಹಂತದ  ಕೆಲಸ ಮುಗಿದಿದ್ದು, ಈಗಾಗಲೇ 2ನೇ ಶೆಡ್ಯೂಲ್ ಜಾರಿಯಲ್ಲಿದೆ. 

 • ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

  kurukshtera movie image

  ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ. ಅಲ್ಲಲ್ಲ.. ಅದು ಮುನಿರತ್ನ ಕುರುಕ್ಷೇತ್ರ. ಚಿತ್ರದ ಮುಹೂರ್ತಕ್ಕೆ ಆಗಸ್ಟ್ 6ನೇ ತಾರೀಕು ಡೇಟ್ ಫ{ಇಕ್ಸ್ ಆಗಿರುವುದು ನಿಜವಾದರೂ, ಮುನಿರತ್ನಗೆ ಒಂದು ವಿಚಿತ್ರ ತಲೆನೋವು ಶುರುವಾಗಿದೆ. ಅದು ಡಿಕೆ ತಲೆನೋವು

  ಇನ್ನೇನಿಲ್ಲ, ಮುನಿರತ್ನ ಡಿಕೆ ಶಿವಕುಮಾರ್ ಆಪ್ತರಲ್ಲಿ ಒಬ್ಬರು. ಹೀಗಾಗಿಯೇ ಸಿನಿಮಾ ಮುಹೂರ್ತದ ಆಹ್ವಾನ ಪತ್ರಿಕೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಇಬ್ಬರ ಹೆಸರೂ ಇದೆ. ಆದರೆ ಈಗ ಕಂಪ್ಲೀಟ್ ಐಟಿ ಟೆನ್ಷನ್‍ನಲ್ಲಿರುವ ಡಿಕೆ ಬ್ರದರ್ಸ್, ಮುಹೂರ್ತ ಕಾರ್ಯಕ್ರಮಕ್ಕೆ ಬರುವುದು ಕಷ್ಟಸಾಧ್ಯ. ತನಿಖೆ ಮುಗಿಯಲೇ ಇಲ್ಲದವಾದರೆ ಬರಲು ಆಗುವುದೂ ಇಲ್ಲ. 

  ಈ ಮಧ್ಯೆ ಐಟಿಯವರು ಬೆಂಡೆತ್ತಿರುವಾಗಲೇ ಮುನಿರತ್ನ ಹೋಗಿ ಡಿಕೆ ಸುರೇಶ್ ಅವರಿಗೆ ಆಹ್ವಾನವನ್ನೂ ಕೊಟ್ಟು ಬಂದಿದ್ದಾರೆ. ಒಟ್ಟಿನಲ್ಲಿ ಮುನಿರತ್ನ ಕುರುಕ್ಷೇತ್ರದ ದಿನ ಏನೇ ಸಂಭ್ರಮವಿದ್ದರೂ, ಡಿಕೆ ತಲೆನೋವು ಎಲ್ಲರಿಗೂ ಕಾಡಲಿದೆ.

  Related Articles :-

  ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

  ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

  ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

  Kurukshetra To be Launched on July 30th

  ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

  ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

  Haripriya Confirmed For Kurukshetra

  Vivek Oberoi in Kurukshetra Say Reports

  Kurukshetra To Be Launched On July 23rd

 • ಮುನಿರತ್ನ ಕುರುಕ್ಷೇತ್ರದಲ್ಲಿ ಅವಕಾಶ - ಶಕುನಿ ರವಿಶಂಕರ್, ಧೃತರಾಷ್ಷ್ಟ್ರ ಶ್ರೀನಾಥ್​ಗೆ ಉತ್ಸಾಹವೋ ಉತ್ಸಾಹ

  ravishankar in kurukshetra

  ದರ್ಶನ್ ಅಭಿನಯದ 50ನೇ ಚಿತ್ರ ಮುನಿರತ್ನ ಕುರುಕ್ಷೇತ್ರ ಚಿತ್ರ, ಸೆಟ್ಟೇರುವ ಮೊದಲೇ ಅಪಾರ ನಿರೀಕ್ಷೆ ಹುಟ್ಟಿಸುತ್ತಿದೆ. ಈಗ ಚಿತ್ರದ ಅತ್ಯಂತ ಪ್ರಮುಖ ಪಾತ್ರಕ್ಕೆ ಆರ್ಮುಗಂ ಖ್ಯಾತಿಯ ರವಿಶಂಕರ್ ಸೇರ್ಪಡೆಯಾಗಿದ್ದಾರೆ. ರವಿಶಂಕರ್​ಗೆ ಕುರುಕ್ಷೇತ್ರ ಚಿತ್ರದಲ್ಲಿ ಶಕುನಿಯ ಪಾತ್ರ.

  ಕುರುಕ್ಷೇತ್ರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದೇ ನನ್ನ ಅದೃಷ್ಟ. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ರವಿಶಂಕರ್. ಅವರ ಎಕ್ಸೈಟ್​ಮೆಂಟ್​ಗೆ ಕಾರಣವೂ ಇದೆ. ಏಕೆಂದರೆ ಕುರುಕ್ಷೇತ್ರಕ್ಕೆ ಕಾರಣಕರ್ತನೇ ಶಕುನಿ. ಮಹಾಭಾರತದ ಅತ್ಯಂತ ಪ್ರಮುಖ ಪಾತ್ರವದು.

  ಇನ್ನು ಧೃತರಾಷ್ಟ್ರನ ಪಾತ್ರದಲ್ಲಿ ನಟಿಸುತ್ತಿರುವ ಶ್ರೀನಾಥ್​ಗೂ ಅಂಥದ್ದೇ ಉತ್ಸಾಹ. ಶ್ರೀನಾಥ್​ಗೆ ಪೌರಾಣಿಕ ಚಿತ್ರ ಮತ್ತು ಪಾತ್ರಗಳು ಹೊಸದಲ್ಲ. ಈ ಹಿಂದೆ ಅಣ್ಣಾವ್ರ ಜೊತೆ ನಾಲ್ಕು ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಮತ್ತೆ ಅಂಥಾದ್ದೊಂದು ಅದ್ಭುತ ಅವಕಾಶ ಸಿಕ್ಕಿದೆ. ಹಳೆಯದೆಲ್ಲ ನೆನಪಾಗುತ್ತಿದೆ. ಅಭಿನಯಿಸಲು ಕಾತುರನಾಗಿದ್ದೇನೆ ಎಂದಿದ್ದಾರೆ ಶ್ರೀನಾಥ್.

  Related Articles :-

  ಮುನಿರತ್ನ ಕುರುಕ್ಷೇತ್ರದ ಮುಹೂರ್ತಕ್ಕೆ ಡಿಕೆ ತಲೆನೋವು

  ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

  ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

  ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

  Kurukshetra To be Launched on July 30th

  ದರ್ಶನ್ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು

  ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

 • ರವಿಚಂದ್ರನ್ ಕೃಷ್ಣನಾ.. ಕೊಳಲಿನಾ.. ಕರೆ...

  kurukshetra image

  ಕೃಷ್ಣನೆಂದರೆ ಏನೇನೆಲ್ಲ ನೆನಪಾಗುತ್ತೆ ಹೇಳಿ.. ಏನಿಲ್ಲವೆಂದರೂ ಕೃಷ್ಣನ ತುಂಟಾಟಗಳು ನೆನಪಾಗಿಯೇ ಆಗುತ್ತವೆ. ಅದರಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ರವಿಚಂದ್ರನ್ ಬಂದುಬಿಟ್ಟರೆ, ಅಬ್ಬಾ.. ಮುಂದಿನದ್ದು ಹೇಳೋದೇ ಬೇಡ. ಮೊದಲೇ ರಸಿಕರ ರಸಿಕ ರವಿಚಂದ್ರನ್.

  ರಣಧೀರನಾಗಿಯೂ ಕೊಳಲು, ರಸಿಕನಾಗಿಯೂ ಕೊಳಲು, ಕೊಳಲಿಗೆ ರಾಯಭಾರಿ, ಕುರುಕ್ಷೇತ್ರದ ರೂವಾರಿ ಎಂದೆಲ್ಲ ಹೊಗಳಿಬಿಟ್ಟಿದ್ದಾರೆ ನಿರ್ದೇಶಕ ರಘುರಾಮ್. ಪುತ್ರ ಮನೋರಂಜನ್ ಶ್ರೀಕೃಷ್ಣನ ವೇಷದಲ್ಲಿರುವ ನನ್ನ ತಂದೆ ದೇವರು ಎಂದು ಭಕ್ತಿಯಿಂದಲೇ ಹೇಳಿಕೊಂಡಿದ್ದಾರೆ.

  30+ ವರ್ಷಗಳ ಚಿತ್ರಜೀವನದಲ್ಲಿ ಇದೆ ಮೊದಲ ಬಾರಿ ಮೀಸೆಯನ್ನೂ ತೆಗೆದು ನಟಿಸಿರುವ ರವಿಚಂದ್ರನ್, ಮೈಮೇಲಿನ ಕೂದಲನ್ನೆಲ್ಲ ತೆಗೆದಿದ್ದರು. ಈಗ ರವಿಚಂದ್ರನ್ ಅವರ ಫೋಟೋ ನಿಮ್ಮ ಕಣ್ಣ ಮುಂದಿದೆ. ಹೇಗಿದ್ದಾರೆ ರವಿಚಂದ್ರನ್..? ಅಲ್ಲಲ್ಲ.. ಹೇಗಿದ್ದಾರೆ ಶ್ರೀಕೃಷ್ಣ..?

 • ರವಿಚಂದ್ರನ್‍ರನ್ನು ನೋಡಿ ಕಾಲಿಗೆ ಬಿದ್ದವರು ಯಾರು..?

  ravichandran as krishna

  ಕ್ರೇಜಿ ಸ್ಟಾರ್ ರವಿಚಂದ್ರನ್, ಇದೇ ಮೊದಲ ಬಾರಿಗೆ ಕುರುಕ್ಷೇತ್ರ ಚಿತ್ರದಲ್ಲಿ ಪೌರಾಣಿಕ ಪಾತ್ರ ನಿರ್ವಹಿಸುತ್ತಿರುವುದು ಸರಿಯಷ್ಟೆ. ತಮ್ಮ ಆರಂಭದ ದಿನಗಳ ಸಿನಿಮಾಗಳಲ್ಲಿ ಪೋಲಿಕೃಷ್ಣನಾಗಿದ್ದ ರವಿಚಂದ್ರನ್, ಕುರುಕ್ಷೇತ್ರ ಚಿತ್ರದಲ್ಲಿ ನಿಜವಾದ ಶ್ರೀಕೃಷ್ಣನ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ.

  ಆ ಚಿತ್ರಕ್ಕಾಗಿ 8 ಕೆಜಿ ತೂಕ ಇಳಿಸಿಕೊಂಡಿರುವ ರವಿಚಂದ್ರನ್, ಮೀಸೆಗೂ ಬೈ ಬೈ ಹೇಳಿದ್ದರು. ಆಗ  ಅವರನ್ನು ನೋಡಿದವರೊಬ್ಬರು ನೀವು ವೀರಸ್ವಾಮಿ ಅವರ ತರಾ ಕಾಣಿಸ್ತಿದ್ದೀರಾ ಅಂದರಂತೆ. ಅದು ರವಿಚಂದ್ರನ್ ಅವರಿಗೆ ಸಿಕ್ಕಿರುವ ಬೆಸ್ಟ್ ಕಾಂಪ್ಲಿಮೆಂಟು.

  ಇನ್ನು ಚಿತ್ರದ ಮೇಕಪ್, ಮೈತುಂಬಾ ಬಳಿದ ನೀಲಿಬಣ್ಣ ಇಷ್ಟವಾಗದೆ ಮೊದಲ ದಿನ ಶೂಟಿಂಗ್‍ಗೇ ಹೋಗಲಿಲ್ಲವಂತೆ ರವಿಚಂದ್ರನ್. ಎರಡನೇ ದಿನ ತಾವೇ ನಾಲ್ಕು ಕಲರ್ ತರಿಸಿಕೊಂಡು, ಕಾಸ್ಟ್ಯೂಮ್‍ನ್ನು ಬದಲಾಯಿಸಿಕೊಂಡು ಅದೇ ದಿನ ಸಂಜೆ ಶ್ರೀಕೃಷ್ಣನ ಗೆಟಪ್‍ನಲ್ಲಿ ಸೆಟ್‍ಗೆ ಹೋಗಿದ್ದಾರೆ ರವಿಚಂದ್ರನ್. ಸೆಟ್‍ನಲ್ಲಿದ್ದವರೆಲ್ಲ ಕಾಲಿಗೆ ಬಿದ್ದರಂತೆ.

  ಅಷ್ಟಿಲ್ಲದೆ ಹೇಳ್ತಾರಾ.. ರವಿ ಕಾಣದ್ದನ್ನು ಕವಿ ಕಂಡ, ಕವಿಯೂ ಕಾಣದ್ದನ್ನು ರವಿಚಂದ್ರನ್ ಕಂಡ ಅಂತ.

 • ಲೇಟ್ ಆಗಿ ಬರಲಿದೆ ಕುರುಕ್ಷೇತ್ರ..!

  kurukshetra image

  ಕುರುಕ್ಷೇತ್ರ. ಅರ್ಧಕ್ಕರ್ಧ ಕನ್ನಡ ಚಿತ್ರರಂಗವೇ ಈ ಚಿತ್ರದಲ್ಲಿ ತೊಡಗಿಸಿಕೊಂಡಿದೆ. ಮುನಿರತ್ನ ನಿರ್ಮಾಣದ ಈ ಚಿತ್ರದಲ್ಲಿ ಕಥೆ ದುರ್ಯೋಧನ ದರ್ಶನ್ ನೆಲೆಯ ಕಥೆಯಿದೆ. ಅಂಬರೀಷ್, ಅರ್ಜುನ್ ಸರ್ಜಾ, ಶ್ರೀನಾಥ್, ಲಕ್ಷ್ಮೀ, ಸ್ನೇಹಾ, ನಿಖಿಲ್, ಹರಿಪ್ರಿಯಾ, ಶೃತಿ ಹರಿಹರನ್, ರವಿಶಂಕರ್.. ಹೀಗೆ ತಾರಾಗಣದ ದೊಡ್ಡ ಪಡೆಯೇ ಇದೆ. 

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸಿನಿಮಾ ಸಂಕ್ರಾಂತಿ ಹೊತ್ತಿಗೆ ತೆರೆಗೆ ಬರಬೇಕಿತ್ತು. ಆದರೆ, ಗ್ರಾಫಿಕ್ಸ್ ವರ್ಕ್ ಹೆಚ್ಚಿರುವ ಕಾರಣ, ಚಿತ್ರದ ಪ್ರಥಮ ಪ್ರತಿ ಬರುವುದೇ ಫೆಬ್ರವರಿ ತಿಂಗಳ ಕೊನೆಗೆ ಎನ್ನಲಾಗುತ್ತಿದೆ. 

  ಹೀಗಾಗಿ ಸಿನಿಮಾ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ತೆರೆಗೆ ಬರಬಹುದು ಎಂಬ ಸುಳಿವು ನೀಡಿದ್ದಾರೆ ಮುನಿರತ್ನ. ಅತಿದೊಡ್ಡ ಬಜೆಟ್‍ನ ಅತಿ ದೊಡ್ಡ ಕ್ಯಾನ್ವಾಸ್‍ನ ಸಿನಿಮಾ ಲೇಟ್ ಆಗಿ ಬಂದರೂ ಅಭಿಮಾನಿಗಳು ಕಾಯುತ್ತಾರೆ.

 • ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

  darshan

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಕುರುಕ್ಷೇತ್ರ ಚಿತ್ರವನ್ನು ಕೈಬಿಟ್ಟಿಲ್ಲ. ಅಂತಹ ಅವಕಾಶವನ್ನು ದರ್ಶನ್ ಬಿಡೋದಿಲ್ಲ. ವದಂತಿಗಳಿಗೆಲ್ಲ ಕಿವಿಗೊಡಬೇಡಿ ಅನ್ನೋ ಸುದ್ದಿ ಡಿ ಕ್ಯಾಂಪ್​ನಿಂದ ಹೊರಬಿದ್ದಿದೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನ ಪಾತ್ರ ಮಾಡುತ್ತಿದ್ದು,

  ಈಗಾಗಲೇ ಫೋಟೋ ಶೂಟ್ ಕೂಡಾ ಮುಗಿದಿದೆ. ದುರ್ಯೋಧನನ ಪಾತ್ರಕ್ಕಾಗಿ ದರ್ಶನ್, ತೂಕ ಹೆಚ್ಚಿಸಿಕೊಳ್ಳುತ್ತಿದ್ದು, ತಾಲೀಮು ನಡೆಸುತ್ತಿದ್ದಾರೆ. ಒಬ್ಬ ನಟನ ಜೀವನದಲ್ಲಿ ಸಿಗುವ ಅಪರೂಪದ ಅವಕಾಶ ಇದು ಎಂದು ಸ್ಪಷ್ಟಪಡಿಸಿದ್ದಾರೆ ದಿನಕರ್ ತೂಗುದೀಪ. ಈಗಾಗಲೇ ಚಿತ್ರಕ್ಕಾಗಿ ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಭರ್ಜರಿ ಸೆಟ್ ಸಿದ್ಧವಾಗುತ್ತಿದೆಯಂತೆ.

 • ಶಕುನಿ ಕಾಣಿಸಿಕೊಂಡೇ ಬಿಟ್ರು..!

  ravishankar in kurukshetra

  ಕುರುಕ್ಷೇತ್ರ ಚಿತ್ರದ ಒಬ್ಬೊಬ್ಬಬರ ಪಾತ್ರ, ಲುಕ್‍ನ್ನು ಗೌಪ್ಯವಾಗಿಯೇ ಮಾಡಲಾಗುತ್ತಿದೆ. ಸದ್ಯಕ್ಕೆ ದುರ್ಯೋಧನ ದರ್ಶನ್, ಅಭಿಮನ್ಯು ನಿಖಿಲ್, ಭೀಷ್ಮ ಅಂಬರೀಷ್ ಸೇರಿದಂತೆ ಕೆಲವೇ ಕಲಾವಿದರ ಫೋಟೋಗಳು ಹೊರಬಿದ್ದಿವೆ. ಟೀಸರ್ ಎಂದು ಬಂದಿರೋದು ದುರ್ಯೋಧನ ದರ್ಶನ್ ಅವರದ್ದು ಮಾತ್ರ. ಉಳಿದವರ ಗೆಟಪ್‍ಗಳನ್ನು ಫೋಟೋ ನೋಡಿ ತೃಪ್ತಿಪಟ್ಟುಕೊಳ್ಳಬೇಕಷ್ಟೆ.

  ಅಂಥದ್ದೇ ಕುತೂಹಲ ಇದ್ದದ್ದು ಶಕುನಿ ರವಿಶಂಕರ್ ಬಗ್ಗೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಖಳ, ಪೋಷಕ, ಹಾಸ್ಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವ ರವಿಶಂಕರ್, ಪೌರಾಣಿಕ ಶಕುನಿ ಪಾತ್ರದಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಇತ್ತು. ಅವರದ್ದೊಂದು ಫೋಟೋ ಈಗ ಹೊರಬಿದ್ದಿದೆ.

  ಸೆಟ್ ಬಳಿ ಹೋಗಿದ್ದ ಅಭಿಮಾನಿಗಳ ಆಗ್ರಹಕ್ಕೆ ಮಣಿದು ಫೋಟೋ ತೆಗೆಸಿಕೊಂಡಿದ್ದಾರೆ ರವಿಶಂಕರ್. ಪಕ್ಕದಲ್ಲೆ ದುರ್ಯೋಧನ ದರ್ಶನ್, ಶಶಿಕುಮಾರ್ ಕೂಡಾ ಇದ್ದಾರೆ. ಇನ್ನೊಂದ್ ವಿಷ್ಯ, ಅಭಿಮನ್ಯು ನಿಖಿಲ್ ಟೀಸರ್ ನಾಳೆ ಹೊರಬೀಳ್ತಾ ಇದೆ.

#

The Terrorist Movie Gallery

Thayige Thakka Maga Movie Gallery