` kurukshetra, - chitraloka.com | Kannada Movie News, Reviews | Image

kurukshetra,

 • ಕಲ್ಯಾಣಕ್ಕಿಂತ ಮೊದಲೇ ಕುರುಕ್ಷೇತ್ರ

  nikhil kumaraswamy clears air

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಏನು ಕಾರಣ..? ಈ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗಲೆಲ್ಲ ಗಾಂಧಿನಗರದ ಗಲ್ಲಿಗಳಲ್ಲಿ ನಿಖಿಲ್‍ರತ್ತ ತೋರಿಸಲಾಗಿತ್ತು. ನಿಖಿಲ್ ಕುಮಾರಸ್ವಾಮಿಗೆ ಕುರುಕ್ಷೇತ್ರಕ್ಕಿಂತ ಮೊದಲು ತಮ್ಮ ನಾಯಕತ್ವದ ಸೀತಾರಾಮ ಕಲ್ಯಾಣ ಚಿತ್ರ ರಿಲೀಸ್ ಆಗಲಿ ಎಂಬ ಬಯಕೆಯಿದೆ. ಹೀಗಾಗಿ ಕುರುಕ್ಷೇತ್ರ ಡಬ್ಬಿಂಗ್ ಮಾಡದೆ ಸತಾಯಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಈ ಗಾಸಿಪ್ಪುಗಳಿಗೆ ಈಗ ಸ್ವತಃ ನಿಖಿಲ್ ಉತ್ತರ ಕೊಟ್ಟಿದ್ದಾರೆ.

  ಕುರುಕ್ಷೇತ್ರ ವಿಳಂಬಕ್ಕೆ ನಾನು ಕಾರಣ ಅಲ್ಲ. ನಿರ್ದೇಶಕರು ಯಾವಾಗ ಕರೆದರೂ ಹೋಗಿ ಡಬ್ಬಿಂಗ್ ಮಾಡಿ ಬರೋಕೆ ರೆಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರಕ್ಕೆ ಯಾವ ಮತ್ತು ಎಷ್ಟು ಮಹತ್ವವಿದೆಯೋ.. ಚಿತ್ರದಲ್ಲಿಯೂ ಅಷ್ಟೇ ಮಹತ್ವ ಇದೆ. ಅಭಿಮನ್ಯು ಪಾತ್ರವನ್ನು ಲೆಂಗ್ತ್ ಮಾಡೋಕೆ ಅದು ಕಾಲ್ಪನಿಕ ಕಥೆಯಲ್ಲ. ಮಹಾಭಾರತದ ಕಥೆ ಎಂದಿದ್ದಾರೆ.

 • ಕುರುಕ್ಷೇತ್ರ ಆಡಿಯೋ ರಿಲೀಸ್ ಡೇಟ್ ಫಿಕ್ಸ್

  kurukshetra audio on july 29th

  ಶೂಟಿಂಗ್ ಮುಗೀತು. ಡಬ್ಬಿಂಗ್ ಮುಗೀತು. ಕುರುಕ್ಷೇತ್ರ ಚಿತ್ರದ ಬಿಡುಗಡೆ ಯಾವಾಗ..? ಸಂಕ್ರಾಂತಿಗೇ ತೆರೆ ಮೇಲೆ ಬರಲಿದೆ ಎನ್ನುತ್ತಿದ್ದ ಸಿನಿಮಾ ವರಮಹಾಲಕ್ಷ್ಮಿ ಹಬ್ಬ ಸಮೀಪಿಸಿದರೂ ಬಂದಿಲ್ಲ. ಯಾವಾಗ ರಿಲೀಸ್ ಹೇಳಿ.. ಹೇಳಿ ಎನ್ನುತ್ತಿದ್ದ ಅಭಿಮಾನಿಗಳಿಗೆ ಒಂದು ಸಿಹಿಸುದ್ದಿ, ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ 29ಕ್ಕೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಚಿತ್ರವಾಗಿರುವ ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ನೀಡಿರುವುದು ಹರಿಕೃಷ್ಣ. ಸಾಹಿತ್ಯ ನಾಗೇಂದ್ರ ಪ್ರಸಾದ್ ಅವರದ್ದು. ನಾಗಣ್ಣ ನಿರ್ದೇಶನದ ಚಿತ್ರಕ್ಕೆ, ಅರ್ಧಕ್ಕರ್ಧ ಕನ್ನಡ ಚಿತ್ರರಂಗವನ್ನೇ ಒಗ್ಗೂಡಿಸಿರುವುದು ನಿರ್ಮಾಪಕ ಮುನಿರತ್ನ.

 • ಕುರುಕ್ಷೇತ್ರ ಆಡಿಯೋ ರಿಲೀಸ್ ಯಾವಾಗ..?

  kurukshetra audio release soon

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ, ಕನ್ನಡ ಚಿತ್ರರಂಗದಲ್ಲೇ ಐತಿಹಾಸಿಕ ಚಿತ್ರವೆಂಬ ಖ್ಯಾತಿಗೆ ಪಾತ್ರವಾಗಿದೆ. ಮುನಿರತ್ನ ನಿರ್ಮಾಣದ ಸಿನಿಮಾ, ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ, ಇಷ್ಟು ಹೊತ್ತಿಗೆ ರಿಲೀಸ್ ಆಗಿರಬೇಕಿತ್ತು. ಆದರೆ, ಮುನಿರತ್ನ ಎಲೆಕ್ಷನ್ ಪ್ರಚಾರಲ್ಲಿ ಬ್ಯುಸಿಯಾದ ಕಾರಣ, ಚಿತ್ರ ಸ್ವಲ್ಪ ತಡವಾಗಿದೆ.

  ಗ್ರಾಫಿಕ್ಸ್ ಕೆಲಸದ ಪ್ಯಾಚ್‍ವರ್ಕ್, ಹರಿಕೃಷ್ಣ ಅವರ ಸಂಗೀತಕ್ಕೆ ಫೈನಲ್ ಟಚ್ ಕೆಲಸದಿಂದಾಗಿ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳ ಕೊನೆಯಲ್ಲಿ ಸಿನಿಮಾದ ಆಡಿಯೋ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ ನಿರ್ದೇಶಕ ನಾಗಣ್ಣ.

  ಮುನಿರತ್ನ ಅವರ ಕಮಿಟ್‍ಮೆಂಟ್‍ಗಳು ಒಂದೆರಡಲ್ಲ. ಹೀಗಾಗಿ ಸ್ವಲ್ಪ ತಡವಾಗಿದೆ. ಎಲೆಕ್ಷನ್ ಮುಗಿದ ಮೇಲೆ ಸಿನಿಮಾದತ್ತ ಮತ್ತೆ ಗಮನಹರಿಸಲಾಗುವುದು. ಆದಷ್ಟು ಬೇಗ ಕುರುಕ್ಷೇತ್ರ ರಿಲೀಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ ಮುನಿರತ್ನ ಅವರ ವಕ್ತಾರ ವಿನಾಯಕ್ ಹೆಗ್ಡೆ. ಅಭಿಮಾನಿಗಳು ಕಾಯುತ್ತಿದ್ದಾರೆ.

 • ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  kurukshetra launch postponed

  ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸುತ್ತಿರುವ ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದೆ. ನಾಗಣ್ಣ ನಿರ್ದೇಶನದ, ಮುನಿರತ್ನ ನಿರ್ಮಿಸುತ್ತಿರುವ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಲು ಕಾರಣ ಯಾರು ಗೊತ್ತಾ..? ಮುಖ್ಯಮಂತ್ರಿ ಸಿದ್ದರಾಮಯ್ಯ.

  ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರದ ಮುಹೂರ್ತ ಇದೇ ತಿಂಗಳು ನೆರವೇರಬೇಕಿತ್ತು. ಆದರೆ, ಮುಹೂರ್ತಕ್ಕೆ ಸಿದ್ದರಾಮಯ್ಯನವರು ಬರಬೇಕು ಎನ್ನುವುದು ನಿರ್ಮಾಪಕ ಮುನಿರತ್ನ ನಿರೀಕ್ಷೆ. ಹೀಗಾಗಿ ಚಿತ್ರದ ಮುಹೂರ್ತವನ್ನು ಆಗಸ್ಟ್ 6ಕ್ಕೆ ಇಟ್ಟುಕೊಂಡಿದ್ದಾರೆ ಮುನಿರತ್ನ. ಅದೇ ದಿನ ದುರ್ಯೋಧನನ ಗೆಟಪ್ ಕೂಡಾ ರಿಲೀಸ್ ಆಗುತ್ತಂತೆ.

  ಜುಲೈ 27ಕ್ಕೆ ಮುನಿರತ್ನ ಸಣ್ಣದೊಂದು ಪೂಜೆ ಮಾಡಿಸುತ್ತಾರೆ. ಅದು ಪರ್ಸನಲ್. ಚಿತ್ರದ ಗ್ರ್ಯಾಂಡ್ ಎಂಟ್ರಿ ನಡೆಯೋದು ಆಗಸ್ಟ್ 6ಕ್ಕೆ.

 • ಕುರುಕ್ಷೇತ್ರ ಡಬ್ಬಿಂಗ್ ಪೂರ್ತಿ ಮುಗೀತು

  kurukshetra dubbing complete

  ಕುರುಕ್ಷೇತ್ರ ಚಿತ್ರದ ಎಲ್ಲ ಕಲಾವಿದರ ಡಬ್ಬಿಂಗ್ ಮುಗಿದಿದೆ. ದರ್ಶನ್ ಸೇರಿದಂತೆ, ಎಲ್ಲ ಕಲಾವಿದರೂ ಡಬ್ಬಿಂಗ್ ಮುಗಿಸಿ ಸಂಭ್ರಮಿಸಿದ್ದಾರೆ. ರವಿಚಂದ್ರನ್‍ಗೆ ಹಲವು ವರ್ಷಗಳ ನಂತರ ಶ್ರೀನಿವಾಸ ಪ್ರಭು ಡಬ್ಬಿಂಗ್ ಮಾಡಿರುವುದು ವಿಶೇಷ. ಜುಲೈನಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. 

  ವೃಷಭಾದ್ರಿ ಪ್ರೊಡಕ್ಷನ್ಸ್‍ನಲ್ಲಿ ಮುನಿರತ್ನ ನಿರ್ಮಿಸುತ್ತಿರುವ ಈ ಅದ್ಧೂರಿ ಚಿತ್ರದಲ್ಲಿ ಅರ್ಧಕ್ಕರ್ಧ ಚಿತ್ರರಂಗವೇ ಇದೆ. ದರ್ಶನ್, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ರಾಕ್‍ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಸ್ನೇಹ, ಮೇಘನಾರಾಜ್, ಹರಿಪ್ರಿಯಾ, ಶ್ರೀನಾಥ್, ರವಿಶಂಕರ್, ಅವಿನಾಶ್, ಸೋನುಸೂದ್, ಶಶಿಕುಮಾರ್, ರಮೇಶ್ ಭಟ್, ಪವಿತ್ರ ಲೋಕೇಶ್.. ಸೇರಿದಂತೆ ಭರ್ಜರಿ ತಾರಾಗಣವೇ ಚಿತ್ರದಲ್ಲಿದೆ.

  ಬಾಹುಬಲಿಗೆ ಸಾಹಸ ನಿರ್ದೇಶನ ಮಾಡಿದ್ದ ಸಾಲೋಮನ್, ಕುರುಕ್ಷೇತ್ರ ಚಿತ್ರಕ್ಕೂ ಸಾಹಸ ಸಂಯೋಜಿಸಿರುವುದು ವಿಶೇಷ. ಚಿತ್ರದ ಶೇ.40ರಷ್ಟು ಭಾಗ ಗ್ರಾಫಿಕ್ಸ್‍ನಲ್ಲೇ ಇರಲಿದೆ. 

  ಕನ್ನಡದಲ್ಲೇ ಅತ್ಯಂತ ಅದ್ಧೂರಿ ಚಿತ್ರವಾಗಿರುವ ಮುನಿರತ್ನ ಕುರುಕ್ಷೇತ್ರ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

 • ಕುರುಕ್ಷೇತ್ರ ಡಬ್ಬಿಂಗ್ ರೈಟ್ಸ್​ನಲ್ಲೇ ಭರ್ಜರಿ ವ್ಯಾಪಾರ

  kurukshetra movie image

  ಕುರುಕ್ಷೇತ್ರ. ದರ್ಶನ್ ಅಭಿನಯದ 50ನೇ ಸಿನಿಮಾ. ಕನ್ನಡ ಚಿತ್ರರಂಗದ ಅಪರೂಪದ ಪೌರಾಣಿಕ ಚಿತ್ರವಾಗುತ್ತಿರುವ ಕುರುಕ್ಷೇತ್ರದ ಡಬ್ಬಿಂಗ್ ರೈಟ್ಸ್, ಶೂಟಿಂಗ್ ಹಂತದಲ್ಲೇ ಭರ್ಜರಿ ಮೊತ್ತಕ್ಕೆ ಸೇಲ್ ಆಗುತ್ತಿವೆ.

  ಮೂಲಗಳ ಪ್ರಕಾರ, ಕುರುಕ್ಷೇತ್ರ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್, 9 ಕೋಟಿಗೆ ಸೇಲ್ ಆಗಿದೆಯಂತೆ. ಅದು ಕನ್ನಡ ಚಿತ್ರವೊಂದಕ್ಕೆ ಅತಿ ದೊಡ್ಡ ಮೊತ್ತ ಎನ್ನುತ್ತಿವೆ ಮೂಲಗಳು. 

  ಹಿಂದಿಯಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಮಲಯಾಳಂ ಡಬ್ಬಿಂಗ್ ಹಕ್ಕುಗಳೂ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿವೆಯಂತೆ. ಸುಮಾರು 80 ಕೋಟಿ ಬಜೆಟ್ ದಾಟಲಿದೆ ಎನ್ನುತ್ತಿರುವ ಸಿನಿಮಾ, ಶೂಟಿಂಗ್ ಹಂತದಲ್ಲೇ ದಾಖಲೆ ಬರೆಯುತ್ತಿದೆ.

 • ಕುರುಕ್ಷೇತ್ರ ಬಹುತೇಕ ರೆಡಿ. ಆದರೆ...

  muniratna talks about kurukshetra

  ಕುರುಕ್ಷೇತ್ರ ಚಿತ್ರ ಯಾವಾಗ..? ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪ್ರಶ್ನೆ. ಏಕೆಂದರೆ, ಅದು ದರ್ಶನ್‍ಗೆ 50ನೇ ಸಿನಿಮಾ. ಅದು ಇಡೀ ಚಿತ್ರರಂಗದ ಪ್ರಶ್ನೆಯೂ ಹೌದು. ಏಕೆಂದರೆ, ಚಿತ್ರರಂಗದ ಶೇ.75ಕ್ಕೂ ಹೆಚ್ಚು ಕಲಾವಿದರು ನಟಿಸಿರುವ ಸಿನಿಮಾ. ಪಕ್ಕಾ ಡೇಟ್ ಮಾತ್ರ ಇನ್ನೂ ಗೊತ್ತಾಗಿಲ್ಲ. ಆದರೆ, ಈಗ ನಿರ್ಮಾಪಕ ಮುನಿರತ್ನ ಅವರೇ ಕುರುಕ್ಷೇತ್ರ ಚಿತ್ರದ ಹೊಸ ಅಪ್‍ಡೇಟ್ ಕೊಟ್ಟಿದ್ದಾರೆ.

  ಚಿತ್ರ ಬಹುತೇಕ ಮುಗಿದಿದೆಯಂತೆ. ರಿಲೀಸ್‍ಗೆ ಮೊದಲು ಮುನಿರತ್ನ ಸಿನಿಮಾ ನೋಡಲಿದ್ದಾರಂತೆ. ಸಿನಿಮಾ ತಮಗೆ ತೃಪ್ತಿ ನೀಡಿದ ಮೇಲೆ ರಿಲೀಸ್ ಡೇಟ್ ಘೋಷಿಸುತ್ತೇನೆ. ಅಲ್ಲಿಯವರೆಗೂ ಕೆಲಸಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ ಮುನಿರತ್ನ.

 • ಕುರುಕ್ಷೇತ್ರ ಮೇಕಿಂಗ್ ವೈಭವ

  kurukshetra making video out

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ, ಅಂಬರೀಷ್, ಅರ್ಜುನ್ ಸರ್ಜಾ, ರವಿಚಂದ್ರನ್, ಮೇಘನಾ ರಾಜ್, ಶ್ರೀನಾಥ್, ರವಿಶಂಕರ್, ಹರಿಪ್ರಿಯಾ, ನಿಖಿಲ್ ಕುಮಾರಸ್ವಾಮಿ.. ಹೀಗೆ ಚಿತ್ರತಂಡದ ತುಂಬಾ ನಕ್ಷತ್ರಗಳೋ ನಕ್ಷತ್ರಗಳು. ನಾಗಣ್ಣ ನಿರ್ದೇಶನದ ಈ ಚಿತ್ರಕ್ಕೆ ನಾಗಣ್ಣ ನಿರ್ದೇಶಕ. ಇವರೆಲ್ಲರನ್ನೂ ಒಟ್ಟುಗೂಡಿಸಿದ ಮುನಿರತ್ನ ನಿರ್ಮಾಪಕ.

  ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ಸಿನಿಮಾ ಇಷ್ಟು ಹೊತ್ತಿಗೆ ತೆರೆಕಾಣಬೇಕಿತ್ತು. ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ ಅಷ್ಟೆ. ಚಿತ್ರವನ್ನೇ ನೋಡಲು ತುದಿಗಾಲಲ್ಲಿ ನಿಂತಿದ್ದ ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಈಗ ಪ್ರಸಾದದ ರೂಪದಲ್ಲಿ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

  ಚಿತ್ರತಂಡದ ಶೂಟಿಂಗ್ ಸ್ಥಳದ ಸನ್ನಿವೇಶಗಳು ಅಭಿಮಾನಿಗಳ ಮನಸ್ಸು ಗೆದ್ದಿವೆ. ಇನ್ನು ಚಿತ್ರದ ಬಿಡುಗಡೆಯೇ ಬಾಕಿ. ಆನ್‍ಲೈನ್‍ನಲ್ಲಿ ಕುರುಕ್ಷೇತ್ರ ಮೇಕಿಂಗ್ ವಿಡಿಯೋ ಸೂಪರ್ ಹಿಟ್ ಆಗಿದೆ.

 • ಕುರುಕ್ಷೇತ್ರ ವಿಳಂಬದ ಕಾರಣ ಬಿಚ್ಚಿಟ್ಟ ಮುನಿರತ್ನ

  muniratna talks about delya in kurukshetra

  ಕುರುಕ್ಷೇತ್ರ ಚಿತ್ರ ಸಂಕ್ರಾಂತಿಗೇ ರಿಲೀಸ್ ಎನ್ನುತ್ತಿತ್ತು ಚಿತ್ರತಂಡ. ನಂತರ ಯುಗಾದಿ ಬಂತು, ವರಮಹಾಲಕ್ಷ್ಮಿ ಬಂತು, ಗೌರಿ ಗಣೇಶ ಬಂದಾಯ್ತು. ದೀಪಾವಳಿ, ದಸರಾ ಹತ್ತಿರದಲ್ಲೇ ಇವೆ. ಆದರೆ, ಕುರುಕ್ಷೇತ್ರ ನಿಧಾನವಾಗುತ್ತಲೇ ಇದೆ. ಶೂಟಿಂಗ್, ಡಬ್ಬಿಂಗ್ ಮುಗಿಸಿರುವ ಸಿನಿಮಾ, ನಿಧಾನವಾಗುತ್ತಿರೋದಕ್ಕೆ ಏನಿರಬಹುದು ಕಾರಣ, ಈ ಕುರಿತಂತೆ ಎದ್ದಿರುವ ಊಹಾಪೋಹಗಳೆಲ್ಲ ನಿಜಾನಾ..? ಈ ಎಲ್ಲ ಪ್ರಶ್ನೆಗಳಿಗೆ, ಅನುಮಾನ, ಸಂದೇಹ, ಗಾಸಿಪ್ಪುಗಳಿಗೆ ಸ್ವತಃ ನಿರ್ಮಾಪಕ ಮುನಿರತ್ನ ಉತ್ತರ ಕೊಟ್ಟಿದ್ದಾರೆ.

  - ಸಿನಿಮಾ ವಿಳಂಬಕ್ಕೆ ಕಾರಣ ಗ್ರಾಫಿಕ್ಸ್ ಕೆಲಸ. ಚೆನ್ನೈ ಹಾಗೂ ಹೈದರಾಬಾದ್‍ನಲ್ಲಿ ನಡೆದ ಸಿಜಿ ವರ್ಕ್ ನನಗೆ ಇಷ್ಟವಾಗಲಿಲ್ಲ. ಕುರುಕ್ಷೇತ್ರ ವಿಳಂಬಕ್ಕೆ ಅತಿ ದೊಡ್ಡ ಕಾರಣ ಇದೇ ಹೊರತು, ಮತ್ತೇನಲ್ಲ. ನಿರ್ಮಾಪಕನಾಗಿ ನನಗೆ ಸಮಾಧಾನವಾಗದೆ ಚಿತ್ರವನ್ನು ತೆರೆಗೆ ಹೇಗೆ ತರಲಿ. ರೀವರ್ಕ್ ನಡೆಯುತ್ತಲೇ ಇದೆ.

  - ದರ್ಶನ್ ಜೊತೆ ಮನಸ್ತಾಪವಿಲ್ಲ. ನಿಖಿಲ್ ಪಾತ್ರ ಎಷ್ಟಿರಬೇಕು ಅನ್ನೋದನ್ನು ನಿರ್ಧರಿಸುವುದು ಕಥೆಯೇ ಹೊರತು, ಮತ್ತೇನಲ್ಲ. ಯಾರೋ ಒಬ್ಬರನ್ನು ಕಡೆಗಣಿಸಿ, ಮತ್ತೊಬ್ಬರಿಗೆ ಪ್ರಾಮುಖ್ಯತೆ ಕೊಡೋದಕ್ಕೆ ಸಾಧ್ಯವೇ ಇಲ್ಲ. 

  - ನಿಖಿಲ್ ಡಬ್ಬಿಂಗ್‍ಗೆ ಬರುತ್ತಿಲ್ಲ ಎನ್ನುವ ವಾದವೇ ಅರ್ಥವಿಲ್ಲದ್ದು. ಅವರು ಡಬ್ಬಿಂಗ್‍ಗೆ ಸಿದ್ಧರಿದ್ದಾರೆ. 

  - ನಿರ್ದೇಶಕ ನಾಗಣ್ಣ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರೇ ಸಿನಿಮಾದ ನಿರ್ದೇಶಕರು. ಅವರ ಕೆಲಸ ಅವರು ಮುಗಿಸಿಕೊಟ್ಟಿದ್ದಾರೆ. ಉಳಿದಿರೋದು ತಂತ್ರಜ್ಞರ ಕೆಲಸ. 

  - ಕೋಟಿ ಕೋಟಿ ಸುರಿದು, ಸಿನಿಮಾ ನಿರ್ಮಿಸೋದು, ಅದನ್ನು ಡಬ್ಬಾದಲ್ಲೇ ಇಟ್ಟುಕೊಂಡು ಪೂಜೆ ಮಾಡೋಕಲ್ಲ. ಅದನ್ನು ಜನರಿಗೆ ತೋರಿಸಬೇಕು ಅನ್ನೋ ಆಸಕ್ತಿ ನನಗೂ ಇದೆ. ಆದರೆ, ಒಳ್ಳೆಯ ಕ್ವಾಲಿಟಿಯಲ್ಲೇ ತೋರಿಸಬೇಕು ಅನ್ನೋದು ನನ್ನ ಕನಸು. ಹೀಗಾಗಿ ವಿಳಂಬವಾಗಿದೆ.

  ಹೀಗೆ ಮುನಿರತ್ನ, ಸಿನಿಮಾ ಕುರಿತ ಎಲ್ಲ ಅನುಮಾನ, ಗಾಸಿಪ್ಪುಗಳಿಗೆ ನೇರಾನೇರ ಉತ್ತರ ಕೊಟ್ಟಿದ್ದಾರೆ. ಒಂದಂತೂ ಸ್ಪಷ್ಟ. ದರ್ಶನ್‍ರ 51ನೇ ಸಿನಿಮಾ ಯಜಮಾನ, ಕುರುಕ್ಷೇತ್ರಕ್ಕಿಂತ ಮೊದಲೇ ಬಿಡುಗಡೆಯಾಗಬಹುದು. ಆದರೆ, ಕುರುಕ್ಷೇತ್ರವನ್ನು ಒಳ್ಳೆಯ ಕ್ವಾಲಿಟಿಯಲ್ಲೇ ಕೊಡುತ್ತೇನೆ ಎಂದು ಪಣ ತೊಟ್ಟಿದ್ದಾರೆ ಮುನಿರತ್ನ.

 • ಕುರುಕ್ಷೇತ್ರ ವಿಶೇಷ - ಅಲ್ಲೇ ಶೂಟಿಂಗ್, ಅಲ್ಲೇ ಜಿಮ್

  actor workout during shoot

  ದರ್ಶನ್ ಅಭಿನಯದ ``ಮುನಿರತ್ನ ಕುರುಕ್ಷೇತ್ರ'' ಚಿತ್ರದ ಶೂಟಿಂಗ್ ಶುರುವಾಗಿ ಬಿರುಸಿನಿಂದ ಸಾಗುತ್ತಿದೆ. 15 ದಿನಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ. ದಿನಕ್ಕೆ ಕೇವಲ 4ರಿಂದ 5 ದೃಶ್ಯಗಳನ್ನಷ್ಟೇ ಚಿತ್ರೀಕರಿಸಲಾಗುತ್ತಿದೆ. ಕುರುಕ್ಷೇತ್ರ ಚಿತ್ರದ ಸೆಟ್‍ನಲ್ಲಿ 400ಕ್ಕೂ ಹೆಚ್ಚು ಜನರಿದ್ದಾರೆ. ಅವರನ್ನೆಲ್ಲ ನಿಭಾಯಿಸುವುದೇ ಕುರುಕ್ಷೇತ್ರ ಯುದ್ಧ ಗೆದ್ದ ಹಾಗೆ.

  ಚಿತ್ರದ ಶೂಟಿಂಗ್ ಶುರುವಾಗಿದ್ದೇ ಹರಿಪ್ರಿಯಾ ಅವರ ದೃಶ್ಯಗಳ ಚಿತ್ರೀಕರಣದಿಂದ. ಈಗ ಚಿತ್ರೀಕರಣಕ್ಕೆ ರವಿಚಂದ್ರನ್ ಸೇರ್ಪಡೆಯಾಗಿದೆ. ರವಿಚಂದ್ರನ್ ಸೇರ್ಪಡೆ ನಂತರ, ಚಿತ್ರೀಕರಣ ಇನ್ನಷ್ಟು ಬಿರುಸು ಪಡೆದುಕೊಳ್ಳಲಿದೆ.

  ಸೆಟ್ ಪಕ್ಕದಲ್ಲೇ ಜಿಮ್ ಇದ್ದು, ಕಲಾವಿದರೆಲ್ಲರೂ ಪ್ರತಿದಿನ ಜಿಮ್‍ನಲ್ಲಿ ಬೆವರು ಹರಿಸುತ್ತಿದ್ದಾರೆ. ಅಂದಹಾಗೆ, ದುರ್ಯೋಧನ ದರ್ಶನ್‍ಗೆ ಇನ್ನೂ ಭಾನುಮತಿ ಸಿಕ್ಕಿಲ್ಲ. ಅರ್ಥಾತ್ ನಾಯಕಿ ಸಿಕ್ಕಿಲ್ಲ.

   

 • ಕುರುಕ್ಷೇತ್ರ ಸೆಟ್​ಗೆ ರಾಮೋಜಿರಾವ್ ಹೊಗಳಿಕೆ

  kurukshetra set in ramoji studio

  ರಾಮೋಜಿರಾವ್, ಭಾರತೀಯ ಮಾಧ್ಯಮಲೋಕದ ರೂಪಟ್​ ಮರ್ಡೋಕ್ ಎಂದೇ ಹೆಸರಾದವರು. ಆಂಧ್ರಪ್ರದೇಶ ಚಿತ್ರೋದ್ಯಮದಲ್ಲೂ ರಾಮೋಜಿರಾವ್ ಅವರದ್ದು ದೊಡ್ಡ ಹೆಸರು. ರಾಮೋಜಿ ಫಿಲ್ಮ್ ಸಿಟಿ ಅವರ ಕನಸಿನ ಕೂಸು. ಈಗ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ನಡೆಯುತ್ತಿರುವುದು ಕೂಡಾ ಅಲ್ಲಿಯೇ.

  ಅಂತಹ ಧೀಮಂತ ರಾಮೋಜಿರಾವ್, ಕುರುಕ್ಷೇತ್ರ ಚಿತ್ರದ ಸೆಟ್​ಗೆ ಭೇಟಿ ನೀಡಿ ಸಂಭ್ರಮಪಟ್ಟಿದ್ದಾರಂತೆ. ಕನ್ನಡದಲ್ಲಿ ಕುರುಕ್ಷೇತ್ರ ಚಿತ್ರ ಚಿತ್ರೀಕರಣವಾಗುತ್ತಿದೆ ಎಂದು ಗೊತ್ತಾಯ್ತು. ಕುತೂಹಲದಿಂದ ಸೆಟ್ ನೋಡಲು ಬಂದೆ. ಕುರುಕ್ಷೇತ್ರವನ್ನೇ ನೋಡಿದಂತಾಯ್ತು ಎಂದು ಹೊಗಳಿದ್ದಾರೆ ರಾಮೋಜಿರಾವ್.

  ಅಷ್ಟೇ ಅಲ್ಲ, ಅದೇ ರಾಮೋಜಿ ಫಿಲ್ಮ್ ಸಿಟಿಯ ಬೇರೊಂದು ಕಡೆ ಜ್ಯೂ.ಎನ್​ಟಿಆರ್ ಅಭಿನಯದ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ. ಅವರೂ ಕೂಡಾ ಸೆಟ್ ನೋಡಲು ಆಸಕ್ತಿ ತೋರಿದ್ದಾರಂತೆ.

 • ಕುರುಕ್ಷೇತ್ರ ಸೆನ್ಸಾರ್ ಆಯ್ತು..

  kurukshetra gets u/a certificate

  ಚಾಲೆಂಜಿಂಗ್ ಸ್ಟಾರ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಸೆನ್ಸಾರ್ ಆಗಿದೆ. ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಪೌರಾಣಿಕ ಚಿತ್ರಕ್ಕೆ ಯು/ಎ ಸಿಗುವುದಕ್ಕೆ ಕಾರಣ, ಚಿತ್ರದಲ್ಲಿರುವ ಯುದ್ಧದ ಸನ್ನಿವೇಶಗಳು. ಇದು ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರವೂ ಹೌದು.

  ಕನ್ನಡದಲ್ಲಿ ಸುದೀರ್ಘ ಅವಧಿಯ ನಂತರ ಪೌರಾಣಿಕ ಚಿತ್ರವೊಂದು, ದೊಡ್ಡ ಸ್ಟಾರ್‍ಗಳ ಜೊತೆಯಲ್ಲಿ ಅದ್ಧೂರಿಯಾಗಿ ಬರುತ್ತಿರುವುದು ವಿಶೇಷ. 3 ಗಂಟೆ 5 ನಿಮಿಷ ಅವಧಿಯ ಕುರುಕ್ಷೇತ್ರ ಬಹುಶಃ ಏಪ್ರಿಲ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಆದರೆ, ಸೆನ್ಸಾರ್ ಮುಗಿದಿರುವ ಕಾರಣ, ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲೇ ತೆರೆಗೆ ಬಂದರೂ ಆಶ್ಚರ್ಯವಿಲ್ಲ.

 • ಕುರುಕ್ಷೇತ್ರ ಸೆನ್ಸಾರ್‍ಗೆ ರೆಡಿ

  kurukshetra ready for censor

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ, ಅಂಬರೀಷ್ ಅಭಿನಯದ ಕೊನೆಯ ಚಿತ್ರ, ಬಹುತೇಕ ಕನ್ನಡ ಚಿತ್ರರಂಗ ಪಾಲ್ಗೊಂಡಿರುವ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಹೌದು, ಕುರುಕ್ಷೇತ್ರ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಮುಗಿಸಿಕೊಂಡು ಸೆನ್ಸಾರ್‍ಗೆ ಸಿದ್ಧಗೊಂಡಿದೆ.

  ಸಿನಿಮಾವನ್ನು ರಿಲೀಸ್‍ಗೂ ಮೊದಲೇ ಕನ್ನಡ ಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ, ಚಿತ್ರರಂಗದ ಗಣ್ಯರಿಗೆ ತೋರಿಸುವ ಪ್ಲಾನ್ ನಿರ್ಮಾಪಕ ಮುನಿರತ್ನ ಅವರದ್ದು. ನಾಗಣ್ಣ ಪ್ರಮುಖವಾಗಿ ನಿರ್ದೇಶಿಸಿರುವ ಚಿತ್ರ ಬಹುತೇಕ ಸಂಕ್ರಾಂತಿಗೆ ತೆರೆಗೆ ಬರುವ ಸಾಧ್ಯತೆ ಇದೆ.

 • ಕುರುಕ್ಷೇತ್ರ.. ದರ್ಶನ್ ಡಬ್ಬಿಂಗ್ ಕಂಪ್ಲೀಟ್

  darshan completes kurukshetra dubbing

  ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿರುವ ದರ್ಶನ್, ತಮ್ಮ ಪಾತ್ರದ ಡಬ್ಬಿಂಗ್‍ನ್ನು ಸಂಪೂರ್ಣ ಮುಗಿಸಿಕೊಟ್ಟಿದ್ದಾರೆ. ಸ್ವತಃ ದರ್ಶನ್ ಅವರೇ ಅಭಿಮಾನಿಗಳಿಗೆ ಟ್ವೀಟರ್ ಮೂಲಕ ಈ ವಿಷಯ ತಿಳಿಸಿದ್ದಾರೆ.  ದರ್ಶನ್ ಅವರ 50ನೇ ಚಿತ್ರವಾಗಿರುವ ಕುರುಕ್ಷೇತ್ರ ಚಿತ್ರದ ಉಳಿದ ಕೆಲಸಗಳು ಬಾಕಿಯಿವೆ. ಅವುಗಳೆಲ್ಲವನ್ನೂ ಪೂರೈಸಿ ಶೀಘ್ರದಲ್ಲೇ ಚಿತ್ರವನ್ನು ತೆರೆಯ ಮೇಲೆ ತರುವುದು ಚಿತ್ರತಂಡದ ಪ್ಲಾನ್.

  ನಿರ್ಮಾಪಕ ಮುನಿರತ್ನ, ಎಲೆಕ್ಷನ್‍ನಲ್ಲಿ ಬ್ಯುಸಿಯಿದ್ದ ಕಾರಣ, ಚಿತ್ರದ ಕೆಲಸಗಳು ಸ್ವಲ್ಪ ನಿಧಾನವಾದವು. ಅವು ಮತ್ತೊಮ್ಮೆ ಬಿರುಸು ಪಡೆದುಕೊಳ್ಳಲಿವೆ. ಹೆಚ್ಚೂ ಕಡಿಮೆ ಅರ್ಧ ಕನ್ನಡ ಚಿತ್ರರಂಗವೇ ಪಾಲ್ಗೊಂಡಿರುವ ಸಿನಿಮಾ ಕುರುಕ್ಷೇತ್ರ. ಎಲ್ಲವೂ ಅಂದುಕೊಂಡಂತೆ ಆದರೆ, ಜುಲೈನಲ್ಲಿ ಸಿನಿಮಾ ಬಿಡುಗಡೆ ಆಗಬಹುದು.

 • ಕುರುಕ್ಷೇತ್ರಕ್ಕೆ ಎಷ್ಟು ಜನ ನಿರ್ದೇಶಕರು..?

  how many directors for kurukahetra

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ. ಕನ್ನಡದಲ್ಲಿ ಬಹುವರ್ಷಗಳ ಅದ್ಧೂರಿಯಾಗಿ ಸಿದ್ಧವಾಗಿರುವ ಪೌರಾಣಿಕ ಸಿನಿಮಾ. ಅಂಬರೀಷ್, ರವಿಚಂದ್ರನ್ ಸೇರಿದಂತೆ ಕನ್ನಡದ ಅರ್ಧಕ್ಕದ್ದ ಚಿತ್ರರಂಗವೇ ಒಂದಾಗಿರುವ ಸಿನಿಮಾ. ಮುನಿರತ್ನ ನಿರ್ಮಾಣದ.. ನಾಗಣ್ಣ ನಿರ್ದೇಶನದ ಸಿನಿಮಾ. ಆದರೆ, ಚಿತ್ರಕ್ಕೆ ನಾಗಣ್ಣ ಒಬ್ಬರೇ ನಿರ್ದೇಶಕರಲ್ಲ..

  ಚಿತ್ರದ ಗ್ರಾಫಿಕ್ಸ್ ಹೊಣೆ ಹೊತ್ತಿರುವ ಹೈದರಾಬಾದ್‍ನ ಎಸ್.ವಿ.ಪ್ರಸಾದ್, ಚಿತ್ರಕ್ಕೆ ಸಂಭಾಷಣೆ ಬರೆದ ನಾಗೇಂದ್ರ ಪ್ರಸಾದ್, ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ದೇವರಾಜ್ ಪಲಾನ್ ಕೂಡಾ ಚಿತ್ರದ ನಿರ್ದೇಶಕರಂತೆ. ನಾಲ್ವರಿಗೂ ಚಿತ್ರದ ನಿರ್ದೇಶಕರ ಕ್ರೆಡಿಟ್ ನೀಡಲು ತೀರ್ಮಾನಿಸಲಾಗಿದೆಯಂತೆ.

  ಒಂದು ಕಡೆ ಶೂಟಿಂಗ್, ಇನ್ನೊಂದು ಕಡೆ ಡಬ್ಬಿಂಗ್, ಮತ್ತೊಂದು ಎಡಿಟಿಂಗ್, ಮಗೊಂದು ಕಡೆ ಗ್ರಾಫಿಕ್ಸ್ ಕೆಲಸ.. ಹೀಗಾಗಿ ಎಲ್ಲ ದೃಶ್ಯಗಳ ಶೂಟಿಂಗ್‍ನಲ್ಲಿ ನಾಗಣ್ಣ ಇರೋಕೆ ಸಾಧ್ಯವಾಗಿಲ್ಲ. ಗ್ರಾಫಿಕ್ಸ್ ಜವಾಬ್ದಾರಿಯನ್ನಂತೂ ನಾಗಣ್ಣ ಪೂರ್ತಿಯಾಗಿ ಪ್ರಸಾದ್ ಹೆಗಲಿಗೆ ಹಾಕಿಬಿಟ್ಟಿದ್ದಾರಂತೆ. 

  ದರ್ಶನ್ ಪೋರ್ಷನ್‍ಗಳನ್ನು ಮಾತ್ರ ನಾಗಣ್ಣ ಕಣ್ಣಲ್ಲಿ ಕಣ್ಣಿಟ್ಟು ಶೂಟಿಂಗ್ ಮಾಡಿಸಿದ್ದಾರೆ. ಅಭಿಮನ್ಯು ನಿಖಿಲ್ ದೃಶ್ಯಗಳ ಚಿತ್ರೀಕರಣವನ್ನು ನಾಗೇಂದ್ರ ಪ್ರಸಾದ್ ಮಾಡಿಸಿದ್ದಾರೆ. ಹೀಗೆ ಕುರುಕ್ಷೇತ್ರ ಚಿತ್ರದ ಜವಾಬ್ದಾರಿ ಹಂಚಿಕೆಯಾಗಿದೆ.

  ಸದ್ಯಕ್ಕೆ ಡಬ್ಬಿಂಗ್ ಮುಕ್ತಾಯ ಹಂತದಲ್ಲಿದೆ. ಡಬ್ಬಿಂಗ್ ಮಾಡಬೇಕಿರುವ ದೊಡ್ಡ ಸ್ಟಾರ್ ಎಂದರೆ ರವಿಚಂದ್ರನ್. ಶ್ರೀಕೃಷ್ಣನ ಪಾತ್ರದ ಡಬ್ಬಿಂಗ್ ಕೆಲಸ ಇನ್ನೂ ಶುರುವಾಗಿಲ್ಲ. ಉಳಿದಂತೆ ದರ್ಶನ್ ಸೇರಿದಂತೆ ಹಲವು ಕಲಾವಿದರು ತಮ್ಮ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ಬಹುಶಃ ಜೂನ್ ಅಂತ್ಯದ ವೇಳೆಗೆ ಚಿತ್ರ ಸಿದ್ಧವಾಗಬಹುದು.

 • ಕುರುಕ್ಷೇತ್ರಕ್ಕೆ ಯಾರೂ ಕೇಳಲಿಲ್ಲ - ರಾಣಾ ಹೇಳಿದ ಸತ್ಯ

  rana daggupathi not approached for kurukshetra

  ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಮುಹೂರ್ತವಾಗಿದೆ. ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಸೆಟ್ಟೇರುವ ಮುನ್ನವೇ ಭೀಮನ ಪಾತ್ರಕ್ಕೆ ರಾಣಾ ದಗ್ಗುಬಾಟಿ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿತ್ತು. ಬಾಹುಬಲಿಯ ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ, ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದರೆ, ಅದರ ಥ್ರಿಲ್ಲೇ ಬೇರೆಯಿತ್ತು. 

  ಆದರೆ, ಈಗ ಬಹಿರಂಗವಾಗಿರುವ ಸತ್ಯವೇನು ಗೊತ್ತೇ..? ಕುರುಕ್ಷೇತ್ರ ಚಿತ್ರಕ್ಕೆ ತನ್ನನ್ನು ಯಾರೊಬ್ಬರೂ ಸಂಪರ್ಕಿಸಿಲ್ಲ. ಕೇಳಿದ್ದರೆ, ಆಗ ಯೋಚಿಸಬಹುದಿತ್ತು ಎಂದಿದ್ದಾರೆ ರಾಣಾ ದಗ್ಗುಬಾಟಿ. ಕನ್ನಡದಲ್ಲಿ ಕೂಡಾ ನಟಿಸುವ ಆಸಕ್ತಿಯಿದೆ ಎಂಬ ಬಯಕೆಯನ್ನೂ ಹೊರಹಾಕಿದ್ದಾರೆ.

  ಕನ್ನಡದಲ್ಲಿ ಆಸ್ಫೋಟ ಚಿತ್ರಕ್ಕೆ ಕೇಳಲಾಗಿದೆ. ಮಾತುಕತೆಯ ಹಂತದಲ್ಲಿದ್ದು, ಇನ್ನೂ ಫೈನಲೈಸ್ ಆಗಿಲ್ಲ ಎಂದು ಹೇಳಿದ್ದಾರೆ ರಾಣಾ.

 • ಕುರುಕ್ಷೇತ್ರದ ಅಭಿಮನ್ಯುಗೆ ಸಿಕ್ಕಳು ಉತ್ತರೆ

  uttare found for abhimanyu

  ಕನ್ನಡದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಶುರುವಾಗಿಬಿಟ್ಟಿದೆ. ಚಿತ್ರಕ್ಕೆ ಹೊಸ ಹೊಸ ತಾರೆಯರ ಸೇರ್ಪಡೆ ನಡೆಯುತ್ತಲೇ ಇದೆ. ಈಗ ಕುರುಕ್ಷೇತ್ರದ ಅಭಿಮನ್ಯುಗೆ ಜೊತೆಗಾತಿ ಸಿಕ್ಕಿದ್ದಾರೆ. ದೆಹಲಿ ಮೂಲದ ಮಾಡೆಲ್, ಮಿಸ್ ಇಂಡಿಯಾ ವಲ್ರ್ಡ್ ಕಿರೀಟಧಾರಿಣಿಯಾಗಿದದ ಆದಿತಿ, ಅಭಿಮನ್ಯು ಪಾತ್ರಧಾರಿ ನಿಖಿಲ್‍ಗೆ ಜೋಡಿ. ಸಿನಿಮಾದಲ್ಲಿ ಆದಿತಿ ಆರ್ಯ ಉತ್ತರೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಆದಿತಿ ಸಿನಿಮಾಗೆ ಹೊಸಬರೇನೂ ಅಲ್ಲ. ತೆಲುಗಿನಲ್ಲಿ ಪುರಿ ಜಗನ್ನಾಥ್, ನಂದಮೂರಿ ಕಲ್ಯಾಣರಾಮ್ ಚಿತ್ರಗಳಲ್ಲಿ ನಟಿಸಿರುವ ಅನುಭವವಿದೆ. ಆದರೆ, ಪೌರಾಣಿಕ ಚಿತ್ರದ ಪಾತ್ರ ಸೌಂದರ್ಯದ ಜೊತೆಗೆ ವಿಶೇಷ ಅಭಿನಯ ಬೇಡುತ್ತೆ. ಹೇಗೆ ಕಾಣಬಹುದು ಉತ್ತರೆ. ಸಿನಿಮಾ ಬಿಡುಗಡೆಯಾಗುವವರೆ ಕಲ್ಪನೆಯಲ್ಲಿ ಮಾತ್ರ ನೋಡಬಹುದು.

  Related Articles :-

  ಕುರುಕ್ಷೇತ್ರಕ್ಕೆ ಯಾರೂ ಕೇಳಲಿಲ್ಲ - ರಾಣಾ ಹೇಳಿದ ಸತ್ಯ

  Sudeep Wishes Kurukshetra

  ಸಂಕ್ರಾಂತಿಗೇ ರಿಲೀಸ್ ಆಗುತ್ತೆ ದರ್ಶನ್ ಕುರುಕ್ಷೇತ್ರ..!

  ಮುನಿರತ್ನ ಕುರುಕ್ಷೇತ್ರದಲ್ಲಿ ಅವಕಾಶ - ಶಕುನಿ ರವಿಶಂಕರ್, ಧೃತರಾಷ್ಷ್ಟ್ರ ಶ್ರೀನಾಥ್​ಗೆ ಉತ್ಸಾಹವೋ ಉತ್ಸಾಹ

  ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

  ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

  ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

  ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

 • ಕುರುಕ್ಷೇತ್ರದ ಕಾಣಿಕೆಯನ್ನು ಮರೆಯದ ದರ್ಶನ್

  muniratna's memorable gift to darshan

  ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ, ಕನ್ನಡ ಚಿತ್ರರಂಗದಲ್ಲೇ ಇತಿಹಾಸ ಸೃಷ್ಟಿಸುತ್ತಿದೆ. ಈ ಐತಿಹಾಸಿಕ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಮುನಿರತ್ನ, ದರ್ಶನ್‍ಗೆ ಒಂದು ವಿಶೇಷ ಉಡುಗೊರೆಯನ್ನೂ ಕೊಟ್ಟಿದ್ದಾರೆ. 

  ಕುರುಕ್ಷೇತ್ರದಲ್ಲಿ ದರ್ಶನ್ ಬಳಸಿದ್ದ ಗದೆ ಹಾಗೂ ಕಿರೀಟಗಳನ್ನು ದರ್ಶನ್ ಅವರಿಗೇ ಕೊಟ್ಟು ಕಳುಹಿಸಿದ್ದಾರೆ . ಅದು ದರ್ಶನ್ ಚಿತ್ರ ಹಾಗೂ ಪಾತ್ರದ ಮೇಲೆ ತೋರಿಸಿದ ಪ್ರೀತಿ ಹಾಗೂ ಅಭಿಮಾನಕ್ಕೆ ಚಿತ್ರತಂಡ ನೀಡಿರುವ ಪ್ರೀತಿಯ ಕಾಣಿಕೆ.

 • ಕುರುಕ್ಷೇತ್ರದ ಗದಾಯುದ್ಧಕ್ಕೆ ಸಕಲವೂ ಸಿದ್ಧ

  kurukshetra movie image

  ಕುರುಕ್ಷೇತ್ರ ಚಿತ್ರದ ಪ್ರಮುಖ ಆಕರ್ಷಣೆಯೇ ಗದಾಯುದ್ಧ. ದುರ್ಯೋಧನ ಹಾಗೂ ಭೀಮಸೇನರ ನಡುವೆ ನಡೆಯುವ ಈ ಕದನದ ಚಿತ್ರೀಕರಣಕ್ಕೆ ಕುರುಕ್ಷೇತ್ರ ತಂಡ ಸಜ್ಜಾಗಿದೆ. ನವೆಂಬರ್ 24ರಂದು ಗದಾಯುದ್ಧದ ಚಿತ್ರೀಕರಣ ಶುರುವಾಗಲಿದೆ.

  ಈಗಾಗಲೇ 150 ದಿನಗಳ ಶೂಟಿಂಗ್ ಪೂರೈಸಿರುವ ಚಿತ್ರತಂಡಕ್ಕೆ, ಈ ಗದಾಯುದ್ಧದ ಚಿತ್ರೀಕರಣ ಅತ್ಯಂತ ಪ್ರಮುಖ ಘಟ್ಟ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇದಕ್ಕಾಗಿಯೇ ವಿಶೇಷ ಸೆಟ್ ಹಾಕಲಾಗಿದೆ. ಏಕಕಾಲದಲ್ಲಿ 3ಡಿ ಹಾಗೂ ಬೇರೆ ಮಾದರಿಯಲ್ಲಿ ಚಿತ್ರೀಕರಿಸುತ್ತಿರುವುದರಿಂದ ವಿಶೇಷ ದೃಶ್ಯದ ಚಿತ್ರೀಕರಣಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ.

 • ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

  kurukshetra launch on august 6th

  ದರ್ಶನ್‌ ಚಿತ್ರ ಜೀವನದ 50ನೇ ಅದ್ಧೂರಿಯಾಗಿ ಲಾಂಚ್ ಆಗುತ್ತಿದೆ. ದರ್ಶನ್ ದುರ್ಯೋಧನನಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತದ ಆಹ್ವಾನ ಪತ್ರಿಕೆ ಸಿದ್ಧವಾಗಿದೆ. ಆಹ್ವಾನ ಪತ್ರಿಕೆಯ ಜೊತೆ ದರ್ಶನ್, ನಿಖಿಲ್ ಸೇರಿದಂತೆ ಕೆಲವು ಕಲಾವಿದರ ಫಸ್ಟ್ ಲುಕ್ ಹೇಗಿದೆ ಅನ್ನೋದು ಕೂಡಾ ಬಹಿರಂಗವಾಗಿದೆ. ನವೆಂಬರ್ 6ನೇ ತಾರೀಕು ನಡೆಯಲಿರುವ ಮುಹೂರ್ತಕ್ಕೆ ವಿಶೇಷ ಆಹ್ವಾನಿತರ ಪಟ್ಟಿಯೇ ದೊಡ್ದಿದಿದೆ. ನಿರ್ಮಾಪಕ ಮುನಿರತ್ನ ಕಾಂಗ್ರೆಸ್ ಶಾಸಕರಾಗಿರುವುದೂ ಕೂಡಾ ಇದಕ್ಕೆ ಕಾರಣವಿರಬಹುದು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಆಹ್ವಾನಿರಾಗಿದ್ದರೆ, ಮುಖ್ಯ ಅತಿಥಿಗಳ ಪಟ್ಟಿಯಲ್ಲಿ  ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವರಾದ ಡಿ.ಕೆ. ಶಿವಕುಮಾರ್, ಉಮಾಶ್ರೀ, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು.. ಹೀಗೆ ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯಾತಿಗಣ್ಯರ ಪಟ್ಟಿಯೇ ಇದೆ. 

  ಭಾನುವಾರ ಸಂಜೆ 6.30ಕ್ಕೆ ಪೀಣ್ಯ ಮೆಟ್ರೋ ಸ್ಟೇಷನ್ ಎದುರು ಇರುವ ಡಾ. ಪ್ರಭಾಕರ್ ಕೋರೆ ಕನ್ವೆನ್ಷನ್ ಸೆಂಟರ್​ನಲ್ಲಿ ಮುಹೂರ್ತ ನಡೆಯುತ್ತಿದೆ. 

  ಇವರ ಜೊತೆ, ಚಿತ್ರದಲ್ಲಿ ದಿಗ್ಗಜರ ಸೈನ್ಯವೇ ಸಮಾಗಮವಾಗುತ್ತಿದೆ. ಮುಖ್ಯ ಪಾತ್ರ ದುರ್ಯೋಧನನಾಗಿ ದರ್ಶನ್ ಇದ್ದರೆ,  ಶ್ರೀ ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್, ಭೀಷ್ಮಾಚಾರ್ಯನಾಗಿ ಅಂಬರೀಷ್ ನಟಿಸಲಿದ್ದಾರೆ. ಧೃತರಾಷ್ಟ್ರನಾಗಿ ಶ್ರೀನಾಥ್,  ದ್ರೋಣಾಚಾರ್ಯನಾಗಿ ಶ್ರೀನಿವಾಸ್ ಮೂರ್ತಿ, ಗಂಧರ್ವ ರಾಜನಾಗಿ ಅವಿನಾಶ್, ಶಕುನಿ ಪಾತ್ರದಲ್ಲಿ ಸಾಯಿಕುಮಾರ್,ಅರ್ಜುನನ ಪಾತ್ರದಲ್ಲಿ ಅರ್ಜುನ್ ಸರ್ಜಾ, ದ್ರೌಪದಿ ಪಾತ್ರದಲ್ಲಿ  ಸ್ನೇಹಾ,  ನರ್ತಕಿಯಾಗಿ ಹರಿಪ್ರಿಯಾ, ರೆಜಿನಾ  ಇನ್ನು ಅತ್ಯಂತ ಪ್ರಮುಖವಾದ ಕುಂತಿಯ ಪಾತ್ರದಲ್ಲಿ ನಟಿ ಲಕ್ಷ್ಮಿ ನಟಿಸುತ್ತಿದ್ದಾರೆ. 

  ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಇನ್ನೂ ದೊಡ್ಡ ದೊಡ್ಡ ಕಲಾವಿದರು ನಟಿಸಲಿದ್ದಾರೆ. ಚಿತ್ರದ ಬಜೆಟ್ 50ರಿಂದ 60 ಕೋಟಿ ಎನ್ನಲಾಗುತ್ತಿದೆ. ಅದು ಕನ್ನಡ ಚಿತ್ರರಂಗದ ಅತಿ ದೊಡ್ಡ ಚಿತ್ರವಾಗುವುದರಲ್ಲಿ ಸಂದೇಹವಿಲ್ಲ.

  Kannada film industry's most anticipated film 'Kurukshetra' is all set to be launched on the 06th of August at the Prabhakar Kore Convention Hall in Yeshwanthapur in Bangalore. Chief Minister Siddaramaiah and former Chief Minister H D Kumaraswamy will be attending the muhurath and launch the film.

  The film is being produced by Karnataka Film Producers Association president and well known producer Muniratra. Senior director Naganna who had directed 'Krantiveera Sangolli Rayanna' is directing the film.

  'Kurukshetra' is based on the Mahabharatha and Darshan will be playing the role of Duryodhana, while Ravichandran is seen in the role of Krishna in this film. Apart from that Lakshmi, Nikhil Kumar, Saikumar, Shashikumar, Srinath, Regina Cassandra, Haripriya and others are playing prominent roles in the film.

Trayambakam Movie Gallery

Rightbanner02_butterfly_inside

Paddehuli Movie Gallery