` kurukshetra, - chitraloka.com | Kannada Movie News, Reviews | Image

kurukshetra,

 • ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

  darshan

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಕುರುಕ್ಷೇತ್ರ ಚಿತ್ರವನ್ನು ಕೈಬಿಟ್ಟಿಲ್ಲ. ಅಂತಹ ಅವಕಾಶವನ್ನು ದರ್ಶನ್ ಬಿಡೋದಿಲ್ಲ. ವದಂತಿಗಳಿಗೆಲ್ಲ ಕಿವಿಗೊಡಬೇಡಿ ಅನ್ನೋ ಸುದ್ದಿ ಡಿ ಕ್ಯಾಂಪ್​ನಿಂದ ಹೊರಬಿದ್ದಿದೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನ ಪಾತ್ರ ಮಾಡುತ್ತಿದ್ದು,

  ಈಗಾಗಲೇ ಫೋಟೋ ಶೂಟ್ ಕೂಡಾ ಮುಗಿದಿದೆ. ದುರ್ಯೋಧನನ ಪಾತ್ರಕ್ಕಾಗಿ ದರ್ಶನ್, ತೂಕ ಹೆಚ್ಚಿಸಿಕೊಳ್ಳುತ್ತಿದ್ದು, ತಾಲೀಮು ನಡೆಸುತ್ತಿದ್ದಾರೆ. ಒಬ್ಬ ನಟನ ಜೀವನದಲ್ಲಿ ಸಿಗುವ ಅಪರೂಪದ ಅವಕಾಶ ಇದು ಎಂದು ಸ್ಪಷ್ಟಪಡಿಸಿದ್ದಾರೆ ದಿನಕರ್ ತೂಗುದೀಪ. ಈಗಾಗಲೇ ಚಿತ್ರಕ್ಕಾಗಿ ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಭರ್ಜರಿ ಸೆಟ್ ಸಿದ್ಧವಾಗುತ್ತಿದೆಯಂತೆ.

 • ವರಮಹಾಲಕ್ಷ್ಮಿ ಹಬ್ಬಕ್ಕೆ ನಾಗಣ್ಣ V/S ನಾಗಣ್ಣ

  will it be naganna vs naganna this varamahalakshmi festival ?

  ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಮುನಿರತ್ನ ಕುರುಕ್ಷೇತ್ರ. ಕನ್ನಡ ಚಿತ್ರರಂಗದ ದೊಡ್ಡ ಬಜೆಟ್‍ನ ಪೌರಾಣಿಕ ಸಿನಿಮಾ. ಹೆಚ್ಚೂ ಕಡಿಮೆ ಇಡೀ ಸ್ಯಾಂಡಲ್‍ವುಡ್ ತಾರೆಯರು ನಟಿಸಿರುವ ಚಿತ್ರವಿದು. ದರ್ಶನ್, ಅಂಬರೀಷ್, ರವಿಚಂದ್ರನ್‍ರಂತಹ ದಿಗ್ಗಜರು ನಟಿಸಿರುವ ಚಿತ್ರಕ್ಕೆ ನಾಗಣ್ಣ ನಿರ್ದೇಶನವಿದೆ.

  ಆದರೆ, ಅದೇ ನಾಗಣ್ಣ ನಿರ್ದೇಶನದ ಗಿಮಿಕ್ ಸಿನಿಮಾ ಕೂಡಾ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಲು ಸಿದ್ಧವಾಗಿದೆ. ಇದೇ ಫೈನಲ್ ಆದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಒಬ್ಬ ನಿರ್ದೇಶಕನ ಎರಡು ಚಿತ್ರಗಳು ಮುಖಾಮುಖಿಯಾಗಲಿವೆ.

  ಹಿಂದೆಲ್ಲ ಒಬ್ಬನೇ ನಟನ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆದ ದಾಖಲೆಗಳೂ ಇವೆ. ಆದರೆ, ಒಬ್ಬನೇ ನಿರ್ದೇಶಕನ ಎರಡು ಸಿನಿಮಾ ರಿಲೀಸ್ ದಾಖಲೆ.. ಬಹುಶಃ ಇದೇ ಮೊದಲಿರಬೇಕು.

 • ಶಕುನಿ ಕಾಣಿಸಿಕೊಂಡೇ ಬಿಟ್ರು..!

  ravishankar in kurukshetra

  ಕುರುಕ್ಷೇತ್ರ ಚಿತ್ರದ ಒಬ್ಬೊಬ್ಬಬರ ಪಾತ್ರ, ಲುಕ್‍ನ್ನು ಗೌಪ್ಯವಾಗಿಯೇ ಮಾಡಲಾಗುತ್ತಿದೆ. ಸದ್ಯಕ್ಕೆ ದುರ್ಯೋಧನ ದರ್ಶನ್, ಅಭಿಮನ್ಯು ನಿಖಿಲ್, ಭೀಷ್ಮ ಅಂಬರೀಷ್ ಸೇರಿದಂತೆ ಕೆಲವೇ ಕಲಾವಿದರ ಫೋಟೋಗಳು ಹೊರಬಿದ್ದಿವೆ. ಟೀಸರ್ ಎಂದು ಬಂದಿರೋದು ದುರ್ಯೋಧನ ದರ್ಶನ್ ಅವರದ್ದು ಮಾತ್ರ. ಉಳಿದವರ ಗೆಟಪ್‍ಗಳನ್ನು ಫೋಟೋ ನೋಡಿ ತೃಪ್ತಿಪಟ್ಟುಕೊಳ್ಳಬೇಕಷ್ಟೆ.

  ಅಂಥದ್ದೇ ಕುತೂಹಲ ಇದ್ದದ್ದು ಶಕುನಿ ರವಿಶಂಕರ್ ಬಗ್ಗೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಖಳ, ಪೋಷಕ, ಹಾಸ್ಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವ ರವಿಶಂಕರ್, ಪೌರಾಣಿಕ ಶಕುನಿ ಪಾತ್ರದಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಇತ್ತು. ಅವರದ್ದೊಂದು ಫೋಟೋ ಈಗ ಹೊರಬಿದ್ದಿದೆ.

  ಸೆಟ್ ಬಳಿ ಹೋಗಿದ್ದ ಅಭಿಮಾನಿಗಳ ಆಗ್ರಹಕ್ಕೆ ಮಣಿದು ಫೋಟೋ ತೆಗೆಸಿಕೊಂಡಿದ್ದಾರೆ ರವಿಶಂಕರ್. ಪಕ್ಕದಲ್ಲೆ ದುರ್ಯೋಧನ ದರ್ಶನ್, ಶಶಿಕುಮಾರ್ ಕೂಡಾ ಇದ್ದಾರೆ. ಇನ್ನೊಂದ್ ವಿಷ್ಯ, ಅಭಿಮನ್ಯು ನಿಖಿಲ್ ಟೀಸರ್ ನಾಳೆ ಹೊರಬೀಳ್ತಾ ಇದೆ.

 • ಸಂಕ್ರಾಂತಿಗೇ ರಿಲೀಸ್ ಆಗುತ್ತೆ ದರ್ಶನ್ ಕುರುಕ್ಷೇತ್ರ..!

  kurukshetra movie image

  ಕುರುಕ್ಷೇತ್ರ ಚಿತ್ರಕ್ಕೆ ಅದ್ದೂರಿ ಮುಹೂರ್ತ ನೆರವೇರಿದೆ. ಮುಖ್ಯಮಂತ್ರಿಗಳೇ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ. ಚಿತ್ರದಲ್ಲಿರುವ ಕನ್ನಡದ ದೊಡ್ಡ ಸ್ಟಾರ್ ನಟರೆಂದರೆ ಇಬ್ಬರು ಮಾತ್ರ. ದರ್ಶನ್ ಮತ್ತು ರವಿಚಂದ್ರನ್. ಕೇವಲ 2 ತಿಂಗಳಲ್ಲಿ ಪ್ಲಾನ್ ಮಾಡಿದ ಚಿತ್ರ. ಹೀಗಾಗಿ ಸ್ಟಾರ್ ನಟರನ್ನೆಲ್ಲ ಒಗ್ಗೂಡಿಸುವುದು ಸಾಧ್ಯವಾಗಲಿಲ್ಲ ಎಂಬ ಸ್ಪಷ್ಟನೆ ಮುನಿರತ್ನ ಅವರದ್ದು.

  ಅಂದಹಾಗೆ ಕನ್ನಡದ ಈ ಪೌರಾಣಿಕ ಚಿತ್ರ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆಯಂತೆ. ಚಿತ್ರ ಸೆಟ್ಟೇರಿರುವುದು ಈಗ. 60 ಕೋಟಿ ಬಜೆಟ್‍ನ ಈ ಚಿತ್ರ ಐದೇ ತಿಂಗಳಲ್ಲಿ ತಯಾರಾಗಲಿದೆ ಎಂಬುದು ಅಚ್ಚರಿ ಹುಟ್ಟಿಸುತ್ತಿದೆ. ಏಕೆಂದರೆ, ಪೌರಾಣಿಕ ಚಿತ್ರಗಳ ಮೇಕಿಂಗ್ ಹೆಚ್ಚು ಸಮಯ ಕೇಳುತ್ತೆ. ಆದರೆ, ಸಿದ್ಧತೆ ಸರಿಯಾಗಿದ್ದರೆ, 5 ತಿಂಗಳಲ್ಲಿ ಸಿನಿಮಾ ರೆಡಿ ಮಾಡುವುದು ಕಷ್ಟವಲ್ಲ ಎನ್ನುವುದು ಮುನಿರತ್ನ ಹೇಳಿಕೆ.

  ಕುರುಕ್ಷೇತ್ರ ಹೈಲೈಟ್ಸ್

  ==============

  ಕನ್ನಡದಲ್ಲಿ ಸುದೀರ್ಘ ಕಾಲದ ನಂತರ ಬರುತ್ತಿರುವ ಪೌರಾಣಿಕ ಸಿನಿಮಾ

  ದರ್ಶನ್ ಮತ್ತು ರವಿಚಂದ್ರನ್ ಒಟ್ಟಿಗೇ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು

  60 ಕೋಟಿ ಬಜೆಟ್‍ನ ಚಿತ್ರ, ಕನ್ನಡದ ಅತ್ಯಂತ ಅದ್ಧೂರಿ ಚಿತ್ರವಾಗಲಿದೆ

  ಚಿತ್ರದ ಬಹುತೇಕ ಚಿತ್ರೀಕರಣ ರಾಮೋಜಿಫಿಲ್ಮ್ ಸಿಟಿಯಲ್ಲಿ ನಡೆಯಲಿದೆ

  16 ವಿಭಿನ್ನ ಸೆಟ್‍ಗಳನ್ನು ಹಾಕಲಾಗಿದೆ

  ಯಾವುದೇ ಬ್ರೇಕ್ ಇಲ್ಲದೆ ಒಂದೇ ಹಂತದಲ್ಲಿ 100 ದಿನ ಚಿತ್ರೀಕರಣ ನಡೆಯಲಿದೆ

 • ಸಂಭಾವನೆಯನ್ನೇ ಪಡೆದಿಲ್ಲ ಕುರುಕ್ಷೇತ್ರದ ಭೀಷ್ಮ

  ambareesh did not take his remunarayion for kurukshetra

  ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಬಿಡುಗಡೆಗೆ ರೆಡಿಯಾಗಿರುವಾಗಲೇ ನಿರ್ಮಾಪಕ ಮುನಿರತ್ನ, ಸಿನಿಮಾದ.. ಅದರಲ್ಲೂ ಅಂಬರೀಷ್ ಕುರಿತ ವಿಶೇಷ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಏನೆಂದರೆ, ಅಂಬರೀಷ್ ಈ ಚಿತ್ರದಲ್ಲಿನ ತಮ್ಮನಟನೆಗೆ ಸಂಭಾವನೆಯನ್ನೇ ಪಡೆದಿಲ್ಲ ಎನ್ನವುದು.

  ಅದೇನೋ ಗೊತ್ತಿಲ್ಲ, ಅಂಬರೀಷ್ ಮೊದ ಮೊದಲು ನಾನು ಮಾಡಲ್ಲ ಎಂದೇ ವಾದಿಸಿದರು. ನೀವೇ ಮಾಡಬೇಕು ಎಂದು ಹಠ ಮಾಡಿದ ಮೇಲೆ ಒಪ್ಪಿಕೊಂಡರು. ಅಷ್ಟೇ ಅಲ್ಲ, ಶೂಟಿಂಗ್ ಮುಗಿದ ತಕ್ಷಣ ತಾವಾಗಿಯೇ ಕೇಳಿ ಡಬ್ಬಿಂಗ್ ಮಾಡಿಕೊಟ್ಟರು. ಅವರು ಕೇಳಿದರು ಎಂಬ ಕಾರಣಕ್ಕೆ, ಶೂಟಿಂಗ್ ನಡೆಯುತ್ತಿರುವಾಗಲೇ ಡಬ್ಬಿಂಗ್ ಮಾಡಿಸಿದ್ದೆವು. ಇದುವರೆಗೆ ಅವರಿಗೆ ನಾನು ಸಂಭಾವನೆ ಕೊಟ್ಟಿಲ್ಲ ಎಂದಿದ್ದಾರೆ ನಿರ್ಮಾಪಕ ಮುನಿರತ್ನ.

  ಕುರುಕ್ಷೇತ್ರ ಸಿನಿಮಾ ಅಂಬರೀಷ್ ಅಭಿನಯದ ಕೊನೆಯ ಸಿನಿಮಾ. ಕುರುಕ್ಷೇತ್ರ ಮೊದಲೇ ಬಿಡುಗಡೆಯಾಗಿದ್ದರೆ, ಅಂಬಿ ನಿಂಗ್ ವಯಸ್ಸಾಯ್ತೋ ಕೊನೆಯ ಚಿತ್ರವಾಗುತ್ತಿತ್ತು. ಆದರೆ, ಕುರುಕ್ಷೇತ್ರ ವಿಳಂಬವಾದ ಹಿನ್ನೆಲೆಯಲ್ಲಿ ದರ್ಶನ್ ಅಭಿನಯದ 50ನೇ ಚಿತ್ರವೇ, ಅಂಬಿಯ ಕೊನೆಯ ಚಿತ್ರವಾಗಿದೆ. 

 • ಸೆನ್ಸಾರ್ ಆಗಿದ್ದರೂ ಕುರುಕ್ಷೇತ್ರ ಬಿಡುಗಡೆ ಇಲ್ಲ ಏಕೆ ಗೊತ್ತಾ..?

  kurukshetra censored, they why is movie release delayed

  ಕುರುಕ್ಷೇತ್ರ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಹೀಗಿದ್ದರೂ ಕುರುಕ್ಷೇತ್ರ ಚಿತ್ರ ಇನ್ನೂ ರಿಲೀಸ್ ಆಗುತ್ತಿಲ್ಲ. ಬಹುಶಃ ಕುರುಕ್ಷೇತ್ರ ಸಿನಿಮಾ, ಏಪ್ರಿಲ್‍ನಲ್ಲಿ ರಿಲೀಸ್ ಆಗಬಹುದು. ಸೆನ್ಸಾರ್ ಆಗಿದ್ದರೂ, ಸಿನಿಮಾ ಬಿಡುಗಡೆ ವಿಳಂಬ ಆಗುತ್ತಿರುವುದೇಕೆ ಎನ್ನುವುದಕ್ಕೆ ಕಾರಣವೂ ಇದೆ.

  ಸದ್ಯಕ್ಕೆ ಸೆನ್ಸಾರ್ ಆಗಿರುವುದು ಕುರುಕ್ಷೇತ್ರ ಚಿತ್ರದ 2ಡಿ ವರ್ಷನ್ ಮಾತ್ರ. 3ಡಿ ವರ್ಷನ್ ಕುರುಕ್ಷೇತ್ರದ ತಾಂತ್ರಿಕ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ. ಹೀಗಾಗಿ ಕುರುಕ್ಷೇತ್ರ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ. ದರ್ಶನ್‍ರ ಯಜಮಾನ ಚಿತ್ರವೇ ಮೊದಲು ರಿಲೀಸ್ ಆದರೆ, ಅದು ದರ್ಶನ್‍ರ 50ನೇ ಚಿತ್ರವಾಗಲಿದ್ದು, ಕುರುಕ್ಷೇತ್ರ 51ನೇ ಸಿನಿಮಾ ಆಗಲಿದೆ.

  ಮೊದಲಿನ ಪ್ಲಾನ್ ಪ್ರಕಾರ ಕುರುಕ್ಷೇತ್ರ 2018ರ ಮಾರ್ಚ್ 10ಕ್ಕೆ ರಿಲೀಸ್ ಆಗಬೇಕಿತ್ತು. ಪ್ಲಾನ್ ಏರುಪೇರಾಗಿದ್ದು, ಒಂದು ವರ್ಷ ವಿಳಂಬವಾಗಿ ರಿಲೀಸ್ ಆಗುವ ಸಾಧ್ಯತೆಯಿದೆ. 

 • ಹಬ್ಬಕ್ಕೂ ಮೊದಲೇ ಫಾರಿನ್ನಲ್ಲಿ ಕುರುಕ್ಷೇತ್ರ

  kurukshetra to release on days before in overseas

  ಮುನಿರತ್ನ ಕುರುಕ್ಷೇತ್ರ ರಿಲೀಸ್ ಆಗುತ್ತಿರುವುದು ಆಗಸ್ಟ್ 9ಕ್ಕೆ. ವರಮಹಾಲಕ್ಷ್ಮಿ ಹಬ್ಬದ ದಿನ. ಆದರೆ, ವಿದೇಶದಲ್ಲಿ ಹಬ್ಬಕ್ಕೂ ಒಂದು ದಿನ ಮೊದಲೇ ಕುರುಕ್ಷೇತ್ರ ರಿಲೀಸ್ ಆಗಲಿದೆ. 

  5 ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಪಂಚದಾದ್ಯಂತ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ ಸಿನಿಮಾ ಹಲವು ವಿಶೇಷ ದಾಖಲೆಗಳನ್ನು ಹೊಂದಿದೆ.

  ಇದು ದರ್ಶನ್ ಅಭಿನಯದ 50ನೇ, ಅಂಬರೀಷ್ ಅಭಿನಯದ ಕೊನೆಯ ಚಿತ್ರ. ಇದೇ ಮೊದಲ ಬಾರಿಗೆ ರವಿಚಂದ್ರನ್ ಪೌರಾಣಿಕ ಚಿತ್ರದಲ್ಲಿ ನಟಿಸಿರುವ ಚಿತ್ರವಿದು. ನಾಗಣ್ಣ ನಿರ್ದೇಶನ ದ ಸಿನಿಮಾಗೆ ಮುನಿರತ್ನ ನಿರ್ಮಾಪಕ. ಕನ್ನಡದ ಅದ್ಧೂರಿ ವೆಚ್ಚದ ಚಿತ್ರವಾಗಿರುವ ಕುರುಕ್ಷೇತ್ರದಲ್ಲಿ ಸ್ಯಾಂಡಲ್‍ವುಡ್‍ನ ಘಟಾನುಘಟಿ ನಟರು ನಟಿಸಿದ್ದಾರೆ. 70ರ ದಶಕದಿಂದ ಆರಂಭವಾಗಿ ಈಗಿನವರೆಗಿನ 5 ತಲೆಮಾರಿನ ಕಲಾವಿದರು ನಟಿಸಿರುವ ಚಿತ್ರವಿದು.

   

 • ಹಿಂದಿ ಕುರುಕ್ಷೇತ್ರ 9.5 ಕೋಟಿಗೆ ಸೇಲ್

  kurukshetra hinid television rights sold

  ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ರಿಲೀಸ್‍ಗೆ ರೆಡಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿದ್ಧವಾಗುತ್ತಿದೆ. ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ 3ಡಿ ವರ್ಷನ್ ಸಂಪೂರ್ಣ ಸಿದ್ಧಗೊಂಡಿದೆ. ಕನ್ನಡ ವರ್ಷನ್ ಸೆನ್ಸಾರ್ ಕೂಡಾ ಆಗಿದೆ. ಇನ್ನುಳಿದ ಮೂರು ಭಾಷೆಯ ಚಿತ್ರಗಳು ಮುಂದಿನ ವಾರ ಸೆನ್ಸಾರ್‍ಗೆ ಹೋಗುತ್ತಿವೆ. ಇನ್ನು 15 ದಿನಗಳಲ್ಲಿ ಹಿಂದಿ ವರ್ಷನ್ ಕೂಡಾ ಮುಕ್ತಾಯಗೊಳ್ಳಲಿದೆ. ಹೀಗೆ ರಿಲೀಸ್‍ಗೆ ರೆಡಿಯಾಗುತ್ತಿರುವಾಗಲೇ ಹಿಂದಿ ಕುರುಕ್ಷೇತ್ರ ಚಿತ್ರದ ಟಿವಿ ರೈಟ್ಸ್ ಒಂಭತ್ತೂವರೆ ಕೋಟಿಗೆ ಮಾರಾಟವಾಗಿದೆ.

  ಇದು ಕೇವಲ ಟಿವಿ ರೈಟ್ಸ್, ಡಿಸ್ಟ್ರಿಬ್ಯೂಷನ್ ರೈಟ್ಸ್ ಅಲ್ಲ. ಯಾವುದೇ ಭಾಷೆಯ ಡಿಸ್ಟ್ರಿಬ್ಯೂಷನ್‍ನ್ನು ಇನ್ನೂ ಮಾರಾಟ ಮಾಡಿಲ್ಲ. ಐದಕ್ಕೆ ಐದೂ ಭಾಷೆಯಲ್ಲಿ ಕುರುಕ್ಷೇತ್ರ ಚಿತ್ರವನ್ನು ಏಕಕಾಲಕ್ಕೆ ರಿಲೀಸ್ ಮಾಡುವ ಪ್ಲಾನ್ ಮಾಡುತ್ತಿದ್ದಾರೆ ನಿರ್ಮಾಪಕ ಮುನಿರತ್ನ.

  ದರ್ಶನ್ ದುರ್ಯೋಧನನಾಗಿ ನಟಿಸಿದ್ದು, ದುರ್ಯೋಧನನ ಆ್ಯಂಗಲ್‍ನಲ್ಲಿಯೇ ಇಡೀ ಚಿತ್ರವನ್ನು ಕಟ್ಟಿಕೊಡಲಾಗಿದೆ. ರವಿಚಂದ್ರನ್, ಅರ್ಜುನ್ ಸರ್ಜಾ, ಶ್ರೀನಾಥ್, ನಿಖಿಲ್ ಕುಮಾರಸ್ವಾಮಿ, ಮೇಘನಾ ರಾಜ್, ಹರಿಪ್ರಿಯಾ, ಸ್ನೇಹ, ಸೃಜನ್ ಲೋಕೇಶ್ ಮೊದಲಾದವರು ನಟಿಸಿರುವ ಬಹುತಾರಾಗಣದ ಸಿನಿಮಾ ಕುರುಕ್ಷೇತ್ರ.

  ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರವೂ ಇದಾಗಿದ್ದು, ನಾಗಣ್ಣ ಮತ್ತು ನಾಗೇಂದ್ರ ಪ್ರಸಾದ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

 • ಹೀಗಿದ್ದಾರೆ ನೋಡಿ ಭೀಷ್ಮ ಅಂಬರೀಷ್

  ambareesh image

  ಕುರುಕ್ಷೇತ್ರ ಚಿತ್ರ ಶುರುವಾದಾಗಿನಿಂದ ಅಭಿಮಾನಿಗಳಲ್ಲಿದ್ದ ಪ್ರಶ್ನೆ ಅದೇ..ಭೀಷ್ಮನ ಪಾತ್ರದಲ್ಲಿ ಅಂಬರೀಷ್ ಹೇಗೆ ಕಾಣಿಸಬಹುದು ಎಂಬುದು. ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಳಿ ಗಡ್ಡ, ಮೀಸೆ, ಉದ್ದ ಕೂದಲಿನ ಅಂಬರೀಷ್ ಅವರ ಒಂದು ಪೋಸ್ಟರ್ ಈಗ ಹೊರಬಿದ್ದಿದೆ. ಶ್ರೀ ಮಂಜುನಾಥ ಚಿತ್ರದಲ್ಲಿ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹೊರತುಪಡಿಸಿದರೆ, ಅಂಬರೀಷ್ ಪೌರಾಣಿಕ ಚಿತ್ರಗಳಲ್ಲಿ ಕಾಣಿಸಿಕೊಂಡೇ ಇಲ್ಲ.

  ಹೀಗಾಗಿಯೇ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ದರ್ಶನ್ ಅವರಷ್ಟೇ ದೊಡ್ಡ ಕ್ರೇಜ್ ಮತ್ತು ಕುತೂಹಲ ಸೃಷ್ಟಿಸಿರುವುದು ಅಂಬರೀಷ್ ಪಾತ್ರ. ಅಂದಹಾಗೆ ಶ್ರೀಕೃಷ್ಣ ರವಿಚಂದ್ರನ್ ಗೆಟಪ್ ಹೇಗಿದೆ ಎನ್ನುವುದನ್ನೂ ಕೂಡಾ ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ. 

   

 • ಹೀಗಿದ್ದಾರೆ ಭಾನುಮತಿ..!

  bhanumathi 's look

  ಕುರುಕ್ಷೇತ್ರದಲ್ಲಿ ದುರ್ಯೋಧನ ಹೇಗಿದ್ದಾನೆ ಅನ್ನೋದನ್ನು ನೋಡಿದ್ದವರಿಗೆ ಈಗ ಭಾನುಮತಿಯನ್ನು ನೋಡುವ ಸಮಯ. ಮೇಘನಾ ರಾಜ್ ಕುರುಕ್ಷೇತ್ರದಲ್ಲಿ ಭಾನುಮತಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಸೆಟ್‍ನಲ್ಲಿರುವ ಮೇಘನಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅರ್ಜುನ್ ಸರ್ಜಾ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

  ದರ್ಶನ್ ಜೊತೆ ಮೇಘನಾಗೆ ಇದು ಮೊದಲನೇ ಚಿತ್ರ. ಜೊತೆಯಲ್ಲಿ ಅರ್ಜುನ್ ಸರ್ಜಾ ಕೂಡಾ ಇದ್ದಾರೆ. ಚಾಲೆಂಜಿಂಗ್ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಮೇಘನಾ, ಕುರುಕ್ಷೇತ್ರದ ಭಾನುಮತಿ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಿದೆ.

  Related Articles :-

  ದುರ್ಯೋಧನನಿಗೆ ಮೇಘನಾ ಭಾನುಮತಿ

 • ಹೈದರಾಬಾದ್‍ನಲ್ಲಿ ಮುನಿರತ್ನ ಕುರುಕ್ಷೇತ್ರ 

  kurulshetra promotion in hyderabad

  ಕುರುಕ್ಷೇತ್ರ ಚಿತ್ರದ ಪ್ರಚಾರ ಭರದಿಂದ ನಡೆಯುತ್ತಿದೆ. ಏಕಕಾಲದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮುನಿರತ್ನ ಕುರುಕ್ಷೇತ್ರ ಚಿತ್ರವನ್ನು ಆಂಧ್ರಪ್ರದೇಶ, ತೆಲಂಗಾಣದಲ್ಲಿ ಭರ್ಜರಿ ಪ್ರಮೋಷನ್ ಮಾಡಲಾಗುತ್ತಿದೆ. ಹೈದರಾಬಾದ್‍ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಮಾಡಲಾಗಿದೆ.

  ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕಾರಣರಾದವರಲ್ಲಿ ಒಬ್ಬರಾದ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ, ತಮ್ಮ ಚಿತ್ರದ ಪ್ರಮೋಷನ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. ಕುಮಾರಸ್ವಾಮಿ  ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಇದೇ ಚಿತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದಾರೆ.

  ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಹಾಗೂ ಅಂಬರೀಷ್ ಅಭಿನಯದ ಕಟ್ಟಕಡೆಯ ಸಿನಿಮಾ. ಆಗಸ್ಟ್ 2ಕ್ಕೆ ರಿಲೀಸ್. 

Ayushmanbhava Movie Gallery

Ellidhe Illitanaka Movie Gallery