` doddanna, - chitraloka.com | Kannada Movie News, Reviews | Image

doddanna,

 • Ragini, Doddana And GuruPrasad To Judge Bharjari Comedy

  bharjari show on star suvarna

  Judging a reality show is not new to actor-director Guruprasad. Guru had earlier judged many reality shows in the past. Now the actor-director is back judging a new reality show called 'Bharjari Comedy'. This time Ragini and Doddanna has also joined hands with him.

  'Bharjari Comedy' is a comedy reality programme being aired in Star Suvarna from the 23rd of December. The programme is being anchored by Vaishavi, while Mitra, Pavan, Sanjana, Shalini and others are contesting in the show.

  'Bharjari Comedy' will be aired in Star Suvarna on every Saturday and Sunday night at 9 PM.

  Related Articles :-

  ದೊಡ್ಡಣ್ಣಗೆ ರಾಗಿಣಿ ಜೋಡಿ..!

   

 • Senior Actor Doddanna Hospitalized

  doddanna hospitalied

  Senior actor Doddanna who collapsed during the shooting of the Telugu version of 'Rama Rama Re' has been hospitalized for dehydration on Thursday night in Bijapur.

  The shooting for the film is in full progress in and around Bijapur from the 15th of this month.  However,  Doddanna collapsed during the shooting of the film because of dehydration and was immediately rushed to the hospital.

  The doctors have said that Doddanna's health has stabilized and will be discharged from the hospital soon.

 • ದೊಡ್ಡಣ್ಣಗೆ ರಾಗಿಣಿ ಜೋಡಿ..!

  ragini paired with doddanna

  ರಾಗಿಣಿ ದ್ವಿವೇದಿ ಚಂದನವನದ ತುಪ್ಪದ ಗೊಂಬೆ. ದೊಡ್ಡಣ್ಣ ಕನ್ನಡ ಚಿತ್ರರಂಗದ ಸೀನಿಯರ್ ಕಲಾವಿದ. ಇವರಿಬ್ಬರೂ ಜೋಡಿನಾ..? ಏನು.. ಚೀನೀ ಕಮ್‍ನಂತಾ ಸ್ಟೋರಿನಾ..? ಇಂಥಾ ಪ್ರಶ್ನೆಗಳನ್ನೆಲ್ಲ ಕೇಳಬೇಡಿ. ಇವರಿಬ್ಬರೂ ಜೋಡಿಯಾಗಿರೋದು ಸಿನಿಮಾದಲ್ಲಿ ಅಲ್ಲ, ಕಿರುತೆರೆಯಲ್ಲಿ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋ ಶುರುವಾಗುತ್ತಿದೆ. ಆ ರಿಯಾಲಿಟಿ ಶೋಗೆ ದೊಡ್ಡಣ್ಣ ಹಾಗೂ ರಾಗಿಣಿ ತೀರ್ಪುಗಾರರು. ಜೊತೆಯಲ್ಲಿ ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್ ಕೂಡಾ ಇರುತ್ತಾರೆ. 

  ಇತ್ತೀಚೆಗೆ ಕಾಮಿಡಿ ಶೋವೊಂದರ ಮೂಲಕ ಕಿರುತೆರೆಗೆ ಬರುತ್ತಿದ್ದೇನೆ ಎಂಬ ಸುಳಿವು ಕೊಟ್ಟಿದ್ದರು ರಾಗಿಣಿ. ರಾಗಿಣಿಗೆ ಇದು ಫಸ್ಟ್ ಅನುಭವ. ದೊಡ್ಡಣ್ಣನವರಿಗೂ ಕಿರುತೆರೆಯಲ್ಲಿ ಇದು ಪ್ರಥಮ ಅನುಭವ.

 • ನಾನು ಸತ್ತಿಲ್ಲ, ಬದುಕಿದ್ದೇನೆ : ದೊಡ್ಡಣ್ಣ

  doddanna image

  ಚಿತ್ರರಂಗ ಮೊದಲೇ ಕೊರೊನಾದಿಂದ ನಲುಗಿ ಹೋಗಿದೆ. ದಿನ ದಿನವೂ ಚಿತ್ರರಂಗದ ಕೆಲವರಾದರೂ ಸಾವಿನ ಮನೆ ಸೇರುತ್ತಿದ್ಧಾರೆ. ಈ ಮಧ್ಯೆ ಸುಳ್ಳು ಸುದ್ದಿಗಳ ಹಾವಳಿಯೂ ಎಲ್ಲೆ ಮೀರಿದೆ. ಈ ಬಾರಿ ಅದು ಹಿರಿಯ ನಟ ದೊಡ್ಡಣ್ಣ ಅವರನ್ನು ಬೇಟೆಯಾಡಿದೆ.

  ಕೆಲವು ಜಾಲತಾಣಗಳಲ್ಲಿ, ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ದೊಡ್ಡಣ್ಣ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಂತಾಪಗಳೂ ವ್ಯಕ್ತವಾಗುತ್ತಿವೆ. ನೋಡೋಣ ಎಂದು ಚಿತ್ರಲೋಕ ಖುದ್ದು ದೊಡ್ಡಣ್ಣನವರಿಗೇ ಫೋನ್ ಮಾಡಿದಾಗ ಅವರು ಊಟ ಮಾಡುತ್ತಿದ್ದರು. 

  ನಾನು ಗಟ್ಟಿಮುಟ್ಟಾಗಿಯೇ ಇದ್ದೇನೆ. ಎರಡು ಬಾರಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಕೊರೊನಾ ನನ್ನ ಹತ್ತಿರವೂ ಸುಳಿದಿಲ್ಲ. ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ತಮ್ಮದೇ ಶೈಲಿಯಲ್ಲಿ ಗಹಗಹಿಸಿ ನಗುತ್ತಾ ಹೇಳಿದ ದೊಡ್ಡಣ್ಣ,  ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ಎಲ್ಲರೂ ಗಾಬರಿಯಾಗುತ್ತಾರೆ ಎಂದು ಸುಳ್ಳು ಸುದ್ದಿ ವೀರರಿಗೆ ಮನವಿ ಮಾಡಿದ್ದಾರೆ.

 • ರಾಮಾ ರಾಮಾ ರೇ ರೀಮೇಕ್‍ನಲ್ಲಿ ದೊಡ್ಡಣ್ಣ

  doddanna appears in telugu version on rama rama rey

  ಕನ್ನಡದಲ್ಲಿ ಕಳೆದ ವರ್ಷ ದೊಡ್ಡ ಮಟ್ಟದ ಸದ್ದು ಮಾಡಿದ್ದ ಚಿತ್ರ ರಾಮಾ ರಾಮಾ ರೇ. ಒಬ್ಬ ನೇಣು ಹಾಕುವವನು, ಇನ್ನೊಬ್ಬ ನೇಣು ಹಾಕುವವನು ಒಟ್ಟಿಗೇ ಒಂದೇ ಜೀಪ್‍ನಲ್ಲಿ ಪ್ರಯಾಣ ಮಾಡುವ ವಿಭಿನ್ನ ಆದರೆ, ಸರಳ ನಿರೂಪಣೆಯ ಸಿನಿಮಾ. ಈ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದೆ. ತೆಲುಗಿನಲ್ಲಿ ಈ ಸಿನಿಮಾ ಮಾಡಿರೋದು ರಾಕ್‍ಲೈನ್ ವೆಂಕಟೇಶ್.

  ರಾಮಾ ರಾಮಾ ರೇ ಚಿತ್ರದಲ್ಲಿ ಜಯರಾಮ್ ಮಾಡಿದದ ಜಂಗಯ್ಯನ ಪಾತ್ರದಲ್ಲಿ ದೊಡ್ಡಣ್ಣ ಕಾಣಿಸಿಕೊಂಡಿದ್ದಾರೆ. ಒಬ್ಬ ಕಲಾವಿದನಿಗೆ ಅದೃಷ್ಟವಿದ್ದರೆ ಮಾತ್ರ ಇಂತಹ ಪಾತ್ರಗಳು ಸಿಗುತ್ತವೆ. ನಾನು ಕನ್ನಡದ ರಾಮಾ ರಾಮಾ ರೇ ನೋಡಿದ್ದೇನೆ. ಎಲ್ಲಿಯೂ ಜಯರಾಮ್ ಅವರನ್ನು ಅನುಕರಿಸದೆ, ನನ್ನದೇ ಸ್ವಂತಿಕೆ ಅಳವಡಿಸಿಕೊಂಡಿದ್ದೇನೆ. ಪಾತ್ರಕ್ಕಾಗಿ ಗಡ್ಡ ಬಿಟ್ಟು, ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಈ ಪಾತ್ರದ ಆಫರ್ ಬಂದಾಗ ಅಕ್ಷರಶಃ ಕುಣಿದಾಡುವಂತಾಗಿತ್ತು ಎಂದು ಹೇಳಿಕೊಂಡಿದ್ದಾರೆ ದೊಡ್ಡಣ್ಣ.

 • ಸುಮಲತಾ ಬೆಂಬಲಕ್ಕೆ ರಾಕ್‍ಲೈನ್, ದೊಡ್ಡಣ್ಣ

  rockline and doddanna supports sumalatha

  ಗಂಡ ಸತ್ತ ತಿಂಗಳಿಗೆಲ್ಲ ಈಯಮ್ಮನಿಗೆ ರಾಜಕೀಯ ಬೇಕಿತ್ತಾ..? ಕ್ಷಮೆ ಕೇಳಲ್ರೀ.. ಕ್ಷಮೆ ಕೇಳುವಂತ ತಪ್ಪು ಏನ್ ಮಾಡಿದ್ದೀನಿ ನಾನು..? ಹಿಂದೂ ಸಂಸ್ಕøತಿ ಪ್ರಕಾರವೇ ಮಾತನಾಡಿದ್ದೀನಿ.. ಇವು ಸಚಿವ ಹೆಚ್.ಡಿ.ರೇವಣ್ಣ ಸುಮಲತಾ ವಿರುದ್ಧ ಆಡಿರುವ ಮಾತುಗಳು. ರೇವಣ್ಣನವರ ಈ ಮಾತು ಚಿತ್ರರಂಗದವರನ್ನು ಕೆರಳಿಸಿದೆ. ಅದರಲ್ಲೂ ಅಂಬಿ ಆಪ್ತಬಳಗದಲ್ಲಿದ್ದ ರಾಕ್‍ಲೈನ್, ದೊಡ್ಡಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ದೊಡ್ಡಣ್ಣ : ಜನರಿಗೆ ಯಾರನ್ನು ಯಾವಾಗ ಮನೆಗೆ ಕಳುಹಿಸಬೇಕು ಎಂದು ಗೊತ್ತಿದೆ. ಜನರೇ ನಿರ್ಧರಿಸ್ತಾರೆ ಬಿಡಿ.

  ರಾಕ್‍ಲೈನ್ ವೆಂಕಟೇಶ್ : ಇದರ ಬಗ್ಗೆ ನಾನು ಏನೂ ಮಾತನಾಡೋದಿಲ್ಲ. ಅಂಬರೀಷ್ ನನ್ನ ಪಾಲಿಗೆ ಅಣ್ಣನಂತೆ ಇದ್ದವರು. ಸುಮಲತಾ ಅವರೊಂದಿಗೆ ನಾವಿರುತ್ತೇವೆ. ಉಳಿದದ್ದು ಜನರಿಗೆ ಬಿಟ್ಟಿದ್ದು

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery