` Rapper Chandan Shetty - chitraloka.com | Kannada Movie News, Reviews | Image

Rapper Chandan Shetty

  • Complaint Filed Against Chandan Shetty For Proposing Niveditha Gowda On 'Yuva Dasara' Stage

    complaint filed against chandan shetty for proposing niveditha

    Popular Kannada rapper and composer Chandan Shetty lands in trouble for proposing to his girlfriend Nivedita Gowda on the stage at Yuva Dasara event in Mysuru, which is organised by State Government. 

    Alleging misuse of the public event organised by the government, a couple of complaints has been registered, one with the Mysuru police and another in Bengaluru. The complaints allege that the singer and composer Chandan Shetty misused the Mysuru Yuva Dasara stage on October 4 by proposing his girlfriend Nivedita Gowda and thereafter announcing his engagement with an exchange of rings, in front of the audience. The event was also attended by several dignitaries, invitees and government officials

    Another complaint filed before Bengaluru police, which seeks action against Chandan Shetty for hurting the feelings of Hindu religion, its culture and customs along with the tradition of Karnataka, at an event which has been held as a part of world famous Dasara festival, which has a rich history for over a hundred years.

    It further adds that the singer misused the state's machinery and the resources for personal gain and publicity apart from hurting the religious and cultural sentiments. The ' personal wedding proposal act' as stated in one of the complaints, further accuses Chandan Shetty of hurting the beliefs and insulting feelings of Navratri festival and the Goddess Chamundeshwari.

    Related Articles :-

    ದಸರಾ ವೇದಿಕೆಯಲ್ಲೇ ಐ ಲವ್ ಯೂ ನಿವೇದಿತಾ ಎಂದ ಚಂದನ್ ಶೆಟ್ಟಿ : ನಿಶ್ಚಿತಾರ್ಥ  

  • Kannada Rapper Chandan Shetty Wins Big Boss 5

    big boss 5 winner

    Kannada Rapper Chandan Shetty won Kichcha Sudeep's show Big boss season 5. His close friend Divakar was the runner up of the show. He outdid all the other contestants and emerged as the winner of this season.

    It is also interesting to know that Chandan Shetty was the most loved contestant in spectators eyes. He played extremely well in almost all the tasks. Chandan composed few songs inside Big Boss house an it gained lot of popularity among the audience. Chandan Shetty had an emotional roller costar journey in Big Boss House.

    Chandan shot to fame with rock singles and the 3 Peg song made him a celebrity of sorts. Few Of his songs were huge hit in National And International Platforms. He has composed songs for Kannada films too He came to the Big Boss house as a celebrity contestant. In the end there were two celebrities and one common man in the finale. In the end it was Chandan Shetty who came up triumphant.

    We wish Chandan Shetty heartfelt congratulations.

    Related Articles :-

    Bigg Boss Winner Vijaya Raghavendra - Exclusive

    Akul Balaji Wins Big Boss 2

    Shruthi Wins the Third Season of Bigg Boss

    Pratham Wins the Fourth Edition of Bigg Boss

  • Sarkari Kelasa Devara Kelasa Songs to be Released in Bijapur

    Sarkari Kelasa Devara Kelasa image

    The songs of 'Sarkari Kelasa Devara Kelasa' is all set to be released on 13th Saturday in Bijapur. Rapper Chandan Shetty's musical night has been organised at Bijapur and the songs of the film, will be released there officially

    The film is being scripted and directed by Ravindra. This is his first film as a n independent director. Ravisankar Gowda, Rangayana Raghu, Samyukta Hornad, Ashish Vidyarthi, Raju Talikote, Suchendra Prasad and others play prominent roles in the film.

    Arjun Janya is the music director of this film, while 'Mata' Guruprasad has written the dialogues of the film. Manjunath Nayak is the cameraman for this film.

  • ಅಪರಾಧಿ ನಾನಲ್ಲ..ಅಪರಾಧ ಎನಗಿಲ್ಲ - ಚಂದನ್ ಶೆಟ್ಟಿ

    chandan shetty clears air

    ಬಿಗ್‍ಬಾಸ್ ವಿನ್ನರ್ ಚಂದನ್ ಶೆಟ್ಟಿ, ಪ್ರಖ್ಯಾತರಾಗಿದ್ದು ಮೂರೇ ಮೂರು ಪೆಗ್ಗಿಗೆ ಹಾಡಿನಿಂದ. ಅದು ಕನ್ನಡದ ಆಲ್ಬಂ ಸಾಂಗುಗಳಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಿದ ಹಾಡು. ಆದರೆ, ಚಂದನ್ ಶೆಟ್ಟಿ ಪ್ರಖ್ಯಾತರಾಗುತ್ತಿದ್ದಂತೆಯೇ ಅದೇ ಹಾಡು ವಿವಾದವನ್ನೂ ಸೃಷ್ಟಿಸಿತ್ತು. ಹಾಡಿನ ಸಂಗೀತ ನಿರ್ದೇಶಕ ವಿಜೇತ್, ಆ ಹಾಡು ನನ್ನದು, ಸಂಗೀತ ಸಂಯೋಜಿಸಿದ್ದು ನಾನು. ಆದರೆ, ಎಲ್ಲಿಯೂ ನನ್ನ ಹೆಸರು ಪ್ರಸ್ತಾಪವಾಗುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದರು. ಈ ಕುರಿತು ಚಂದನ್ ಶೆಟ್ಟಿ ಕೊನೆಗೂ ಮೌನ ಮುರಿದಿದ್ದಾರೆ.

    ನಾನು ಎಲ್ಲಿಯೂ ಇಡೀ ಹಾಡು ನನ್ನದು ಎಂದು ಹೇಳಿಕೊಂಡಿಲ್ಲ. ನಾನು ಆ ಹಾಡಿನ ಗಾಯಕ ಅಷ್ಟೆ, ಸಂಗೀತ ಸಂಯೋಜಕ ವಿಜೇತ್. ಅದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ಆ ಹಾಡಿನ ನಿರ್ಮಾಪಕನೂ ನಾನಲ್ಲ. ನಾನೂ ಅವರಂತೆಯೇ ಸಂಭಾವನೆ ಪಡೆದಿದ್ದೇನೆ ಅಷ್ಟೆ. ಇನ್ನು ಹಾಡಿನ ಕೊನೆಯಲ್ಲಿ ಬರುವುದೇ ಮೂರು ಹೆಸರು. ಒಂದು ಐಂದ್ರಿತಾ ರೇ. ಇನ್ನೊಂದು ವಿಜೇತ್ ಹಾಗೂ ಮೂರನೇ ಹೆಸರು ನನ್ನದು. ಹೆಸರನ್ನೇ ಹೇಳುವುದಿಲ್ಲ, ಲಾಭ ಸಿಕ್ಕಿಲ್ಲ ಎನ್ನುವುದನ್ನು ನಿರ್ಮಾಪಕರು ಹೇಳಬೇಕೇ ಹೊರತು ನಾನಲ್ಲ ಎಂದಿದ್ದಾರೆ ಚಂದನ್ ಶೆಟ್ಟಿ.

    ಅದಾದ ಮೇಲೆ ವಿಜೇತ್ ಜೊತೆ ಮಾತನಾಡಿದರಂತೆ ಚಂದನ್ ಶೆಟ್ಟಿ. ಪತ್ರಕರ್ತರು ಕೇಳಿದಾಗ ಗೊಂದಲದಲ್ಲಿ ಏನೇನೋ ಮಾತನಾಡಿದೆ ಎಂದರಂತೆ ವಿಜೇತ್. ನನಗೂ ವಿವಾದವನ್ನು ಬೆಳೆಸುವುದು ಇಷ್ಟವಿರಲಿಲ್ಲ. ಹಾಗಾಗಿ ಸುಮ್ಮನಾದೆ ಎಂದಿದ್ದಾರೆ ಚಂದನ್ ಶೆಟ್ಟಿ. 

  • ಕಿಚ್ಚನ ಎದುರು ಚಂದನ್ ಶೆಟ್ಟಿ ಬಿಚ್ಚಿಟ್ಟ ಲವ್‍ಸ್ಟೋರಿ

    chandan reveals his love story to sudeep

    ಬಿಗ್‍ಬಾಸ್‍ನಲ್ಲಿ ಚಂದನ್ ಶೆಟ್ಟಿ ಕಂಪ್ಲೀಟ್ ಡಿಫರೆಂಟು. ಇದ್ದ ಜಾಗದಲ್ಲಿ ಕೈಗೆ ಸಿಕ್ಕ ಟೇಬಲ್ಲು, ತಟ್ಟೆಗಳಲ್ಲೇ ರಾರ ಹೊಮ್ಮಿಸುವ, ತಾಳ ಹಾಕಿಸುವ, ಆಶು ಕವಿತೆಗಳ ಸುರಿಮಳೆ ಸುರಿಸುವ ಚಂದನ್ ಶೆಟ್ಟಿ, ಬಿಗ್‍ಬಾಸ್‍ನಲ್ಲಿ ಅತ್ಯಂತ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್. ಈಗಾಗಲೇ ಚಂದನ್ ಶೆಟ್ಟಿ ಬಿಗ್‍ಬಾಸ್‍ನಲ್ಲಿ ಜಯಶ್ರೀನಿವಾಸನ್, ನಿವೇದಿತಾ, ಅನುಪಮಾ ಅವರ ಮೇಲೆ ಹೀಗೆಯೇ ಹಾಡು ಕಟ್ಟಿ ಹಾಡಿದ್ದಾರೆ. ಆದರೆ, ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿ ಹಾಡು ಕಟ್ಟಿ ಹಾಡಿದ್ದು ಮಾತ್ರ ಎಲ್ಲರಲ್ಲೂ ಒಂದು ಪ್ರಶ್ನೆ ಹುಟ್ಟಿಸಿತ್ತು.

    ಚಂದನ್ ಶೆಟ್ಟಿ ಬಹುಶಃ ಶ್ರುತಿ ಅವರನ್ನು ಇಷ್ಟಪಡುತ್ತಿದ್ದಾರೇನೋ ಎಂಬ ಪ್ರಶ್ನೆ ಮೂಡೋದಕ್ಕೆ ಕಾರಣ, ಚಂದನ್ ಶೆಟ್ಟಿಯವರ ವರ್ತನೆ. ಇದು ಸುದೀಪ್ ಅವರಿಗೂ ಇತ್ತೆಂದು ಕಾಣುತ್ತೆ. ಚಂದನ್ ಅವರ ಬಳಿ ಮತ್ತೊಮ್ಮೆ ಆ ಹಾಡು ಹೇಳಿಸಿದ ಕಿಚ್ಚ, ಶ್ರುತಿ ಅವರನ್ನೂ ಕೆಣಕಿ, ಉತ್ತರ ಕೊಡ್ತೀರೇನೋ ಎಂಬ ನಿರೀಕ್ಷೆಯಲ್ಲಿದ್ವಿ ಎಂದರು.

    ಚಂದನ್ ಶೆಟ್ಟಿ ಮುಚ್ಚುಮರೆಯೇನೂ ಮಾಡಲಿಲ್ಲ. ಶ್ರುತಿ ಅವರ ಕೆಲವೊಂದು ಗುಣಗಳು, ಅವರ ಕ್ಯೂಟ್‍ನೆಸ್ ನನಗಿಷ್ಟ ಎಂದ ಚಂದನ್, ಅವಳು ನಂಗೆ ಸಿಗೋದಿಲ್ಲ ಎಂದೂ ಹೇಳಿಬಿಟ್ಟರು. ಸುದೀಪ್ ನಗುತ್ತಿದ್ದರೆ, ಅತ್ತ ಶ್ರುತಿ ಪ್ರಕಾಶ್ ಕೂಡಾ ಮುಖ ಮುಚ್ಚಿಕೊಂಡು ನಗುತ್ತಿದ್ದರು. 

    ಪ್ರೀತಿ ವಿಚಾರ.. ಅದು ಇನ್ನೂ ಸೀಕ್ರೆಟ್.

  • ಚಂದನ್ ಶೆಟ್ಟಿ ಜೊತೆ ಮದ್ವೆಯಂತೆ - ಅಗ್ನಿಸಾಕ್ಷಿ ವೈಷ್ಣವಿ ಹೇಳಿದ್ದೇನು..?

    chandan shetty vaishnavi marriage rumors

    ಬಿಗ್‍ಬಾಸ್ ವಿನ್ನರ್ ಆಗಿ ಹೊರಬಂದ ಚಂದನ್ ಶೆಟ್ಟಿ ಮತ್ತು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಮದುವೆಯಾಗುತ್ತಿದ್ದಾರಂತೆ. ಎಂಗೇಜ್‍ಮೆಂಟ್ ಆಗಲಿದೆಯಂತೆ. ಇಂಥಾದ್ದೊಂದು ಸುದ್ದಿ ಎಷ್ಟರಮಟ್ಟಿಗೆ ಹಬ್ಬಿತೆಂದರೆ, ಎಲ್ಲರೂ ಅವರಿಗೆ ಫೋನ್ ಮಾಡಿ ಶುಭಾಶಯ ಹೇಳುವವರೆ. ಸ್ಪಷ್ಟನೆ ಕೇಳದೆ ಶುಭಾಶಯ ಹೇಳೋಕೆ ಕಾರಣವೂ ಇತ್ತು. ವೈಷ್ಣವಿ ಗೌಡ ಹೆಸರಿನ ಫೇಸ್‍ಬುಕ್ ಖಾತೆಯಲ್ಲೇ ಇಂಥಾದ್ದೊಂದು ಸುದ್ದಿ ಹಬ್ಬಿತ್ತು. ಅದು ವೆರಿಫೈಡ್ ಅನ್ನೋ ಸಿಂಬಲ್‍ನ ರೈಟ್ ಮಾರ್ಕ್ ಗುರುತಿನ ಖಾತೆಯಾದ್ದರಿಂದ ಅದು ವೈಷ್ಣವಿ ಗೌಡ ಅವರ ಅಧಿಕೃತ ಖಾತೆಯೆಂದೇ ಅಭಿಮಾನಿಗಳು ನಂಬಿಬಿಟ್ಟಿದ್ದರು.

    ಈಗ ಅದಕ್ಕೆಲ್ಲ ವೈಷ್ಣವಿ ಗೌಡ ತೆರೆ ಎಳೆದಿದ್ದಾರೆ. ತಾನು ಫೇಸ್‍ಬುಕ್‍ನಲ್ಲಿ ಇಲ್ಲವೇ ಇಲ್ಲ. ಅದು ಯಾರ ಅಕೌಂಟೋ ನನಗೆ ಗೊತ್ತಿಲ್ಲ. ನಾನು ಇರೋದು ಇನ್‍ಸ್ಟಾಗ್ರಾಂನಲ್ಲಿ ಮಾತ್ರ. ದಯವಿಟ್ಟು ನಮ್ಮ ವೈಯಕ್ತಿಕ ಜೀವನಕ್ಕೆ ಇಣುಕಬೇಡಿ. ಮದುವೆ, ನಿಶ್ಚಿತಾರ್ಥದ ಸುದ್ದಿಗಳೆಲ್ಲ ವದಂತಿ. ಅದೆಲ್ಲವೂ ಸುಳ್ಳು ಎಂದಿದ್ದಾರೆ ವೈಷ್ಣವಿ ಗೌಡ.

    ಚಂದನ್ ಶೆಟ್ಟಿ ಕೂಡಾ ಪ್ರತಿಕ್ರಿಯೆ ನೀಡಿ, ವೈಷ್ಣವಿ ಗೌಡ ನನಗೆ ವೈಯಕ್ತಿಕವಾಗಿ ಪರಿಚಯ ಕೂಡಾ ಇಲ್ಲ. ಧಾರಾವಾಹಿಯಲ್ಲಿ ನೋಡಿದ್ದೇನಷ್ಟೆ. ಸದ್ಯಕ್ಕೆ ಈಗ ಸಿಕ್ಕಿರುವ ಯಶಸ್ಸನ್ನು ಬಳಸಿಕೊಂಡು ಇನ್ನಷ್ಟು ಬೆಳೆಯುವ ಯೋಚನೆ ಇದೆ. ಮದುವೆಯ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ ಎಂದಿದ್ದಾರೆ.

     

  • ಚಂದನ್ ಶೆಟ್ಟಿ ಬಿಗ್‍ಬಾಸ್ 

    big boss 5 winner

    ಮೂರೇ ಮೂರು ಪೆಗ್ಗಿಗೆ ಹಾಡಿನ ಮೂಲಕ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದ್ದ ಚಂದನ್ ಶೆಟ್ಟಿ, ಬಿಗ್‍ಬಾಸ್‍ನಲ್ಲೂ ಮಿಂಚಿದ್ದು ಹಾಡು, ಸಂಗೀತದ ಮೂಲಕ. ಮಧ್ಯೆ ಮಧ್ಯೆ ಏನೇ ಜಗಳ, ಕಿರಿಕ್ಕುಗಳಾದರೂ... ಚಂದನ್ ಶೆಟ್ಟಿ ಒಳ್ಳೆಯ ಎಂಟರ್‍ಟೈನರ್ ಆಗಿದ್ದರು. ಆ ಸಾಧನೆಯೇ ಅವರನ್ನೀಗ ಬಿಗ್‍ಬಾಸ್ ವಿನ್ನರ್ ಆಗಿಸಿದೆ.

    ಬಿಗ್‍ಬಾಸ್ ಫಿನಾಲೆಯಲ್ಲಿ ಕಿಚ್ಚ ಸುದೀಪ್, ಚಂದನ್ ಶೆಟ್ಟಿಯವರನ್ನು ವಿನ್ನರ್ ಎಂದು ಘೋಷಿಸುತ್ತಿದ್ದಂತೆ, ಆನ್‍ಲೈನ್‍ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂತು. ಈ ಬಾರಿ ಸೀಕ್ರೆಟ್ ಕಾಪಾಡುವ ಸಲುವಾಗಿ, ಅಭಿಮಾನಿಗಳನ್ನು ಶೋ ಶೂಟಿಂಗ್‍ನಿಂದ ಹೊರಗಿಡಲಾಗಿತ್ತು. ಹೀಗಾಗಿ, ವಿನ್ನರ್ ಯಾರು ಎಂಬ ಕುತೂಹಲವನ್ನು ಕಾರ್ಯಕ್ರಮದಲ್ಲಿಯೇ ತಿಳಿದುಕೊಳ್ಳುವಂತಾಯ್ತು.

    ಇನ್ನು ಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ದಿವಾಕರ್, ರನ್ನರ್ ಅಪ್ ಆಗಿರುವುದು ವಿಶೇಷ. ಅದನ್ನು ಕೂಡಾ ಸಾಧನೆಯೆಂದೇ ಹೇಳಬೇಕು. ಏಕೆ ಗೊತ್ತೇ..? ಅವರಿಗೆ ಸ್ಪರ್ಧಿಯಾಗಿದ್ದವರು ಕಿರುತೆರೆಯ ಸೂಪರ್‍ಸ್ಟಾರ್ ಜೆಕೆ. ಕಟ್ಟಕಡೆಯವರೆಗೂ ರೇಸ್‍ನಲ್ಲಿದ್ದ ಜೆಕೆ, 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

    ಅಲ್ಲಿಗೆ ಬಿಗ್‍ಬಾಸ್ ಸೀಸನ್ 5 ಮುಕ್ತಾಯವಾಯಿತು.

    Related Articles :-

    Kannada Rapper Chandan Shetty Wins Big Boss 5

  • ಚಂದನ್ ಶೆಟ್ಟಿ ಲೈಫ್‍ನಲ್ಲಿ ಅಪ್ಪನೇ ಎಲ್ಲ..!

    chandan shetty's immense love for his dad

    ಬಿಗ್‍ಬಾಸ್ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಕೈಗೆ ಏನೇ ಸಿಕ್ಕರೂ ಅದರಲ್ಲೇ ಮ್ಯೂಸಿಕ್ ಟ್ಯೂನ್ ಹಾಕೋದ್ರಲ್ಲಿ ಎತ್ತಿದ ಕೈ. ಟೇಬಲ್, ಸ್ಪೂನು, ತಟ್ಟೆ, ಲೋಟ, ಡಬ್ಬ.. ಯಾವುದರಲ್ಲೇ ಆಗಲೀ.. ಸಂಗೀತ ಹೊರಹೊಮ್ಮಿಸೋ ಪ್ರತಿಭಾವಂತ. ಅದನ್ನು ಬಿಗ್‍ಬಾಸ್‍ನ ಹಲವು ಎಪಿಸೋಡ್‍ಗಳಲ್ಲಿ ಕಣ್ಣಾರೆ ಕಂಡಿದ್ದಾರೆ ಕರ್ನಾಟಕದ ಜನ.

    ಇಷ್ಟಕ್ಕೂ ಅಂಥಾ ಕೌಶಲ್ಯ ಒಲಿದದ್ದು ಹೇಗೆ ಅಂದ್ರೆ, ಚಂದನ್ ಶೆಟ್ಟಿ ಹೇಳಿಕೊಳ್ಳೋದು ಅಪ್ಪನ ಕಥೆಯನ್ನ. ಅವರ ತಂದೆಯದ್ದೊಂದು ಸ್ಟೇಷನರಿ ಅಂಗಡಿಯಿತ್ತು. ಅಲ್ಲಿ ಬಿಡುವಿನಲ್ಲಿದ್ದಾಗ ಅವರ ತಂದೆ ಚಂದನ್ ಶೆಟ್ಟಿಯ ತಂದೆ ಹಾಡುತ್ತಿದ್ದರಂತೆ. ಆಗ ಇವರಿಗೆ ಡಬ್ಬ ತಂದು ಬಾರಿಸಲು ಹೇಳುತ್ತಿದ್ದರಂತೆ. ಅದು ಪ್ರಾಕ್ಟೀಸ್ ಆಗಿ, ಅದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

    ಮಾಡ್ತಾ ಮಾಡ್ತಾ ಯೋಗ.. ಹಾಡ್ತಾ ಹಾಡ್ತಾ ರಾಗ ಅನ್ನೋದು ಇದಕ್ಕೇ ಇರಬೇಕು. ಅಂದಹಾಗೆ ಚಂದನ್ ಶೆಟ್ಟಿ, ತಾವು ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನೆಲ್ಲ ತಂದೆಗೆ ಕೊಡಲು ನಿರ್ಧರಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ವಂತ ಮನೆ ಕಳೆದುಕೊಂಡಿರುವ ಅಪ್ಪನಿಗೆ, ಒಂದು ಮನೆ ಕಟ್ಟಿಸಿಕೊಡಬೇಕು ಅನ್ನೋದು ಚಂದನ್ ಶೆಟ್ಟಿಯ ಕನಸಾಗಿತ್ತು. ಅಪ್ಪನಿಗೆ ಬಿಗ್‍ಬಾಸ್‍ನಲ್ಲಿ ಗೆದ್ದ ಅಷ್ಟೂ ಹಣವನ್ನು ಕೊಟ್ಟಿದ್ದಾರಂತೆ ಚಂದನ್ ಶೆಟ್ಟಿ.

  • ಮಾಸ್ಟರ್ ಆಗುತ್ತಿದ್ದಾರೆ ಚಂದನ್ ಶೆಟ್ಟಿ

    chandan shetty to judge dance realty show

    ಬಿಗ್‍ಬಾಸ್ ವಿನ್ನರ್ ಆದ ಮೇಲೆ ಚಂದನ್ ಶೆಟ್ಟಿ ಅವರ ಅಭಿಮಾನಿಗಳ ಸಂಖ್ಯೆ ಡಬ್ಕುಡಬಲ್ ಆಗಿಬಿಟ್ಟಿದೆ. ಚಂದನ್ ಶೆಟ್ಟಿಗೆ ಸಿನಿಮಾ ಕಡೆಯಿಂದಲೂ ಆಫರ್ ಬರುತ್ತಿವೆ. ಹೀಗಿರುವಾಗಲೇ ಕಿರುತೆರೆಯ ರಿಯಾಲಿಟಿ ಶೋವೊಂದಕ್ಕೆ ಚಂದನ್ ಶೆಟ್ಟಿ ಮೇಷ್ಟ್ರಾಗಿ ಹೋಗುತ್ತಿದ್ದಾರೆ.

    ಕಲರ್ಸ್ ಕನ್ನಡದ ಮಾಸ್ಟರ್ ಡಾನ್ಸರ್ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ ನ್ಯಾಯಮೂರ್ತಿ. ಶ್ರುತಿ ಹರಿಹರನ್, ಮಯೂರಿ ಜೊತೆ ಚಂದನ್ ಶೆಟ್ಟಿ ಕೂಡಾ ಇರಲಿದ್ದಾರೆ. ಅಕುಲ್ ಬಾಲಾಜಿ ನಿರೂಪಣೆಯಿರಲಿದೆ.

  • ಸ್ಟಾರ್ ಪಟ್ಟ ಕೊಡಿಸಿದ ಗೆಳೆಯನನ್ನೇ ಮರೆತರಾ ಚಂದನ್ ಶೆಟ್ಟಿ..?

    who is the composer of 3 peg song

    ಚಂದನ್ ಶೆಟ್ಟಿ, ಈಗ ಬಿಗ್‍ಬಾಸ್ ವಿನ್ನರ್ ಆಗಿ ಫೇಮಸ್. ಅದಕ್ಕೂ ಮುನ್ನ ಅವರು ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಹಾಡಿನಿಂದ ಫೇಮಸ್. ಆ ಹಾಡಿನ ನಂತರವೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಚಂದನ್ ಶೆಟ್ಟಿ, ಆ ಹಾದಿಯಲ್ಲಿ ತನ್ನನ್ನು ಸ್ಟಾರ್ ಪಟ್ಟಕ್ಕೇರಿಸಲು ಕಾರಣರಾದವರನ್ನೇ ಮರೆತರಾ..? ಅಂಥಾದ್ದೊಂದು ಆರೋಪ ಬಂದಿರೋದು ವಿಜೇತ್ ಶೆಟ್ಟಿ ಅವರಿಂದ.

    ಮೂರೇ ಮೂರು ಪೆಗ್ಗಿಗೆ ಹಾಡಿನ ಮ್ಯೂಸಿಕ್ ಕಂಪೋಸ್ ಮಾಡಿದ್ದು ಸಂಗೀತ ನಿರ್ದೇಶಕ ವಿಜೇತ್ ಶೆಟ್ಟಿ. ಗೆಳೆತನಕ್ಕಾಗಿ ಯಾವುದೇ ಅಗ್ರಿಮೆಂಟ್‍ಗಳಿಲ್ಲದೆ ಮಾಡಿದ ಹಾಡು ಅದು. ಆದರೆ, ಹಾಡು ಹಿಟ್ ಆದ ಮೇಲೆ, ಖ್ಯಾತಿ, ಹಣ ಸಿಕ್ಕ ಮೇಲೆ ಚಂದನ್ ಶೆಟ್ಟಿ, ವಿಜೇತ್ ಶೆಟ್ಟಿ ಅವರನ್ನು ಮರೆತೇಬಿಟ್ಟಿದ್ದಾರಂತೆ. ಹಾಡಿನಿಂದ ಏನೇ ಲಾಭ ಬಂದರೂ ಸಮಾನವಾಗಿ ಹಂಚಿಕೊಳ್ಳೋಣ ಎಂದು ಒಪ್ಪಂದವಾಗಿತ್ತು. ಆದರೆ, ಗೆಳೆತನದ ಮಧ್ಯೆ ಮಾತುಕತೆಯನ್ನಷ್ಟೇ ನಂಬಿದ್ದೆವು. ಪತ್ರಗಳಿಲ್ಲ. ಈಗ ಚಂದನ್ ಶೆಟ್ಟಿ, ಫೋನ್‍ಗೂ ಸಿಕ್ಕಲ್ಲ ಎಂದಿದ್ದಾರೆ ವಿಜೇತ್ ಶೆಟ್ಟಿ.

    ಈ ವಿಜೇತ್ ಶೆಟ್ಟಿ, ಅರ್ಜುನ್ ಸರ್ಜಾ ಕುಟುಂಬಕ್ಕೆ ಸೇರಿದವರು. ಏಕೋ ಏನೋ, ತೆರೆಯ ಮೇಲೆ ಕಂಡವರಷ್ಠೇ ಹೀರೋ ಆಗುತ್ತಾರೆ. ಹಾಡನ್ನು ಸೃಷ್ಟಿಸಿದವರ ಹೆಸರು ಹಾಕುವ ಸೌಜನ್ಯವನ್ನೂ ತೋರಿಸಲ್ಲ ಅನ್ನೋದು ವಿಜೇತ್ ಶೆಟ್ಟಿ ಅವರ ದೂರು. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery