` nishvika naidu, - chitraloka.com | Kannada Movie News, Reviews | Image

nishvika naidu,

 • ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..?

  ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..?

  ಗೋಲ್ಡನ್ ಸ್ಟಾರ್ ಗಣೇಶ್ ಅವರ ಅತಿ ದೊಡ್ಡ ಆಸ್ತಿ ಅವರ ನಗು ಮತ್ತು ಕಣ್ಣು. ಈಗ ಅವರ ಕಣ್ಣುಗಳಿಗೇ ಕಣ್ಣು ಹಾಕಿಬಿಟ್ರಾ ಸಿಂಪಲ್ ಸುನಿ ಅನ್ನೋ ಅನುಮಾನ ಬಂದಿದೆ. ಕಾರಣ ಇಷ್ಟೆ, ಗಣೇಶ್ ಹಂಚಿಕೊಂಡಿರೋ ಒಂದು ಫೋಟೋ. ಕಟಕಟೆಯಲ್ಲಿ ಅಂಧರು ಹಾಕಿಕೊಳ್ಳುವ ಕಪ್ಪು ಕನ್ನಡಕ ಮತ್ತು ಕುರುಡರು ಬಳಸುವ ವಾಕಿಂಗ್ ಸ್ಟಿಕ್ ಹಿಡಿದಿರೋ ಗಣೇಶ್, ಅದಕ್ಕೆ ಸಖತ್ ಫಿಲ್ಮ್ ಅನ್ನೋ ಹ್ಯಾಷ್ ಟ್ಯಾಗ್ ಕೊಟ್ಟಿದ್ಧಾರೆ.

  ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ.. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ. ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಚೆಂದವಾಗಿ ಬರೆದೂ ಇದ್ಧಾರೆ.ಅದನ್ನು ಸುನಿ ರೀಟ್ವೀಟ್ ಮಾಡಿದ್ದಾರೆ.

  ಸಖತ್, ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರಕ್ಕೆ ಇತ್ತೀಚೆಗಷ್ಟೇ ನಿಶ್ವಿಕಾ ನಾಯ್ಡು ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದರು ಸುನಿ. ಈಗ ಅಂತಹ ಚೆಲುವೆಯ ಎದುರು ನಿಲ್ಲೋ ನಾಯಕನ ಕಣ್ಣಿನ ಮೇಲೇ ಸಖತ್ ಆಗಿ ಕಣ್ಣಿಟ್ಟುಬಿಟ್ರಾ..?

  ಚಿತ್ರದಲ್ಲಿ ಗಣೇಶ್ ಅಂಧರಾಗಿದ್ದು, ಗಾಯಕನ ಪಾತ್ರ ಮಾಡಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ನಡೆಯುವ ಕಥೆಯೇ ಸಿನಿಮಾ. ಗಣೇಶ್‍ಗೂ ಇಂತಹ ಪಾತ್ರ ಇದೇ ಮೊದಲು. 

 • ಗಣೇಶ್`ಗೆ ಸಿಕ್ಕರು ಸಖತ್ ಟೀಚರ್

  ಗಣೇಶ್`ಗೆ ಸಿಕ್ಕರು ಸಖತ್ ಟೀಚರ್

  ಗೋಲ್ಡನ್ ಸ್ಟಾರ್ ಗಣೇಶ್‍ಗೆ ಹೊಸ ಟೀಚರ್ ಸಿಕ್ಕಿದ್ದಾರೆ. ನೋಡೋಕೆ ಸುಂದರಿ. ಹೆಸರು ನಕ್ಷತ್ರ. ಮಾನಸಿಕವಾಗಿ ಕುಗ್ಗಿದವರಿಗೆ ಭರವಸೆ ತುಂಬುವ ಶಕ್ತಿ ಆಕೆಯ ಮಾತು ಮತ್ತು ಕಣ್ಣ ನೋಟದಲ್ಲಿದೆ. ಇಂತಾ ಟೀಚರ್ ಎಂಟ್ರಿ ಕೊಟ್ಟ ಮೇಲೆ ಗಣೇಶ್ ಲೈಫು ಚೇಂಜ್ ಆಗಬೇಕು ಅಲ್ವೇ..

  ಚೇಂಜ್ ಆಗುತ್ತಾ.. ಇಲ್ವಾ.. ಅನ್ನೋದನ್ನ ಸಿಂಪಲ್ ಸುನಿ ಹೇಳಬೆಕು. ಅವರೇ ಗ್ರೀನ್ ಸಿಗ್ನಲ್ ಕೊಡದಿದ್ದರೆ ನಕ್ಷತ್ರ ಅಲಿಯಾಸ್ ನಿಶ್ವಿಕಾ ನಾಯ್ಡು ತಾನೇ ಏನ್ ಮಾಡೋಕಾಗುತ್ತೆ.. ಹೇಳಿ..

  ಅಂದಹಾಗೆ ಇದು ಸಖತ್ ಸಿನಿಮಾ ಸುದ್ದಿ. ಇತ್ತೀಚೆಗಷ್ಟೇ ಶರಣ್ ಚಿತ್ರಕ್ಕೆ ಹೀರೋಯಿನ್ ಆಗಿದ್ದ ನಿಶ್ವಿಕಾ ನಾಯ್ಡು, ಈಗ ಗಣೇಶ್ ಚಿತ್ರಕ್ಕೂ ಹೀರೋಯಿನ್ ಆಗಿದ್ದಾರೆ. ಸಖತ್ ಚಿತ್ರದಲ್ಲಿ ಅವರದ್ದು ನಕ್ಷತ್ರ ಅನ್ನೋ ಟೀಚರ್ ಪಾತ್ರ. ಮಾರ್ಚ್ 22ರಿಂದ ನಿಶ್ವಿಕಾ ನಾಯ್ಡು ಸಖತ್ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದ, ಹೆಡ್ ಮಾಸ್ಟರ್ ಸಿಂಪಲ್ ಸುನಿ ಹೇಳಿದಂತೆ ಪಾಠ ಮಾಡಲಿದ್ದಾರೆ.

 • ಗುರುವನ್ನೂ ಮೀರಿಸಿದ ಶಿಷ್ಯರು

  ಗುರುವನ್ನೂ ಮೀರಿಸಿದ ಶಿಷ್ಯರು

  ಶಾಲಾ ಪಠ್ಯ ವಿವಾದ ಯಾರನ್ನೂ ಬಿಡುತ್ತಿಲ್ಲ. ಜಾತಿ, ಮತ, ಧರ್ಮ, ಪಂಥ.. ಎಲ್ಲವನ್ನೂ ಮೀರಿದ್ದ ನಟ ಡಾ.ರಾಜ್ ಕುಮಾರ್ ಅವರಿಗೂ ಇದರ ಬಿಸಿ ತಟ್ಟಿದೆ. ಪ್ರಸಕ್ತ ವರ್ಷದ ಪಠ್ಯ ಪುಸ್ತಕ ಪರಿಷ್ಕೃತ ಕ್ರಮದಲ್ಲಿ ೭ ಸಾಹಿತಿಗಳ ಕೃತಿಯನ್ನು ವಾಪಸ್ ಪಡೆಯುವಂತೆ ಸರ್ಕಾರ ಸೂಚಿಸಿದೆ. ಅದರಲ್ಲಿ ಡಾ.ರಾಜ್ ಕುಮಾರ್ ಪಠ್ಯವೂ ಸೇರಿರುವುದು ವಿಶೇಷ.

  ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್, ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಎಂ.ಕAಬಳಿ ಅವರ ಹೀಗೊಂದು ಟಾಪ್ ಪ್ರಯಾಣ, ಸತೀಶ್ ಕುಲಕರ್ಣಿ ಅವರ ಕಟ್ಟತೇವು ನಾವು, ಸುಕನ್ಯಾ ಮಾರುತಿ ಅವರ ಏಣಿ ಹಾಗೂ ಎಂ.ರುಕ್ಕೋಜಿ ರಾವ್ ಅವರು ಬರೆದಿದ್ದ ಡಾ.ರಾಜ್ ಕುಮಾರ್ ಗದ್ಯವನ್ನು ವಾಪಸ್ ಪಡೆಯಲಾಗಿದೆ.

  ೬ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಡಾ.ರಾಜಕುಮಾರ್ ಅವರ ಗದ್ಯವನ್ನು ಸೇರಿಸಲಾಗಿತ್ತು. ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳನ್ನು ಕೋಮುವಾದೀಕರಣ ಮಾಡುತ್ತಿದೆ ಎಂದು ಆರೋಪಿಸಿ ಹಲವು ಸಾಹಿತಿಗಳು ಪಠ್ಯವನ್ನು ವಾಪಸ್ ಪಡೆದಿದ್ದರು. ಅವರಲ್ಲಿ ರುಕ್ಕೋಜಿ ರಾವ್ ಕೂಡಾ ಸೇರಿದ್ದು, ಇದರಿಂದಾಗಿ ಡಾ.ರಾಜ ಕುಮಾರ್ ಪಠ್ಯವನ್ನು ಕೈಬಿಡಬೇಕಾದ ಪರಿಸ್ಥಿತಿ ಬಂದಿದೆ.

  ಸಾಮಾನ್ಯವಾಗಿ ಮೊದಲು ಅನುಮತಿ ನೀಡಲಾಗಿರುತ್ತದೆ. ಏಕೆಂದರೆ ಅನುಮತಿಯಿಲ್ಲದೆ ಪಠ್ಯ ಪುಸ್ತಕ ಮುದ್ರಿಸಲು ಬರುವುದಿಲ್ಲ. ಆದರೆ ವಿವಾದದ ಹಿನ್ನೆಲೆಯಲ್ಲಿ ಪುಸ್ತಕ ಮುದ್ರಣವಾದ ನಂತರ ಅನುಮತಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷದ ಪಠ್ಯ ಪರೀಕ್ಷೆಯಲ್ಲಿ ಈ ಕೃತಿಗಳಿಗೆ ಸಂಬAಧಿಸಿದ ಪ್ರಶ್ನೆಗಳೂ ಇರುವುದಿಲ್ಲ. ಶಿಕ್ಷಕರು ಪಾಠವನ್ನೂ ಮಾಡುವುದಿಲ್ಲ. ಮುಂದಿನ ವರ್ಷದಿಂದ ಪಠ್ಯ ಪುಸ್ತಕದಲ್ಲಿ ಮುದ್ರಣವೂ ಆಗುವುದಿಲ್ಲ.

 • ಜಂಟಲ್‍ಮನ್ ಪ್ರಜ್ವಲ್‍ಗೆ ನಿಶ್ವಿಕಾ ನಾಯ್ಡು ನಾಯಕಿ

  nishvika finalised for prajwal's gentlemaan

  ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ನಿಶ್ವಿಕಾ ನಾಯ್ಡು, ಮತ್ತೊಂದು ಬಿಗ್‍ಸಿನಿಮಾ ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‍ಮನ್ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿ. ರಾಜಹಂಸ ಚಿತ್ರದ ಮೂಲಕ ಗಮನ ಸೆಳೆದಿದ್ದ ಜಡೇಶ್ ಕುಮಾರ್ ಹಂಪಿ ಚಿತ್ರದ ನಿರ್ದೇಶಕ. 

  ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ. ಆ ಸಿನಿಮಾ ಬಿಡುಗಡೆಗೂ ಮುನ್ನವೇ, ಕನ್ನಡ ಚಿತ್ರರಂಗದ ದೊಡ್ಡ ಬ್ಯಾನರ್‍ನಲ್ಲಿ ಒಂದಾದ ದ್ವಾರಕೀಶ್ ಬ್ಯಾನರ್‍ನ ಅಮ್ಮ ಐ ಲವ್ ಯೂಗೆ ನಾಯಕಿಯಾಗಿದ್ದರು. ಅದಾದ ನಂತರ ಕೆ.ಮಂಜು ಪುತ್ರ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿಗೆ ನಾಯಕಿಯಾದರು. ಈಗ.. ಜಂಟಲ್‍ಮನ್‍ಗೆ ಹೀರೋಯಿನ್ ಆಗಿದ್ದಾರೆ ನಿಶ್ವಿಕಾ.

  `ಹೊಸ ನಟಿಯರಿಗೆ ನಟನೆಗೆ ಸ್ಕೋಪ್ ಇರುವ ಪಾತ್ರಗಳು ಸಿಗುವುದು ಅಪರೂಪ. ನಾನಂತೂ ಈ ವಿಷಯದಲ್ಲಿ ಲಕ್ಕಿ. ಈ ಚಿತ್ರದಲ್ಲೂ ಅಷ್ಟೆ, ನನ್ನ ಪಾತ್ರ, ಅಭಿನಯಕ್ಕೆ ತುಂಬಾ ಸ್ಕೋಪ್ ಇದೆ' ಎಂದಿದ್ದಾರೆ ನಿಶ್ವಿಕಾ ನಾಯ್ಡು. ಅಂದಹಾಗೆ ಇದು ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದ ಸಿನಿಮಾ.

 • ಜಂಟಲ್‍ಮನ್ ಮತ್ತೆ ರಿಲೀಸ್

  gentleman to re release once screenings starts

  ಗುರು ದೇಶಪಾಂಡೆ ನಿರ್ಮಾಣದ ಜಂಟಲ್‍ಮನ್, ಲಾಕ್‍ಡೌನ್‍ಗೂ ಮುನ್ನ ರಿಲೀಸ್ ಆಗಿದ್ದ ಚಿತ್ರ. ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು ಪ್ರಧಾನ ಪಾತ್ರದಲ್ಲಿದ್ದ ಚಿತ್ರ, ವಿಭಿನ್ನ ಕಥೆ, ಫಸ್ಟ್ ಕ್ಲಾಸ್ ನಿರೂಪಣೆಯಿಂದ ಗಮನ ಸೆಳೆದಿತ್ತು. ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ಮೊದಲ ಪ್ರಯತ್ನದಲ್ಲಿಯೇ ವ್ಹಾವ್ ಎನಿಸಿಕೊಂಡಿದ್ದರು. ಈಗ ಆ ಚಿತ್ರವನ್ನು ಮತ್ತೆ ರಿಲೀಸ್ ಮಾಡಲು ಮುಂದಾಗಿದ್ದಾರೆ ಗುರು ದೇಶಪಾಂಡೆ.

  `ಸಿನಿಮಾ ನೋಡಿದವರೆಲ್ಲ ಚಿತ್ರವನ್ನು ಹೊಗಳಿದ್ದರು. ಮಾಧ್ಯಮಗಳಲ್ಲಿ ಒಳ್ಳೆಯ ಅಭಿಪ್ರಾಯವೇ ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲೂ ಚಿತ್ರದ ಬಗ್ಗೆ ಮೆಚ್ಚುಗೆ ಸಿಕ್ಕಿತ್ತು. ಚಿತ್ರ ನೋಡಲು ಜನ ಥಿಯೇಟರ್ ಕಡೆ ಬರುವ ಹೊತ್ತಿಗೆ ಲಾಕ್ ಡೌನ್ ಶುರುವಾಯ್ತು. ಹೀಗಾಗಿ ಚಿತ್ರವನ್ನು ಲಾಕ್ ಡೌನ್ ತೆರವಾದ ತಕ್ಷಣ ರಿಲೀಸ್ ಮಾಡುತ್ತಿದ್ದೇವೆ' ಎಂದಿದ್ದಾರೆ ಗುರು ದೇಶಪಾಂಡೆ.

 • ಜಂಟಲ್‍ಮನ್ ಮೆಚ್ಚಿದ ಸ್ಟಾರ್ಸ್

  celebrities appreciates gentleman

  ವಿಭಿನ್ನ ಕಥೆ, ಥ್ರಿಲ್ ಕೊಡುವ ನಿರೂಪಣೆ, ಹೊಸ ಅನುಭವ ಕೊಡುವ ಚಿತ್ರಕಥೆ, ಸಸ್ಪೆನ್ಸ್, ಟ್ವಿಸ್ಟ್.. ಎಲ್ಲವನ್ನೂ ಇಟ್ಟುಕೊಂಡು ಗೆದ್ದ ಸಿನಿಮಾ ಜಂಟಲ್‍ಮನ್. ತಮಿಳು, ತೆಲುಗಿನಲ್ಲಿಯೂ ರೀಮೇಕ್ ಡಿಮ್ಯಾಂಡ್ ಸೃಷ್ಟಿಸಿಕೊಂಡ ಜಂಟಲ್‍ಮನ್ ಚಿತ್ರವನ್ನು ನೋಡಿ ಮೆಚ್ಚಿದ ಸ್ಟಾರ್‍ಗಳಿಗೇನೂ ಕಡಿಮೆಯಿಲ್ಲ.

  ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಸಿಂಪಲ್ ಸುನಿ, ಒಳ್ಳೆ ಹುಡ್ಗ ಪ್ರಥಮ್.. ಹೀಗೆ ಹಲವರು ಚಿತ್ರದ ಬಗ್ಗೆ ಮೆಚ್ಚಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಇನ್ನು ಚಿತ್ರದ ಆಡಿಯೋ ರಿಲೀಸ್ ಮಾಡಿ ಶುಭ ಕೋರಿದ್ದವರು ದರ್ಶನ್. ಒಟ್ಟಿನಲ್ಲಿ ಒಂದು ವಿಭಿನ್ನ ಚಿತ್ರಕ್ಕೆ ಇಡೀ ಚಿತ್ರರಂಗವೇ ಬೆನ್ನಿಗೆ ನಿಂತು ಗೆಲ್ಲಿಸುತ್ತಿದೆ.

  ಜಡೇಶ್ ಕುಮಾರ್ ನಿರ್ದೇಶನ, ಗುರು ದೇಶಪಾಂಡೆ ನಿರ್ಮಾಣ, ಪ್ರಜ್ವಲ್, ನಿಶ್ವಿಕಾ, ಆರಾಧ್ಯ ಅಭಿನಯ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ.. ಎಲ್ಲಕ್ಕಿಂತ ಜಂಟಲ್‍ಮನ್ ಚಿತ್ರವನ್ನು ಗೆಲ್ಲಿಸಿರುವುದು ಸಂಪೂರ್ಣ ಹೊಸದೇ ಎನ್ನಿಸುವ ಕಥೆ.

 • ಜಂಟಲ್‍ಮನ್ ರಿಲೀಸ್ ಡೇಟ್ ಚೇಂಜ್

  gentleman release date fixed

  ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‍ಮನ್ ಚಿತ್ರ ಜನವರಿ 31ಕ್ಕೆ ರಿಲೀಸ್ ಆಗಬೇಕಿತ್ತು. ಟ್ರೇಲರ್ ಮೂಲಕ ಭರ್ಜರಿ ಕುತೂಹಲ ಹುಟ್ಟಿಸಿರುವ ಚಿತ್ರ ಜಂಟಲ್‍ಮನ್. ಸ್ಲೀಪಿಂಗ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆ, ಮಾಫಿಯಾ ಮತ್ತು ಲವ್ ಸ್ಟೋರಿಯ ವಿಭಿನ್ನ ಕಥಾ ಹಂದರ ಹೊಂದಿರುವ ಜಂಟಲ್‍ಮನ್ ಸಿನಿಮಾ ರಿಲೀಸ್ ಒಂದು ವಾರ ಮುಂದಕ್ಕೆ ಹೋಗಿದೆ.

  ಜನವರಿ 31ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಫೆಬ್ರವರಿ 07ರಂದು ರಿಲೀಸ್ ಆಗುವ ಸಾಧ್ಯತೆ ಇದೆ. ಪ್ರಜ್ವಲ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು, ಜಡೇಶ್ ಕುಮಾರ್ ಚಿತ್ರದ ನಿರ್ದೇಶಕ. ಗುರು ದೇಶಪಾಂಡೆ ನಿರ್ಮಾಣದ ಜಂಟಲ್‍ಮನ್ ಚಿತ್ರದಲ್ಲಿ ಪ್ರಜ್ವಲ್, 18 ಗಂಟೆ ನಿದ್ದೆ ಮಾಡುವ ರೋಗಿ.

   

 • ಜಂಟಲ್‍ಮನ್ ರೀಮೇಕಿಗೆ ಡಿಮ್ಯಾಂಡ್

  gentleman remake rights in full demand

  ಜೆಂಟಲ್‍ಮನ್ ರಿಲೀಸ್ ಆಗುವ ಮುನ್ನವೇ ಭರ್ಜರಿ ಸೌಂಡು ಮಾಡುತ್ತಿದೆ. 18 ಗಂಟೆ ನಿದ್ರೆ ಮಾಡುವ ಹೀರೋ, ವೀರ್ಯಾಣು ಸ್ಮಗ್ಲಿಂಗ್ ದಂಧೆ ಬಗ್ಗೆ ಬರುತ್ತಿರುವ ಜಗತ್ತಿನ ಮೊದಲ ಸಿನಿಮಾ ಎನ್ನುವುದಷ್ಟೆ ಅಲ್ಲ, ಚಿತ್ರದ ಟ್ರೇಲರ್ ಭಾರಿ ಕುತೂಹಲ ಹುಟ್ಟಿಸುತ್ತಿದೆ. ಚಿತ್ರದ ರೀಮೇಕ್ ಮಾಡಲು ಡಿಮ್ಯಾಂಡ್ ಸೃಷ್ಟಿಯಾಗೋಕೆ ಕಾರಣ, ಚಿತ್ರದ ಟ್ರೇಲರ್.

  ತೆಲುಗಿನಲ್ಲಿ ಸಾಯಿಕುಮಾರ್, ತಮಿಳಿನಲ್ಲಿ ಸಿಂಬು ಮ್ಯಾನೇಜರ್ ಮತ್ತು ಪಿ.ಸಿ.ಗಣೇಶ್, ಮಲಯಾಳಂನಲ್ಲಿ ಸುನಿಲ್ ಹಾಗೂ ಪ್ರತಿಷ್ಠಿತ ತ್ರಿಶೂಲ್ ಬ್ಯಾನರ್ ಅಪ್ರೋಚ್ ಮಾಡಿವೆ. ಫೈನಲ್ ಆಗಿಲ್ಲ ಎಂದು ಹೇಳಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.

  ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿರೋ ಚಿತ್ರ ಜೆಂಟಲ್‍ಮನ್. ಚಿತ್ರದ ನಿರ್ದೇಶಕ ಜಡೇಶ್ ಕುಮಾರ್. ಒಳ್ಳೆಯ ಕಂಟೆಂಟ್ ಇದ್ದರೆ ಎಲ್ಲಿದ್ದರೂ ಗಮನ ಸೆಳೆಯುತ್ತೆ ಸಿನಿಮಾ ಎಂದು ಖುಷಿಯಾಗಿದ್ದಾರೆ ಡೈರೆಕ್ಟರ್

 • ಜೆಂಟಲ್ ಮ್ಯಾನ್ ತಮಿಳಿಗೆ

  gentleman goes to tamil

  ದಿನಕ್ಕೆ "18 ಗಂಟೆ ನಿದ್ದೆ ಮಾಡುವ ವ್ಯಕ್ತಿಯ" ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿರುವ  "ಜೆಂಟಲ್ ಮ್ಯಾನ್" ಚಿತ್ರ ತಮಿಳಿಗೆ ರಿಮೇಕ್ ಆಗಲಿದೆ.

  ಶುಕ್ರವಾರ (ಫೆ.7) ತೆರೆಕಂಡ ರಾಜಾಹುಲಿ‌ ಖ್ಯಾತಿಯ ಗುರು ದೇಶಪಾಂಡೆ‌ ನಿರ್ಮಾಣದ, ಪ್ರಜ್ವಲ್ ದೇವರಾಜ್ ನಟನೆಯ  "ಜಂಟಲ್ ಮ್ಯಾನ್" ಚಿತ್ರ ವೀಕ್ಷಕರ ಮನ್ನಣೆ ಹಾಗೂ ವಿಮರ್ಶಕರ ಪ್ರಶಂಸೆ ಪಡೆದಿದೆ.

  ಚಿತ್ರವನ್ನು ಶುಕ್ರವಾರ ರಾತ್ರಿ ಚೆನ್ನೈನ ಲೈಕ ಪ್ರೋಡಕ್ಷನ್ ಪ್ರಿವ್ಯೂ  ಚಿತ್ರಮಂದಿರದಲ್ಲಿ ತಮಿಳಿನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ  

   "ಥೇನಾಂಡಾ ಮೂವೀಸ್" ರಾಮನಾರಾಯಣ್ ಅವರ ಪುತ್ರ ಮುರಳಿ ಅವರು, ವೀಕ್ಷಣೆ ಮಾಡಿದ್ದಾರೆ. ಚಿತ್ರ ಅವರಿಗೆ ಬಹಳ ಇಷ್ಟವಾಗಿದೆ. ಚಿತ್ರ ವಿಭಿನ್ನ ಕಥಾವಸ್ತು ಹೊಂದಿದೆ. ಮನುಷ್ಯರನ್ನು ಕಾಡುವ ನಿದ್ರಾಹೀನತೆ ಕಾಯಿಲೆ ಬಗ್ಗೆ ಜನರಿಗೆ ವಿಸ್ತೃತವಾಗಿ ಪರಿಚಯಿಸುವುದರ ಜೊತೆಗೆ ಜಾಗೃತಿಯೂ ಮೂಡಿಸುತ್ತದೆ. ಹಾಗೆಯೇ, ಜನರ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಚಿತ್ರ ಮೂಡಿಬಂದಿದೆ. ಹೀಗಾಗಿ ಜೆಂಟಲ್ ಮ್ಯಾನ್ ಅನ್ನು ಸ್ಟಾರ್ ನಟರಾದ ಜಯಂ ರವಿ ಅಥವಾ ವಿಜಯ್ ಸೇತುಪತಿ ಅವರೊಂದಿಗೆ ತಮಿಳಿಗೆ ರೀಮೇಕ್ ಮಾಡುವ ಆಲೋಚನೆಯಲ್ಲಿ ಮುರಳಿ ಇದ್ದಾರೆ.  ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸುವುದಾಗಿಯೂ ಗುರುದೇಶಪಾಂಡೆ ಅವರಿಗೆ ಹೇಳಿದ್ದಾರೆ.‌ ಆದ್ದರಿಂದ ಚಿತ್ರ ಶೀಘ್ರವೇ ತಮಿಳಿಗೆ ರಿಮೇಕ್ ಆಗುವ ಸಾಧ್ಯತೆ ಹೆಚ್ಚಿದೆ.

  ಈ ಕುರಿತು ಚಿತ್ರದ ನಿರ್ಮಾಪಕ‌ ಗುರು ದೇಶಪಾಂಡೆ ಪ್ರತಿಕ್ರಿಯಿಸಿ, ಚಿತ್ರ ಯಶಸ್ಸು ಸಾಧಿಸುತ್ತದೆ. ಜನರ‌ ಮೆಚ್ಚುಗೆ ಪಡೆಯಲಿದೆ ಎಂಬ ದೃಢ ವಿಶ್ವಾಸ ನಮ್ಮಲ್ಲಿ ಮನೆಮಾಡಿತ್ತು. ಇದೀಗ ಚಿತ್ರ ಬಿಡುಗಡೆಯಾಗಿ, ಜನರಿಗೆ ಇಷ್ಟವಾಗಿದೆ. ತಮಿಳಿನ ಖ್ಯಾತ ನಿರ್ಮಾಪಕರಾದ ಮುರಳಿ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ಸಹ ಬಯಸಿದ್ದಾರೆ. ಚಿತ್ರದ ಹಕ್ಕುಗಳನ್ನು ಖರೀದಿಸುವುದಾಗಿ ಹೇಳಿದ್ದಾರೆ.  ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆಯಿಂದ ಖುಷಿಯಾಗಿತ್ತು. ಇದೀಗ ತಮಿಳಿಗೂ ರಿಮೇಕ್ ಆಗುತ್ತಿರುವ ವಿಷಯ ತಿಳಿದು ಸಂತಸ ಮತ್ತಷ್ಟು ಹೆಚ್ಚಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

   ಥೇನಾಂಡಾ ಮೂವೀಸ್  ರಾಮನಾರಾಯಣ್ ಅವರು ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಮುರಳಿ ಸಹ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಮುರಳಿ ಅವರು ಇಳೈಧಳಪತಿ‌ ಖ್ಯಾತಿಯ ವಿಜಯ್ ನಟನೆಯ "ಮೆರ್ಸಲ್" ಸಿನಿಮಾ ಮಾಡಿದ್ದಾರೆ. ಆ ಚಿತ್ರ ದೊಡ್ಡ ಸಕ್ಸಸ್ ಸಾಧಿಸಿತ್ತು.

 • ಜೆಂಟಲ್‍ಮನ್ ತಪಸ್ವಿನಿ ನಿಶ್ವಿಕಾ

  nishvika naidu image

  ಜಂಟಲ್‍ಮನ್ ಚಿತ್ರದ ಟ್ರೇಲರ್ ನೋಡಿದವರಿಗೆ ಪ್ರಜ್ವಲ್ ದೇವರಾಜ್ ಜೊತೆ ಗಮನ ಸೆಳೆಯುವುದು ನಾಯಕಿ ನಿಶ್ವಿಕಾ ನಾಯ್ಡು. ಮುದ್ದು ಮುದ್ದಾಗಿ ಕಾಣಿಸುವ ನಿಶ್ವಿಕಾ ನಾಯ್ಡು ಅವರದ್ದು, ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದಾರೆ.

  ಸಿಕ್ಕಾಪಟ್ಟೆ ಶಿಸ್ತು, ಪ್ಲಾನ್ ಮಾಡುವ ತಪಸ್ವಿನಿ ಎಂಬ ಡಯಟಿಷಿಯನ್ ಪಾತ್ರ ನಿಶ್ವಿಕಾ ನಾಯ್ಡು ಅವರದ್ದು. ಆರೋಗ್ಯಕ್ಕೆ ತುಂಬಾ ಮಹತ್ವ ನೀಡುವ, ತನ್ನ ಮತ್ತು ತನ್ನ ಕುಟುಂಬದವರ ಬಗ್ಗೆ ವಿಪರೀತ ಕಾಳಜಿ ವಹಿಸುವ, ಪ್ರೀತಿಸುವ ಹುಡುಗನೂ ಶಿಸ್ತಿನಿಂದ ಇರಬೇಕು ಎಂದು ಬಯಸುವ ಹುಡುಗಿ ತಪಸ್ವಿನಿ. ಈ ಪಾತ್ರದಲ್ಲಿ ನಟಿಸುತ್ತಾ ನಾನು ಸೀರೆ ಉಡುವುದನ್ನು ಕಲಿತೆ ಎನ್ನುವ ನಿಶ್ವಿಕಾ ನಾಯ್ಡು ಚಿತ್ರದ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ.

  ಗುರುದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ. ಪ್ರಜ್ವಲ್ ದೇವರಾಜ್, ಸಂಚಾರಿ ವಿಜಯ್, ನಿಶ್ವಿಕಾ ನಾಯ್ಡು ನಟಿಸಿರುವ ಚಿತ್ರದಲ್ಲಿ ಅವರದ್ದು ದಿನಕ್ಕೆ 18 ಗಂಟೆ ನಿದ್ರೆ ಮಾಡುವ ಯುವಕನ ಪಾತ್ರ.

 • ಡಾರ್ಲಿಂಗ್ ಕೃಷ್ಣ ಡಬಲ್ ರೊಮ್ಯಾನ್ಸ್

  ಡಾರ್ಲಿಂಗ್ ಕೃಷ್ಣ ಡಬಲ್ ರೊಮ್ಯಾನ್ಸ್

  ಲವ್ ಮಾಕ್`ಟೇಲ್ ಸಕ್ಸಸ್ ನಂತರ ಫುಲ್ ರೊಮ್ಯಾಂಟಿಕ್ ಸ್ಟಾರ್ ಆಗಿರುವ ಡಾರ್ಲಿಂಗ್ ಕೃಷ್ಣ ಶ್ರೀಕೃಷ್ಣ@ಜಿಮೇಲ್, ಲವ್ ಮಾಕ್`ಟೇಲ್ 2, ಶುಗರ್ ಫ್ಯಾಕ್ಟರಿ, ಮಿ.ಬ್ಯಾಚುಲರ್, ಲಕ್ಕಿ ಮ್ಯಾನ್, ಲವ್ ಮೀ ಆರ್ ಹೇಟ್ ಮೀ.. ಹೀಗೆ ಸಾಲು ಸಾಲು ರೊಮ್ಯಾಂಟಿಕ್ ಸ್ಟೋರಿಗಳನ್ನೇ ಒಪ್ಪಿಕೊಂಡಿದ್ದಾರೆ. ಮಿಲನಾ ನಾಗರಾಜ್, ರಚಿತಾ ರಾಮ್, ಅಶಿಕಾ ರಂಗನಾಥ್, ಜಾಕಿ ಭಾವನಾ, ಸೋನಲ್ ಮಂಥೆರೋ, ಅದ್ವಿತಿ ಶೆಟ್ಟಿ.. ಹೀಗೆ ಹಲವರೊಂದಿಗೆ ರೊಮ್ಯಾನ್ಸ್ ಮಾಡುತ್ತಲೇ ಇದ್ದಾರೆ. ಈಗ ಅವರೆಲ್ಲರ ಲಿಸ್ಟಿಗೆ ಇನ್ನಿಬ್ಬರು ಸೇರ್ಪಡೆ. ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ.

  ಶಿವತೇಜಸ್ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕಿನ್ನೂ ನಾಮಕರಣವಾಗಿಲ್ಲ. ಆದರೆ ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ. ಪ್ರೀತಿ, ಲಿವ್ ಇನ್ ರಿಲೇಶನ್‍ಶಿಪ್, ಮದುವೆಗಳ ಸುತ್ತ ಇರುವ ಕಾಮಿಡಿ ಲವ್ ಸ್ಟೋರಿ ಎಂದಿದ್ದಾರೆ ಶಿವತೇಜಸ್. ಅಕ್ಟೋಬರ್‍ನಲ್ಲಿ ಸಿನಿಮಾ ಶೂಟಿಂಗ್ ಶುರುವಾಗುತ್ತಿದ್ದು, ರಂಗಾಯಣ ರಘು, ತಬಲಾ ನಾಣಿ ಮತ್ತು ಸಾಧು ಕೋಕಿಲ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

 • ತಪ್ಪು ಅಂದ್ರೆ ತಿರುಗಿ ನೋಡ್ತಾರೆ ನಿಶ್ವಿಕಾ..!

  if you call thappu, nishvika naidu turns back

  ಆಕೆಯನ್ನು ಎಲ್ಲರೂ ಕರೆಯೋದು ತಪ್ಪು.. ತಪ್ಪು.. ಅಂತಲೇ. ಯಾಕಂದ್ರೆ ಅದು ಆಕೆಗೆ ಅಭ್ಯಾಸವಾಗಿ ಹೋಗಿದೆ. ತಪ್ಪು ಅವಳದ್ದಲ್ಲ. ಏಕೆಂದರೆ, ಆಕೆಯ ಹೆಸರೇ ತಪಸ್ವಿನಿ. ಅದು ಶಾರ್ಟ್ & ಸ್ವೀಟ್ ಆಗಿ ತಪ್ಪು ಆಗಿದೆ.

  ಇದು ಜಂಟಲ್‍ಮನ್ ನಾಯಕಿ ನಿಶ್ವಿಕಾ ನಾಯ್ಡು ಕಥೆ. ಪ್ರಜ್ವಲ್ ದೇವರಾಜ್ ಎದುರು ನಾಯಕಿಯಾಗಿರೋ ನಿಶ್ವಿಕಾ ನಾಯ್ಡು, ಇಲ್ಲಿ ಡಯಟಿಷಿಯನ್ ಆಗಿ ನಟಿಸಿದ್ದಾರೆ. ದಿನಕ್ಕೆ 18 ಗಂಟೆ ನಿದ್ರೆ ಮಾಡಿ, 6 ಗಂಟೆಯಷ್ಟೇ ಎಚ್ಚರ ಇರೋ ನಾಯಕನಿಗೆ ಆಹಾರ ಹೇಗಿರಬೇಕು.. ಏನಿರಬೇಕು ಎಂದು ಗೈಡ್ ಮಾಡುವ ಪಾತ್ರವದು. ನಾಯಕನಿಗೆ ಡಯಟ್ ಹೇಳಿಕೊಡುತ್ತಲೇ ಆತನ ಜೊತೆಯಲ್ಲಿ ಪ್ರೀತಿಗೆ ಬೀಳುವ ತಪಸ್ವಿನಿ ಅರ್ಥಾತ್ ತಪ್ಪು.. ಮುಂದೆ ಎದುರಿಸುವ ಸವಾಲುಗಳೇ ಚಿತ್ರದ ಕಥೆ.

  ಫಸ್ಟ್ ಟೈಂ ಈ ಚಿತ್ರದಲ್ಲಿ ಸೀರೆಯಲ್ಲಿ ಟ್ರೆಡಿಷನಲ್ ಆಗಿ ನಟಿಸಿದ್ದೇನೆ. ಸಿನಿಮಾದಲ್ಲಿ ಪ್ರೇಕ್ಷಕರಿಗೆ ಹೊಸ ಹೊಸ ವಿಷಯಗಳಿವೆ. ಅರೆರೆ.. ಮತ್ತು ಮರಳಿ ಮನಸ್ಸಾಗಿದೆ.. ಹಾಡುಗಳೂ ಹಿಟ್ ಆಗಿವೆ. ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ ಎನ್ನುತ್ತಾರೆ ನಿಶ್ವಿಕಾ ನಾಯ್ಡು.

  ಜಡೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ಮಾಪಕರಾಗಿದ್ದಾರೆ.

 • ನಿದ್ದೆಯಿಂದ ಎದ್ದ ಜಂಟಲ್‍ಮನ್ ಕುಂಭಕರ್ಣ ಥಿಯೇಟರ್ ಎಂಟ್ರಿ

  gentleman has lot of specialities

  18 ಗಂಟೆ ನಿದ್ರೆ ಮಾಡಿ, 6 ಗಂಟೆಯಷ್ಟೇ ಎಚ್ಚರ ಇರುವ ಕುಂಭಕರ್ಣ ಭರತ್ ಅರ್ಥಾತ್ ಪ್ರಜ್ವಲ್ ದೇವರಾಜ್ ನಿದ್ದೆಯಿಂದ ಎದ್ದು ಬಂದು ಥಿಯೇಟರಿಗೆ ಎಂಟ್ರಿ ಕೊಟ್ಟಿದ್ದಾನೆ. ಅಂಡಾಣು ಕಳ್ಳಸಾಗಣೆ ಮತ್ತು ಸ್ಲೀಪಿಂಗ್ ಸಿಂಡ್ರೋಮ್ ಬ್ಯೂಟಿಯಂತಹ ವಿಭಿನ್ನ ಹೊಸತನದ ಕಥೆ ಇರುವ ಚಿತ್ರವಿದು. ಪ್ರೇಕ್ಷಕರಿಗೆ ಸಂಪೂರ್ಣ ಹೊಸದೇ ಎಂಬ ಫೀಲ್ ಕೊಡುವ ಜಂಟಲ್‍ಮನ್ ಚಿತ್ರದಲ್ಲಿ ಸಂಚಾರಿ ವಿಜಯ್ ಪೊಲೀಸ್ ಆಫೀಸರ್ ಆಗಿದ್ದರೆ, ಭರತ್‍ಗೆ ಚಿಕಿತ್ಸೆ ಕೊಡುವ ಡಯಟಿಷಿಯನ್ ಹಾಗೂ ಪ್ರೇಮಿಯಾಗಿ ನಟಿಸಿರುವುದು ತಪಸ್ವನಿ ಅರ್ಥಾತ್ ನಿಶ್ವಿಕಾ ನಾಯ್ಡು.

  ಪುಟ್ಟ ಹುಡುಗಿ ಬೇಬಿ ಆರಾಧ್ಯ, ಸೀನಿಯರ್ ಕಲಾವಿದರಿಗೂ ಚಾಲೆಂಜ್ ಹಾಕುವಷ್ಟು ಅದ್ಭುತವಾಗಿ ನಟಿಸಿದ್ದಾಳೆ ಎನ್ನುವುದು ಚಿತ್ರತಂಡದ ಕಾಂಪ್ಲಿಮೆಂಟು. ಸ್ವತಃ ನಿರ್ದೇಶಕರಾಗಿರುವ ಗುರು ದೇಶಪಾಂಡೆ, ಈ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಹೇಳಿದ ಕಥೆ ಕೇಳಿಯೇ ಥ್ರಿಲ್ ಆಗಿ ತಾವೇ ನಿರ್ಮಾಪಕರಾಗಿದ್ದಾರೆ ಎನ್ನುವುದು ಒನ್ಸ್ ಎಗೇಯ್ನ್ ಕಥೆಯ ಪವರ್.

  ಕನ್ನಡದಲ್ಲಿಯೇ ಅತ್ಯಂತ ಸ್ಪೆಷಲ್ ಎನಿಸುವ ಕಥೆ, ನಟನೆ, ಪ್ರೆಸೆಂಟೇಷನ್ ಇರುವ ಜಂಟಲ್‍ಮನ್ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ. ವೇಯ್ಟ್ & ಸೀ.

 • ನಿಶ್ವಿಕಾ ನಾಯ್ಡು ಚಿತ್ರಗಳಿಗೆ ದರ್ಶನ್ ಕೃಪಾಶೀರ್ವಾದ

  darshan was chief guest is all nishvika naidu's movie funtions

  ಇದು ನಿಶ್ವಿಕಾ ನಾಯ್ಡು. ಜಂಟಲ್‍ಮನ್ ಚಿತ್ರದ ನಾಯಕಿ ನಿಶ್ವಿಕಾ. ತಪಸ್ವಿನಿ ಅನ್ನೋ ಹೆಸರಿನ ಪಾತ್ರ. ಈಗ ರಿಲೀಸ್ ಆಗುತ್ತಿರುವ ಚಿತ್ರದ ನಾಯಕಿ ನಿಶ್ವಿಕಾಗೆ ಒಂದು ಸರ್‍ಪ್ರೈಸ್ ಅಂದ್ರೆ ಅದು ದರ್ಶನ್. ಏಕೆ ಗೊತ್ತೇ.. ನಿಶ್ವಿಕಾ ನಾಯ್ಡು ಅಭಿನಯದ ಎಲ್ಲ ಚಿತ್ರಗಳಿಗೂ ದರ್ಶನ್ ಬಂದಿದ್ದಾರೆ. ಶುಭ ಕೋರಿದ್ದಾರೆ.

  ನಿಶ್ವಿಕಾ ನಾಯ್ಡು ಕನ್ನಡದಲ್ಲಿ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ ಎಂಟ್ರಿ ಕೊಟ್ಟವರು. ನಂತರ ಅಮ್ಮ ಐ ಲವ್ ಯೂ, ಪಡ್ಡೆಹುಲಿ ಚಿತ್ರಗಳಲ್ಲಿ ನಟಿಸಿರುವ ನಿಶ್ವಿಕಾಗೆ ತಾನು ಅಭಿನಯಿಸಿದ ಪ್ರತಿ ಚಿತ್ರಗಳ ಕಾರ್ಯಕ್ರಮಕ್ಕೂ ದರ್ಶನ್ ಬಂದಿದ್ದಾರೆ ಅನ್ನೋದೇ ಖುಷಿ. ಏಕೆಂದರೆ ಈಗ ರಿಲೀಸ್ ಆಗುತ್ತಿರುವ ಜಂಟಲ್‍ಮನ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೂ ದರ್ಶನ್ ಬಂದು ಶುಭ ಹಾರೈಸಿದ್ದಾರೆ.

  ಗುರು ದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶನವಿದ್ದು, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ನಿದ್ರೆಯ ಕಾಯಿಲೆಯಿಂದ ಬಳಲುವ ನಾಯಕನಾಗಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ.

 • ನಿಶ್ವಿಕಾ ನಾಯ್ಡು ಮುತ್ತು ಕೊಟ್ಟು ಹೊಗೆ ಬಿಟ್ಟಿದ್ದು ಎಲ್ಲಿ..?

  ನಿಶ್ವಿಕಾ ನಾಯ್ಡು ಮುತ್ತು ಕೊಟ್ಟು ಹೊಗೆ ಬಿಟ್ಟಿದ್ದು ಎಲ್ಲಿ..?

  ನಿಶ್ವಿಕಾ ನಾಯ್ಡು. ಇದ್ದಕ್ಕಿದ್ದಂತೆ ಸುದ್ದಿಯಾಗಿದ್ದಾರೆ. ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ನಿಶ್ವಿಕಾ.. ಥೇಟು ಪಕ್ಕದ್ಮನೆ ಹುಡುಗಿ ಗೆಟಪ್‍ನಲ್ಲಿದ್ದವರು. ಸಾಂಪ್ರದಾಯಿಕ ಚೆಲುವೆ. ಈಗ ಸುದ್ದಿಯಾಗಿರೋದು ಮಾತ್ರ ಬೇರೆಯದೇ ಕಾರಣಕ್ಕೆ.

  ನಿಶ್ವಿಕಾ ನಾಯ್ಡು ಗೋವಾದಲ್ಲಿನ ಪಬ್ ವೊಂದರಲ್ಲಿ ಹುಕ್ಕಾ ಹೊಡೆದಿದ್ದಾರೆ. ಅದೂ ಗೆಳತಿಯರ ಜೊತೆ. ಆ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಸ್ನೇಹಿತೆಯ ತುಟಿಗೆ ತುಟಿ ಕೊಟ್ಟು, ಮುತ್ತಿನ ಮತ್ತಿನಲ್ಲಿ ಗೆಳತಿಯ ಬಾಯಿಂದ ಹುಕ್ಕಾ ಹೊಗೆ ಎಳೆದುಕೊಂಡು ಹೊಗೆ ಬಿಡುವ ದೃಶ್ಯ ಕೆಲವರನ್ನು ಬೆಚ್ಚಿಬೀಳಿಸಿದೆ.

  ಇದು ನಾಯಕಿಯರು ಹೀಗೆಯೇ ಇರಬೇಕು ಎನ್ನುವ  ಟಿಪಿಕಲ್ ಸಂಪ್ರದಾಯವಾದಿಗಳನ್ನು ಕೆರಳಿಸಿದ್ದರೆ.. ಅದು ಅವರ ಪರ್ಸನಲ್ ಲೈಫ್.. ವಾಟ್ಸ್ ದ ಪ್ರಾಬ್ಲಂ ಎನ್ನುವವರಿಗೇನೂ ಕೊರತೆಯಿಲ್ಲ. ನಿಶ್ವಿಕಾ ಅವರ ಪರ್ಸನಲ್ ಲೈಫ್‍ನ ವಿಡಿಯೋ, ಫೋಟೋ ಹೊರಬಿಡುವುದು ಕ್ರೈಂ. ಅದರಿಂದ ಸಮಾಜಕ್ಕೆ ಯಾವುದೇ ಹಾನಿಯಾಗಿಲ್ಲದೇ ಇರುವಾಗ ಅದು ಹೇಗೆ ತಪ್ಪಾಗುತ್ತೆ ಎಂದು ಪ್ರಶ್ನಿಸುವವರೂ ಇದ್ದಾರೆ.

  ಸದ್ಯಕ್ಕೆ ನಿಶ್ವಿಕಾ ನಾಯ್ಡು ಗಾಳಿಪಟ 2 ಮತ್ತು ಗುರು ಶಿಷ್ಯರು ಚಿತ್ರದ ರಿಲೀಸ್`ನಲ್ಲಿ ತೊಡಗಿಸಿಕೊಂಡಿದ್ದಾರೆ.

 • ನೋಡಿದವರೆನ್ನಲ್ಲ ಬೆಚ್ಚಗಾಗಿಸೋ ದಿಲ್ ಪಸಂದ್ ಫಸ್ಟ್ ಲುಕ್

  ನೋಡಿದವರೆನ್ನಲ್ಲ ಬೆಚ್ಚಗಾಗಿಸೋ ದಿಲ್ ಪಸಂದ್ ಫಸ್ಟ್ ಲುಕ್

  ದಿಲ್ ಪಸಂದ್. ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಅಭಿನಯದ ಹೊಸ ಸಿನಿಮಾ. ಶಿವತೇಜಸ್ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ ಇದೆ. ಚಿತ್ರದ ಫಸ್ಟ್ ಲುಕ್ ಈಗ ಹೊರಬಿದ್ದಿದೆ. ಫಸ್ಟ್ ಲುಕ್ ನೋಡಿದವರ ಮೈಮನಗಳನ್ನೆಲ್ಲ ಬೆಚ್ಚಗಾಗಿಸುವಂತೆ ಒಂದೇ ಒಂದು ಫೋಟೋ ಹೊರಬಿಟ್ಟಿದ್ದಾರೆ ಶಿವತೇಜಸ್.

  ಲವ್ ಮಾಕ್‍ಟೇಲ್ ನಂತರ ರೊಮ್ಯಾಂಟಿಕ್ ಚಿತ್ರಗಳಲ್ಲೇ ನಟಿಸುತ್ತಿರೋ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಇಬ್ಬರು ಚೆಲುವೆಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ತಬಲಾ ನಾಣಿ, ಅರುಣ್ ಬಾಲರಾಜ್ ಮೊದಲಾದವರು ನಟಿಸುತ್ತಿರೋ ಚಿತ್ರದಲ್ಲಿ ಕಾಮಿಡಿಯೂ ಭರಪೂರ ಇರುವ ಸೂಚನೆ ಇದೆ.

 • ಪ್ರೇಕ್ಷಕರಿಗಷ್ಟೇ ಅಲ್ಲ, ಸ್ಟಾರ್‍ಗಳಿಗೆಲ್ಲ ಮೆಚ್ಚಿದ ಅಮ್ಮ ಐ ಲವ್ ಯು

  amma i love you impresses stars and celebs

  ಅಮ್ಮ ಐ ಲವ್ ಯೂ. ಕನ್ನಡದಲ್ಲಿ ಬಹುದಿನಗಳ ನಂತರ ಬಂದಿರುವ ತಾಯಿಮಗನ ಸೆಂಟಿಮೆಂಟ್ ಕಥೆ. ಮಕ್ಕಳಿಗಾಗಿ ತ್ಯಾಗ ಮಾಡೋ ತಾಯಿಯ ಕಥೆ, ಹೊಸದೇನಲ್ಲ. ಆದರೆ, ಇದು ತಾಯಿಗಾಗಿ ಮಗನೊಬ್ಬ ತ್ಯಾಗ ಮಾಡುವ ಕಥೆ. ಚಿತ್ರದ ಸೆಂಟಿಮೆಂಟ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಸಿನಿಮಾ ನೋಡಿದವರು ತಾಯಿಯನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ. ತಾಯಿ ಇಲ್ಲದವರು ನೆನಪಿಸಿಕೊಂಡು ಕಣ್ಣೀರಾಗುತ್ತಾರೆ.

  ಈ ಸಿನಿಮಾವನ್ನು ಬಹುತೇಕ ಚಿತ್ರರಂಗದ ತಾರೆಗಳೆಲ್ಲ ಮೆಚ್ಚಿ ದಯವಿಟ್ಟು ಸಿನಿಮಾ ನೋಡಿ ಎನ್ನುತ್ತಿರುವುದು ವಿಶೇಷ. ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದ ಶಿವರಾಜ್‍ಕುಮಾರ್, ಧ್ರುವ ಸರ್ಜಾ.. ಚಿತ್ರವನ್ನು ವೇದಿಕೆಯಲ್ಲೇ ಮೆಚ್ಚಿದ್ದರು. ಕಿಚ್ಚ ಸುದೀಪ್, ವಿದೇಶದಲ್ಲಿದ್ದರೂ, ಚಿತ್ರದ ಬಗ್ಗೆ ಕೇಳಿದ್ದ  ವಿಮರ್ಶೆಗಳನ್ನು ನೋಡಿ, ಖುಷಿಯಾಗಿ ಸಿನಿಮಾ ನೋಡಿ ಎಂದಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್, ಸಿನಿಮಾವನ್ನು ನೋಡಿ.. ಪ್ರತಿಯೊಬ್ಬರೂ ಈ ಸಿನಿಮಾ ನೋಡಲೇಬೇಕು ಎನ್ನುತ್ತಿದ್ದಾರೆ. 

  ನಟಿ ರಕ್ಷಿತಾ ಪ್ರೇಮ್, ಮೇಘನಾ ರಾಜ್ ಸೇರಿದಂತೆ ಹಲವರು ಚಿತ್ರವನ್ನು ನೋಡಿ ಮೆಚ್ಚಿ ಹೊಗಳುತ್ತಿದ್ದಾರೆ. ಚಿತ್ರವನ್ನು ನೋಡಿದ ಪ್ರೇಕ್ಷಕರೂ ಕೂಡಾ ಇಂಥಾ ಸಿನಿಮಾ ನಿರ್ಮಿಸಿದ ಯೋಗಿ ದ್ವಾರಕೀಶ್ ಅವರನ್ನು ಅಭಿನಂದಿಸುತ್ತಿರುವುದು ವಿಶೇಷ.

  ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಸಿತಾರಾ, ಚಿಕ್ಕಣ್ಣ, ಪ್ರಕಾಶ್ ಬೆಳವಾಡಿ ಪ್ರಮುಖ ತಾರಾಗಣದಲ್ಲಿರುವ ಸಿನಿಮಾಗೆ, ಗುರುಕಿರಣ್ ಸಂಗೀತವಿದೆ. ಅಮ್ಮಾ.. ನನ್ನ ಈ ಜನುಮ ಹಾಡು.. ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡುವಂತಿದೆ. ನಿರ್ದೇಶಕ ಚೈತನ್ಯ ಮತ್ತೊಮ್ಮೆ ಗೆದ್ದಿದ್ದಾರೆ.

 • ಭಟ್ರ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ರಾಜಕುಮಾರಿ ಪ್ರಿಯಾ ಮತ್ತು ನಿಶ್ವಿಕಾ ನಾಯ್ಡು

  ಭಟ್ರ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ರಾಜಕುಮಾರಿ ಪ್ರಿಯಾ ಮತ್ತು ನಿಶ್ವಿಕಾ ನಾಯ್ಡು

  ರಾಜಕುಮಾರ ಚಿತ್ರದಿಂದ ಕನ್ನಡಿಗರ ಹೃದಯಕ್ಕೇ ಲಗ್ಗೆಯಿಟ್ಟಿದ್ದ ಪ್ರಿಯಾ ಆನಂದ್ ಯೋಗರಾಜ್ ಭಟ್ಟರ ಚಿತ್ರಕ್ಕೆ ಸೇರಿಕೊಂಡಿದ್ದಾರೆ. ಗಾಳಿಪಟ 2ನಲ್ಲಿಯೂ ಮಿಂಚು ಹರಿಸಿದ್ದ ನಿಶ್ವಿಕಾ ನಾಯ್ಡು ಮತ್ತೊಮ್ಮೆ ಭಟ್ಟರ ಕ್ಯಾಂಪ್ ಸೇರಿದ್ದಾರೆ. ಶಿವಣ್ಣ ಮತ್ತು ಪ್ರಭುದೇವ ಅವರೊಂದಿಗೆ ಭಟ್ಟರು ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ.

  ಸದ್ಯಕ್ಕೆ ಗಾಳಿಪಟ 2 ಸಕ್ಸಸ್ ಸಂಭ್ರಮದಲ್ಲಿರುವ ಯೋಗರಾಜ್ ಭಟ್, ಶಿವಣ್ಣ-ಪ್ರಭುದೇವ ಜೋಡಿಯ ಚಿತ್ರದ ಚಿತ್ರೀಕರಣಕ್ಕೆ ಚಿಕ್ಕ ಬ್ರೇಕ್ ಕೊಟ್ಟಿದ್ದಾರೆ. ರಾಕ್‍ಲೈನ್ ಪ್ರೊಡಕ್ಷನ್ಸ್‍ನವರ ಈ ಚಿತ್ರಕ್ಕೆ ಸದ್ಯಕ್ಕೆ ಕುಲದಲ್ಲಿ ಕೀಳ್ಯಾವುದೋ ಅನ್ನೋ ಟೈಟಲ್ ಇಡಲಾಗಿದೆ.

  ಪ್ರಿಯಾ ಆನಂದ್ ರಾಜಕುಮಾರ ಹಾಗೂ ಜೇಮ್ಸ್ ಚಿತ್ರದಲ್ಲಿ ಪುನೀತ್ ಎದುರು ನಾಯಕಿಯಾಗಿ ನಟಿಸಿದ್ದವರು. ಗಣೇಶ್ ಜೊತೆಯಲ್ಲೂ ನಟಿಸಿದ್ದ ಪ್ರಿಯಾಗೆ ಶಿವಣ್ಣನ ಜೊತೆ ಇದು ಮೊದಲ ಸಿನಿಮಾ.

  ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಪ್ರಭುದೇವಗೆ ನಾಯಕಿ. ಭಟ್ಟರ ಜೊತೆ ಅವರದ್ದು 2ನೇ ಸಿನಿಮಾ. ಹಾಗೆ ನೋಡಿದರೆ ಶಿವಣ್ಣಗೂ ಕೂಡಾ ಭಟ್ಟರ ಜೊತೆ ಇದು ಮೊದಲ ಸಿನಿಮಾ.

 • ರಗಡ್ ಹೀರೋ.. ಬಜಾರಿ ಹೀರೋಯಿನ್.. ಪಕ್ಕಾ ಕಮರ್ಷಿಯಲ್

  vasu nan pakka commercial heroine nishvika naidu

  ವಾಸು ನಾನ್ ಪಕ್ಕಾ ಕಮರ್ಷಿಯಲ್. ಈ ಚಿತ್ರದ ನಾಯಕನಷ್ಟೇ ನಾಯಕಿಯ ಕಥೆಯೂ ಇಂಟರೆಸ್ಟಿಂಗ್. ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು. ಅಮ್ಮ ಐ ಲವ್ ಯು ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಮುಖ. ಚೆಲುವೆ. ಈ ಚೆಲುವೆ ಮೊದಲು ನಟಿಸಿದ್ದ ಸಿನಿಮಾ ವಾಸು ನಾನ್ ಪಕ್ಕಾ ಕಮರ್ಷಿಯಲ್. ರಿಲೀಸ್ ಆಗಿದ್ದು ಮಾತ್ರ ಅಮ್ಮ ಐ ಲವ್ ಯು.

  ಈ ಚಿತ್ರದಲ್ಲಿ ನಿಶ್ವಿಕಾ ಪಾತ್ರದ ಹೆಸರು ಮಹಾಲಕ್ಷ್ಮಿ. ಸಂಪ್ರದಾಯಸ್ಥ ಹುಡುಗಿ. ಆದರೆ, ಬಜಾರಿ. ಇಷ್ಟಪಟ್ಟಿದ್ದನ್ನು ಅದೆಷ್ಟೇ ಕಷ್ಟವಾದರೂ ದಕ್ಕಿಸಿಕೊಳ್ಳಲೇಬೇಕು ಎಂದು ಹೊರಡುವ ಹಠಮಾರಿ.

  ಜಾಹೀರಾತಿನ ಮೂಲಕ ಚಿತ್ರರಂಗಕ್ಕೆ ಬಂದವಳು ನಾನು. ವಾಸು.. ಚಿತ್ರಕ್ಕೆ ಅಡಿಷನ್ ಮೂಲಕವೇ ಆಯ್ಕೆಯಾದೆ. ಅಮ್ಮ ಐ ಲವ್ ಯೂ ಚಿತ್ರಕ್ಕೂ ಅಷ್ಟೆ, ಅಡಿಷನ್ ಮೂಲಕವೇ ಆಯ್ಕೆಯಾದೆ. ಕನ್ನಡತಿಯಾಗಿ, ಕನ್ನಡ ನನ್ನ ಮೊದಲ ಆದ್ಯತೆ. ಅವಕಾಶ ಸಿಕ್ಕರೆ ಬೇರೆ ಭಾಷೆಗಳಲ್ಲೂ ನಟಿಸುತ್ತೇನೆ ಅಂತಾರೆ ನಿಶ್ವಿಕಾ ನಾಯ್ಡು.

  ಅಮ್ಮ ಐ ಲವ್ ಯು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಈಗ.. ವಾಸು.. ಬೆಳ್ಳಿತೆರೆಗೆ ಬರುತ್ತಿದೆ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ಜೊತೆ ಪಡ್ಡೆಹುಲಿ ಚಿತ್ರಕ್ಕೂ ನಿಶ್ವಿಕಾ ನಾಯಕಿ. 

  ವಾಸು.. ಚಿತ್ರಕ್ಕೆ ಅನೀಶ್ ತೇಜೇಶ್ವರ್ ನಾಯಕರಾಗಿದ್ದಾರೆ. ರಗಡ್ ಲುಕ್‍ನಲ್ಲಿ ಪ್ರೇಮಿಯಾಗಿ, ಮಗನಾಗಿ ನಟಿಸಿದ್ದಾರೆ. ನಿರ್ಮಾಪಕರೂ ಅವರೇ. ಅಜಿತ ವಾಸನ್ ಉಗ್ಗಿ ನಿರ್ದೇಶನವಿದೆ.

 • ರೀಮೇಕ್ ಮಾಡಿದಾಗ ಬೈದವರು ಸ್ವಮೇಕ್ ಮಾಡಿದಾಗ ನೋಡ್ತಿಲ್ಲ ಯಾಕೆ..?

  gentlemen image

  ಗುರು ದೇಶಪಾಂಡೆ, ರಾಜಾಹುಲಿಯಂತ ಬ್ಲಾಕ್ ಬಸ್ಟರ್ ಕೊಟ್ಟ ಡೈರೆಕ್ಟರ್. ಅವರೀಗ ಹೊಚ್ಚ ಹೊಸ ಸಿನಿಮಾ ಮಾಡಿದ್ದಾರೆ. ಜಂಟಲ್ಮನ್. ಸ್ವತಃ ನಿರ್ದೇಶಕರಾಗಿದ್ದರೂ, ಇನ್ನೊಬ್ಬ ನಿರ್ದೇಶಕನ ಪ್ರಯತ್ನವನ್ನು ಮೆಚ್ಚಿ, ಹೊಸತನದ ಕಥೆಗೆ ನಿರ್ಮಾಪಕರಾಗಿದ್ದಾರೆ.

  ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಅಪರೂಪ ಎನ್ನಿಸುವ ಕಥೆ ಜಂಟಲ್ಮನ್ ಚಿತ್ರದಲ್ಲಿದೆ. ಒಳ್ಳೆಯ ಮೇಕಿಂಗ್, ನಟನೆ, ಚಿತ್ರಕಥೆ ಎಲ್ಲವೂ ಇರುವ ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಆದರೆ.. ಅವರು ನಿರೀಕ್ಷಿಸಿದಷ್ಟು ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ.

  ಇದರ ಬಗ್ಗೆ ನಟ ಸಂಚಾರಿ ವಿಜಯ್ ಬೇಸರ ಮಾಡಿಕೊಂಡಿದ್ದರು. ಒಳ್ಳೆಯ ಸಿನಿಮಾ ಮಾಡಿದ್ದೇವೆ. ನೋಡಿ.. ಗೆಲ್ಲಿಸಿ ಎಂದಿದ್ದರು. ಈಗ ನಿರ್ಮಾಪಕ ಗುರು ದೇಶಪಾಂಡೆ ಕೂಡಾ ಬೇಸರ ಹೊರಹಾಕಿದ್ದಾರೆ. ಸ್ವಮೇಕ್ ಮಾಡಿ ಮಾಡಿ ಎಂದು ಬೈತಾ ಇದ್ರಿ. ಈಗ ಸ್ವಮೇಕ್ ಮಾಡಿದ್ದೇನೆ. ಒಳ್ಳೆಯ ಚಿತ್ರ ಎಂದು ಹೊಗಳಿದ್ದೀರಿ. ಆದರೆ.. ಸಿನಿಮಾ ನೋಡೋಕೆ ಬರ್ತಿಲ್ಲ ಯಾಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್ ಅಭಿನಯದ ಜಂಟಲ್ಮನ್ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ. ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.