` prashanth neel, - chitraloka.com | Kannada Movie News, Reviews | Image

prashanth neel,

  • ಜ್ಯೂ. ಎನ್‍ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಪಕ್ಕಾ. ಸೆನ್ಸೇಷನ್ ಸೃಷ್ಟಿಸಿದ ಟ್ವೀಟ್

    prashanth neel's special birthday wishes to jr ntr

    ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‍ಟಿಆರ್ ಒಟ್ಟಿಗೇ ಸಿನಿಮಾ ಮಾಡ್ತಾರಾ..? ಕೆಜಿಎಫ್ ನೋಡಿದವರ ಮನಸ್ಸು ಹುಚ್ಚೆದ್ದು ಕುಣಿಯುತ್ತಿದೆ. ಪ್ರಶಾಂತ್ ಮೇಕಿಂಗ್ ಸ್ಟೈಲ್ ಮತ್ತು ಎನ್‍ಟಿಆರ್ ಪವರ್‍ಫುಲ್ ಆಕ್ಟಿಂಗ್ ಜೊತೆಯಾದರೆ ಒಂದು ವಂಡರ್‍ಫುಲ್ ಸಿನಿಮಾ ಸೃಷ್ಟಿಯಾಗುತ್ತೆ ಅನ್ನೋದೇ ಥ್ರಿಲ್ ಆಗೋಕೆ ಕಾರಣ. ಅಂಥಾದ್ದೊಂದು ಸುದ್ದಿ ಓಡಾಡುತ್ತಿದ್ದರೂ, ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಅಫಿಷಿಯಲ್ ಆಗಿರಲಿಲ್ಲ. ಅಫ್‍ಕೋರ್ಸ್, ಈಗಲೂ ಅದು ಅಫಿಷಿಯಲ್ ಅಲ್ಲ. ಆದರೆ ಪ್ರಶಾಂತ್ ನೀಲ್ ಅವರ ಒಂದು ಟ್ವೀಟ್, ಎನ್‍ಟಿಆರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪರಿ ಅಭಿಮಾನಿಗಳ ಕನಸಿಗೆ ರೆಕ್ಕೆಪುಕ್ಕ ಮೂಡಿಸಿರುವುದಂತೂ ಸುಳ್ಳಲ್ಲ. ಇಷ್ಟಕ್ಕೂ ಆ ಟ್ವೀಟ್‍ನಲ್ಲಿ ಏನಿದೆ..?

    ಅಂತೂ.. ಒಂದು ಪರಮಾಣು ಸ್ಥಾವರದ ಪಕ್ಕ ಕುಳಿತರೆ ಆ ಅನುಭವ ಹೇಗಿರುತ್ತೆ ಅನ್ನೋ ಫೀಲ್ ಅರ್ಥ ಆಯ್ತು. ಮುಂದಿನ ಸಲ ನನ್ನ ರೇಡಿಯೇಷನ್ ಸೂಟ್ ಧರಿಸಿಕೊಂಡು ನಿಮ್ಮ ಕ್ರೇಜಿ ಎನರ್ಜಿ ಹತ್ತಿರ ಸುಳಿಯುತ್ತೇನೆ. ಹ್ಯಾಪಿ ಬರ್ತ್ ಡೇ ಸೋದರ.. ಶೀಘ್ರದಲ್ಲೇ ಭೇಟಿಯಾಗೋಣ..

    ಇದಿಷ್ಟು ಪ್ರಶಾಂತ್ ನೀಲ್ ಅವರ ಸಾಲು. ಈಗ ಅಭಿಮಾನಿಗಳ ನಿರೀಕ್ಷೆ ಗರಿಗೆದರೋಕೆ ಕಾರಣ ಇಷ್ಟೆ.. ಈ ಮೂಲಕ ಪ್ರಶಾಂತ್ ತಾವು ಮತ್ತು ಎನ್‍ಟಿಆರ್ ಭೇಟಿಯಾಗೋದನ್ನು ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ಭೇಟಿಯಾಗುತ್ತಾರೆ. ನೋ ಡೌಟ್, ಅವರು ಮುಂದಿನ ಭೇಟಿಯಲ್ಲಿ ಮಾತನಾಡೋದು ಸಿನಿಮಾ ಬಗ್ಗೆನೇ ಅನ್ನೊದು ಅಭಿಮಾನಿಗಳ ಲೆಕ್ಕಾಚಾರ. ಅಷ್ಟೇ ಅಲ್ಲ, ಪ್ರಶಾಂತ್ ನೀಲ್ ಅವರಿಗೆ 2 ಕೋಟಿ ಅಡ್ವಾನ್ಸ್ ಕೊಟ್ಟಿದ್ದಾರೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ.

     

  • ಟೀಸರ್`ಗೆ ಮುನ್ನ ಪೇಪರ್ ಹಬ್ಬ

    ಟೀಸರ್`ಗೆ ಮುನ್ನ ಪೇಪರ್ ಹಬ್ಬ

    ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಗೆ ಮೊದಲೇ ಒಂದು ಹವಾ ಎದ್ದುಬಿಟ್ಟಿದೆ. ಹವಾ ಎಬ್ಬಿಸಿರುವುದು ಹೊಂಬಾಳೆ ಫಿಲಂಸ್. ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಆ ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್ ನೀಡುತ್ತಿದೆ ಹೊಂಬಾಳೆ. ಆ ಟೀಸರ್ ಬರೋಕೂ ಮುನ್ನ ಪೇಪರ್ ಬಂದಿದೆ.

    ಕೆಜಿಎಫ್ ಟೈಮ್ಸ್ ಅನ್ನೋ ಪೇಪರ್, ಆ ಪೇಪರ್‍ನಲ್ಲಿ ಒಬ್ಬ ನಾಯಕನನ್ನು ಅವನ ಒಳ್ಳೆಯ ಕೆಲಸಗಳಿಂದ, ಖಳನಾಯಕನನ್ನು ಅವನ ಕೆಟ್ಟ ಕೆಲಸಗಳಿಂದ ನಿರ್ಧರಿಸಲಾಗುತ್ತಿದೆ. ಒಬ್ಬನೇ ವ್ಯಕ್ತಿ ಆ ಎರಡನ್ನೂ ಮಾಡಿದರೆ.. ಅವನು ನಾಯಕನಾ..? ಖಳನಾಯಕನಾ..? ಎಂಬ ಹೆಡ್ಡಿಂಗ್. ಮಧ್ಯೆ ಮಧ್ಯೆ ಕೆಜಿಎಫ್ ಚಾಪ್ಟರ್ 1 ನೆನಪಿಸುವ ಬಾಕ್ಸ್ ಐಟಂಗಳು.. ಜನವರಿ 8ಕ್ಕೆ ರಿವೀಲ್ ಮಾಡ್ತೀವಿ ಅನ್ನೋ ಸೀಲ್.

    ಟೋಟಲ್ ಆಗ್ ಹೇಳ್ಬೇಕಂದ್ರೆ, ಈ ಬಾರಿ ಪ್ರಶಾಂತ್ ನೀಲ್, ಸಿನಿಮಾ ಪ್ರಚಾರವನ್ನು ಇನ್ನೂ ಒಂದು ಹಂತ ಮೇಲಕ್ಕೆ ಹೊತ್ತೊಯ್ಯುತ್ತಿದ್ದಾರೆ. ವೇಯ್ಟ್ ಮಾಡಬೇಕಷ್ಟೆ.. ಜನವರಿ 8ರ ತನಕ.

  • ಡ್ಯೂಪ್ ಇಲ್ಲದೇ ಆ್ಯಕ್ಷನ್ ಮಾಡಿದ್ದಾರಂತೆ ಸಂಜಯ್ ದತ್..!

    ಡ್ಯೂಪ್ ಇಲ್ಲದೇ ಆ್ಯಕ್ಷನ್ ಮಾಡಿದ್ದಾರಂತೆ ಸಂಜಯ್ ದತ್..!

    ಸಂಜಯ್ ದತ್ ಕೆಜಿಎಫ್ ಚಾಪ್ಟರ್ 2ನಲ್ಲಿ ಅಧೀರನಾಗಿ ನಟಿಸುತ್ತಿರೋದು ಗೊತ್ತಿದೆ ತಾನೇ. ಹಿಂದಿ ಹೊರತುಪಡಿಸಿ ಸಂಜಯ್ ದತ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರೋ ಸಿನಿಮಾ ಕೆಜಿಎಫ್ ಚಾಪ್ಟರ್ 2. ಅಫ್ಕೋರ್ಸ್, ಇದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಮಾತು ಬೇರೆ. ಈ ಚಿತ್ರದಲ್ಲಿ ಸಂಜಯ್ ದತ್ ಈ ಹಿಂದೆ ಕಾಣಿಸಿಕೊಳ್ಳದೇ ಇರೋ ಗೆಟಪ್ಪಿನಲ್ಲಿ ನಟಿಸಿದ್ದಾರೆ. ಚಿತ್ರದ ಇನ್ನೂ ಒಂದು ವಿಶೇಷ ಸ್ವಲ್ಪ ಮಾತ್ರ ಹೊರಬಿದ್ದಿದೆ. 

    ಚಿತ್ರದಲ್ಲಿ ಡ್ಯೂಪ್ಗಳನ್ನು ಬಳಸದೆ ಸ್ಟಂಟ್ ಮಾಡಿದ್ದಾರಂತೆ. ಚಿತ್ರೀಕರಣದ ವೇಳೆ ಸಂಜಯ್ ದತ್ ಅವರ ಆರೋಗ್ಯವೂ ಕೆಟ್ಟಿತ್ತು. ಸುದೀರ್ಘ ಚಿಕಿತ್ಸೆ ಪಡೆದುಕೊಂಡಿದ್ದರು. ಜೊತೆಗೆ ವಯಸ್ಸು. ಹೀಗಾಗಿ ಚಿತ್ರತಂಡ ಸೇಫ್ಟಿ ದೃಷ್ಟಿಯಿಂದ ಬಾಡಿ ಡಬಲ್ ಬಳಸೋಕೆ ಪ್ಲಾನ್ ಮಾಡಿತ್ತಂತೆ. ಆದರೆ, ಚಿತ್ರದ ಕ್ವಾಲಿಟಿ ಇಷ್ಟು ಚೆನ್ನಾಗಿ ಬರುತ್ತಿರೋವಾಗ ಬಾಡಿ ಡಬಲ್ ಮಾಡೋದು ಬೇಡ. ಕ್ವಾಲಿಟಿ ಹಾಳಾಗುತ್ತೆ ಎಂದು ಸಂಜಯ್ ದತ್, ಇಡೀ ಚಿತ್ರತಂಡವನ್ನು ಒಪ್ಪಿಸಿದರಂತೆ.

    ಸಂಜಯ್ ದತ್ ಆರೋಗ್ಯದ ಕಾರಣಕ್ಕಾಗಿ ಸಿಂಪಲ್ಲಾದ ಸ್ಟಂಟ್ ಸಂಯೋಜಿಸುವುದಕ್ಕೂ ಮುನ್ನಾಭಾಯ್ ಬೇಡ ಎಂದು ಹೇಳಿದರಂತೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಮಾತನಾಡಿ ನನಗೆ ಅವಮಾನ ಮಾಡಬೇಡಿ. ಪ್ರೇಕ್ಷಕರಿಗೂ ಮೋಸ ಮಾಡಬೇಡಿ. ಸ್ಟಂಟ್ ಎಷ್ಟೇ ಕಷ್ಟದ್ದಾಗಿರಲಿ, ನಾನು ಮಾಡುತ್ತೇನೆ ಎಂದು ಮನವೊಲಿಸಿದರಂತೆ. ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ.

  • ತಮಿಳುನಾಡಿನಲ್ಲೊಂದು.. ದ.ಕೊರಿಯಾದಲ್ಲೊಂದು ದಾಖಲೆ..!

    ತಮಿಳುನಾಡಿನಲ್ಲೊಂದು.. ದ.ಕೊರಿಯಾದಲ್ಲೊಂದು ದಾಖಲೆ..!

    ಕೆಜಿಎಫ್ 2.. ರಿಲೀಸ್ ಆಗಿದೆ ರೆಕಾರ್ಡ್ ಮಾಡೋಕೆ.. ಅನ್ನೋ ಲೆವೆಲ್ಲಿಗೆ ಹೋಗುತ್ತಿರೋ ಸಿನಿಮಾ. ಈಗಾಗಲೇ 1000 ಕೋಟಿ ಕಲೆಕ್ಷನ್ ರೆಕಾರ್ಡ್ ಬರೆದಿರೋ ಕೆಜಿಎಫ್ ಚಾಪ್ಟರ್ ಒಂದರ ಹಿಂದೊಂದು ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಬರೆದಿದ್ದೆಲ್ಲ ಹೊಸ ಇತಿಹಾಸ.

    ಕೆಜಿಎಫ್ ರಿಲೀಸ್ ಆದಾಗ ಒಂದು ದಿನ ಮುನ್ನ ತಮಿಳುನಾಡಿನಲ್ಲಿ ವಿಜಯ್ ಅಭಿನಯದ ಬೀಸ್ಟ್ ರಿಲೀಸ್ ಆಗಿತ್ತು. ಫ್ಯಾನ್ಸ್ ಎಷ್ಟೇ ವಾರ್ ಸೃಷ್ಟಿಸಿದರೂ, ಯಶ್ ಅದನ್ನು ಗಾಂಭೀರ್ಯದಿಂದ ನಿಭಾಯಿಸಿದ್ದರು. ರಿಲೀಸ್ ಆದ ನಂತರ ಆಗಿದ್ದೇ ಬೇರೆ. ವಿಜಯ್ ಚಿತ್ರದ ಕಲೆಕ್ಷನ್‍ನ್ನೂ ಹಿಂದಿಕ್ಕಿ ಮುನ್ನುಗ್ಗಿತು ಕೆಜಿಎಫ್. ತಮಿಳುನಾಡಿನಲ್ಲಿ ಸಿನಿಮಾ ರಿಲೀಸ್ ಆದ ನಂತರ ಸತತ 2 ವಾರ ನೂರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪ್ರತಿದಿನ 5 ಶೋಗಳು ಪ್ರದರ್ಶನ ಕಂಡವು. ಬೀಸ್ಟ್ ಚಿತ್ರವನ್ನೇ ತೆಗೆದು ಕೆಜಿಎಫ್ ಹಾಕಲಾಯಿತು. ಇದಾಗಿ ಈಗ ಕೆಜಿಎಫ್ 2, ತಮಿಳುನಾಡಿನಲ್ಲಿಯೇ 100 ಕೋಟಿ ಕಲೆಕ್ಷನ್ ಮಾಡಿದೆ. 17 ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿದೆ.

    ಕನ್ನಡದಲ್ಲಿ 200 ಕೋಟಿ ಹಾಗೂ  ತೆಲುಗುನಲ್ಲಿ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರೋ ಕೆಜಿಎಫ್ 2, ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಮಲಯಾಳಂನಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ ಬಾಹುಬಲಿ, ಆರ್.ಆರ್.ಆರ್. ನಂತರ 100 ಕೋಟಿ ಬಿಸಿನೆಸ್ ಮಾಡಿದ ಸಿನಿಮಾ ತಮಿಳೇತರ ಸಿನಿಮಾ ಕೆಜಿಎಫ್ 2.

    ಇದರ ಮಧ್ಯೆ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ದ.ಕೊರಿಯಾ ಕಿಮ್ ಜಾಂಗ್ ಉನ್`ನ ಕೊರಿಯಾ ಅಲ್ಲ. ಅದು ಉತ್ತರ ಕೊರಿಯಾ. ಇದು ದ.ಕೊರಿಯಾ. ಮೇ 7ರಂದು ಸಿಯೋಲ್ (ದ.ಕೊರಿಯಾ ರಾಜಧಾನಿ)ನಲ್ಲಿ ಕನ್ನಡ ಮತ್ತು ಹಿಂದಿ ವರ್ಷನ್ ರಿಲೀಸ್ ಆಗುತ್ತಿವೆ.

    ಅಂದಹಾಗೆ ಕೆಜಿಎಫ್‍ನ ಒಟಿಟಿ ರೈಟ್ಸ್ ಅಮೇಜಾನ್‍ಗೆ 320 ಕೋಟಿಗೆ ಸೇಲ್ ಆಗಿದೆ ಅನ್ನೋ ಸುದ್ದಿ ಇದೆ. ಅಧಿಕೃತವಾಗಿಲ್ಲ.

  • ತಮ್ಮದೇ ದಾಖಲೆ ಮುರಿದ ರಾಜಕುಮಾರ ವಿಜಯ್ ಕಿರಗಂದೂರು

    vijay kiragandur breaks his own record

    ಕೆಜಿಎಫ್ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ದಾಖಲೆಗಳಲ್ಲಿ 2ನೇ ಸ್ಥಾನಕ್ಕೆ ಇಳಿದಿರುವುದು ವಿಜಯ್ ಕಿರಗಂದೂರು ಅವರ ಸಿನಿಮಾ. ಅಫ್‍ಕೋರ್ಸ್.. ಮೊದಲನೇ ಸ್ಥಾನಕ್ಕೆ ಏರಿರುವುದೂ ಅವರೇ. ಈ ಮೊದಲು ಕನ್ನಡದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದುದು ರಾಜಕುಮಾರ.

    ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ, 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆ ಚಿತ್ರದ ನಿರ್ಮಾಪಕರೂ ಹೊಂಬಾಳೆ ಪ್ರೊಡಕ್ಷನ್ಸ್‍ನ ವಿಜಯ್ ಕಿರಗಂದೂರು. ಈಗ.. ಕೆಜಿಎಫ್ ಒಂದೇ ವಾರದಲ್ಲಿ ಆ ದಾಖಲೆಯನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಕನ್ನಡದಲ್ಲಿಯೇ, ಮೊದಲ ವಾರದಲ್ಲಿಯೇ 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್.

    ಮೂಲಗಳ ಪ್ರಕಾರ ಕರ್ನಾಟಕದಲ್ಲಿ, ನಿರ್ಮಾಪಕರಿಗೆ ಸಿಕ್ಕಿರುವ ಮೊದಲ ವಾರದ ಷೇರ್ ಸುಮಾರು 30 ಕೋಟಿ. ತೆಲುಗು ಭಾಷೆಯಲ್ಲಿ ಸುಮಾರು 7 ಕೋಟಿ ಹಾಗೂ ತಮಿಳಿನಲ್ಲಿ ಸುಮಾರು 5 ಕೋಟಿ ಷೇರ್ ಸಿಕ್ಕಿದೆ. ಹಿಂದಿಯಲ್ಲಿ ಕೂಡಾ ಕೆಜಿಎಫ್ ಷೇರ್ 8 ಕೋಟಿ ದಾಟಿದೆ.

    ಅಂದಹಾಗೆ ಇದು ನಿರ್ಮಾಪಕರಿಗೆ ಸಿಕ್ಕಿರುವ ಷೇರ್‍ನ ಮಾಹಿತಿ. ಕಲೆಕ್ಷನ್‍ನಲ್ಲಿ 5 ಭಾಷೆಗಳಲ್ಲಿ ಕೆಜಿಎಫ್ ಈಗಾಗಲೇ 100 ಕೋಟಿ ದಾಟಿ ಮುನ್ನುಗ್ಗುತ್ತಿದೆ.

  • ದಂಗಲ್, ಬಾಹುಬಲಿ 2 ಇದ್ದರೂ ಹಿಂದಿಯಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2 : ಹೇಗೆ? ಇಲ್ಲಿದೆ ಉತ್ತರ

    ದಂಗಲ್, ಬಾಹುಬಲಿ 2 ಇದ್ದರೂ ಹಿಂದಿಯಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2 : ಹೇಗೆ? ಇಲ್ಲಿದೆ ಉತ್ತರ

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿದ್ದಾಯ್ತು. ದಾಖಲೆಗಳನ್ನು ಮುರಿದದ್ದೂ ಆಯ್ತು.. ಇಲ್ಲ.. ಇನ್ನೂ ಮುರಿಯುತ್ತಿದೆ. ಅಪರೂಪಕ್ಕೊಮ್ಮೆ ಸೃಷ್ಟಿಯಾಗುವ ಇತಿಹಾಸವಿದು. ಈಗ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ನಂ.2 ಸ್ಥಾನಕ್ಕೇರಿದೆ. 400 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಚಾಪ್ಟರ್ 2ಗೆ ಬಾಹುಬಲಿ 2 ನಂತರದ ಸ್ಥಾನವಿದೆ.

    ಇದನ್ನು ನೋಡಿದ ಬಹುತೇಕರು ಕೇಳುತ್ತಿರೋ ಪ್ರಶ್ನೆ ಇದು. ಕೆಜಿಎಫ್ 2 ಗಳಿಸಿರೋದು ಈಗ 1130 ಕೋಟಿಗಿಂತ ಹೆಚ್ಚು. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು.

    ಬಾಹುಬಲಿ 2 ಗಳಿಕೆ ಸುಮಾರು 1400 ಕೋಟಿ. ಆದರೆ ದಂಗಲ್ 2 ಸಾವಿರ ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಇದೆಯಲ್ಲವೇ.?

    ಕೆಜಿಎಫ್ 2 ನಂ.2 ಆಗಿರೋದು ಹಿಂದಿ ಭಾಷೆಯಲ್ಲಿ ಮತ್ತು ಪ್ರಾದೇಶಿಕ ಮಾರ್ಕೆಟ್‍ನಲ್ಲಿ. ಬಾಹುಬಲಿ 2 ಕೂಡಾ ಅಷ್ಟೆ.

    ದಂಗಲ್ ಸಿನಿಮಾ ಹಿಂದಿಯಲ್ಲಿ ಹೆಚ್ಚೂ ಕಡಿಮೆ 400 ಕೋಟಿ ಗಳಿಸಿತ್ತು. ಉಳಿದಂತೆ ದಂಗಲ್‍ನ ದೊಡ್ಡ ಮೊತ್ತ ಬಂದಿದ್ದು ಚೀನಾ ಮಾರ್ಕೆಟ್‍ನಲ್ಲಿ. ಮ್ಯಾಂಡರಿನ್ ಭಾಷೆಗೆ ಡಬ್ ಆಗಿ ರಿಲಿಸ್ ಆದ ದಂಗಲ್, ಅಲ್ಲಿ ದೊಡ್ಡ ಮೊತ್ತ ಗಳಿಸಿತ್ತು.

    ಸ್ಥಳೀಯ ಅರ್ಥಾತ್ ಇಂಡಿಯನ್ ಮಾರ್ಕೆಟ್ ಬಾಕ್ಸಾಫೀಸ್‍ನಲ್ಲಿ ಈಗಲೂ ಬಾಹುಬಲಿ 2, ನಂ.1 ಸ್ಥಾನದಲ್ಲಿದೆ. ಕೆಜಿಎಫ್ ಚಾಪ್ಟರ್ 2 ನಂ.2 ಸ್ಥಾನಕ್ಕೇರಿದೆ.

  • ನನ್ನ ಹೆಸರಲ್ಲಿ ಮೇಯ್ಲ್ ಬಂದರೆ ಎಚ್ಚರಿಕೆ  - ಕೆಜಿಎಫ್ ನಿರ್ದೇಶಕರ ವಾರ್ನಿಂಗ್

    kgf director warns about fake message under his name

    ನಿಮಗೆ ನಮ್ಮ ಸಿನಿಮಾದಲ್ಲಿ ನಟಿಸುವ ಆಸೆಯಿದೆಯೇ..? ನಮ್ಮಲ್ಲಿ ನಿಮಗಿದೆ ಅವಕಾಶ..! ಬನ್ನಿ, ಭಾಗವಹಿಸಿ, ಅವಕಾಶ ನಿಮ್ಮದಾಗಿಸಿಕೊಳ್ಳಿ..

    ಇಂಥಾದ್ದೊAದು ಮೇಯ್ಲ್ ಬಂದರೆ ಉಪೇಕ್ಷೆ ಮಾಡುವವರೇ ಹೆಚ್ಚು. ಆದರೆ, ಮೇಯ್ಲ್ ಕಳಿಸಿರೋದು ಪ್ರಶಾಂತ್ ನೀಲ್ ಆದರೆ... ಪ್ರತಿಭಾವಂತರು ಎದ್ದೆನೋ.. ಬಿದ್ದೆನೋ.. ಎಂದು ಓಡೋಡಿ ಬರುತ್ತಾರೆ. ಆದರೆ ಅದೂ ನಿಜವಲ್ಲ. ನನ್ನ ಹೆಸರಲ್ಲಿ ಮೇಯ್ಲ್ ಬಂದರೆ ಎಚ್ಚರಿಕೆ, ಮೋಸ ಹೋಗಬೇಡಿ ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಎಚ್ಚರಿಕೆ ಕೊಟ್ಟಿದ್ದಾರೆ.

    ಪ್ರಶಾಂತ್‌ನೀಲ್‌ಕನೆಕ್ಟ್÷@ಜಿಮೇಯ್ಲ್.ಕಾಮ್ ಹೆಸರಲ್ಲಿ ಕೆಲವು ಪ್ರತಿಭಾವಂತ ಕಲಾವಿದರಿಗೆ ಪ್ರಶಾಂತ್ ಹೆಸರಲ್ಲಿಮೆಸೇಜ್ ಹೋಗಿದೆ.

    ಹೀಗಾಗಿ ಸ್ವತಃ ಪ್ರಶಾಂತ್ ನೀಲ್ ಅವರೇ ಎಚ್ಚರಿಕೆ ನೀಡಿದ್ದಾರೆ. ಕೆಜಿಎಫ್ ಕುರಿತ ಯಾವುದೇ ಮೆಸೇಜ್ ಇದ್ದರೆ, ಅದನ್ನು ಹೊಂಬಾಳೆ ಫಿಲಂಸ್ ಮೂಲಕವೇ ನಡೆಸುತ್ತೇವೆ. ಅದು ಮಾತ್ರವೇ ಅಧಿಕೃತ ಎಂದು ಎಚ್ಚರಿಕೆ ನೀಡಿದ್ದಾರೆ ಪ್ರಶಾಂತ್ ನೀಲ್.

  • ಪ್ರಭಾಸ್ ಚಿತ್ರ ಮಾಡ್ತಾರಾ ಕೆಜಿಎಫ್ ಪ್ರಶಾಂತ್ ನೀಲ್..?

    will prashanth neel to direct prabhas ?

    ಕೆಜಿಎಫ್ ಚಿತ್ರ ಇಡೀ ದೇಶವನ್ನು ಸಮ್ಮೋಹನಗೊಳಿಸಿದೆ. ಸಹಜವಾಗಿಯೇ ಕೆಜಿಎಫ್, ತೆಲುಗು ಸ್ಟಾರ್ ನಟ ಪ್ರಭಾಸ್‍ರನ್ನೂ ಆಕರ್ಷಿಸಿದೆ. ಚಿತ್ರ ನೋಡಿದ ಪ್ರಭಾಸ್‍ಗೆ ಇಷ್ಟವಾಗಿರೋದು ನಿರ್ದೇಶಕ ಪ್ರಶಾಂತ್ ನೀಲ್. ಹೀಗಾಗಿ ತಮಗೊಂದು ಸಿನಿಮಾ ಮಾಡಿಕೊಡಿ ಎಂದು ಪ್ರಭಾಸ್, ಪ್ರಶಾಂತ್ ನೀಲ್‍ರನ್ನು ಕೇಳಿಕೊಂಡಿದ್ದಾರಂತೆ.

    ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್‍ನಲ್ಲೇ ಪ್ರಭಾಸ್‍ರ ಮುಂದಿನ ಸಿನಿಮಾ ನಿರ್ಮಾಣವಾಗಲಿದೆ. ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.

    ಪ್ರಶಾಂತ್ ನೀಲ್ ಅವರ ಬಗ್ಗೆ ಪ್ರಭಾಸ್ ಬಳಿ ಸ್ವತಃ ರಾಜಮೌಳಿ ಶಿಫಾರಸು ಮಾಡಿದ್ದಾರೆ ಎನ್ನುವುದು ತೆಲುಗು ಚಿತ್ರರಂಗದಿಂದ ತೇಲಿ ಬರುತ್ತಿರುವ ಸುದ್ದಿ. ಸುದ್ದಿಯನ್ನು ಇದುವರೆಗೆ ಪ್ರಶಾಂತ್ ನೀಲ್ ಕನ್‍ಫರ್ಮ್ ಮಾಡಿಲ್ಲ.

  • ಪ್ರಭಾಸ್ ಚಿತ್ರದಲ್ಲಿ ಉಡಾಳ್ ಬಾಬು

    ಪ್ರಭಾಸ್ ಚಿತ್ರದಲ್ಲಿ ಉಡಾಳ್ ಬಾಬು

    ರತ್ನನ್ ಪ್ರಪಂಚ ಸಿನಿಮಾ ನೋಡಿ ಪ್ರಶಾಂತ್ ನೀಲ್ ಅವರು ಫೋನ್ ಮಾಡಿದ್ದರು. ನನ್ನ ನಟನೆಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಸಲಾರ್ ಸಿನಿಮಾದಲ್ಲಿ ಒಂದು ಪಾತ್ರವಿದೆ. ಮಾಡ್ತೀಯಾ ಎಂದು ಕೇಳಿದ್ದರು. ಅದಾದ ಎಷ್ಟೋ ದಿನಗಳ ನಂತರ ಫೋಟೊ ಶೂಟ್ ಮುಗಿಸಿದೆ. ನನ್ನ ಪಾತ್ರದ ಬಗ್ಗೆಏನೂ ಹೇಳೋಕಾಗಲ್ಲ. ತುಂಬಾ ಡಿಫರೆಂಟ್ ಆಗಿದೆ. ನನ್ನ ನಟನೆ ನಿರ್ದೇಶಕರಿಗೆ ಇಷ್ಟವಾಗಿದೆ. ನೀಲ್ ಅವರು ಖುಷಿಯಾಗಿದ್ದಾರೆ. ಚೆನ್ನಾಗಿ ನಟಿಸುತ್ತಿದ್ದೀರ ಎಂದಿದ್ದಾರೆ. ಅಷ್ಟು ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ಅಂತಹುದರಲ್ಲಿ ನನ್ನ ನಟನೆಯನ್ನು ಅವರು ಹೊಗಳುವುದೆಂದರೆ ನನಗಿಂತ ಅದೃಷ್ಟವಂತ ಇನ್ನೊಬ್ಬನಿಲ್ಲ.. ಎಂದು ಥ್ರಿಲ್ಲಾಗಿದ್ದಾರೆ ಉಡಾಳ್ ಬಾಬು ಪ್ರಮೋದ್.

    ರತ್ನನ್ ಪ್ರಪಂಚ ಸಿನಿಮಾದಲ್ಲಿ ಉಡಾಳ್ ಬಾಬು ಪಾತ್ರದಲ್ಲಿ ನಟಿಸಿ, ಪಾತ್ರದ ಮೂಲಕವೇ ಫೇಮಸ್ ಆದ ಪ್ರಮೋದ್, ಈಗ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದ್ದಾರೆ.ಅದೇ ಪಾತ್ರ ಪ್ರಮೋದ್ ಅವರಿಗೆ

    ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟಿದೆ. ಸಲಾರ್, ಹೊಂಬಾಳೆಯ ಸಿನಿಮಾ. ಪ್ರಶಾಂತ್ ನೀಲ್ ಸಿನಿಮಾ. ಶೃತಿ ಹಾಸನ್,ಪ್ರಥ್ವಿರಾಜ್ ಸುಕುಮಾರನ್, ಜಗಪತಿ ಬಾಬುರಂತ ಘಟಾನುಘಟಿಗಳು ನಟಿಸುತ್ತಿರೋ ಸಿನಿಮಾ. ಅಂತಹ ಸಲಾರ್ ಸಿನಿಮಾದಲ್ಲಿವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ ಪ್ರಮೋದ್.

    ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಪ್ರಮೋದ್ ಗೀತಾ ಬ್ಯಾಂಗಲ್ ಸ್ಟೋರ್ಸ್ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಎದುರು ಸೈ ಎನಿಸಿಕೊಂಡರು.ರತ್ನನ್ ಪ್ರಪಂಚ ಸ್ಟಾರ್ ಡಮ್ ಕೊಟ್ಟಿದೆ. ಬಾಂಡ್ ರವಿಯಲ್ಲಿ ಹೀರೋ ಆಗಿರುವ ಪ್ರಮೋದ್, ಈಗ ಸಲಾರ್ಗೆ ಎಂಟ್ರಿ ಕೊಟ್ಟಿದ್ದಾರೆ.

  • ಪ್ರಭಾಸ್ ನಂತರ ಎನ್‍ಟಿಆರ್ ಜೊತೆಗೆ ಕೆಜಿಎಫ್ ಪ್ರಶಾಂತ್ ನೀಲ್

    ಪ್ರಭಾಸ್ ನಂತರ ಎನ್‍ಟಿಆರ್ ಜೊತೆಗೆ ಕೆಜಿಎಫ್ ಪ್ರಶಾಂತ್ ನೀಲ್

    ಉಗ್ರಂ ಚಿತ್ರದ ಮೂಲಕ ತಮ್ಮ ಪ್ರತಿಭೆ ಸಾಬೀತು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದು ಗೊತ್ತೇ ಇದೆ. ಕೆಜಿಎಫ್ ಚಾಪ್ಟರ್ 2 ಇನ್ನೂ ಬಿಡುಗಡೆಯಾಗಬೇಕಿದೆ. ಕೆಜಿಎಫ್ ಚಾಪ್ಟರ್ 2 ಮುಗಿಸಿದ ನಂತರ ಡಾರ್ಲಿಂಗ್ ಪ್ರಭಾಸ್ ಜೊತೆ ಸಲಾರ್ ಚಿತ್ರ ಮಾಡುತ್ತಿರುವ ಪ್ರಶಾಂತ್ ನೀಲ್, ಮುಂದಿನ ಚಿತ್ರವನ್ನೂ ಟಾಲಿವುಡ್‍ನ ಮತ್ತೊಬ್ಬ ಸೂಪರ್ ಸ್ಟಾರ್ ಎನ್‍ಟಿಆರ್ ಜೊತೆಗೆ ಮಾಡಲು ರೆಡಿಯಾಗಿದ್ದಾರೆ.

    ಎನ್‍ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಮೈತ್ರಿ ಮೂವಿ ಮೇಕರ್ಸ್. ರಂಗಸ್ಥಳಂ, ಶ್ರೀಮಂತುಡು, ಜನತಾ ಗ್ಯಾರೇಜ್, ಉಪ್ಪೆನದಂತಹ ಸೂಪರ್ ಹಿಟ್ ಚಿತ್ರಗಳನ್ನೇ ನೀಡಿರುವ ಸಂಸ್ಥೆ ಮೈತ್ರಿ. ಎನ್‍ಟಿಆರ್ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಪ್ರಾಜೆಕ್ಟ್ ಘೋಷಿಸಿದೆ ಮೈತ್ರಿ. ಪ್ರಶಾಂತ್ ನೀಲ್ ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಬೆಲೆ ಬಾಳುವ ಮಣ್ಣು, ರಕ್ತದಲ್ಲಿ ನೆನೆದ ಮಣ್ಣು ಎನ್ನುವ ಲೈನ್ ಟ್ವೀಟ್ ಮಾಡುವ ಮೂಲಕ ಕಥೆ ಹೇಗಿರಬಹುದು ಅನ್ನೋ ಸುಳಿವನ್ನೂ ಕೊಟ್ಟಿದ್ದಾರೆ ಪ್ರಶಾಂತ್ ನೀಲ್.

  • ಪ್ರಶಾಂತ್ ನೀಲ್ ಐಡಿಯಾ ಕೇಳಿ ನಕ್ಕಿದ್ದರಂತೆ ಯಶ್..!

    yash reveals interesting story behind kgf

    ಕೆಜಿಎಫ್ ಮೇಲೆ ನಂಬಿಕೆ ಇಡೋಕೆ ಅತಿ ದೊಡ್ಡ ಕಾರಣ ಯಶ್ ಅಷ್ಟೇ ಅಲ್ಲ, ಪ್ರಶಾಂತ್ ನೀಲ್. ಅದಕ್ಕೂ ಮುನ್ನ ಪ್ರಶಾಂತ್ ನೀಲ್ ಮಾಡಿದ್ದ ಉಗ್ರಂ ಚಿತ್ರ, ಅದ್ಭುತ ಪ್ರೆಸೆಂಟೇಷನ್‍ನಿಂದ ಗಮನ ಸೆಳೆದಿದ್ದ ಸಿನಿಮಾ. ಬಹುಶಃ ಆ ಸಿನಿಮಾ ಮಾಡದೇ ಹೋಗಿದ್ದರೆ, ಪ್ರಶಾಂತ್ ನೀಲ್ ಇಂದು ಕೆಜಿಎಫ್ ಮಾಡೋಕೆ ಸಾಧ್ಯವೇ ಇರಲಿಲ್ಲ. ಆ ರಹಸ್ಯವನ್ನೂ ಯಶ್ ಅವರೇ ಬಿಚ್ಚಿಟ್ಟಿದ್ದಾರೆ.

    ಪ್ರಶಾಂತ್ ಅದ್ಭುತ ನಿರ್ದೇಶಕ. ಆದರೆ, ಕೆಟ್ಟದಾಗಿ ನರೇಶನ್ ಮಾಡ್ತಾರೆ. ಅವರು ಕಥೆಯನ್ನು ನಮಗೆ ಹೇಳುವಾಗ, ಅವರ ಕಲ್ಪನೆಯ ಹತ್ತಿರಕ್ಕೂ ಹೋಗೋಕೆ ಆಗಲ್ಲ. ಮೊದಲ ಬಾರಿ ಇವರು ಕೆಜಿಎಫ್ ಐಡಿಯಾ ಹೇಳಿದಾಗ ನಾನೇ ನಕ್ಕುಬಿಟ್ಟಿದ್ದೆ. ಏನೋ ಸ್ಪೆಷಲ್ ಇದೆ ಎನ್ನಿಸಿದರೂ ಏನು ಎಂದು ಅರ್ಥವಾಗಿರಲಿಲ್ಲ. ಉಗ್ರಂ ನೋಡಿದ ಮೇಲೆ, ನನಗೆ ಆ ಕಥೆ ಹೇಳಿದ ಇವರೇನಾ ಉಗ್ರಂ ಮಾಡಿದ್ದು ಎನ್ನುವಷ್ಟು ಅಚ್ಚರಿಯಾಗಿತ್ತು. ನಂತರ ಕೆಜಿಎಫ್ ಒಪ್ಪಿದೆವು. ಕಥೆ ಹೇಳುವಾಗಿನ ಪ್ರಶಾಂತ್ ನೀಲ್ ಬೇರೆ. ಡೈರೆಕ್ಷನ್ ಮಾಡುವಾಗಿನ ಪ್ರಶಾಂತ್ ನೀಲ್ ಬೇರೆ. ಅವರಿಗೆ ಏನು ಬೇಕು ಅನ್ನೋದು ಅತ್ಯಂತ ಸ್ಪಷ್ಟವಾಗಿ ಗೊತ್ತು. ಅದನ್ನು ಅವರು ಎಲ್ಲಿಯೂ ಬಿಟ್ಟುಕೊಡದೇ ಮಾಡ್ತಾರೆ. ಅಂತಹ ಬೆರಗು ಹುಟ್ಟಿಸುವ ನಿರ್ದೇಶಕ ಪ್ರಶಾಂತ್ ನೀಲ್''

    ಇದು ಯಶ್, ಪ್ರಶಾಂತ್ ಬಗ್ಗೆ ಹೇಳಿರುವ ಮಾತು. ಯಶ್ ಪ್ರಕಾರ, ಪ್ರಶಾಂತ್ ನೀಲ್ ಅವರ ಅತಿದೊಡ್ಡ ಬಂಡವಾಳ, ಹೂಡಿಕೆ ಉಗ್ರಂ. ಈಗ ಕೆಜಿಎಫ್ ಬರುತ್ತಿದೆ. ಪ್ರಶಾಂತ್ ನೀಲ್‍ಗಷ್ಟೇ ಏಕೆ, ಕೆಜಿಎಫ್.. ಕನ್ನಡ ಚಿತ್ರರಂಗಕ್ಕೇ ಒಂದು ಚಾಲೆಂಜ್. ಗೆಲ್ಲಬೇಕು.

  • ಪ್ರಶಾಂತ್ ನೀಲ್ ಜೊತೆ ಶ್ರೀಮುರಳಿ ಹೊಸ ಸಿನಿಮಾ

    prahsnath neel and srimurali to pair up for a next film

    ಭರಾಟೆ ಚಿತ್ರದ ರಿಲೀಸ್ ಗುಂಗಿನಲ್ಲಿರುವ ಶ್ರೀಮುರಳಿ ಸುತ್ತ ಒಂದು ಹ್ಯಾಪಿ ಹ್ಯಾಪಿ ನ್ಯೂಸ್ ಹರಿದಾಡುತ್ತಿದೆ. ಆ ಹ್ಯಾಪಿ ನ್ಯೂಸ್ ನಿಜವಾಗಿದ್ದೇ ಆದರೆ, ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಮತ್ತೆ ಒಂದಾಗಲಿದ್ದಾರೆ.

    ಶ್ರೀಮುರಳಿ ವೃತ್ತಿ ಜೀವನಕ್ಕೆ ಅತಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಚಿತ್ರವದು. ಅವರೀಗ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಡೈರೆಕ್ಟರ್. ಸಂಬಂಧದಲ್ಲಿ ಶ್ರೀಮುರಳಿಯ ಭಾವ.

    ಪ್ರಶಾಂತ್ ನೀಲ್ ಕೆಜಿಎಫ್ ಮುಗಿಸಿಕೊಂಡ ನಂತರ ಶ್ರೀಮುರಳಿ ಅವರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡುವ ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ಶ್ರೀಮುರಳಿ ಭರಾಟೆ ಮುಗಿದೊಡನೆ ಮದಗಜ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

  • ಪ್ರಶಾಂತ್ ನೀಲ್ ಬಗ್ಗೆ ಎದ್ದಿರೋ ಪ್ರಶ್ನೆಗಳಿಗೆಲ್ಲ ಅವರೇ ಕೊಟ್ಟ ಉತ್ತರಗಳಿವು..!

    ಪ್ರಶಾಂತ್ ನೀಲ್ ಬಗ್ಗೆ ಎದ್ದಿರೋ ಪ್ರಶ್ನೆಗಳಿಗೆಲ್ಲ ಅವರೇ ಕೊಟ್ಟ ಉತ್ತರಗಳಿವು..!

    ಪ್ರಶಾಂತ್ ನೀಲ್ ಈಗ ಸೆನ್ಸೇಷನಲ್ ಡೈರೆಕ್ಟರ್. ಇಡೀ ಇಂಡಿಯಾ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಎದುರು ನೋಡುತ್ತಿದೆ. ಪ್ರಶಾಂತ್ ನೀಲ್ ಚಿತ್ರರಂಗಕ್ಕೆ ಹೊಸಬರೇ. ಶ್ರೀಮುರಳಿ ಅವರಿಗೆ ಭಾವ ಎನ್ನುವುದನ್ನು ಬಿಟ್ಟರೆ ಚಿತ್ರರಂಗದ ಪರಿಚಯ ಅಷ್ಟಾಗಿ ಇರಲಿಲ್ಲ. ಆದರೆ, ಅನುಭವಕ್ಕಾಗಿಯೇ ಉಗ್ರಂ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ.. ತಾವು ಮಾಡಿದ್ದು ತಮಗೇ ಇಷ್ಟವಾಗದೆ ಮತ್ತೆ ಇಡೀ ಚಿತ್ರವನ್ನು ಹೊಸದಾಗಿ ಶೂಟ್ ಮಾಡಿ ಗೆದ್ದು ತೋರಿಸಿದವರು ಪ್ರಶಾಂತ್ ನೀಲ್. ಅಂತಹ ಪ್ರಶಾಂತ್ ನೀಲ್ ಬಗ್ಗೆ ಕನ್ನಡಿಗರ ಪ್ರಶ್ನೆಗಳು ಹತ್ತಾರಿವೆ. ಆ ಎಲ್ಲ ಪ್ರಶ್ನೆಗಳಿಗೂ ಪ್ರಶಾಂತ್ ನೀಲ್ ಹಲವು ಕಡೆ ಉತ್ತರ ಕೊಟ್ಟಿದ್ದಾರೆ.

    ಪ್ರಶ್ನೆ : ಪ್ರಶಾಂತ್ ನೀಲ್ ಇನ್ನು ಮುಂದೆ ಕನ್ನಡ ಚಿತ್ರಗಳನ್ನು ಮಾಡುವುದಿಲ್ಲವಾ?

    ಉತ್ತರ : ಹಾಗಿಲ್ಲ. ನಾನು ಕನ್ನಡದವನೇ. ಕೆಜೆಎಫ್ ನಂತರ ನನಗೆ ಬಂದ ಅವಕಾಶಗಳು, ಅವಕಾಶ ಕೊಟ್ಟವರು ತೋರಿಸಿದ ಪ್ರೀತಿ, ಗೌರವ ಅವುಗಳನ್ನು ಒಪ್ಪಿಕೊಳ್ಳುವಂತೆ ಮಾಡಿದೆ ಅಷ್ಟೆ. ನಾನೂ ಕೂಡಾ ವೃತ್ತಿಯಲ್ಲಿ ಮೇಲೇರಲೇಬೇಕಲ್ಲ. ಹಾಗಂತ ಕನ್ನಡ ಬಿಡಲ್ಲ. ಶ್ರೀಮುರಳಿಗೆ ಮಾತು ಕೊಟ್ಟಿದ್ದೇನೆ. ಅವರ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತೇನೆ.

    ಪ್ರಶ್ನೆ : ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಯಾಕಿಲ್ಲ.

    ಉತ್ತರ : ಹೇಳಲಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಅವರ ನಿರ್ಧಾರವನ್ನು ಗೌರವಿಸುತ್ತೇವೆ.

    ಪ್ರಶ್ನೆ : ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಹೇಗೆ ಮಾಡಿದ್ದಾರೆ?

    ಉತ್ತರ : ಅನಂತ್ ಸರ್ ಮಾಡಲ್ಲ ಎಂದ ಮೇಲೆ ಸ್ಕ್ರಿಪ್ಟ್‍ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಪ್ರಕಾಶ್ ರೈ ಪಾತ್ರವನ್ನು ತಂದಿದ್ದೇವೆ.

    ಪ್ರಶ್ನೆ : ಯಶ್ ಜೊತೆ ಮತ್ತೆ ಸಿನಿಮಾ ಮಾಡ್ತೀರಾ?

    ಉತ್ತರ : ಅವರಿಗಾಗಿಯೇ ಒಂದು ಕಥೆ ಇದೆ. ಒಪ್ಪಿಕೊಂಡರೆ ಖಂಡಿತಾ ಸಿನಿಮಾ ಮಾಡ್ತೇನೆ.

    ಪ್ರಶ್ನೆ : ಪ್ರಶಾಂತ್ ನೀಲ್ ಅವರಿಗೆ ಕಥೆ ಹೇಗೆ ಹೊಳೆಯುತ್ತೆ?

    ಉತ್ತರ : ಎಣ್ಣೆ ಹೊಡೆಯೋವಾಗ. ಎಣ್ಣೆ ಹೊಡೆಯದಿದ್ದರೆ ನನಗೆ ತಲೆಯೇ ಓಡೋದಿಲ್ಲ. ಕೆಜಿಎಫ್ ಕಥೆ ಕೂಡಾ ಎಣ್ಣೆ ಹೊಡೆಯುವಾಗಲೇ ಹೊಳೆದ ಕಥೆ.

  • ಪ್ರಶಾಂತ್ ನೀಲ್ ಬಗ್ಗೆ ಯಶ್ ಕಂಡ ಕನಸು

    yash praises director prashnth neel

    ಕೆಜಿಎಫ್ ಎಂಬ ಬ್ಲಾಕ್ ಬಸ್ಟರ್ ಕೊಟ್ಟ ಯಶ್, ಆ ಚಿತ್ರಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಭಿಮಾನಿಯೂ ಹೌದು. ಪ್ರಶಾಂತ್ ನೀಲ್ ಅವರ ವೃತ್ತಿ ಪರತೆ ಮತ್ತು ಕ್ರಿಯೇಟಿವಿಟಿಯನ್ನು ಹೊಗಳಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿರುವ ಯಶ್ `ಪ್ರಶಾಂತ್ ನೀಲ್ ಅವರಿಗೆ ಹಾಲಿವುಡ್‍ನಲ್ಲಿಯೂ ಸಿನಿಮಾ ಮಾಡುವ ಶಕ್ತಿ ಇದೆ.

    ಅವರ ಬಳಿ ಒಂದು ಇಂಗ್ಲಿಷ್ ಸಿನಿಮಾ ಮಾಡಿಸಬೇಕು. ಅವರಿಗೆ ಆ ತಾಕತ್ತಿದೆ' ಎನ್ನುವ ಯಶ್ ತಮ್ಮನ್ನೇ ಹಾಕಿಕೊಂಡು ಇಂಗ್ಲಿಷ್ ಸಿನಿಮಾ ಮಾಡಬೇಕೆಂದಿಲ್ಲ, ಅವರಿಗೆ ಇಷ್ಟವಾಗುವ ಯಾರನ್ನೇ ಆದರೂ ಹಾಕಿಕೊಂಡು ಸಿನಿಮಾ ಮಾಡಬಹುದು. ಸಿನಿಮಾ ಡಿಸೈನ್ ಜವಾಬ್ದಾರಿ ನಂದು ಎಂದಿದ್ದಾರೆ ಯಶ್.

  • ಪ್ರಶಾಂತ್ ನೀಲ್-ಎನ್.ಟಿ.ಆರ್. ಸಿನಿಮಾ ಕಥೆ ಗೊತ್ತಾಯ್ತಾ?

    ಪ್ರಶಾಂತ್ ನೀಲ್-ಎನ್.ಟಿ.ಆರ್. ಸಿನಿಮಾ ಕಥೆ ಗೊತ್ತಾಯ್ತಾ?

    ಆರ್.ಆರ್.ಆರ್. ನಂತರ ಎನ್.ಟಿ.ಆರ್. ನಟಿಸುತ್ತಿರೋದು ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ. ಅದು ಮುಗಿಯುತ್ತಿದ್ದಂತೆಯೇ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಅಷ್ಟು ಹೊತ್ತಿಗೆ ಪ್ರಶಾಂತ್, ಪ್ರಭಾಸ್ ಜೊತೆಗಿನ ಸಲಾರ್ ಚಿತ್ರವನ್ನು ಮುಗಿಸಿರಬೇಕು. ಎನ್.ಟಿ.ಆರ್. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಕಥೆಯ ಬಗ್ಗೆ ಅಲ್ಲೇ ಒಂದು ಕ್ಲೂ ಕೊಟ್ಟಿದ್ದಾರೆ.

    ರಕ್ತದಲ್ಲಿ ನೆಂದ ನೆಲವಷ್ಟೇ ನೆನಪಿನಲ್ಲಿ ಇರೋಕೆ ಯೋಗ್ಯ. ಅವನ ನೆಲ ರಕ್ತದಲ್ಲಿ ತೋಯ್ದಿದೆ. ಆದರೆ ಅವನ ರಕ್ತದಲ್ಲಿ ಅಲ್ಲ.. ಎನ್ನುವ ಲೈನ್ ಕೊಟ್ಟಿದ್ದಾರೆ ನೀಲ್.  ಅದರಲ್ಲೇ ಕಥೆಯ ಬಗ್ಗೆ ಕಲ್ಪನೆ ಮಾಡಿಕೊಳ್ಳಬಹುದು. ಎನ್.ಟಿ.ಆರ್.ಗೆ ವಯಸ್ಸಾದ ವ್ಯಕ್ತಿಯ ಲುಕ್ ಕೊಟ್ಟಿರೋ ಪ್ರಶಾಂತ್ ನೀಲ್, ಬಹುಶಃ ಹಳ್ಳಿ ಅಥವಾ ಜನಾಂಗವೊಂದರ ಹೋರಾಟದ ಕಥೆ ಇಟ್ಟುಕೊಂಡಿದ್ದಾರೆ ಎನಿಸುತ್ತಿದೆ.

  • ಫ್ಯಾನ್ಸ್ ಕಟಕಟೆಯಲ್ಲಿ ಪ್ರಶಾಂತ್ ನೀಲ್ : ಪ್ರಶ್ನೆಗಳಷ್ಟೇ ಅಲ್ಲ, ಉತ್ತರಗಳೂ ರೋಚಕ

    prashanth neel answers fans questions

    ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಬ್ರೇಕ್ ಬಿದ್ದಿದೆ. ಅಕ್ಟೋಬರ್ 23ಕ್ಕೆ ರಿಲಿಸ್ ಡೇಟ್ ಘೋಷಿಸಿರುವ ಚಿತ್ರತಂಡವೂ ಕೂಡಾ ಈಗ ಕೊರೋನಾ ಬ್ರೇಕ್‍ನಲ್ಲಿದೆ. ಹೀಗಾಗಿಯೇ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಫಸ್ಟ್ ಟೈಂ.

    ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳಿದ್ದರೆ ಕೇಳಿ, ಉತ್ತರ ಕೊಡ್ತೇನೆ ಎಂದಿದ್ದೇ ತಡ, ಅಭಿಮಾನಿಗಳು ಮುಗಿ ಬಿದ್ದರು. ಎಲ್ಲರಿಗೂ ತಮ್ಮ ತಮ್ಮ ಮೆಚ್ಚಿನ ಸ್ಟಾರ್ ಬಗ್ಗೆ ಪ್ರಶಾಂತ್ ನೀಲ್ ಏನು ಹೇಳಬಹುದು ಎಂಬ ಕುತೂಹಲ. ಹೀಗಾಗಿಯೇ ಅಂತಹ ಪ್ರಶ್ನೆಗಳೇ ಹೆಚ್ಚಿದ್ದವು.

    ಅಷ್ಟೇ ಅಲ್ಲ, ಪ್ರಶಾಂತ್ ನೀಲ್ ಅವರ ಪತ್ನಿಗೊಂದು ಸಲಹೆಯೂ ಬಂತು.

    ಪ್ರಶಾಂತ್ ನೀಲ್ ಅವರಿಗೆ ಕ್ಲೀನ್ ಶೇವ್ ಮಾಡಿಸಿ ಮೇಡಂ, ಸಖತ್ ಸ್ಮಾರ್ಟ್ ಆಗಿ ಕಾಣ್ತಾರೆ ಅನ್ನೋ ಅಭಿಮಾನಿಯೊಬ್ಬರ ಸಲಹೆಗೆ, `ಅವರಿಗೆ ಉದ್ದ ಗಡ್ಡ ಅಂದರೆ ಇಷ್ಟ, ಅದಕ್ಕೇ ಅವರು ಶೇವ್ ಮಾಡೊಲ್ಲ' ಎಂದು ಉತ್ತರ ಕೊಟ್ಟರು ಅವರ ಪತ್ನಿ.

    ಪುನೀತ್ ಬಗ್ಗೆ ಒಂದು ಪದದಲ್ಲಿ ಹೇಳಿ ಅನ್ನೋ ಪ್ರಶ್ನೆಗೆ ಸರಿಸಾಟಿಯೇ ಇಲ್ಲದ ಎನರ್ಜಿ ಅಂದ್ರೆ, ಸುದೀಪ್ ಬಗ್ಗೆ ಜೀವನಕ್ಕಿಂತ ದೊಡ್ಡವರು ಎಂದುತ್ತರಿಸಿದ್ದಾರೆ.

    ರಾಜಮೌಳಿಗೆ ದಾರಿ ತೋರಿಸುವ ವ್ಯಕ್ತಿ ಎಂದಿದ್ದರೆ, ದಳಪತಿ ವಿಜಯ್ ಅವರನ್ನು ಪವರ್ ಹೌಸ್ ಎಂದಿದ್ದಾರೆ.  ಪ್ರಭಾಸ್ ಅವರು ಡಾರ್ಲಿಂಗ್ ಡಾರ್ಲಿಂಗ್.

    ಅಂದಹಾಗೆ ಅವರು ಮನೆಯಲ್ಲಿ ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡ್ತಾರಂತೆ.

  • ಬಾಹುಬಲಿಗೆ ಆದ ಗತಿಯೇ ಕೆಜಿಎಫ್ ಚಿತ್ರಕ್ಕೂ ಆಗುತ್ತಾ..?

    kgf to premiere on tv soon

    ಕೆಜಿಎಫ್ ಇನ್ನೂ ಥಿಯೇಟರುಗಳಲ್ಲಿ ಓಡುತ್ತಿದೆ. ವೀಕೆಂಡ್ ಹೌಸ್‍ಫುಲ್ ಆಗುತ್ತಿದೆ. ಹೀಗಿರುವಾಗಲೇ.. ಇನ್ನೂ 50 ದಿನ ಪೂರೈಸುವ ಮುನ್ನವೇ ಚಿತ್ರ ಟಿವಿಯಲ್ಲಿ ಪ್ರಸಾರವಾಗೋಕೆ ರೆಡಿಯಾಗಿಬಿಟ್ಟಿದೆ. ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಸೋನಿ ಮ್ಯಾಕ್ಸ್‍ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಈಗಾಗಲೇ ಕೆಜಿಎಫ್ ಪ್ರಸಾರದ ಪ್ರೋಮೋ ಹೊರಬಿಟ್ಟಿದೆ ಸೋನಿ ಮ್ಯಾಕ್ಸ್.

    ಈ ಹಿಂದೆ ಬಾಹುಬಲಿ ಸಿನಿಮಾವನ್ನೂ ಹೀಗೆಯೇ ಮಾಡಿತ್ತು ಹಿಂದಿ ಚಾನೆಲ್. ಚಿತ್ರ ಥಿಯೇಟಿನಲ್ಲಿರುವಾಗಲೇ ಟಿವಿಯಲ್ಲಿ ಪ್ರಸಾರ ಮಾಡಿತ್ತು. ಅದು ಚಿತ್ರದ ಬಾಕ್ಸಾಫೀಸ್‍ಗೂ ಹೊಡೆತ ಕೊಟ್ಟಿತ್ತು. ಈಗ ಅದೇ ರೀತಿಯಲ್ಲಿ ಕೆಜಿಎಫ್‍ಗೂ ಆಗುತ್ತಾ..? ಗೊತ್ತಿಲ್ಲ. ಪ್ರೋಮೋದಲ್ಲಿ ನಿರೀಕ್ಷಿಸಿ ಎಂದು ಪ್ರೋಮೋ ಬರುತ್ತಿದೆಯೇ ಹೊರತು, ಡೇಟ್ ಮತ್ತು ಟೈಂ ಹೇಳಿಲ್ಲ.

  • ಭಾವ ಶ್ರೀಮುರಳಿ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ಮಾಪಕ

    prashanth neel to produce sriimurali

    ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಭಾವ ಶ್ರೀಮುರಳಿಗೆ ಪ್ರಶಾಂತ್ ನೀಲ್ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಶ್ರೀಮುರಳಿಯ ಹೊಸ ಚಿತ್ರಕ್ಕೆ ಅವರೇ ಕಥೆ ಬರೆದಿರುವುದಷ್ಟೇ ಅಲ್ಲ, ಸ್ವತಃ ನಿರ್ಮಾಪಕರೂ ಆಗುತ್ತಿದ್ದಾರೆ. ಮದಗಜ ನಂತರ ಆ ಚಿತ್ರ ಸೆಟ್ಟೇರಲಿದೆ.

    ಲಕ್ಕಿ ಡೈರೆಕ್ಟರ್ ಸೂರಿ ನಿರ್ದೇಶನದ ಹೊಣೆ ಹೊತ್ತಿದ್ದು, ಪ್ರಶಾಂತ್ ನೀಲ್ ಅವರ ಸ್ವರ್ಣಲತಾ ಪ್ರೊಡಕ್ಷನ್ಸ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಮಾ ಉಗ್ರಂ. ಅದು ಶ್ರೀಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ. ಅದಾದ ನಂತರ ನಿರ್ದೇಶಿಸಿದ ಕೆಜಿಎಫ್, ದೇಶಾದ್ಯಂತ ಸದ್ದು ಮಾಡಿದೆ.

  • ಮದಗಜ ನಂತರ ಪ್ರಶಾಂತ್ ನೀಲ್ ಚಿತ್ರ ರೋರಿಂಗ್

    srimurali plans for his next film with prashanth neel

    ರೋರಿAಗ್ ಸ್ಟಾರ್ ಶ್ರೀಮುರಳಿ, ಈಗ ಮದಗಜದಲ್ಲಿ ಬ್ಯುಸಿ. ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಚಿತ್ರ ಟೇಕಾಫ್ ಆಗಿದೆ. ಇದರ ಜೊತೆಯಲ್ಲೇ ಇನ್ನೊಂದು ಹೊಸ ಚಿತ್ರಕ್ಕೆ ಶ್ರೀಮುರಳಿ ರೆಡಿಯಾಗುತ್ತಿದ್ದಾರೆ.

    ನಿರ್ದೇಶಕ ಪ್ರಶಾಂತ್ ನೀಲ್ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ಸ್ಕಿçಪ್ಟ್ ಕೆಲಸ ಮುಗಿದಿದೆ. ಈ ಮದಗಜ ಮುಗಿದ ನಂತರ ಆ ಸಿನಿಮಾ ಶುರುವಾಗಲಿದೆ. ಲಕ್ಕಿ ಖ್ಯಾತಿಯ ಡಾ.ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 6-5=2 ಚಿತ್ರತಂಡ, ಈ ಸಿನಿಮಾ ನಿರ್ಮಾಣ ಮಾಡಲಿದೆ.

  • ಮಾರ್ಚ್ 21 & ಏಪ್ರಿಲ್ 13 ಮತ್ತು ಕೆಜಿಎಫ್ ಚಾಪ್ಟರ್ 2..!

    ಮಾರ್ಚ್ 21 & ಏಪ್ರಿಲ್ 13 ಮತ್ತು ಕೆಜಿಎಫ್ ಚಾಪ್ಟರ್ 2..!

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿರೋದು ಏಪ್ರಿಲ್ 14ಕ್ಕೆ. ಚಿತ್ರದ ಪ್ರಮೋಷನ್ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ನಾಗಾಭರಣ, ವಸಿಷ್ಠ ಸಿಂಹ.. ಹೀಗೆ ಬೃಹತ್ ಕಲಾವಿದರ ತಂಡವಿರೋ ಚಿತ್ರಕ್ಕೆ ಕ್ಯಾಪ್ಟನ್ ಪ್ರಶಾಂತ್ ನೀಲ್. ಹೊಂಬಾಳೆ ಬ್ಯಾನರ್‍ನ ಕೆಜಿಎಫ್ ಚಾಪ್ಟರ್ 2 ಇದುವರೆಗೆ ಪೋಸ್ಟರ್ ಮತ್ತು ಟೀಸರ್ ಬಿಟ್ಟಿರೋದ್ರ ಹೊರತಾಗಿ ಬೇರೇನನ್ನೂ ಪ್ರೇಕ್ಷಕರಿಗೆ ತೋರಿಸಿಲ್ಲ. ಅವೆಲ್ಲದಕ್ಕೂ ಈಗ ಮುಹೂರ್ತ ಕೂಡಿ ಬಂದಿದೆ.

    ಮಾರ್ಚ್ 21. ಆ ದಿನ ಬೆಳಗ್ಗೆ 11.07ರ ಶುಭ ಮುಹೂರ್ತದಲ್ಲಿ ಕೆಜಿಎಫ್ ಚಾಪ್ಟರ್ 2ನ ಮೊದಲ ಹಾಡು ತೂಫಾನ್ ರಿಲೀಸ್ ಆಗಲಿದೆ.

    ಏಪ್ರಿಲ್ 13ರಂದು ಉತ್ತರ ಅಮೆರಿಕದಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.