` prashanth neel, - chitraloka.com | Kannada Movie News, Reviews | Image

prashanth neel,

 • ಕೆಜಿಎಫ್‌ ಚಾಪ್ಟರ್‌ 2ಗೆ ರೌಡಿ ತಂಗಂ ಟ್ರಬಲ್

  kgf chapter 2 lands in new trouble

  ಇತ್ತೀಚೆಗಷ್ಟೇ ಸೈನೇಡ್ ಗುಡ್ಡದ ಶೂಟಿಂಗ್ ಸಂಕಟದಿಂದ ಪಾರಾಗಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಅದು ಬಂದಿರೋದು ರೌಡಿ ತಂಗಂ ತಾಯಿಯಿಂದ. ಕೆಜಿಎಫ್ 1 ಸಿನಿಮಾದಲ್ಲಿ ನನ್ನ ಮಗನನ್ನು ಒಳ್ಳೆಯ ರೀತಿ ತೋರಿಸುತ್ತೇವೆ ಎಂದು ಹೇಳಿ, ಅವನನ್ನು

   ಕೆಟ್ಟದಾಗಿ ತೋರಿಸಿದ್ದಾರೆ. ಹೀಗಾಗಿ ಕೆಜಿಎಫ್‌ ಚಾಪ್ಟರ್‌ 2 ಚಿತ್ರೀಕರಣಕ್ಕೆ ತಡೆ ನೀಡಬೇಕು ಎಂದು ತಂಗಂ ತಾಯಿ ಪೌಳಿ, 2ನೇ  ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

  ರೌಡಿ ತಂಗಂ ಹಲವು ವರ್ಷಗಳ ಹಿಂದೆ, ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ರೌಡಿ. ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯ, ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮತ್ತು ಬಿಜಿಎಂಎಲ್‌ ಕಂಪೆನಿಗೆ ಸಮನ್ಸ್ ನೀಡಿದೆ. ಅರ್ಜಿಯ ವಿಚಾರಣೆ ಅಕ್ಟೋಬರ್ 9ಕ್ಕೆ ನಿಗಧಿಯಾಗಿದೆ.

 • ಕೆಜಿಎಫ್ ಚಾಪ್ಟರ್ 2ನಿಂದ ಸಿಕ್ಕ ಹೊಸ ಸ್ಟಾರ್..!

  ಕೆಜಿಎಫ್ ಚಾಪ್ಟರ್ 2ನಿಂದ ಸಿಕ್ಕ ಹೊಸ ಸ್ಟಾರ್..!

  ಕೆಜಿಎಫ್ ಬರುವುದಕ್ಕೂ ಮೊದಲೇ ಯಶ್ ಕರ್ನಾಟಕದಲ್ಲಿ ರಾಕಿಂಗ್ ಸ್ಟಾರ್ ಆಗಿದ್ದರು. ಸಂಜಯ್ ದತ್ ಆಗಲೀ, ರವೀನಾ ಟಂಡನ್ ಆಗಲೀ ಹೊಸದಾಗಿ ಉದಯಿಸಿದ ಸ್ಟಾರ್‍ಗಳಲ್ಲ. ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆ ಸ್ಟಾರ್ ನಿರ್ಮಾಣ ಸಂಸ್ಥೆಯೇನೋ ಹೌದು. ಹೊಂಬಾಳೆಯ ಬ್ಯಾಕ್ ಬೋನ್ ವಿಜಯ್ ಕಿರಗಂದೂರು ಅನುಮಾನವೇ ಇಲ್ಲದಂತೆ ಚಿತ್ರರಂಗದ ಶಕ್ತಿ ಎನ್ನಬಹುದು. ಆದರೆ, ಕೆಜಿಎಫ್ ಚಾಪ್ಟರ್ 2ನಿಂದ ಹುಟ್ಟಿಕೊಂಡ ಹೊಸ ಸ್ಟಾರ್ ಯಾರು ಗೊತ್ತೇ.. ಪ್ರಶಾಂತ್ ನೀಲ್.

  ಒಂದು ಚಿತ್ರ ಹಿಟ್ ಆದಾಗ.. ಸೂಪರ್ ಹಿಟ್ ಎನ್ನಿಸಿಕೊಂಡಾಗ.. ಬ್ಲಾಕ್ ಬಸ್ಟರ್ ಹಿಟ್ ಲಿಸ್ಟಿಗೆ ಸೇರಿದಾಗ.. ಚರಿತ್ರೆಯನ್ನೇ ಸೃಷ್ಟಿಸಿದಾಗ.. ಸಾಮಾನ್ಯವಾಗಿ ಸ್ಟಾರ್ ಪಟ್ಟ ದಕ್ಕುವುದು ಹೀರೋಗೆ. ತೀರಾ ಇತ್ತೀಚಿನವರೆಗೆ ಆಗುತ್ತಿದ್ದುದೇ ಅದು. ತಪ್ಪೇನಿಲ್ಲ.

  ಆದರೆ ಅದನ್ನು ಮೀರಿ ನಿರ್ದೇಶಕರ ಹೆಸರಿನಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದು ತರುವ ಶಕ್ತಿ ಕೆಲವೇ ಕೆಲವರಿಗೆ ಮಾತ್ರ ಇದೆ. ಕನ್ನಡದಲ್ಲಿ ಆ ಖ್ಯಾತಿ ಪಡೆದ ಮೊದಲ ನಿರ್ದೇಶಕ ಉಪೇಂದ್ರ. ನಂತರ ಯೋಗರಾಜ್ ಭಟ್, ಪ್ರೇಮ್, ಸೂರಿ ಮೊದಲಾದವರಿಗೆ ಆ ಪಟ್ಟ ಸಿಕ್ಕಿತಾದರೂ.. ಅದು ಆಗಾಗ್ಗೆ ಅಲುಗಾಡುತ್ತಲೇ ಇರುತ್ತೆ.

  ಬೇರೆ ಭಾಷೆಗೆ ಹೋದರೆ ನಿರ್ದೇಶಕನ ಹೆಸರಲ್ಲೇ ಸಿನಿಮಾ ಮಾರ್ಕೆಟಿಂಗ್ ನಡೆಯೋದು ಹೊಸದೇನಲ್ಲ. ಸದ್ಯಕ್ಕೆ ಇಂಡಿಯಾದ ನಂ.1 ಸ್ಥಾನದಲ್ಲಿರೋದು ಒನ್ & ಓನ್ಲಿ ರಾಜಮೌಳಿ. ಅದು ಏಕಾಏಕಿ ಬಂದಿದ್ದಲ್ಲ. 12 ಚಿತ್ರಗಳನ್ನು ನಿರ್ದೇಶಿಸಿರೋ ರಾಜಮೌಳಿ, ಅಷ್ಟೂ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಮಾಡಿದ ಮೇಲೆ ಬಂದಿರೋದು. ಉಳಿದಂತೆ ತೆಲುಗಿನಲ್ಲಿ ಸುಕುಮಾರ್, ತ್ರಿವಿಕ್ರಮ್ ಮೊದಲಾದವರಿಗೆ ಆ ಖ್ಯಾತಿ ಇದೆ. ತಮಿಳಿನಲ್ಲಿ ಮಣಿರತ್ನಂ, ಮುರುಗದಾಸ್, ಶಂಕರ್.. ಮೊದಲಾದವರಿದ್ದಾರೆ. ಸದ್ಯಕ್ಕೆ ಸ್ಟಾರ್ ನಿರ್ದೇಶಕರ ಕೊರತೆ ಕಾಡುತ್ತಿರೋದು ಹಿಂದಿಯಲ್ಲೇ. ಹಿಂದಿಯಲ್ಲಿ ಸ್ಟಾರ್ ಡೈರೆಕ್ಟರ್ ಪಟ್ಟ ಪಡೆದಿದ್ದವರ ಪಟ್ಟಗಳೆಲ್ಲ ಸೌತ್ ನಿರ್ದೇಶಕರ ಎದುರು ಅಲುಗಾಡುತ್ತಿವೆ.

  ಹೀಗಿರುವಾಗಲೇ ಕನ್ನಡದ ನೆಲದಲ್ಲೊಬ್ಬ ಹೊಸ ಸ್ಟಾರ್ ಡೈರೆಕ್ಟರ್ ಆಗಿ ಉದ್ಭವವಾಗಿದ್ದಾರೆ ಪ್ರಶಾಂತ್ ನೀಲ್. ಏಕಾಏಕಿ ಆಗಿದ್ದೇನಲ್ಲ. ಮೊದಲ ಚಿತ್ರ ಉಗ್ರಂ, ಶ್ರೀಮುರಳಿಗೆ ಪುನರ್ಜನ್ಮ ನೀಡಿದ ಚಿತ್ರ ಎನ್ನೋಕೆ ಅಡ್ಡಿಯಿಲ್ಲ. ಜೊತೆಗೆ ಅದು ಹೊಸ ಶೈಲಿಯ ಕಥೆ ಹೇಳುವ ಮೂಲಕ ಟ್ರೆಂಡ್ ಬದಲಿಸಿತು. ನಂತರ ಪ್ರಶಾಂತ್ ನೀಲ್ ಕೆಜಿಎಫ್ ಮೂಲಕ ಚರಿತ್ರೆ ಬರೆದರು. ಈಗ ಚಾಪ್ಟರ್ 2 ಮೂಲಕ.. ಹಿಂದಿನ ಎರಡೂ ಹಿಟ್ ಫ್ಲೂಕ್ ಅಲ್ಲ. ಆಕಸ್ಮಿಕ ಅಲ್ಲ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಹೊಸ ಸ್ಟಾರ್ ಉದಯಿಸಿದ್ದಾರೆ.

  ಅಂದಹಾಗೆ ಪ್ರಶಾಂತ್ ನೀಲ್ ಈಗಾಗಲೇ ಬಾಹುಬಲಿ ಪ್ರಭಾಸ್ ಜೊತೆ  ಸಲಾರ್ ಮಾಡುತ್ತಿದ್ದಾರೆ. ನಂತರದ ಸಿನಿಮಾ ಎನ್.ಟಿ.ಆರ್. ಜೊತೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಮೂಲಕ ಕನ್ನಡದ ಇನ್ನಷ್ಟು ಸ್ಟಾರ್‍ಗಳು ಇಂಡಿಯಾ ಸ್ಟಾರ್‍ಗಳಾಗಲಿ. ಏಕೆಂದರೆ ಸ್ಟಾರ್`ಗಳನ್ನು ಹುಟ್ಟು ಹಾಕುವ ತಾಕತ್ತಿರೋದು ನಿರ್ದೇಶಕರಿಗೆ ಮಾತ್ರ.

 • ಕೆಜಿಎಫ್ ಟೀಂ ಹೈದರಾಬಾದ್ ಶಿಫ್ಟ್

  kgf team busy shooting in hyderabad

  ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ಮುಕ್ತಾಯವಾಗಿದೆ. 2ನೇ ಶೆಡ್ಯೂಲ್ ಚಿತ್ರೀಕರಣ ಹೈದರಾಬಾದ್‍ನಲ್ಲಿ ಶುರುವಾಗಿದೆ. ಇಡೀ ಚಿತ್ರತಂಡ ಈಗ ಹೈದರಾಬಾದ್‍ನಲ್ಲಿ ಬೀಡುಬಿಟ್ಟಿದೆ.

  ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅನಂತನಾಗ್, ಮಾಳವಿಕಾ ಅವಿನಾಶ್ ಸೇರಿದಂತೆ ಮತ್ತೊಮ್ಮೆ ಕಲಾವಿದರ ತಂಡ ಒಗ್ಗೂಡಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಗಿಸುವ ತವಕದಲ್ಲಿದೆ ಕೆಜಿಎಫ್ ಟೀಂ.

  ಹೊಂಬಾಳೆ ಫಿಲಂಸ್‍ನಲ್ಲಿ ಬರುತ್ತಿರುವ ಕೆಜಿಎಫ್ ಚಾಪ್ಟರ್-2 ಚಿತ್ರವನ್ನು ಮೊದಲ ಭಾಗಕ್ಕಿಂತ ಅದ್ಧೂರಿಯಾಗಿ ತೆರೆ ಮೇಲೆ ತರಲು ಉತ್ಸುಕರಾಗಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

 • ಕೆಜಿಎಫ್ ಟ್ರೇಲರ್ ಅಂಬರೀಷ್ರಿಂದ ರಿಲೀಸ್

  kgf trailer launched by ambareesh

  ರಾಕಿಂಗ್ ಸ್ಟಾರ್ ಯಶ್, ಹೊಂಬಾಳೆ ಪ್ರೊಡಕ್ಷನ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಿನದ ಕೆಜಿಎಫ್ ಸಿನಿಮಾ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಚಿತ್ರದ ಐದೂ ಭಾಷೆಯ ಟ್ರೇಲರ್ ರಿಲೀಸ್ ಮಾಡಿದ್ದಾರೆ. ನಾವು ನೀವು ಕಂಡಂತೆ ಯಾವುದೇ ಟ್ರೇಲರ್ ಆಗಲಿ, ಬಿಡುಗಡೆಗೆ ಬರೋದು ಕೆಲವೇ ಜನ. ಆದರೆ ಕೆಜಿಎಫ್ ಇಡೀ ಪ್ರಪಂಚವನ್ನೇ ಆವರಿಸಿಕೊಳ್ಳುತ್ತೆ. ಅದು ನನ್ನ ಆಸೆ ಎಂದರು ಅಂಬಿ. ಟ್ರೇಲರ್ ಬಹಳ ಕುತೂಹಲ ಸೃಷ್ಟಿಸಿದೆ. ಇಷ್ಟು ದೊಡ್ಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡೋಕೆ ಖುಷಿಯಾಗುತ್ತಿದೆ ಎಂದರು ಅಂಬಿ.

  ಹೊಂಬಾಳೆ ಪ್ರೊಡಕ್ಷನ್ನಿಂದ ಕನ್ನಡ-ಮಲಯಾಳಂ ಟ್ರೈಲರ್ ರಿಲೀಸ್ ಆದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್  ರಿಲೀಸ್ ಆಗಿದೆ. ವರಾಹಿ ಪ್ರೊಡಕ್ಷನ್ ತೆಲುಗು ಮತ್ತು ಹಿಂದಿ ಟ್ರೈಲರ್ ರಿಲೀಸ್ ಮಾಡಿದೆ. 

  ಐದು ಭಾಷೆಗಳ ಪತ್ರಕರ್ತರ ಸಮ್ಮುಖದಲ್ಲಿ ರಿಲೀಸ್ ಆದ ಕೆಜಿಎಪ್ ಚಿತ್ರದ ಟ್ರೇಲರ್, ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಟ್ರೆಂಡ್ ಆಗಿದ್ದು ವಿಶೇಷ.  ಕೆಜಿಎಫ್ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ.

 • ಕೆಜಿಎಫ್ ಟ್ರೇಲರ್‍ನ ಪವರ್‍ಫುಲ್ ಡೈಲಾಗ್ಸ್

  kgf dialogues goes viral

  ಕೆಜಿಎಫ್ ಚಿತ್ರದ ಮೇಕಿಂಗ್, ದೃಶ್ಯ ವೈಭವಕ್ಕೆ ಪೈಪೋಟಿ ನೀಡಿರುವ ಡೈಲಾಗುಗಳಂತೂ ಅದ್ಭುತ. ಟ್ರೇಲರ್‍ನಲ್ಲಿ ಖಡಕ್ ಅನ್ನಿಸೋದು ಎರಡೇ ಡೈಲಾಗು. ಉಳಿದಂತೆ ಭಾವನೆಗಳನ್ನು ಕೆರಳಿಸುವ, ಉದ್ದೀಪಿಸುವ ಮಾತುಗಳಿವೆ. ಟ್ರೇಲರ್ ಆರಂಭ : ಆ ರಾತ್ರಿ ಎರಡು ಘಟನೆ ನಡೀತು. ಆ ಜಾಗಾನೂ ಹುಟ್ತು. ಅವನೂ ಹುಟ್ಟಿದ..

  ಡೈಲಾಗ್ ನಂ. 1 - ಮುಂಬೈ ಏನು ನಿಮ್ಮಪ್ಪಂದಾ..?

  ಅಲ್ಲ ಕಣೋ.. ನಿಮ್ಮಪ್ಪಂದೇ.. ನಿಮ್ಮಪ್ಪ ನಾನೇ..

  ಡೈಲಾಗ್ ನಂ. 2 - ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ನೀನು ಬರೀ ಒಂದು ಯುದ್ಧ ಗೆಲ್ಲಬಹುದು.

  ಅದೇ ನೀನು ಮುಂದೆ ನಿಂತಿದ್ದೀಯ ಅನ್ನೋ ಧೈರ್ಯ ನಿನ್ನ ಹಿಂದೆ ಇರೋ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚನೇ ಗೆಲ್ಲಬಹುದು.

  ಡೈಲಾಗ್ ನಂ. 3 - ರೌಡಿ : ಏನೋ ಬೇಕು ನಿಂಗೆ..?  ಮಾಸ್ಟರ್ ಯಶ್ ಡೈಲಾಗ್ : ದುನಿಯಾ

  ಟ್ರೇಲರ್ ಇಂಟರ್ವಲ್ - ನೀನು ಒಂದು ಆನೆ ಹೊಡೀಬೇಕು ಅಂತಾ ಹೇಳ್ತಾನೆ ಡಾನ್. ಯಶ್ ಜರ್ನಿ ಶುರು. ಹೊರಟ.. ಅವನಿಗೆ ಹೋಗೋ ದಾರಿನೂ ಗೊತ್ತಿರ್ಲಿಲ್ಲ. ತಲುಪೋ ಜಾಗದ ಬಗ್ಗೆ ಗೊತ್ತಿರಲಿಲ್ಲ.  ಅಲ್ಲಿನ ಅಮಾನುಷತೆಯೂ ಗೊತ್ತಿರಲಿಲ್ಲ.

  ಹೀಗೆ ಶುರುವಾಗುವ ಟ್ರೇಲರ್‍ನಲ್ಲಿ ಸಣ್ಣ ಸಣ್ಣ ಸೌಂಡು ಕೂಡಾ ಎದ್ದು ಕಾಣುತ್ತೆ. ಕಿವಿಗೆ ನಾಟುತ್ತೆ. ಪ್ರಶಾಂತ್ ನೀಲ್ ಮತ್ತೊಮ್ಮೆ ಉಗ್ರಂ ನೆನಪಿಸುತ್ತಾರೆ.

 • ಕೆಜಿಎಫ್ ನೀಲ್ NEXT PROJECT 150 ಕೋಟಿ..!?

  prashanth neel's next project likely to be 150 crores

  ಕೆಜಿಎಫ್ ಚಿತ್ರದ ಅತಿ ದೊಡ್ಡ ಶಕ್ತಿಯೇ ಪ್ರಶಾಂತ್ ನೀಲ್. ಯಶ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದ ಪ್ರಶಾಂತ್ ನೀಲ್ಗೆ ಈಗ ದೇಶಾದ್ಯಂತ ಡಿಮ್ಯಾಂಡ್ ಇದೆ. ಅದರಲ್ಲೂ ತೆಲುಗು ಇಂಡಸ್ಟ್ರಿಯ ಸ್ಟಾರ್ ನಟರು ಬೆನ್ನು ಬಿದ್ದಿದ್ದಾರೆ. ಈಗ ಅಲ್ಲಿಂದಲೇ ಒಂದು ಸುದ್ದಿ ತೇಲಿ ತೇಲಿ ಬಂದಿದೆ.

  ಕೆಜಿಎಫ್ ಚಾಪ್ಟರ್ 2 ಮುಗಿಯುತ್ತಿದ್ದಂತೆಯೇ ಪ್ರಶಾಂತ್ ನೀಲ್ ತೆಲುಗು ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರಂತೆ. ಆ ಚಿತ್ರದ ಬಜೆಟ್ 150 ಕೋಟಿ ಇರಲಿದೆಯಂತೆ. ಆ ಚಿತ್ರಕ್ಕೆ ಹಣ ಹೂಡುತ್ತಿರುವುದು ಮೈತ್ರಿ ಮೂವೀ ಮೇಕರ್ಸ್. ಶ್ರೀಮಂತುಡು, ಜನತಾ ಗ್ಯಾರೇಜ್, ರಂಗಸ್ಥಳಂ ನಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಕೊಟ್ಟಿರುವ ಸಂಸ್ಥೆ ಅದು. ಸದ್ಯಕ್ಕೆ ಅಲ್ಲು ಅರ್ಜುನ್ ನಾಯಕತ್ವದ ಪುಷ್ಪ, ಪವನ್ ಕಲ್ಯಾಣ್ ನಾಯಕತ್ವದ ಇನ್ನೊಂದು ಸಿನಿಮಾ ನಿರ್ಮಿಸುತ್ತಿರುವ ಆ ಸಂಸ್ಥೆ, ಪ್ರಶಾಂತ್ ನೀಲ್ ಅವರಿಗೆ ಆಫರ್ ಕೊಟ್ಟಿದೆ.

  ಜೂ.ಎನ್ಟಿಆರ್ ಹೀರೋ ಆಗಲಿದ್ದಾರಂತೆ. ಎನ್ಟಿಆರ್ ಇಮೇಜ್ಗೆ ತಕ್ಕಂತೆ ಕಥೆಯ ಒನ್ ಲೈನ್ ಸಿದ್ಧಪಡಿಸಲಾಗಿದ್ದು, ಎನ್ಟಿಆರ್ ಓಕೆ ಎಂದಿದ್ದಾರಂತೆ. ಸದ್ಯಕ್ಕೆ ಎಲ್ಲವೂ ಅಂತೆ ಕಂತೆ. ಮೇ 20ಕ್ಕೆ ಎನ್ಟಿಆರ್ ಹುಟ್ಟುಹಬ್ಬ. ಈ ಸುದ್ದಿ ಪಕ್ಕಾ ಆಗಿದ್ದರೆ ಆ ದಿನ ಹೊಸ ಚಿತ್ರ ಅನೌನ್ಸ್ ಆಗಬಹುದು.

 • ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

  ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

  ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ನಂತರ ಹಲವು ಸ್ಟಾರ್‍ಗಳು ಚಿತ್ರವನ್ನು ನೋಡಿದ್ದಾರೆ. ಮೆಚ್ಚಿದ್ದಾರೆ. ಕನ್ನಡದಲ್ಲೂ ಹಲವು ಚಿತ್ರನಟರು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇದೀಗ ಶಿವ ರಾಜಕುಮಾರ್ ಕೂಡಾ ಚಿತ್ರವನ್ನು ನೋಡಿ ಖುಷಿಪಟ್ಟಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್`ನಲ್ಲಿ ಕೆಜಿಎಫ್ ನೋಡಿದ ಶಿವಣ್ಣ ಚಿತ್ರವನ್ನು ಮನಸಾರೆ ಹೊಗಳಿದರು. ಇದು ನಮ್ಮ ಚಿತ್ರರಂಗದ ಅದ್ಧೂರಿ ಸಿನಿಮಾ ಎಂದು ಪ್ರಶಂಸಿಸಿದರು.

  ಸಿನಿಮಾ ನೋಡ್ತಾ ಇದ್ರೆ ನಮಗೆಲ್ಲ ಹೆಮ್ಮೆ ಆಗುತ್ತೆ. ಡೈಲಾಗ್‍ಗಳಂತೂ ಅದ್ಧೂರಿಯಾಗಿವೆ. ಸೌಂಡಿಂಗ್ ಕೂಡಾ ಸಖತ್ತಾಗಿದೆ. ಕೆಜಿಎಫ್ ನಮ್ಮ ಸಿನಿಮಾ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ ಎಂದ ಶಿವಣ್ಣ ಯಶ್ ನನ್ನ ತಮ್ಮನಿದ್ದಂತೆ. ಯಶ್ ಮೇಲೆ ನನಗೆ ಸಪರೇಟ್ ಪ್ರೀತಿ ಇದೆ. ಅವರ ಹಾರ್ಡ್ ವರ್ಕಿಂಗ್ ಸೂಪರ್. ಯಶ್‍ನ ನೋಡ್ತಾ ಇದ್ರೆ ನನ್ನ ತಮ್ಮ ನೆನಪಾಗ್ತಾನೆ. ನನ್ನ ತಮ್ಮನೇ ಮುಂದೆ ಬಂದಂತೆ ಅನ್ನಿಸುತ್ತೆ ಎಂದರು ಶಿವಣ್ಣ.

  ಪ್ರಶಾಂತ್ ನೀಲ್ ನಿರ್ದೇಶನವನ್ನು ಹೊಗಳಿದ ಶಿವಣ್ಣ ಪ್ರಶಾಂತ್‍ರನ್ನು ಸರಸ್ವತಿ ಪುತ್ರ ಎಂದು ಹೊಗಳಿದರು. ಕೆಜಿಎಫ್ 3 ಬರುತ್ತೋ.. ಇಲ್ವೋ ಗೊತ್ತಿಲ್ಲ. ಪ್ರಶಾಂತ್‍ಗೇ ಕಾಲ್ ಮಾಡಿ ಕೇಳ್ತೇನೆ ಎಂದರು ಶಿವಣ್ಣ.

  ನನಗೆ ಚಿತ್ರದಲ್ಲಿ ಎಲ್ಲಕ್ಕಿಂತ ತಾಯಿ ಸೆಂಟಿಮೆಂಟ್ ಸೀನ್ ಇಷ್ಟವಾಯ್ತು ಎನ್ನೋದನ್ನೂ  ಮರೆಯಲಿಲ್ಲ ಶಿವಣ್ಣ. ಯಶ್ ಮೇಲೆ ನನಗೊಂಥರಾ ವಿಶೇಷ ಪ್ರೀತಿ. ಯಶ್ ಅವರ ಆರಂಭದ ದಿನಗಳಿಂದಲೂ ನೋಡಿದ್ದೇನೆ. ಇಂಡಸ್ಟ್ರಿಯಲ್ಲಿ ಯಾರೇ ಎತ್ತರಕ್ಕೆ ಬೆಳೆದರೂ ಖುಷಿ. ಯಶ್ ಬೆಳೆದರೆ ಇನ್ನೂ ಒಂಥರಾ ಖುಷಿ ಎಂದರು ಶಿವಣ್ಣ.

 • ಕೆಜಿಎಫ್ ನೋಡಿದ.. ಸಿಗರೇಟು ಸೇದಿದ.. ಆಸ್ಪತ್ರೆ ಸೇರಿದ..

  ಕೆಜಿಎಫ್ ನೋಡಿದ.. ಸಿಗರೇಟು ಸೇದಿದ.. ಆಸ್ಪತ್ರೆ ಸೇರಿದ..

  ಒಂದು ಸಿನಿಮಾ ನೋಡುಗರ ಮೇಲೆ ಯಾವ್ಯಾವ ರೀತಿಯಲ್ಲೆಲ್ಲ ಪರಿಣಾಮ ಬೀರಬಹುದು ಎನ್ನುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಬೆರಗಾಗಿದ್ದೇವೆ. ನಕ್ಕಿದ್ದೇವೆ. ಒಂದೊಂದು ಸಿನಿಮಾ ಬೀರುವ ಒಂದೊಂದು ತರಾ. ಅದು ಸಿನಿಮಾಗಳಿಗಿಂತ ಹೆಚ್ಚಾಗಿ ನೋಡುವವರ ಮನಸ್ಥಿತಿ. ಈಗ ಕೆಜಿಎಫ್ ಸಿನಿಮಾ ಕೂಡಾ ಅಂಥದ್ದೇ ಕಾರಣದಿಂದ ಸುದ್ದಿಯಾಗಿದೆ.

  ಇಲ್ಲೊಬ್ಬ 15 ವಯಸ್ಸಿನ ಬಾಲಕ ಕೆಜಿಎಫ್‍ನ್ನು ಹಲವು ಬಾರಿ ನೋಡಿದ್ದಾನೆ. ನೋಡಿದ ಎಲ್ಲರಂತೆಯೇ ಇಷ್ಟಪಟ್ಟಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ರಾಕಿಭಾಯ್ ಪಾತ್ರ ಸಿಗರೇಟು ಸೇದುವುದು ಇಷ್ಟವಾಗಿ ಹೋಗಿದೆ. ಮತ್ತೆ ಮತ್ತೆ ನೋಡಿದ್ದಾನೆ. ಅಂಗಡಿಗೆ ಹೋಗಿ ಪ್ಯಾಕುಗಟ್ಟಲೆ ಸಿಗರೇಟು ತಂದಿದ್ದಾನೆ. ಪದೇ ಪದೇ ಸೇದಿದ್ದಾನೆ. ಎಷ್ಟರಮಟ್ಟಿಗೆ ಎಂದರೆ ಕೆಲವೇ ದಿನಗಳಲ್ಲಿ ಅವನ ಹೊಟ್ಟೆ ತುಂಬಾ ಅಲರ್ಜೆಟಿಕ್ ಆಗಿ ಆಸ್ಪತ್ರೆ ಸೇರಿದ್ದಾನೆ. ಆ ಹುಡುಗ ಹೈದರಾಬಾದಿನವನು. 15 ವರ್ಷದ ಹುಡುಗನಾದ ಕಾರಣ ಹೆಸರು ಮತ್ತಿತರ ವಿವರ ಹೇಳುವಂತಿಲ್ಲ. ಹೇಳಬಾರದು.

  ಇದರ ಬಗ್ಗೆ ಮಕ್ಕಳು ಹೆಚ್ಚು ನಿಗಾವಹಿಸಬೇಕು ಎನ್ನುವುದು ವೈದ್ಯರ ವಾದ. ಇನ್ನು ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಬೇಕಾ ಎನ್ನುವವರಿಗೂ ಕೊರತೆ ಇಲ್ಲ. ಆದರೆ ಅದೇ ಕೆಜಿಎಫ್‍ನಲ್ಲಿ ರಾಕಿಭಾಯ್ ತಾಯಿಯನ್ನು ಪ್ರೀತಿಸುವ, ಆರಾಧಿಸುವ ದೃಶ್ಯಗಳೂ ಇದ್ದವು. ಯಶ್ ಅವರಷ್ಟೇ ಸ್ಟ್ರಾಂಗ್ ಆದ ರಮಿಕಾ ಸೇನ್ ಪಾತ್ರವೂ ಇತ್ತು. ಅದೆಲ್ಲವನ್ನೂ ಬಿಟ್ಟು ಅವನಿಗೆ ರಾಕಿಭಾಯ್ ಸಿಗರೇಟು ಸೇದುವ ದೃಶ್ಯ ಇಷ್ಟವಾಗಿ, ಅದಕ್ಕೆ ಗಂಟುಬಿದ್ದರೆ ಯಾರು ಏನು ಮಾಡೋಕೆ ಆಗುತ್ತೆ. ಅಂದಹಾಗೆ ರಿಯಲ್ ರಾಕಿಭಾಯ್ ಅರ್ಥಾತ್ ಯಶ್, ತಮ್ಮ ರಿಯಲ್ ಲೈಫಿನಲ್ಲಿ ಸಿಗರೇಟು ಸೇದುವ ಚಟ ಅಂಟಿಸಿಕೊಂಡಿಲ್ಲ.

 • ಕೆಜಿಎಫ್ ಮುಗಿದ ಕೂಡ್ಲೇ ಉಗ್ರಂ ವೀರಂ

  after kgf its ugram veeram

  ಉಗ್ರಂ. ಕನ್ನಡಕ್ಕೆ ಪ್ರಶಾಂತ್ ನೀಲ್ ಅವರನ್ನು ನಿರ್ದೇಶಕರನ್ನಾಗಿ ಪರಿಚಯಿಸಿದ ಸಿನಿಮಾ. ಈಗ ಪ್ರಶಾಂತ್ ನೀಲ್, ಇಡೀ ದೇಶವೇ ತಿರುಗಿ ನೋಡುವಂತಾ ಕೆಜಿಎಫ್ ಸಿನಿಮಾ ರೆಡಿ ಮಾಡಿದ್ದಾರೆ. ಕೆಜಿಎಫ್ ಮುಗಿದ ನಂತರ ಮಂದೇನು ಎನ್ನುವ ಪ್ರಶ್ನೆಗೆ ಈಗ ಉಗ್ರಂ ವೀರಂ ಎನ್ನುವ ಉತ್ತರ ಸಿಕ್ಕಿದೆ.

  ಉಗ್ರಂ ಹೀರೋ ಶ್ರೀಮುರಳಿಯೇ, ಉಗ್ರಂ ವೀರಂ ಚಿತ್ರಕ್ಕೆ ಹೀರೋ. ಕಥೆ ಅಥವಾ ಉಳಿದ ಯಾವುದೇ ವಿಷಯದ ಬಗ್ಗೆ ಈಗಲೇ ಏನೂ ಹೇಳೋಕಾಗಲ್ಲ. ಪ್ರಶಾಂತ್, ಸದ್ಯಕ್ಕೆ ಕೆಜಿಎಫ್ ರಿಲೀಸ್ ಬ್ಯುಸಿಯಲ್ಲಿದ್ದಾರೆ. ಉಗ್ರಂ ಬೆನ್ನಲ್ಲೇ ಉಗ್ರಂ ವೀರಂ ಸ್ಕ್ರಿಪ್ಟ್ ಕೆಲಸ ಶುರುವಾಗಿತ್ತು. ಕಥೆ ಫೈನಲ್ ಆಗಿದೆ ಎಂದಿದ್ದಾರೆ ಶ್ರೀಮುರಳಿ.

  ಕೆಜಿಎಫ್ ರಿಲೀಸ್ ಸೆಲಬ್ರೇಷನ್ ನೋಡಿ ಸಂಭ್ರಮವಾಗ್ತಿದೆ. ನಾವು ಅಂದುಕೊಂಡಂತೆಯೇ ನಡೆಯುತ್ತಿದೆ. ಪ್ರಶಾಂತ್ ಕನಸು ನನಸಾಗುತ್ತಿದೆ. ಅದನ್ನು ನೋಡಿಯೇ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ ಶ್ರೀಮುರಳಿ.

 • ಕೆಜಿಎಫ್ ಮೇಕಿಂಗ್‍ಗೆ ಫಿದಾ ಆದ ಪ್ರೇಕ್ಷಕರು

  fans completely in love with kgf

  ಕೆಜಿಎಫ್ ಚಿತ್ರ ಎಲ್ಲ ಅಡೆತಡೆಗಳ ಮಧ್ಯೆಯೂ ರಿಲೀಸ್ ಆಗಿದೆ. ಮೈಸೂರಿನಲ್ಲಿ ಮಧ್ಯರಾತ್ರಿ 1 ಗಂಟೆಗೆ ಶೋ ನಡೆದಿದೆ. ಮೈಸೂರಿನ ಡಿಆರ್‍ಸಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ ಎರಡು ಶೋ ನಡೆದಿವೆ. ಬೆಳಕು ಹರಿಯುವ ಮುನ್ನವೇ ಶೋ ನಡೆದಿರುವುದು ವಿಶೇಷ.

  ಮೇನ್ ಥಿಯೇಟರ್ ನರ್ತಕಿಯಲ್ಲಿ ರಾತ್ರಿಯಿಡೀ ಕಾದು ನಿಂತಿದ್ದ ಪ್ರೇಕ್ಷಕರು, ಬೆಳ್ಳಂಬೆಳಗ್ಗೆಯೇ ಕೆಜಿಎಫ್‍ನ್ನು ಕಣ್ತುಂಬಿಕೊಂಡಿದ್ದಾರೆ. ರಿಲೀಸ್ ಆದ ಎಲ್ಲ ಕಡೆ ಚಿತ್ರ ಹೌಸ್‍ಫುಲ್. ರಾಜ್ಯದ ಹಲವೆಡೆ ಯಶ್ ಅಭಿಮಾನಿಗಳು, ಯಶ್ ಕಟೌಟ್‍ಗೆ ಹಾಲಿನ ಅಭಿಷೇಕ ನಡೆಸಿದ್ದಾರೆ. 

  ಇಷ್ಟೆಲ್ಲದರ ಮಧ್ಯೆ ಮಧ್ಯರಾತ್ರಿಯೇ ಸಿನಿಮಾ ನೋಡಿದ ವಿದೇಶದ ಪ್ರೇಕ್ಷಕರು, ಯಶ್ ಮತ್ತು ಪ್ರಶಾಂತ್ ನೀಲ್‍ಗೆ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ರವಿ ಬಸ್ರೂರು ಸಂಗೀತ ಹಾಗೂ ಭುವನ್ ಗೌಡ ಕ್ಯಾಮೆರಾಗೆ ಹೆಚ್ಚಿನ ಸ್ಕೋರ್ ಕೊಟ್ಟಿದ್ದಾರೆ

 • ಕೆಜಿಎಫ್ ರಿಲೀಸ್ ಡೇಟ್ ಫಿಕ್ಸ್

  kgf release date fix

  ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ, ರಾಜಕುಮಾರ ಖ್ಯಾತಿಯ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ನಿರ್ಮಾಣದ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಏಕಕಾಲಕ್ಕೆ ಬರುತ್ತಿರುವ ಸಿನಿಮಾ ರಿಲೀಸ್ ಆಗುವುದು ಮಾರ್ಚ್‍ನಲ್ಲಿ. ಮಾರ್ಚ್ 21ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

  ಚಿತ್ರದ ಶೂಟಿಂಗ್ ಫೈನಲ್ ಹಂತಕ್ಕೆ ಬಂದಿದ್ದು, ಡಿಸೆಂಬರ್‍ನಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅದ್ಧೂರಿ ಚಿತ್ರವಾಗುತ್ತಿರುವ ಕೆಜಿಎಫ್ ಚಿತ್ರ ಡಿಸೆಂಬರ್‍ನಲ್ಲೇ ರಿಲೀಸ್ ಆಗಬೇಕಿತ್ತು. ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದರೂ, ಮಾರ್ಚ್‍ಗೆ ಚಿತ್ರವನ್ನು ಥಿಯೇಟರ್‍ಗೆ ತಂದೇ ತರಲು ಚಿತ್ರತಂಡ  ನಿರ್ಧರಿಸಿದೆ.

 • ಕೆಜಿಎಫ್ ರಿಲೀಸ್‍ಗೂ ಮೊದಲೇ ಯಶ್ 100+

  yash crossed century before kgf release

  ಕೆಜಿಎಫ್ ರಿಲೀಸ್‍ಗೆ ಉಳಿದಿರೋದು ಇನ್ನೊಂದೇ ಒಂದು ದಿನ. ನಾಳೆ ಇಷ್ಟು ಹೊತ್ತಿಗೆ ಜಗತ್ತಿನ ಎಲ್ಲ ಕಡೆ ಕೆಜಿಎಫ್ ಫಸ್ಟ್ ರಿಪೋರ್ಟ್ ಬಂದಿರುತ್ತೆ. ಇದು ಸೂಪರ್ ಸಕ್ಸಸ್ ಆಗಲಿದೆ.. ಆಗಲೇಬೇಕು.. ಇದು ಕೆಜಿಎಫ್ ನಿರ್ಮಾಪಕರಷ್ಟೇ ಅಲ್ಲ, ಕೆಜಿಎಫ್ ಟೀಂ ಹಾಗೂ ಚಿತ್ರರಂಗದವರ ಬಯಕೆ. ಇದರ ನಡುವೆಯೇ ರಾಕಿಂಗ್ ಸ್ಟಾರ್ ಸದ್ದಿಲ್ಲದೇ ಸೆಂಚುರಿ ಬಾರಿಸಿಬಿಟ್ಟಿದ್ದಾರೆ.

  ಹೇಗೆ ಅಂತೀರಾ.. ಕೆಜಿಎಫ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಯಶ್, 100ಕ್ಕೂ ಹೆಚ್ಚು ಸಂದರ್ಶನಗಳನ್ನೆದುರಿಸಿದ್ದಾರೆ. ಹೌದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿರುವ ಚಿತ್ರವನ್ನು ಅಷ್ಟೇ ಅದ್ಧೂರಿಯಾಗಿ ಪ್ರಚಾರ ಮಾಡಬೇಕಲ್ಲ. ಹೀಗಾಗಿ ಯಶ್, ಟಿವಿ, ಪತ್ರಿಕೆ, ವೆಬ್‍ಸೈಟ್‍ಗಳೂ ಸೇರಿದಂತೆ ನೀಡಿರುವ ಸಂದರ್ಶನಗಳ ಸಂಖ್ಯೆ 100ರ ಗಡಿ ದಾಟಿದೆ. ಇಷ್ಟೆಲ್ಲ ಶ್ರಮ ಹಾಕಿದ ಮೇಲೆ ಚಿತ್ರ ಗೆಲ್ಲಲೇಬೆಕಲ್ಲವೇ..

 • ಕೆಜಿಎಫ್ ಹವಾ.. ಕನ್ನಡಕ್ಕಿಂತ ತೆಲುಗಿನಲ್ಲೇ ಜಾಸ್ತಿನಾ..?

  ಕೆಜಿಎಫ್ ಹವಾ.. ಕನ್ನಡಕ್ಕಿಂತ ತೆಲುಗಿನಲ್ಲೇ ಜಾಸ್ತಿನಾ..?

  ಕೆಜಿಎಫ್ ಚಾಪ್ಟರ್ 2. ರಿಲೀಸ್ ಆಗೋಕೆ ರೆಡಿಯಾಗಿದೆ. ದೇಶಾದ್ಯಂತ ಈಗ ಕೆಜಿಎಫ್ ತೂಫಾನ್. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್  ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್.. ಎಲ್ಲರೂ ಈಗ ಟಾಕ್ ಆಫ್ ದಿ ಕಂಟ್ರಿ. ಈ ಕನ್ನಡದ ಸಿನಿಮಾ ಕ್ರೇಜ್ ಹೇಗಿದೆ ಅನ್ನೋದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಈ ಕ್ರೇಜ್ ಕನ್ನಡಕ್ಕಿಂತ ಬೇರೆ ಭಾಷೆಯಲ್ಲೇ ಹೆಚ್ಚಾಗಿದೆಯಾ ಅನ್ನೋದು ಪ್ರಶ್ನೆ. ಹೌದು ಅನ್ನೋದೇ ಉತ್ತರ.

  ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಆದ ನಂತರ ಅದು ಯಾವ ಭಾಷೆಗಳಲ್ಲಿ ಎಷ್ಟರಮಟ್ಟಿಗೆ ವೀಕ್ಷಣೆ ಪಡೆದಿದೆ ಅನ್ನೋದರ ಮೇಲೆ ಇದರ ಲೆಕ್ಕಾಚಾರವಿದೆ.

  ಹಿಂದಿಯಲ್ಲಿ 55 ಮಿಲಿಯನ್, ತಮಿಳಿನಲ್ಲಿ 12 ಮಿಲಿಯನ್, ಮಲಯಾಳಂನಲ್ಲಿ ಸುಮಾರು 9 ಮಿಲಿಯನ್ ಹಾಗೂ ತೆಲುಗಿನಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿದೆ ಕೆಜಿಎಫ್ ಟ್ರೇಲರ್. ಆದರೆ, ಕನ್ನಡದಲ್ಲಿ ಕೆಜಿಎಫ್ ಟ್ರೇಲರ್ ನೋಡಿದವರ ಸಂಖ್ಯೆ 19 ಮಿಲಿಯನ್. ಹೌದು.. ಇದು ಹೊಂಬಾಳೆಯವರ ಅಧಿಕೃತ ಪೇಜ್‍ನ ವೀಕ್ಷಣೆಯ ಲೆಕ್ಕ ಮಾತ್ರ. ಉಳಿದ ಲೆಕ್ಕದ ಮಾತು ಬಿಡಿ.. ಆದರೆ ಯಶ್‍ಗೆ ಕನ್ನಡಕ್ಕಿಂತ ಹಿಂದಿ, ತೆಲುಗಿನಲ್ಲೇ ಹೆಚ್ಚು ಕ್ರೇಜ್ ಇದೆ ಅನ್ನೋ ಮಾತಿಗೆ ಈಗ ಬಲವೂ ಸಿಕ್ಕಿದೆ.

  ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ನೋಡಿದವರ ಸಂಖ್ಯೆ ಕೇವಲ 2 ದಿನದಲ್ಲಿ 110 ಮಿಲಿಯನ್ ದಾಟಿದೆ. ಅರ್ಥಾತ್ ಟ್ರೇಲರ್ ನೋಡಿದವರ ಸಂಖ್ಯೆ 11 ಕೋಟಿಗೂ ಹೆಚ್ಚು. ಇದು ಕೇವಲ ಅಧಿಕೃತ ಹೊಂಬಾಳೆ ಪೇಜ್ ಲೆಕ್ಕ ಮಾತ್ರ..

 • ಕೆಜಿಎಫ್ ಹೀರೋ ನಾನೊಬ್ಬನೇ ಅಲ್ಲ.. - ಯಶ್

  yash credits kgf's success to his entire team

  ನಾನು ಸಿನಿಮಾದ ಹೀರೋ. ಆದರೆ, ಚಿತ್ರದಲ್ಲಿ ನಾನೊಂದು ಮುಖವೇ ಹೊರತು, ನಾನೇ ಎಲ್ಲ ಅಲ್ಲ. ಚಿತ್ರದ ಹೀರೋಗಳು ಹಲವರಿದ್ದಾರೆ. ಇದು ಯಶ್ ಕೆಜಿಎಫ್ ಚಿತ್ರದ ಬಗ್ಗೆ ಹೇಳಿರುವ ಮತ್ತೊಂದು ಮಾತು.

  ಚಿತ್ರದ ನಿಜವಾದ ಹೀರೋ ನಿರ್ಮಾಪಕ ವಿಜಯ್ ಕಿರಗಂದೂರು. ಅವರು ಧೈರ್ಯ ಮಾಡದೇ ಇದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಇನ್ನು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡ ಚಿತ್ರರಂಗದ ಆಸ್ತಿ. ಛಾಯಾಗ್ರಹಕ ಭುವನ್ ಗೌಡ, ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಎಫೆಕ್ಟ್ ರಾಜನ್, ಉದಯ ರವಿ... ಅಷ್ಟೇ ಏಕೆ, ಸೆಟ್‍ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ಚಿತ್ರದ ಹೀರೋಗಳು. ನಾನು ಜಸ್ಟ್ ಮುಖ ಮಾತ್ರ ಎಂದು ಕ್ರೆಡಿಟ್‍ನ್ನು ಇಡೀ ಚಿತ್ರತಂಡಕ್ಕೆ ಅರ್ಪಿಸಿದ್ದಾರೆ ಯಶ್.

 • ಕೆಜಿಎಫ್-2 : ಯಶ್ ಪಾತ್ರಕ್ಕೆ ತಮಿಳು ನಟ ಸರಣ್ ಶಕ್ತಿ..!!

  saran shakthi joins kgf chapter 2

  ಕೆಜಿಎಫ್-2ನಲ್ಲಿ ಯಶ್ ಪಾತ್ರಕ್ಕೆ ಅದೂ ರಾಕಿ ಭಾಯ್ ಪಾತ್ರಕ್ಕೆ ತಮಿಳು ನಟ ಸರಣ್ ಶಕ್ತಿ ಎಂಟ್ರಿಯಾಗಿದ್ದಾರೆ. ಕನ್‍ಫ್ಯೂಸ್ ಬಿಟ್ಹಾಕಿ. ಮೂಲಗಳ ಪ್ರಕಾರ ಸರಣ್ ಶಕ್ತಿ, ಹದಿಹರೆಯದ ರಾಕಿಭಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರತಂಡದಿಂದ ಹೊರಬಿದ್ದಿರೋ ಸೀಕ್ರೆಟ್ ಮಾಹಿತಿ.

  ವಡಾ ಚೆನ್ನೈ, ಸಗಾ ಚಿತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ಸರಣ್ ಶಕ್ತಿ, ಕೆಜಿಎಫ್-2 ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದನ್ನು ಖುಷಿಯಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಈ ವರ್ಷದ ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

 • ಕೆಜಿಎಫ್‍ಗೆ ಪೈರಸಿ ಶಾಕ್.. 

  piracy criminals shock kgf once again

  ರಿಲೀಸ್ ಆದ ಮರುಕ್ಷಣದಿಂದ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿರುವ ಕೆಜಿಎಫ್‍ಗೆ ಪೈರಸಿ ಕ್ರಿಮಿನಲ್ಸ್ ಶಾಕ್ ಕೊಟ್ಟೇಬಿಟ್ಟಿದ್ದಾರೆ. ಹೆಲ್ಪ್‍ಲೈನ್ ನಂಬರ್ ನೀಡಿ, ಕಾನೂನು ಮುಂಜಾಗ್ರತೆ ಕ್ರಮ ಕೈಗೊಂಡರೂ ಕೆಲವು ಕ್ರಿಮಿನಲ್ಸ್ ಪೈರಸಿ ಮಾಡಿದ್ದಾರೆ. ಒಂದೆರಡು ವೆಬ್‍ಸೈಟ್‍ಗಳಲ್ಲಿ ಕೆಜಿಎಫ್ ಹಿಂದಿ ಹಾಗೂ ತೆಲುಗು ವರ್ಷನ್ ಸಿನಿಮಾ ಅಪ್‍ಲೋಡ್ ಮಾಡಿದ್ದಾರೆ.

  ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತಿದ್ದ ಕೆಜಿಎಫ್ ತಂಡ ತಕ್ಷಣ ಕ್ರಮ ತೆಗೆದುಕೊಂಡಿದೆಯಾದರೂ, ಪೈರಸಿ ಕ್ರಿಮಿನಲ್ಸ್‍ಗಳು ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿರುವುದು ನಿಜ. 

  ಆದರೆ, ಈ ಪೈರಸಿ ಕ್ರಿಮಿನಲ್ಸ್ ಕನ್ನಡದಲ್ಲಿ ಕೆಜಿಎಫ್‍ನ್ನು ಮುಟ್ಟಿಲ್ಲ. 

 • ಕೆಜಿಎಫ್‍ಗೆ ಮಸ್ತ್ ಮಸ್ತ್ ಹುಡುಗಿ ಬಂದ್ಲು

  raveena tandon jins kgf team

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸಂಜಯ್ ದತ್ ಬರ್ತಾರೆ ಅನ್ನೋ ಸುದ್ದಿ ಇರುವಾಗಲೇ, ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಬರ್ತಾರೆ ಅನ್ನೋ ಸುದ್ದಿ ಸರಿದಾಡುತ್ತಿದೆ. ಉಪೇಂದ್ರ ಚಿತ್ರದಲ್ಲಿ ಕೀರ್ತಿಯಾಗಿ ನಟಿಸಿದ್ದ ರವೀನಾ ಟಂಡನ್, ಬಾಲಿವುಡ್‍ನಲ್ಲೂ ಕೂಡಾ ತೆರೆ ಹಿಂದಿನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  ಈಗ ವಿಶ್ವಾದ್ಯಂತ ಸದ್ದು ಮಾಡಿದ ಕೆಜಿಎಫ್ ಚಿತ್ರದ 2ನೇ ಭಾಗಕ್ಕೆ ರವೀನಾ ಟಂಡನ್ ಓಕೆ ಎಂದಿದ್ದಾರೆ ಅನ್ನೋ ಸುದ್ದಿಯಿದೆ. ಚಾಪ್ಟರ್ 2 ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ.

 • ಗಡ್ಡಧಾರಿಗಳೆಲ್ಲ ಕ್ಯೂನಲ್ಲಿ ನಿಂತ್ರು..

  kgf craze witnessed in malleswaram

  ಕೆಜಿಎಫ್ ಚಿತ್ರದ ಹೈಲೈಟುಗಳು ಒಂದೆರಡಲ್ಲ.. ಹೀಗಾಗಿಯೇ ದಾಖಲೆ ಬರೆದ ಚಿತ್ರದಲ್ಲಿ ಗಡ್ಡಧಾರಿಗಳೂ ಗಮನ ಸೆಳೆದಿದ್ದರು. ಹೀರೋ, ವಿಲನ್, ಸಣ್ಣ ಪುಟ್ಟ ಪಾತ್ರಗಳು.. ಎಲ್ಲರೂ ಗಡ್ಡಧಾರಿಗಳೇ. ಹೀಗಾಗಿಯೇ, ಕೆಜಿಎಫ್ 2 ಚಿತ್ರದ ಅಡಿಷನ್‍ಗೆ ಸಾಲು ಸಾಲಾಗಿ ನಿಂತಿದ್ದವರಲ್ಲಿ ಗಡ್ಡಧಾರಿಗಳೇ ಹೆಚ್ಚಿದ್ದರು.

  ಮೇ 6ನೇ ತಾರೀಕಿನಿಂದ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಅಧಿಕೃತವಾಗಿ ಆರಂಭವಾಗಲಿದೆ. ಜೂನ್ ಆರಂಭದಲ್ಲಿ ಯಶ್ ಪಾತ್ರದ ಚಿತ್ರೀಕರಣ ಶುರುವಾಗಲಿದೆ. ಇದಕ್ಕೂ ಮುನ್ನ ಕೆಲವು ಪುಟ್ಟ ಪುಟ್ಟ ಪಾತ್ರಗಳಿಗಾಗಿ ಅಡಿಷನ್ ನಡೆಸಲಾಗಿದೆ. ಮಲ್ಲೇಶ್ವರಂ ಜಿಎಂ ರಿಜಾಯ್ಸ್‍ನಲ್ಲಿ ನಡೆದ ಅಡಿಷನ್ಸ್‍ನಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಹಾಗೆ ಬಂದವರಲ್ಲಿ ಗಡ್ಡಧಾರಿಗಳೇ ಹೆಚ್ಚಿದ್ದರು. 8ರಿಂದ 16 ವರ್ಷದ ಮಕ್ಕಳು, 25 ವರ್ಷದ ಯುವಕರಿಗೆ ಅಡಿಷನ್‍ಗೆ ಬರುವಂತೆ ಮೊದಲೇ ಸೂಚಿಸಲಾಗಿತ್ತು. ಅವರೆಲ್ಲ ತಮ್ಮ ತಮ್ಮ ಪ್ರತಿಭೆಯನ್ನು ಕೇವಲ 1 ನಿಮಿಷದಲ್ಲಿ ತೋರಿಸಬೇಕಿತ್ತು.

  ರಸ್ತೆಯುದ್ದಕ್ಕೂ ಕ್ಯೂ ನಿಂತಿದ್ದ ಯುವಕರ ಸರದಿ ಸಾಲು, ಕಿಲೋಮೀಟರುಗಟ್ಟಲೆ ಇತ್ತು ಎನ್ನುವುದೇ ಕೆಜಿಎಫ್ ಹವಾಗೆ ಸಾಕ್ಷಿ. ಇವರಲ್ಲಿ ಕೆಲವರನ್ನು ನಿರ್ದೇಶಕ ಪ್ರಶಾಂತ್ ನೀಲ್ ಆಯ್ಕೆ ಮಾಡಿದ್ದಾರಂತೆ

 • ಜನವರಿ 8ಕ್ಕೆ ಕೆಜಿಎಫ್ 2 ಟೀಸರ್

  kgf chapter 2 teaser on jan 8th

  ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್.. ಅಭಿಮಾನಿಗಳನ್ನು ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕೊನೆಗೂ ಒಂದು ಥ್ರಿಲ್ ಕೊಡೋಕೆ ಮನಸ್ಸು ಮಾಡಿದ್ದಾರೆ. ಜನವರಿ 8ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಇದು ಈ ಚಿತ್ರದ ಮೊದಲ ಟೀಸರ್ ಅನ್ನೋದು ನೆನಪಿನಲ್ಲಿರಲಿ.

  ಏಕೆಂದರೆ ಇದುವರೆಗೆ ಪ್ರಶಾಂತ್ ನೀಲ್ ತೋರಿಸಿರೋದು ಒಂದು ಪೋಸ್ಟರ್ ಮಾತ್ರ. ಅದೊಂದು ದೊಡ್ಡ ಸಾಮ್ರಾಜ್ಯ. ಅದನ್ನು ಸೃಷ್ಟಿಸಲು ನಾವು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದೇವೆ. ಮತ್ತಷ್ಟು ಬಲಿಷ್ಠರಾಗಿ, ದೊಡ್ಡದಾಗಿ ಬರುತ್ತಿದ್ದೇವೆ ಎಂದಿದ್ದಾರೆ ಪ್ರಶಾಂತ್.

  ಅಭಿಮಾನಿಗಳು ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಅಂದಹಾಗೆ.. ಜನವರಿ 8, ಯಶ್ ಹುಟ್ಟುಹಬ್ಬ. ಸ್ಸೋ.. ಇದು ಬರ್ತ್ ಡೇ ಗಿಫ್ಟ್.

 • ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

  ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

  ಟೀಸರ್ನಲ್ಲೇ ಸಂಚಲನ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್ 2 ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಇನ್ನು 6 ತಿಂಗಳು. ಥಿಯೇಟರಿನಲ್ಲಿ ಚಿನ್ನದ ಗಣಿಯ ದೂಳು ಏಳಲಿದೆ. ರಾಕಿಭಾಯ್ ಯಶ್, ಅಧೀರ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ ಎಲ್ಲರನ್ನೂ ಆ ದಿನ ತೆರೆಯ ಮೇಲೆ ನೋಡಿ ಎಂಜಾಯ್ ಮಾಡಬಹುದು.

  ಚಾಪ್ಟರ್ 2 ಸೂಪರ್ ಸಕ್ಸಸ್ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಮೇ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಮತ್ತೊಮ್ಮೆ ಭಾರತೀಯ ಚಿತ್ರರಂದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ನಂಬಿಕೆಯಲ್ಲಿದ್ದಾರೆ ಅಭಿಮಾನಿಗಳು.