` prashanth neel, - chitraloka.com | Kannada Movie News, Reviews | Image

prashanth neel,

 • ಏನ್ ಬೇಕು..? ಚಾಯ್ಸ್ ಮಾಡಿ.. ವೋಟ್ ಮಾಡಿ.. ಕೆಜಿಎಫ್ ನೋಡಿ..

  ಏನ್ ಬೇಕು..? ಚಾಯ್ಸ್ ಮಾಡಿ.. ವೋಟ್ ಮಾಡಿ.. ಕೆಜಿಎಫ್ ನೋಡಿ..

  ನಿಮಗೆ ಹಾಡು ಬೇಕಾ..?  ಒಂದನ್ನು ಒತ್ತಿ..

  ನಿಮಗೆ ಟ್ರೇಲರ್ ಬೇಕಾ..? ಎರಡನ್ನು ಒತ್ತಿ..

  ಸರ್‍ಪ್ರೈಸ್ ಬೇಕಾ..? ಮೂರನ್ನು ಒತ್ತಿ..

  ಇಂತಾದ್ದೊಂದು ಅಚ್ಚರಿಯ ವೋಟಿಂಗ್ ಸ್ಪರ್ಧೆ ಇಟ್ಟಿದೆ ಕೆಜಿಎಫ್ ಚಾಪ್ಟರ್ 2. ಪ್ರೇಕ್ಷಕರೇ ಚಾಯ್ಸ್ ನೀಡಬೇಕು. ಇದರ ಅರ್ಥ ಇಷ್ಟೆ.. ಕೆಜಿಎಫ್ ಟೀಂ, ಈ ಮೂರಕ್ಕೂ ಸಿದ್ಧವಾಗಿದೆ. ಯಾವುದು ಮೊದಲು ಅನ್ನೋದನ್ನ ಪ್ರೇಕ್ಷಕರೇ ನಿರ್ಧರಿಸಬೇಕು. ಪ್ರಚಾರದ ಹೊಸ ವೈಖರಿಯನ್ನು ಪರಿಚಯಿಸುತ್ತಿದೆ ಕೆಜಿಎಫ್ ಟೀಂ.

  ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ. ಈಗಿನ್ನೂ ಫೆಬ್ರವರಿ ಅಂತ್ಯದಲ್ಲಿದ್ದೇವೆ. ಇನ್ನು ಒಂದೂವರೆ ತಿಂಗಳು ಕಂಪ್ಲೀಟ್ ಕೆಜಿಎಫ್ ಪ್ರಚಾರ ಬಿರುಗಾಳಿಯಾಗಬೇಕು. ಬಿರುಗಾಳಿಯ ಮೊದಲ ಹಂತವೇ ವೋಟಿಂಗ್ ಪ್ರಚಾರ..

 • ಏಪ್ರಿಲ್ 2020ಕ್ಕೆ ಕೆಜಿಎಫ್-ಚಾಪ್ಟರ್ 2 ರಿಲೀಸ್..?

  will kgf chapter 2 release in august 2020

  2018ರಲ್ಲಿ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಚಿತ್ರದ ಚಾಪ್ಟರ್ 2 ಚಿತ್ರೀಕರಣ ಹಂತದಲ್ಲಿದೆ. ಯಶ್ ಜೊತೆಗೀಗ ಸಂಜಯ್ ದತ್ ಜೊತೆಗೂಡಿದ್ದಾರೆ. ಈಗ ಶುರುವಾಗಿರೋದು ಚಿತ್ರದ ರಿಲೀಸ್ ಡೇಟ್ ಕುರಿತ ಸುದ್ದಿ. 2020ರ ಏಪ್ರಿಲ್‍ನಲ್ಲಿ ಕೆಜಿಎಫ್-2 ರಿಲೀಸ್ ಆಗಲಿದೆಯಂತೆ.

  ಮೊದಲಿನ ಪ್ಲಾನ್ ಪ್ರಕಾರ 2020ರ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಎನ್ನಲಾಗಿತ್ತು. ಆದರೆ, ಈಗ ಏಪ್ರಿಲ್‍ಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಕೆಜಿಎಫ್ ಮೊದಲ ಭಾಗವನ್ನು ಮುಗಿಸಲು ಚಿತ್ರತಂಡ 2 ವರ್ಷಗಳಷ್ಟು ದೀರ್ಘ ಸಮಯ ತೆಗೆದುಕೊಂಡಿತ್ತು. ಚಾಪ್ಟರ್ 2 ಬೇಗ ರೆಡಿಯಾಗುತ್ತಿರುವುದಕ್ಕೆ ಕಾರಣ, ಚಾಪ್ಟರ್ 2ನ ಬಹುತೇಕ ಶೂಟಿಂಗ್ ಮೊದಲೇ ಮುಗಿದಿತ್ತು ಎನ್ನಲಾಗುತ್ತಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಟೀಂನಲ್ಲಿ ಈಗಾಗಲೇ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕ, ವಸಿಷ್ಠ ಸಿಂಹ ಮೊದಲಾದವರೆಲ್ಲ ಇದ್ದಾರೆ. ಈಗ ಹೊಸದಾಗಿ ಸಂಜಯ್ ದತ್ ಜೊತೆಯಾಗಿದ್ದಾರೆ. ರವೀನಾ ಟಂಡನ್ ಚಿತ್ರತಂಡವನ್ನು ಸೇರಿಕೊಳ್ಳಬೇಕಿದೆ. 

  ಏಪ್ರಿಲ್ ಅಂದ್ರೆ ಉಳಿದಿರೋದು ಇನ್ನು ಏಳೇ ತಿಂಗಳು. ಏಪ್ರಿಲ್ ರಿಲೀಸ್ ಅನ್ನೋ ನಿರೀಕ್ಷೆ ಏನಾಗುತ್ತೋ ಏನೋ..

 • ಕಾರ್ಮಿಕರ ಜೊತೆ ರಾಕಿಭಾಯ್ ಸಾಮ್ರಾಜ್ಯ

  kfg chapter 2 first look creates huge craze

  ನರಾಚಿ ಗಣಿ.. ಅಲ್ಲಿರುವ 20 ಸಾವಿರ ಕಾರ್ಮಿಕರಿಗೆ ಶಕ್ತಿ ತುಂಬುವ ರಾಕಿಭಾಯ್, ಗರುಡನನ್ನು ಕೊಂದು ಹಾಕಿದ್ದಾನೆ. ದುಷ್ಟ ಸಂಹಾರವಾಗಿದೆ. ಮುಂದೆ.. ಅವನು ಅಲ್ಲಿ ಹೊಸದೊಂದು ಸಾಮ್ರಾಜ್ಯ ಕಟ್ಟಬೇಕು. ಕಟ್ಟುತ್ತಾನಾ..? ರಾಕಿಭಾಯ್ ಹೊಸ ಸಾಮ್ರಾಜ್ಯ ಕಟ್ಟುವುದು ಹಾಗೂ ಆ ಹಾದಿಯಲ್ಲಿರೋ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಳ್ಳುವುದು ಕೆಜಿಎಫ್ ಚಾಪ್ಟರ್ 2ನ ಕಥೆಯಾ..?

  ಕೆಜಿಎಫ್ ರಿಲೀಸ್ ಆದ ಒಂದು ವರ್ಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಪೋಸ್ಟರ್ ರಿಲೀಸ್ ಮಾಡಿರುವ ಪ್ರಶಾಂತ್ ನೀಲ್, ಪೋಸ್ಟರ್‌ನಲ್ಲಿ ಕೊಟ್ಟಿರುವುದು ಅದೇ ಸುಳಿವು. ಸಾಮ್ರಾಜ್ಯ ಪುನರ್ ನಿರ್ಮಾಣದಲ್ಲಿ..

  ಫಸ್ಟ್ ಲುಕ್‌ನಲ್ಲಿ ಕೂಡಾ ಸಂಜಯ್ ದತ್, ರವೀನಾ ಟಂಡನ್ ಪಾತ್ರದ ಸಣ್ಣ ಸುಳಿವನ್ನೂ ಕೊಟ್ಟಿಲ್ಲ. ಹೊಂಬಾಳೆ ಬ್ಯಾನರ್‌ನ ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿಭಾಯ್‌ಗೆ ಶ್ರೀನಿಧಿ ಶೆಟ್ಟಿ ಒಲಿಯುತ್ತಾಳಾ..? ಅಧೀರನ ಕಥೆ ಏನು..? ಹೀಗೆ ಹತ್ತು ಹಲವು ಪ್ರಶ್ನೆಗಳು ಚಿತ್ರದೊಂದಿಗೆ ಮೂಡಿವೆ. ಜಸ್ಟ್ ವೇಯ್ಟ್. 2020ರ ಮಧ್ಯಭಾಗದಲ್ಲಿ ಸಿನಿಮಾ ಬರಬಹುದು.

 • ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್

  ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್

  ಡೌಟೇ ಇಲ್ಲ. ಇದು ಕನ್ನಡಿಗರ.. ಕನ್ನಡ ಸಿನಿಮಾ ಪ್ರೇಮಿಗಳ ಗೋಲ್ಡನ್ ಫೆಸ್ಟಿವಲ್. ರಿಲೀಸ್ ಆದ ಪ್ರತಿ ಚಿತ್ರಮಂದಿರದಲ್ಲೂ.. ಪ್ರತೀ ಸ್ಕ್ರೀನ್‍ನಲ್ಲೂ ಹಬ್ಬವೋ ಹಬ್ಬ. ಅದು ರಾಕಿಭಾಯ್ ಸೃಷ್ಟಿಸಿರೋ ಕ್ರೇಜ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್. ಸಂಜಯ್ ದತ್, ರವೀನಾ ಟಂಡನ್ ಬಗ್ಗೆ ಹುಟ್ಟಿದ ಕುತೂಹಲ. ಶ್ರೀನಿಧಿ ಶೆಟ್ಟಿ, ಅರ್ಚನಾ ಮೇಲೆ ಕಾಣಿಸಿದ ಪ್ರೀತಿ. ಒಂದಲ್ಲ..ಎರಡಲ್ಲ.. ಎಲ್ಲವೂ ಕೂಡಿ ಬಂದು ಸೃಷ್ಟಿಯಾದ ತೂಫಾನ್ ಇದು.

  ಮೊದಲ ದಿನವೇ ಕರ್ನಾಟಕದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ 40 ಕೋಟಿ ದಾಟಲಿದೆ. ಎಲ್ಲ ಭಾಷೆಗಳ ಶೋಗಳದ್ದೂ ಸೇರಿಸಿ. ಇದೂ ಒಂದು ದಾಖಲೆ.

  ಅಡ್ವಾನ್ಸ್ ಬುಕ್ಕಿಂಗ್‍ನಲ್ಲಿ ದೇಶದಾದ್ಯಂತ 40 ಕೋಟಿಗಿಂತ ಹೆಚ್ಚು ಬುಕ್ಕಿಂಗ್  ಆಗಿದೆ. ಇದು ಬಾಹುಬಲಿಗಿಂತಾ ಹೆಚ್ಚು.

  ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ ಕೆಜಿಎಫ್ ಶೋಗಳು ಶುರುವಾದವು. ವಿದೇಶದಲ್ಲೂ ಕೆಲವೆಡೆ ಮಿಡ್ ನೈಟ್ ಶೋ ನಡೆದಿದ್ದು ವಿಶೇಷವಾಗಿತ್ತು.

  ಬೆಂಗಳೂರಿನ ವೆಂಕಟೇಶ್ವರ ಟಾಕೀಸ್‍ನಲ್ಲಿ ಯಶ್ ಅವರ ಮಹಿಳಾ ಅಭಿಮಾನಿಗಳಿಗಾಗಿಯೇ ವಿಶೇಷ ಶೋ ಇದೆ. ಯಶ್ ಅವರ ಮಹಿಳಾ ಫ್ಯಾನ್ಸ್ ಎಲ್ಲ ಒಟ್ಟಾಗಿ ಥಿಯೇಟರಿನ ಎಲ್ಲ ಟಿಕೆಟ್ ಖರೀದಿಸಿ ಒಟ್ಟಾಗಿ ಸಿನಿಮಾ ನೋಡುತ್ತಿದ್ದಾರೆ.

  ಗುಜರಾತ್‍ನ ಸೂರತ್‍ನಲ್ಲಿ ಇದೇ ಮೊದಲ ಬಾರಿಗೆ 6 ಗಂಟೆ ಶೋ ಪ್ರದರ್ಶನವಾಗಿದೆ. ಗುಜರಾತ್ ಇತಿಹಾಸದಲ್ಲಿಯೇ 6 ಗಂಟೆಯ ಶೋಗಳು ಅದರಲ್ಲೂ ಸೂರತ್‍ನಲ್ಲಿ ನಡೆದಿರಲಿಲ್ಲ.

  ರಿಲೀಸ್ ಆಗುವುದಕ್ಕೂ ಮುನ್ನ ರಿಲೀಸ್ ಆದ ರಣಧೀರ ಸುಲ್ತಾನಾ ಸಾಂಗ್ ಪ್ರೇಕ್ಷಕರಿಗೆ ಮತ್ತಷ್ಟು ಥ್ರಿಲ್ ಕೊಟ್ಟಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 40 ಮಿಲಿಯನ್‍ಗೂ ಹೆಚ್ಚು ವೀಕ್ಷಕರು ಹಾಡನ್ನು ನೋಡಿದರು.

  ಸ್ಸೋ.. ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ..

 • ಕೆಜಿಎಫ್ : ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ..

  ಕೆಜಿಎಫ್ : ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ..

  ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಹವಾ ಮೊದಲಿನಿಂದಲೂ ಕಡಿಮೆ. ಕಡಿಮೆ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದರೆ ಉತ್ತಮ. ಅಕಸ್ಮಾತ್ ರಿಲೀಸ್ ಆದರೂ.. ತಮಿಳುನಾಡಿನ ಮೇನ್ ಥಿಯೇಟರುಗಳಂತೂ ಸಿಗುತ್ತಿರಲಿಲ್ಲ. ಸಿಕ್ಕರೂ ಫುಲ್ ಶೋಗಳಿರುತ್ತಿರಲಿಲ್ಲ. ಈಗ ಮಲ್ಟಿಪ್ಲೆಕ್ಸುಗಳಲ್ಲಿ ಕನ್ನಡ ಚಿತ್ರಗಳಿಗೆ ಸಿಗುತ್ತಿರೋ ಮರ್ಯಾದೆ ಇದೆಯಲ್ಲ.. ಅದಕ್ಕಿಂತ ಕೆಟ್ಟದಾಗಿರುತ್ತಿತ್ತು. ಶೋ ಟೈಂ ಮತ್ತು ಸ್ಥಳ ಎಲ್ಲೋ ಊರ ಹೊರಗೆ ಸಿಗುತ್ತಿದ್ದುದೇ ಹೆಚ್ಚು. ಗಡಿ ಭಾಗದಲ್ಲಿದ್ದ ಕನ್ನಡಿಗರಂತೂ ಎಷ್ಟೋ ಬಾರಿ ಗಡಿ ದಾಟಿ ಬಂದು ಕರ್ನಾಟಕದಲ್ಲಿಯೇ ಸಿನಿಮಾ ನೋಡಿ ಹೋಗುತ್ತಿದ್ದರು. ಅದೆಲ್ಲವನ್ನೂ ಬದಲಿಸಿರೋದು ಕೆಜಿಎಫ್ ಚಾಪ್ಟರ್ 2.

  ಚೆನ್ನೈನ ಕೆಲವು ಥಿಯೇಟರುಗಳಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಮಿಡ್ ನೈಟ್ ಶೋಗಳು ನಡೆದಿವೆ. ಮಧ್ಯರಾತ್ರಿ 1 ಗಂಟೆ, 4 ಗಂಟೆಗೆ ಚೆನ್ನೈನಲ್ಲೇ ಕೆಜಿಎಫ್ ಚಾಪ್ಟರ್ 2 ಕನ್ನಡ ವರ್ಷನ್ ಶೋ ನಡೆದಿದೆ. ಅಫ್‍ಕೋರ್ಸ್.. ತಮಿಳು ಅವತರಣಿಕೆಯೂ ರಿಲೀಸ್ ಆಗಿದ್ದು, ತಮಿಳು ಕೆಜಿಎಫ್ ಚಾಪ್ಟರ್ 2ಗೆ, ತಮಿಳುನಾಡಿನಲ್ಲಿ ಕನ್ನಡದ ಕೆಜಿಎಫ್‍ಗಿಂತ ಒಳ್ಳೆಯ ರಿಯಾಕ್ಷನ್ ಸಿಕ್ಕಿದೆ. ಅದನ್ನು ಖುಷಿಯಿಂದಲೇ ವೆಲ್‍ಕಂ ಮಾಡಬೇಕು.

  ಆದರೆ.. ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದು ಮಿಡ್ ನೈಟ್ ಶೋ ಕಂಡಿದ್ದು ಇತಿಹಾಸದಲ್ಲೇ ಮೊದಲು

 • ಕೆಜಿಎಫ್ : ರಿಲೀಸ್ ಆಗುವುದಕ್ಕೂ ಮುನ್ನ..

  ಕೆಜಿಎಫ್ : ರಿಲೀಸ್ ಆಗುವುದಕ್ಕೂ ಮುನ್ನ..

  ಜಾಸ್ತಿ ಸಮಯ ಇಲ್ಲ. ಸುಮಾರು 2 ವರ್ಷ ಕಾಯಿಸಿ ಕಾಯಿಸಿ ಕೊನೆಗೂ ದರ್ಶನ ಕೊಡೋಕೆ ಬರುತ್ತಿದೆ ರಾಕಿಭಾಯ್ ಸಿನಿಮಾ ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್ ಸೃಷ್ಟಿಯ ಸಿನಿಮಾ ಇದು. ಯಾವ್ದೋ ಒಂದೋ.. ಎರಡೋ ರೆಕಾರ್ಡ್ ಮಾಡಿ ಹಿ ಆಗಿದ್ದಲ್ಲ. ಮಾಡಿದ್ದೆಲ್ಲ ದಾಖಲೆಯೇ ಅನ್ನೋ ಹಾಗೆ ಮುನ್ನುಗ್ಗುತ್ತಿರೋ ಸಿನಿಮಾ ಕೆಜಿಎಫ್. ರಿಲೀಸ್ ಆಗುವ ಕ್ಷಣ ಹತ್ತಿರವಾದಂತೆ.. ಏನೇನೆಲ್ಲ ಆಗ್ತಿದೆ.. ನೋಡಿ.

  ಮೊದಲ 4 ದಿನದ ಶೋಗಳು ಹೌಸ್‍ಫುಲ್ ಆಗಿವೆ. ಹೀಗಾಗಿ ಬೆಂಗಳೂರಿನಲ್ಲೇ ಹೊಸದಾಗಿ 25 ಥಿಯೇಟರುಗಳಲ್ಲಿ ಸಿನಿಮಾ ಶೋ ಮಾಡಲಾಗುತ್ತಿದೆ.

  ಕೆನಡಾದಲ್ಲಿ ಯಶ್ ಫ್ಯಾನ್ಸ್ ಕಾರ್ ರ್ಯಾಲಿ ಮತ್ತು ಮಾನವ ಸರಪಳಿ ಮಾಡುವ ಮೂಲಕ ಚಿತ್ರವನ್ನು ವೆಲ್‍ಕಂ ಮಾಡಿದ್ದಾರೆ. ಅವರ ಬೆನ್ನ ಹಿಂದೆ ನಿಂತಿರೋದು ಮೈಸೂರು ಸ್ಟುಡಿಯೋ ಹೌಸ್.

  ಆಂಧ್ರ, ತೆಲಂಗಾಣದಲ್ಲಿ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲ ಥಿಯೇಟರು, ಮಲ್ಟಿಪ್ಲೆಕ್ಸುಗಳೂ ಹೌಸ್‍ಫುಲ್. ಸೋಲ್ಡ್ ಔಟ್.

  ಕೆಜಿಎಫ್ ರಿಲೀಸ್ ಆಗುತ್ತಿದೆ. ಜೊತೆಯಲ್ಲೇ ಹೊಂಬಾಳೆ ಬ್ಯಾನರ್‍ನ ಕಾಂತಾರಾ ಮತ್ತು ರಾಘವೇಂದ್ರ ಸ್ಟೋರ್ ಚಿತ್ರಗಳ ಟೀಸರುಗಳೂ ಬರುತ್ತಿವೆ. ಕಾಂತಾರಾ ರಿಷಬ್ ಶೆಟ್ಟಿ ಸಿನಿಮಾ ಆದರೆ, ರಾಘವೇಂದ್ರ ಸ್ಟೋರ್ಸ್ ಸಂತೋಷ್ ಆನಂದರಾಮ್ ಮತ್ತು ಜಗ್ಗೇಶ್ ಸಿನಿಮಾ.

  ಇವತ್ತು ಅಂದ್ರೆ ಏಪ್ರಿಲ್ 13ರ ಬೆಳಗ್ಗೆ 11ಕ್ಕೆ ಸುಲ್ತಾನಾ ಸಾಂಗ್ ರಿಲೀಸ್ ಆಗುತ್ತಿದೆ.

  ಜಗತ್ತಿನ 75 ದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಉಕ್ರೇನ್‍ನಲ್ಲಿ ಮಾತ್ರ ಇಲ್ಲ. ವಿದೇಶದಲ್ಲಿಯೇ 3000+ ಸ್ಕ್ರೀನ್‍ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರೋದು ಸ್ಪೆಷಲ್.

  ತಮಿಳುನಾಡಿನಲ್ಲಿ ಕೂಡಾ ಕೆಜಿಎಫ್ ಕ್ರೇಜ್ ಅದ್ಭುತವಾಗಿದೆ. ವಿಜಯ್ ಅಭಿನಯದ ಬೀಸ್ಟ್ ಒಳ್ಳೆಯ ಫೈಟ್ ಕೊಡುತ್ತಿದೆ.

  ಮುಂಬೈನಲ್ಲಿ ಯಶ್ ಅವರ 101 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿದೆ.

  ಹಿಂದಿಯಲ್ಲಿ ಕೆಜಿಎಫ್ ಮೊದಲ ದಿನದ ಕಲೆಕ್ಷನ್, ಕೆಜಿಎಫ್ ಚಾಪ್ಟರ್ 1ನ ಒಟ್ಟಾರೆ ಕಲೆಕ್ಷನ್‍ಗಿಂತ ಹೆಚ್ಚಿರಲಿದೆ ಅನ್ನೋದು ನಿರೀಕ್ಷೆ.

  ಕೇರಳದಲ್ಲಿ ವೀಕೆಂಡ್‍ನಲ್ಲಿ ಹೆಚ್ಚುವರಿ ಶೋಗಳ ವ್ಯವಸ್ಥೆ ಮಾಡಲಾಗಿದೆ. ಕೇರಳದಲ್ಲಿ ಈ ರೀತಿ ಮಿಡ್ ನೈಟ್ ಶೋ ವ್ಯವಸ್ಥೆ ಮೋಹನ್ ಲಾಲ್ ಮತ್ತು ಮಮ್ಮೂಟಿ ಚಿತ್ರಗಳಿಗೆ ಮಾತ್ರ ಇರುತ್ತಿತ್ತು.

 • ಕೆಜಿಎಫ್ : ರಿಲೀಸ್`ಗೂ ಮುನ್ನ ಸೃಷ್ಟಿಯಾದ ದಾಖಲೆಗಳಿವು..

  ಕೆಜಿಎಫ್ : ರಿಲೀಸ್`ಗೂ ಮುನ್ನ ಸೃಷ್ಟಿಯಾದ ದಾಖಲೆಗಳಿವು..

  ಬರ್ತಿರೋದೇ ದಾಖಲೆ ಬರೆಯೋಕೆ.. ಎಂದು ಹೇಳಿಕೊಂಡೇ ಬರ್ತಿರೋ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಿಲೀಸ್ ಹತ್ತಿರವಾಗುತ್ತಿದ್ದಂತೆ ಒಂದೊಂದೇ ದಾಖಲೆಗಳು, ಅಭಿಮಾನದ ಹರ್ಷೋದ್ಘಾರಗಳು ಸೃಷ್ಟಿಯಾಗುತ್ತಲೇ ಇವೆ. ರಾಕಿಭಾಯ್ ಹವಾ ಹಾಗಿದೆ. ಪ್ರಶಾಂತ್ ನೀಲ್ ಮೇಲೆ ಪ್ರೇಕ್ಷಕ ಇಟ್ಟಿರೋ ನಂಬಿಕೆ, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೃಷ್ಟಿಸಿರೋ ಸಂಚಲನ ಅಂತಾದ್ದು. ವಿಜಯ್ ಕಿರಗಂದೂರು ಪ್ರಚಾರದ ಯಾವ ಅವಕಾಶವನ್ನೂ ಬಿಟ್ಟಿಲ್ಲ. ದಾಖಲೆಗಳು ಸೃಷ್ಟಿಯಾಗಲೇಬೇಕಲ್ಲವೇ.. ಸಾವಿರ ಕೋಟಿ ಕಲೆಕ್ಷನ್ ಮಿಸ್ಸೇ ಇಲ್ಲ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು.

  ಕೆಜಿಎಫ್ ಚಾಪ್ಟರ್ 2 ಹವಾ ಎಫೆಕ್ಟ್ ಹೇಗಿದೆಯೆಂದರೆ ತಮಿಳಿನ ಬೀಸ್ಟ್ ಚಿತ್ರದ ಕರ್ನಾಟಕ ರೈಟ್ಸ್ ಕೇವಲ 7 ಕೋಟಿಗೆ ಸೇಲ್ ಆಗಿದೆ ಎನ್ನೋ ಮಾಹಿತಿ ಬಂದಿದೆ. ಅದು ವಿಜಯ್ ಚಿತ್ರಗಳ ರೆಗ್ಯುಲರ್ ಮಾರ್ಕೆಟ್ಟಿಗಿಂತ 10 ಕೋಟಿಯಷ್ಟು ಕಡಿಮೆ.

  ಹಿಂದಿಯಲ್ಲಿ ರಿಲೀಸ್ ಆಗಬೇಕಿದ್ದ ಜೆರ್ಸಿ ಒಂದು ವಾರ ಮುಂದಕ್ಕೆ ಹೋಗಿದೆ. ಕೆಜಿಎಫ್ ಹವಾದಲ್ಲಿ ಹಿಂದಿ ರಾಜ್ಯಗಳಲ್ಲೇ ಜೆರ್ಸಿಗೆ ಸರಿಯಾಗಿ ಥಿಯೇಟರುಗಳು ಸಿಕ್ಕಿಲ್ಲ. ಸಿಕ್ಕ ಥಿಯೇಟರುಗಳ ಸಂಖ್ಯೆ ದೊಡ್ಡದೇ ಇದ್ದರೂ ಕೆಜಿಎಫ್ ತೂಫಾನ್‍ಗೆ ಬೆಚ್ಚಿ ಬಿದ್ದು ಹಿಂದೆ ಸರಿದಿದೆ ಜೆರ್ಸಿ.

  ಪ್ರಪಂಚದ ಪ್ರಸಿದ್ಧ ಯೂಟ್ಯೂಬರ್ಸ್ ಜೊತೆ ಯಶ್ ಮಾತುಕತೆ ನಡೆಸಿರುವುದು ಇನ್ನೊಂದು ವಿಶೇಷ. ಇಂಥಾದ್ದೊಂದು ಪ್ರಯತ್ನ ಮಾಡಿರುವ ಕನ್ನಡದ ಮೊದಲ ನಟ ಯಶ್.

  ರಾಜ್ಯದ 550 ಚಿತ್ರಮಂದಿರಗಳಲ್ಲಿ ಯಶ್ ಕಟೌಟ್ ಹಾಕಲಾಗುತ್ತಿದೆ.

  ತ್ರಿವೇಣಿ ಥಿಯೇಟರ್ ಬಳಿ 72 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ.

  ಮಾಲೂರಿನಲ್ಲಿ 23,400 ಪುಸ್ತಕಗಳಿಂದ 135 ಅಡಿ ಅಗಲ 190 ಅಡಿ ಉದ್ದದ ಪೋಸ್ಟರ್ ಮಾಡಲಾಗಿದೆ. ಪುಸ್ತಕಗಳಿಂದ ಚಿತ್ರನಟನೊಬ್ಬನ ಪೋಸ್ಟರ್ ಇದೇ ಮೊದಲು.

  ಮಹಾರಾಷ್ಟ್ರದ ಪುಣೆಯಲ್ಲಿ ಕೆಜಿಎಫ್ ಹೆಸರಿನ ರೆಸ್ಟೋರೆಂಟ್ ಒಂದು ಓಪನ್ ಆಗಿದೆ.

  ಅಮೆರಿಕದಲ್ಲಿ ಬಿಲ್ ಬೋರ್ಡ್‍ಗಳ ಮೂಲಕ ಕೆಜಿಎಫ್ ಪ್ರಚಾರ ನಡೆಯುತ್ತಿದೆ. ಎಲ್‍ಇಡಿ ಮೊಬೈಲ್ ಟ್ರಕ್‍ಗಳ ಮೂಲಕ ಜನರನ್ನು ಸೆಳೆಯುತ್ತಿದೆ ಕೆಜಿಎಫ್ ಟೀಂ & ಫ್ಯಾನ್ಸ್ ಟೀಂ.

  ವಿಭಿನ್ನತೆಯೇ ಮೈವೆತ್ತಂತೆ ನಡೆಯುತ್ತಿರುವ ಪ್ರಚಾರದಲ್ಲಿ ಕೆಜಿಎಫ್ ಟೀಂಗಿಂತ ಒಂದು ಹೆಜ್ಜೆ ಮುಂದಿರೋದು ಯಶ್ ಫ್ಯಾನ್ಸ್.

 • ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

  ಕೆಜಿಎಫ್ 2 ಕ್ಲೈಮಾಕ್ಸ್ ಸೀನ್ ಬಜೆಟ್ ಎಷ್ಟು..?

  ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿದ್ದು 2018ರ ಕೊನೆಯಲ್ಲಿ. ನಂತರ 2019ರ ವರ್ಷವಿಡೀ ಸದ್ದು ಮಾಡಿದ ಸಿನಿಮಾ ದುಡಿದದ್ದು 300 ಕೋಟಿಗೂ ಹೆಚ್ಚು. ಕನ್ನಡವೊಂದರಲ್ಲೇ 100 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ ಸಿನಿಮಾ ಅದು. ಈಗ ಕೆಜಿಎಫ್ ಚಾಪ್ಟರ್ 2 ಬರ್ತಾ ಇದೆ. ಟೀಸರ್ ಹೊರಬಿದ್ದಿದೆ.

  ತಾರಾಗಣ ಮೊದಲ ಭಾಗಕ್ಕಿಂತಲೂ ಭರ್ಜರಿಯಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಎಂಟ್ರಿಯಾಗಿದೆ. ಹೀಗಾಗಿ ಸಹಜವಾಗಿಯೇ ಚಿತ್ರದ ಬಜೆಟ್ ಮತ್ತು ವೇಯ್ಟೇಜ್ ಎರಡೂ ಜಾಸ್ತಿಯಾಗಿದೆ. ಒಂದು ಮೂಲದ ಪ್ರಕಾರ ಕೆಜಿಎಫ್ ಚಾಪ್ಟರ್ 2ಗಾಗಿ ಚಿತ್ರತಂಡ ಖರ್ಚು ಮಾಡಿರೋದು 100 ಕೋಟಿಗೂ ಹೆಚ್ಚು. ವಿಚಿತ್ರ ಮತ್ತು ವಿಶೇಷವೆಂದರೆ ಕೆಜಿಎಫ್ ಚಾಪ್ಟರ್ 1 ಚಿತ್ರೀಕರಣದ ವೇಳೆಯಲ್ಲೇ 2ನೇ ಭಾಗದ ಬಹುತೇಕ ಭಾಗಗಳ ಚಿತ್ರೀಕರಣವಾಗಿತ್ತು. ಹೀಗಿದ್ದರೂ 2ನೇ ಭಾಗದ ಬಾಕಿ ಚಿತ್ರೀಕರಣದ ಬಜೆಟ್ 100 ಕೋಟಿ ದಾಟಿದೆಯಂತೆ.

  ಚಿತ್ರದ ಅತಿ ದೊಡ್ಡ ಖರ್ಚು ಚಿತ್ರದ ಕ್ಲೈಮಾಕ್ಸ್. ಸಂಜಯ್ ದತ್ ಮತ್ತು ಯಶ್ ಮಧ್ಯೆ ನಡೆಯೋ ಅದೊಂದು ಕ್ಲೈಮಾಕ್ಸ್ ದೃಶ್ಯಕ್ಕಾಗಿ 12 ಕೋಟಿ ಖರ್ಚು ಮಾಡಿದ್ದಾರಂತೆ ವಿಜಯ್ ಕಿರಗಂದೂರು. ಪ್ರಶಾಂತ್ ನೀಲ್ ಕಲ್ಪನೆಯಂತೆ ಆ ದೃಶ್ಯ ಅದ್ಭುತವಾಗಿ ಮೂಡಿಬಂದಿದೆಯಂತೆ.

  ಕನ್ನಡದಲ್ಲಿ 12 ಕೋಟಿಯಲ್ಲಿ ಅದ್ಧೂರಿ ಚಿತ್ರವನ್ನೇ ರೆಡಿ ಮಾಡುತ್ತಾರೆ. ಅಂಥಾದ್ದರಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರವೊಂದರ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣಕ್ಕೇ 12 ಕೋಟಿ ಸುರಿದಿದ್ದಾರೆ ಎಂದರೆ.. ಆ ಸೀನ್ ಹೇಗಿರಬೇಕು..

 • ಕೆಜಿಎಫ್ 2 ಟೀಸರ್ ಹೊಸ ದಾಖಲೆ

  ಕೆಜಿಎಫ್ 2 ಟೀಸರ್ ಹೊಸ ದಾಖಲೆ

  ಕೆಜಿಎಫ್ ಮುಟ್ಟಿದ್ದೆಲ್ಲ ದಾಖಲೆಯಾಗುತ್ತಿದೆ. ಅದಕ್ಕೆ ಸಾಕ್ಷಿ ಸರಿಯಾಗಿ 10 ತಿಂಗಳ ಹಿಂದೆ ರಿಲೀಸ್ ಆಗಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ.

  ಈಗ ಟೀಸರ್ ನೋಡಿದವರ ಸಂಖ್ಯೆ ಎರಡೂಕಾಲು ಕೋಟಿ ದಾಟಿದೆ. ಟೀಸರ್‍ಗೆ ಸಿಕ್ಕಿರುವ ಲೈಕ್ಸ್ ಸಂಖ್ಯೆ 90 ಲಕ್ಷ ದಾಟಿದೆ. ಅಂದಹಾಗೆ ಇದು ಕೇವಲ ಹೊಂಬಾಳೆ ಫಿಲ್ಮ್ಸ್‍ನ ಅಧಿಕೃತ ಪೇಜ್‍ನ ಸಂಖ್ಯೆ ಮಾತ್ರ. ಅದನ್ನು ಬಿಟ್ಟು ಬೇರೆ ಕಡೆ ನೋಡಿರುವವರ ಸಂಖ್ಯೆಯನ್ನು ಇಲ್ಲಿ ಲೆಕ್ಕಕ್ಕೇ ತೆಗೆದುಕೊಂಡಿಲ್ಲ.

  ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ಮಾಪಕ. ಈ ಚಿತ್ರದ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ.

 • ಕೆಜಿಎಫ್ 2ಗೆ ಯಶ್ ಎಂಟ್ರಿ ಯಾವಾಗ..?

  yash to start shooting for kgf2 from next week

  ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿ ಬಹಳ ದಿನಗಳೇ ಆಗಿವೆ. ಹೀರೋ ಹೊರತುಪಡಿಸಿ, ಉಳಿದ ಭಾಗಗಳ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ, ಯಶ್ ಇನ್ನೂ ಶೂಟಿಂಗ್ ಸೆಟ್‍ಗೆ ಹಾಜರಾಗಿಲ್ಲ. ಅಫ್‍ಕೋರ್ಸ್, ಅದಕ್ಕೆ ಯಶ್ ಒಬ್ಬರೇ ಕಾರಣರಲ್ಲ.

  ಚಿತ್ರದ ಕೆಲವು ತಾಂತ್ರಿಕ ಕೆಲಸಗಳು ಹಾಗೂ ತುರ್ತು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಜೂನ್ 6ಕ್ಕೆ ಬರಬೇಕಿದ್ದ ಯಶ್, ಶೂಟಿಂಗ್ ಟೀಂ ಸೇರೋಕೆ ಸಾಧ್ಯವಾಗಲಿಲ್ಲ. ಈಗ ಕನ್ಫರ್ಮ್ ಆಗಿದೆ. ಜೂನ್ 12ರಿಂದ ಅಂದರೆ, ಇದೇ ಗುರುವಾರದಿಂದ ಯಶ್ ಕೆಜಿಎಫ್ ಚಾಪ್ಟರ್ 2 ತಂಡ ಸೇರಲಿದ್ದಾರೆ.

  ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 15 ದಿನಗಳ ಚಿತ್ರೀಕರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಮೊದಲ ಭಾಗದ ಅದ್ಧೂರಿ ಯಶಸ್ಸಿನಿಂದಾಗಿಯೇ ಕುತೂಹಲ ಮೂಡಿಸಿದೆ. 

 • ಕೆಜಿಎಫ್ 3ಗೆ ಪ್ಲಾನ್ ರೆಡಿ ಆಗಿದ್ಯಾ?

  ಕೆಜಿಎಫ್ 3ಗೆ ಪ್ಲಾನ್ ರೆಡಿ ಆಗಿದ್ಯಾ?

  ಕೆಜಿಎಫ್ ಚಾಪ್ಟರ್ 2 ಸೂಪರ್ ಡ್ಯೂಪರ್ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿರೋವಾಗಲೇ ಚಾಪ್ಟರ್ 3 ಬರೋದು ಪಕ್ಕಾ ಆಯ್ತಾ? ಚಾಪ್ಟರ್ 2 ಕ್ಲೈಮಾಕ್ಸ್‍ನಲ್ಲಿ ಅಂಥಾದ್ದೊಂದು ಸುಳಿವು ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಚಾಪ್ಟರ್ 1 ಮತ್ತು ಚಾಪ್ಟರ್ 2 ಎರಡೂ ಸೂಪರ್ ಹಿಟ್ ಎನ್ನಿಸಿಕೊಂಡಿರೋದ್ರಿಂದ.. 3ನೇ ಭಾಗಕ್ಕೆ ಪ್ಲಾನ್ ಮಾಡಿದ್ದರೂ ಮಾಡಿರಬಹುದು.

  ಆದರೆ.. ಈಗಾಗಲೇ ಚಿತ್ರದ ಕೆಲವೊಂದಿಷ್ಟು ಸೀನ್‍ಗಳ ಬಗ್ಗೆ ನೀಲ್ ಮತ್ತು ಯಶ್ ಮಾತನಾಡಿಕೊಂಡಿದ್ದಾರಂತೆ. ಸ್ವತಃ ಯಶ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಷ್ಟು ಬಿಟ್ಟರೆ ಮತ್ತೇನನ್ನೂ ಹೇಳಿಲ್ಲ. ಪಾರ್ಟ್ 3 ಮಾಡೋಕೆ ಸಾಕಷ್ಟು ಅವಕಾಶ ಇದೆ. ಸ್ಟೋರಿ ಡೆವಲಪ್ ಮಾಡೋಕೂ ಚಾನ್ಸ್‍ಗಳಿವೆ ಎಂದಿರೋ ಯಶ್ ಪಾರ್ಟ್ 3 ಬಂದೇ ಬರುತ್ತೆ ಅನ್ನೋದನ್ನೂ ಹೇಳಿಲ್ಲ. ಪ್ರಶಾಂತ್ ನೀಲ್ ಕೂಡಾ ಈ ಬಗ್ಗೆ ಎಲ್ಲಿಯೂ ಸ್ಪಷ್ಟವಾಗಿ ಬಾಯಿಬಿಟ್ಟಿಲ್ಲ.

  ಕೆಜಿಎಫ್ ನಂತರ ಮುಂದೇನು ಎಂಬ ಬಗ್ಗೆ ಯಶ್ ಓಪನ್ ಆಗಿ ಇದೂವರೆಗೆ ಮಾತನಾಡಿಲ್ಲ. ನರ್ತನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆಯಾದರೂ, ಅದು ಅಧಿಕೃತವಾಗಿಲ್ಲ. ಪ್ರಶಾಂತ್ ನೀಲ್ ಅವರೇನೋ ಸದ್ಯಕ್ಕೆ ಪ್ರಭಾಸ್ ಜೊತೆ ಸಲಾರ್ ಮಾಡುತ್ತಿದ್ದಾರೆ. ಅದಾದ ನಂತರ ಎನ್‍ಟಿಆರ್ ಸಿನಿಮಾ ಇದೆ. ಶ್ರೀಮುರಳಿ ಜೊತೆ ಬಘೀರ ಇದೆ. ಸಲಾರ್ ಮುಗಿದ ನಂತರ ಕೆಜಿಎಫ್ ಚಾಪ್ಟರ್ 3 ಕೈಗೆತ್ತಿಕೊಳ್ತಾರಾ..? ಈಗಲೇ ಏನೂ ಹೇಳೋಕೆ ಆಗಲ್ಲ.

 • ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..?

  ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..?

  ಕೆಜಿಎಫ್ ಚಾಪ್ಟರ್ 1ನಲ್ಲಿ ಒಂದು ಡೈಲಾಗ್ ಇದೆ. ಯಾರ್ ಯಾರನ್ನೋ ಹೊಡೆದು ಡಾನ್ ಆದವನಲ್ಲ.. ನಾನು. ನಾನು ಹೊಡೆದವರೆಲ್ಲ ಡಾನ್‍ಗಳೇ.. ಕೆಜಿಎಫ್ 2 ರಿಲೀಸ್ ಆದ ನಂತರ ಆ ಡೈಲಾಗ್ ಮತ್ತೆ ಮತ್ತೆ ನೆನಪಾಗುವಂತೆ ಮಾಡಿದೆ ನಂತರ ರಿಲೀಸ್ ಆದ ಚಿತ್ರಗಳ ಹೀನಾಯ ಸೋಲುಗಳು. ಹಾಗೆ ನೋಡಿದರೆ.. ಹಿನ್ನಡೆ ಅನುಭವಿಸಿಯೂ ಲಾಭ ಮಾಡಿದ್ದು ತಮಿಳಿನ ಬೀಸ್ಟ್ ಮಾತ್ರ.

  ಕೆಜಿಎಫ್ 2 ರಿಲೀಸ್ ಆದ 2 ವಾರದ ನಂತರ ರಿಲೀಸ್ ಆಗಿದ್ದು ಹಿಂದಿಯಲ್ಲಿ ಅಜಯ್ ದೇವಗನ್ ಅವರ ರನ್ ವೇ 34. ಆ ಚಿತ್ರ ಮೇ 1ರಂದು ಗಳಿಸಿರೋ ಬಾಕ್ಸಾಫೀಸ್ ಕಲೆಕ್ಷನ್ 7.25 ಕೋಟಿ. ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಅಮಿತಾಭ್ ಬಚ್ಚನ್ ಕೂಡಾ ಇದ್ದರು.

  ಅದರ ಜೊತೆಯಲ್ಲೇ ರಿಲೀಸ್ ಆದ ಚಿತ್ರ ಹೀರೋಪಂತಿ 2. ಹೀರೋ ಟೈಗರ್ ಶ್ರಾಫ್. ಆ ಚಿತ್ರದ ಮೇ 1ನೇ ತಾರೀಕಿನ ರಿಪೋರ್ಟ್ 4.25 ಕೋಟಿ.

  ಇದೇ ವೇಳೆ ಇದೇ ಮೇ 1ರಂದು ಕೆಜಿಎಫ್ 2ನ ಕಲೆಕ್ಷನ್ ರಿಪೋರ್ಟ್ ಹಿಂದಿಯಲ್ಲಿ 11.25 ಕೋಟಿ. ಅಂದ ಹಾಗೆ ಕೆಜಿಎಫ್ 2 ರಿಲೀಸ್ ಆಗಿ ಎರಡು ವಾರವಾಗಿದೆ ಅನ್ನೋದು ನೆನಪಿರಲಿ.

  ಇದಕ್ಕೂ ಮೊದಲು ಕೆಜಿಎಫ್ 2 ಎದುರು ಬರಬೇಕಿದ್ದ ಜೆರ್ಸಿ, ಒಂದು ವಾರ ಲೇಟ್ ಆಗಿ ಬಂದರೂ ಬಾಕ್ಸಾಫೀಸಿನಲ್ಲಿ ಡುಮ್ಕಿ ಹೊಡೀತು.

  ತೆಲುಗಿನಲ್ಲಿ ಕೆಜಿಎಫ್‍ಗೆ ರಿಲೀಸ್ ಆದ 2 ವಾರದ ನಂತರವೂ ಫೈಟ್ ಕೊಟ್ಟಿದ್ದು ರಾಜಮೌಳಿಯ ಆರ್.ಆರ್.ಆರ್. ತೆಲುಗಿನ ಎರಡೂ ರಾಜ್ಯಗಳಲ್ಲಿ ಈಗಲೂ ಸದ್ಯಕ್ಕೆ ಆರ್.ಆರ್.ಆರ್. ನಂ.1 ಸ್ಥಾನದಲ್ಲೇ ಇದೆ. ಇನ್ನು ಈ ಗ್ಯಾಪಲ್ಲಿ ಬಂದ ತೆಲುಗಿನ ಕೆಲವು ಚಿತ್ರಗಳು ಸೋತವು. 2 ವಾರದ ನಂತರ ಬಂದ ಮೆಗಾಸ್ಟಾರ್ ಆಚಾರ್ಯ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದರೂ ಪೈಪೋಟಿ ಕೊಡುತ್ತಿದೆ.

  ತಮಿಳಿನಲ್ಲಿ ಬೀಸ್ಟ್ ಆರಂಭದ ಫೈಟ್‍ನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ. ನಿರ್ದೇಶಕರ ಕನ್‍ಫ್ಯೂಸ್‍ನಿಂದಾಗಿ ಬೀಸ್ಟ್ ಆವರೇಜ್ ಆದರೆ, ಅಲ್ಲಿ ಕೆಜಿಎಫ್ ದಾಖಲೆಯನ್ನೇ ಬರೆಯಿತು.

 • ಕೆಜಿಎಫ್ ಕಥೆ ಗೊತ್ತಾಗೋಯ್ತು..

  what is kgf storyline

  ಕೆಜಿಎಫ್ ರಿಲೀಸ್ ಡೇಟ್ ಪ್ರಕಟಿಸಿದ ಹೊತ್ತಲ್ಲೇ ಚಿತ್ರದ ಕಥೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ದುರಾಸೆಯ ದುಷ್ಟನೊಬ್ಬನ ಕೈಗೆ ಬಂಗಾರದ ಗಣಿ ಸಿಕ್ಕರೆ, ಒಂದು ವ್ಯವಸ್ಥೆಯಲ್ಲಿ ಆತ ಏನೆಲ್ಲ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. ಚಿತ್ರದಲ್ಲಿ ಅಂಡರ್‍ವಲ್ರ್ಡ್ ಲಿಂಕ್ ಇದೆ. ಚಿತ್ರದ ಹೀರೋ ಯಶ್, ತಾಯಿಯ ಸೂಚನೆಯಂತೆ ಅಂಡರ್‍ವಲ್ರ್ಡ್‍ಗೆ ಎಂಟ್ರಿ ಕೊಡುತ್ತಾನೆ. ಚಿನ್ನದ ಕಥೆಗೂ, ತಾಯಿಯ ಮಾತಿಗೂ ಏನ್ ಸಂಬಂಧ ಅನ್ನೋದು ಚಿತ್ರದಲ್ಲಿ ಗೊತ್ತಾಗಲಿದೆ. ಅಂಡರ್‍ವಲ್ರ್ಡ್ ಡಾನ್ ಸ್ಟೋರಿಯೇ ಚಿತ್ರದ ಕಥೆ.

  ಹೀಗೆ ಕಥೆಯ ಎಳೆಯನ್ನಷ್ಟೇ ಬಿಚ್ಚಿಟ್ಟಿರುವ ಪ್ರಶಾಂತ್ ನೀಲ್, ಇದಕ್ಕೂ ಕೋಲಾರದ ಚಿನ್ನದ ಗಣಿಗೂ ಸಂಬಂಧವಿಲ್ಲ. ಇದು ಯಾವುದೇ ಜಗತ್ತಿಗೂ, ಯಾವುದೇ ಊರಿಗೂ ಲಿಂಕ್ ಆಗಬಹುದಾದ ಕಥೆ. ನನ್ನ ಕಲ್ಪನೆಯ ಕಥೆ ಎಂದು ಹೇಳಿಕೊಳ್ತಾರೆ.

  ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಬರುತ್ತಿರುವ ಸಿನಿಮಾದ ಟ್ರೈಲರ್ ಅಕ್ಟೋಬರ್ 14ಕ್ಕೆ ರಿಲೀಸ್ ಆದ್ರೆ, ಸಿನಿಮಾ ನವೆಂಬರ್ 16ಕ್ಕೆ ರಿಲೀಸ್ ಆಗುತ್ತೆ. ನವೆಂಬರ್ 16ಕ್ಕೆ ಬರೋದು ಕೆಜಿಎಫ್ ಚಾಪ್ಟರ್ 1. ಚಾಪ್ಟರ್ 2, 2019ರ ಅಂತ್ಯಕ್ಕೆ ಬರಲಿದೆಯಂತೆ.

 • ಕೆಜಿಎಫ್ ಕ್ಲೈಮಾಕ್ಸ್‍ನಲ್ಲಿ ಇಂಡಿಯನ್ ಆರ್ಮಿ

  indina army for kgf chapter 2 climax shoot

  ಕೆಜಿಎಫ್ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಹೈದರಾಬಾದ್‍ನಲ್ಲೀಗ ಕ್ಲೈಮಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಭಾರತೀಯ ಸೇನೆ ಬಳಕೆಯಾಗುತ್ತಿದೆ. ಕ್ಲೈಮಾಕ್ಸ್ ಚಿತ್ರೀಕರಣದ ಒಂದು ಫೋಟೋ ಹೊರಬಿದ್ದಿದ್ದು, ನೂರಾರು ಇಂಡಿಯನ್ ಆರ್ಮಿ ವಾಹನಗಳು ಸಾಲಾಗಿ ಸಂಚರಿಸುತ್ತಿರುವ ಫೋಟೋ ಕುತೂಹಲ ಹೆಚ್ಚಿಸಿದೆ.

  ಕೆಜಿಎಫ್ ಚಾಪ್ಟರ್ 2ನಲ್ಲಿ ರವೀನಾ ಟಂಡನ್, ದೇಶದ ಪ್ರಧಾನಿಯ ಪಾತ್ರ ಮಾಡುತ್ತಿದ್ದಾರೆ. ಯಶ್ ಅಲಿಯಾಸ್ ರಾಕಿಭಾಯ್ ಡೆತ್ ವಾರೆಂಟ್‍ಗೆ ಸಹಿ ಹಾಕೋದೇ ಅವರು. ನಂತರ ರಾಕಿ ಭಾಯ್ ಸಾಮ್ರಾಜ್ಯಕ್ಕೆ ನುಗ್ಗುತ್ತೆ ಇಂಡಿಯನ್ ಆರ್ಮಿ.

  ಹೇಗಿರುತ್ತೆ ಕ್ಲೈಮಾಕ್ಸ್.. ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾವನ್ನು ಥ್ರಿಲ್ ಆಗುವಂತೆ ತೋರಿಸ್ತಾರೆ. ವಿಜಯ್ ಕಿರಗಂದೂರು ಅದರ ಅದ್ಧೂರಿತನಕ್ಕೆ ಮೋಸ ಮಾಡಲ್ಲ. ವೇಯ್ಟ್.. ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತೆ

 • ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್

  ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್

  ಯಾವುದೇ ಸಮಸ್ಯೆ ಬರದೇ ಹೋಗಿದ್ದರೆ ಕೆಜಿಎಫ್ ಚಾಪ್ಟರ್ 2, 2021ರ ಜುಲೈನಲ್ಲೇ ರಿಲೀಸ್ ಆಗಬೇಕಿತ್ತು. ಈಗ 2022ರ ಏಪ್ರಿಲ್‍ಗೆ ಪೋಸ್ಟ್ ಪೋನ್ ಆಗಿದೆ. ಇದರ ನಡುವೆ ಮತ್ತೆ ಚಿತ್ರದ ಶೂಟಿಂಗ್ ನಡೆದಿದೆ. 2020ರ ಡಿಸೆಂಬರ್‍ನಲ್ಲೇ ಕ್ಲೈಮಾಕ್ಸ್ ಶೂಟಿಂಗ್ ಮುಗೀತು ಎಂದಿದ್ದ ಕೆಜಿಎಫ್ ಟೀಂ, ಈಗ ಮತ್ತೊಮ್ಮೆ ಶೂಟಿಂಗ್ ಮಾಡಿದೆ.

  ನಿರ್ದೇಶಕ ಪ್ರಶಾಂತ್ ನೀಲ್ ಅವರಿರೋದೇ ಹಾಗೆ. ಸ್ಕ್ರೀನ್‍ನಲ್ಲಿ ಕಾಂಪ್ರೊಮೈಸ್ ಆಗುವವರಲ್ಲ. ಎಡಿಟಿಂಗ್ ಟೇಬಲ್ ಮೇಲೆ ಕುಳಿತಾಗ ಒಂದಿಷ್ಟು ಶಾಟ್ಸ್ ಬೇಕು ಎನ್ನಿಸಿ ಮತ್ತೆ ಚಿತ್ರೀಕರಣ ಮಾಡಿದ್ದಾರೆ ನೀಲ್. ನೈಸ್ ರೋಡ್‍ನಲ್ಲಿ ಒಂದು ಚೇಸಿಂಗ್ ಸೀನ್‍ನ ದೃಶ್ಯ ಚಿತ್ರೀಕರಿಸಲಾಗಿದೆ. ನೀಲ್ ಜೊತೆ ಕ್ಯಾಮೆರಾಮನ್ ಭುವನ್ ಗೌಡ ಭಾಗಿಯಾಗಿದ್ದಾರೆ. ಪ್ರಶಾಂತ್ ನೀಲ್ ಅವರಂತೂ ಇತ್ತ ಕೆಜಿಎಫ್ ಚಾಪ್ಟರ್ 2 ಪೋಸ್ಟ್ ಪ್ರೊಡಕ್ಷನ್ ಮತ್ತು ಅತ್ತ ಸಲಾರ್ ಶೂಟಿಂಗ್.. ಎರಡೂ ಕಡೆ ಬ್ಯುಸಿ. ಇನ್ನೊಂದೆಡೆ ಬಘೀರ ವೇಯ್ಟಿಂಗ್.

 • ಕೆಜಿಎಫ್ ಚಾಪ್ಟರ್ 2 ಡೈಲಾಗ್ಸ್

  kgf chapter 2 dialogues

  ಕೆಜಿಎಫ್ ಚಾಪ್ಟರ್ 1ನಲ್ಲಿ ಹಲವು ಸ್ಪೆಷಾಲಿಟಿಗಳಿದ್ದವು. ಅಂತಹ ಸ್ಪೆಷಾಲಿಟಿಗಳಲ್ಲಿ ಒಂದು ಡೈಲಾಗ್ಸ್. ಗುಂಡು ಹೊಡೆದಂತಿದ್ದ ಸಂಭಾಷಣೆ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಈಗ ಕೆಜಿಎಫ್ 2ನಲ್ಲೂ ಅಷ್ಟೆ, ಅಂಥದ್ದೇ ಡೈಲಾಗ್ಸ್ ಇವೆ. ಹುಟ್ಟುಹಬ್ಬದ ವೇಳೆ ಸ್ವತಃ ಯಶ್, ಟೀಸರ್ ಬಿಡದೇ ಇರುವುದಕ್ಕೆ ಕ್ಷಮೆ ಕೋರಿ, ಚಿತ್ರದ ಒಂದೆರಡು ಡೈಲಾಗ್‍ಗಳನ್ನು ಅಭಿಮಾನಿಗಳ ಎದುರು ಹೇಳಿ ಥ್ರಿಲ್ ಕೊಟ್ಟಿದ್ದಾರೆ.

  ಏನಂದೇ.. ಒಂದು ಹೆಜ್ಜೆ ಮುಂದೆ ಇಟ್ಟು ಬಂದವ್ನು ಅಂದ್ಕೊಂಡಿದ್ದೀರಾ.. ಗಡಿಯಾರದಲ್ಲಿ ಒಂದು ಹೆಜ್ಜೆ ಮುಂದಿಡೋಕೆ ದೊಡ್ಡ ಮುಳ್ಳು 60 ಹೆಜ್ಜೆ ಮುಂದಿಡಬೇಕು. ಆದರೆ, ಚಿಕ್ಕ ಮುಳ್ಳು ಒಂದೇ ಹೆಜ್ಜೆ ಮುಂದಿಟ್ರೆ ಸಾಕು.

  ನಾನು ಹೆಜ್ಜೆ ಇಟ್ಟಾಗಿದೆ. ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮುಂದೆ ಈ ಟೆರಟರಿ ನಂದು.. ಆ ಟೆರಟರಿ ನಂದು ಅನ್ನೋದನ್ನೆಲ್ಲ ಬಿಟ್ಟುಬಿಡಿ. ವಲ್ರ್ಡ್ ಇನ್ನು ಮುಂದೆ ನನ್ನ ಟೆರಟರಿ.

  ಯಶ್ ಡೈಲಾಗ್ ಹೊಡೆದು ಥ್ರಿಲ್ ಕೊಟ್ಟಿದ್ದರೆ, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಚಿತ್ರದ ಹೊಸ ಪೋಸ್ಟರ್ ಕೊಟ್ಟು ಥ್ರಿಲ್ ಕೊಟ್ಟಿದ್ದಾರೆ.

 • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ ಅಲ್ಲ..!

  news about kgf chapter 2 telugu remake rights is false

  ಕೆಜಿಎಫ್ ಚಾಪ್ಟರ್ 2 ಚಿತ್ರದ ತೆಲುಗು ರೈಟ್ಸ್ 40 ಕೋಟಿಗೆ ಸೇಲ್ ಆಗುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಭ್ರಮ ಸೃಷ್ಟಿಸಿತ್ತು. ಚಿತ್ರಲೋಕದಲ್ಲೂ ಈ ವರದಿ ನೋಡಿದ್ದೀರಿ. ಆದರೆ.. ಅದು ಸುಳ್ಳು ಎಂದಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೊಂಬಾಳೆ ಫಿಲಂಸ್ನ ಪ್ರಮುಖರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ, 40 ಕೋಟಿಯ ವ್ಯವಹಾರವನ್ನು ತಳ್ಳಿ ಹಾಕಿದ್ದಾರೆ.

  ಆದರೆ.. ಕೆಜಿಎಫ್ ಚಿತ್ರಕ್ಕೆ ತೆಲುಗಿನಲ್ಲಿ ಒಳ್ಳೆಯ ಡಿಮ್ಯಾಂಡ್ ಇರುವುದಂತೂ ನಿಜ. ಏಕೆಂದರೆ, ಕೆಜಿಎಫ್ ನಂತರ ಅಲ್ಲೀಗ ಯಶ್ ಫ್ಯಾನ್ಸ್ ಕ್ಲಬ್ ಹುಟ್ಟಿಕೊಂಡಿದೆ. ಪ್ರಶಾಂತ್ ನೀಲ್ ಚಿತ್ರ ಸೃಷ್ಟಿಸಿದ್ದ ಸಂಚಲನ, ಚಾಪ್ಟರ್ 2ಗೆ ಭರ್ಜರಿ ಓಪನಿಂಗ್ ಕೊಡಲಿದೆ ಎಂಬುದರಲ್ಲಿ ಡೌಟೇ ಇಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರ್ಪಡೆಗೊಂಡಿದ್ದಾರೆ. ಕೆಜಿಎಫ್ 2 ಮಾರ್ಕೆಟ್ ವ್ಯಾಲ್ಯೂ ತಿಳಿಯೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

 • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ..!!!

  kgf chapter 2 telugu rights goes up for 40 crores

  ಕೆಜಿಎಫ್ ಚಾಪ್ಟರ್ 2 ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿಯೇ ಇದೆ. ಆದರೆ ಚಿತ್ರಕ್ಕೆ ಸೃಷ್ಟಿಯಾಗಿರುವ ಡಿಮ್ಯಾಂಡ್ ಮಾತ್ರ ಆಕಾಶಕ್ಕೇರಿದೆ. ಕೆಜಿಎಫ್ ಚಾಪ್ಟರ್ 2 ತೆಲುಗು ವರ್ಷನ್‍ಗೆ 40 ಕೋಟಿ ಡಿಮ್ಯಾಂಡ್ ಮಾಡಲಾಗುತ್ತಿದೆ. ಈ ಬಿಸಿನೆಸ್ ಫೈನಲ್ ಸ್ಟೇಜ್‍ನಲ್ಲಿದೆ.

  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್ ರಿಲೀಸ್ ಆಗಲಿದ್ದು, ವಿತರಕರು 30 ಕೋಟಿಯ ಆಫರ್ ಕೊಟ್ಟರಂತೆ. ಅಫ್‍ಕೋರ್ಸ್.. ಕನ್ನಡದ ಮಟ್ಟಿಗೆ ಅದೂ ಕೂಡಾ ದಾಖಲೆಯೇ. ಈಗ 40 ಕೋಟಿಯ ಆಸುಪಾಸು ವ್ಯವಹಾರ ಕುದುರಿದೆ ಎನ್ನಲಾಗಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸೃಷ್ಟಿಸಿದ ಹವಾ ಎಫೆಕ್ಟ್, ಚಾಪ್ಟರ್ 2ಗೆ ಡಿಮ್ಯಾಂಡ್ ಬಂದಿದೆ. ಸಿನಿಮಾ ಡಿಸೆಂಬರ್‍ನಲ್ಲಿ ರಿಲೀಸ್ ಆಗುವ ಚಾನ್ಸ್ ಇದೆ.

 • ಕೆಜಿಎಫ್ ಚಾಪ್ಟರ್ 2 ವಿಶ್ವದಾಖಲೆ

  ಕೆಜಿಎಫ್ ಚಾಪ್ಟರ್ 2 ವಿಶ್ವದಾಖಲೆ

  ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ವಿಶ್ವದಾಖಲೆ. ಹೊಂಬಾಳೆ ಪ್ರೊಡಕ್ಷನ್ಸ್‍ನ ಪ್ರಶಾಂತ್ ನೀಲ್ ಮ್ಯಾಜಿಕ್ ಇರೋ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಈಗ ವಿಶ್ವ ದಾಖಲೆಯನ್ನೇ ಬರೆದುಬಿಟ್ಟಿದೆ.

  ಯೂಟ್ಯೂಬ್‍ನಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಗಾದ ಟೀಸರ್ ಅನ್ನೋ ಹೆಗ್ಗಳಿಕೆ ಈಗ ಕೆಜಿಎಫ್ 2 ಟೀಸರ್‍ನದ್ದು. ವೀಕ್ಷಿಸಿದವರ ಸಂಖ್ಯೆ 18 ಕೋಟಿ ದಾಟಿದೆ. 175 ಮಿಲಿಯನ್‍ಗೆ ಹೊಂಬಾಳೆ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಸಂಭ್ರಮಿಸಿದೆ.

  ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾದಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಮಾಳವಿಕಾ ಅವಿನಾಶ್, ಪ್ರಕಾಶ್ ರೈ ಸೇರಿದಂತೆ ಚಿತ್ರರಂಗದ ಘಟಾನುಘಟಿಗಳೆಲ್ಲ ನಟಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಜುಲೈನಲ್ಲಿ ರಿಲೀಸ್ ಆಗುತ್ತಿದೆ.

 • ಕೆಜಿಎಫ್ ಚಾಪ್ಟರ್ 2ಗೆ ಫೇಕ್ ಅಭಿಮಾನಿಗಳ ಕಾಟ..

  ಕೆಜಿಎಫ್ ಚಾಪ್ಟರ್ 2ಗೆ ಫೇಕ್ ಅಭಿಮಾನಿಗಳ ಕಾಟ..

  ಅದನ್ನು ನೋಡಿ ಖುಷಿ ಪಡಬೇಕೋ.. ಏನ್ ಮಾಡೋದಪ್ಪಾ ಎಂದು ತಲೆ ಮೇಲೆ ಕೈ ಹೊತ್ಕೋಬೇಕೋ.. ಗೊತ್ತಾಗದ ಸ್ಥಿತಿ ಕೆಜಿಎಫ್ ಟೀಂನದ್ದು. ಅದು ಕೆಜಿಎಫ್ ಸೃಷ್ಟಿಸಿರೋ ಹವಾ. ಹೀಗಾಗಿ ಪ್ರತಿಯೊಂದನ್ನೂ ಸಹಿಸಿಕೊಳ್ಳಬೇಕು. ಇತ್ತೀಚೆಗೆ ಮಾರ್ಚ್ 8ರಂದು, ಸಂಜೆ 6.18ಕ್ಕೆ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಆಗುತ್ತೆ ಅನ್ನೋ ಸುದ್ದಿಯೊಂದು ಹೊರಬಿದ್ದಿತ್ತು. ನೋಡಿದರೆ ಅದು ಕೆಜಿಎಫ್ ಟೀಂನದ್ದೇ ಟ್ವೀಟ್ ಅನ್ನೋ ರೀತಿಯಲ್ಲಿರೋ ಪೋಸ್ಟ್. ವಿಚಿತ್ರವೆಂದರೆ ಕೆಜಿಎಫ್ ಹವಾದಲ್ಲಿ ಅದೂ ಕೂಡಾ ಟ್ರೆಂಡ್ ಸೃಷ್ಟಿಸಿಬಿಡ್ತು.

  ದಯವಿಟ್ಟು ಇಂತಹ ಸುದ್ದಿಗಳನ್ನೆಲ್ಲ ನಂಬಬೇಡಿ. ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತೆ. ಚಿತ್ರದ ಪ್ರಚಾರವೂ ಶುರುವಾಗುತ್ತೆ. ಸಂಬಂಧಪಟ್ಟ ವಿಷಯಗಳನ್ನು ಅಫಿಷಿಯಲ್ ಪೇಜ್‍ಗಳಲ್ಲಷ್ಟೇ ನೋಡಿ ಎಂದು ಸ್ವತಃ ಕಾರ್ತಿಕ್ ಗೌಡ ಮನವಿ ಮಾಡಿದ್ದಾರೆ. ಕಾರ್ತಿಕ್ ಗೌಡ, ಕೆಜಿಎಫ್ ಚಾಪ್ಟರ್ 2ನ ಕಾರ್ಯಕಾರಿ ನಿರ್ಮಾಪಕ.

  ಕೆಜಿಎಫ್ ಚಾಪ್ಟರ್ 1 ಹಿಟ್ ಆಗಿದ್ದರ ಜೊತೆಗೆ, ಚಾಪ್ಟರ್ 2ಗೆ ಇನ್ನಷ್ಟು ನಿರೀಕ್ಷೆ ಬಂದುಬಿಟ್ಟಿದೆ. ಪ್ರಶಾಂತ್ ನೀಲ್ ತಮ್ಮ ತಂಡಕ್ಕೆ ಯಶ್, ಶ್ರೀನಿಧಿ ಶೆಟ್ಟಿ ಜೊತೆಗೆ ಪ್ರಕಾಶ್ ರೈ, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರನ್ನೆಲ್ಲ ಸೇರಿಸಿಬಿಟ್ಟಿದ್ದಾರೆ. ನಿರೀಕ್ಷೆ ಮೌಂಟ್ ಎವರೆಸ್ಟ್ ಎತ್ತರಕ್ಕೇರಿರುವಾಗ ಇಂತಹದ್ದನ್ನೆಲ್ಲ ಸಹಿಸಿಕೊಳ್ಳಲೇಬೇಕು.