ಕೆಜಿಎಫ್ ಚಾಪ್ಟರ್ 2 ದಾಖಲೆಗಳನ್ನು ಬರೆಯುತ್ತಿದೆ. ಈ ವಾರಾಂತ್ಯಕ್ಕೆ ಎಲ್ಲ ಭಾಷೆಗಳ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ಮುಟ್ಟುವ ಅಥವಾ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇದರ ನಡುವೆ ಹಿಂದಿಯಲ್ಲಿಯೇ ವಿಶೇಷ ದಾಖಲೆ ಬರೆದಿದೆ ಕೆಜಿಎಫ್. ಭಾನುವಾರ 300 ಕೋಟಿಯ ಗಡಿ ದಾಟಿದೆ. ಈ ದಾಖಲೆ ಬರೆದ ಒಟ್ಟಾರೆ 10ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.
ಈ ಮೊದಲು ಪಿಕೆ, ಭಜರಂಗಿ ಭಾಯಿಜಾನ್, ಸುಲ್ತಾನ್, ದಂಗಲ್, ಟೈಗರ್ ಜಿಂದಾ ಹೈ, ಪದ್ಮಾವತ್, ಸಂಜು, ವಾರ್ ಹಾಗೂ ಬಾಹುಬಲಿ 2 ಚಿತ್ರಗಳು ಈ ದಾಖಲೆ ಬರೆದಿದ್ದವು. ಇವುಗಳಲ್ಲಿ ಇಂಡಿಯನ್ ಮಾರ್ಕೆಟ್‍ನಲ್ಲಿ ಹಿಂದಿಯಲ್ಲಿಯೇ 500 ಕೋಟಿ ಗಳಿಸಿದ್ದ ಸಿನಿಮಾ ಬಾಹುಬಲಿ 2 ಮಾತ್ರ. ಈಗ 300 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಚಾಪ್ಟರ್ 2 ಮುನ್ನುಗ್ಗುತ್ತಿರುವ ವೇಗ ನೋಡಿದರೆ ಅದು 500 ಕೋಟಿ ಕಲೆಕ್ಷನ್ ದಾಟಿದರೂ ಆಶ್ಚರ್ಯವಿಲ್ಲ.
ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ಕೇವಲ 11 ದಿನದಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2ಗೀಗ ಒಟ್ಟಾರೆ ಜೀವಮಾನದ ಕಲೆಕ್ಷನ್ ಟಾಪ್ 10 ಸಿನಿಮಾಗಳ ಲಿಸ್ಟಿನಲ್ಲಿ 7ನೇ ಸ್ಥಾನವಿದೆ. ನಂ. 1 ಸ್ಥಾನಕ್ಕೇರುವುದು ಕಷ್ಟವಾಗಲಾರದು.
ಕೇರಳದಲ್ಲಿ.. 11 ದಿನದಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕೇರಳದಲ್ಲಿ ಆ್ಯಕ್ಷನ್ ಮಾಸ್ ಸಿನಿಮಾಗಳು ಕ್ಲಿಕ್ ಆಗುವುದು ಅಪರೂಪದಲ್ಲಿ ಅಪರೂಪ. ಹೀಗಾಗಿ.. ಅದೂ ಒಂದು ದಾಖಲೆಯೇ.