` prashanth neel, - chitraloka.com | Kannada Movie News, Reviews | Image

prashanth neel,

  • ಮೈಸೂರು ಅರಮನೆಯಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್

    kgf chapter 2 shooting in mysore

    ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಬಳ್ಳಾರಿಯಿಂದ ಮೈಸೂರಿಗೆ ಶಿಫ್ಟ್ ಆಗಿದೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲ, ನಾಯಕಿ ಶ್ರೀನಿಧಿಯ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂಬ ಸುದ್ದಿಗಳಿವೆ.

    ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಕೂಡಾ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ನಡೆದಿತ್ತು. ಅರಮನೆಯಲ್ಲಿ ಚಿತ್ರದ ಅತ್ಯಂತ ಪ್ರಮುಖ ಭಾಗಗಳ ಶೂಟಿಂಗ್ ನಡೆದಿದೆ ಎನ್ನಲಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್, 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

  • ಮೊದಲ ದಿನವೇ 100 ಕೋಟಿ ಕ್ಲಬ್`ಗೆ ಕೆಜಿಎಫ್ : ಬಾಕ್ಸಾಫೀಸ್ ಎಲ್ಲಿಂದ ಎಷ್ಟೆಷ್ಟು..?

    ಮೊದಲ ದಿನವೇ 100 ಕೋಟಿ ಕ್ಲಬ್`ಗೆ ಕೆಜಿಎಫ್ : ಬಾಕ್ಸಾಫೀಸ್ ಎಲ್ಲಿಂದ ಎಷ್ಟೆಷ್ಟು..?

    134 ಕೋಟಿ. ಇದು ಹೊಂಬಾಳೆಯವರೇ ಹೊರಗೆ ಬಿಟ್ಟ ಅಧಿಕೃತ ಲೆಕ್ಕಾಚಾರ. ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ಫುಲ್ ರಾಕಿಂಗ್. ಪ್ರಶಾಂತ್ ನೀಲ್ ಅವರ ಝೀಲ್ ಡಬಲ್ ಆಗಿದ್ದರೆ, ಫುಲ್ ಖುಷಿಯಾಗಿರೋದು ವಿಜಯ್ ಕಿರಗಂದೂರು. 134 ಕೋಟಿಯನ್ನು ಮೊದಲ ದಿನವೇ ಗಳಿಸಿದ ಕೆಜಿಎಫ್‍ನ ಮೊದಲ 4 ದಿನದ ಎಲ್ಲ ಶೋಗಳೂ ಬುಕ್ ಆಗಿರುವುದು ವಿಶೇಷ. ಅಲ್ಲಿಗೆ ಭಾನುವಾರದವರೆಗೆ ಕೆಜಿಎಫ್‍ಗೆ ಎದುರಾಳಿಗಳೇ ಇಲ್ಲ. ಈ 134 ಕೋಟಿಯಲ್ಲಿ ವಿದೇಶದ ಎಲ್ಲ 75 ದೇಶಗಳ ಬಾಕ್ಸಾಫೀಸ್ ಲೆಕ್ಕಾಚಾರ ಸಿಕ್ಕಿಲ್ಲ. ಈಗ ಬರುತ್ತಿರೋ ವರದಿಗಳ ಪ್ರಕಾರ ವಿಶ್ವದಾದ್ಯಂತ ಮೊದಲ ದಿನದ ಗಳಿಕೆ 165 ಕೋಟಿ ದಾಟಿದೆ. ಈ ಹಾದಿಯಲ್ಲಿ ಕೆಜಿಎಫ್ ಸೃಷ್ಟಿಸಿದ ದಾಖಲೆಗಳನ್ನೊಮ್ಮೆ ನೋಡೋಣ.

    ಕರ್ನಾಟಕದಲ್ಲೀಗ ಮೊದಲ ದಿನವೇ ಅತೀ ಹೆಚ್ಚು ದುಡಿದ ದಾಖಲೆ ಈಗ ಕೆಜಿಎಫ್ ಚಾಪ್ಟರ್ 2ನದ್ದು.

    ವಿಶ್ವದಾದ್ಯಂತ ಮೊದಲ ದಿನವೇ ದೊಡ್ಡ ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ  ಕೆಜಿಎಫ್‍ನದ್ದು 3ನೇ ಸ್ಥಾನ. ಮೊದಲ 2 ಸ್ಥಾನದಲ್ಲಿರೋದು ಬಾಹುಬಲಿ ಮತ್ತು ಆರ್.ಆರ್.ಆರ್.

    ಆಂಧ್ರ ಮತ್ತು ತೆಲಂಗಾಣದಲ್ಲಿ ಆರ್.ಆರ್.ಆರ್. ದಾಖಲೆಯ ಸಮೀಪಕ್ಕೆ ಹೋಗಿದೆ. ಕರ್ನಾಟಕಕ್ಕಿಂತ ಹೆಚ್ಚು ಜನ ಅಲ್ಲಿ ಸಿನಿಮಾ ನೋಡಿದ್ದರೂ, ಗಳಿಕೆ ಕರ್ನಾಟಕಕ್ಕಿಂತ ಕಡಿಮೆ. ಕಾರಣ ಇಷ್ಟೆ. ಅಲ್ಲಿನ ಜಗನ್ ಸರ್ಕಾರ ಟಿಕೆಟ್ ದರವನ್ನು ಇಲ್ಲಿನಂತೆ ಏರಿಸೋಕೆ ಅವಕಾಶ ಕೊಟ್ಟಿಲ್ಲ. ಗರಿಷ್ಠ 250 ರೂ. ಅಷ್ಟೆ.

    ಕೇರಳದಲ್ಲಿ ಬೀಸ್ಟ್ ಸ್ಕ್ರೀನ್‍ಗಳ ಸಂಖ್ಯೆ ಡೌನ್ ಆಗಿದ್ದರೆ, ಕೆಜಿಎಫ್ ಸ್ಕ್ರೀನ್ ಸಂಖ್ಯೆ ತ್ರಿಬಲ್ ಆಗಿದೆ.

    ತಮಿಳುನಾಡಿನಲ್ಲಿ 2 ಮತ್ತು 3ನೇ ದಿನವೂ ಮಧ್ಯರಾತ್ರಿ ಶೋ ನಡೆಯುತ್ತಿವೆ. ವಿಶೇಷವೆಂದರೆ ಅಲ್ಲಿಯೂ ಬೀಸ್ಟ್ ಸ್ಕ್ರೀನ್ ಕಡಿಮೆಯಾಗಿದ್ದು, ಕೆಜಿಎಫ್ ಶೋಗಳ ಸಂಖ್ಯೆ ಹೆಚ್ಚಾಗಿದೆ.

    ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಕರ್ನಾಟಕದಲ್ಲಿ ಎಲ್ಲ ಭಾಷೆಗಳ ಶೋಗಳೂ ಹೌಸ್‍ಫುಲ್.

    ಹಿಂದಿಯಲ್ಲಿ ಮೊದಲ ದಿನವೇ 50 ಕೋಟಿ ದಾಟಿರೋ ಕೆಜಿಎಫ್, ಚಾಪ್ಟರ್ 1ನ ಲೈಫ್‍ಟೈಂ ಗಳಿಕೆಯನ್ನು ಮೊದಲ ದಿನವೇ ದಾಟಿಬಿಟ್ಟಿದೆ. ಚಾಪ್ಟರ್ 1, ಹಿಂದಿಯಲ್ಲಿ ಒಟ್ಟಾರೆ 44 ಕೋಟಿ ಬಿಸಿನೆಸ್ ಮಾಡಿತ್ತು. ಈಗ ಮೊದಲ ದಿನವೇ 54 ಕೋಟಿ ಬಿಸಿನೆಸ್ ಮಾಡಿದೆ.

    ಹಿಂದಿಯಲ್ಲಿ 54 ಕೋಟಿ, ಕನ್ನಡದಲ್ಲಿ 35 ಕೋಟಿ, ತೆಲುಗಿನಲ್ಲಿ 30 ಕೋಟಿ, ತಮಿಳಿನಲ್ಲಿ 9 ಕೋಟಿ ಹಾಗೂ ಮಲಯಾಳಂನಲ್ಲಿ 8 ಕೋಟಿ ಫಸ್ಟ್ ಡೇ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅಮೆರಿಕದಲ್ಲಿಯೂ ದಾಖಲೆ ಬರೆದಿರೋ ಕೆಜಿಎಫ್‍ನ ಒಟ್ಟಾರೆ ಫಾರಿನ್ ಬಾಕ್ಸಾಫೀಸ್ ಲೆಕ್ಕ 30 ಕೋಟಿಗೂ ಹೆಚ್ಚು.

  • ಯಶ್ ಅಭಿಮಾನಿಗಳ ಕ್ಷಮೆ ಕೋರಿದ ಕೆಜಿಎಫ್ ನಿರ್ದೇಶಕ

    kgf director apologoze to yash fans

    ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರೀಕ್ಷೆಯಂತೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ ಪ್ರಶಾಂತ್ ನೀಲ್.

    ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ಯಶ್ ಬರ್ತ್‍ಡೇಗೆ ಒಂದು ಟೀಸರ್ ಆದರೂ ಪಕ್ಕಾ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ಪ್ರಶಾಂತ್ ಕೊಡುತ್ತಿರುವ ಕಾರಣ ಇದು, ಶೂಟಿಂಗ್ ಮುಗಿಸಿಕೊಂಡು ಇಡೀ ತಂಡ ಬೆಂಗಳೂರಿಗೆ ಬರುವುದೇ ಜನವರಿ 7ಕ್ಕೆ. ಉಳಿಯುವುದು ಇನ್ನೊಂದೇ ದಿನ. ಒಂದು ದಿನದಲ್ಲಿ ದಿ ಬೆಸ್ಟ್ ಎನ್ನುವ ಕ್ವಾಲಿಟಿ ಕೊಡಲು ಸಾಧ್ಯವಿಲ್ಲ. ಬೆಸ್ಟ್ ಕೊಡದೇ ಹೋದರೆ ತಪ್ಪಾಗುತ್ತದೆ. ಹೀಗಾಗಿ ಟೀಸರ್ ಬಿಡುಗಡೆಯನ್ನೇ ಮುಂದೂಡಿದ್ದಾರೆ ಪ್ರಶಾಂತ್ ನೀಲ್.

    ನಿರ್ದೇಶಕ ಪ್ರಶಾಂತ್ ನೀಲ್ ಕಮಿಟ್‍ಮೆಂಟ್ ಬಗ್ಗೆ ಅವರ ಜೊತೆ ಕೆಲಸ ಮಾಡಿರುವವರಿಗೆ ಚೆನ್ನಾಗಿ ಗೊತ್ತು. ಅಂದುಕೊಂಡಂತೆ ಔಟ್‍ಪುಟ್ ಸಿಗುವವರೆಗೂ ರಾಜಿಯಾಗದ ಸ್ವಭಾವ ಅವರದ್ದು. ಸ್ಸೋ.. ಟೀಸರ್ ವಿಚಾರದಲ್ಲೂ ರಾಜಿ ಮಾಡಿಕೊಳ್ಳುತ್ತಿಲ್ಲ. ಆದರೆ, ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 8 ನಿಮಿಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಸೆಕೆಂಡ್ ಪೋಸ್ಟರ್ ಹೊರಬೀಳಲಿದೆ.

  • ಯಶ್ ಕೊಟ್ಟ ಗಿಫ್ಟಿನಲ್ಲಿ ಪ್ರಶಾಂತ್ ನೀಲ್ ಮಾಡಿದ ಮೊದಲ ಕೆಲಸ

    yash's luxury gift to prashanth neel

    ರಾಕಿಂಗ್ ಸ್ಟಾರ್ ಯಶ್‍ಗೆ ಪ್ರಶಾಂತ್ ನೀಲ್ ಅದ್ಭುತ ಉಡುಗೊರೆ ಕೊಟ್ಟಿರೋದು ಇಡೀ ಇಂಡಿಯಾಗೇ ಗೊತ್ತು. ಕೆಜಿಎಫ್ ನಂತಹ ಮಾಸ್ಟರ್ ಪೀಸ್ ಕೊಟ್ಟ ಪ್ರಶಾಂತ್ ನೀಲ್, ಯಶ್‍ಗೆ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ಕೊಟ್ಟಿದ್ದಾರೆ. ಅಂತಹ ಪ್ರಶಾಂತ್ ನೀಲ್ ಅವರಿಗೆ ಯಶ್ ಕೂಡಾ ಒಂದು ಪ್ರೀತಿಯ ಕಾಣಿಕೆ ಕೊಟ್ಟಿದ್ದಾರೆ.

    ಸ್ಯಾಮ್ಸಂಗ್ ಗ್ಯಾಲಕ್ಸಿ ಎಎಕ್ಸ್‍ವೈ ಫೋಲ್ಡಿಂಗ್ ಮೊಬೈಲ್ ಗಿಫ್ಟ್ ನೀಡಿದ್ದಾರೆ ಯಶ್. ಅದನ್ನು ಅಷ್ಟೇ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಪ್ರಶಾಂತ್ ನೀಲ್. ಅಷ್ಟೇ ಅಲ್ಲ, ಆ ಕ್ಯಾಮೆರಾ ಮೂಲಕವೇ ತಮ್ಮ ಪತ್ನಿ ಮತ್ತು ಶ್ರೀನಿಧಿ ಶೆಟ್ಟಿ ಜೊತೆಯಲ್ಲಿರೋ ಫೋಟೋವೊಂದನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದಾರೆ ಪ್ರಶಾಂತ್. ಅಂದಹಾಗೆ ಪ್ರಶಾಂತ್ ನೀಲ್ ಪತ್ನಿ ಹೆಸರು ರೀನಾ.

  • ಯಶ್, ವಿಜಯ್ ಕಿರಗಂದೂರು ದೇಗುಲ ದರ್ಶನ

    ಯಶ್, ವಿಜಯ್ ಕಿರಗಂದೂರು ದೇಗುಲ ದರ್ಶನ

    ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಮುನ್ನ ಯಶ್ ಮತ್ತು ವಿಜಯ್ ಕಿರಗಂದೂರು ದೇಗುಲ ದರ್ಶನ ಮಾಡುತ್ತಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮತ್ತು ಉಜಿರೆಯ ಸೂರ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.

    ಧರ್ಮಸ್ಥಳದಲ್ಲಿ ಪೂಜೆ ಮುಗಿಸಿದ ಯಶ್ ಮತ್ತು ವಿಜಯ್ ಕಿರಗಂದೂರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ಚಿತ್ರದ ಬಗ್ಗೆ ಮಾಹಿತಿ ಪಡೆದುಕೊಂಡ ಹೆಗ್ಗಡೆಯವರು ಕುಟುಂಬದವರು, ಮಕ್ಕಳ ಬಗ್ಗೆಯೂ ತಿಳಿದುಕೊಂಡರು.

    ಇಷ್ಟು ಶ್ರಮ ಪಟ್ಟಿದ್ದೇವೆ. ಅದರ ಜೊತೆ ದೇವರ ಅನುಗ್ರಹವೂ ಬೇಕು. ಹೀಗಾಗಿ ಬಂದಿದ್ದೇವೆ. ಚಿತ್ರದ ಟಿಕೆಟ್ ಓಪನ್ ಆಗಿದೆ ಎಂದರು ಯಶ್.

    ಬುಕ್ಕಿಂಗ್ ಓಪನ್ ಆಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ ಬೆಲೆ 2000 ರೂ. ಇದೆ. ಒಂದು ಲೆಕ್ಕದ ಪ್ರಕಾರ ಪ್ರಶಾಂತ್ ನೀಲ್ ನಿರ್ದೇಶನದ ಕೆಜೆಎಫ್ ಚಾಪ್ಟರ್ 2, ಆರ್.ಆರ್.ಆರ್. ಗಳಿಸಿದ್ದ ಮೊದಲ ದಿನದ ದಾಖಲೆಯನ್ನು ಮುರಿಯುವ ನಿರೀಕ್ಷೆ ಇದೆ.

  • ರಮಿಕಾ ಸೇನ್ ಡಬ್ಬಿಂಗ್ ಕಂಪ್ಲೀಟ್

    ರಮಿಕಾ ಸೇನ್ ಡಬ್ಬಿಂಗ್ ಕಂಪ್ಲೀಟ್

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್: ಚಾಪ್ಟರ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಮುಗಿಸಿದ್ದರು. ಈಗ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ರವೀನಾ ಟಂಡನ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್  ಚಾಪ್ಟರ್ 1 ಭರ್ಜರಿ ಸಕ್ಸಸ್ ಕಂಡಿದ್ದ ಹಿನ್ನೆಲೆಯಲ್ಲಿ ಕೆಜಿಎಫ್: ಚಾಪ್ಟರ್ 2’ ಮೇಲೆ ಭಾರ ನಿರೀಕ್ಷೆ ಇದೆ. ಇದೇ ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಆಗಲಿದೆ. ಇದು ಕನ್ನಡದಲ್ಲಿ ರವೀನಾ ಟಂಡನ್ ನಟಿಸಿರೋ 2ನೇ ಸಿನಿಮಾ. ಮೊದಲನೇ ಸಿನಿಮಾ ಉಪೇಂದ್ರ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಈಗ ಕೆಜಿಎಫ್ ಚಾಪ್ಟರ್ 2 ಕೂಡಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗುತ್ತಿದೆ.

    ಯಶ್ ಜೊತೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ ಸೇರಿದಂತೆ ಘಟಾನುಘಟಿ ಕಲಾವಿದರ ತಂಡವೇ ಚಿತ್ರದಲ್ಲಿದ್ದು, 2023ರ ಭಾರೀ ನಿರೀಕ್ಷೆಯ ಚಿತ್ರ ಕೆಜಿಎಫ್ ಆಗಿದೆ.

  • ರವೀನಾ ಟಂಡನ್ ಪತಿಯಿಂದ ಕೆಜಿಎಫ್ ಹಿಂದಿ ರಿಲೀಸ್

    anil thadani with yash and kgf team

    ರಾಕಿಂಗ್ ಸ್ಟಾರ್ ಯಶ್, ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್. ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಹಿಂದಿ ಕೆಜಿಎಫ್ ವಿತರಣೆಯ ಹಕ್ಕನ್ನು ಅನಿಲ್ ತಡಾನಿ ಖರೀದಿಸಿದ್ದಾರೆ. 

    ಅನಿಲ್ ತಡಾನಿ, ಕನ್ನಡದಲ್ಲಿ ಮಸ್ತ್ ಮಸ್ತ್ ಹುಡುಗಿಯಾಗಿ ನಟಿಸಿದ್ದ ಉಪೇಂದ್ರ ಚಿತ್ರದಿಂದ ಚಿರಪರಿಚಿತೆಯಾಗಿರುವ ರವೀನಾ ಟಂಡನ್‍ರ ಪತಿ. ಬಾಲಿವುಡ್‍ನಲ್ಲಿ ಸ್ಟಾರ್ ವಿತರಕ. ವಿಜಯ್ ದೇವರಕೊಂಡ ಹಾಗೂ ಕಾರ್ತಿಕ್ ಗೌಡ, ಅನಿಲ್ ತಡಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಅನಿಲ್ ತಡಾನಿ ವಿತರಣೆ ಮಾಡುತ್ತಿರುವುದರಿಂದ ಹಿಂದಿಯಲ್ಲಿ ಬಹುದೊಡ್ಡ ಓಪನಿಂಗ್ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

  • ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡಲು ರವೀನಾ ಎಂಟ್ರಿ

    raveen tandon joins kgf chapter 2 team

    ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಈಗ ಸೀನಿಯರ್ ನಟಿ. ಅವರೀಗ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರದ ಕೆಲಸವೇ ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡೋದು.

    20 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ರವೀನಾ, ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಧಾನಿಯ ಪಾತ್ರ ಮಾಡಿದ್ದಾರೆ. ದೇಶದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರಾಗಿದ್ದ ಕಾರಣ, ರವೀನಾ ಪಾತ್ರದಲ್ಲಿ ಇಂದಿರಾ ಛಾಯೆಯೂ ಇದೆ.

    ರವೀನಾ ಟಂಡನ್, ಇಲ್ಲಿ ರಮಿಕಾ ಸೇನ್ ಹೆಸರಿನ ಪಾತ್ರ ಮಾಡುತ್ತಿದ್ದು, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ವಾಗತ ಕೋರಿದ್ದಾರೆ.

    ಯಶ್, ಸಂಜಯ್ ದತ್, ಅನಂತ ನಾಗ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 2ಗೆ ವಿಜಯ್ ಕಿರಗಂದೂರು ನಿರ್ಮಾಪಕ. 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2 ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

  • ರಾಕಿಭಾಯ್ ಮಾರ್ನಿಂಗ್ ಡಬ್ಬಿಂಗ್ ಸೀಕ್ರೆಟ್

    ರಾಕಿಭಾಯ್ ಮಾರ್ನಿಂಗ್ ಡಬ್ಬಿಂಗ್ ಸೀಕ್ರೆಟ್

    ಸಿನಿಮಾ ಡಬ್ಬಿಂಗ್ ಮಾಡೋಕೆ ಪ್ರಶಸ್ತ  ಕಾಲ ಯಾವುದು..? ಅನುಮಾನವೇ ಇಲ್ಲ. ಅದಕ್ಕೆಲ್ಲ ಮುಂಜಾನೆಯೇ ಬೆಸ್ಟ್ ಟೈಂ. ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವರು ಡಾ.ರಾಜ್ ಕುಮಾರ್. ಅದರಲ್ಲೂ ಪೌರಾಣಿಕ ಚಿತ್ರಗಳ ಡಬ್ಬಿಂಗ್ನಲ್ಲಿ ಅದನ್ನು ತಪ್ಪಿಸುತ್ತಲೇ ಇರಲಿಲ್ಲ. ಕಾರಣ ಇಷ್ಟೆ, ಸುದೀರ್ಘ ನಿದ್ದೆಯ ನಂತರ ವಾಯ್ಸ್ ಫ್ರೆಶ್ ಅಗಿರುತ್ತೆ. ಅದ್ಭುತ ಬೇಸ್ ವಾಯ್ಸ್ ಸಿಗುವ ಸಮಯ ಅದು. ಈಗ ರಾಕಿಭಾಯ್ ಯಶ್ ಕೂಡಾ ಅದನ್ನೇ ಫಾಲೋ ಮಾಡುತ್ತಿದ್ದಾರೆ.

    ಕೆಜಿಎಫ್ ಚಾಪ್ಟರ್ 2 ಚಿತ್ರದ ತಮ್ಮ ಪಾತ್ರದ ಡಬ್ಬಿಂಗ್ಗೆ ಯಶ್ ಬರುತ್ತಿರುವುದು ಬೆಳಗ್ಗೆ 6 ಗಂಟೆಗೆ. ನಂತರ 9 ಗಂಟೆಗೆಲ್ಲ ಬ್ರೇಕ್. ಹೀಗೆ ಮಾರ್ನಿಂಗ್ ಶಿಫ್ಟ್ನಲ್ಲಿಯೇ ಕೆಜಿಎಫ್ ಡಬ್ಬಿಂಗ್ ಮಾಡುತ್ತಿದ್ದಾರೆ ಯಶ್. ಯಶ್ ಅವರ ಪ್ರಯತ್ನಕ್ಕೆ ಸಪೋರ್ಟ್ ಮಾಡಿರೋದು ನಿರ್ದೇಶಕ ಪ್ರಶಾಂತ್ ನೀಲ್.

    ಹಾಗೆ ನೋಡಿದರೆ ಯಶ್ ಅವರದ್ದು ಬೇಸ್ ವಾಯ್ಸ್. ಅಂತಹುದರಲ್ಲಿ ಯಶ್ ತಮ್ಮ ಧ್ವನಿಯನ್ನು ಇನ್ನಷ್ಟು ಇಂಪ್ರೂವ್ ಮಾಡಿಕೊಂಡಿರೋದು ಕೆಜಿಎಫ್ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

  • ರಾಕಿಭಾಯ್ ಲುಕ್ ಸೃಷ್ಟಿಸಿದ ಥಂಡರ್

    yash's beardo look creates thunder

    sಸೆ.16ರಂದು ಕಾಯುತ್ತಿರಿ, ಥಂಡರ್ ಬರಲಿದೆ. ಇದು ಜಾಹಿರಾತಿನ ಪ್ರೋಮೋ ವಿಡಿಯೋ. ಹಾಲಿವುಡ್ ಸ್ಟೈಲ್ ಲುಕ್‍ನಲ್ಲಿ ಥೇಟು ಬಿರುಗಾಳಿಯಂತೆಯೇ ಕಾಣುತ್ತಿರೋ ಯಶ್ ಹವಾ ಎಬ್ಬಿಸಿಬಿಟ್ಟಿದ್ದಾರೆ.

    ಸೆ.16ರಂದು ಉದ್ಭವವಾಗುವ ಬಿರುಗಾಳಿ ಏನು..? ಬಿಯೋರ್ಡ್ ಥಂಡರ್ ಅಂದ್ರೆ ಏನು..? ಉತ್ತರ ಗೊತ್ತಿಲ್ಲ. ಹುಳವನ್ನಂತೂ ಬಿಟ್ಟಾಗಿದೆ. ಇಷ್ಟಕ್ಕೂ ಈ ಸ್ಟೇಟಸ್‍ನ ಮರ್ಮವೇ ಅದು. ಕುತೂಹಲ ಹೆಚ್ಚಿಸುವುದು.

  • ರಾಖಿ ಭಾಯ್ ಬೈಕ್ ಬಿಡಲ್ಲ..!

    rocky bhai fida over bike

    ಕೆಜಿಎಫ್ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮ್ಯೂಸಿಕ್, ಸೌಂಡ್, ಡೈಲಾಗ್ಸ್, ಕ್ಯಾಮೆರಾ ಟೇಕಿಂಗ್ಸ್.. ಈ ಎಲ್ಲದರ ನಡುವೆ ಯುವಕರ ಕಣ್ಣು ಕುಕ್ಕುತ್ತಿರೋದು ರಾಖಿ ಭಾಯ್ ಬೈಕ್. 

    ಮೊದಲೇ 70-80ರ ದಶಕದ ಕಥೆ. ಹೀಗಾಗಿ ಆಗಿನ ಕಾಲದ ಬೈಕ್‍ನ್ನೇ ಬಳಸಿಕೊಳ್ಳೋ ಪ್ಲಾನ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇತ್ತು. ಆದರೆ, ಮೈಲೇಜ್, ಕೆಪ್ಯಾಸಿಟಿ ಪ್ರಾಬ್ಲಂಗಳಿಂದಾಗಿ ಹೊಸ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಗಾಡಿಯನ್ನೇ ಹಳೆಯ ರೂಪಕ್ಕೆ ಬದಲಿಸಲಾಯಿತು. ನಾವು ಟ್ರೇಲರ್‍ನಲ್ಲಿ ನೋಡ್ತಿರೋದು ಅದೇ ಬೈಕ್.

    ಆ ಬೈಕ್ ಮೇಲೆ ಯಶ್‍ಗೆ ಲವ್ವಾಗಿ ಬಿಟ್ಟಿದೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ಮೇಲೆ ಆ ಬೈಕ್‍ನ್ನು ಸ್ವಂತಕ್ಕೆ ತೆಗೆದುಕೊಳ್ಳೋ ಪ್ಲಾನ್ ಹಾಕಿಕೊಂಡಿದ್ದಾರಂತೆ ಯಶ್. 

  • ರಾಜ್ಯೋತ್ಸವಕ್ಕೆ ಕೆಜಿಎಫ್ ಮತ್ತೆ ರಿಲೀಸ್

    kgf rajyotsava special

    ಕೆಜಿಎಫ್ ಚಾಪ್ಟರ್ 1 ಸಿನಿಮಾ ಇದೇ ರಾಜ್ಯೋತ್ಸವಕ್ಕೆ ಮತ್ತೆ ಬಿಡುಗಡೆಯಾಗುತ್ತಿದೆ. 25 ರಿಂದ 30 ಸ್ಕ್ರೀನ್‍ಗಳಲ್ಲಿ ಕೆಜಿಎಫ್ ಬಿಡುಗಡೆಯಾಗುತ್ತಿದ್ದು, ಇದು ರಾಜ್ಯೋತ್ಸವ ಸ್ಪೆಷಲ್. ಊರ್ವಶಿ, ಕಾವೇರಿ ಸೇರಿದಂತೆ ಕೆಲವು ಮಲ್ಟಿಪ್ಲೆಕ್ಸ್‍ಗಳಲ್ಲೂ ಕೆಜಿಎಫ್ ಮತ್ತೆ ತೆರೆ ಕಾಣುತ್ತಿದೆ.

    ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 1, ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತೆರೆ ಕಂಡಿತ್ತು. ಚಾಪ್ಟರ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ.

  • ರೋರಿಂಗ್ ಬಘೀರ : ಉಗ್ರಂ ಜೋಡಿ ರಿಪೀಟ್

    Prashanth Neel Writes Story For Bhageera

    ಉಗ್ರಂ, ಮಫ್ತಿ ನಂತರ ಮತ್ತೊಮ್ಮೆ ಅದೇ ಶೇಡ್‍ನಲ್ಲಿ ಪ್ರತ್ಯಕ್ಷವಾಗುತ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಈ ಬಾರಿ ಕನ್ನಡದಲ್ಲಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ. ಶ್ರೀಮುರಳಿಯ ಬಘೀರ ಚಿತ್ರಕ್ಕೆ ಡೈರೆಕ್ಟರ್ ಪ್ರಶಾಂತ್ ನೀಲ್ ಅಲ್ಲ. ಆದರೆ, ಕಥೆ, ಚಿತ್ರಕಥೆ ಅವರದ್ದೇ. ನಿರ್ದೇಶಕರಾಗಿರುವುದು ಯಶ್-ರಮ್ಯಾ ಜೋಡಿಯ ಲಕ್ಕಿ ಚಿತ್ರದ ಖ್ಯಾತಿಯ ಡಾ.ಸೂರಿ.

    ಯುವರತ್ನ, ಕೆಜಿಎಫ್ ಚಾಪ್ಟರ್ 2, ಸಲಾರ್‍ನಂತರ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಘೀರನಿಗೆ ಬಂಡವಾಳ ಹೂಡುತ್ತಿದೆ.

    ಇಡೀ ಸಮಾಜವೇ ಅರಣ್ಯವಾದಾಗ, ಒಬ್ಬನೇ ಒಬ್ಬ ರಕ್ಷಕ ನ್ಯಾಯಕ್ಕಾಗಿ ಘರ್ಜಿಸುತ್ತಾನೆ ಅನ್ನೋ ಟ್ಯಾಗ್‍ಲೈನ್ ಬೇರೆ ಇದೆ. ಡೌಟೇ ಇಲ್ಲದಂತೆ ಇದೊಂದು ಆಕ್ಷನ್ ಡ್ರಾಮಾ. 

  • ರೌಡಿ ರೋಹಿತ್ ಜೊತೆ ಪ್ರಶಾಂತ್ ನೀಲ್

    prashanth neel with karva fame rj rohith

    ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಈಗ ಫುಲ್ ಡಿಮ್ಯಾಂಡ್. ಕಥೆ ಮತ್ತು ಚಿತ್ರಕಥೆಯ ಮೇಲೆ ನೀಲ್ ಅವರಿಗೆ ಇರುವ ಹಿಡಿತ, ಹಲವರು ಅವರನ್ನು ಸಂಪರ್ಕಿಸುವಂತೆ ಮಾಡ್ತಿದೆ. ಈಗ ಸೆಟ್ಟೇರಿರುವ ಮದಗಜ ಚಿತ್ರವನ್ನೂ ಓವರ್ ಲುಕ್ ಮಾಡಿದ್ದರು ಪ್ರಶಾಂತ್ ನೀಲ್. ಈಗ ಮತ್ತೊಂದು ಚಿತ್ರ. ರೌಡಿ ಫೆಲೋ.

    ಕರ್ವ ಚಿತ್ರದ ಮೂಲಕ ಗಮನ ಸೆಳೆದಿದ್ದ ಆರ್‍ಜೆ ರೋಹಿತ್, ಈ ಚಿತ್ರದ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕ. ಆರ್‍ಜೆ ರೋಹಿತ್ ಬೆಳಕಿಗೆ ಬಂದಿದ್ದು ಬಾಂಬೆ ಮಿಠಾಯಿ ಚಿತ್ರದಿಂದ. ಅದಾದ ಮೇಲೆ ಕರ್ವ, ತ್ರಯಂಬಕಂ, ಬಕಾಸುರ ಚಿತ್ರಗಳನ್ನು ಮಾಡಿದ್ದರು ಆರ್‍ಜೆ ರೋಹಿತ್.

    ಪ್ರತಿಯೊಬ್ಬರಲ್ಲೂ ತಾನೊಬ್ಬ ಹೀರೋ, ರೌಡಿ ಅನ್ನೋ ಮನಸ್ಥಿತಿ ಇರುತ್ತೆ. ಹೀಗಾಗಿಯೇ ನಾವು ರಸ್ತೆಯಲ್ಲಿ ಯಾರಿಗಾದರೂ ಡಿಕ್ಕಿ ಹೊಡೆದರೆ, ನಮ್ಮದೇ ತಪ್ಪಿದ್ದರೂ ಸಾರಿ ಕೇಳಲ್ಲ. ಜಗಳಕ್ಕೆ ಹೋಗುತ್ತೇವೆ. ಅಂತಹ ಮನಸ್ಥಿತಿ ನಮ್ಮ ಸಿನಿಮಾ ಹೀರೋಗೂ ಇರುತ್ತೆ. ಅದೇ ಚಿತ್ರದ ಕಥೆ ಎನ್ನುತ್ತಾರೆ ರೋಹಿತ್.

    ಬಕಾಸುರ ಚಿತ್ರದ ನಂತರ ಪ್ರಶಾಂತ್ ನೀಲ್ ಅವರೇ ಮುಂದಿನ ಕಥೆಯನ್ನು ನಾನೇ ಓಕೆ ಮಾಡ್ತೇನೆ. ಅದನ್ನೇ ನೀನು ಸಿನಿಮಾ ಮಾಡು ಎಂದಿದ್ದರಂತೆ. ಅದರಂತೆಯೇ ರೋಹಿತ್ ನಾಲ್ಕೈದು ಸ್ಕ್ರಿಪ್ಟ್‍ಗಳನ್ನು ಪ್ರಶಾಂತ್ ನೀಲ್ ಅವರಿಗೆ ಕಳಿಸಿಕೊಟ್ಟಿದ್ದರು. ಅಷ್ಟೂ ಸ್ಕ್ರಿಪ್ಟುಗಳಲ್ಲಿ ನೀಲ್ ಓಕೆ ಮಾಡಿದ್ದು ರೌಡಿ ಫೆಲೋ ಕಥೆಯನ್ನ.

    ಚಿತ್ರದಲ್ಲ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ವಿದ್ಯಾ ಪ್ರದೀಪ್ ನಾಯಕಿಯಾಗಿದ್ದಾರೆ. ಊರ್ವಶಿ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೇ.70ರಷ್ಟು ಶೂಟಿಂಗ್ ಮುಗಿಸಿದೆ ಚಿತ್ರತಂಡ. ದಿಯಾ, 6-5=2, ಕರ್ವ ಚಿತ್ರಗಳ ಖ್ಯಾತಿಯ ಕೃಷ್ಣ ಚೈತನ್ಯ ಚಿತ್ರದ ನಿರ್ಮಾಪಕರು.

  • ವ್ಹಾವ್.. ಕೆಜಿಎಫ್ ಟ್ರೇಲರ್ ಸಖತ್ತಾಗಿದೆ..

    kgf trailer looks amazing

    ಕೆಜಿಎಪ್ ಟ್ರೇಲರ್ ರಿಲೀಸ್ ಆಯ್ತು. ನಿರೀಕ್ಷೆಯಂತೆಯೇ ಚಿತ್ರದಲ್ಲಿರೊದು ಕೋಲಾರ ಚಿನ್ನದ ಗಣಿಯ ಕಥೆ.  1951ರಿಂದ ಚಿತ್ರದ ಕಥೆ ಶುರುವಾಗುತ್ತೆ. ಆದರೆ, ಚಿತ್ರ ಆರಂಭವಾಗೋದು ಮುಂಬೈನಿಂದ ಅನ್ನೋ ಸುಳಿವು ಕೊಟ್ಟಿದೆ ಚಿತ್ರದ ಟ್ರೇಲರ್. 80ರ ದಶಕವನ್ನು ಪ್ರಶಾಂತ್ ಮತ್ತೊಮ್ಮೆ ಮರುಸೃಷ್ಟಿಸಿದ್ದಾರೆ. ಉಗ್ರಂನಲ್ಲಿ ವಿಭಿನ್ನ ಡೈಲಾಗ್ಗಳ ಹೊಳೆ ಹರಿಸಿದ್ದ ಪ್ರಶಾಂತ್, ಈ ಟ್ರೇಲರ್ನಲ್ಲೂ ಡೈಲಾಗ್ ಹವಾ ಇದೆ ಅನ್ನೊ ಸುಳಿವು ಕೊಟ್ಟಿದ್ದಾರೆ. ಮೇಕಿಂಗ್ ಅಂತೂ ಹಾಲಿವುಡ್ ಚಿತ್ರಗಳನ್ನೂ ನಾಚಿಸುವಂತಿದೆ.

    ಅನಂತ್ನಾಗ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಟ್ರೇಲರ್, ಕೆಲವೇ ಕ್ಷಣಗಳಲ್ಲಿ ಮನಸ್ಸು ಆವರಿಸಿಕೊಳ್ಳುತ್ತಿದೆ. ರವಿ ಬಸ್ರೂರು ಸಂಗೀತ ಕಿವಿಗಳಲ್ಲಿ ಗುಂಯ್ಗುಟ್ಟುತ್ತೆ. ಯಶ್ ಸಣ್ಣ ಸಣ್ಣ ಮೂವ್ಮೆಂಟ್ನಲ್ಲಿಯೇ ಆವರಿಸಿಕೊಂಡುಬಿಡ್ತಾರೆ. ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕ, ವಸಿಷ್ಟ ಹೀಗೆ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ತಮನ್ನಾ ಐಟಂ ಸಾಂಗ್ ಚಿತ್ರದ ಹೈಲೈಟ್. 

    ಯಶ್ ಗೆಟಪ್, ಡೈಲಾಗ್ ಡೆಲಿವರಿ ರೋಮಾಂಚನೊಗಳಿಸಿದರೆ, ಕ್ಯಾಮೆರಾ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದೆ. ಬಾಹುಬಲಿಯನ್ನೂ ಮೀರಿಸಲಿದೆ ಎನ್ನುವ ನಿರೀಕ್ಷೆಯನ್ನು ಟ್ರೇಲರ್ ಇನ್ನಷ್ಟು ಹೆಚ್ಚಿಸಿದೆ. ರಾಜಕುಮಾರನ ಮೂಲಕ ಇತಿಹಾಸ ಸೃಷ್ಟಿಸಿದ ವಿಜಯ್ ಕಿರಗಂದೂರು ಮತ್ತೊಂದು ಇತಿಹಾಸ ಸೃಷ್ಟಿಸಲಿ.

  • ಶ್ರೀಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದ ಕೆಜಿಎಫ್ ಡೈರೆಕ್ಟರ್

    prashanth neel had planned to squash srimurali once

    ಶ್ರೀಮುರಳಿ, ಡೈರೆಕ್ಟರ್‍ಗಳ ಪಾಲಿಗೆ ಅಡ್ಜಸ್ಟ್‍ಮೆಂಟ್ ಹೀರೋ. ನಿರ್ದೇಶಕರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವ ನಟ. ಇಂತಹವರನ್ನು ನಿರ್ದೇಶಕರೊಬ್ಬರು ಹೊಡೆಯೋಕೆ ಸ್ಕೆಚ್ ಹಾಕಿದ್ರಂತೆ ಎಂದರೆ ಅಚ್ಚರಿಯಾಗಬಹುದು. ಆದರೆ, ಇದು ಸತ್ಯ. ಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದವರು ಬೇರೆ ಯಾರೋ ಅಲ್ಲ, ಉಗ್ರಂ ಮೂಲಕ ಶ್ರೀಮುರಳಿಗೆ ಅತಿ ದೊಡ್ಡ ಬ್ರೇಕ್ ಕೊಟ್ಟ, ಕೆಜಿಎಫ್ ಮೂಲಕ ದೇಶಾದ್ಯಂತ ಭರ್ಜರಿ ಸದ್ದು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್.

    ಅವರ್ಯಾಕೆ ಇವರನ್ನು ಹೊಡೆಯಬೇಕು ಎಂದರೆ, ಅದರ ಹಿಂದೊಂದು ಲವ್ ಸ್ಟೋರಿ ಇದೆ. ಶ್ರೀಮುರಳಿ ಲವ್ ಮಾಡ್ತಾ ಇದ್ದದ್ದು ಪ್ರಶಾಂತ್ ಅವರ ತಂಗಿಯನ್ನ. ಇದು ಗೊತ್ತಾಗಿ ಪ್ರಶಾಂತ್ ಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದರಂತೆ. ಆಗ ಮುರಳಿ ತಪ್ಪಿಸಿಕೊಂಡು ಓಡಾಡ್ತಿದ್ದರಂತೆ. ಅದಾದ ಮೇಲೆ ಪ್ರಶಾಂತ್ ಅವರ ತಂಗಿ ವಿದ್ಯಾರನ್ನೇ ಮುರಳಿ ಮದುವೆಯಾದರು. ಈಗ ಪ್ರಶಾಂತ್ ನೀಲ್‍ಗೆ ಶ್ರೀಮುರಳಿ ಭಾವ.

    ಭಾವನಿಗೆ ವರದಕ್ಷಿಣೆಯಾಗಿ ಅವರು ಕೊಟ್ಟಿದ್ದು ಉಗ್ರಂ ಚಿತ್ರವನ್ನ. 

  • ಶ್ರೀಮುರಳಿಯ ಮದಗಜಕ್ಕೆ ಕೆಜಿಎಫ್ ಪ್ರಶಾಂತ್ ನೀಲ್ ಬಲ

    prashanth neel gives his suggestions to srimurali's madagaja script

    ರೋರಿಂಗ್ ಸ್ಟಾರ್ ಶ್ರೀಮುರಳಿ, ಭರಾಟೆಯ ಭರ್ಜರಿ ಸಕ್ಸಸ್ಸಿನ ಜೋಶ್ನಲ್ಲಿದ್ದಾರೆ. ಜೊತೆಯಲ್ಲೇ ಮದಗಜ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸೆಟ್ಟೇರುತ್ತಿರುವ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶಕ. ಈಗ ಈ ಚಿತ್ರದ ಕಥೆ, ಚಿತ್ರಕಥೆಗೆ ಪ್ರಶಾಂತ್ ನೀಲ್ ಬಲ ತುಂಬುತ್ತಿದ್ದಾರೆ. ಶ್ರೀಮುರಳಿಯ ಭಾವನೂ ಆಗಿರುವ ಪ್ರಶಾಂತ್, ಕಥೆಯಲ್ಲಿ ಒಂದಿಷ್ಟು ಬದಲಾವಣೆಗೆ ಸಲಹೆ ನೀಡಿದ್ದಾರೆ.

    ಮಹೇಶ್ ಅವರ ಜೊತೆ ಪ್ರಶಾಂತ್ ಸಂಪರ್ಕದಲ್ಲಿದ್ದಾರೆ. ಕೆಲವು ಸಲಹೆ ನೀಡಿದ್ದಾರೆ. ಸ್ಕ್ರಿಪ್ಟ್ ಇನ್ನೂ ಚೆನ್ನಾಗಿ ರೂಪುಗೊಳ್ಳುತ್ತಿದೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ. ಮದಗಜ ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆ ಆಗಿಲ್ಲ.

  • ಸರಣ್ ಪಕ್ಕಾ.. ಆದರೆ ರಾಕಿಭಾಯ್ ಜೂನಿಯರ್ ಅಲ್ಲ

    saran shakthi in kgf

    ಕೆಜಿಎಫ್ 2ನಲ್ಲಿ ತಮಿಳು ನಟ  ಸರಣ್ ಶಕ್ತಿ ನಟಿಸುತ್ತಿದ್ದಾರೆ. ಅವರು ರಾಕಿಭಾಯ್ ಅವರ ಹದಿಹರೆಯದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಚಿತ್ರಲೋಕ ವರದಿ ಮಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ ಕೆಜಿಎಫ್-2 ಸಹನಿರ್ಮಾಪಕರೂ ಆಗಿರುವ ಕಾರ್ತಿಕ್ ಗೌಡ. ಚಿತ್ರಲೋಕದ ವರದಿಯನ್ನೇ ರೀ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಸರಣ್ ಶಕ್ತಿ ನಟಿಸುತ್ತಿರುವುದು ನಿಜ. ಆದರೆ, ರಾಕಿಭಾಯ್ ಜೂನಿಯರ್ ಪಾತ್ರದಲ್ಲಿ ಅಲ್ಲ ಎಂದಿದ್ದಾರೆ. ಸರಣ್ ಶಕ್ತಿ ಪಾತ್ರ ಏನು ಎಂಬ ಬಗ್ಗೆ ಸಸ್ಪೆನ್ಸ್ ಹಾಗೆಯೇ ಉಳಿಸಿಕೊಂಡಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಹೀರೋಯಿಸಂ, ಸಂಜಯ್ ದತ್, ರವೀನಾ ಟಂಡನ್ ಕಾಂಬಿನೇಷನ್, ವಿಜಯ್ ಕಿರಗಂದೂರು ನಿರ್ಮಾಣ.. ಹೀಗೆ ಭರ್ಜರಿ ಕಾಂಬಿನೇಷನ್ನುಗಳ ಕೆಜಿಎಫ್-2 ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ.

  • ಸಲಾಂ ರಾಖಿ ಭಾಯ್‍ನಿಂದ 2ನೇ ಟ್ರೇಲರ್ 

    kgf second trailer today

    ಸಲಾಂ ರಾಖಿ ಭಾಯ್ ಹಾಡು ರಿಲೀಸ್ ಮಾಡಿ ಹವಾ ಎಬ್ಬಿಸಿರುವ ಕೆಜಿಎಫ್ ಟೀಂ, ಹಾಡಿನ ಗುಂಗು ಗುಂಯ್ ಅಂತಿರೋವಾಗ್ಲೇ ಇನ್ನೊಂದು ಅಬ್ಬರದ ಸುಳಿವು ಕೊಟ್ಟಿದೆ. ಬೆನ್ನಲ್ಲೇ ಕೆಜಿಎಫ್‍ನ 2ನೇ ಟ್ರೇಲರ್ ರಿಲೀಸ್ ಮಾಡೋದಾಗಿ ಹೇಳಿದೆ.

    ರವಿ ಬಸ್ರೂರು ನಿರ್ದೇಶನದ ಸಲಾಂ ರಾಖಿ ಭಾಯ್ ಹಾಡು ರಾಕಿಂಗ್ ಸ್ಟಾರ್ ಯಶ್

     ಅಭಿಮಾನಿಗಳಿಗಂತೂ ಥ್ರಿಲ್ ಕೊಟ್ಟಿದೆ. ಕೆಲವು ಕನ್ನಡ ಪರ ಸಂಘಟನೆಯವರು ಹಾಡಿನಲ್ಲಿ ಹಿಂದಿಯೇ ತುಂಬಿದೆ ಎಂಬ ಅಪಸ್ವರವನ್ನೂ ಎತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಅಬ್ಬರವಿದೆ. ಈ ಹಾಡಿನ ಅಬ್ಬರ ಜೋರಾಗಿರುವಾಗಲೇ 2ನೇ ಟ್ರೇಲರ್ ರಿಲೀಸ್ ಮಾಡುತ್ತಿದೆ ಚಿತ್ರತಂಡ.

    ನಿರ್ದೇಶಕ ಪ್ರಶಾಂತ್ ನೀಲ್ ಅಪ್ಪಟ ಕಸುಬುದಾರಿಕೆ ಹಾಗೂ ಹೊಂಬಾಳೆ ಬ್ಯಾನರ್‍ನ ಕಮಿಟ್‍ಮೆಂಟ್, ಚಿತ್ರದ ಪ್ರಚಾರದಲ್ಲಿ ಎದ್ದು ಕಾಣುತ್ತಿರುವುದು ವಿಶೇಷ.

  • ಸೈಮಾ ಅವಾರ್ಡ್ 2019 : ಇವರೇ ದಿ ಬೆಸ್ಟ್...

    kgf steals show at siima

    ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಕತಾರ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಾರೆಯರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ ನೋಡಿ. ಅತೀ ಹೆಚ್ಚು ಪ್ರಶಸ್ತಿ ಪಡೆದಿರುವುದು ಕೆಜಿಎಫ್. ಅಯೋಗ್ಯ 2ನೇ ಸ್ಥಾನದಲ್ಲಿದೆ.

    ಅತ್ಯುತ್ತಮ ನಾಯಕ ನಟ - ಯಶ್: ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ನಾಯಕ ನಟಿ - ರಚಿತಾ ರಾಮ್ : ಅಯೋಗ್ಯ

    ಅತ್ಯುತ್ತಮ ನಿರ್ದೇಶಕ - ಪ್ರಶಾಂತ್ ನೀಲ್ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಹೊಸ ನಿರ್ದೇಶಕ - ಮಹೇಶ್ ಕುಮಾರ್ : ಅಯೋಗ್ಯ

    ಅತ್ಯುತ್ತಮ ಹೊಸ ನಟ - ಡ್ಯಾನಿಷ್ ಸೇಠ್ : ಹಂಬಲ್ ಪೊಲಿಟಿಷಿಯನ್ ನೊಗ್ರಾಜ್

    ಅತ್ಯುತ್ತಮ ಹೊಸ ನಟಿ - ಅನುಪಮಾ ಗೌಡ : ಆ ಕರಾಳ ರಾತ್ರಿ

    ಅತ್ಯುತ್ತಮ ಹಾಸ್ಯ ನಟ - ಪ್ರಕಾಶ್ ತುಮಿನಾಡು : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ

    ಅತ್ಯುತ್ತಮ ಪೋಷಕ ನಟ - ಅಚ್ಯುತ್ ಕುಮಾರ್ 

    ಅತ್ಯುತ್ತಮ ಪೋಷಕ ನಟಿ - ಅರ್ಚನಾ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಖಳನಟ - ಧನಂಜಯ್ : ಟಗರು

    ವಿಮರ್ಶಕರ ಪ್ರಶಸ್ತಿ- ಮಾನ್ವಿತಾ ಹರೀಶ್ : ಟಗರು

    ಅತ್ಯುತ್ತಮ ಗೀತ ರಚನೆ - ಚೇತನ್ ಕುಮಾರ್ : ಅಯೋಗ್ಯ (ಏನಮ್ಮಿ.. ಏನಮ್ಮಿ..)

    ಅತ್ಯುತ್ತಮ ಗಾಯಕಿ - ಅನನ್ಯಾ ಭಟ್ : ಟಗರು (ಹೋಲ್ಡನ್ ಹೋಲ್ಡಾನ್..)

    ಅತ್ಯುತ್ತಮ ಛಾಯಾಗ್ರಹಣ - ಭುವನ್ ಗೌಡ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಸಂಗೀತ ನಿರ್ದೇಶನ - ರವಿ ಬಸ್ರೂರ್ : ಕೆಜಿಎಫ್ ಚಾಪ್ಟರ್ 1