` kgf, - chitraloka.com | Kannada Movie News, Reviews | Image

kgf,

 • Yash Next Film KGF - Exclusive

  mr & Mrs ramachari image

  After Masterpiece Yash will be acting in a film titled KGF. This film will be directed by Ugramm-fame director Prashanth Neel. The film will start after the completion of Masterpiece in which Yash is currently acting.

  The film is said to be inspired from the life of a real person but Neel is not revealing it now. The film is produced by Vijay Kirgandur who earlier produced Puneeth Rajkumar's Ninnindale and currently producing Masterpiece directed by Manju Mandavyya.

 • Yash's KGF Shooting Started Today

  yash's kgf

  The shooting for Yash's new film KGF, one of the most anticipated films in Sandalwood and said to be the highest budget film in the Kannada film industry, started today. The shooting started in Kolar Gold Fields on a huge set erected for the film. The set recreates KGF of the 1980s and is said to be the biggest one created for a Kannada film.

  The film team has kept the sets a secret and has not revealed its looks yet. Yash has grown a beard for his role in the film and has not acted in any other film for the last few months for this purpose. The film is directed by Prashant Neel who directed Ugramm earlier.

  It is produced by Hombale Films by producer Vijay Kiragandur. It reportedly has a budget of Rs 40 crore. 

  Related Articles :-

  KGF Sets In Badami

  Yash In KGF On Feb 1 or 10th

  KGF Team looking Heroine for Yash

  Silent Start to Costliest Kannada film KGF

  Yash Next Film KGF - Exclusive

 • ಅಬ್ಬಾ..! ಇತಿಹಾಸ ನಿರ್ಮಿಸುತ್ತಿದೆ ಕೆಜಿಎಫ್

  kgf breaks all records

  ಕೆಜಿಎಫ್... ಬಿಡುಗಡೆಗೆ ಮೊದಲೇ ಒಂದೊಂದೇ ಇತಿಹಾಸ ನಿರ್ಮಿಸುತ್ತಾ ಹೊರಟಿದೆ. ಬಿಡುಗಡೆಯಾಗುವುದು ಡಿಸೆಂಬರ್ ಕೊನೆಯ ವಾರದಲ್ಲಿ. ಟ್ರೇಲರ್ ರಿಲೀಸ್ ಆಗಿ ಒಂದು ವಾರವೂ ಆಗಿಲ್ಲ. ಕ್ರೇಝ್ ಮಾತ್ರ.. ಮೌಂಟ್ ಎವರೆಸ್ಟ್ ಎತ್ತರದಲ್ಲಿ ಬೆಳೆಯುತ್ತಿದೆ.

  ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಕನ್ನಡದಲ್ಲಿ ಟ್ರೇಲರ್ ನೋಡಿದವರಿಗಿಂತ, ಹಿಂದಿಯ ಟ್ರೇಲರ್ ನೋಡಿದವರ ಸಂಖ್ಯೆಯೇ ಹೆಚ್ಚು. ಕೆಜಿಎಫ್ ಟ್ರೇಲರ್ ನೋಡಿದವರು, ಕನ್ನಡದ ಬಗ್ಗೆ ಗೊತ್ತಿಲ್ಲದೇ ಇರುವವರು ಯಶ್ ಬಗ್ಗೆ ಹುಡುಕಾಡುವುದು ಹೆಚ್ಚಾಗಿದೆ. ಗೂಗಲ್ ಸರ್ಚ್‍ನಲ್ಲಿಯೂ ಯಶ್ ಟಾಪ್ 10ನಲ್ಲಿದ್ದಾರೆ. ಟ್ರೆಂಡಿಂಗ್‍ನಲ್ಲಿಯೂ ಕೆಜಿಎಫ್ ಟಾಪ್‍ನಲ್ಲಿದೆ.

  ಕೆಜಿಎಫ್ ಸೃಷ್ಟಿಸುತ್ತಿರುವ ಕ್ರೇಝ್ ನೋಡಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಖುಷಿಯಾಗಿದ್ದಾರೆ. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಎಲ್ಲರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

 • ಅಮೀರ್ ಖಾನ್‍ಗೆ ರಾಕಿಂಗ್ ಸ್ಟಾರ್ ಯಶ್ ಶಾಕ್

  yash's kgf rocks pan india

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕೇ ಶಾಕ್ ಕೊಟ್ಟಿದೆ. ಐಎಂಡಿಬಿಯಲ್ಲಿ ದೇಶದ ಬಹುನಿರೀಕ್ಷಿತ ಚಿತ್ರಗಳ ಲಿಸ್ಟ್‍ನಲ್ಲಿ ಯಶ್‍ರ ಕೆಜಿಎಫ್ 4ನೇ ಸ್ಥಾನದಲ್ಲಿದೆ. ಆನಂತರದ ಸ್ಥಾನ, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ್ದು.

  ನಂ.1 ಸ್ಥಾನದಲ್ಲಿ ರಜನಿ, ಅಕ್ಷಯ್ ಅಭಿನಯದ 2.0, 2ನೇ ಸ್ಥಾನದಲ್ಲಿ ವಿಜಯ್ ಅಭಿನಯದ ಸರ್ಕಾರ್, 3ನೇ ಸ್ಥಾನದಲ್ಲಿ ಶಾರುಕ್ ಅಭಿನಯದ ಝೀರೋ ಇದ್ದರೆ, 4ನೇ ಸ್ಥಾನದಲ್ಲಿರೋದು ಹೊಂಬಾಳೆ ಬ್ಯಾನರ್‍ನ ಕೆಜಿಎಫ್.

  ಡಿಸೆಂಬರ್‍ನಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ, ಕರ್ನಾಟಕ ಮಾತ್ರವಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಹವಾ ಸೃಷ್ಟಿಸುತ್ತಿದೆ.

 • ಎಡಿಟಿಂಗ್ ಟೇಬಲ್ ಮೇಲೆ ಕೆಜಿಎಫ್

  kgf post production work starts

  ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಹಾಗೆಂದು ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿಲ್ಲ. ಇನ್ನೂ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಹಾಡಿಗೆ ಎಲ್ಲ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಕೈ ಹಾಕಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ. ಅನಂತ್ ನಾಗ್, ಮಾಳವಿಕ ಸೇರಿದಂತೆ ಘಟಾನುಘಟಿಗಳ ತಂಡವೇ ಚಿತ್ರತಂಡದಲ್ಲಿದೆ. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಬರುತ್ತಿರುವ ಸಿನಿಮಾಗೆ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ನಿರ್ಮಾಪಕರು. 

 • ಕನ್ನಡಕ್ಕೆ ಬರ್ತಾರಾ ಮಗಧೀರನ ಚೆಲುವೆ..?

  will kajal agarwal act in kgf

  ಕೆಜಿಎಫ್ ಚಿತ್ರಕ್ಕೆ ಕಾಜಲ್ ಅಗರ್‍ವಾಲ್ ಬರ್ತಾರಾ..? ಸ್ಪೆಷಲ್ ಸಾಂಗ್‍ನಲ್ಲಿ ಕುಣಿದು ಕುಪ್ಪಳಿಸ್ತಾರಾ..? ಅಂಥಾದ್ದೊಂದು ಚರ್ಚೆ ಗಾಂಧಿನಗರದಲ್ಲಿ ಜೋರಾಗಿ ನಡೆಯುತ್ತಿದೆ. ಕೆಜಿಎಫ್ ಟೀಂ ಹೂಂ ಅಂತಿಲ್ಲ, ಊಹೂಂ ಅಂತಿಲ್ಲ. ಆಗಸ್ಟ್ 7ವರೆಗೆ ವೇಯ್ಟ್ ಮಾಡಿ ಅಂತಿದೆ. ಆ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಆ ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾದಂತೆ.

  ತಮನ್ನಾ ಭಾಟಿಯಾ, ಲಕ್ಷ್ಮೀ ರೈ ಹಾಗೂ ನೋರಾ ಫತೇಹಿ ಅವರನ್ನೂ ಕೂಡಾ ಸಂಪರ್ಕಿಸಿದೆಯಂತೆ. ಆದರೆ, ಯಶ್ ಜೊತೆ ಹೆಜ್ಜೆ ಹಾಕೋ ಆ ಚೆಲುವೆ ಯಾರು ಅನ್ನೋ ಸಸ್ಪೆನ್ಸ್‍ನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ.

  ಹೊಂಬಾಳೆ ಫಿಲಂಸ್‍ನ ಅದ್ದೂರಿ ಸಿನಿಮಾ, ಕನ್ನಡ ಚಿತ್ರರಂಗದಲ್ಲೇ ದುಬಾರಿ ವೆಚ್ಚದ ಚಿತ್ರವಾಗುತ್ತಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ, 5 ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ.

 • ಕರ್ನಾಟಕದ ಗಡಿ ದಾಟಲಿದೆ ಕೆಜಿಎಫ್ ಹವಾ

  kgf records to cross karnataka

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹವಾ ಕರ್ನಾಟಕದ ಗಡಿಯನ್ನೂ ದಾಟಿ ಹೋಗಲಿದೆ. ಕನ್ನಡದಲ್ಲಿ ತಯಾರಾಗುತ್ತಿರುವ ಚಿತ್ರದ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಅವತರಣಿಕೆಯೂ ಬಿಡುಗಡೆಯಾಗಲಿದೆ. ಒಟ್ಟು 5 ಭಾಷೆಗಳಲ್ಲಿ ಕೆಜಿಎಫ್ ತೆರೆ ಕಾಣಲಿದೆ.

  ಚಿತ್ರದ ಶೇ.50ರಷ್ಟು ಶೂಟಿಂಗ್ ಮುಗಿದಿದೆ. ಇನ್ನೂ ಚಿತ್ರದ ಮುಂದಿನ ಶೂಟಿಂಗ್ ಪ್ಲಾನ್, ಲಡಾಖ್, ಕೋಲ್ಕೊತ್ತಾ, ಮುಂಬೈಗಳಲ್ಲೆಲ್ಲ ಸಂಚರಿಸಬೇಕಿದೆ.

  ಚಿತ್ರದ ತಾರಾಬಳಗಕ್ಕೆ ರಾಜಾಹುಲಿಯ ವಿಲನ್ ವಸಿಷ್ಠ ಸಿಂಹ ಸೇರ್ಪಡೆಗೊಂಡಿದ್ದಾರೆ. ರಾಜಾಹುಲಿ ನಂತರ, ಯಶ್ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸುತ್ತಿರುವುದು ಇದೇ ಮೊದಲು. 4 ವರ್ಷಗಳ ನಂತರ ಹಿಟ್ ಹೀರೋ-ವಿಲನ್ ಜೋಡಿ ಕೆಜಿಎಫ್‍ನಲ್ಲಿ ಮತ್ತೆ ಘರ್ಜಿಸಲಿದೆ. ಅಲ್ಲದೆ 5 ಭಾಷೆಗಳಲ್ಲಿಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ರಮ್ಯಕೃಷ್ಣ, ನಾಸಿರ್ ಕೂಡಾ ಸೇರುವ ನಿರೀಕ್ಷೆಯಿದೆ.

  Related Articles :-

  ಕೆಜಿಎಫ್ 2ನೇ ಔಟ್‍ಲುಕ್ ಸೆನ್ಸೇಷನ್

 • ಕೆಜಿಎಫ್ 2ನೇ ಔಟ್‍ಲುಕ್ ಸೆನ್ಸೇಷನ್

  kgf new look

  ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನು ಬಂದ ಮೇಲೆ ನಂದೇ ಹವಾ.. ಇದು ಯಶ್ ಫೇಮಸ್ ಡೈಲಾಗ್. ಅದು ಕೆಜಿಎಫ್ ಚಿತ್ರದ 2ನೇ ಔಟ್‍ಲುಕ್‍ನಲ್ಲೂ ಋಜುವಾತಾಗಿದೆ. 

  ಕೆಜಿಎಫ್ ಚಿತ್ರದ 2ನೇ ಔಟ್‍ಲುಕ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಟ್ರೆಂಡ್ ಆಗಿಬಿಟ್ಟಿದೆ. ಚಿತ್ರದ ಪೋಸ್ಟರ್‍ನಲ್ಲಿ ಯಶ್ 70-80ನೇ ದಶಕದ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ, ಉದ್ದನೆಯ ಕೂದಲಿನ ಕಂಪ್ಲೀಟ್ ರಾ ಲುಕ್, ಅಭಿಮಾನಿಗಳಲ್ಲಿ ಕ್ರೇಜ್‍ನ್ನೇ ಸೃಷ್ಟಿಸಿದೆ. 

  ಚಿತ್ರದ ಕಥೆ ಏನಿರಬಹುದು..? ಎಂಬ ಬಗ್ಗೆ ಪ್ರೇಕ್ಷಕರ ತಲೆಗೆ ಹುಳ ಬಿಡುವುದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಕಾರ್ತಿಕ್ ಗೌಡ ನಿರ್ಮಾಣದ ಕೆಜಿಎಫ್, ಕನ್ನಡದ ದೊಡ್ಡ ಬಜೆಟ್ ಚಿತ್ರವಾಗುತ್ತಿದೆ.

  Related Articles :-

  Srinidhi Shetty To Join KGF

  First Look Of KGF Released

  First Look of KGF Today Evening

  Yash's KGF Shooting Started Today

  KGF Sets In Badami

  Yash In KGF On Feb 1 or 10th

  Silent Start to Costliest Kannada film KGF

  Yash Next Film KGF - Exclusive

 • ಕೆಜಿಎಫ್ ಆಡಿಯೋ ಲಹರಿಗೆ. ಸೇಲಾಗಿದ್ದು ಎಷ್ಟು ಕೋಟಿಗೆ..?

  lahari music gets kgf audio launch

  ಕನ್ನಡ ಚಿತ್ರರಂಗದ ಬಹುನಿರೀಕ್ಷಿತ, ಭಾರಿ ಬಜೆಟ್‍ನ ಸಿನಿಮಾ ಕೆಜಿಎಫ್. ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಪ್ರೊಡಕ್ಷನ್ಸ್ ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಈ ಬಿಗ್ ಸಿನಿಮಾದ ಆಡಿಯೋ ರೈಟ್ಸ್ ಮಾರಾಟವಾಗಿದೆ.

  ಕೆಜಿಎಫ್ ಆಡಿಯೋ ರೈಟ್ಸ್ ಖರೀದಿಸಿರುವುದು ಲಹರಿ ವೇಲು. ರವಿ ಬಸ್ರೂರು ಸಂಗೀತ ನಿರ್ದೇಶನದ ಹಾಡುಗಳು ಬೊಂಬಾಟ್ ಆಗಿವೆ ಅನ್ನೋದು ಚಿತ್ರತಂಡದ ಮೂಲಗಳ ಮಾಹಿತಿ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯ ಆಡಿಯೋ ರೈಟ್ಸ್‍ನ್ನು ಕೂಡಾ ಲಹರಿ ವೇಲು ಅವರೇ ಖರೀದಿಸಿದ್ದಾರೆ. ದೊಡ್ಡ ಮೊತ್ತಕ್ಕೆ ಅನ್ನೋದು ಪಕ್ಕಾ. ಆದರೆ, ಎಷ್ಟು ಕೋಟಿಗೆ ಅನ್ನೋದನ್ನು ಗುಟ್ಟಾಗಿಯೇ ಇಟ್ಟಿದೆ ಕೆಜಿಎಫ್ ಟೀಂ.

 • ಕೆಜಿಎಫ್ ಎಫೆಕ್ಟ್ : ಭುವನ್, ಶ್ರೀನಿಧಿ ಶೆಟ್ಟಿಗೆ ಎಂಥ ಡಿಮ್ಯಾಂಡು..?

  kgf effect, srinidhi shetty in demand

  ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದರೆ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿ ಸಂಭ್ರಮಿಸುತ್ತಿದೆ ಹೊಂಬಾಳೆ ಫಿಲಂಸ್. ನಿರ್ದೇಶಕ ಪ್ರಶಾಂತ್ ನೀಲ್‍ರ ಶ್ರಮ ಇಡೀ ಟ್ರೇಲರ್‍ನಲ್ಲಿ ಎದ್ದುಕಂಡಿದೆ. ಟ್ರೇಲರ್ ಹಿಟ್ ಆಗುತ್ತಿದ್ದಂತೆಯೇ ಎಲ್ಲರಿಗಿಂತ ಮೊದಲು ಡಿಮ್ಯಾಂಡ್ ಸೃಷ್ಟಿಯಾಗಿರುವುದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಛಾಯಾಗ್ರಾಹಕ ಭುವನ್‍ಗೆ.

  ಚಿನ್ನದ ಗಣಿಯ ದೂಳು, ಕಣ್ಣ ಭಾವನೆಯ ನೆರಳುಗಳನ್ನು ಹೃದಯ ಮುಟ್ಟುವಂತೆ ಚಿತ್ರೀಕರಿಸಿರುವ ಭುವನ್‍ಗೆ ಈಗ ಬಾಲಿವುಡ್ ಸೇರಿದಂತೆ ಪರಭಾಷೆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರಿಂದ ಕರೆ ಬರುತ್ತಿವೆ.

  ಅತ್ತ, ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕಿ ಶ್ರೀನಿಧಿ ಶೆಟ್ಟಿಗೂ ಬಾಲಿವುಡ್ ಬ್ಯಾನರ್‍ಗಳಿಂದ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಾದರೂ, ಅವಕಾಶಗಳ ಸುರಿಮಳೆಯಂತೂ ಆಗುತ್ತಿದೆ. 

  ಡಿಸೆಂಬರ್ 21ಕ್ಕೆ ತೆರೆಗೆ ಬರಲಿರುವ ಕೆಜಿಎಫ್‍ನ ಕ್ರೇಝ್ ನೋಡುತ್ತಿದ್ದರೆ, ಶಾರೂಕ್ ಖಾನ್‍ರ ಝೀರೋ ಶೇಕ್ ಆದರೂ ಅಚ್ಚರಿಯಿಲ್ಲ.

 • ಕೆಜಿಎಫ್ ಕಥೆ ಗೊತ್ತಾಗೋಯ್ತು..

  what is kgf storyline

  ಕೆಜಿಎಫ್ ರಿಲೀಸ್ ಡೇಟ್ ಪ್ರಕಟಿಸಿದ ಹೊತ್ತಲ್ಲೇ ಚಿತ್ರದ ಕಥೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ದುರಾಸೆಯ ದುಷ್ಟನೊಬ್ಬನ ಕೈಗೆ ಬಂಗಾರದ ಗಣಿ ಸಿಕ್ಕರೆ, ಒಂದು ವ್ಯವಸ್ಥೆಯಲ್ಲಿ ಆತ ಏನೆಲ್ಲ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. ಚಿತ್ರದಲ್ಲಿ ಅಂಡರ್‍ವಲ್ರ್ಡ್ ಲಿಂಕ್ ಇದೆ. ಚಿತ್ರದ ಹೀರೋ ಯಶ್, ತಾಯಿಯ ಸೂಚನೆಯಂತೆ ಅಂಡರ್‍ವಲ್ರ್ಡ್‍ಗೆ ಎಂಟ್ರಿ ಕೊಡುತ್ತಾನೆ. ಚಿನ್ನದ ಕಥೆಗೂ, ತಾಯಿಯ ಮಾತಿಗೂ ಏನ್ ಸಂಬಂಧ ಅನ್ನೋದು ಚಿತ್ರದಲ್ಲಿ ಗೊತ್ತಾಗಲಿದೆ. ಅಂಡರ್‍ವಲ್ರ್ಡ್ ಡಾನ್ ಸ್ಟೋರಿಯೇ ಚಿತ್ರದ ಕಥೆ.

  ಹೀಗೆ ಕಥೆಯ ಎಳೆಯನ್ನಷ್ಟೇ ಬಿಚ್ಚಿಟ್ಟಿರುವ ಪ್ರಶಾಂತ್ ನೀಲ್, ಇದಕ್ಕೂ ಕೋಲಾರದ ಚಿನ್ನದ ಗಣಿಗೂ ಸಂಬಂಧವಿಲ್ಲ. ಇದು ಯಾವುದೇ ಜಗತ್ತಿಗೂ, ಯಾವುದೇ ಊರಿಗೂ ಲಿಂಕ್ ಆಗಬಹುದಾದ ಕಥೆ. ನನ್ನ ಕಲ್ಪನೆಯ ಕಥೆ ಎಂದು ಹೇಳಿಕೊಳ್ತಾರೆ.

  ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಬರುತ್ತಿರುವ ಸಿನಿಮಾದ ಟ್ರೈಲರ್ ಅಕ್ಟೋಬರ್ 14ಕ್ಕೆ ರಿಲೀಸ್ ಆದ್ರೆ, ಸಿನಿಮಾ ನವೆಂಬರ್ 16ಕ್ಕೆ ರಿಲೀಸ್ ಆಗುತ್ತೆ. ನವೆಂಬರ್ 16ಕ್ಕೆ ಬರೋದು ಕೆಜಿಎಫ್ ಚಾಪ್ಟರ್ 1. ಚಾಪ್ಟರ್ 2, 2019ರ ಅಂತ್ಯಕ್ಕೆ ಬರಲಿದೆಯಂತೆ.

 • ಕೆಜಿಎಫ್ ಚಿತ್ರದಲ್ಲಿ ಅಂಥಾದ್ದೇನಿದೆ..?

  kgf highlights revealed by prashanth neel

  ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಕೆಜಿಎಫ್ ಚಿತ್ರ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸುಮಾರು ಒಂದು ವರ್ಷದಿಂದ ಕನ್ನಡಿಗರು ಎದುರು ನೋಡುತ್ತಿರುವ ಚಿತ್ರ. ಚಿತ್ರದ ಚಿತ್ರೀಕರಣ ಇನ್ನೂ ಶೇ.15ರಷ್ಟು ಬಾಕಿಯಿದೆ. ಇದುವರೆಗೆ ಹೊರಬಂದಿರೋದು ಎರಡು ಟೀಸರ್ ಮಾತ್ರ. ಅವು ಹುಟ್ಟಿಸಿರುವ ಕುತೂಹಲ ಸಣ್ಣದೇನಲ್ಲ. ಇಷ್ಟಕ್ಕೂ ಚಿತ್ರದಲ್ಲಿ ಅಂಥಾದ್ದೇನಿದೆ..? ಕಥೆ ಎಂಥಾದ್ದು..? ನಿರ್ದೇಶಕ ಉಗ್ರಂ ಪ್ರಶಾಂತ್ ನೀಲ್, ಒಂದಿಷ್ಟು ಹೇಳಿಕೊಂಡಿದ್ದಾರೆ.

  ಇದು 70ರಿಂದ 80ರ ದಶಕದಲ್ಲಿ ನಡೆಯುವ ಕಥೆ. ಅಂಡರ್‍ವಲ್ರ್ಡ್ ಛಾಯೆಯಿರುವುದು ಹೌದಾದರೂ, ಅದಕ್ಕೂ ಕೆಜೆಎಫ್‍ಗೂ ಸಂಬಂಧವಿಲ್ಲ. ಪಾತ್ರಗಳು ನನ್ನ ಕಲ್ಪನೆಯವೇ ಹೊರತು, ನಿಜವಾದ ವ್ಯಕ್ತಿಗೆ ಸಂಬಂಧಪಟ್ಟಿದ್ದಲ್ಲ. ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್, ತಾಯಿ-ಮಗನ ಸೆಂಟಿಮೆಂಟ್ ಎಲ್ಲವೂ ಇದೆ. ಉಗ್ರಂ ಚಿತ್ರಕ್ಕೂ, ಈ ಚಿತ್ರಕ್ಕೂ ಕೂದಲೆಳೆಯಷ್ಟೂ ಲಿಂಕ್ ಇಲ್ಲ. ಇದು ಕಥೆಯ ಬಗ್ಗೆ ಪ್ರಶಾಂತ್ ಹೇಳಿರುವ ಮಾತು.

  ಇನ್ನು ಚಿತ್ರ ರಿಲೀಸ್ ಆಗುವುದು ಏಪ್ರಿಲ್, ಮೇ ನಂತರಾನೇ ಎಂದಿದ್ದಾರೆ ಪ್ರಶಾಂತ್. ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿರೀಕ್ಷೆಯಂತೆಯೇ ಚಿತ್ರ ಮೂಡಿ ಬರುತ್ತಿದೆ. ಮೇಕಿಂಗ್ ಶೈಲಿ ಹಾಲಿವುಡ್ ಮಾದರಿಯಲ್ಲಿದೆ ಎಂದು ಖುಷಿಗೊಂಡಿದ್ದಾರೆ. 

  ಯಶ್ ಅವರಂತೂ ಇಡೀ ಚಿತ್ರವನ್ನು ತಮ್ಮದೇ ಹೋಮ್ ಬ್ಯಾನರ್ ಸಿನಿಮಾವೇನೋ ಎಂಬಷ್ಟು ಪ್ರೀತಿಸುತ್ತಿದ್ದಾರೆ. ತಾವೊಬ್ಬ ಸ್ಟಾರ್ ನಟ ಅನ್ನೋದನ್ನು ಪಕ್ಕಕ್ಕಿಟ್ಟು, ಚಿತ್ರದ ಚಿತ್ರೀಕರಣದಲ್ಲಿ ಇನ್‍ವಾಲ್ವ್ ಆಗುತ್ತಿದ್ದಾರೆ. ಅನಂತ್‍ನಾಗ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ,  ನಾಜರ್ ಕೂಡಾ ಅಷ್ಟೆ.. ಪ್ರತಿಯೊಬ್ಬರೂ ಸಿನಿಮಾವನ್ನು ನಮ್ಮ ಸಿನಿಮಾ ಎಂದೇ ಸಹಕಾರ ನೀಡುತ್ತಿದ್ದಾರೆ. ಒಂದು ಅದ್ಬುತ ಅನುಭವದ ಚಿತ್ರವಂತೂ ನಿಮ್ಮ ಮುಂದೆ ಬರಲಿದೆ ಎಂದು ಭರವಸೆ ನೀಡಿದ್ದಾರೆ ಪ್ರಶಾಂತ್.

 • ಕೆಜಿಎಫ್ ಟ್ರೇಲರ್ ಅಂಬರೀಷ್ರಿಂದ ರಿಲೀಸ್

  kgf trailer launched by ambareesh

  ರಾಕಿಂಗ್ ಸ್ಟಾರ್ ಯಶ್, ಹೊಂಬಾಳೆ ಪ್ರೊಡಕ್ಷನ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಿನದ ಕೆಜಿಎಫ್ ಸಿನಿಮಾ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಚಿತ್ರದ ಐದೂ ಭಾಷೆಯ ಟ್ರೇಲರ್ ರಿಲೀಸ್ ಮಾಡಿದ್ದಾರೆ. ನಾವು ನೀವು ಕಂಡಂತೆ ಯಾವುದೇ ಟ್ರೇಲರ್ ಆಗಲಿ, ಬಿಡುಗಡೆಗೆ ಬರೋದು ಕೆಲವೇ ಜನ. ಆದರೆ ಕೆಜಿಎಫ್ ಇಡೀ ಪ್ರಪಂಚವನ್ನೇ ಆವರಿಸಿಕೊಳ್ಳುತ್ತೆ. ಅದು ನನ್ನ ಆಸೆ ಎಂದರು ಅಂಬಿ. ಟ್ರೇಲರ್ ಬಹಳ ಕುತೂಹಲ ಸೃಷ್ಟಿಸಿದೆ. ಇಷ್ಟು ದೊಡ್ಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡೋಕೆ ಖುಷಿಯಾಗುತ್ತಿದೆ ಎಂದರು ಅಂಬಿ.

  ಹೊಂಬಾಳೆ ಪ್ರೊಡಕ್ಷನ್ನಿಂದ ಕನ್ನಡ-ಮಲಯಾಳಂ ಟ್ರೈಲರ್ ರಿಲೀಸ್ ಆದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್  ರಿಲೀಸ್ ಆಗಿದೆ. ವರಾಹಿ ಪ್ರೊಡಕ್ಷನ್ ತೆಲುಗು ಮತ್ತು ಹಿಂದಿ ಟ್ರೈಲರ್ ರಿಲೀಸ್ ಮಾಡಿದೆ. 

  ಐದು ಭಾಷೆಗಳ ಪತ್ರಕರ್ತರ ಸಮ್ಮುಖದಲ್ಲಿ ರಿಲೀಸ್ ಆದ ಕೆಜಿಎಪ್ ಚಿತ್ರದ ಟ್ರೇಲರ್, ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಟ್ರೆಂಡ್ ಆಗಿದ್ದು ವಿಶೇಷ.  ಕೆಜಿಎಫ್ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ.

 • ಕೆಜಿಎಫ್ ಟ್ರೇಲರ್‍ನ ಪವರ್‍ಫುಲ್ ಡೈಲಾಗ್ಸ್

  kgf dialogues goes viral

  ಕೆಜಿಎಫ್ ಚಿತ್ರದ ಮೇಕಿಂಗ್, ದೃಶ್ಯ ವೈಭವಕ್ಕೆ ಪೈಪೋಟಿ ನೀಡಿರುವ ಡೈಲಾಗುಗಳಂತೂ ಅದ್ಭುತ. ಟ್ರೇಲರ್‍ನಲ್ಲಿ ಖಡಕ್ ಅನ್ನಿಸೋದು ಎರಡೇ ಡೈಲಾಗು. ಉಳಿದಂತೆ ಭಾವನೆಗಳನ್ನು ಕೆರಳಿಸುವ, ಉದ್ದೀಪಿಸುವ ಮಾತುಗಳಿವೆ. ಟ್ರೇಲರ್ ಆರಂಭ : ಆ ರಾತ್ರಿ ಎರಡು ಘಟನೆ ನಡೀತು. ಆ ಜಾಗಾನೂ ಹುಟ್ತು. ಅವನೂ ಹುಟ್ಟಿದ..

  ಡೈಲಾಗ್ ನಂ. 1 - ಮುಂಬೈ ಏನು ನಿಮ್ಮಪ್ಪಂದಾ..?

  ಅಲ್ಲ ಕಣೋ.. ನಿಮ್ಮಪ್ಪಂದೇ.. ನಿಮ್ಮಪ್ಪ ನಾನೇ..

  ಡೈಲಾಗ್ ನಂ. 2 - ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ನೀನು ಬರೀ ಒಂದು ಯುದ್ಧ ಗೆಲ್ಲಬಹುದು.

  ಅದೇ ನೀನು ಮುಂದೆ ನಿಂತಿದ್ದೀಯ ಅನ್ನೋ ಧೈರ್ಯ ನಿನ್ನ ಹಿಂದೆ ಇರೋ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚನೇ ಗೆಲ್ಲಬಹುದು.

  ಡೈಲಾಗ್ ನಂ. 3 - ರೌಡಿ : ಏನೋ ಬೇಕು ನಿಂಗೆ..?  ಮಾಸ್ಟರ್ ಯಶ್ ಡೈಲಾಗ್ : ದುನಿಯಾ

  ಟ್ರೇಲರ್ ಇಂಟರ್ವಲ್ - ನೀನು ಒಂದು ಆನೆ ಹೊಡೀಬೇಕು ಅಂತಾ ಹೇಳ್ತಾನೆ ಡಾನ್. ಯಶ್ ಜರ್ನಿ ಶುರು. ಹೊರಟ.. ಅವನಿಗೆ ಹೋಗೋ ದಾರಿನೂ ಗೊತ್ತಿರ್ಲಿಲ್ಲ. ತಲುಪೋ ಜಾಗದ ಬಗ್ಗೆ ಗೊತ್ತಿರಲಿಲ್ಲ.  ಅಲ್ಲಿನ ಅಮಾನುಷತೆಯೂ ಗೊತ್ತಿರಲಿಲ್ಲ.

  ಹೀಗೆ ಶುರುವಾಗುವ ಟ್ರೇಲರ್‍ನಲ್ಲಿ ಸಣ್ಣ ಸಣ್ಣ ಸೌಂಡು ಕೂಡಾ ಎದ್ದು ಕಾಣುತ್ತೆ. ಕಿವಿಗೆ ನಾಟುತ್ತೆ. ಪ್ರಶಾಂತ್ ನೀಲ್ ಮತ್ತೊಮ್ಮೆ ಉಗ್ರಂ ನೆನಪಿಸುತ್ತಾರೆ.

 • ಕೆಜಿಎಫ್ ಡೈಲಾಗ್‍ದೇ ಹವಾ..

  kgf dialogue is hit

  ರಾಕಿಂಗ್ ಸ್ಟಾರ್ ಯಶ್ ಅಂದ್ರೆ, ಡೈಲಾಗ್‍ಗಳಿಗೆ ಬರವೇ ಇರೋದಿಲ್ಲ. ಇನ್ನು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಈ ಇಬ್ಬರ ಕಾಂಬಿನೇಷನ್ನಿನ ಕೆಜಿಎಫ್, ಭರ್ಜರಿ ನಿರೀಕ್ಷೆ ಹುಟ್ಟಿಸಿರುವಾಗಲೇ, ಯಶ್‍ರ ಆ ಡೈಲಾಗ್ ಹವಾ ಸೃಷ್ಟಿಸಿದೆ

  ರಕ್ತದ ವಾಸನೆ ಕಂಡ್ರೆ ಬೇಜಾನ್ ಮೀನುಗಳು ಒಟ್ಟಿಗೇ ಬಂದ್ ಬಿಡ್ತವೆ. ಆದರೆ, ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನು ಬೇಟೆಯಾಡೋ ತಿಮಿಂಗಿಲದ್ದು ಅಂತಾ.. ಇದು ಯಶ್ ಡೈಲಾಗ್.

  ಇದಕ್ಕೆ ಮುಂಚೆ ಇದೇ ಚಿತ್ರದ ಇನ್ನೊಂದು ಡೈಲಾಗ್‍ನ್ನು ಸ್ವತಃ ಯಶ್ ಬಹಿರಂಗಪಡಿಸಿದ್ರು. ಇನ್ಮೇಲಿಂದ ಅವರಪ್ಪ ನನ್ ಮಾವ, ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗ್ ನೋಡ್ಕಳ್ರೋ, ಚೆನ್ನಾಗ್ ನೋಡ್ಕಳಿ ಅನ್ನೋ ಡೈಲಾಗ್ ಬಹಿರಂಗವಾಗಿತ್ತು.

  ಈಗ 2ನೇ ಡೈಲಾಗ್ ಹೊರಬಿದ್ದಿದೆ. ಹೊಂಬಾಳೆ ಫಿಲ್ಸ್ಮ್ ನಿರ್ಮಿಸುತ್ತಿರುವ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕರು. 5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಚಿತ್ರದಲ್ಲಿರೋದು 80ರ ದಶಕದ ಕಥೆ. ಅಷ್ಟನ್ನು ಬಿಟ್ಟರೆ, ಬೇರ್ಯಾವುದೇ ಸೀಕ್ರೆಟ್ ಬಹಿರಂಗವಾಗಿಲ್ಲ.

 • ಕೆಜಿಎಫ್ ನಾಯಕಿ ಹೇಳಿದ ಸೀಕ್ರೆಟ್

  kgf heroine srinidhi

  ಹೊಂಬಾಳೆ ಬ್ಯಾನರ್‍ನಲ್ಲಿ ಸಿದ್ಧವಾಗುತ್ತಿರುವ ಕೆಜಿಎಫ್ ಚಿತ್ರದ ಕಥೆ ಏನು..? ಯಶ್ ಪಾತ್ರ ಏನು..? ಈ ಬಗ್ಗೆ ಚಿತ್ರತಂಡ ಅದೆಷ್ಟು ಗಮನ ಹರಿಸಿದೆಯೆಂದರೆ, ಒಂದೇ ಒಂದು ಗುಟ್ಟನ್ನೂ ಅದು ಹೊರಬಿಟ್ಟಿಲ್ಲ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಟೀಸರ್, ಕುತೂಹಲ ಹೆಚ್ಚಿಸಿದೆಯೇ ಹೊರತು, ಕಥೆಯ ಸುಳಿವನ್ನೂ ಹೇಳಿಲ್ಲ. 

  ಹೀಗೆ ಪ್ರಶಾಂತ್ ನೀಲ್ ಕಥೆಯ ಬಗ್ಗೆ ಗುಟ್ಟು ಕಾಪಾಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ನಾಯಕ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಯಶ್ ಬಗ್ಗೆ, ಸಿನಿಮಾ ಟೀಂ ಬಗ್ಗೆ ಖುಷಿ ಖುಷಿಯಾಗಿ ಹೇಳಿಕೊಂಡಿರುವ ಶ್ರೀನಿಧಿ, ನಿಮ್ಮ ರೋಲ್ ಏನು ಎಂದರೆ, ಅದನ್ನೆಲ್ಲ ಹೇಳಂಗಿಲ್ಲ. ನನ್ನ ಪಾತ್ರದ ವಿವರಣೆ ನೀಡಿದರೆ, ಕಥೆ ಗೊತ್ತಾಗಿಬಿಡುತ್ತೆ ಎನ್ನುತ್ತಾರೆ. ಸೀಕ್ರೆಟ್..ಸೀಕ್ರೆಟ್..ಸೀಕ್ರೆಟ್.

  ಕಾಲೇಜು ದಿನಗಳಿಂದ ಯಶ್ ಅವರ ಸಿನಿಮಾ ನೋಡುತ್ತಿದ್ದ ಶ್ರೀನಿಧಿಗೆ ಅವರಿಗೇ ಹೀರೋಯಿನ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಟನೆಯ ಗಾಳಿಗಂಧ ಗೊತ್ತಿಲ್ಲದ ಶ್ರೀನಿಧಿಗೆ ಸೆಟ್‍ನಲ್ಲಿ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದು ಸ್ವತಃ ಯಶ್. ಯಶ್ ಅವರಿಲ್ಲದೆ ಹೋಗಿದ್ದರೆ, ನಾನು ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ ಶ್ರೀನಿಧಿ.

  ಮಿಸ್ ಸುಪ್ರಾ ನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಶ್ರೀನಿಧಿ ಶೆಟ್ಟಿಗೆ ಆ್ಯಕ್ಟಿಂಗ್ ಕ್ಲಾಸ್‍ಗೆ ಹೋಗುವ ಆಸೆಯಿತ್ತು. ಆದರೆ, ಸಮಯವೇ ಸಿಗಲಿಲ್ಲ. ಈ ಸಿನಿಮಾ ಮುಗಿದ ಮೇಲೆ ಬಿಡುವು ಮಾಡಿಕೊಂಡು ಕಲಿಯುತ್ತೇನೆ ಎಂದಿದ್ದಾರೆ ಶ್ರೀನಿಧಿ.

   

 • ಕೆಜಿಎಫ್ ನಾಯಕಿಗೆ ಕಲರಿಪಯಟ್ಟು ಪ್ರಾಕ್ಟೀಸ್ ಏಕೆ..?

  kgf heroine srinishi shetty

  ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಿತ್ರದ ನಾಯಕಿ. ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್‍ನ ಈ ಸಿನಿಮಾ, ಸೃಷ್ಟಿಸಿರುವ ನಿರೀಕ್ಷೆ ಸಣ್ಣದಲ್ಲ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ಚಿತ್ರೀಕರಣದಲ್ಲಿರುವ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ, ಈಗ ಕಲರಿಪಯಟ್ಟು ಪ್ರಾಕ್ಟೀಸ್ ಮಾಡುತ್ತಿದ್ದಾರೆ.

  ಕಲರಿಪಯಟ್ಟು ಕೇರಳದ ಸಮರಕಲೆ. ಭಾರತೀಯ ಪ್ರಕಾರದ ಮಾರ್ಷಲ್ ಆಟ್ರ್ಸ್. ಮರ್ಮ ಕಲೈ ಅಂತಾನೂ ಕರೀತಾರೆ. ಈ ಸಮರಕಲೆಯನ್ನ ಶ್ರೀನಿಧಿ ಶೆಟ್ಟಿ ಇದ್ದಕ್ಕಿದ್ದಂತೆ ಪ್ರಾಕ್ಟೀಸ್ ಮಾಡ್ತಿರೋದು ಏಕೆ..? ಕೆಜಿಎಫ್ ಸಿನಿಮಾಗೂ ಕಲರಿಪಯಟ್ಟು ಕಲೆಗೂ ಏನು ಸಂಬಂಧ..? ಗೊತ್ತಿಲ್ಲ.

  ಶ್ರೀನಿಧಿ ಶೆಟ್ಟಿಯವರ ಕಲರಿಪಯಟ್ಟು ಪ್ರಾಕ್ಟೀಸ್ ಫೋಟೋ, ಕೆಜಿಎಫ್ ಕುರಿತು ಇನ್ನಷ್ಟು ಕುತೂಹಲ ಸೃಷ್ಟಿಸಿರುವುದಂತೂ ಸತ್ಯ.

 • ಕೆಜಿಎಫ್ ಪಾರ್ಟ್ 2 ಬರುತ್ತಾ..?

  kgf in two parts?

  ರಾಜಾಮೌಳಿಯ ಬಾಹುಬಲಿ ರಿಲೀಸ್‍ಗೂ ಮೊದಲೇ ಇದು ಸೀಕ್ವೆಲ್‍ಗಳಲ್ಲಿ ಬರಲಿದೆ ಎಂದು ಘೋಷಿಸಿಕೊಂಡಿತ್ತು. ರಾಮ್ ಗೋಪಾಲ್ ವರ್ಮಾನ ರಕ್ತಚರಿತ್ರೆ ಕೂಡಾ ಹಾಗೆಯೇ ಮೊದಲೇ ಘೋಷಿಸಿಕೊಂಡು ಬಂದಿದ್ದ ಸರಣಿ ಚಿತ್ರಗಳು. ಕನ್ನಡದಲ್ಲಿ ಆ ಟ್ರೆಂಡ್ ಹುಟ್ಟು ಹಾಕಿದ್ದು ಕೆಂಡ ಸಂಪಿಗೆ. ಆದರೆ, ಅದೇಕೋ ಏನೋ.. ಆ ಸರಣಿಯ 2ನೇ ಭಾಗ ತೆರೆಗೆ ಬಂದು ಹಿಟ್ ಆದರೂ, ಮೊದಲನೇ ಭಾಗ ಇನ್ನೂ ತೆರೆ ಕಂಡಿಲ್ಲ. ಹೀಗಿರುವಾಗಲೇ, ಕೆಜಿಎಫ್ ಅದೇ ರೀತಿ ಸೀಕ್ವೆಲ್‍ಗಳಲ್ಲಿ ಬರಲಿದೆ ಎಂಬ ಸುದ್ದಿ ಹರಿದಾಡೋಕೆ ಶುರುವಾಗಿದೆ.

  ಉಗ್ರಂ ಖ್ಯಾತಿಯ ಪ್ರಶಾಂತ್ ನೀಲು, ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಒಟ್ಟಿಗೇ ಸೇರಿದ್ದಾರೆ ಎಂಬ ಸುದ್ದಿ ಹೊರಬಿದ್ದ ದಿನದಿಂದಲೂ ಕೆಜಿಎಫ್ ನಿರೀಕ್ಷೆ ಹುಟ್ಟಿಸುತ್ತಲೇ ಇದೆ. ಆದರೆ, ಚಿತ್ರ ತಂಡ ಹೊರಗೆ ಮಾತನಾಡುವುದಿಲ್ಲ. ಇಂತಹ ಸುದ್ದಿಗಳಿಗೆ ಸದ್ಯಕ್ಕಂತೂ ಬರವಿಲ್ಲ. ಸದ್ಯಕ್ಕಂತೂ ಗಾಂಧಿನಗರದಲ್ಲಿ ಕೆಜಿಎಫ್ ಚಿತ್ರದ ಸೀಕ್ವೆಲ್ ಬರಲಿದೆ ಎಂಬ ಸುದ್ದಿ ಗಾಂಧಿ ನೋಟಿನಷ್ಟೇ ಸರಾಗವಾಗಿ ಓಡಾಡುತ್ತಿದೆ.

  ಚಿತ್ರದಲ್ಲಿ 1970ರ ದಶಕದ ಕಥೆಯಿದೆಯಂತೆ. ಚಿತ್ರದಲ್ಲಿ 500ಕ್ಕೂ ಹೆಚ್ಚು ಗಡ್ಡಧಾರಿಗಳಿದ್ದಾರಂತೆ. ಇಂತಹ ಸುದ್ದಿಗಳ ಮಧ್ಯೆ ಈಗ ಇನ್ನೊಂದು ಸುದ್ದಿ.. ಕೆಜಿಎಫ್ ಚಿತ್ರದ ಎರಡು ಭಾಗದಲ್ಲಿ ರಿಲೀಸ್ ಆಗಲಿದೆಯಂತೆ. ಸದ್ಯಕ್ಕಿದು ಅಂತೆ ಕಂತೆ ಸುದ್ದಿ ಮಾತ್ರ.

 • ಕೆಜಿಎಫ್ ಫ್ಲಾಪ್ ಎಂದವನಿಗೆ ಜಗ್ಗೇಶ್ ಕ್ಲಾಸ್

  jaggesh lashes out at kgf movie trollers

  ಕನ್ನಡದಲ್ಲಿ ಯಾರು ಏನೇ ಸಾಹಸ ಮಾಡಿದರೂ ಬೆನ್ನು ತಟ್ಟಿ ಪ್ರೋತ್ಸಾಹಿಸುವ, ಹುರಿದುಂಬಿಸುವವರಲ್ಲಿ ಜಗ್ಗೇಶ್ ಮೊದಲಿಗರಾಗಿರುತ್ತಾರೆ. ಆ ಸಾಹಸದಿಂದ ಕನ್ನಡಕ್ಕೆ ಒಳ್ಳೆಯದಾಗಲಿದೆ ಎಂದು ಗೊತ್ತಾದರೆ ಅಷ್ಟೇ ಸಾಕು. ಸಿನಿಮಾ ಯಾರದ್ದೇ ಇರಲಿ, ಜಗ್ಗೇಶ್ ಬೆಂಬಲ ಇದ್ದೇ ಇರುತ್ತೆ. ಈಗ ಕೆಜಿಎಫ್ ಜೋರು ಸದ್ದು ಮಾಡುತ್ತಿದೆ. ಇಡೀ ಭಾರತೀಯ ಚಿತ್ರರಂಗವೇ ಕೆಜಿಎಫ್‍ನತ್ತ ತಿರುಗಿ ನೋಡುತ್ತಿದೆ. ಹೀಗಿರುವಾಗಲೆ ಕೆಲವರು ಝೀರೋ ಎದುರು ಕೆಜಿಎಫ್ ಫ್ಲಾಪ್ ಆಗಲಿದೆ ಎಂದು ವಿಕೃತ ಸಂತೋಷ ಅನುಭವಿಸುತ್ತಿದ್ದಾರೆ. ಇದು ಜಗ್ಗೇಶ್‍ರನ್ನು ಕೆರಳಿಸಿದೆ. ಆದರೂ ತಾಳ್ಮೆಯಿಂದಲೇ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ``ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ, ಭುಜ ತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸಲಾಗದ ನಿಷ್ಪ್ರಯೋಜಕ. ನಮ್ಮ ಕಲಾಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ ಹೆಮ್ಮೆ ಪಡಿ. ಪರಭಾಷಿಕರಿಗೆ ಕನ್ನಡ ಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಜೈ ಎನ್ನಿ'' ಎಂದಿದ್ದಾರೆ ಜಗ್ಗೇಶ್. ಕೆಜಿಎಫ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ನವರಸನಾಯಕ ಜಗ್ಗೇಶ್.

  ಕೆಜಿಎಫ್ ಟ್ರೇಲರ್ ಇದೇ ದಿನ ರಿಲೀಸ್ ಆಗುತ್ತಿದ್ದು ಡಿಸೆಂಬರ್ 21ಕ್ಕೆ ಚಿತ್ರಮಂದಿರಕ್ಕೆ ನುಗ್ಗಲಿದೆ. ಅದೇ ದಿನ ಶಾರೂಕ್ ಖಾನ್ ಅಭಿನಯದ ಝೀರೋ ಚಿತ್ರವೂ ತೆರೆ ಕಾಣುತ್ತಿದೆ.

 • ಕೆಜಿಎಫ್ ಬೈಕ್ ಹಿಂದಿನ ರೋಚಕ ಕಥೆ

  story behind kgf's bike

  ಕೆಜಿಎಫ್, ಚಿತ್ರೀಕರಣ ಹಂತದಲ್ಲಿರುವಾಗಲೇ ಚಿತ್ರದ ಕುರಿತ ಒಂದೊಂದೇ ರೋಚಕ ಸಂಗತಿಗಳು ಕುತೂಹಲ ಹುಟ್ಟಿಸುತ್ತಿವೆ. ಅಂಥದ್ದೇ ಕುತೂಹಲ ಹುಟ್ಟಿಸಿದ್ದುದು ಚಿತ್ರದ ಪೋಸ್ಟರ್‍ನಲ್ಲಿ ಬಳಕೆಯಾಗಿದ್ದ ಬೈಕ್. ಏಕೆಂದರೆ, ವಾಸ್ತವದಲ್ಲಿ ಅಂಥಾದ್ದೊಂದು  ಮಾಡೆಲ್‍ನ ಬೈಕ್ ಇಲ್ಲ.

  ಹಾಗಾದರೆ, ಈ ಬೈಕ್ ಸಿದ್ಧ ಮಾಡಿದ್ದು ಯಾರು..? ಅದರ ಹಿಂದಿರೋದು ಸಿನಿಮಾದ ಕೊರಿಯೋಗ್ರಾಫರ್ ಭುವನ್ ಗೌಡ & ಅವರ ಟೀಂ. ಪ್ರಶಾಂತ್ ನೀಲ್ ಅವರಿಗೆ ಸಿನಿಮಾದಲ್ಲಿ ಹೀರೋಗೆ ಒಂದು ಡಿಫರೆಂಟಾದ ಬೈಕು ಬೇಕು ಎನಿಸಿತ್ತು. ಅದನ್ನು ಭುವನ್ ಗೌಡ ಅವರಿಗೆ ಹೇಳಿದರು. ಅಂಥಾದ್ದೊಂದು ಬೈಕ್ ಹುಡುಕಿಕೊಂಡು ಹೊರಟ ತಂಡ ರಾಯಲ್ ಎನ್‍ಫೀಲ್ಡ್‍ನ  ಟ್ರ್ಯಾಂಪ್ 500 ಸಿಸಿ ಬೈಕ್ ಖರೀದಿಸಿತು. ಅದನ್ನು ವಿದ್ಯಾಪೀಠ ಸರ್ಕಲ್ ಬಳಿ ಇರೋ ಬೇಗ್ ಅವರ ಗ್ಯಾರೇಜ್‍ಗೆ ಕೊಟ್ಟಿತು.

  ಅವರು ಕೇವಲ ಎಂಜಿನ್‍ನ್ನಷ್ಟೇ ಉಳಿಸಿಕೊಂಡು, ಮಿಕ್ಕಿದ್ದನ್ನೆಲ್ಲ ವಿಶೇಷವಾಗಿ ರೂಪಿಸಿಬಿಟ್ಟರು. ಜೊತೆಗೆ ನಿಂತವರು ಭುವನ್ ಗೌಡ, ಅವರ ಟೀಂನ ಆಕಾಶ್.

  ಈಗ ಕೆಜಿಎಫ್‍ನ ಈ ಬೈಕ್ ಅಪಾರ ಮೆಚ್ಚುಗೆ ಗಳಿಸುತ್ತಿದೆ. ಬೈಕ್‍ಗಳ ಕ್ರೇಜ್ ಹೊಂದಿರುವವರಂತೂ ಈಗಾಗಲೇ ಅದೇ ರೀತಿಯ ಬೈಕ್ ಡಿಸೈನ್ ಮಾಡಿಸುತ್ತಿದ್ದಾರೆ. ಶೂಟಿಂಗ್ ಮುಗಿಯುವ ಮೊದಲೇ ಕೆಜಿಎಫ್ ಕ್ರೇಜ್ ಶುರುವಾಗಿದೆ.

#

The Terrorist Movie Gallery

Thayige Thakka Maga Movie Gallery