` samyuktha hegde, - chitraloka.com | Kannada Movie News, Reviews | Image

samyuktha hegde,

 • ಭಲೇ ಅದೃಷ್ಟವೋ ಅದೃಷ್ಟ - ಪ್ರಭುದೇವಾಗೆ ಹೀರೋಯಿನ್ ಆದ ಸಂಯುಕ್ತಾ ಹೆಗಡೆ

  samyuktha hegde's dream comes true

  ಕಿರಿಕ್ ಪಾರ್ಟಿ ಚಿತ್ರದಲ್ಲಿನ ನೀನಿರೆ.. ಸನಿಹ ನೀನಿರೆ ಹಾಡು ಮತ್ತು ಡ್ಯಾನ್ಸ್. ಅದರಲ್ಲೂ ಎರಡೂ ಕಾಲುಗಳನ್ನು ಸ್ಕೇಲ್‍ನಂತೆ ಮಾಡುವ ಆ ಶೈಲಿ. ಆ ಮೂಲಕ ತಾನೊಬ್ಬ ಪಕ್ಕಾ ಡ್ಯಾನ್ಸರ್ ಎನ್ನುವುದನ್ನು ಸಾಬೀತು ಮಾಡಿದ ಸಂಯುಕ್ತಾ ಹೆಗಡೆಗೆ ಈಗ ಅದೃಷ್ಟ ಖುಲಾಯಿಸಿದೆ. ಸಂಯುಕ್ತಾ ಹೆಗಡೆ ಪ್ರಭುದೇವಾ ಅವರಿಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

  ಹಿಂದಿ, ತಮಿಳು, ತೆಲುಗಿನಲ್ಲಿ ಬರಲಿರುವ ಆ ಚಿತ್ರದಲ್ಲಿ ಸಂಯುಕ್ತಾ ಹೆಗಡೆ 25 ವರ್ಷದ ಡ್ಯಾನ್ಸರ್ ಪಾತ್ರ ಮಾಡುತ್ತಿದ್ದಾರೆ. ಕಾಮಿಡಿ ಲವ್ ಸ್ಟೋರಿಯಾಗಿರುವ ಚಿತ್ರದಲ್ಲಿ ಸಂಯುಕ್ತಾ ಹೆಗಡೆಗೆ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡುವ ಅವಕಾಶವೂ ಇದೆಯಂತೆ.

  ಸ್ವತಃ ಡ್ಯಾನ್ಸರ್ ಆಗಿರುವ ಸಂಯುಕ್ತಾಗೆ ಸಹಜವಾಗಿಯೇ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡಬಬೇಕು ಎನ್ನುವ ಹುಚ್ಚಿತ್ತು. ಚಿಕ್ಕಂದಿನಿಂದ ಬೆಳೆಸಿಕೊಂಡಿದ್ದ ಆ ಆಸೆ ಈಗ ಈಡೇರುತ್ತಿದೆ. ಡೇಟ್ ಸಮಸ್ಯೆಯಿಂದಾಗಿ ಹೆಚ್ಚೂ ಕಡಿಮೆ ಕೈತಪ್ಪಿತು ಎಂದುಕೊಂಡಿದ್ದ ಚಿತ್ರದಲ್ಲಿ ಮತ್ತೆ ಅವಕಾಶ ಸಿಕ್ಕಿದೆ. ಒಬ್ಬ ಡ್ಯಾನ್ಸರ್ ಆಗಿರುವ ನನಗೆ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡುವುದು ನಿಜಕ್ಕೂ ಥ್ರಿಲ್ ನೀಡಲಿದೆ ಎಂದಿದ್ದಾರೆ ಸಂಯುಕ್ತಾ.

 • ಸಂಯುಕ್ತಾ ಹೆಗಡೆ ಆತ್ಮವಿಶ್ವಾಸ ನೋಡಿದಿರಾ..?

  samyuktha hegde's confisence

  ಸಂಯುಕ್ತಾ ಹೆಗಡೆ. ಕಿರಿಕ್ ಪಾರ್ಟಿ, ಕಾಲೇಜ್ ಕುಮಾರ ಚಿತ್ರಗಳ ಮೂಲಕ ಕನ್ನಡಿಗರಿಗೆ ಪರಿಚಿತರಾದ ಈ ಚೆಲುವೆ, ಇತ್ತೀಚೆಗೆ ವಿವಾದಗಳಿಂದಲೇ ಸದ್ದು ಮಾಡಿದ್ದು ಜಾಸ್ತಿ. ಅದರಲ್ಲೂ ಬಿಗ್‍ಬಾಸ್ ಮನೆಯ ಕಪಾಳಮೋಕ್ಷ ಪ್ರಕರಣವಂತೂ ಪರಾಕಾಷ್ಟೆಗೆ ತಲುಪಿತ್ತು. ಕಾಲೇಜ್ ಕುಮಾರ ಚಿತ್ರತಂಡವೂ ಸಂಯುಕ್ತಾ ಹೆಗಡೆ ಕುರಿತು ಒಳ್ಳೆಯ ಮಾತುಗಳನ್ನೇನೂ ಹೇಳಲಿಲ್ಲ. 

  ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಸಂಯುಕ್ತಾ, ನಂತರ ಸುದೀಪ್ ಸೇರಿದಂತೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರೂ ಅವರ ವಿರುದ್ಧದ ಆಕ್ರೋಶ ಕಡಿಮೆಯೇನೂ ಆಗಲಿಲ್ಲ. ಆದರೆ, ಇದೆಲ್ಲದರಿಂದ ಮಾನಸಿಕವಾಗಿ ಇನ್ನಷ್ಟು ಗಟ್ಟಿಯಾದಂತೆ ಕಾಣುತ್ತಿರುವ ಸಂಯುಕ್ತಾ ಹೆಗಡೆ, ಆತ್ಮವಿಶ್ವಾಸದ ಮಾತು ಹೇಳಿದ್ದಾರೆ.

  `ನೀವು ನನ್ನನ್ನು ತುಳಿದರೆ.. ನಾನು ಕೈಗಳಿಂದಲೇ ನಡೆಯುತ್ತೇನೆ. ನೀವು ನನ್ನನ್ನು ಸುಟ್ಟು ಬೂದಿ ಮಾಡಿದರೆ, ಆ ಬೂದಿಯಿಂದಲೇ ನಾನು ಹುಟ್ಟಿ ಬರುತ್ತೇನೆ' ಯಾವುದೋ ಇಂಗ್ಲಿಷ್ ಕಾದಂಬರಿಯ ಸಾಲುಗಳಂತೆ ಕಂಡರೂ, ಈ ಮಾತಿನಲ್ಲಿರುವ ಆತ್ಮವಿಶ್ವಾಸ ಮಾತ್ರ ಮೆಚ್ಚುವಂಥದ್ದು. ಹೊಸ ವರ್ಷಕ್ಕೆ ಆತ್ಮವಿಶ್ವಾಸದ ಹೆಜ್ಜೆಯಿಟ್ಟಿದ್ದಾರೆ ಸಂಯುಕ್ತಾ.

 • ಸಂಯುಕ್ತಾ ಹೆಗಡೆ ಗಂಟಲು ಭಲೇ ಜೋರು..!

  samyuktha is welcomed in tollywood

  ಸಂಯುಕ್ತಾ ಹೆಗಡೆ, ಕಿರಿಕ್ ಪಾರ್ಟಿಯ ಆರ್ಯ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ, ಭಲೇ ಘಾಟಿ ಹುಡುಗಿ. ಅದನ್ನವರು ತೆಲುಗಿನಲ್ಲೂ ಪ್ರೂವ್ ಮಾಡಿಬಿಟ್ಟಿದ್ದಾರೆ. ಸಂಯುಕ್ತಾ ಹೆಗಡೆ ಗಂಟಲು ಜೋರು ಎಂದು ಬಿರುದು ಕೊಟ್ಟಿರುವುದು ನಿಖಿಲ್ ಸಿದ್ಧಾರ್ಥ. ಅಂದಹಾಗೆ ನಿಖಿಲ್ ಸಿದ್ಧಾರ್ಥ, ತೆಲುಗು ಕಿರಿಕ್ ಪಾರ್ಟಿ ಚಿತ್ರದ ಹೀರೋ.

  ಉತ್ಸಾಹಭರಿತ, ಬಂಡಲ್ ಆಫ್ ಎನರ್ಜಿ ಇರುವ ದೊಡ್ಡ ಧ್ವನಿಯಿರುವ ಸಂಯುಕ್ತಾ ಹೆಗಡೆ ಅವರಿಗೆ ಟಾಲಿವುಡ್​ಗೆ ಸುಸ್ವಾಗತ. ಆಕೆಗೆ ತೆಲುಗರ ಪ್ರೀತಿ ದಕ್ಕಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ ನಿಖಿಲ್. ಏನೇ ಆಗಲಿ  ಸಂಯುಕ್ತಾ ಗಂಟಲು ಭಲೇ ಜೋರು ಎನ್ನುವುದು ಮಾತ್ರ ಸದ್ದು ಮಾಡ್ತಾ ಇದೆ.

 • ಸಂಯುಕ್ತಾ ಹೆಗ್ಡೆ ಅಷ್ಟೊಂದು ಕಿರಿಕ್ ಪಾರ್ಟಿನಾ..?

  samyuktha in college kumar

  ನಟಿ ಸಂಯುಕ್ತಾ ಹೆಗ್ಡೆ ನಟಿಸಿರುವ ಎರಡನೇ ಚಿತ್ರ ಕಾಲೇಜ್ ಕುಮಾರ. ಕಿರಿಕ್ ಪಾರ್ಟಿಯಿಂದ ಬೆಳಕಿಗೆ ಬಂದ ಸಂಯುಕ್ತಾ, ಚಿತ್ರಗಳಿಗಿಂತ ಹೆಚ್ಚಾಗಿ ಕಿರಿಕ್ಕುಗಳಿಂದಲೇ ಸುದ್ದಿಯಾದವರು. ಈ ಬಾರಿಯೂ ಅಷ್ಟೆ, ನಿರ್ಮಾಪಕ ಪದ್ಮನಾಭ್ ಸಂಯುಕ್ತಾ ವಿರುದ್ಧ ಕಿಡಿ ಕಾರಿದ್ದಾರೆ. ಅದು ಅಷ್ಟಕ್ಕೇ ನಿಂತಿಲ್ಲ, ಇಂತಹ ನಟಿಯನ್ನು ನಿಮ್ಮ ಚಿತ್ರಕ್ಕೆ ಹಾಕಿಕೊಳ್ಳಬೇಡಿ ಎಂದು ಸಹ ನಿರ್ಮಾಪಕರಿಗೆ ಕರೆಯನ್ನೂ ಕೊಟ್ಟಿದ್ದಾರೆ. 

  ನಿರ್ಮಾಪಕ ಪದ್ಮನಾಭ್ ಅವರ ಆಕ್ರೋಶಕ್ಕೆ ಕಾರಣ ಇಷ್ಟೆ, ಚಿತ್ರ ರಿಲೀಸ್ ಮಾಡುವಾಗ, ಚಿತ್ರದಲ್ಲಿ ಭಾಗವಹಿಸಿದ್ದ ಕಲಾವಿದರು ಆ ಚಿತ್ರದ ಪ್ರಚಾರದಲ್ಲಿ ಭಾಗವಹಿಸುವುದು ಸಾಮಾನ್ಯ. ಅದು ಅವರ ಕರ್ತವ್ಯವೂ ಕೂಡಾ. ಆದರೆ, ಸಂಯುಕ್ತಾ ಚಿತ್ರದ ಪ್ರಚಾರಕ್ಕೆ ಬರಲೇ ಇಲ್ಲ. ಇಲ್ಲದ ನೆಪ ಹೇಳಿ ಪ್ರಚಾರದಿಂದ ದೂರವೇ ಉಳಿದರು ಎನ್ನುವುದು ನಿರ್ಮಾಪಕ ಪದ್ಮನಾಭ್ ದೂರು.

  ಸಂಯುಕ್ತಾ ವಿರುದ್ಧ ಪದ್ಮನಾಭ್ ಅವರಷ್ಟೇ ಅಲ್ಲ, ಶೃತಿ ಸೇರಿದಂತೆ ಚಿತ್ರತಂಡದ ಎಲ್ಲರೂ ಬೇಸರ ಮಾಡಿಕೊಂಡಿದ್ದಾರೆ. ಆದರೆ, ಸಂಯುಕ್ತಾ ಹೆಗ್ಡೆ ಅವರು ಹೇಳೊದೇ ಬೇರೆ. ನಾನು ಬೇರೆ ಚಿತ್ರದ ಶೂಟಿಂಗ್‍ನಲ್ಲಿದ್ದೆ. ಅದನ್ನು ಚಿತ್ರ ನಿರ್ಮಾಪಕರಿಗೆ ತಿಳಿಸಿಯೂ ಇದ್ದೆ ಎನ್ನುತ್ತಾರೆ. ಇನ್ನೊಮ್ಮೆ ಆರೋಗ್ಯ ಸರಿಯಿರಲಿಲ್ಲ ಎನ್ನುತ್ತಾರೆ. 

  ಆದರೆ, ನಟಿ ಹಾಗು ನಿರ್ಮಾಪಕರ ಮನಸ್ಸು ಎಷ್ಟರಮಟ್ಟಗೆ ಮುರಿದುಬಿದ್ದಿದೆಯೆಂದರೆ, ಪರಸ್ಪರ ಮಾತನಾಡಲೂ ಆಗದಷ್ಟು ದೂರವಾಗಿ ಹೋಗಿದ್ದಾರೆ.

  Related Articles :-

  Padmanabh Upset Over Samyukta Hegde

   

 • ಸಂಯುಕ್ತಾ ಹೆಗ್ಡೆ ಕನ್ನಡದ ಸನ್ನಿ ಲಿಯೋನ್ ಅಂತೆ..!

  director keerthan shetty calls samyuktha hegde kannada sunny leone

  ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗ್ಡೆಗೂ, ನೀಲಿ ತಾರೆ ಸನ್ನಿಲಿಯೋನ್‍ಗೂ ಎಲ್ಲಿಂದೆಲ್ಲಿಯ ಹೋಲಿಕೆ..? ಆದರೆ,ಅಂಥಾದ್ದೊಂದು ಹೋಲಿಕೆ ಮಾಡಿದ್ದಾರೆ ನಿರ್ದೇಶಕ ಕೀರ್ತನ್ ಶೆಟ್ಟಿ. ಇಷ್ಟಕ್ಕೂ ಈತ ಯಾರೆಂದು ಹುಡುಕಿದರೆ ಅಲ್ಲೊಂದು ಮೀಟೂ ಕಥೆ ತೆರೆದುಕೊಳ್ಳುತ್ತೆ.

  ಈ ಕೀರ್ತನ್ ಶೆಟ್ಟಿ ಮೀಟೂ ಹೆಸರಿನಲ್ಲೊಂದು ಚಿತ್ರ ಮಾಡೋಕೆ ಹೊರಟಿದ್ದಾರೆ. ಆ ಚಿತ್ರಕ್ಕೆ ತೆಲುಗು ಚಿತ್ರರಂಗದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟಿಸಿದ್ದ, ಚಿತ್ರರಂಗದ ದೊಡ್ಡ ದೊಡ್ಡ ನಟರ ವಿರುದ್ಧ ಆರೋಪ ಮಾಡಿದ್ದ ಶ್ರೀರೆಡ್ಡಿ ಎಂಬ ಹುಡುಗಿ ನಾಯಕಿ. ಆ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಅವರ ಬಗ್ಗೆಯೂ ಒಂದು ಪಾತ್ರ ಬರಲಿದೆ.

  ಸಂಯುಕ್ತ ಹೆಗ್ಡೆ ಕನ್ನಡದ ನೀಲಿತಾರೆ. ಹಿಂದಿಯಲ್ಲಿ ಸನ್ನಿಲಿಯೋನ್ ಹೆಂಗೋ ಹಂತೆ ಕರ್ನಾಟಕದಲ್ಲಿ ಸಂಯುಕ್ತಾ ಹೆಗ್ಡೆ. ಗಂಡು ಬೀರಿ ಸಂಯುಕ್ತ ಎಂದೆಲ್ಲ ಬರೆದುಕೊಂಡಿದ್ದಾರೆ ಕೀರ್ತನ್ ಶೆಟ್ಟಿ. 

  ಯಾವಾಗ ಈ ಹೇಳಿಕೆಗೆ ಜನ ಸಾಮಾನ್ಯರಿಂದಲೇ ವಿರೋಧ ವ್ಯಕ್ತವಾಯಿತೋ.. ಇದು ಪೊಲೀಸರೇ ಸ್ವಯಂ ಕೇಸು ಹಾಕಬಹುದು ಎಂಬ ಅರಿವಾಯಿತೋ.. ತಕ್ಷಣ ತಮ್ಮ ಮೆಸೇಜ್ ಡೀಲಿಟ್ ಮಾಡಿದ್ದಾರೆ ಕೀರ್ತನ್ ಶೆಟ್ಟಿ.

 • ಸನ್ನಿ ಲಿಯೋನ್ ನಿರೂಪಣೆ ಶೋನಲ್ಲಿ ಕಿರಿಕ್ ಸಂಯುಕ್ತಾ..!

  kirik samyuktha enters mtv splitsvilla

  ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಸಂಯುಕ್ತಾ ಹೆಗಡೆ, ಆನಂತರ ಕಿರಿಕ್ಕುಗಳಿಂದಲೇ ಸುದ್ದಿ, ಸದ್ದು ಮಾಡಿದ ನಟಿ. ಕನ್ನಡದ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸಿದ್ದ ಸಂಯುಕ್ತಾ, ಅಲ್ಲಿಯೂ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದರು. ನಂತರ, ಎಂಟಿವಿಯ ರೊಡೀಸ್ ರಿಯಾಲಿಟಿ ಶೋನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಿಂಚಿದ್ದರು. ಈಗ.. ಹಿಂದಿಯ `ಸ್ಪ್ಲಿಟ್ ವಿಲ್ಲಾ' ರಿಯಾಲಿಟಿ ಶೋಗೆ ಹೋಗುತ್ತಿದ್ದಾರೆ.

  ಸ್ಪ್ಲಿಟ್ ವಿಲ್ಲಾ ಅನ್ನೋದು ಡೇಟಿಂಗ್ ಮತ್ತು ಫ್ರೆಂಡ್‍ಶಿಪ್‍ನ್ನು ಇಟ್ಟುಕೊಂಡಿರುವ ರಿಯಾಲಿಟಿ ಶೋ. ಈ ಶೋಗೆ ಸಂಯುಕ್ತಾ ಹೆಗಡೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಶೋನ ನಿರೂಪಕರು ಸನ್ನಿ ಲಿಯೋನ್ ಮತ್ತು ರಣ್ ವಿಜಯ್.

#

Adi Lakshmi Purana Movie Gallery

Rightbanner02_butterfly_inside

Yaana Movie Gallery