ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೇಲರ್‍ನಲ್ಲಿ ಒಂದು ಚೆಂದದ ಡೈಲಾಗ್ ಇದೆ. ವಿದೇಶಿ ಹುಡುಗಿಯೊಬ್ಬಳು ರಾಜುವನ್ನು ನೀನು ಮಾತನಾಡುವ ಭಾಷೆ ಯಾವುದು ಎಂದು ಕೇಳ್ತಾಳೆ. ಆಗ ರಾಜು ಕನ್ನಡ ಎಂದು ಉತ್ತರ ಕೊಡ್ತಾನೆ. ನಾನೂ ಕನ್ನಡ ಕಲಿಯಬೇಕು ಎಂದಾಗ ನಮ್ಮ ಬೆಂಗಳೂರಿಗೆ ಪಕ್ಕದ ರಾಜ್ಯದಿಂದ ಬಂದಿರೋವ್ರಿಗೂ ನಿನ್ನ ಥರಾ ಭಾವನೆ ಬಂದುಬಿಟ್ಟಿದ್ದರೆ, ನಮ್ಮ ಕನ್ನಡ ನವೆಂಬರ್ ಕನ್ನಡ ಆಗ್ತಾ ಇರಲಿಲ್ಲ. ನಂಬರ್ ಒನ್ ಕನ್ನಡ ಆಗ್ತಿತ್ತು ಅಂತಾನೆ.
ಅಂದಹಾಗೆ ಆ ಡೈಲಾಗ್ ಹೇಳುವ ಚೆಲುವೆಯ ಹೆಸರು ಏಂಜಲೀನಾ. ರಷ್ಯನ್ ಚೆಲುವೆ. ಚಿತ್ರದ 3ನೇ ನಾಯಕಿ. ಚಿತ್ರದಲ್ಲಿ ಆವಂತಿಕಾ ಶೆಟ್ಟಿ ಹಾಗೂ ಆಶಿಕಾ ರಂಗನಾಥ್ ಕೂಡಾ ನಾಯಕಿಯರು. ಇವರೆಲ್ಲರ ಜೊತೆ ಕನ್ನಡಿಗರ ಕಿಚ್ಚ ಸುದೀಪ್ ಕೂಡಾ ಇದ್ದಾರೆ.
ಇದೇ 19ಕ್ಕೆ ಬಿಡುಗಡೆಯಾಗುತ್ತಿರುವ ರಾಜು ಕನ್ನಡ ಮೀಡಿಯಂ, ತನ್ನ ವಿಭಿನ್ನ ಟ್ರೇಲರ್, ಸುದೀಪ್ ಆಗಮನ, ಅದ್ದೂರಿ ನಿರ್ಮಾಣದ ಮೂಲಕ ಗಮನ ಸೆಳೆಯುತ್ತಿದೆ.