ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಸೆಟ್‍ನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು, ಯುಪಿಎಸ್‍ಸಿ ರ್ಯಾಂಕ್ ಸ್ಟೂಡೆಂಟ್‍ಗಳ ಫಾರ್ಮುಲಾ ಅಳವಡಿಸಿಕೊಳ್ಳಲಾಗ್ತಿದೆ. ಇಷ್ಟಕ್ಕೂ ಏನದು ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ ಅಂದ್ಕೊಂಡ್ರಾ..?
ನೀವೇ ನೋಡಿ.. ಇತ್ತೀಚೆಗೆ ಹಾಗೆ ರ್ಯಾಂಕ್ ಬಂದ ವಿದ್ಯಾರ್ಥಿಗಳೆಲ್ಲ ಹೇಳಿರೋದು ಬಹುತೇಕ ಒಂದೇ ವಿಷಯ. ಅವರು ಫೋನ್, ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಿಂದ ದೂರವಿದ್ದು ಓದಿದವರು. ಹಲವರ ಈ ಯಶಸ್ಸಿನ ಗುಟ್ಟನ್ನೇ ತನ್ನ ಸೆಟ್ಟಲ್ಲಿ ಅಳವಡಿಸಿಕೊಳ್ಳೋಕೆ ಮುಂದಾಗಿದ್ದಾರೆ ನಿರ್ದೇಶಕ ತರುಣ್ ಸುಧೀರ್.
ಅವರ ಈ ನಿರ್ಧಾರಕ್ಕೆ ಕಾರಣ ಇಷ್ಟೆ, ಸಿನಿಮಾ ಚೆನ್ನಾಗಿ ಬರಬೇಕು, ಕೆಲಸಗಳು ಬೇಗ ಬೇಗ ಸರಾಗವಾಗಿ ಆಗಬೇಕು, ಮಧ್ಯೆ ಮಧ್ಯೆ ಡೈವರ್ಷನ್‍ಗಳು ಇರಬಾರದು. ಇದ್ಯಾವುದೂ ಆಗಬಾರದು ಎಂದರೆ, ಸೆಟ್ಟಿನಲ್ಲಿದ್ದವರ ಬಳಿ ಮೊಬೈಲ್ ಇರಬಾರದು. ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ಚಿತ್ರದ ಶೂಟಿಂಗ್ ಸ್ಥಳದ ಫೋಟೋ, ವಿಡಿಯೋ ಲೀಕ್ ಆಗುವುದನ್ನೂ ತಪ್ಪಿಸಬಹುದು. ಹೀಗೆ ಹಲವು ಲೆಕ್ಕಾಚಾರ ಹಾಕಿಕೊಂಡೇ ನಿರ್ಧಾರಕ್ಕೆ ಬಂದಿದ್ದಾರೆ ತರುಣ್. ನಿರ್ದೇಶಕರೇ ಸಮಯದ ಉಳಿತಾಯಕ್ಕೆ, ಕೆಲಸದ ವೇಗಕ್ಕೆ ಇಷ್ಟೊಂದು ಮುತುವರ್ಜಿ ವಹಿಸುತ್ತಿರುವಾಗ ನಿರ್ಮಾಪಕರು ಖುಷಿಯಾಗದೇ ಇರ್ತಾರಾ..? ಪ್ರೊಡ್ಯೂಸರ್ ಉಮಾಪತಿ ಫುಲ್ ಹ್ಯಾಪಿ.