` arjun sarja - chitraloka.com | Kannada Movie News, Reviews | Image

arjun sarja

  • ಶೃತಿ ಬೆಂಬಲಕ್ಕೆ ಪ್ರಕಾಶ್ ರೈ

    prakash raj stands by sruthi hariharan

    ಶೃತಿ ಹರಿಹರನ್ ಬೆಂಬಲಕ್ಕೆ ನಟ ಪ್ರಕಾಶ್ ರೈ ನಿಂತಿದ್ದಾರೆ. ಶೃತಿ ಹರಿಹರನ್ ಅವರ ನೋವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅರ್ಜುನ್ ಸರ್ಜಾ ದೊಡ್ಡತನ ಮೆರೆದು ಕ್ಷಮೆ ಕೇಳುವುದು ಒಳ್ಳೆಯದು. ಅದು ದೊಡ್ಡತನದ ಲಕ್ಷಣ ಎಂದಿದ್ದಾರೆ ಪ್ರಕಾಶ್ ರೈ.

    ಶೃತಿ ಹರಿಹರನ್ ವಿಚಾರ ಕುರಿತಂತೆ ಪ್ರಕಾಶ್ ರೈ, ಅರಿತೋ ಅರಿಯದೆಯೋ.. ನಾವು ಗಂಡಸರು ಹೆಣ್ಣು ಮಕ್ಕಳ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆ ಕಳೆದುಕೊಂಡಿದ್ದೇವೆ. ಈ ಮೀಟೂ ಅಭಿಯಾನ ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅವಮಾನ.. ದೌರ್ಜನ್ಯಗಳಿಗೆ ಅಂತ್ಯ ಹಾಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ ಪ್ರಕಾಶ್ ರೈ.

  • ಶೃತಿ ಮೀಟೂ ಏಟಿಗೆ ಐಶ್ವರ್ಯಾ ಸರ್ಜಾ ತಿರುಗೇಟು

    aishwarya sarja questions sruthi hariharan

    ಅರ್ಜುನ್ ಸರ್ಜಾ ಕಿರುಕುಳ ನೀಡಿದ್ದ ಎಂಬ ಶೃತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ತಿರುಗೇಟು ಕೊಟ್ಟಿದ್ದಾರೆ. ನನ್ನ ತಂದೆ ಏನೆಂದು ನನಗೆ ಗೊತ್ತಿದೆ. ಅವರು ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಾರೆ ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಐಶ್ವರ್ಯ. 

    ಹೀಗೆ ಹೇಳುವ ಐಶ್ವರ್ಯ ಶೃತಿಗೆ ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ಘಟನೆ ಆದ ದಿನ ಶೃತಿ ಮಾತನಾಡಿಲ್ಲ. ಪ್ರತಿಭಟಿಸಿಯೂ ಇಲ್ಲ. ದೂರನ್ನೂ ಕೊಟ್ಟಿಲ್ಲ. ಅಲ್ಲದೆ ಚಿತ್ರದ ಪ್ರೀಮಿಯರ್ ಶೋನಲ್ಲಿ ನನಗೆ ಸಿಕ್ಕಾಗ ಶೃತಿ ಐಶ್ವರ್ಯ ಬಳಿ ``ನಿಮ್ಮ ತಂದೆ ಲೆಜೆಂಡ್. ಸೂಪರ್ ಸ್ಟಾರ್. ಅವರ ಜೊತೆ ಇನ್ನೂ ಹೆಚ್ಚು ಸಿನಿಮಾ ಮಾಡಬೇಕು'' ಎಂದು ಹೇಳಿಕೊಂಡಿದ್ದರು. ಅಷ್ಟೆಲ್ಲ ಕೆಟ್ಟ ಅನುಭವವಾಗಿದ್ದರೆ, ನನ್ನ ಬಳಿ ಆ ರೀತಿ ಏಕೆ ಹೇಳಬೇಕಿತ್ತು..? ಇದು ಐಶ್ವರ್ಯ ಸರ್ಜಾ ಕೇಳುತ್ತಿರುವ ಪ್ರಶ್ನೆ. ಅಷ್ಟೆ ಅಲ್ಲ, ಅದೇ ಚಿತ್ರದ ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಜೊತೆ ಇನ್ನಷ್ಟು ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದ ಶೃತಿ ಹರಿಹರನ್ ಮಾತುಗಳೂ ಕೂಡಾ ಈಗ ಶೃತಿಯ ವಾದವನ್ನು ಒಪ್ಪದೇ ಇರುವವರ ಪ್ರಶ್ನೆಗೆ ಕಾರಣವಾಗಿವೆ.

  • ಶೃತಿ ಹರಿಹರನ್ ಉತ್ತರಿಸಲೇಬೇಕಾದ 5 ಪ್ರಶ್ನೆಗಳು..!

    sruthi hariharan is answerable to these 5 uestions

    ಶೃತಿ ಹರಿಹರನ್, ಅರ್ಜುನ್ ಸರ್ಜಾ ಹೆಸರಲ್ಲಿ ಕಿರುಕುಳದ  ಆರೋಪ ಮಾಡಿದ್ದಾರೆ. ಸರಿ. ಆಗ ನನಗೆ ಧೈರ್ಯ ಇರಲಿಲ್ಲ. ಈಗ ಮೀಟೂ ಅಭಿಯಾನದಿಂದಾಗಿ ಧೈರ್ಯ ಬಂದಿದೆ ಎನ್ನುವುದನ್ನೂ ಒಪ್ಪಬಹುದು. ಆದರೆ, ಶೃತಿ ಹರಿಹರನ್ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲೇಬೇಕಿದೆ. 

    ಪ್ರಶ್ನೆ 1 : ಶೃತಿ ಹರಿಹರನ್, ತಮಗಾದ ಅನುಭವವನ್ನು ವಿಸ್ಮಯ ಚಿತ್ರತಂಡದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಯಾರೊಬ್ಬರ ಗಮನಕ್ಕೂ ತಂದಿಲ್ಲ ಏಕೆ..? ಶೃತಿ ಆರೋಪದ ಬಗ್ಗೆ ವಿಸ್ಮಯ ಚಿತ್ರತಂಡದ ಯಾರೊಬ್ಬರಿಗೂ ಮಾಹಿತಿ ಇಲ್ಲವೇ..? ವೈಯಕ್ತಿಕವಾಗಿಯೂ ಯಾರ ಬಳಿಯೂ ಅವರು ಈ ವಿಷಯ ಹೇಳಿಕೊಂಡಿಲ್ಲವೇ..?

    ಪ್ರಶ್ನೆ 2 : ವಿಸ್ಮಯ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ಕೆಟ್ಟ ಅನುಭವ ಆಗಿತ್ತು. ವೃತ್ತಿ ಪರತೆಯಿಂದಾಗಿ ನಾನು ಸನಿಮಾದಲ್ಲಿ ಮುಂದುವರಿದೆ ಎಂದಿದ್ದಾರೆ ಶೃತಿ. ಅಷ್ಟು ಕೆಟ್ಟ ಅನುಭವವಾಗಿದ್ದರೆ, ಚಿತ್ರದ ಪ್ರೆಸ್‍ಮೀಟುಗಳಲ್ಲಿ, ಪ್ರೀಮಿಯರ್ ಶೋಗಳಲ್ಲಿ ಅದೇ ಅರ್ಜುನ್ ಸರ್ಜಾ ಬಗ್ಗೆ ಹೊಗಳಿದ್ದು ಏಕೆ..? ನಾನು ಅವರ ಅಭಿಮಾನಿ. ಅವರ ಜೊತೆ ಇನ್ನಷ್ಟು ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಕನಸಿದೆ ಎಂದು ಹೇಳಿಕೊಂಡಿದ್ದುದು ಏಕೆ..? ಅದು ವೃತ್ತಿಪರತೆಯ ಭಾಗವೇನೂ ಅಲ್ಲ. ಅಲ್ಲವೇ..?

    ಪ್ರಶ್ನೆ 3 : ಸಾಕ್ಷಿ ಇದೆ ಅಂತೀರಿ. ಕೋರ್ಟ್‍ನಲ್ಲಷ್ಟೇ ತೋರಿಸ್ತೀವಿ ಅಂತೀರಿ. ತಮಗಾದ ಮೀಟೂ ಅನುಭವ ಬಯಲು ಮಾಡಲು ಬಳಸಿಕೊಂಡ ಸಾಮಾಜಿಕ ಜಾಲತಾಣದಲ್ಲೇ ಅದನ್ನು ತೋರಿಸಬಹುದಲ್ಲಾ..? ಕೋರ್ಟ್‍ನಲ್ಲೇ ಹೇಳುವುದಾಗಿದ್ದರೆ, ಕೋರ್ಟ್‍ನಲ್ಲೇ ಕೇಸು ಹಾಕಬಹುದಿತ್ತು. ಆರೋಪ ಮಾಡೋಕೆ ಸಾಮಾಜಿಕ ಜಾಲತಾಣ, ಸಾಕ್ಷಿ ತೋರಿಸೋಕೆ ಕೋರ್ಟ್ ಏಕೆ..?

    ಪ್ರಶ್ನೆ 4 : ಚಿತ್ರರಂಗದಲ್ಲಿ ಈ ರೀತಿ ಕಿರುಕುಳಕ್ಕೊಳಗಾಗುವವರಿಗೆ ಸಹಾಯ, ನೆರವು ನೀಡಲೆಂದೇ ಕೆಲವು ಸಂಸ್ಥೆಗಳಿವೆ. ಫಿಲಂ ಚೇಂಬರ್, ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಗಳೂ ಇವೆ. ಇಲ್ಲಿ ದೂರು ನೀಡಲು ಸಾಧ್ಯವಾಗದೇ ಹೋದರೆ, ಚಿತ್ರರಂಗದ ಹಿರಿಯರ ಗಮನಕ್ಕಾದರೂ ತರಬಹುದಿತ್ತು. ಯಾರೊಬ್ಬರಿಗೂ ಈ ಬಗ್ಗೆ ಮಾಹಿತಿಯೇ ಇಲ್ಲ. 

    ಪ್ರಶ್ನೆ 5 : ಈ ಮೊದಲು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು ಶೃತಿ. ಶೃತಿ ಆ ಹೇಳಿಕೆ ನೀಡುವಷ್ಟು ಹೊತ್ತಿಗೆ ವಿಸ್ಮಯ ಚಿತ್ರ ಮುಗಿದಿತ್ತು. ಆಗಲೂ ಶೃತಿ ಹೆಸರು ಹೇಳಿರಲಿಲ್ಲ. ಹಲವಾರು ಬಾರಿ ಅನುಭವಗಳಾಗಿವೆ ಎಂದಿದ್ದ ಶೃತಿ, ಈ ಬಾರಿ ಮಾತ್ರ ಅರ್ಜುನ್ ಸರ್ಜಾ ಹೆಸರು ಹೇಳಿದ್ದಾರೆ. ಅಷ್ಟೇ ಅಲ್ಲ, ಹಲವಾರು ಅನುಭವಗಳಾಗಿವೆ ಎನ್ನುತ್ತಿರುವ ಅವರು ಹೊರಗೆ ಬಿಟ್ಟಿರುವುದು ಅರ್ಜುನ್ ಸರ್ಜಾ ಹೆಸರನ್ನು ಮಾತ್ರ. ಉಳಿದ ಎಲ್ಲ ಅನುಭವಗಳನ್ನೂ ಹೇಳಿಕೊಂಡಿಲ್ಲ. ಏಕೆ..?

  • ಶೃತಿಗೆ ವಿಸ್ಮಯ ನಿರ್ಮಾಪಕ, ನಿರ್ದೇಶಕ ಕೊಟ್ಟ ಶಾಕ್

    vismaya director and producer support arjun sarja

    ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ಶೃತಿ ಇದ್ದದ್ದೇ 9 ದಿನ. ಆ 9 ದಿನಕ್ಕೆ ನಾವು 3 ಲಕ್ಷ ರೂ. ಸಂಭಾವನೆ ನೀಡಿದ್ದೇವೆ. ಶೂಟಿಂಗ್‍ಗೆ ರಿಹರ್ಸಲ್ ನಡೆದಿದ್ದುದು ನಿಜ. ಆದರೆ, ಇಂತಹ ಘಟನೆ ನಡೆದಿರುವುದು ನಮಗೆ ಗೊತ್ತಿಲ್ಲ. ಏಕೆಂದರೆ, ಶೃತಿ ಒಮ್ಮೆಯೂ ಇಂತಹ ಘಟನೆಗಳ ಬಗ್ಗೆ ನಮ್ಮಲ್ಲಿ ಹೇಳಿಕೊಂಡಿಲ್ಲ. ಆಕ್ಷೇಪವನ್ನೂ ಮಾಡಿರಲಿಲ್ಲ. ಈಗ ಅವರ ಆರೋಪ ಕೇಳಿದರೆ ಅಚ್ಚರಿಯಾಗುತ್ತಿದೆ. ಇದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಪೊಲೀಸರ ಎದುರು ನೀಡಿರುವ ಹೇಳಿಕೆ.

    ವಿಸ್ಮಯ ಚಿತ್ರದಲ್ಲಿ ಇನ್ನೂ ಹೆಚ್ಚು ರೊಮ್ಯಾಂಟಿಕ್ ಸೀನ್‍ಗಳಿದ್ದವು. ಎರಡು ಬೆಡ್‍ರೂಂ ದೃಶ್ಯಗಳಿದ್ದವು. ಆದರೆ, ಸರ್ಜಾ ಅವರೇ ಈ ವಯಸ್ಸಿನಲ್ಲಿ ಇದೆಲ್ಲ ಬೇಡ. ಚಿತ್ರಕ್ಕೆ ತೀರಾ ಅಗತ್ಯವಿರುವಷ್ಟು ಮಾತ್ರ ರೊಮ್ಯಾನ್ಸ್ ಸೀನ್ ಇರಲಿ ಎಂದು ಕೇಳಿಕೊಂಡರು. ಅವರು ಕೇಳಿದಂತೆಯೇ ಕೆಲ ದೃಶ್ಯಗಳನ್ನು ಕೈಬಿಟ್ಟೆವು ಎಂದಿದ್ದಾರೆ ಅರುಣ್ ವೈದ್ಯನಾಥನ್.

    ಚಿತ್ರದ ನಿರ್ಮಾಪಕ ಉದಯ್ ಕುಮಾರ್ ಕೂಡಾ ಶೃತಿ ಆರೋಪವನ್ನು ಅಲ್ಲಗಳೆದಿದ್ದಾರೆ. 43 ದಿನಗಳ ಶೂಟಿಂಗ್‍ನಲ್ಲಿ ಶೃತಿ ಅವರು ಇದ್ದದ್ದು 9 ದಿನ ಮಾತ್ರ. ಯಾವುದೇ ತಕರಾರು, ಆರೋಪಗಳಿರಲಿಲ್ಲ. ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದನ್ನು ಕೇಳಿ ನಿಜಕ್ಕೂ ಶಾಕ್ ಆಯಿತು ಎಂದಿದ್ದಾರೆ ಉದಯ್ ಕುಮಾರ್.

    ಅಷ್ಟೇ ಅಲ್ಲ, ಶೃತಿ ಅವರ ಬೆನ್ನಿಗೆ ನಿಂತಿರುವ ನಟ ಚೇತನ್, ವಿಸ್ಮಯ ಚಿತ್ರದ ವಿಲನ್ ರೋಲ್‍ಗೆ ಆಯ್ಕೆಯಾಗಿದ್ದರಂತೆ. ಆದರೆ, ಕೊನೆಗೆ ಜಯರಾಮ್ ಕಾರ್ತಿಕ್(ಜೆಕೆ)ರನ್ನು ಆಯ್ಕೆ ಮಾಡಲಾಯಿತಂತೆ. ಇದಕ್ಕೆ ಸರ್ಜಾ ಕಾರಣ ಎಂಬ ಅಸಮಾಧಾನ ಇದ್ದರೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ನಿರ್ಮಾಪಕ ಉದಯ್ ಕುಮಾರ್.

    ಒಟ್ಟಿನಲ್ಲಿ ಪೊಲೀಸರ ಎದುರು ವಿಸ್ಮಯ ಚಿತ್ರದ ನಿರ್ಮಾಪಕ, ನಿರ್ದೇಶಕ.. ಇಬ್ಬರ ಹೇಳಿಕೆಗಳೂ ಶೃತಿ ಹರಿಹರನ್ ಆರೋಪಗಳಿಗೆ ವ್ಯತಿರಿಕ್ತವಾಗಿಯೇ ಮೂಡಿಬಂದಿವೆ. 

  • ಶ್ರುತಿ ಹರಿಹರನ್ ಬಳಿ ಇದೆಯಂತೆ ವಿಡಿಯೋ ಸಾಕ್ಷ್ಯ..!

    sruthi says she has video evidence against arjun

    ಶೃತಿ ಹರಿಹರನ್ ವ/ಸ ಅರ್ಜುಜ್ ಸರ್ಜಾ ನಡುವಣ ಮೀಟೂ ಗಲಾಟೆ ದಿನೇ ದಿನೇ ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತಿದೆ. ಸದ್ಯಕ್ಕೆ ನ್ಯಾಯಾಲಯದಲ್ಲಿರುವ ಪ್ರಕರಣದ ವಿಚಾರಣೆ ಮುಂದಕ್ಕೆ ಹೋಗಿದ್ದರೆ, ಇತ್ತ ಶೃತಿ ಹರಿಹರನ್ ಮಹಿಳಾ ಆಯೋಗದ ಮೆಟ್ಟಿಲು ಹತ್ತಿದ್ದಾರೆ. 

    ಆ ನಂತರ ಮಾತನಾಡಿರುವ ಶೃತಿ ಹರಿಹರನ್ `ನಾನು ಮಾಡಿರುವ ಆರೋಪದ ಕುರಿತು ನನ್ನ ಬಳಿ ವಿಡಿಯೋ ಸಾಕ್ಷ್ಯ ಇದೆ. ಅದನ್ನು ನಾನು ಮಹಿಳಾ ಆಯೋಗದ ಅಧ್ಯಕ್ಷರಿಗೆ ತೋರಿಸಿದ್ದೇನೆ. ಕೋರ್ಟ್‍ನಲ್ಲಿಯೂ ತೋರಿಸುತ್ತೇನೆ. ಫ್ರೆಶರ್ ಕುಕ್ಕರ್ ಹಾಗೇನೇ.. ವಿಶಲ್ ಹೋಗ್ತಾ ಹೋಗ್ತಾ ಒಂದ್ಸಲ ಬ್ಲಾಸ್ಟ್ ಆಗುತ್ತೆ. ನಾನು ನ್ಯಾಯಾಲಯದಲ್ಲಿ ವಿನ್ ಆಗ್ತೀನಿ'' ಎಂದಿದ್ದಾರೆ.

    ಸಂಜನಾ ಗಲ್ರಾನಿ ರೀತಿ ನಾನು ಕ್ಷಮೆ ಕೇಳಲ್ಲ. ಚಿತ್ರರಂಗದ ಯಾವೊಬ್ಬ ಹೀರೋಯಿನ್ ಕೂಡಾ ನನ್ನ ಬೆಂಬಲಕ್ಕೆ ಬಂದಿಲ್ಲ. ದೇವರು ನನಗೆ ಒಬ್ಬಳೇ ಎಲ್ಲವನ್ನೂ ಫೇಸ್ ಮಾಡುವ ಶಕ್ತಿ ಕೊಟ್ಟಿದ್ದಾನೆ. ನಾನು ಫೇಸ್ ಮಾಡುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

     

  • ಸರ್ಜಾ ಜೊತೆ ಹರಿಪ್ರಿಯಾ ಸ್ಪೆಷಲ್ ರೆಕಾರ್ಡ್..!

    haripriya's record with sarja brothers

    ಹರಿಪ್ರಿಯಾ, ಈಗ ಕನ್ನಡದಲ್ಲಿ ಅತ್ಯಂತ ಬ್ಯುಸಿ ನಟಿ. ಅತ್ತ ಕುರುಕ್ಷೇತ್ರ, ಇತ್ತ ಸಂಹಾರ, ಇನ್ನೊಂದು ಸೂಜಿದಾರ, ಮತ್ತೊಂದು ಸೆಲ್ಫಿ.. ಹೀಗೆ ಹರಿಪ್ರಿಯಾ ಕೈತುಂಬಾ ಸಿನಿಮಾಗಳಿವೆ. ಇದರ ಮಧ್ಯೆ ಹರಿಪ್ರಿಯಾ ಸದ್ದಿಲ್ಲದೇ ಒಂದು ವಿಶೇಷ ದಾಖಲೆ ಬರೆದಿದ್ದಾರೆ.

    ಸರ್ಜಾ ಫ್ಯಾಮಿಲಿಯ ಮೂವರು ಹೀರೋಗಳ ಜೊತೆ ಕಾಣಿಸಿಕೊಂಡಿರುವ ಹೊಸ ದಾಖಲೆ ಈಗ ಹರಿಪ್ರಿಯಾ ಹೆಸರಿಗೆ ಹೋಗಿದೆ. ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ನಟಿಸಿರುವ ಹರಿಪ್ರಿಯಾ, ಭರ್ಜರಿಯಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿದ್ದರು. ಈಗ ಸಂಹಾರ ಚಿತ್ರದಲ್ಲಿ ಧ್ರುವ ಅಣ್ಣ ಚಿರಂಜೀವಿ ಸರ್ಜಾಗೆ ನಾಯಕಿ.

    ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಹೀರೋಗಳು ಅಂಧನ ಪಾತ್ರದಲ್ಲಿ ನಟಿಸಿಯೇ ಇಲ್ಲ ಎನ್ನುವಷ್ಟು ಅಪರೂಪ. ಅಂತಹ ಚಿತ್ರದಲ್ಲಿ ಇಡೀ ಸಿನಿಮಾಗೆ ಟ್ವಿಸ್ಟ್ ಕೊಡುವ ಎರಡು ಶೇಡ್‍ಗಳಿರುವ ಪಾತ್ರದಲ್ಲಿ ನಟಿಸಿದ್ದಾರಂತೆ ಹರಿಪ್ರಿಯಾ. 

    ಕ್ಯಾರೆಕ್ಟರ್ ಹೆಂಗೆ ಅಂದ್ರೆ, ಡೈರೆಕ್ಟರ್ ಹೇಳಿದ್ದಾರೆ. ಹೇಳೋ ಹಾಗಿಲ್ಲ ಅಂತಾ ನಿರ್ದೇಶಕ ಗುರು ದೇಶಪಾಂಡೆ ಕಡೆ ಕೈತೋರಿಸ್ತಾರೆ ಹರಿಪ್ರಿಯಾ. 

     

  • ಸರ್ಜಾ ಪುತ್ರಿಗೆ ಸ್ವಾಗತ.. ಸುಸ್ವಾಗತ..

    aishwarya arjuna image from prema baraha

    ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅಭಿನಯದ ಮೊದಲ ಚಿತ್ರ ಪ್ರೇಮಬರಹವನ್ನು ಪ್ರೇಕ್ಷಕರಷ್ಟೇ ಅಲ್ಲ, ಇಡೀ ಚಿತ್ರರಂಗ ಆತ್ಮೀಯತೆಯಿಂದ ಬರಮಾಡಿಕೊಂಡಿದೆ. ಚಿತ್ರರಂಗದ ಗಣ್ಯಾತಿಗಣ್ಯರೆಲ್ಲ ಸರ್ಜಾ ಮಗಳಿಗೆ ಸ್ವಾಗತ ಕೋರಿದ್ದಾರೆ. ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

    ಸಿನಿಮಾ ಬಿಡುಗಡೆಯ ಹಿಂದಿನ ದಿನ ಸರ್ಜಾ ದಂಪತಿಯ ವಿವಾಹ ವಾರ್ಷಿಕೋತ್ಸವವೂ ಇತ್ತು. ಅದೇ ದಿನ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದರು ಅರ್ಜುನ್ ಸರ್ಜಾ. ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ, ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ತಾರಾ, ಹರಿಪ್ರಿಯ, ಅಮೂಲ್ಯ, ಮೇಘನಾ ರಾಜ್ ಮೊದಲಾದವರು ಪ್ರೀಮಿಷರ್ ಶೋನಲ್ಲಿ ಭಾಗವಹಿಸಿದ್ದರು. ನಟ ಸುದೀಪ್ ಟ್ವಿಟರ್ ಮೂಲಕ ಐಶ್ವರ್ಯಾ ಅವರನ್ನು ಚಿತ್ರರಂಗಕ್ಕೆ ಸ್ವಾಗತಿಸಿದ್ದು ವಿಶೇಷ. 

    ನಟ ದರ್ಶನ್, ಚಿತ್ರದಲ್ಲಿ ಕೇವಲ ಹಾಡಿನಲ್ಲಿ ನಟಿಸಿಲ್ಲ, ಚಿತ್ರದ ವಿತರಣೆಯನ್ನೂ ತಮ್ಮ ತೂಗುದೀಪ ಸಂಸ್ಥೆಯಿಂದಲೇ ಮಾಡುವ ಮೂಲಕ, ಅರ್ಜುನ್ ಸರ್ಜಾ ಪುತ್ರಿಯ ಮೊದಲ ಚಿತ್ರದ ವಿತರಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.

     

  • ಸಾಕ್ಷಿ ಇದೆ.. ಕೋರ್ಟ್‍ನಲ್ಲಿ ತೋರಿಸ್ತೇನೆ - ಶೃತಿ ಹರಿಹರನ್

    sruthi hariharan says she has proof

    ಅರ್ಜುನ್ ಸರ್ಜಾ ವಿರುದ್ಧ ಕಿರುಕುಳದ ಆರೋಪ ಮಾಡಿರುವ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸಾಕ್ಷಿಗಳನ್ನೂ ಇಟ್ಟುಕೊಂಡಿದ್ದಾರಂತೆ. ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಹೆಸರನ್ನೇ ಹೇಳೋಕೆ ಕಾರಣಗಳೂ ಇವೆ ಎಂದ ಶೃತಿ, ಅದನ್ನು ನಾನು ಕೋರ್ಟ್‍ನಲ್ಲೇ ಹೇಳುತ್ತೇನೆ. ಇಲ್ಲಿ ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.

    ಹಾಗಂತ ಅರ್ಜುನ್ ಸರ್ಜಾ, ಶೃತಿಗೆ ಯಾವುದೇ ಮೆಸೇಜ್ ಅಥವಾ ವಾಟ್ಸಪ್ ಮಾಡಿಲ್ಲ. ಅಂತಹ ಮೆಸೇಜ್‍ಗಳಿಲ್ಲ. ಆದರೆ, ಸಾಕ್ಷಿಗಳಿವೆ. ಅವುಗಳನ್ನು ಸಮಯ ಬಂದಾಗ ಕೋರ್ಟಿನಲ್ಲೇ ತೋರಿಸುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

    ಶೃತಿ ಹರಿಹರನ್ ಅವರ ಜೊತೆ ಫೈರ್ ಸಂಘಟನೆಯ ಚೇತನ್, ಕವಿತಾ ಲಂಕೇಶ್ ಸೇರಿದಂತೆ ಹಲವು ಸದಸ್ಯರಿದ್ದರು. ನಾನು ಸುದೀಪ್, ದರ್ಶನ್‍ರಂತಹ ದೊಡ್ಡ ಸ್ಟಾರ್‍ಗಳ ಜೊತೆಯಲ್ಲೂ ನಟಿಸಿದ್ದೇನೆ. ನನಗೆ ಅವರ ಜೊತೆ ಇಂತಹ ಕೆಟ್ಟ ಅನುಭವಗಳಾಗಿಲ್ಲ ಎನ್ನುವುದು ಶೃತಿ ಹರಿಹರನ್ ಮಾತು.

  • ಸೈಬರ್ ಕ್ರೈಂಗೆ ದೂರು - ಶೃತಿ ಆರೋಪಿ ನಂ.1 

    arjun sarja files complaint against sruthi hariharan

    ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದಕ್ಕಾಗಿ ದೂರು ನೀಡಿದ್ದಾರೆ. ಬೆಂಗಳೂರು ಸಿಟಿ ಕಮಿಷನರ್ ಕಚೇರಿಯಲ್ಲಿ ಅರ್ಜುನ್ ಸರ್ಜಾ ಅವರ ಶ್ರೀರಾಂ ಫಿಲಂ ಇಂಟರ್‍ನ್ಯಾಷನಲ್ ಸಂಸ್ಥೆಯ ಮ್ಯಾನೇಜರ್ ಶಿವಾರ್ಜುನ್, ಕಮಿಷನರ್ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

    ದೂರಿನಲ್ಲಿ ಶೃತಿ ಹರಿಹರನ್ ಅವರನ್ನು ಆರೋಪಿ ನಂ.1 ಎಂದು ನಮೂದಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಅಪರಿಚಿತರು ಎಂದು ನಮೂದಿಸಲಾಗಿದೆ. 

  • ಹೆಣ್ಮಕ್ಕಳೇ ಕ್ಷಮೆ ಕೇಳಬೇಕಾ..? - ಶೃತಿ ಹರಿಹರನ್

    no apologies says sruthi hariharan

    ನನ್ನ ನೋವು ಏನು..? ಆರೋಪ ಏನು..? ಅನ್ನೋದನ್ನ ಇವತ್ತಿನ ವಾಣಿಜ್ಯ ಮಂಡಳಿ ಸಭೆಯಲ್ಲಿ ಹೇಳಿಕೊಂಡಿದ್ದೇನೆ. ಅರ್ಜುನ್ ಸರ್ಜಾ ನನ್ನ ವಿರುದ್ಧ ಒಂದಲ್ಲ, 2 ಕೇಸ್ ಹಾಕಿದ್ದಾರೆ. ನಾನೂ ಕೂಡಾ ಕೋರ್ಟ್‍ಗೇ ಹೋಗುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

    ಪ್ರತಿ ಬಾರಿಯೂ, ನೋವನ್ನೂ ಅನುಭವಿಸಿ ನಾವೇ.. ಹೆಣ್ಣು ಮಕ್ಕಳೇ ಕ್ಷಮೆ ಕೇಳಬೇಕಾ ಎಂದರು ಶೃತಿ ಹರಿಹರನ್. ವಾಣಿಜ್ಯ ಮಂಡಳಿ ಬಗ್ಗೆ ನನಗೆ ಗೌರವ ಇದೆ. ಹಾಗಾಗಿಯೇ ಅಂಬರೀಷ್ ಸರ್ ನೇತೃತ್ವದ ಸಭೆಗೆ ಬಂದಿದ್ದೇನೆ ಎಂದರು ಶೃತಿ.

    ವಾಣಿಜ್ಯ ಮಂಡಳಿ ಮೇಲೆ ಅಷ್ಟೊಂದು ಗೌರವ ಇದ್ದವರು, ಸೋಷಿಯಲ್ ಮೀಡಿಯಾಗೆ ಹೋಗುವುದಕ್ಕೆ ಮೊದಲೇ ವಾಣಿಜ್ಯ ಮಂಡಳಿ ಎದುರು ಸಮಸ್ಯೆ ಹೇಳಿಕೊಳ್ಳಬೇಕಿತ್ತಲ್ಲವೇ.. ಎಂದು ಪ್ರಶ್ನಿಸಿದರು ಪತ್ರಕರ್ತರು. ಶೃತಿ ದಢಕ್ಕನೆ ಎದ್ದು ಹೋದರು.