` anjaniputra, - chitraloka.com | Kannada Movie News, Reviews | Image

anjaniputra,

 • ಅಪ್ಪು ಅಂಜನೀಪುತ್ರ ಒಪ್ಪಿಕೊಳ್ಳೋಕೆ `ಅಮ್ಮ' ಕಾರಣ

  anjaniputra

  ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ನಾಳೆಯಿಂದ ಆವರಿಸಿಕೊಳ್ಳಲಿದ್ದಾನೆ. ಹರ್ಷ-ಪುನೀತ್-ರಶ್ಮಿಕಾ-ರಮ್ಯಕೃಷ್ಣ ಕಾಂಬಿನೇಷನ್‍ನ ಚಿತ್ರವನ್ನು ಪುನೀತ್ ಒಪ್ಪಿಕೊಳ್ಳೋಕೆ ಕಾರಣ ಏನ್ ಗೊತ್ತಾ..? ಅದು ಅಮ್ಮ. ರಾಜಕುಮಾರ ಚಿತ್ರದ ನಂತರ ಪುನೀತ್ ನಟಿಸಿದ ಚಿತ್ರ ಅಂಜನೀಪುತ್ರ. ಅಷ್ಟು ದೊಡ್ಡ ಸ್ವಮೇಕ್ ಹಿಟ್ ಕೊಟ್ಟಿದ್ದ ಪುನೀತ್, ರೀಮೇಕ್ ಚಿತ್ರ ಒಪ್ಪಿಕೊಳ್ಳೋಕೆ ಕಾರಣ, ಅಮ್ಮ.

  ತಮಿಳಿನ ಪೂಜೈ ಚಿತ್ರದ ರೀಮೇಕ್ ಅಂಜನೀಪುತ್ರ. ಆ ಚಿತ್ರದಲ್ಲಿನ ತಾಯಿ-ಮಗನ ಸೆಂಟಿಮೆಂಟ್ ಪುನೀತ್‍ಗೆ ತುಂಬಾ ಇಷ್ಟವಾಯ್ತಂತೆ. ಇನ್ನು ಸ್ವತಃ ಪುನೀತ್, ತಮ್ಮ ತಾಯಿಯಿಂದ ಬಹಳವಾಗಿ ಪ್ರೇರಿತರಾದವರು. ಆದರೆ, ನನ್ನ ತಾಯಿಯ ಪ್ರೀತಿಯನ್ನು ನಾನು ಯಾವುದರೊಂದಿಗೆ ಕನೆಕ್ಟ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುತ್ತಾರೆ ಪುನೀತ್.

  ಅಂಜನೀಪುತ್ರದಲ್ಲಿ ಪುನೀತ್ ತಾಯಿಯಾಗಿ ನಟಿಸಿರುವುದು ರಮ್ಯಕೃಷ್ಣ. ನಾಯಕನಷ್ಟೇ ತೂಕದ ಪಾತ್ರವದು. ಕಣ್ಣು ಮತ್ತು ಧ್ವನಿಯಲ್ಲೇ ಪ್ರೇಕ್ಷಕರ ಎದೆಗಿಳಿಯುವ ರಮ್ಯಕೃಷ್ಣ ಅಂಜನೀಪುತ್ರದಲ್ಲೂ ಆವರಿಸಿಕೊಳ್ಳುತ್ತಾರೆ ಅನ್ನೋದ್ರಲ್ಲಿ ಅನುಮಾನವಿಲ್ಲ.

 • ಅಪ್ಪುಗೆ ಪವರ್‍ಸ್ಟಾರ್ ಬಿರುದು ಕೊಟ್ಟವರ್ಯಾರು..?

  puneeth rajkumar at anjaniputra audio release

  ಮನೆಯಲ್ಲಿ ಎಲ್ಲರಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್‍ಕುಮಾರ್‍ರನ್ನು ಅಭಿಮಾನಿಗಳು ಹಾಗೆಯೇ ಕರೀತಾರೆ. ಪುನೀತ್‍ಗಿರುವ ಬಿರುದು ಪವರ್ ಸ್ಟಾರ್. ಪುನೀತ್ ಆ್ಯಕ್ಷನ್ ಮತ್ತು ಡೈಲಾಗ್‍ನಲ್ಲಿ ಅಂಥಾದ್ದೊಂದು ಪವರ್ ಇರುತ್ತೆ ಅನ್ನೋದು ಬೇರೆ ಮಾತು. ಆದರೆ, ಅವರನ್ನು ಮೊತ್ತ ಮೊದಲ ಬಾರಿಗೆ ಪವರ್ ಸ್ಟಾರ್ ಎಂದು ಕರೆದಿದ್ದು ಯಾರು ಗೊತ್ತಾ..? ಅದು ಶಿವರಾಜ್ ಕುಮಾರ್.

  ಅದನ್ನು ಸ್ವತಃ ಶಿವರಾಜ್ ಕುಮಾರ್, ಅಂಜನೀಪುತ್ರ ಆಡಿಯೋ ಬಿಡುಗಡೆ ವೇಳೆ ಬಹಿರಂಗಪಡಿಸಿದ್ದಾರೆ. ಅಪ್ಪು ತುಂಬಾ ಆ್ಯಕ್ಟಿವ್ ಇರುತ್ತಿದ್ದ. 6ನೇ ವಯಸ್ಸಿಗೇ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭೆ ಅವನದ್ದು. ಸದಾ ಪುಟಿಯುತ್ತಿದ್ದ ಅವನ ಉತ್ಸಾಹ, ಟ್ಯಾಲೆಂಟ್, ಎನರ್ಜಿ ನೋಡಿ ಅವನಿಗೆ ಪವರ್ ಸ್ಟಾರ್ ಎಂದು ಹೆಸರಿಟ್ಟರೆ ಚೆನ್ನಾಗಿರುತ್ತೆ ಎಂದಿದ್ದೆ ಎಂಬ ವಿಷಯ ಹೇಳಿಕೊಂಡಿದ್ದಾರೆ ಶಿವಣ್ಣ.

  ಪವರ್ ಸ್ಟಾರ್.. ಪವರ್ ಸ್ಟಾರ್ ಎಂದು ಕೂಗುತ್ತಿದ್ದ ಅಭಿಮಾನಿಗಳ ಎದುರು ನಿಂತ ಶಿವಣ್ಣ, ನೀವೆಲ್ಲ ಇವತ್ತು ಪವರ್ ಸ್ಟಾರ್ ಎಂದು ಕೂಗುತ್ತಿದ್ದೀರಿ. ಈ ಪವರ್ ಸ್ಟಾರ್‍ಗೆ ಪವರ್ ಕೊಟ್ಟಿದ್ದು ಈ ಟವರ್ ಎಂದು ಹೇಳಿದಾಗ ಅಭಿಮಾನಿಗಳ ಕರತಾಡನ ಮುಗಿಲುಮುಟ್ಟಿತ್ತು. 

 • ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

  anjaniputra shooting image

  ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಬಾಲಕೃಷ್ಣ ಮತ್ತು ಕನ್ನಡ ಚಿತ್ರರಂಗದ ಬಾಂಧವ್ಯ ಹೊಸದೇನಲ್ಲ. ಇತ್ತೀಚೆಗಷ್ಟೇ ಮಾಸ್ ಲೀಡರ್ ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮಕ್ಕೆ ಬಂದಿದ್ದರು. ಕನ್ನಡದಲ್ಲಿಯೇ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದ್ದರು. ಬಾಲಯ್ಯ ಅಭಿನಯದ ನೂರನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಅತಿಥಿ ನಟನಾಗಿ ನಟಿಸಿದ್ದರು. ಆ ಬಾಂಧವ್ಯ ಇನ್ನೂ ಮುಂದುವರೆಯುತ್ತಿದೆ.

  ಪುನೀತ್ ರಾಜ್ ಕುಮಾರ್, ರಶ್ಮಿಕಾ, ರಮ್ಯ ಕೃಷ್ಣ ಮುಖ್ಯಭೂಮಿಕೆಯಲ್ಲಿರುವ ಆಂಜನಿಪುತ್ರ ಸೆಟ್​ಗೆ ಭೇಟಿ ನೀಡಿರುವ ಬಾಲಕೃಷ್ಣ, ಚಿತ್ರತಂಡದ ಜೊತೆ ಹರಟಿದ್ದಾರೆ. ರಾಜ್ ಕುಟುಂಬವನ್ನು ಬಹಳ ಇಷ್ಟಪಡುವ ಬಾಲಯ್ಯ, ಆಂಜನಿಪುತ್ರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

  Related Articles :-

  Anjaniputra Shooting Put On Hold

  Puneeth's New Film Titled Anjaniputra

 • ಆಂಜನಿಪುತ್ರದಲ್ಲಿ ಕ್ರೂರ್​ಸಿಂಗ್ V/S ಅಪ್ಪು

  anjaniputra

  ಪುನೀತ್ ರಾಜ್​ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರ, ಗಾಂಧಿನಗರ ಮತ್ತು ಅಭಿಮಾನಿಗಳು ಭಾರಿ ನಿರೀಕ್ಷೆಯಿಟ್ಟುಕೊಂಡಿರುವ ಸಿನಿಮಾ. ಸಿನಿಮಾದಲ್ಲಿ ಪುನೀತ್ ಎದುರು ಖಳರಾಗಿ ನಟಿಸುತ್ತಿರುವುದು ಸಣ್ಣಪುಟ್ಟ ಕಲಾವಿದರೇನಲ್ಲ. ಅಭಿನವ ವಜ್ರಮುನಿ ಎಂದೇ ಫೇಮಸ್ ಆಗುತ್ತಿರುವ ರವಿಶಂಕರ್, ಬಾಲಿವುಡ್​ನ ಮುಖೇಶ್ ತಿವಾರಿ ಈಗಾಗಲೇ ಅಂಜನಿ ಪುತ್ರದ ಖಳರ ಪಟ್ಟಿಯಲ್ಲಿದ್ದಾರೆ.

  ಈ ಇಬ್ಬರ ಜೊತೆ ಹೊಸ ಸೇರ್ಪಡೆ ಕ್ರೂರ್ ಸಿಂಗ್. ಕ್ರೂರ್ ಸಿಂಗ್ ಯಾರು ಅಂಥಾ ನೆನಪಾಗಲಿಲ್ಲವಾ..? ಒಂದ್ಸಲ ಚಂದ್ರಕಾಂತ ಸೀರಿಯಲ್ ನೆನಪಿಸಿಕೊಳ್ಳಿ. ಆ ಸೀರಿಯಲ್​ನ ಕ್ರೂರ್​ಸಿಂಗ್ ಪಾತ್ರಧಾರಿ ಅಖಿಲೇಂದ್ರ ಮಿಶ್ರಾ ಅವರೇ, ಅಂಜನಿಪುತ್ರದ 3ನೇ ವಿಲನ್.

  ಲಗಾನ್, ಗಂಗಾಜಲ್ ಮೊದಲಾದ ಚಿತ್ರಗಳ ಮೂಲಕ ಬಾಲಿವುಡ್​ನಲ್ಲಿ ಖ್ಯಾತರಾಗಿರುವ ಅಖಿಲೇಂದ್ರ ಮಿಶ್ರಾಗೆ, ಸ್ಯಾಂಡಲ್​ವುಡ್​ನಲ್ಲಿ ಇದು ಮೊದಲ ಅನುಭವ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರದಲ್ಲಿ ರಮ್ಯಕೃಷ್ಣ ಅಂಜನಿ ದೇವಿ. ಅವರ ಮಗನಾಗಿ ನಟಿಸ್ತಾ ಇರೋದು ಅಪ್ಪು. ಸಾಧುಕೋಕಿಲ, ಚಿಕ್ಕಣ್ಣ, ಗಿರಿ, ಧರ್ಮ ಮೊದಲಾದವರು ನಟಿಸಿರುವ ಚಿತ್ರ ನವೆಂಬರ್​ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

  Related Articles :-

  Akhilendra Mishra Returns To Kannada

  ಸ್ಕಾಟ್​ಲೆಂಡ್​ನಿಂದ ಪುನೀತ್ ರಾಜ್​ಕುಮಾರ್ ಟೀಂ ವಾಪಸ್

  ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

  Anjaniputra Shooting Put On Hold

  Puneeth's New Film Titled Anjaniputra

   

   

 • ಇಡೀ ಡಿಸೆಂಬರ್ ತಿಂಗಳು ರಶ್ಮಿಕಾಗೆ ಮೀಸಲು

  chamak movie image

  ಹೌದು ಅಂದ್ರೆ  ಹೌದು ಅನ್ನಿ, ಇಲ್ಲ ಅನ್ನಿಸಿದ್ರೆ ಇಲ್ಲ ಅನ್ನಿ. ಇದಂತೂ ಕರೆಕ್ಟು. ಇಡೀ ಡಿಸೆಂಬರ್ ತಿಂಗಳು ರಶ್ಮಿಕಾಗೆ ರಿಸರ್ವ್ ಆಗಿಬಿಟ್ಟಿದೆ. ಎಷ್ಟರಮಟ್ಟಿಗೆ ಎಂದರೆ, ಈ ತಿಂಗಳಲ್ಲಿ ರಶ್ಮಿಕಾರ 3 ಸಿನಿಮಾ ರಿಲೀಸ್ ಆಗುತ್ತಿದ್ದರೆ, ಒಂದು ಸಿನಿಮಾ ಸೆಟ್ಟೇರುತ್ತಿದೆ.

  ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಒಪ್ಪಿಕೊಂಡ ಮೊದಲ ಚಿತ್ರ ಅಂಜನೀಪುತ್ರ. ಅದು ಡಿ.22ಕ್ಕೆ ರಿಲೀಸ್ ಆಗುವ ನಿರೀಕ್ಷೆ ಇದೆ. ಇನ್ನು ಗಣೇಶ್ ಜೊತೆಗಿನ ಚಮಕ್, ಡಿ.29ಕ್ಕೆ ರಿಲೀಸ್ ಆಗುವುದು ಪಕ್ಕಾ.

  ಇದು ಕನ್ನಡದ ಮಾತಾದರೆ, ತೆಲುಗಿನಲ್ಲಿ ನಾಗಶೌರ್ಯ ಜೊತೆ ನಟಿಸಿರುವ `ಚಲೋ' ಚಿತ್ರ ಕೂಡಾ ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಗೆ ರೆಡಿಯಾಗಿದೆ. ಇದೆಲ್ಲದರ ಮಧ್ಯೆ ಇಂದು ರಶ್ಮಿಕಾ ನಾಯಕಿಯಾಗಿರುವ ಪೊಗರು ಚಿತ್ರ ಸೆಟ್ಟೇರುತ್ತಿದೆ.  ಹೀಗಾಗಿ ಇಡೀ ತಿಂಗಳನ್ನು ರಶ್ಮಿಕಾ ಆವರಿಸಿಕೊಳ್ಳಲಿದ್ದಾರೆ. 

  Related Articles :-

  Rashmika's Back To Back Release In December

  ರಶ್ಮಿಕಾಗೆ ಡಿಸೆಂಬರ್ ಸುನಾಮಿ

 • ಇಂದು ಟಿವಿಯಲ್ಲಿ ಅಂಜನೀಪುತ್ರ..!

  anjaniputra

  ಪವರ್ ಸ್ಟಾರ್ ಪುನೀತ್ ಅಭಿನಯದ ಅಂಜನೀಪುತ್ರ ರಿಲೀಸೇ ಆಗಿಲ್ಲ. ಆಗಲೇ ಟಿವಿಯಲ್ಲಿ ಬರುತ್ತಾ..? ಏನಿದು.. ಏನಿದು.. ಎಂದು ತಲೆಯಲ್ಲಿ ಹುಳ ಬಿಟ್ಟುಕೊಳ್ಳಬೇಡಿ. ಇಂದು ಅಂಜನೀಪುತ್ರ ಟಿವಿಯಲ್ಲಿ ಬರೋದು ನಿಜ. ಚಿತ್ರದ ಆಡಿಯೋ ಬಿಡುಗಡೆಯ ಅದ್ಧೂರಿ ಸಮಾರಂಭ, ಇಂದು ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  ಅಂಜನೀಪುತ್ರದ ಆಡಿಯೋ ಬಿಡುಗಡೆಯನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದರು. ಸಂಗೀತ ನಿರ್ದೇಶಕ ನಾಗೇಂದ್ರ (ರಾಜನ್-ನಾಗೇಂದ್ರ ಜೋಡಿಯ ನಾಗೇಂದ್ರ) ಹಾಗೂ ಹಿರಿಯ ನಿರ್ದೇಶಕ ಭಗವಾನ್ ಅವರನ್ನು ಸನ್ಮಾನಿಸಲಾಗಿತ್ತು. ನಾಗೇಂದ್ರ ಸಂಗೀತ ನಿರ್ದೇಶನದ ಹಾಡು ಹಾಡಿದ್ದ ಪುನೀತ್, ಹಿರಿಯರಿಗೆ ವಿಶೇಷವಾಗಿ ವಂದನೆ ಸಲ್ಲಿದ್ದರು.

  ರಶ್ಮಿಕಾ ನಾಯಕಿಯಾಗಿರುವ ಚಿತ್ರಕ್ಕೆ ಹರ್ಷ ನಿರ್ದೇಶನವಿದೆ. ರಮ್ಯಕೃಷ್ಣ ಹಾಗೂ ಹರಿಪ್ರಿಯಾ ಕೂಡಾ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಂ.ಎನ್.ಕುಮಾರ್ ನಿರ್ಮಾಣದ ಚಿತ್ರದಲ್ಲಿ ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಮುಖೇಶ್ ತಿವಾರಿ, ಅಖಿಲೇಂದ್ರ ಮಿಶ್ರಾ, ವಿ.ಮನೋಹರ್.. ಹೀಗೆ ದಿಗ್ಗಜರ ತಂಡವೇ ಇದೆ.

 • ಒಳ್ಳೆ ಸಿನಿಮಾ ಮಾಡಿದ್ರೆ ಜನ ಮೆಚ್ಚಲೇಬೇಕಲ್ವಾ..?

  anjaniputra producer mn producer

  ಅಂಜನಿಪುತ್ರ. ಪವರ್ ಸ್ಟಾರ್ ಪುನೀತ್-ರಶ್ಮಿಕಾ ಮಂದಣ್ಣ-ನಿರ್ದೇಶಕ ಹರ್ಷ-ನಿರ್ಮಾಪಕ ಎನ್.ಕುಮಾರ್ ಅವರ ಕಾಂಬಿನೇಷನ್ನಿನ ಸಿನಿಮಾ. ಚಿತ್ರ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಹೇಗಿದೆ ರಿಯಾಕ್ಷನ್ ಎಂದರೆ ನಿರ್ಮಾಪಕ ಎನ್.ಕುಮಾರ್ ಆತ್ಮವಿಶ್ವಾಸದಿಂದ ಹೇಳಿರುವ ಮಾತು ಇದು. ಒಳ್ಳೆ ಸಿನಿಮಾ ಮಾಡಿದ್ರೆ ಜನ ಮೆಚ್ಚಲೇಬೇಕಲ್ವಾ..?

  ಚಿತ್ರದ ಕಲೆಕ್ಷನ್ ಜೋರಾಗಿದೆ. ವಿದೇಶದಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಎಲ್ಲ ಸೆಂಟರ್‍ಗಳಲ್ಲೂ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿರುವುದು ದಾಖಲೆಯೇ ಸರಿ ಎಂದು ಸಂಭ್ರಮಿಸಿದ್ದಾರೆ ಕುಮಾರ್. 

  ಅಂಜನೀಪುತ್ರದ ಇನ್ನೊಂದು ವಿಶೇಷತೆಯೆಂದರೆ, ಚಿತ್ರಕ್ಕೆ ಓಂಕಾರ ಹಾಕಿದಾಗಿನಿಂದ ಇಲ್ಲಿಯವರಗೆ ವಿತರಕರನ್ನೂ ಸೇರಿಸಿ ಪ್ರತಿಯೊಬ್ಬರೂ ಹ್ಯಾಪಿಯಾಗಿರುವುದು. ಚಿತ್ರಕ್ಕೆ ಬೇಕಾಗಿದ್ದನ್ನು ಕೊಡುವುದರಲ್ಲಿ ಹಿಂದೆ ಮುಂದೆ ನೋಡದ ಕುಮಾರ್, ಚಿತ್ರದ ಕ್ವಾಲಿಟಿಗೂ ಗಮನ ಕೊಡುತ್ತಾರೆ. ಚಿತ್ರದ ವಿತರಣೆಗೂ ಅಷ್ಟೇ ಮುತುವರ್ಜಿ ವಹಿಸುತ್ತಾರೆ. ಅಂಜನೀಪುತ್ರದ ಸಕ್ಸಸ್ ಇರೋದೇ ಅಲ್ಲಿ.

 • ಕನಕಾನಾ..ಅಂಜನೀಪುತ್ರನಾ..? ಯಾರು ಫಸ್ಟ್..?

  kanaka or anjaniputra, who will be first

  ಡಿಸೆಂಬರ್ ಸ್ಟಾರ್‍ಗಳ ತಿಂಗಳಾಗಲಿದೆ ಎಂಬ ನಿರೀಕ್ಷೆ ಸುಳ್ಳಾಗಿಲ್ಲ. ತಿಂಗಳು ಶುರುವಾಗಿರುವುದೇ ಮಫ್ತಿ ಚಿತ್ರದ ಭರ್ಜರಿ ಪ್ರದರ್ಶನದ ಮೂಲಕ. ಈಗ ಇದೇ ತಿಂಗಳಲ್ಲಿ ಕನಕ ಹಾಗೂ ಅಂಜನೀಪುತ್ರ ಬಿಡುಗಡೆಗೆ ಕಾಯುತ್ತಿವೆ.

  ಅಂಜನೀಪುತ್ರ, ಪವರ್ ಸ್ಟಾರ್ ಪುನೀತ್-ಹರ್ಷ ಕಾಂಬಿನೇಷನ್ ಚಿತ್ರವಾದರೆ, ಕನಕ, ದುನಿಯಾ ವಿಜಿ-ಆರ್.ಚಂದ್ರು ಕಾಂಬಿನೇಷನ್ ಸಿನಿಮಾ. ವಿಶೇಷವೆಂದರೆ ಎರಡೂ ಚಿತ್ರಗಳು ಸೆನ್ಸಾರ್ ಮಂಡಳಿಯವರ ಎದುರು ಇವೆ. ಸರ್ಟಿಫಿಕೇಟ್‍ಗಾಗಿ ಕಾಯುತ್ತಿವೆ.

  ಕನಕ ಚಿತ್ರಕ್ಕೆ ಈ ವಾರ ಸರ್ಟಿಫಿಕೇಟ್ ಸಿಗಬಹುದು. ಡಿ.15ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ವಿಳಂಬವಾದರೆ, ಇನ್ನೊಂದು ವಾರ ಮುಂದೆ ಹೋಗಬಹುದು. ಆಗ ಎದುರಾಗುವುದು ಅಂಜನೀಪುತ್ರ ಚಿತ್ರ. 

  ಸ್ಟಾರ್ ಕ್ಲಾಷ್ ತಪ್ಪಿಸಲು ಅಂಜನೀಪುತ್ರ ಚಿತ್ರವೇ ಮುಂದೆ ಹೋಗುವ ಸಾಧ್ಯತೆಗಳಿವೆಯಂತೆ. ಎರಡೂ ಚಿತ್ರಗಳ ನಿರ್ಮಾಪಕರು ತಮ್ಮ ತಮ್ಮ ಚಿತ್ರಗಳ ಬಿಡುಗಡೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಪ್ರತಿದಿನ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಕನಕ ಮೊದಲು ಬಂದರೆ, ಅಂಜನೀಪುತ್ರ ಮುಂದಿನ ವರ್ಷ ಬಿಡುಗಡೆಯಾದರೂ ಆಶ್ಚರ್ಯವಿಲ್ಲ.

 • ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಏನ್ ಹವಾರೀ..

  Anjaniputra chanda chanda song trending

  ಅಂಜನಿಪುತ್ರ ಚಿತ್ರ ಒಂದು ಕಡೆ ಥಿಯೇಟರುಗಳಲ್ಲಿ ಭರ್ಜರಿ ಪ್ರರ್ದಶನ ಕಾಣುತ್ತಿರುವಾಗಲೇ, ಅದಕ್ಕಿಂತ ದೊಡ್ಡ ಹವಾ ಎಬ್ಬಿಸಿರುವುದು ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಹಾಡು ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿಬಿಟ್ಟಿದೆ. ಎಷ್ಟರಮಟ್ಟಿಗೆ ಎಂದರೆ, ಹಾಡಿಗೆ ಅವರವರೇ ಕಾನ್ಸೆಪ್ಟ್ ಮಾಡಿಕೊಂಡು, ಅವರವರೇ ಸ್ಟೆಪ್ಸ್ ಹಾಕಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ.

  ಮೊನ್ನೆ ಮೊನ್ನೆಯಷ್ಟೇ ಉಜಿರೆಯ ಎಸ್‍ಡಿಎಂ ಕಾಲೇಜ್‍ನ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ಸ್ಟೆಪ್ಸ್ ವೈರಲ್ ಆಗಿತ್ತು. ಈಗ ಸಾಫ್ಟ್‍ವೇರ್ ಉದ್ಯೋಗಿಗಳ ಸರದಿ. ಮೈಸೂರಿನ ಇನ್ಫೋಸಿಸ್ ಉದ್ಯೋಗಿಗಳೆಲ್ಲ ಸೇರಿಕೊಂಡು ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಹಾಡನ್ನು ಮರುಸೃಷ್ಟಿ ಮಾಡಿದ್ದಾರೆ.

  ಶಿವರಾಜ್ ಕುಮಾರ್ ಹಾಗೂ ಪುನೀತ್ ಅಭಿಮಾನಿಗಳಂತೂ ವಿಭಿನ್ನವಾಗಿ ಹಾಡುಗಳನ್ನು ತಾವೇ ಸೃಷ್ಟಿಸಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ. ಹೆಂಡ್ತಿಯನ್ನು ಪ್ರೀತಿಸುವವರು ಯಾರು ತಾನೇ ಹಾಡನ್ನು ನಿರಾಕರಿಸ್ತಾರೆ ಹೇಳಿ.

 • ಪತ್ನಿಗಾಗಿ ಅಂಜನೀಪುತ್ರನನ್ನು ಕದ್ದು ಸಿಕ್ಕಿಬಿದ್ದ..!

  piracy problem for anjaniputra

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕಳೆದ ಕೆಲವು ತಿಂಗಳಿಂದ ಡಲ್ಲು ಹೊಡೆಯುತ್ತಿದ್ದ ಚಿತ್ರಮಂದಿರಗಳಲ್ಲೀಗ ಪವರ್ ಸುನಾಮಿ. ಆದರೆ, ಇದರ ನಡುವೆಯೇ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. 

  ಸಿನಿಮಾವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲು ಹೋದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ಅಂಜನೀಪುತ್ರ ಸಿನಿಮಾವನ್ನು ಮೊಬೈಲ್‍ನಲ್ಲಿಯೇ ಶೂಟ್ ಮಾಡುತ್ತಿದ್ದ ಆನಂದ್ ಎಂಬುವವನನ್ನು ಸಿಲ್ವರ್ ಜುಬ್ಲಿ ಪಾರ್ಕ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

  ವಿಪರ್ಯಾಸವೆಂದರೆ, ಆನಂದ್ ಕೂಡಾ ಪುನೀತ್ ಅವರ ಅಭಿಮಾನಿ. ತನ್ನ ಪತ್ನಿಗೆ ಸಿನಿಮಾ ತೋರಿಸಲು ಮೊಬೈಲ್‍ನಲ್ಲಿ ಶೂಟ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಇತ್ತೀಚೆಗೆ ಮೊಬೈಲ್‍ನಲ್ಲಿ ಶೂಟ್ ಮಾಡುವುದು, ಸಿನಿಮಾ ಥಿಯೇಟರ್‍ನಿಂದಲೆ ಫೇಸ್‍ಬುಕ್ ಲೈವ್ ಕೊಡುವುದು ಹೆಚ್ಚುತ್ತಿದೆ. ಭರ್ಜರಿ, ಮಫ್ತಿ ಮೊದಲಾದ ಚಿತ್ರಗಳಿಗೆ ಅಭಿಮಾನಿಗಳಿಂದಲೇ ಇಂಥಾದ್ದೊಂದು ಸಮಸ್ಯೆ ಎದುರಾಗಿತ್ತು. ಈಗ ಅಪ್ಪು ಸಿನಿಮಾಗೂ ಮತ್ತದೇ ಅಭಿಮಾನಿಗಳ ಕಾಟ. ಸಿನಿಮಾವನ್ನು ಥಿಯೇಟರ್‍ನಲ್ಲಿ ನೋಡಿದರೆ ಅದರಿಂದ ಚಿತ್ರರಂಗಕ್ಕೆ ಒಳ್ಳೆಯದೇ ಹೊರತು, ಇಂಥ ಅಡ್ಡದಾರಗಳಿಂದ ಅಲ್ಲ.

 • ಪುನೀತ್ ಗಡ್ಡ ಬಿಡೋಕೆ ಇವರೇ ಕಾರಣ..!

  puneeth in beard

  ಪುನೀತ್ ರಾಜ್‍ಕುಮಾರ್, ತಮ್ಮ ಚಿತ್ರಗಳಲ್ಲಿಯಾಗಲೀ, ಹೊರಗೆ ಕಾರ್ಯಕ್ರಮಗಳಲ್ಲಿಯಾಗಲೀ ನೀಟ್ ಶೇವ್ ಆಗಿಯೇ ಕಾಣಿಸಿಕೊಳ್ಳುವವರು. ಅಂಥಾದ್ದರಲ್ಲಿ ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ಹೋದಲ್ಲಿ, ಬಂದಲ್ಲಿ ಗಡ್ಡ ಕಾಣ್ತಾನೇ ಇದೆ. ಜೊತೆಗೆ ಪುನೀತ್ ಸ್ವಲ್ಪ ದಪ್ಪಗಾಗಿರುವುದೂ ಕಾಣ್ತಾ ಇದೆ.

  ಫಿಟ್‍ನೆಸ್ ವಿಚಾರಕ್ಕೆ ಬಂದರೆ, ಪುನೀತ್ ನಂ.1 ಸ್ಥಾನದಲ್ಲಿ ನಿಲ್ಲುವವರು. ಅಂಥಾದ್ದರಲ್ಲಿ ಏನಿದು ಎಂದು ಬೆನ್ನು ಹತ್ತಿದರೆ, ಈ ಗಡ್ಡ ಹಾಗೂ ದಪ್ಪ ದೇಹದ ಹಿಂದಿನ ಕಾರಣಕರ್ತ ಶಶಾಂಕ್ ಎನ್ನುವುದು ಬಹಿರಂಗವಾಗಿದೆ. ನಿರ್ದೇಶಕ ಶಶಾಂಕ್, ಪುನೀತ್ ಅವರ ಸಿನಿಮಾ ನಿರ್ದೇಶಿಸುತ್ತಾರೆ ಎನ್ನುವುದು ಹಳೆಯ ಸುದ್ದಿ. ಶಶಾಂಕ್ ಅವರ ಆ ಚಿತ್ರಕ್ಕಾಗಿಯೇ ಪುನೀತ್ ಇಷ್ಟೆಲ್ಲ ಸರ್ಕಸ್ ಮಾಡುತ್ತಿದ್ದಾರೆ.

  ಪ್ರತಿದಿನ ಮಾಡುತ್ತಿದ್ದ ಜಿಮ್ ವರ್ಕೌಟ್‍ನ ಹೊರತಾಗಿ ಇನ್ನಷ್ಟು ಬೆವರು ಹರಿಸುತ್ತಿದ್ದಾರೆ. ಜಿಮ್ ಟ್ರೈನರ್ ಸುಧಾಕರ್ ಶೆಟ್ಟಿ, ಪುನೀತ್ ಅವರಿಂದ ಹೆವಿ ವರ್ಕೌಟ್ ಮಾಡಿಸುತ್ತಿದ್ದಾರೆ. ಶಶಾಂಕ್ ಅವರ ಚಿತ್ರದಲ್ಲಿ ಪುನೀತ್ ಗಡ್ಡಧಾರಿಯಾಗಿ, ಸಿಕ್ಸ್‍ಪ್ಯಾಕ್‍ನಲ್ಲಿ ಕಾಣಿಸಿಕೊಳ್ತಾರಂತೆ.

  ನನ್ನ ಕಲ್ಪನೆಯ ಪಾತ್ರಕ್ಕೆ ಪುನೀತ್ ಸಿದ್ಧರಾಗುತ್ತಿದ್ಧಾರೆ. ಅದರ ಹೊರತಾಗಿ ಚಿತ್ರ ಹಾಗೂ ಪುನೀತ್ ಪಾತ್ರದ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಶಶಾಂಕ್.

 • ಪುನೀತ್ ಸುತ್ತ 20 ಬೌನ್ಸರ್‍ಗಳ ಕೋಟೆ..!

  anjaniputra movie image

  ಪುನೀತ್ ರಾಜ್‍ಕುಮಾರ್‍ಗೆ ಅಭಿಮಾನಿಗಳು ತಮ್ಮ ಹೃದಯದಲ್ಲಿ ಕೋಟೆ ಕಟ್ಟಿದ್ದರೆ, ಆಂಜನಿಪುತ್ರದ ನಿರ್ದೇಶಕ ಹರ್ಷ, ಪುನೀತ್ ರಾಜ್‍ಕುಮಾರ್ ಸುತ್ತ 20 ಬೌನ್ಸರ್‍ಗಳ ಕೋಟೆ ಕಟ್ಟಿದ್ದಾರೆ. ಆಂಜನಿಪುತ್ರ ಚಿತ್ರದ ಹಾಡು ಹಾಗೂ ಫೈಟ್‍ಗಳ ಚಿತ್ರೀಕರಣ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದೆ. ಚಿತ್ರದ ಒಂದೇ ಒಂದು ಫೋಟೋ ಕೂಡಾ ಹೊರಗೆ ಬರಬಾರದು ಎಂಬ ಕಾರಣಕ್ಕೆ ಮುಂಜಾಗ್ರತೆ ವಹಿಸಿರುವ ನಿರ್ದೇಶಕ ಹರ್ಷ, ಪುನೀತ್ ಸುತ್ತ 20 ಬೌನ್ಸರ್‍ಗಳನ್ನು ಹಾಕಿದ್ದಾರಂತೆ.

  ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ಅಕ್ಟೋಬರ್ 2ರಂದು ಹೈದರಾಬಾದ್‍ನಲ್ಲಿ ನಡೆಯಲಿದೆ. ಬಾಲಿವುಡ್‍ನ ಖ್ಯಾತ ಖಳನಟ ಅಖಿಲೇಶ್ ಮಿಶ್ರಾ ಹಾಗೂ ಪುನೀತ್ ನಡುವೆ ನಡೆಯುವ ಫೈಟ್ ಅದಾಗಿದೆ. ರಶ್ಮಿಕಾ ಹಾಗೂ ಪುನೀತ್ ನಡುವಣ ಹಾಡುಗಳ ಚಿತ್ರೀಕರಣವೂ ಬಿರುಸಿನಿಂದ ನಡೆಯುತ್ತಿದೆ. ಹಾಡಿದ ದೃಶ್ಯಗಳ ಚಿತ್ರೀಕರಣದ ಸ್ಟಿಲ್ಸ್ 

  ಲೀಕ್ ಆಗಿದ್ದೇ ಬೌನ್ಸರ್‍ಗಳ ನಿಯೋಜನೆಗೆ ಕಾರಣವಂತೆ.

 • ಪುನೀತ್ ಸ್ಟಾರ್ ಎನಿಸಲೇ ಇಲ್ಲ - ರಶ್ಮಿಕಾ

  rashmika shares anjaniputra experience

  ಅಂಜನೀಪುತ್ರ ರಿಲೀಸ್‍ಗೆ ಸಿದ್ಧವಾಗಿರುವಾಗುತ್ತಿದೆ. ರಾಜಕುಮಾರ ಚಿತ್ರದ ಅದ್ಭುತ ಯಶಸ್ಸಿನ ಬರುತ್ತಿರುವ ಅಂಜನೀಪುತ್ರದಲ್ಲಿ ಕಿರಿಕ್ ಯಶಸ್ಸಿನ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿ ನಂತರ ತೆರೆಗೆ ಬರುತ್ತಿರುವ ರಶ್ಮಿಕಾರ ಮೊದಲ ಚಿತ್ರ ಅಂಜನೀಪುತ್ರ. ಈ ಚಿತ್ರದಲ್ಲಿ ಪುನೀತ್ ಜೊತೆಗಿನ ಹಾಗೂ ಚಿತ್ರತಂಡದ ಜೊತೆಗಿನ ಅನುಭವಗಳನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ.

  ಪುನೀತ್ ಜೊತೆ ನಟಿಸುವಾಗ, ಸಣ್ಣದೊಂದು ಆತಂಕವಿದ್ದದ್ದು ಹೌದು. ಆದರೆ, ಅವರ ಜೊತೆ ನಟಿಸುವಾಗ, ಅವರೊಬ್ಬ ದೊಡ್ಡ ಸ್ಟಾರ್ ಎಂದು ನನಗೆ ಅನ್ನಿಸಲೇ ಇಲ್ಲ. ಅವರು ಅಷ್ಟು ಸಹಜವಾಗಿ ಸಿಂಪಲ್ ಆಗಿದ್ದರು. ಸ್ಟಾರ್ ನಟರೆಲ್ಲ ಹೀಗೆ ಇರುತ್ತಾರೇನೋ.. ಎತ್ತರಕ್ಕೆ ಬೆಳೆದವರು ಹೇಗೆ ಇರಬೇಕು ಅನ್ನೋದನ್ನು ಪುನೀತ್ ಅವರಿಂದ ಕಲಿಯಬೇಕು ಎಂದು ಹೊಗಳಿದ್ದಾರೆ ರಶ್ಮಿಕಾ.

  ಶೂಟಿಂಗ್ ವೇಳೆ ಚಿತ್ರತಂಡದಲ್ಲಿದ್ದ ದೊಡ್ಡ ದೊಡ್ಡ ಕಲಾವಿದರೆಲ್ಲ ನನ್ನನ್ನು ಹೊಸ ನಟಿ ಎಂಬಂತೆ ನೋಡಲೇ ಇಲ್ಲ. ಅದು ನನಗೆ ಖುಷಿ ಕೊಟ್ಟಿತು ಎಂದಿದ್ದಾರೆ ರಶ್ಮಿಕಾ. ನಿರ್ದೇಶಕ ಹರ್ಷ ಅವರಂತೂ ರಶ್ಮಿಕಾ ಅವರನ್ನು ಮಗುವಿನ ಹಾಗೆ ಟ್ರೀಟ್ ಮಾಡಿದರಂತೆ. ಆದರೆ, ಶೂಟಿಂಗ್ ವೇಳೆ ತಾವು ಅಂದುಕೊಂಡಿದ್ದನ್ನು ಎಷ್ಟೇ ಕಷ್ಟವಾದರೂ ಪಡೆದೇ ತೀರುತ್ತಿದ್ದರು ಎಂದಿದ್ದಾರೆ ರಶ್ಮಿಕಾ.

   

 • ಪುನೀತ್ ಹೇಳಿದ ಮುತ್ತಿನಂತಾ ಮಾತುಗಳು

  appu speak up

  ಪುನೀತ್ ರಾಜ್‍ಕುಮಾರ್ ಹೆಸರಾಗಿರುವುದು ಸರಳತೆಗೆ. ವಿನಯಕ್ಕೆ. ಆ ಗುಣವೇ ಅವರನ್ನು ಪವರ್ ಸ್ಟಾರ್ ಆಗಿಸಿದೆ. ಎಲ್ಲರನ್ನೂ ಪ್ರೀತಿಸುವ ಅವರ ಆ ಗುಣವೇ ಚಿತ್ರರಂಗದಲ್ಲಿ ಅವರ ಗೌರವ ಇಮ್ಮಡಿಗೊಳ್ಳುವಂತೆ ಮಾಡಿದೆ. ಈಗ ಅಂಜನೀಪುತ್ರದ ಬಿಡುಗಡೆಯ ಸಮಯ. ರಾಜಕುಮಾರನ ಸಕ್ಸಸ್ ನಂತರ ಬಿಡುಗಡೆಯಾಗುತ್ತಿರುವ ಚಿತ್ರ, ಭರ್ಜರಿ ನಿರೀಕ್ಷೆ ಹುಟ್ಟಿಸಿದೆ. ಈ ಸಮಯದಲ್ಲಿ ಅವರು ಆಡಿರುವ ಈ ಮಾತುಗಳೇ, ಅವರೇಕೆ ರಾಜಕುಮಾರ ಎಂಬುದನ್ನು ಸಾರಿ ಹೇಳುತ್ತವೆ.

  ಹರ್ಷ ಅವರ ಜೊತೆ ನನ್ನ ಸ್ನೇಹ ಸುಮಾರು 20 ವರ್ಷಗಳದ್ದು. ಅವರು ಕೊರಿಯಾಗ್ರಫರ್ ಆದ ದಿನದಿಂದಲೂ ಒಟ್ಟಿಗೇ ಸಿನಿಮಾ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ. 

  ಮೇಕಿಂಗ್ ವಿಚಾರಕ್ಕೆ ಬಂದರೆ, ಹರ್ಷ ಅವರ ಎಂಜಾಯ್ ಮಾಡುತ್ತಾ ಶೂಟಿಂಗ್ ಮುಗಿಸಿದ್ದೇನೆ. ಅದರ ಕ್ರೆಡಿಟ್ ಸಲ್ಲಬೇಕಿರೋದು ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ನಿರ್ದೇಶಕ ಹರ್ಷ ಅವರಿಗೆ.

  ಇದು ರೀಮೇಕ್ ಆಗಿದ್ದರೂ, ವೊರಿಜಿನಲ್ ಚಿತ್ರಕ್ಕೂ ಈ ಚಿತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಹಾಡುಗಳು ಹಾಗೂ ಸಾಹಸ ದೃಶ್ಯಗಳು ನನಗೇ ಅಚ್ಚರಿ ಹುಟ್ಟಿಸುವಂತೆ ಮೂಡಿಬಂದಿವೆ. ಥ್ಯಾಕ್ಸ್ ಟು ರವಿವರ್ಮ.

  ರಶ್ಮಿಕಾ ಅವರಿಗೆ ನನ್ನ ವಯಸ್ಸಿನ ಅರ್ಧದಷ್ಟು ವಯಸ್ಸು. ಆದರೆ, ರಿಯಲಿ ವಂಡರ್‍ಫುಲ್.

  ರಮ್ಯ ಕೃಷ್ಣ ಅವರ ಜೊತೆ ನಟಿಸಿದ್ದೇನೆ ಎನ್ನುವುದೇ ನನಗೆ ಖುಷಿ. ಸಾಧುಕೋಕಿಲ, ರವಿಶಂಕg, ಮುಖೇಶ್ ತಿವಾರಿ, ಅಖಿಲೇಂದ್ರ ಮಿಶ್ರಾ.. ಅವರ ಬಗ್ಗೆ ನಾನು ಹೇಳುವುದೇನೂ ಇಲ್ಲ. ಅವರೆಲ್ಲ ಜೊತೆ ನಾನೂ ನಟಿಸಿದ್ದೆನೆ ಎಂಬ ಸಂಭ್ರಮವಿದೆ.

   

  ಹೀಗೆ ಪುನೀತ್ ನಿರರ್ಗಳವಾಗಿ ಮಾತನಾಡುತ್ತಾ, ಸಹಕಲಾವಿದರನ್ನು ಹೊಗಳುತ್ತಾ ಹೋಗುತ್ತಾರೆ. ಅದು ಕೇವಲ ತೋರಿಕೆಗೆ ಅನ್ನಿಸೋದಿಲ್ಲ. ಏಕೆಂದರೆ, ಅವರು ಇರೋದೇ ಹಾಗೆ. ಅದ್ಸರಿ, ಅಂಜನೀಪುತ್ರ ನೋಡಿದ್ರಾ..?

 • ಬರ್ತಾವ್ನಪ್ಪೋ ಬರ್ತಾವ್ನೆ.. ಅಂಜನೀಪುತ್ರ ಬತ್ತಾವ್ನೆ..

  anjaniputra audio launch

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್‍ನ ಮೊದಲ ಸಿನಿಮಾ ಅಂಜನೀಪುತ್ರ. ಜೊತೆಗೆ ರಶ್ಮಿಕಾ ಮಂದಣ್ಣ ಎಂಬ ಮುಂಜಾನೆಯ ಚೆಲುವೆ. ರಮ್ಯಕೃಷ್ಣ, ರವಿಶಂಕರ್, ಸಾಧುಕೋಕಿಲ, ಶೋಭರಾಜ್, ಚಿಕ್ಕಣ್ಣ, ವಿ.ಮನೋಹರ್ ಮೊದಲಾದ ಪ್ರತಿಭೆಗಳ ಮಿಲನ. ರವಿ ಬಸ್ರೂರ್ ಸಂಗೀತ ಇರೋ ಚಿತ್ರದ ಹವಾ ಜೋರಾಗಿಯೇ ಇದೆ.

  ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಸೀಕ್ರೆಟ್ ಕಾಪಾಡಿಕೊಂಡಿರುವ ಚಿತ್ರತಂಡ, ನೇರವಾಗಿ ಆಡಿಯೋ ರಿಲೀಸ್ ಮೂಲಕ ಹೊರಗೆ ಕಾಣಿಸಿಕೊಳ್ತಾ ಇದೆ. ನವೆಂಬರ್ 24ಕ್ಕೆ ಅಂಜನೀಪುತ್ರದ ಆಡಿಯೋ ರಿಲೀಸ್. ಚಿತ್ರದ ಆಡಿಯೋ ಪುನೀತ್ ರಾಜ್‍ಕುಮಾರ್ ಸ್ವಂತ ಆಡಿಯೋ ಕಂಪೆನಿ ಬ್ಯಾನರ್‍ನಿಂದ ಹೊರಬರುತ್ತಿದೆ. ಸಹಜವಾಗಿಯೇ ಚಿತ್ರದ ಮೇಲೆ ನಿರೀಕ್ಷೆಗಳು ಸಿಕ್ಕಾಪಟ್ಟೆ ಇವೆ.

 • ಮಧ್ಯರಾತ್ರಿ ಬರ್ತಾರೆ ಪುನೀತ್-ರಶ್ಮಿಕಾ..!

  anjaniputra mid night show

  ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಮಧ್ಯರಾತ್ರಿಯೇ ರಿಲೀಸ್ ಆಗ್ತಿದೆ. ನೀವು ಒಂದ್ಸಲ ಶೋ ಟೈಮಿಂಗ್ಸ್ ನೋಡಬೇಕು. ಶಾಕ್ ಆಗಿಬಿಡ್ತೀರಿ. ಬೆಂಗಳೂರು, ಬಳ್ಳಾರಿ, ಹೊಸಪೇಟೆ.. ಹೀಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಅಂಜನೀಪುತ್ರ ಮಧ್ಯರಾತ್ರಿಯೇ ದರ್ಶನ ಕೊಡಲಿದ್ದಾನೆ.

  ಬೆಳಗಾವಿ, ಶಿವಮೊಗ್ಗ, ದಾವಣಗೆರೆಯ ಥಿಯೇಟರುಗಳಲ್ಲಿ ಅಂಜನೀಪುತ್ರನ ಮೊದಲ ಶೋ, ಮಧ್ಯರಾತ್ರಿ 12 ಗಂಟೆಗೆ ಫಿಕ್ಸ್ ಆಗಿದೆ. ಬೆಂಗಳೂರಿನ 10ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಮುಂಜಾನೆ 5 ಗಂಟೆಗೇ ಮೊದಲ ಶೋ ಶುರುವಾಗಲಿದೆ.

  ಚಿತ್ರ ಮೇಯ್ನ್ ಥಿಯೇಟರ್ ತ್ರಿವೇಣಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ 78 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ. 

 • ರಾಜಕುಮಾರನ ಭಾರ ಹೊತ್ತಿಲ್ಲ ಪುನೀತ್

  puneeth rajkumar Image

  ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ಇದೇ ವಾರ ರಿಲೀಸಾಗುತ್ತಿದೆ. ಮುಂದಿನ ಗುರುವಾರ ಮಧ್ಯರಾತ್ರಿಯೇ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಆದರೆ, ಚಿತ್ರದ ಬಗ್ಗೆ ಅತಿ ದೊಡ್ಡ ನಿರೀಕ್ಷೆ ಯಾವುದು ಗೊತ್ತಾ..? ಅಂಜನೀಪುತ್ರ, ರಾಜಕುಮಾರ ಚಿತ್ರದ ನಂತರ ಬರುತ್ತಿರುವ ಮೊದಲ ಪುನೀತ್ ಸಿನಿಮಾ. ನಿರೀಕ್ಷೆಯ ಭಾರ ಸಹಜವಾಗಿಯೇ ಹೆಚ್ಚಾಗಿದೆ.

  ಆದರೆ, ಅದರ ಭಾರ ನಾನು ಹೊರುವುದಿಲ್ಲ. ರಾಜಕುಮಾರ ದೊಡ್ಡ ಸಕ್ಸಸ್ ನಿಜ. ಆದರೆ, ಸಿನಿಮಾದಿಂದ ಸಿನಿಮಾಗೆ ನಾವು ಬದಲಾಗಲೇಬೇಕು. ಇಲ್ಲಿ ನಾನು ಒಂದು ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಪಾತ್ರವಷ್ಟೇ ಆಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ ಪುನೀತ್.

  ಅಂಜನೀಪುತ್ರದ ನಿರ್ದೇಶಕ ಹರ್ಷ. ಪುನೀತ್ & ಹರ್ಷ ಸುಮಾರು 18 ವರ್ಷಗಳಿಂದ ಸ್ನೇಹಿತರು. ಆ ಸ್ನೇಹ ಸಿನಿಮಾ ನಿರ್ಮಾಣದಲ್ಲೂ ಕೆಲಸ ಮಾಡಿದೆ. 

 • ಸ್ಕಾಟ್​ಲೆಂಡ್​ನಿಂದ ಪುನೀತ್ ರಾಜ್​ಕುಮಾರ್ ಟೀಂ ವಾಪಸ್

  anjaniputra teams returns from scotland

  ಪುನೀತ್ ರಾಜ್​ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ಅಂಜನಿಪುತ್ರ ಚಿತ್ರತಂಡ ವಿದೇಶದ ಚಿತ್ರೀಕರಣ ಮುಗಿಸಿ ವಾಪಸ್ ಆಗಿದೆ. ಸ್ಕಾಟ್​ಲೆಂಡ್​ನಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಹೋಗಿದ್ದ ಚಿತ್ರತಂಡ, ಈಗ ಶೇ.80ರಷ್ಟು ಚಿತ್ರೀಕರಣ ಪೂರೈಸಿದೆ. ಸ್ಕಾಟ್​ಲೆಂಡ್​ನಲ್ಲಿ ನಡೆದ ಶೂಟಿಂಗ್​ನ ಕೆಲವು ಫೋಟೋಗಳೂ ಕೂಡಾ ಲಭ್ಯವಾಗಿವೆ.

  ಡಿಸೆಂಬರ್​ನಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ತಮಿಳಿನ ಪೂಜೈ ಚಿತ್ರದ ರೀಮೇಕ್ ಆಗಿರುವ ಆಂಜನಿಪುತ್ರ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಏಕೆಂದರೆ, ಅದು ಹರ್ಷ ನಿರ್ದೇಶನದ ಚಿತ್ರ. ಭಜರಂಗಿ, ವಜ್ರಕಾಯ, ಮಾರುತಿ 800 ಚಿತ್ರಗಳ ನಂತರ ಮತ್ತೊಂದು ಆಂಜನೇಯ ಹೆಸರಿನಲ್ಲಿ ಬರುತ್ತಿರುವ ಚಿತ್ರ. ಇನ್ನು ಪುನೀತ್​ಗೆ ರಾಜಕುಮಾರದಂತಹ ಸೂಪರ್ ಹಿಟ್ ಚತ್ರ ಕೊಟ್ಟ ನಂತರ ಬರುತ್ತಿರುವ ಚಿತ್ರ. ಹೀಗಾಗಿ ಅವರಿಗೂ ಭಾರೀ ನಿರೀಕ್ಷೆಯಿದೆ. ರಶ್ಮಿಕಾ ಮಂದಣ್ಣಗೆ ಕೂಡಾ ಅಷ್ಟೆ. ಕಿರಿಕ್ ಪಾರ್ಟಿ ಚಿತ್ರದ ನಂತರ ತೆರೆಗೆ ಬರುತ್ತಿರುವ ಚಿತ್ರವಾದ್ದರಿಂದ ಅವರೂ ಚಿತ್ರದ ಮೇಲೆ ಭಾರೀ ಭರವಸೆ ಇರಿಸಿಕೊಂಡಿದ್ದಾರೆ.

  Related Articles :-

  ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

  Anjaniputra Shooting Put On Hold

  Puneeth's New Film Titled Anjaniputra