` darling krishna, - chitraloka.com | Kannada Movie News, Reviews | Image

darling krishna,

 • ಲಕ್ಕಿ ಮ್ಯಾನ್ ಡಬ್ಬಿಂಗ್`ನಲ್ಲಿ ಡಾರ್ಲಿಂಗ್ ಕೃಷ್ಣ ಸಂಕಟವೇ ಬೇರೆ..

  ಲಕ್ಕಿ ಮ್ಯಾನ್ ಡಬ್ಬಿಂಗ್`ನಲ್ಲಿ ಡಾರ್ಲಿಂಗ್ ಕೃಷ್ಣ ಸಂಕಟವೇ ಬೇರೆ..

  ಡಾರ್ಲಿಂಗ್ ಕೃಷ್ಣ ಹೀರೋ ಆಗುವುದಕ್ಕೆ ಮೊದಲಿನಿಂದಲೂ ಪುನೀತ್ ಅವರ ಅಭಿಮಾನಿ. ಆರಂಭದ ದಿನಗಳಲ್ಲಿ ಪುನೀತ್ ಅವರಿಂದ ಬೆನ್ನು ತಟ್ಟಿಸಿಕೊಂಡಿದ್ದ ಕೃಷ್ಣ ಜೊತೆಗೆ ಪುನೀತ್ ಇತ್ತೀಚೆಗೆ ನಟಿಸಿದ್ದರು. ಕೃಷ್ಣ ಅವರ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ದೇವರ ಪಾತ್ರದಲ್ಲಿ ನಟಿಸಿದ್ದು, ಪ್ರಭುದೇವ ಜೊತೆ ಡ್ಯಾನ್ಸ್ ಕೂಡಾ ಮಾಡಿದ್ದಾರೆ.

  ಇತ್ತೀಚೆಗೆ ಆ ಚಿತ್ರದ ಡಬ್ಬಿಂಗ್ ಮುಗಿಸಿದ ಕೃಷ್ಣ ಅವರಿಗೆ ಡಬ್ಬಿಂಗ್ ಮಾಡುವಾಗ ಬಹಳ ಕಷ್ಟವಾಯಿತಂತೆ. ಅಪ್ಪು ಸರ್ ಜೊತೆಗಿನ ಶೂಟಿಂಗ್ ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇದು ನನಗೆ ಎಂದೆಂದಿಗೂ ವಿಶೇಷ. ಡಬ್ಬಿಂಗ್ ಮಾಡುವಾಗ ತುಂಬಾ ಕಷ್ಟವಾಯಿತು ಎಂದು ಹೇಳಿದ್ದಾರೆ ಕೃಷ್ಣ.

  ಲಕ್ಕಿ ಮ್ಯಾನ್, ತಮಿಳಿನ ಓ ಮೈ ಕಡವಳೆ ಚಿತ್ರದ ರೀಮೇಕ್. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಇಲ್ಲಿ ಪುನೀತ್ ಮಾಡಿದ್ದಾರೆ. ಕಷ್ಟದಲ್ಲಿರೋ ನಾಯಕನಿಗೆ ಸಹಾಯ ಮಾಡುವ ದೇವರ ಪಾತ್ರ ಪುನೀತ್ ಅವರದ್ದು.

 • ಲವ್ ಮಾಕ್‍ಟೇಲ್ 2 ಟ್ರೇಲರ್ ರಿಲೀಸ್ ಮಾಡೋಕೆ ಇಷ್ಟೊಂದ್ ಜಗಳಾನಾ?

  ಲವ್ ಮಾಕ್‍ಟೇಲ್ 2 ಟ್ರೇಲರ್ ರಿಲೀಸ್ ಮಾಡೋಕೆ ಇಷ್ಟೊಂದ್ ಜಗಳಾನಾ?

  ಲವ್ ಮಾಕ್‍ಟೇಲ್ 2 ಸಿನಿಮಾ ರೆಡಿಯಾಗಿದೆ. ರಿಲೀಸ್ ಮಾಡ್ತೀವಿ ಅಂತಾ ಹೇಳ್ಕೊಂಡ್ ಬಂದಿರೋ ಕೃಷ್ಣ ಇನ್ನು ಟ್ರೇಲರ್ ರಿಲೀಸ್ ಮಾಡಿಲ್ಲ. ಅದು ನಿಧಿಮಾಗೆ ತಂದಿರೋ ಕೋಪ ಅಷ್ಟಿಷ್ಟಲ್ಲ. ಥೇಟು ಲವ್ ಮಾಕ್‍ಟೇಲ್ ಸ್ಟೈಲ್‍ನಲ್ಲೇ ಕೃಷ್ಣನಿಗೆ ಕ್ಲಾಸ್ ತಗೊಂಡಿದ್ದಾರೆ ಮಿಲನಾ ನಾಗರಾಜ್.

  ಅಫ್‍ಕೋರ್ಸ್.. ಅದು ಟ್ರೇಲರ್ ರಿಲೀಸ್ ಮಾಡೋಕೆ ಬಿಟ್ಟಿರೋ ಟ್ರೇಲರ್ ತರಾ ಕಾಣಿಸಿದ್ರೆ ಅಚ್ಚರಿಯಿಲ್ಲ. ಲವ್ ಮಾಕ್‍ಟೇಲ್ ನಲ್ಲಿ ನಿಧಿಮಾ ಸತ್ತು ಹೋಗಿದ್ದಾರೆ. 2ನೇ ಭಾಗದಲ್ಲಿ ಅವರು ನೆನಪಾಗಿ ಇರ್ತಾರೆ. ಕಥೆ ಹೊಸದಾಗಿಯೇ ಶುರುವಾಗಲಿದೆ. ಹೀಗಿರೋವಾಗ ಕಥೆ ಹೇಗಿರಬಹುದು ಅನ್ನೋ ಕುತೂಹಲವಂತೂ  ಇದೆ. ಕೃಷ್ಣ ಅವರಿಗೆ ಲವ್ ಮಾಕ್‍ಟೇಲ್‍ನಲ್ಲಷ್ಟೇ ಅಲ್ಲ, ರಿಯಲ್ ಲೈಫಲ್ಲೂ ಹೀರೋಯಿನ್ ಆಗಿರೋ ಮಿಲನಾ, ಚಿತ್ರದ ನಿರ್ಮಾಪಕಿಯೂ ಹೌದು.

  ಈಗಾಗಲೇ ಸಂಚಾರಿಯಾಗು ನೀ, ನಿಂದೇನೇ ಜನುಮಾ, ಇದೇ ಸ್ವರ್ಗ ಹಾಗೂ ಈ ಪ್ರೇಮ ಹಾಡುಗಳನ್ನ ಬಿಟ್ಟಿರೋ ಕೃಷ್ಣ, ಟ್ರೇಲರ್‍ನ್ನೂ ಶೀಘ್ರದಲ್ಲೇ ರಿಲೀಸ್ ಮಾಡೋ ಭರವಸೆಯನ್ನಂತೂ ಕೊಟ್ಟಿದ್ದಾರೆ. ಯಾವಾಗ..? ವೇಯ್ಟ್..

 • ಲವ್ ಮಾಕ್ಟೇಲ್ 2 ರಿಲೀಸ್ ಡೇಟ್ ಫಿಕ್ಸ್

  ಲವ್ ಮಾಕ್ಟೇಲ್ 2 ರಿಲೀಸ್ ಡೇಟ್ ಫಿಕ್ಸ್

  ಲವ್ ಮಾಕ್`ಟೇಲ್. ಲಾಕ್ ಡೌನ್ ಮುಂಚೆ ಬಂದು ಹೃದಯ ತಟ್ಟಿ ಗೆದ್ದಿದ್ದ ಚಿತ್ರ. ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟಿಸಿ ನಿರ್ಮಿಸಿದ್ದ ಚಿತ್ರದ ಸೀಕ್ವೆಲ್ ಲವ್ ಮಾಕ್ಟೇಲ್ 2, ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 11ಕ್ಕೆ ರಿಲೀಸ್.

  ಮೊದಲ ಚಿತ್ರದಲ್ಲಿ ಮಿಲನಾ ನಾಗರಾಜ್ ಪಾತ್ರ ಸಾಯುತ್ತೆ. ಆದರೆ.. ಮಾಕ್ಟೇಲ್ 2ನಲ್ಲಿಯೂ ಮಿಲನಾ ಇದ್ದಾರೆ. ಹೇಗೆ ಅನ್ನೋದನ್ನ ಡೈರೆಕ್ಟರ್ ಡಾರ್ಲಿಂಗ್ ಕೃಷ್ಣ ಫೆಬ್ರವರಿ 11ಕ್ಕೆ ಹೇಳ್ತಾರಂತೆ. ರಚೆಲ್ ಡೇವಿಡ್ ನಾಯಕಿಯಾಗಿರೋ ಚಿತ್ರಕ್ಕೆ ಸಂಗೀತ ನೀಡಿರೋದು ನಕುಲ್ ಅಭಯಂಕರ್.

 • ಲವ್ ಮಾಕ್‍ಟೈಲ್ ಚಿತ್ರಕ್ಕೆ ಕಿಚ್ಚನ ಸಪೋರ್ಟು

  love mocktail gets sudeep's support

  ಲವ್ ಮಾಕ್ವೆಲ್, ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿರುವ ಚಿತ್ರ. ಈ ಚಿತ್ರಕ್ಕೆ ಮಿಲನ ನಾಗರಾಜ್ ನಾಯಕಿ. ನಾಯಕಿ ಅಷ್ಟೇ ಅಲ್ಲ, ನಿರ್ಮಾಪಕಿಯೂ ಹೌದು. ಐಟಿ ಉದ್ಯೋಗಿ.. ಆದರೆ ಮುಗ್ದ ಹುಡುಗಿ.. ಇಂತಹ ತದ್ವಿರುದ್ಧ ಭಾವ ಹೇಳಿಯೇ ಕುತೂಹಲ ಹುಟ್ಟಿಸಿಬಿಡ್ತಾರೆ ಮಿಲನ. ಅವರ ಪ್ರಥಮ ಸಾಹಸಕ್ಕೆ ಕಿಚ್ಚ ಸುದೀಪ್ ಸಪೋರ್ಟ್ ಸಿಕ್ಕಿರುವುದೇ ಅವರ ಖುಷಿ ಹೆಚ್ಚಿಸಿದೆ.

  ಕೃಷ್ಣ ಕಥೆ ಹೇಳಿದಾಗ ಕಥೆ ಇಷ್ಟವಾಯ್ತು. ತುಂಬಾ ತುಂಬಾ ಇಷ್ಟವಾಯ್ತು. ಹೀಗಾಗಿ ಕೃಷ್ಣ ಮತ್ತು ನಾನೇ ನಿರ್ಮಾಣದ ಹೊಣೆ ಹೊತ್ತುಕೊಂಡೆವು. ನಾವಂದುಕೊಂಡಂತೆಯೇ ಸಿನಿಮಾ ಬಂದಿದೆ ಎನ್ನುವ ಮಿಲನಗೆ ಸುದೀಪ್ ನೀಡಿರುವ ಬೆಂಬಲ ಅದ್ಭುತ ಎನಿಸಿದೆ.

  ಲವ್ ಮಾಕ್‍ಟೈಲ್ ಚಿತ್ರಕ್ಕೆ ಸುದೀಪ್ ಅವರೇ ಧ್ವನಿ ಕೊಟ್ಟಿದ್ದಾರೆ. ಚಿತ್ರದ 2 ಹಾಡುಗಳನ್ನು ನೋಡಿ ಬೆನ್ನು ತಟ್ಟಿದ್ದಾರೆ. ಸುದೀಪ್ ಅವರ ವಾಯ್ಸ್, ಚಿತ್ರವನ್ನು ಹೊಸದೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗಿದೆ ಎನ್ನುತ್ತಾರೆ ಮಿಲನ.

 • ವರ್ಜಿನ್ ಅಲ್ಲ ಮಿ.ಬ್ಯಾಚುಲರ್

  ವರ್ಜಿನ್ ಅಲ್ಲ ಮಿ.ಬ್ಯಾಚುಲರ್

  ಲವ್ ಮಾಕ್‍ಟೇಲ್ ಹಿಟ್ ಆದ ಬೆನ್ನಲ್ಲೇ ಶುರುವಾದ ಚಿತ್ರ ವರ್ಜಿನ್. ಡಾರ್ಲಿಂಗ್ ಕೃಷ್ಣ ಮತ್ತು ನಿಮಿಕಾ ರತ್ನಾಕರ್ ಅಭಿನಯದ ಚಿತ್ರ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ. ನಾಯ್ಡು ಬಂದರ್ ನಿರ್ದೇಶಿಸಿರುವ ಚಿತ್ರದ ಪ್ರಮುಖ ದೃಶ್ಯಗಳ ಶೂಟಿಂಗ್ ಮುಗಿದಿದ್ದು, ಕೃಷ್ಣ ಮತ್ತು ಮಿಲನ ನಾಗರಾಜ್ ಪೋರ್ಷನ್ ಬಾಕಿಯಿದೆಯಂತೆ. ಹೌದು, ಚಿತ್ರದಲ್ಲಿ ಮಿಲನ ನಾಗರಾಜ್ ಹೀರೋಯಿನ್ ಅಲ್ಲ. ಆದರೆ ಪ್ರಮುಖ ಪಾತ್ರ. ಇನ್ನೂ ವಿಶೇಷವೆಂದರೆ ಚಿತ್ರದ ಟೈಟಲ್ ಬದಲಾಗಿದೆ.

  ಚಿತ್ರದ ಕಥೆ ಒಬ್ಬ ಬ್ಯಾಚುಲರ್ ಹುಡುಗನದ್ದು. ಆತನಿಗೆ ಮದುವೆಯಾಗುವುದೇ ಕನಸು. ಆ ಹಾದಿಯಲ್ಲಿ ಅತ ಸೋಲುತ್ತಲೇ ಹೋಗುತ್ತಾನೆ. ಸಖತ್ ತಮಾಷೆಯ ಪ್ರಸಂಗಗಳಿವೆ. ಹೀಗಾಗಿ ವರ್ಜಿನ್ ಎಂದು ಇಟ್ಟಿದ್ದ ಹೆಸರು, ಯಾಕೋ ರೀಚ್ ಆಗಲ್ಲ ಎನ್ನಿಸಿತು. ಹೀಗಾಗಿ ಚಿತ್ರತಂಡ ಒಟ್ಟಿಗೇ ಕುಳಿತು ಚರ್ಚಿಸಿ ಮಿ.ಬ್ಯಾಚುಲರ್ ಎಂದು ಹೆಸರಿಡಲು ತೀರ್ಮಾನಿಸಿತು ಎಂದಿದ್ದಾರೆ ಕೃಷ್ಣ. ಅಂದಹಾಗೆ ಈ ಯೂತ್ ಲವ್ ಸ್ಟೋರಿಗೆ ಶ್ರೀನಿವಾಸ್ ಮತ್ತು ಸ್ವರ್ಣಲತಾ ನಿರ್ಮಾಪಕರು.

 • ಶ್ರೀಕೃಷ್ಣ@Gmail.com ಆರಂಭ

  srikrishna@gmail.com launche

  ಲವ್ ಮಾಕ್‍ಟೇಲ್ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ ಶ್ರೀಕೃಷ್ಣ@Gmail.com  ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಅರ್ಜುನ್ ಜನ್ಯ ಸ್ಟುಡಿಯೊದಲ್ಲಿ ಶ್ರೀಕೃಷ್ಣ@Gmail.com  ಚಿತ್ರದ ಮುಹೂರ್ತ ನೆರವೇರಿತು. ಚಿತ್ರಕ್ಕೆ ನಾಗಶೇಖರ್ ನಿರ್ದೇಶಕ. ಅಮರ್ ಚಿತ್ರದ ನಂತರ ನಾಗಶೇಖರ್ ನಿರ್ದೇಶಿಸುತ್ತಿರುವ ಚಿತ್ರವಿದು. ಸಂದೇಶ್ ನಾಗರಾನ್ ಬ್ಯಾನರಿನಲ್ಲೇ ತಯಾರಾಗುತ್ತಿರುವ ಚಿತ್ರ ಶ್ರೀಕೃಷ್ಣ@Gmail.com

  ಕೃಷ್ಣ ಎದುರು ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿದ್ದಾರೆ ಎನ್ನಲಾಗಿದೆ. ಕನ್ಫರ್ಮೇಷನ್ ಸಿಕ್ಕಿಲ್ಲ. ಹಾಗಾದರೆ ಶ್ರೀಕೃಷ್ಣ@Gmail.com ಕಥೆ ಏನಿರಬಹುದು ಎಂಬ ಕುತೂಹಲ ತಕ್ಷಣ ಮೂಡುತ್ತೆ. ಅಣ್ಣಾವ್ರ ಫೋಟೋ ಇಟ್ಟುಕೊಂಡು ಮೊದಲ ಸೀನ್ ಚಿತ್ರೀಕರಿಸಲಾಗಿದೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery