` rashmika, - chitraloka.com | Kannada Movie News, Reviews | Image

rashmika,

 • ಬ್ರೇಕು ಸಿಕ್ಕ ತಕ್ಷಣ ರಶ್ಮಿಕಾ-ರಕ್ಷಿತ್ ಜೋಡಿ ಅಲೆಲೆಲೆಲೆ..!

  rashmika rakshit city rounds

  ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಜೋಡಿ, ಸದ್ಯಕ್ಕೆ ಕನ್ನಡದ ಹಾಟ್ ಜೋಡಿ. ಎಂಗೇಜ್‍ಮೆಂಟ್ ಆಗಿದ್ದರೂ, ಕೆಲಸದ ಒತ್ತಡಗಳಿಂದಾಗಿ ಇಬ್ಬರೂ ಬ್ಲಾಕ್ & ವೈಟ್ ಕನಸುಗಳಿಗಷ್ಟೇ ಸೀಮಿತವಾಗಿದ್ದರು. ಅವರ ಬ್ಲಾಕ್ & ವೈಟ್ ಕನಸು ಬಣ್ಣವಾಗಿದ್ದು ಅಂಜನಿಪುತ್ರದ ಪ್ರೆಸ್‍ಮೀಟ್ ದಿನ.

  ರಶ್ಮಿಕಾ, ಹೈದರಾಬಾದ್, ಬೆಂಗಳೂರು ಎಂದು ಓಡಾಡುತ್ತಿದ್ದರೆ, ಇತ್ತ ರಕ್ಷಿತ್ ಶೆಟ್ಟಿ, ಸಿನಿಮಾ, ಸ್ಕ್ರಿಪ್ಟು, ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ. ಇದರ ಮಧ್ಯೆ ಪ್ಲಾನ್ ಮಾಡಿ ಒಂದಿಡೀ ದಿನ ಒಟ್ಟಿಗೇ ಸುತ್ತವ ಪ್ಲಾನ್ ಮಾಡಿದ್ದಾರೆ. ಬೆಂಗಳೂರು ಸುತ್ತೋಕೆ ಕಾರ್‍ಗಿಂತ ಬೈಕೇ ಬೆಸ್ಟು ಎಂದುಕೊಂಡ ರಕ್ಷಿತ್, ಬೈಕ್‍ನಲ್ಲಿಯೇ ಸುತ್ತಾಡಿದ್ದಾರೆ. ಅವರ ಅಂದ, ಅದೃಷ್ಟವನ್ನೂ ಹಿಂದಿನ ಸೀಟ್‍ನಲ್ಲಿ ಕೂರಿಸಿಕೊಂಡು.

  ಬೈಕ್ ಎಂದರೆ ಭಯ ಬೀಳುವ ರಶ್ಮಿಕಾ, ರಕ್ಷಿತ್ ಧೈರ್ಯದ ಮೇಲೆ ಸುತ್ತಾಡಿದ್ದಾರೆ. ಹೆಲ್ಮೆಟ್ ಹಾಕಿಕೊಂಡರೆ ಯಾರಿಗೂ ಗುರುತು ಸಿಕ್ಕೋದಿಲ್ಲ ಎಂದುಕೊಂಡಿದ್ದರಂತೆ. ಇದರ ಮಧ್ಯೆಯೂ ಅಭಿಮಾನಿಯೊಬ್ಬ ಫೋಟೋ ತೆಗೆದು, ಆ ಫೋಟೋ ವೈರಲ್ ಆಗಿಬಿಟ್ಟಿದೆ.

 • ಭೂತದ ಬಾಯಲ್ಲಿ ರಶ್ಮಿಕಾ ಭವಿಷ್ಯ..!

  rashmika's future prediction by bhoota

  ರಶ್ಮಿಕಾ ಮಂದಣ್ಣ ಈ ಕಿರಿಕ್ ಚೆಲುವೆ, ಚಮಕ್ ಚೆಲುವೆ ನಟಿಯಾಗುತ್ತಾಳೆ ಎಂದು ಭೂತವೊಂದು ಮೊದಲೇ ಭವಿಷ್ಯ ನುಡಿದಿತ್ತಂತೆ. ಆಗಿನ್ನೂ ರಶ್ಮಿಕಾ ನಟಿಯಾಗಿರಲಿಲ್ಲ. ಕಿರಿಕ್ ಪಾರ್ಟಿ ಚಿತ್ರದ ಆಫರ್ ಕೂಡಾ ಸಿಕ್ಕಿರಲಿಲ್ಲ. ಚಿತ್ರರಂಗಕ್ಕೆ ಬರುವ ಬಗ್ಗೆ ಯಾವುದೇ ಸ್ಪಷ್ಟತೆಯೂ ಇರಲಿಲ್ಲ. ಆಗಲೇ ಭೂತವೊಂದು ಭವಿಷ್ಯ ಹೇಳಿದ್ದ ವಿಚಾರವನ್ನು ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ನೆನಪಿಸಿಕೊಂಡಿದ್ದಾರೆ.

  ಮಡಿಕೇರಿ, ಮಂಗಳೂರು ಭಾಗದಲ್ಲಿ ಭೂತಾರಾಧನೆಯೇ ವಿಶೇಷ. ಹಾಗೆ ಒಂದು ಕೋಲಕ್ಕೆ ಹೋಗಿದ್ದಾಗ, ಕೋಲ ಕಟ್ಟಿದ್ದವರ ಬಾಯಲ್ಲಿ ರಶ್ಮಿಕಾ ನಟಿ ಎಂಬ ಮಾತು ಬಂದಿತ್ತಂತೆ. ಕೋಲ ಮುಗಿದ ಮೇಲೆ ಪ್ರಸಾದ ನೀಡುವಾಗ ಭೂತ, ನೀನು ನಟಿಯಲ್ಲವೇ ಎಂದು ಕೇಳಿತ್ತಂತೆ. ಆಗ ಆಶ್ಚರ್ಯವಾಗಿತ್ತು, ತುಂಬಾ ಯೋಚನೆ ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ ಸುಮನ್ ಮಂದಣ್ಣ.

  ಕಳೆದ ತಿಂಗಳಷ್ಟೇ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಜೊತೆ ಭೂತಾರಾಧನೆಗೆ ಹೋಗಿದ್ದರು. ಅದೊಂದು ಅದ್ಭುತ ಅನುಭವ. ನೋಡೋಕೆ ಚೆಂದವಾಗಿರುತ್ತೆ ಎಂದು ನೆನಪಿಸಿಕೊಳ್ತಾರೆ ರಶ್ಮಿಕಾ.

 • ಮಂಜುಳಾ ನೆನಪಿಸ್ತಾರಂತೆ ಯಜಮಾನಿ..!

  rashmika's acing reminds of manjula

  ಒಂದಂತೂ ಸತ್ಯ. ಸತ್ಯವೇ ಇರಬೇಕು. ರಶ್ಮಿಕಾ ಮಂದಣ್ಣ ಅವರದ್ದು ಯಜಮಾನ ಚಿತ್ರದಲ್ಲಿ ಸ್ವಲ್ಪ ಬಜಾರಿ ಎನ್ನಿಸುವ ಪಾತ್ರವೇ ಇರಬೇಕು. ಏಕೆ ಗೊತ್ತೇ.. ರಶ್ಮಿಕಾ ಮಂದಣ್ಣ ಅವರ ಅಭಿನಯ ನೋಡಿದ ಯಜಮಾನ ಚಿತ್ರತಂಡದವರು ರಶ್ಮಿಕಾ ಅವರನ್ನು ಮಂಜುಳಾಗೆ ಹೋಲಿಸಿದ್ದರಂತೆ.

  `ಅಯ್ಯೋ ಬಿಡಿ.. ನನಗೆ ಅಷ್ಟೆಲ್ಲ ಸೀನ್ ಇಲ್ಲ. ನನಗೆ ಗೊತ್ತಿರೋದು ನಾನು ಮಾಡಿದ್ದೇನೆ' ಎಂದಿದ್ದಾರೆ ರಶ್ಮಿಕಾ. ಆದರೂ.. ಒಳಗೊಳಗೆ ಆ ಕಾಂಪ್ಲಿಮೆಂಟ್ ಸಿಕ್ಕಾಗ ಖುಷಿಯಾಗಿದ್ದು ಹೌದು. ಸಹಜವೇ ಅಲ್ವೇ.

  ಯಜಮಾನ ಚಿತ್ರದಲ್ಲಿ ರಶ್ಮಿಕಾ ಲಂಗ, ದಾವಣಿ, ಮೂಗುತಿ, ಸೆಲ್ವಾರ್.. ಹೀಗೆ ಬೇರೆಯೇ ರೀತಿ ಕಾಣಿಸಿಕೊಂಡಿದ್ದಾರೆ. 

  ನಿರ್ಮಾಪಕಿ ಶೈಲಜಾ ನಾಗ್, ಬಿ.ಸುರೇಶ್, ಹರಿಕೃಷ್ಣ, ಕುಮಾರ್, ದೇವರಾಜ್ ಎಲ್ಲರೊಂದಿಗೆ ಸಮಯ ಕಳೆಯುವಾಗ ನನಗೆ ಮನೆಯವರೊಂದಿಗೆ ಇದ್ದ ಫೀಲ್ ಆಗುತ್ತಿತ್ತು. ಇಡೀ ಸೆಟ್ಟಿನಲ್ಲಿ ನನಗೆ ಮನೆಯ ವಾತಾವರಣ ಸೃಷ್ಟಿಸಿಕೊಟ್ಟ ಮೊದಲಿಗ ದರ್ಶನ್ ಎಂದಿದ್ದಾರೆ ಕಿರಿಕ್ ಚೆಲುವೆ.. ಅಲ್ಲಲ್ಲ.. ಯಜಮಾನನ ಒಡತಿ.

 • ಮತ್ತೊಂದು ತೆಲುಗು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ

  rashmika mandanna image

  ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ, ಯುವಕರಲ್ಲಂತೂ ಕ್ರೇಜ್‍ನ್ನೇ ಸೃಷ್ಟಿಸಿದ್ದರು. ಆ ಚಿತ್ರದ ನಂತರ ಅವರು ಕನ್ನಡದಲ್ಲಿ ನಟಿಸುತ್ತಿರುವುದು ಆಂಜನಿಪುತ್ರ ಚಿತ್ರದಲ್ಲಿ ಮಾತ್ರ. 

  ತೆಲುಗಿನಲ್ಲಿ ಈಗಾಗಲೇ ಅಲ್ಲು ಅರ್ಜುನ್ ಜೊತೆ `ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ನಂತರ ಏನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅಲ್ಲು ಅರ್ಜುನ್ ಅವರ ಕುಟುಂಬದ ಗೀತಾ ಆಟ್ರ್ಸ್‍ನ ಇನ್ನೊಂದು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. 

  ತೆಲುಗಿನ ವಿಜಯ್ ದೇವರಕೊಂಡ ನಾಯಕತ್ವದ ಹೊಸ ಚಿತ್ರದಲ್ಲಿ ರಶ್ಮಿಕಾ ಹೀರೋಯಿನ್.ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯಿಂದ ಹಂಚಿಕೊಂಡಿದ್ದಾರೆ ರಶ್ಮಿಕಾ. 

   

 • ಮಧ್ಯರಾತ್ರಿ ಬರ್ತಾರೆ ಪುನೀತ್-ರಶ್ಮಿಕಾ..!

  anjaniputra mid night show

  ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಮಧ್ಯರಾತ್ರಿಯೇ ರಿಲೀಸ್ ಆಗ್ತಿದೆ. ನೀವು ಒಂದ್ಸಲ ಶೋ ಟೈಮಿಂಗ್ಸ್ ನೋಡಬೇಕು. ಶಾಕ್ ಆಗಿಬಿಡ್ತೀರಿ. ಬೆಂಗಳೂರು, ಬಳ್ಳಾರಿ, ಹೊಸಪೇಟೆ.. ಹೀಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಅಂಜನೀಪುತ್ರ ಮಧ್ಯರಾತ್ರಿಯೇ ದರ್ಶನ ಕೊಡಲಿದ್ದಾನೆ.

  ಬೆಳಗಾವಿ, ಶಿವಮೊಗ್ಗ, ದಾವಣಗೆರೆಯ ಥಿಯೇಟರುಗಳಲ್ಲಿ ಅಂಜನೀಪುತ್ರನ ಮೊದಲ ಶೋ, ಮಧ್ಯರಾತ್ರಿ 12 ಗಂಟೆಗೆ ಫಿಕ್ಸ್ ಆಗಿದೆ. ಬೆಂಗಳೂರಿನ 10ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಮುಂಜಾನೆ 5 ಗಂಟೆಗೇ ಮೊದಲ ಶೋ ಶುರುವಾಗಲಿದೆ.

  ಚಿತ್ರ ಮೇಯ್ನ್ ಥಿಯೇಟರ್ ತ್ರಿವೇಣಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ 78 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ. 

 • ಮಾತೃಭಾಷೆ ಬಿಟ್ಟೋರು.. ಮೂರೂ ಬಿಟ್ಟೋರು : ಕೆಣಕಿದವರಿಗೆ ರಶ್ಮಿಕಾ ಮಂದಣ್ಣ ಉತ್ತರ

  rashmika's sweet hit back to trolls

  ಪೊಗರು ಚಿತ್ರದ ಡೈಲಾಗ್ ಟ್ರೇಲರ್ ಹೊರಬಿದ್ದಿದ್ದೇ ತಡ.. ಎಲ್ಲರೂ ಕೆಣಕೋಕೆ ಶುರು ಮಾಡಿದ್ದು ರಶ್ಮಿಕಾ ಮಂದಣ್ಣ ಅವರನ್ನ. ರಶ್ಮಿಕಾ, ಈ ಚಿತ್ರದ ನಾಯಕಿ. ಪೊಗರು ಬಿಟ್ಟರೆ, ಬೇರೆ ಯಾವುದೇ ಕನ್ನಡ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿಲ್ಲ. ಜೊತೆಗೆ ವಿನಾಕಾರಣವಾಗಿ ರಶ್ಮಿಕಾ ಮಂದಣ್ಣ, ಕನ್ನಡವನ್ನೇ ಮರೆತುಬಿಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲೊಂದು ನಂಬಿಕೆ ಬಲವಾಗಿ ಬೇರೂರಿದೆ. ಅದಕ್ಕೆ ತಕ್ಕಂತೆ ಪೊಗರು ಚಿತ್ರದ ಈ ಡೈಲಾಗ್.

  ಪೊಗರುನಲ್ಲಿ ಟೀಚರ್ ಪಾತ್ರ ಮಾಡಿದ್ದಾರೆ ರಶ್ಮಿಕಾ ಮಂದಣ್ಣ. ಟ್ರೇಲರಿನಲ್ಲಿ ಇಂಗ್ಲಿಷಿನಲ್ಲಿ ಮಾತನಾಡುವ ರಶ್ಮಿಕಾಗೆ ಧ್ರುವ ಸರ್ಜಾ ಮಾತೃ ಭಾಷೆ ಬಿಟ್ಟೋರೂ ಮೂರೂ ಬಿಟ್ಟೋರು ಎಂದು ಡೈಲಾಗ್ ಹೊಡೀತಾರೆ. ಇದು ರಶ್ಮಿಕಾ ಅವರನ್ನೇ ಉದ್ದೇಶಿಸಿ ಹೇಳಿದಂತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರಶ್ಮಿಕಾ ಮಂದಣ್ಣ ಅವರನ್ನು ಕೆಣಕಿದ್ದಾರೆ.

  ಹಾಗೆ ಕೆಣಕಿದವರಿಗೆ ರಶ್ಮಿಕಾ ಮಂದಣ್ಣ ಕೊಟ್ಟಿರುವ ಉತ್ತರ ಇದು. `ಈ ಚಿತ್ರದಲ್ಲಿ ಈ ಡೈಲಾಗ್ ಯಾಕೆ ಇದೆ ಎಂಬ ಬಗ್ಗೆ ನಾವೆಲ್ಲ ಚರ್ಚೆ ಮಾಡುತ್ತಿದ್ದೇವೆ. ನೀವೆಲ್ಲರೂ ಇದು ನನಗೇ ಉದ್ದೇಶಿಸಿ ಹೇಳಿದ್ದಾರೆ ಎನ್ನುತ್ತಿದ್ದೀರಿ. ಸರಿಯೋ.. ತಪ್ಪೋ.. ಟ್ರೇಲರ್ ಗೆದ್ದಿದೆ. ನನಗಾಗಿ ಯೋಚಿಸಲು ನೀವು ನಿಮ್ಮ ಅಮೂಲ್ಯವಾದ ಸಮಯ ಮೀಸಲಿಟ್ಟಿದ್ದೀರಿ. ಯೆಸ್. ನಾನು ಗೆದ್ದಿದ್ದೇನೆ' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

 • ಮಿ. ಶೋ ಆಫ್ ಎಂದಿದ್ದ ಕಿರಿಕ್ ರಶ್ಮಿಕಾಗೆ ಯಶ್ ಕೊಟ್ಟ ಉತ್ತರ

  yash replies to rashmika's comment

  ಇತ್ತೀಚೆಗೆ ಟಿವಿ ಚಾನೆಲ್‌ವೊಂದರಲ್ಲಿ 'ಕಿರಿಕ್‌ ಪಾರ್ಟಿ' ನಟಿ ರಶ್ಮಿಕಾ ಮಂದಣ್ಣ, ರಾಕಿಂಗ್‌ ಸ್ಟಾರ್‌ ಯಶ್‌ಗೆ ಮಿಸ್ಟರ್‌ ಷೋ ಆಫ್‌ ಎಂದು ಹೇಳಿದ್ದರು. ಅದು ಕಾರ್ಯಕ್ರಮದ ನಿರೂಪಕ ಕೇಳಿದ ಪ್ರಶ್ನೆಗೆ ನೀಡಿದ್ದ ಉತ್ತರವಾಗಿತ್ತು. ರಶ್ಮಿಕಾ ಹಾಗೆ ಹೇಳಿದ್ದು, ಯಶ್ ಅಭಿಮಾನಿಗಳು ಕೆರಳಿಸಿತ್ತು. ಟ್ವಿಟರ್, ಫೇಸ್​ಬುಕ್​ನಲ್ಲಿ ಯಶ್ ಅಭಿಮಾನಿಗಳು ರಶ್ಮಿಕಾರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೇನಾಗಿಹೋಯ್ತು ಎಂಬ ಟೆನ್ಷನ್​ನಲ್ಲಿದ್ದ ರಶ್ಮಿಕಾಗೆ ಈಗ ಯಶ್, ತಮ್ಮ ಫೇಸ್​ಬುಕ್​ನಲ್ಲಿ ಉತ್ತರ ಕೊಟ್ಟಿದ್ದಾರೆ. ಅಭಿಮಾನಿಗಳಿಗೂ ಸುಮ್ಮನಿರುವಂತೆ ಮನವಿ ಮಾಡಿದ್ದಾರೆ.

  ರಾಕಿಂಗ್‌ ಸ್ಟಾರ್‌ ಯಶ್, ಫೇಸ್‌ಬುಕ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ನೀಡಿದ ಸಂದೇಶ ಇದು.

  'ಎಲ್ಲರಿಗೂ ನಮಸ್ಕಾರ..

  ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ನಾನು, ಕೆಲವೊಮ್ಮೆ ಎದುರಾಗುವ ಅನಗತ್ಯ ಎನಿಸುವ ವಿಷಯಗಳನ್ನು ನಿರ್ಲ್ಯಕ್ಷಿಸುವ ಸ್ವಭಾವವನ್ನು ರೂಢಿಸಿಕೊಂಡಿದ್ದೇನೆ. ಆದರೆ ನನ್ನನ್ನು ಪ್ರೀತಿಸುವ ನಿಮ್ಮ ಮನಸಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರುವುದು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಅಭಿಮಾನ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ, ಅದಕ್ಕೆ ನಾನೆಂದು ಚಿರಋಣಿ.

  ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತರಲ್ಲ, ಇದುವರೆಗೂ ಭೇಟಿಯು ಮಾಡಿಲ್ಲ...ಮಾತು ಸಹ ಆಡಿಲ್ಲ.ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಆಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು, ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ.

  ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ, ಇಲ್ಲಿ ಚರ್ಚಿಸುವಂತದ್ದು ಏನೂ ಇಲ್ಲ.

  ಕೆಲವೇ ದಿನಗಳಲ್ಲಿ 'ಕೆ.ಜಿ.ಎಫ್' ಚಿತ್ರದ ಮತ್ತೊಂದು ಸ್ಟಿಲ್ ಬರಲಿದೆ. ಅಲ್ಲಿಯವರೆಗೆ ಈದ್ ಮುಬಾರಕ್' ಎಂದು ಯಶ್‌ ಬರೆದುಕೊಂಡಿದ್ದಾರೆ.

  ವಿವಾದ ಇಲ್ಲಿಗೇ ಮುಗಿಯುತ್ತಾ..? ಯಶ್ ಮಾತನ್ನು ಅಭಿಮಾನಿಗಳು ಒಪ್ಪಿ ಸುಮ್ಮನಾಗುತ್ತಾರಾ..?

   

   

   

 • ಮುಂದಿನ ಸಿನಿಮಾ ಕೂಡಾ ಸ್ಟಾರ್ ಜೊತೆ - ರಶ್ಮಿಕಾ

  rashmika to act with star

  ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಸಿನಿಮಾದಿಂದ ಸ್ಟಾರ್ ಆದವರು ಸಾನ್ವಿ. ಅಲ್ಲಲ್ಲ.. ರಶ್ಮಿಕಾ ಮಂದಣ್ಣ. ಅದಾಧ ಮೇಲೆ 2017ರಲ್ಲಿ ಇಡೀ ವರ್ಷ ಸುದ್ದಿಯಲ್ಲಿದ್ದರು. ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್, ಗಣೇಶ್ ಜೊತೆ ನಟಿಸಿದ ರಶ್ಮಿಕಾ, ತೆಲುಗಿನಲ್ಲಿ ನಾಗಶೌರ್ಯ, ವಿಜಯ್ ದೇವರಕೊಂಡ ಜೊತೆ ನಟಿಸಿದರು. ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‍ಮೆಂಟ್ ಕೂಡಾ ಆಯಿತು. ಹೀಗೆ ತಮಗೆ 2017 ಸಂಪೂರ್ಣ ಸುಖೀ ವರ್ಷ ಎಂದು ಖುಷಿಯಿಂದ ನೆನಪಿಸಿಕೊಳ್ಳುವ ರಶ್ಮಿಕಾ, 2018ರಲ್ಲೂ ಅದೇ ರೀತಿಯ ವೇಗ ಕಾಯ್ದುಕೊಳ್ಳುತ್ತಿದ್ದಾರೆ.

  ಅಂಜನೀಪುತ್ರ ಮತ್ತು ಚಮಕ್ ಎರಡೂ ಚಿತ್ರಗಳ ಯಶಸ್ಸಿನೊಂದಿಗೆ 2018ನ್ನು ಬರಮಾಡಿಕೊಂಡಿರುವ ರಶ್ಮಿಕಾ, ಇನ್ನೊಂದು ಸ್ಟಾರ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಕಥೆ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಫೈನಲ್ ಆಗಲಿದೆ ಎನ್ನುವ  ರಶ್ಮಿಕಾ, ಆ ಸ್ಟಾರ್ ಯಾರು ಅನ್ನೋದನ್ನ ಹೇಳಿಲ್ಲ.

  ಯಾರು ಆ ಸ್ಟಾರ್..? ಯಶ್ ಜೊತೆನಾ..? ಶ್ರೀಮುರಳಿ ಜೊತೆನಾ..? ಅಥವಾ ಧ್ರುವ ಸರ್ಜಾ ಜೊತೆನಾ..? ಸಸ್ಪೆನ್ಸ್‍ಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

 • ಮುದ್ದು ರಶ್ಮಿಕಾಗೆ ಮೆಗಾಸ್ಟಾರ್ ಕ್ಲೀನ್‍ಬೌಲ್ಡ್

  telugu movie chalo audio launch

  ಕಿರಿಕ್ ಪಾರ್ಟಿಯ ರಶ್ಮಿಕಾ, ಕರುನಾಡ ಕ್ರಶ್ ಎಂದರೆ ಅತಿಶಯೋಕ್ತಿಯೇನಲ್ಲ. ಕರುನಾಡ ಕ್ರಶ್, ಸಿಂಪಲ್ಲಾಗಿ ರಕ್ಷಿತ್ ಶೆಟ್ಟಿಗೆ ಬೌಲ್ಡ್ ಆದರೂ, ರಶ್ಮಿಕಾಗೆ ಬೌಲ್ಡ್ ಆಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಶ್ಮಿಕಾ ಎಂಬ ಈ ಚೆಲುವೆಗೆ ಈಗ ಬೌಲ್ಡ್ ಆಗಿರುವುದು ಮೆಗಾಸ್ಟಾರ್ ಚಿರಂಜೀವಿ.

  ತೆಲುಗಿನಲ್ಲಿ ಚಲೋ ಚಿತ್ರದಲ್ಲಿ ನಟಿಸಿರುವ ರಶ್ಮಿಕಾ, ಆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದವರು ಮೆಗಾಸ್ಟಾರ್ ಚಿರಂಜೀವಿ. ಅವರು ರಶ್ಮಿಕಾ ಬಗ್ಗೆ ಹೇಳಿದ್ದು ಇಷ್ಟು. 

  ``ರಶ್ಮಿಕಾ ಮಂದಣ್ಣ ಅವರಿಂದ ಈ ಚಿತ್ರಕ್ಕೆ ಗ್ಲಾಮರ್ ಹೆಚ್ಚಾಗಿದೆ. ಅವರು ತುಂಬಾ ಮುದ್ದಾಗಿದ್ದಾರೆ. ತೆಲುಗು ಚಿತ್ರರಂಗಕ್ಕೆ ರಶ್ಮಿಕಾ ಅವರಿಗೆ ಸ್ವಾಗತ. ಅಲ್ ದಿ ಬೆಸ್ಟ್''

  ರಶ್ಮಿಕಾ ಥ್ರಿಲ್ಲಾಗೋದ್ರಲ್ಲಿ ಸಂದೇಹವೇನಿಲ್ಲ. ಮೆಗಾಸ್ಟಾರ್ ಹೊಗಳುವುದು ಎಂದರೆ ಸುಮ್ಮನೆ ಮಾತಲ್ಲ.

 • ಮ್ಯಾಜಿಕ್ ಸೃಷ್ಟಿಸಿದ ಯಜಮಾನ ಟೈಟಲ್ ಸಾಂಗ್

  yajamana's title rack creates magic

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟೈಟಲ್ ಸಾಂಗ್ ಅಕ್ಷರಶಃ ಮ್ಯಾಜಿಕ್ ಮಾಡಿಬಿಟ್ಟಿದೆ. ಸಂತೋಷ್ ಆನಂದ್ ರಾಮ್ ಬರೆದಿರುವ ಮಾತು ತಪ್ಪದ ಯಜಮಾನ.. ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಅವರ ಇದುವರೆಗಿನ ಎಲ್ಲ ಚಿತ್ರಗಳ ಹಾಡುಗಳಿಗೆ ಹೋಲಿಸಿದರೆ, ಇದು ಕಂಪ್ಲೀಟ್ ಡಿಫರೆಂಟ್. 

  ಹಾಡು ರಿಲೀಸ್ ಆದ ಕೇವಲ 6 ನಿಮಿಷದಲ್ಲಿ 1 ಲಕ್ಷ ಮಂದಿ, 20 ನಿಮಿಷದಲ್ಲಿ 2 ಲಕ್ಷ ಮಂದಿ ವೀಕ್ಷಿಸಿ ದಾಖಲೆ ಬರೆದಿದೆ ಯಜಮಾನ ಟೈಟಲ್ ಸಾಂಗ್. ಈಗ ಒಂದು ಮಿಲಿಯನ್ ವ್ಯೂ ದಾಟಿ ಮುನ್ನುಗ್ಗುತ್ತಿದೆ ಯಜಮಾನನ ಟೈಟಲ್ ಸಾಂಗ್.

  ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಹರಿಕೃಷ್ಣ, ಕುಮಾರ್ ನಿರ್ದೇಶನದ ಸಿನಿಮಾಗೆ ಹರಿಕೃಷ್ಣ ಅವರೇ ಮ್ಯೂಸಿಕ್ ಡೈರೆಕ್ಟರ್. ವಿಜಯ್ ಪ್ರಕಾಶ್ ಹಾಡಿರುವ ಹಾಡು, ಈಗ ಸೃಷ್ಟಿಸಿರುದು ಮ್ಯಾಜಿಕ್.

 • ಯಜಮಾನ ದರ್ಶನ್ ಚಿತ್ರಕ್ಕೆ ತಾರೆಯರ ನೃತ್ಯ

  stars come together for a song in yajamana

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಶೈಲಜಾ ಸುರೇಶ್ ನಿರ್ಮಾಪಕಿ. ಧನಂಜಯ್ ನೆಗೆಟಿವ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪಿ. ಕುಮಾರ್ ಚಿತ್ರಕ್ಕಾಗಿಯೇ ಹಳ್ಳಿಯ ಸೆಟ್‍ವೊಂದನ್ನು ಹಾಕಿಸಿದ್ದಾರೆ. ಇವರೆಲ್ಲರ ಹೊರತಾಗಿ ಚಿತ್ರದಲ್ಲಿ ಚಿತ್ರರಂಗದ ತಾರಾಬಳಗವೇ ಕಾಣಿಸಿಕೊಳ್ಳಲಿದೆ. 

  ಯಜಮಾನ ಚಿತ್ರದ ಒಂದು ಹಾಡಿನಲ್ಲಿ ರೆಬಲ್‍ಸ್ಟಾರ್ ಅಂಬರೀಷ್ ಬರಲಿದ್ದಾರೆ. ಲವ್ಲೀಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್, ಜ್ಯೂ. ಟೈಗರ್ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ಸ್ನೇಹಿತರು ದರ್ಶನ್ ಚಿತ್ರದಲ್ಲಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. 

  ಇದುವರೆಗೆ ದರ್ಶನ್ ಹಲವು ನಟರ ಚಿತ್ರಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ದರ್ಶನ್ ಚಿತ್ರದಲ್ಲಿ ಕಲಾವಿದರು ಅತಿಥಿಗಳಾಗಿ ಬರುತ್ತಿದ್ದಾರೆ. ಪ್ರೀತಿಯಿಂದ.. ಸ್ನೇಹಕ್ಕಾಗಿ..

 • ಯಜಮಾನನ ಜೊತೆ ಯಜಮಾನ್ತಿ ಕಟೌಟ್

  yajamani rashmika's cutout with darshan

  ಯಾವುದೇ ಸ್ಟಾರ್ ಸಿನಿಮಾ ರಿಲೀಸ್ ಆದರೆ, ಆ ನಟನ ಕಟೌಟ್ ಹಾಕುವುದು ಚಿತ್ರರಂಗದಲ್ಲಿ ಮಾಮೂಲು. ಕೆಲವೊಮ್ಮೆ ಹೀರೋಯಿನ್‍ಗಳ ಕಟೌಟ್ ಹಾಕುವುದೂ ಇದೆ. ಕನ್ನಡದಲ್ಲಿ ಹಾಗೆ ಅತೀ ಹೆಚ್ಚು ಕಟೌಟ್ ಹಾಕಿಸಿಕೊಂಡ ಹೀರೋಯಿನ್ ಆಗಿ ಖ್ಯಾತಿ ಹೊಂದಿರುವುದು ಒನ್ & ಓನ್ಲಿ ಮಾಲಾಶ್ರೀ. ಈಗ ಮತ್ತೊಮ್ಮೆ ಆ ಸಂಪ್ರದಾಯ ಶುರುವಾದಂತಿದೆ. ಯಜಮಾನತಿಯ ಕಟೌಟ್ ಕೂಡಾ ಬಂದಿದೆ.

  ರಶ್ಮಿಕಾ ಮಂದಣ್ಣ ಅಭಿಮಾನಿಗಳು ಯಜಮಾನ ದರ್ಶನ್ ಕಟೌಟ್ ಪಕ್ಕದಲ್ಲಿಯೇ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಕಟೌಟ್‍ನ್ನೂ ಹಾಕಿ ಸಂಭ್ರಮಿಸಿದ್ದಾರೆ. 

  ತುಮಕೂರು ಸೇರಿದಂತೆ ಹಲವೆಡೆ ಈ ಬಾರಿ ರಶ್ಮಿಕಾ ಮಂದಣ್ಣ ಕಟೌಟ್‍ಗಳು ರಾರಾಜಿಸಿವೆ. ಅಭಿಮಾನಿಗಳ ಕ್ರೇಜ್‍ಗೆ ಥ್ರಿಲ್ ಆಗಿರುವ ರಶ್ಮಿಕಾ ಕಟೌಟ್ ಹಾಕುವಾಗ ಅಪಾಯಕ್ಕೊಳಗಾಗದಂತೆ ಜಾಗ್ರತೆ ವಹಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹರಿಕೃಷ್ಣ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ಅಭಿನಯದ ಯಜಮಾನ, ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸುತ್ತಿದೆ.

 • ಯಜಮಾನನನ್ನು ಮರೆತಿಲ್ಲ ರಶ್ಮಿಕಾ ಮಂದಣ್ಣ

  ಯಜಮಾನನನ್ನು ಮರೆತಿಲ್ಲ ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ ಕನ್ನಡವನ್ನೇ ಮರೆತುಬಿಟ್ಟಿದ್ದಾರಾ..? ತಾವು ಕನ್ನಡ ಸಿನಿಮಾಗಳ ಮೂಲಕ ಸಿನಿಮಾಗೆ ಬಂದೆ ಅನ್ನೋದನ್ನು ಮರೆತು ಹೋಗಿದ್ದಾರಾ..? ಇಂಥಾದ್ದೊಂದು ಪ್ರಶ್ನೆ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಅದಕ್ಕೆ ಕಾರಣ, ಪೊಗರು ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ ವರ್ತಿಸಿದ ರೀತಿ. ಚಿತ್ರದ ಪ್ರಚಾರವನ್ನು ರಶ್ಮಿಕಾ ಸರಿಯಾಗಿ ಮಾಡಲಿಲ್ಲ ಅನ್ನೋದು ಕೂಡಾ ಒಂದು ಕಾರಣ. ಇನ್ನು ತೆಲುಗು, ತಮಿಳು ನಟರ ಹುಟ್ಟುಹಬ್ಬಗಳಿಗೆಲ್ಲ ವಿಶ್ ಮಾಡುವ ಸಂಪ್ರದಾಯ ಪಾಲಿಸುವ ರಶ್ಮಿಕಾ, ಕನ್ನಡದ ತಾರೆಗಳನ್ನು ನೆನಪಿಸಿಕೊಳ್ಳೋದು ಅಪರೂಪ.

  ಹೀಗಿರುವಾಗ ರಶ್ಮಿಕಾ ಪೇಜ್‍ನಲ್ಲಿ ಇದ್ದಕ್ಕಿದ್ದಂತೆ ಯಜಮಾನನ ಫೋಟೋ ಕಾಣಿಸಿತು. ಹೌದು, ಯಜಮಾನ ಚಿತ್ರ ರಿಲೀಸ್ ಆದ 2 ವರ್ಷದ ನೆನಪನ್ನು ರಶ್ಮಿಕಾ ಮಂದಣ್ಣ,  ದರ್ಶನ್ ಜೊತೆಗಿರೋ ಫೋಟೋ ಹಂಚಿಕೊಂಡು ಖುಷಿಪಟ್ಟಿದ್ದರು.

  ಅಂದಹಾಗೆ ಯಜಮಾನ ಮಾರ್ಚ್ 1ರಂದು ರಿಲೀಸ್ ಆಗಿತ್ತು. ಸೂಪರ್ ಹಿಟ್ ಎನಿಸಿಕೊಂಡಿತ್ತು. ಈಗ ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್ ಆಗುತ್ತಿದೆ. ಅಷ್ಟೇ ಅಲ್ಲ, ತೆಲುಗಿನಲ್ಲೂ ಬರುತ್ತಿರೋ ಸಿನಿಮಾ, ದರ್ಶನ್ ಪಾಲಿಗೆ ಲಕ್ಕಿ ಮಾರ್ಚ್ ಆಗಲಿ.

 • ಯಶ್ ಚಿತ್ರಕ್ಕೆ ರಶ್ಮಿಕಾ ನಾಯಕಿ..?

  is rashmika yash's heroine for next movie

  ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ ರಶ್ಮಿಕಾ ಮಂದಣ್ಣ, ಯಶ್‍ಗೆ ನಾಯಕಿಯಾಗಲಿದ್ದಾರಾ..? ಅಂಥಾದ್ದೊಂದು ಸುದ್ದಿ ಗಾಂದಿನಗರದಲ್ಲಿ ಓಡಾಡುತ್ತಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿರುವ ರಶ್ಮಿಕಾ, ಅದಾದ ನಂತರ ಸಣ್ಣದೊಂದು ರಗಳೆಗೆ ಸಿಕ್ಕಿಕೊಂಡಿದ್ದರು. ಟಿವಿ ಶೋವೊಂದರಲ್ಲಿ ಯಶ್ ಅವರನ್ನು ತಮಾಷೆಯಾಗಿ ಶೋಅಫ್ ಎಂದಿದ್ದು, ನಂತರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣ ಕ್ಷಮೆಯಾಚಿಸಿದ್ದ ರಶ್ಮಿಕಾ, ಅದೇ ಸಂದರ್ಶನದಲ್ಲಿ ಯಶ್ ಬಗ್ಗೆ ಹೇಳಿದ್ದ ಒಳ್ಳೆಯ ಮಾತುಗಳನ್ನೂ ನೆನಪಿಸಿದ್ದರು. ಅಷ್ಟೇ ಅಲ್ಲ, ಯಶ್ ಪ್ರತಿಯೊಬ್ಬ ಕಲಾವಿದರಿಗೂ ಸ್ಫೂರ್ತಿ ಎಂದಿದ್ದರು. ಖುದ್ದು ಯಶ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಅಭಿಮಾನಿಗಳಿಗೆ ಬಿಟ್ಟುಬಿಡಿ ಎಂದು ಹೇಳಿದ ಮೇಲೆಯೇ ಆ ವಿವಾದ ತಣ್ಣಗಾಗಿದ್ದು.

  ಈಗ ರಶ್ಮಿಕಾ, ಯಶ್ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಬ್ಯುಸಿಯಾಗಿರುವ ಯಶ್, ನಂತರ ರಾಣಾ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಚಿತ್ರದ ನಿರ್ದೇಶಕ ಹರ್ಷ.

  ಅಂದಹಾಗೆ ಹರ್ಷ ನಿರ್ದೇಶನದ, ಪುನೀತ್ ರಾಜ್‍ಕುಮಾರ್ ಚಿತ್ರದಲ್ಲಿ ಕೂಡಾ ರಶ್ಮಿಕಾ ನಾಯಕಿ. ಅದೇ ಜೋಡಿ ಕಂಟಿನ್ಯೂ ಆದರೆ ಆಶ್ಚರ್ಯ ಪಡಬೇಕಿಲ್ಲ.

  Related Articles :-

  ಮಿ. ಶೋ ಆಫ್ ಎಂದಿದ್ದ ಕಿರಿಕ್ ರಶ್ಮಿಕಾಗೆ ಯಶ್ ಕೊಟ್ಟ ಉತ್ತರ

  ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ

 • ರಕ್ತಿತ್ ಶೆಟ್ಟಿ - ರಶ್ಮಿಕಾ ಲವ್ ಸ್ಟೋರಿ - ಪ್ರಪೋಸ್ ಮಾಡಿದ್ದು ಯಾರು?

  rakshith rashmika who proposed first

  ಎಂಗೇಜ್​ಮೆಂಟ್ ಸುದ್ದಿ ರಶ್ಮಿಕಾ ಮಂದಣ್ಣ ಫೇಸ್​ಬುಕ್​ನಲ್ಲಿ ಹೊರಬಿತ್ತು. ಹೌದಾ ಅಂಥಾ ಕೇಳಿದಾಗ ರಕ್ಷಿತ್ ಶೆಟ್ಟಿ ಅದೆಷ್ಟು ನಾಚಿಕೊಂಡ್ರು ಅಂದ್ರೆ, ಹೂಂ ಅನ್ನೋದೇನೋ ಅಂದ್ರು. ಆದರೆ, ಫಸ್ಟ್​ ಟೈಂ ಲವ್ವಲ್ಲಿ ಬಿದ್ದ ಹುಡುಗನ ರೋಮಾಂಚನ ಅವರ ಮಾತಿನಲ್ಲಿತ್ತು. ವಯಸ್ಸು 33 ಆದರೂ ಫಸ್ಟ್ ಲವ್, ಫಸ್ಟ್ ಲವ್ವೇ ಅಲ್ವಾ..?

  ಮೊದ ಮೊದಲು ಇದು ಗಾಸಿಪ್ ಅಷ್ಟೇ ಆಗಿತ್ತು. ಆದರೆ, ಗಾಸಿಪ್ ಪತ್ರಿಕೆ, ಟಿವಿಗಳಲ್ಲಿ ಸುದ್ದಿಯಾದಾಗ ರಶ್ಮಿಕಾ ತಂದೆ ರಕ್ಷಿತ್ ಅವರನ್ನು ಕರೆದು ಏನಿದೆಲ್ಲ ಅಂದ್ರಂತೆ..ಅಷ್ಟೆ.

  ಲವ್ ಹೇಗೆ ಶುರುವಾಯ್ತು ಅಂದ್ರೆ, ಅದನ್ನೆಲ್ಲ ಹೇಳೋಕೆ ಸ್ಪೆಷಲ್ಲಾಗಿ ಬರ್ತೀನಿ ಅಂತಿದ್ದ ರಕ್ಷಿತ್ ಶೆಟ್ಟಿ ಮಾತಿನಲ್ಲಿ ನಾಚಿಕೆ ತುಂಬಿ ತುಳುಕಾಡುತ್ತಿತ್ತು. ರಶ್ಮಿಕಾರಲ್ಲಿ ರಕ್ಷಿತ್​ಗೆ ಇಷ್ಟವಾಗಿದ್ದು, ಅವರ ಇನ್ನೊಬ್ಬರ ಬಗ್​ಗೆ ಹೊಟ್ಟೆಕಿಚ್ಚುಪಡದ ಗುಣ. ಅಹಂಕಾರವಿಲ್ಲದ ಗುಣ.

  ಚಿತ್ರ ಹಿಟ್ ಆದ ಖುಷಿಯಲ್ಲಿ ಪ್ರಪೋಸ್ ಮಾಡಿದ್ದು ರಕ್ಷಿತ್ ಶೆಟ್ಟಿಯಂತೆ. ಆದರೆ, ನೋಡೋಣ ಎಂದಿದ್ದ ರಶ್ಮಿಕಾ, ಆಗ ಓಕೆ ಎಂದೇನೂ ಹೇಳಿರಲಿಲ್ಲ. ಆದರೆ, ರಶ್ಮಿಕಾ ತಂದೆಯ ಎದುರು ಫೈನಲ್ ಆಯ್ತು.

  ಇನ್ನು ರಕ್ಷಿತ್ ಶೆಟ್ಟಿ ಕುಟುಂಬದ ಪಾಲಿಗೆ ರಶ್ಮಿಕಾ ಭಾಗ್ಯಲಕ್ಷ್ಮಿ. ಮೊದ ಮೊದಲು ತಮಾಷೆಯಾಗಿ ಹೇಳಿದ್ದು ಆಮೇಲೆ ನಿಜವಾಗಿ ಹೋಗಿದೆ. ರಕ್ಷಿತ್ ಅಮ್ಮನಿಗೆ ರಶ್ಮಿಕಾ ತುಂಬಾ ಇಷ್ಟವಾಗಿಬಿಟ್ಟಿದ್ದಾರೆ.

  ರಶ್ಮಿಕಾ, ರಕ್ಷಿತ್​ಗೆ ಒಂದು ಪುಟ್ಟ ಬ್ರೇಸ್​ಲೆಟ್​ನ್ನ ಒಲವಿನ ಉಡುಗೊರೆಯಾಗಿ ಕೊಟ್ಟಿದ್ದಾರೆ.

  ಜುಲೈ 3ಕ್ಕೆ ಕೊಡಗಿನಲ್ಲೇ ಎಂಗೇಜ್​ಮೆಂಟ್. 

  ರಶ್ಮಿಕಾಗಿನ್ನೂ 21 ವರ್ಷ. ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ, ಗಣೇಶ್ ಜೊತೆ ಚಮಕ್, ತೆಲುಗಿನಲ್ಲಿ ಒಂದು ಸಿನಿಮಾದಲ್ಲಿ ನಟಿಸ್ತಿರೋ ರಶ್ಮಿಕಾ, ಕೊಡಗಿನ ಕುವರಿ.

  ಸದ್ಯಕ್ಕೆ ಮದುವೆ ಇಲ್ಲ. ಮದುವೆಯೇನಿದ್ದರೂ ಎರಡು ವರ್ಷದ ನಂತರ ಎನ್ನುತ್ತಿದ್ದಾರೆ. ಅವರ ಬಾಳು ಬಂಗಾರವಾಗಲಿ.

   

 • ರಕ್ಷಿತ್ - ರಶ್ಮಿಕಾ ನಿಶ್ಚಿತಾರ್ಥ ಎಲ್ಲಿ..? ಹೇಗೆ..?

  rakshith rashmika engagement update

  ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಜುಲೈ 3ರಂದು ಫಿಕ್ಸ್ ಆಗಿದೆ. ಕಿರಿಕ್‌ ಪಾರ್ಟಿ ಚಿತ್ರದ ಜೋಡಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ರಿಯಲ್ ಲೈಫ್​ನಲ್ಲೂ ಜೋಡಿಯಾಗುತ್ತಿದ್ದಾರೆ. ಜುಲೈ 3ರಂದು ಕೊಡಗಿನ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಉಂಗುರ ಬದಲಿಸಿಕೊಳ್ಳಲಿದ್ದಾರೆ. ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತ ಗೆಳೆಯರಷ್ಟೇ ನಿಶ್ಚಿತಾರ್ಥದಲ್ಲಿ ಭಾಗವಹಿಸುತ್ತಿದ್ಧಾರೆ. ವಿರಾಜಪೇಟೆಯ ಸೆರನಿಟಿ ಹಾಲ್​ ಬುಕ್ ಮಾಡಲಾಗಿದ್ದು, ಆ ದಿನ ಸಂಜೆ 6.30ಕ್ಕೆ ನಿಶ್ಚಿತಾರ್ಥ.

  ಡಿಸೈನರ್ ಶ್ರದ್ಧಾ ಪೊನ್ನಪ್ಪ, ರಶ್ಮಿಕಾಗೆ ಗೌನ್ ಡಿಸೈನ್ ಮಾಡಿಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಸೂಟ್​ನ್ನು ತಾವೇ ಡಿಸೈನ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಿವೇಕ್ ಸೋಮಯ್ಯ ತಂಡದ ಡಿ.ಜೆ. ಡ್ಯಾನ್ಸ್ ಕುಡಾ ಇರುತ್ತೆ. 

 • ರಕ್ಷಿತ್ - ರಶ್ಮಿಕಾ ನಿಶ್ಚಿತಾರ್ಥಕ್ಕೆ ವೆರೈಟಿ ವೆರೈಟಿ  ತಯಾರಿ

  rakshit rashmika engagement prepearations

  ಕಿರಿಕ್ ಜೋಡಿಯ ನಿಶ್ಚಿತಾರ್ಥಕ್ಕೆ ಕೊಡಗಿನಲ್ಲಿ ಅದ್ಧೂರಿ ವೇದಿಕೆ ಸಿದ್ಧಗೊಂಡಿದೆ. ದುಬೈನಿಂದ ಬರಲಿರುವ ರಕ್ಷಿತ್ ಮತ್ತು ರಶ್ಮಿಕಾ, ನೇರ ನಿಶ್ಚಿತಾರ್ಥ ಸಮಾರಂಭಕ್ಕೆ ಬರಲಿದ್ದಾರೆ. ಹಸಿರು ಮತ್ತು ಹೂವುಗಳ ಸ್ಟೇಜು ಸಿದ್ಧಗೊಂಡಿದೆ. ಪಾಶ್ಚಾತ್ಯ ಶೈಲಿಯಲ್ಲಿ ಉಂಗುರ ಬದಲಾವಣೆ ನಂತರ, ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. 18 ಕೆಜಿ ಕೇಕ್ ಕೂಡಾ ಸಿದ್ಧವಾಗಿದೆ. 

  ಇನ್ನು ಊಟದ ವಿಚಾರದಲ್ಲಂತೂ ಸಂಪೂರ್ಣ ವೆರೈಟಿ ಇದೆ. ಕೊಡಗಿನ ಹೆಸರಾಂತ ಬಾಣಸಿಗ ರಾಮ್ ದಾಸ್ ನೇತೃತ್ವದಲ್ಲಿ ಬಾಯಲ್ಲಿ ನೀರೂರಿಸುವ ಖಾದ್ಯಗಳು ಸಿದ್ಧಗೊಂಡಿವೆ. ಚಿಕನ್ ಲಾಲಿಪಪ್, ಪೋರ್ಕ್ ಡ್ರೈ, ಚಿಕನ್ ಡ್ರೈ, ಫಿಂಗರ್ ಚಿಪ್ಸ್, ಚಿಲ್ಲಿ ಮಟನ್, ಟೀತರ್ ಫ್ರೈ, ಕ್ಯಾಸಿವ್ ಮಸಾಲಾ, ಸಿಪಿ ಸಾಲಾಡ್, ಮ್ಯಾಂಗೋ ಮಸಾಲಾ ಪಾರ್ಟಿಗೆ  ಸಿದ್ಧಗೊಂಡಿರುವ ಖಾದ್ಯಗಳು.

  ಡಿನ್ನರ್ ಪಾರ್ಟಿಗೆ ಕೊಡಗು ಶೈಲಿಯ ನೂಪುಟ್ಟು ಕೋಳಿ ಕರಿ, ಕಡಂಬುಟ್ಟು ಪೋರ್ಕ್ ಕರಿ, ಮಟನ್ ಬಿರಿಯಾನಿ, ಆನಿಯನ್ ರೈತಾ, ವೈಟ್ ರೈಸ್, ರಸಂ, ಪೆಪ್ಪರ್ ಚಿಕನ್ ಮಸಾಲಾ, ಫೋರ್ಕ್ ಚಾಪ್ಸ್, ಫೋರ್ಕ್ ಡ್ರೈ, ಮಟನ್ ಮಸಾಲಾ, ಮಟನ್ ಚಾಪ್ಸ್, ಚೈನೀಸ್ ಐಟಂಗಳಾದ ವೆಜ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್, ನ್ಯೂಡಲ್ಸ್, ಚಿಕನ್ ನ್ಯೂಡಲ್, ಸ್ವೀಟ್ & ಸಾಲ್ಟ್ ಚಿಕನ್, ಬಟರ್ ನಾನ್, ಬಟರ್ ವ್ಯವಸ್ಥೆ ಕುಲ್ಚಾ, ಕಡಾಯ್ ಚಿಕನ್, ಪಾಲಾಕ್ ಪನ್ನೀರ್ , ಕಡಾಯ್ ವೆಜ್, ದಾಲ್ ಕರಿ.

  50 ಜನರ ದೊಡ್ಡ ತಂಡವೇ ಅಡುಗೆ ಸಿದ್ಧ ಮಾಡಿದೆ. ವೆಜ್ಜು, ನಾನ್​ವೆಜ್ಜುಗಳ ಮಿಶ್ರಣದ ಜೊತೆ, ಕೊಡಗಿನ ಸ್ಟೈಲು, ಫಾರಿನ್ ಸ್ಟೈಲು ಎರಡೂ ಮಿಕ್ಸ್ ಆಗಿದೆ.

 • ರಕ್ಷಿತ್ ಬೆಂಬಲಕ್ಕೆ ಸುದೀಪ್

  sudeep appreciates rakshit shetty's maturity

  ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳಿಗೆ, ಗಾಸಿಪ್‍ಗಳಿಗೆ ರಕ್ಷಿತ್ ಶೆಟ್ಟಿ ತುಂಬಾ ಗಾಂಭೀರ್ಯದಿಂದ ಉತ್ತರ ಕೊಟ್ಟಿದ್ದರು. ಸಾಮಾಜಿಕ ಜಾಲತಾಣಗಳಿಗೆ ಮತ್ತೆ ವಾಪಸ್ ಬಂದು, ರಶ್ಮಿಕಾ ಅವರ ಬೆಂಬಲಕ್ಕೆ ನಿಂತಿದ್ದರು. ರಕ್ಷಿತ್ ಶೆಟ್ಟಿ,  ರಶ್ಮಿಕಾ ಅವರ ಬೆಂಬಲಕ್ಕೆ ನಿಂತ ರೀತಿ, ಕಿಚ್ಚ ಸುದೀಪ್ ಅವರಿಗೆ ಇಷ್ಟವಾಗಿದೆ.

  ರಕ್ಷಿತ್ ಶೆಟ್ಟಿ ಈ ವಿಷಯದಲ್ಲಿ ತುಂಬಾ ಘನತೆಯಿಂದ ಉತ್ತರ ಕೊಟ್ಟಿದ್ದಾರೆ.  ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಭಾವನೆಗಳನ್ನೂ ಸಾರ್ವಜನಿಕವಾಗಿಯೇ ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಇರುತ್ತೆ. ರಕ್ಷಿತ್ ಒಳ್ಳೆಯದಾಗಲಿ ಎಂದಿದ್ದಾರೆ ಸುದೀಪ್.

 • ರಕ್ಷಿತ್ ಸಿನಿಮಾಗೆ ರಶ್ಮಿಕಾ ವೇಯ್ಟಿಂಗ್

  rashmika eager to watch avane srimannaryana

  ಪ್ರೀತಿ ಮುರಿದುಬಿದ್ದ ನಂತರೂ, ಅಭಿಮಾನಿಗಳಿಂದ ಅತಿರೇಕದ ಟೀಕೆಗೆ ಗುರಿಯಾದರೂ ಸಾರ್ವಜನಿಕವಾಗಿ ಅತ್ಯಂತ ಗೌರವದಿಂದ ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಜೋಡಿ ಮತ್ತೊಮ್ಮೆ ಅದೇ ಮೆಚ್ಯುರಿಟಿ ಪ್ರದರ್ಶನ ಮಾಡಿದೆ. ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

  ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ಅವರಿಗೆ ನವೆಂಬರ್ 30 ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯ ಕೋರಿದ ರಶ್ಮಿಕಾ, ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

 • ರಚಿತಾನಾ.. ರಶ್ಮಿಕಾನಾ.. ಆಶಿಕಾನಾ.. ಶ್ರೀನಿಧಿನಾ.. ಯಾರು ಮದಗಜ..?

  top 4 heroines and who will pair up wih madagaja

  ಮದಗಜ. ಶ್ರೀಮುರಳಿ, ಅನಿಲ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ. ಈ ಚಿತ್ರಕ್ಕೆ ನಾಯಕಿ ಯಾರು ಅಂದ್ರೆ, ನಾಲ್ವರ ಹೆಸರು ಕೇಳಿ ಬರ್ತಿದೆ.

  ಡಿಂಪಲ್ ಕ್ವೀನ್ ರಚಿತಾ ರಾಮ್, ರಥಾವರದಲ್ಲಿ ಶ್ರೀಮುರಳಿಗೆ ಜೋಡಿಯಾಗಿದ್ದವರು. ಅನಿಲ್ ಕುಮಾರ್ ಅವರ ಅಯೋಗ್ಯ ಚಿತ್ರದ ನಾಯಕಿಯೂ ಅವರೇ.

  ರಶ್ಮಿಕಾ ಮಂದಣ್ಣ ಹೆಸರೂ ಮುಂಚೂಣಿಯಲ್ಲಿಯೆ ಇದೆ. 

  ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕೂಡಾ ಕ್ಯೂನಲ್ಲಿದ್ದಾರೆ.

  ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿಗೂ ಡಿಮ್ಯಾಂಡ್ ಇದೆ.

  `ನಾಲ್ವರ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಯಾರು ಹೀರೋಯಿನ್ ಅನ್ನೋದನ್ನು ಫೈನಲ್ ಮಾಡ್ತೇವೆ' ಎಂದಿದ್ದಾರೆ ನಿರ್ದೇಶಕ ಅನಿಲ್ ಕುಮಾರ್.

  ಇದು ಹೆಬ್ಬುಲಿ ಉಮಾಪತಿ ನಿರ್ಮಾಣದ ಸಿನಿಮಾ.