ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಸುದ್ದಿ ಹಾರಾಡುತ್ತಿರುವಾಗ, ರಶ್ಮಿಕಾ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿರುವಾಗ.. ಹಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದ ರಶ್ಮಿಕಾ ಮಂದಣ್ಣ, ಕೊನೆಗೂ ಮೌನ ಮುರಿದಿದ್ದಾರೆ. ಉತ್ತರ ಕೊಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ನನ್ನ ಬಗ್ಗೆ ಕೇಳಿ ಬರುತ್ತಿರುವ ರೂಮರ್, ಸುದ್ದಿ ಹಾಗೂ ಟ್ರೋಲ್‍ಗಳ ಬಗ್ಗೆ ಗಮನಿಸುತ್ತಿದ್ದೇನೆ. ಸುಮ್ ಸುಮ್ನೆ ಕೇಳಿ ಬರುವ ಇಂತಹ ಟ್ರೋಲ್‍ಗಳು ಕಿರಿಕಿರಿ ಮಾಡುತ್ತವೆ. ನನ್ನನ್ನು ಬಿಂಬಿಸಿರುವ ರೀತಿಯಿಂದಾಗಿ ನಿಜಕ್ಕೂ ಬೇಸರ ತರಿಸಿದೆ.
ಹಾಗಂತ, ನಾನು ನಿಮ್ಮನ್ನು ದೂರುವುದಿಲ್ಲ. ನೀವು ನಂಬಿರೋದನ್ನ ನೀವು ಮಾಡಿದ್ದೀರಿ. ನಾನೀಗ ಯಾವುದನ್ನೂ ಸಮರ್ಥಿಸಿಕೊಳ್ಳುವ ಗೋಜಿಗೆ ಹೋಗಲ್ಲ. ಅದು ಅಗತ್ಯವೂ ಇಲ್ಲ.
ಇನ್ನು ನಾನಾಗಲೀ, ರಕ್ಷಿತ್ ಆಗಲೀ, ಸಿನಿಮಾ ರಂಗದ ಯಾರೇ ಆಗಲೀ.. ಇದನ್ನು ನೋಡಿಕೊಂಡು ಮುನ್ನಡೆಯುವುದಿಲ್ಲ. ಪ್ರತಿ ನಾಣ್ಯಕ್ಕೂ ಎರಡು ಮುಖಗಳಿರುವಂತೆ, ಪ್ರತಿ ಕಥೆಗೂ ಎರಡು ಮುಖಗಳಿರುತ್ತವೆ.
ನಾನು ನಿಮಗೆ ಕೇಳಿಕೊಳ್ಳೋದು ಇಷ್ಟೆ. ನಮ್ಮನ್ನು ಸ್ವಲ್ಪ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟುಬಿಡಿ. ಅಷ್ಟೆ. ಅಂದಹಾಗೆ, ನಾನು ಕನ್ನಡ ಚಿತ್ರರಂಗ ಬಿಟ್ಟು ಹೋಗುತ್ತಿಲ್ಲ. ನಾನು ಇಲ್ಲಿಯೇ ಇರುತ್ತೇನೆ. ಯಾವುದೇ ಚಿತ್ರವಾಗಲಿ, ನನ್ನೊಳಿಗೆ ಬೆಸ್ಟ್‍ನ್ನು ಕೊಡುತ್ತೇನೆ. ಧನ್ಯವಾದ.
ಇದು ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ. ಹಲವು ದಿನಗಳ ನಂತರ ಮೌನ ಮುರಿದಿರುವ ರಶ್ಮಿಕಾ, ನೇರವಾಗಿ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆಯನ್ನೇನೂ ಕೊಟ್ಟಿಲ್ಲ.