` rashmika, - chitraloka.com | Kannada Movie News, Reviews | Image

rashmika,

 • ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ..?

  rashmika to make bollywood debut ?

  ಕನ್ನಡ, ತೆಲುಗು ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ತಮಿಳಿಗೂ ಲಗ್ಗೆಯಿಟ್ಟಿರುವ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್ ಬಾಗಿಲು ತೆರೆಯುತ್ತಿದೆ. ಅದೂ ಸಣ್ಣ ಪುಟ್ಟ ಚಿತ್ರ ನಿರ್ದೇಶಕರೇನಲ್ಲ, ಬಾಲಿವುಡ್‍ನ ಶೋಮ್ಯಾನ್, ಸೆನ್ಸೇಷನಲ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ.

  ಬನ್ಸಾಲಿ ಬಗ್ಗೆ ಹೊಸದಾಗಿ ಹೇಳುವಂತದ್ದೇನಿಲ್ಲ. ದೇವದಾಸ್, ಪದ್ಮಾವತ್, ರಾಮ್‍ಲೀಲಾ, ಹಮ್ ದಿಲ್ ದೆ ಚುಕೇಸನಮ್, ಖಾಮೋಶಿ, ಬ್ಲಾಕ್, ಗುಜಾರಿಶ್, ಸಾವರಿಯಾ, ಬಾಜಿರಾವ್ ಮಸ್ತಾನಿ.. ಹೀಗೆ ಒಂದಕ್ಕಿಂತ ಒಂದು ಕ್ಲಾಸ್ ಚಿತ್ರಗಳನ್ನು ಕೊಟ್ಟಿರುವ ಡೈರೆಕ್ಟರ್.

  ಮೂಲಗಳ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಲಾಗಿದೆಯಂತೆ. ಮಾತುಕತೆಗಳು ನಡೆಯುತ್ತಿವೆ. ಫೈನಲೈಸ್ ಆಗಿಲ್ಲ. 

  ಅದೂ ಆಗಿಬಿಟ್ಟರೆ... ರಶ್ಮಿಕಾ ಮಂದಣ್ಣ ಇಂಡಿಯನ್ ಕ್ರಶ್ ಆಗಲಿದ್ದಾರೆ.

 • ಸಮುದ್ರದ ನೀರಿನೊಳಗೆ ಗಣೇಶ್-ರಶ್ಮಿಕಾ ಚಮಕ್..!

  ganesh rashmika's under water duet

  ಮಳೆಯಲ್ಲಿ ನೆನೆಯೋದು ಗಣೇಶ್ ಅವರ ಟ್ರೇಡ್‍ಮಾರ್ಕ್. ಆದರೆ, ಚಮಕ್ ಚಿತ್ರದಲ್ಲಿ ಗಣೇಶ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಮುದ್ರದಲ್ಲೇ ಮುಳುಗಿಬಿಟ್ಟಿದ್ದಾರೆ. ರಶ್ಮಿಕಾ ಜೊತೆ.

  ಇದು ಚಮಕ್ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಸಿನಿಮಾದಲ್ಲಿ ಸ್ಕೂಬಾ ಡೈವಿಂಗ್ ದೃಶ್ಯವಿದೆ. ಮದುವೆಯಾದ ಮೇಲೆ ಹನಿಮೂನ್‍ಗೆ ಹೋಗುವ ಜೋಡಿ, ಸ್ಕೂಬಾ ಡೈವಿಂಗ್ ಮಾಡುವ ಸೀನ್ ಅದು. ಚಿತ್ರದಲ್ಲಿ ಅದು ಸುಮಾರು ಒಂದೂವರೆ ನಿಮಿಷ ಬರುತ್ತೆ. 

  ಆ ಒಂದೂವರೆ ನಿಮಿಷದ ಸೀನ್‍ಗಾಗಿ ಒಂದೂವರೆ ದಿನ ಖರ್ಚು ಮಾಡಿ ಶೂಟ್ ಮಾಡಿರುವುದು ವಿಶೇಷ. ಅದನ್ನೇನೂ ಫಾರಿನ್‍ನಲ್ಲಿ ಶೂಟ್ ಮಾಡಿಲ್ಲ. ಮಲ್ಪೆ ಸಮೀಪದ ನೇತ್ರಾಣಿ ದ್ವೀಪದ ಬಳಿ ಅರ್ಧ ದಿನ ಗಣೇಶ್ ಹಾಗೂ ರಶ್ಮಿಕಾಗೆ ಪ್ರಾಕ್ಟೀಸ್ ಮಾಡಿಸಿ, ಮಾರನೇ ದಿನ ಶೂಟ್ ಮಾಡಲಾಗಿದೆ. ಅರ್ಧ ದಿನ ಶೂಟಿಂಗ್ ಆದರೆ, ಇನ್ನರ್ಧ ದಿನ ಇಡೀ ತಂಡದ ಖುಷಿಗೆ. 

  ನೀರಿನೊಳಗೆ ಉಸಿರಾಡುವುದೇ ದೊಡ್ಡ ಚಾಲೆಂಜ್ ಎಂದು ಹೇಳಿಕೊಂಡಿದ್ದಾರೆ ಗಣೇಶ್ ಹಾಗೂ ರಶ್ಮಿಕಾ. ಸಿನಿಮಾ ಇದೇ ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್‍ನಲ್ಲಿ ಚಂದ್ರಶೇಖರ್ ನಿರ್ಮಿಸಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸಿಂಪಲ್ ಸುನಿ. ಹ್ಞಾಂ.. ಅಲಮೇಲಮ್ಮ ಸುನಿ ಎಂದರೂ ತಪ್ಪಾಗಲಿಕ್ಕಿಲ್ಲ. ಇಬ್ಬರೂ ಒಬ್ಬರೇ. ಇದು ಚಮಕ್ ಅಷ್ಟೆ.

 • ಸಿಂಪಲ್ಲಾಗ್ ಒಂದ್ ವರ್ಷದ್ ಲವ್ ಸ್ಟೋರಿ

  rakshit rashmika's engagement anniversary

  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನ ಮುದ್ದು ಜೋಡಿ. ಈ ಜೋಡಿಹಕ್ಕಿಯ ಪ್ರೇಮಕಥೆಗೀಗ ಒಂದು ವರ್ಷ. ಆ ಒಂದು ವರ್ಷವನ್ನು ರಕ್ಷಿತ್ ಶೆಟ್ಟಿ, ತಮ್ಮಿಬ್ಬರ ಹಳೆಯ ಫೋಟೋ ಮತ್ತು ವಿಡಿಯೋಗಳ ಕೊಲಾಜ್ ಮಾಡಿಸಿ, ರಶ್ಮಿಕಾಗೊಂದು ಪ್ರೇಮ ಪತ್ರ ಬರೆದು ಹಂಚಿಕೊಂಡಿದ್ದಾರೆ.

  ನಮ್ಮಿಬ್ಬರ ಎಂಗೇಜ್‍ಮೆಂಟ್ ಆಗಿ ಒಂದು ವರ್ಷ ಕಳೆದಿದೆ. ನನಗೆ ನಂಬಲಾಗುತ್ತಿಲ್ಲ. ನಾನು ನಿನ್ನೊಂದಿಗೆ ಇದ್ದ ಸಮಯದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇನೆ. ನಿನ್ನಿಂದ ದೂರವಿದ್ದ ಸಮಯದಲ್ಲಿ ಕಲಿಯವ ಅವಕಾಶ ಕಳೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಗಳಿಸಿದ ಬಹುದೊಡ್ಡ ಆಸ್ತಿ ನೀನು. ನಿನ್ನನ್ನು ಪ್ರತಿ ದಿನವೂ ಹೆಚ್ಚೆಚ್ಚು ಪ್ರೀತಿಸುತ್ತೇನೆ, ಸ್ವೀಟ್ ಹಾರ್ಟ್ ಎಂದು ಪ್ರೇಮ ಪತ್ರ ಬರೆದಿದ್ದಾರೆ ರಕ್ಷಿತ್ ಶೆಟ್ಟಿ.

  ಇದು ಪ್ರೀತಿಯಲ್ಲ.. ಬಿಕಾಸ್ ಪ್ರೀತಿ ಎಂದರೆ ಪರ್ಫೆಕ್ಟ್. ಎರಡು ಸುಂದರ ಮನಸ್ಸುಗಳು ಬೇರೆಯದ್ದನ್ನು ಹುಡುಕುತ್ತಿದ್ದಾಗ ಒಂದಾದ ಜೀವನ ಇದು. ಬದುಕಿನ ಪಾಠದ ಬಗ್ಗೆ ಒಬ್ಬರಿಗೊಬ್ಬರು ಕಲಿಸಿಕೊಂಡು ಬದುಕೋಣ. ನಾವಿಬ್ಬರೂ ಬೆಸ್ಟ್ ಟೀಚರ್ಸ್. ನಾನು ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ.. ನಾನು.. ನೀವು ತುಂಬಾ ಕೋಪ ಮಾಡಿಕೊಂಡಿದ್ದೇವೆ. ಅದಕ್ಕಾಗಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಐ ಲವ್ ಯೂ ಎಂದಿದ್ದಾರೆ ರಶ್ಮಿಕಾ.

  ಪ್ರೀತಿಯೆಂದರೆ ಪರಸ್ಪರ ಗೌರವಿಸುವುದು ಎನ್ನುವುದು ಕೂಡಾ ಈ ಇಬ್ಬರ ಪ್ರೇಮಪತ್ರದ ಸ್ವಾರಸ್ಯ. ಇನ್ನೂ ಒಂದಷ್ಟು ವರ್ಷ ಪ್ರೀತಿ ಮಾಡಿಕೊಂಡೇ ಇರುತ್ತೇವೆ. ಇನ್ನೂ ನೂರು ವರ್ಷ ಆದರೂ ನಮ್ಮಿಬ್ಬರ ಪ್ರೀತಿ ಕಡಿಮೆ ಆಗುವುದಿಲ್ಲ. ವಿ ಲವ್ ಈಚ್ ಅದರ್ ಎಂದಿದ್ದಾರೆ ರಶ್ಮಿಕಾ.

  ಇದು ಸಿಂಪಲ್ಲಾಗ್ ಒಂದ್ ವರ್ಷದ್ ಲವ್ ಸ್ಟೋರಿ ಕಥೆ. 

 • ಸುಮ್ ಸುಮ್ನೆ ಬರೀಬೇಡಿ.. ರಶ್ಮಿಕಾಗೆ ಸಾಕ್ಷಿ ಕೊಡಿ

  rashmika needs evidence on allegations

  ರಶ್ಮಿಕಾ ಮಂದಣ್ಣ, ಈಗ ದಕ್ಷಿಣ ಭಾರತದ ಅದರಲ್ಲೂ ತೆಲುಗು ಚಿತ್ರರಂಗದವರ ಹಾಟ್ ಫೇವರಿಟ್. ರಶ್ಮಿಕಾ ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್. ಅಫ್‍ಕೋರ್ಸ್, ಕನ್ನಡದಲ್ಲಿಯೂ ರಶ್ಮಿಕಾ ಮಂದಣ್ಣ ನಟಿಸಿದ ಯಾವ ಚಿತ್ರಗಳೂ ಸೋತಿಲ್ಲ. ಆದರೆ, 2018ರಲ್ಲಿ ರಶ್ಮಿಕಾ ಅವರ ಒಂದೂ ಕನ್ನಡ ಸಿನಿಮಾ ಬಂದಿಲ್ಲ. ಹೀಗಾಗಿಯೇ ಏನೊ ರಶ್ಮಿಕಾ ಅವರು ಕನ್ನಡ ಚಿತ್ರರಂಗವನ್ನು ದೂರ ಇಟ್ಟಿದ್ದಾರೆ. ತೆಲುಗಿನಲ್ಲಿ ಕ್ಲಿಕ್ ಆದಮೇಲೆ ಸ್ಯಾಂಡಲ್‍ವುಡ್‍ನ್ನು ಕ್ಯಾರೇ ಎನ್ನುತ್ತಿಲ್ಲ. ಬಹುಶಃ, ತೆಲುಗಿನವರ ದುಬಾರಿ ಸಂಭಾವನೆ ಕಾರಣ ಇರಬಹುದು ಎಂದೆಲ್ಲ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

  ಇದಕ್ಕೆ ನಗುನಗುತ್ತಲೇ ಪ್ರತಿಕ್ರಿಯಿಸಿರುವ ರಶ್ಮಿಕಾ ಹೌದಾ.. ಹೀಗೆಲ್ಲ ಆಗಿದ್ಯಾ..? ನನ್ನನ್ನು ದಯವಿಟ್ಟು ತಪ್ಪಾಗಿ ತಿಳಿದುಕೊಳ್ಳಬೇಡಿ.. ನಾನು ಇದನ್ನೆಲ್ಲ ನಂಬಲ್ಲ. ನನ್ನನ್ನು ದೂರ ಇಟ್ಟಿರುವುದು ಯಾರು ಅನ್ನೋದಕ್ಕೆ ದಯವಿಟ್ಟು ಸಾಕ್ಷಿ ಕೊಡಿ ಎಂದಿದ್ದಾರೆ ರಶ್ಮಿಕಾ.

  ಅಂದಹಾಗೆ ರಶ್ಮಿಕಾ ಮಂದಣ್ಣ ದರ್ಶನ್ ಜೊತೆ ನಟಿಸಿರುವ ಯಜಮಾನ ರಿಲೀಸ್‍ಗೆ ರೆಡಿಯಾಗಿದ್ದರೆ, ಧ್ರುವ ಸರ್ಜಾ ಜೊತೆ ನಟಿಸುತ್ತಿರುವ ಪೊಗರು ಚಿತ್ರೀಕರಣ ಹಂತದಲ್ಲಿದೆ. ಬಹುಶಃ ರಾಂಗ್ ಟೈಮಲ್ಲಿ ವರದಿಯಾಗಿದ್ದೇ ಎಡವಟ್ಟಾಗಿದೆ.

 • ಸೊಸೆ ರಶ್ಮಿಕಾಗೆ ಅತ್ತೆಯಿಂದ ಉಡುಗೊರೆಗಳ ಮಾಲೆ

  rashmika mother in law's gifts

  ರಕ್ಷಿತ್ ಶೆಟ್ಟಿ-ರಶ್ಮಿಕಾ ಎಂಗೇಜ್​ಮೆಂಟ್​ಗೆ ಮೊದಲೇ ಆಭರಣಗಳು ರೆಡಿಯಾಬಿಟ್ಟಿವೆ. ಮುದ್ದಿನ ಭಾವೀ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿ ರಂಜನಾ ಬಂಗಾರದ ಆಭರಣಗಳ ಉಡುಗೊರೆ ಕೊಡೋಕೆ ನಿರ್ಧರಿಸಿದ್ದಾರೆ.

  ಒಂದು ಡೈಮೆಂಡ್ ನೆಕ್ಲೇಸ್, ಕಾಂಜೀವರಂ ಸೀರೆ, ಜೊತೆಗೆ ಬಂಗಾರದ ಆಭರಣಗಳನ್ನ ನೀಡಲಿದ್ದಾರಂತೆ ರಂಜನಾ.

  ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕಡಗ ಕೊಟ್ಟು ಹಾರೈಸಿದ್ದರು. ಇನ್ನು ರಶ್ಮಿಕಾ, ಪ್ರೀತಿ ಶುರುವಾಗುವ ಮುಂಚೆ ರಕ್ಷಿತ್​ಗೆ 20 ಉಡುಗೊರೆಗಳ ಬೊಕೆಯನ್ನೇ ಕೊಟ್ಟಿದ್ದರು. ಈಗ ಉಡುಗೊರೆ ಕೊಡುವ ಸರದಿ ರಕ್ಷಿತ್ ಶೆಟ್ಟಿ ತಾಯಿಯದ್ದು.

  ಜುಲೈ3ಕ್ಕೆ ಕೊಡಗಿನಲ್ಲಿ ಎಂಗೇಜ್​ಮೆಂಟ್ ನಡೆಯಲಿದ್ದು, ರಶ್ಮಿಕಾ ಪ್ರೀತಿಯ ಅತ್ತೆ ಕೊಡುವ ಆಭರಣಗಳಲ್ಲಿ ಕಂಗೊಳಿಸಲಿದ್ದಾರೆ.

  Related Articles :-

  ರಕ್ಷಿತ್ - ರಶ್ಮಿಕಾ ನಿಶ್ಚಿತಾರ್ಥ ಎಲ್ಲಿ..? ಹೇಗೆ..?

  ಒಲವಿನ ಕಚಗುಳಿ ಶುರುವಾಗಿದ್ದು ಯಾವಾಗ..? ರಕ್ಷಿತ್ ಶೆಟ್ಟಿ ಮಾತನಾಡಿದಾಗ

  ರಕ್ತಿತ್ ಶೆಟ್ಟಿ - ರಶ್ಮಿಕಾ ಲವ್ ಸ್ಟೋರಿ - ಪ್ರಪೋಸ್ ಮಾಡಿದ್ದು ಯಾರು?

  ಕಿರಿಕ್ ಜೋಡಿಗೆ ಶ್ರೀರಸ್ತು ಶುಭಮಸ್ತು. ಒಪ್ಪಿಕೊಂಡರು ರಕ್ಷಿತ್ ಶೆಟ್ಟಿ

  Rakshith - Rashmika Engagement On July 3rd?

   

   

   

 • ಸ್ಕಾಟ್​ಲೆಂಡ್​ನಿಂದ ಪುನೀತ್ ರಾಜ್​ಕುಮಾರ್ ಟೀಂ ವಾಪಸ್

  anjaniputra teams returns from scotland

  ಪುನೀತ್ ರಾಜ್​ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ಅಂಜನಿಪುತ್ರ ಚಿತ್ರತಂಡ ವಿದೇಶದ ಚಿತ್ರೀಕರಣ ಮುಗಿಸಿ ವಾಪಸ್ ಆಗಿದೆ. ಸ್ಕಾಟ್​ಲೆಂಡ್​ನಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಹೋಗಿದ್ದ ಚಿತ್ರತಂಡ, ಈಗ ಶೇ.80ರಷ್ಟು ಚಿತ್ರೀಕರಣ ಪೂರೈಸಿದೆ. ಸ್ಕಾಟ್​ಲೆಂಡ್​ನಲ್ಲಿ ನಡೆದ ಶೂಟಿಂಗ್​ನ ಕೆಲವು ಫೋಟೋಗಳೂ ಕೂಡಾ ಲಭ್ಯವಾಗಿವೆ.

  ಡಿಸೆಂಬರ್​ನಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ತಮಿಳಿನ ಪೂಜೈ ಚಿತ್ರದ ರೀಮೇಕ್ ಆಗಿರುವ ಆಂಜನಿಪುತ್ರ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಏಕೆಂದರೆ, ಅದು ಹರ್ಷ ನಿರ್ದೇಶನದ ಚಿತ್ರ. ಭಜರಂಗಿ, ವಜ್ರಕಾಯ, ಮಾರುತಿ 800 ಚಿತ್ರಗಳ ನಂತರ ಮತ್ತೊಂದು ಆಂಜನೇಯ ಹೆಸರಿನಲ್ಲಿ ಬರುತ್ತಿರುವ ಚಿತ್ರ. ಇನ್ನು ಪುನೀತ್​ಗೆ ರಾಜಕುಮಾರದಂತಹ ಸೂಪರ್ ಹಿಟ್ ಚತ್ರ ಕೊಟ್ಟ ನಂತರ ಬರುತ್ತಿರುವ ಚಿತ್ರ. ಹೀಗಾಗಿ ಅವರಿಗೂ ಭಾರೀ ನಿರೀಕ್ಷೆಯಿದೆ. ರಶ್ಮಿಕಾ ಮಂದಣ್ಣಗೆ ಕೂಡಾ ಅಷ್ಟೆ. ಕಿರಿಕ್ ಪಾರ್ಟಿ ಚಿತ್ರದ ನಂತರ ತೆರೆಗೆ ಬರುತ್ತಿರುವ ಚಿತ್ರವಾದ್ದರಿಂದ ಅವರೂ ಚಿತ್ರದ ಮೇಲೆ ಭಾರೀ ಭರವಸೆ ಇರಿಸಿಕೊಂಡಿದ್ದಾರೆ.

  Related Articles :-

  ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

  Anjaniputra Shooting Put On Hold

  Puneeth's New Film Titled Anjaniputra